PDF at https://archive.org/details/dli.osmania.3870
https://archive.org/details/dli.osmania.3870
कर्मण्येवाधिकारस्ते मा फलेषु कदाचन ।
ಶ್ರೀಕೃಷ್ಣ-ಕರ್ಮಯೋಗಶಾಸ್ತ್ರ.
ಶ್ರೀಬಲಭೀಮ-ವಾಚನಾಲಯ-ಗ್ರಂಥಮಾಲೆ, ದ್ವಿತೀಯ ಪುಷ್ಪ
ಸಮಾಜರಹಸ್ಯ.
" The Woman's cause is man's, They rise or sink,
To-gether dwatted, God-like, bound or free,
If she be small, slight natured, miserable,
How Shall man grow ?
- Tennayson,
ಲೇಖಕ ದಾಮೋದರ ಸದಾಶಿವ ದೇಶಪಾಂಡೆ-ಮಧುಪುರ,
ಮೊದಲನೆ ಆವೃತ್ತಿ ೧೦೦೦
--------------------------------------------------------------`
ಬೆಳಗಾವಿಯೊಳಗೆ ದೇವೇಂದ್ರ ಫಡಪ್ಪು ಚೌಗುಲೆ ಇವರು ತಮ್ಮ ಶ್ರೀಮಹಾವೀರ
ಮುದ್ರಣಾಲಯದಲ್ಲಿ ಮುದ್ರಿಸಿದರು
ಸದಾಶಿವ ದೇಶವಾಂದೆ ಇವರು ಮದವಾಲದೊಳಗೆ ಶ್ರೀಬಲಭೀಮ
ವಾಚನಾಲಯದಲ್ಲ ಪ್ರಕಟಿಸಿದರು
---------------------------------------------------------------
ಪ್ರಾರಂಭಕ್ಕೆ ಎರಡು ಶಬ್ದಗಳು.
ಸುಶಿಕ್ಷಿತ ಕೆಲ ಸ್ತ್ರೀ-ಪುಗುಷರು ಹಿಂದುಳಿದ ಅಂಧು-ಭಗಿನಿಯರನ್ನು ತಿದ್ದು
ವದರಲ್ಲಿ ಸ್ವಾರ್ಥತ್ಯಾಗಿಗಳಾಗಿ ತಮ್ಮ ತನ-ಮನ-ಧನಸರ್ವಸ್ವವನ್ನರ್ಪಿಸಿ
ಎಡೆಬಿಡದೆ ಯತ್ನಿ ಸುವದೇ ನಿಜ ಸಮಾಜ-ಸೇವಾಧರ್ಮವು. ಇದೇ ಅವರ
ಆದ್ಯಕರ್ತವ್ಯವು. ಬರೇ ಪುರುಷರಿಂದಲೇ ಹೇಗೆ ಸಮಾಜವಾಗುವದಿಲ್ಲವೋ
ಹಾಗೆಯೇ ಬರೆ ಪುರುಷರನ್ನಷ್ಟು ಸುಶಿಕ್ಷಿತರನ್ನಾಗಿ ಮಾಡಿದರೆ ಸಮಾಜೋನ್ನ
ತಿಯೂ ಇದರಿಂದಲೇ ಅಗುವ ದೇಶೋನ್ನತಿಯೂ ಎಂದಿಗೂ ಅಗಲಾರವು,
ಸ್ತ್ರೀಯರೂ ಕೂಡ ಸುಶಿಕ್ಷಿತರೂ ಸುಸಂಸ್ಕೃತರೂ ಆಗಿ ಸಮಾಜಕ್ಕ ತಾವು
ಮಾಡಒಹುದಾದ ಕಾರ್ಯವನ್ನು ಯಧಾಶಕ್ತಿಯಿಂದಲೂ ಯಥಾಸಾಂಗವಾ
ಗಿಯೂ ಮಾಡಲೇ ಬೇಕು ಆದಕ್ಕಾಗಿ ಅವರು ಚಲೋ ಸಂಸ್ಕೃತಿಯನ್ನು
ಪಡೆಯಲೇ ಬೇಕು. ಇದೇ ಸಮಾಜೋನ್ನ ತಿಯ---ಹಾಗೆಯೇ ದೇಶೋನ್ನ
ತಿಯ--ರಹಸ್ಸವು
ವಾಚಕಮಹಾಶಯ! "ನಾವು ಯಾರು1 ನಮ್ಮ ಸಮಾಸಜಸ್ಥಿತಿಯ:
ಈಗ ಹೇಗಿರುವದೆಂಬದನ್ನು ಕರ್ನಾಟಕಸ್ಥರಾದ ನಾವು ವಿಚಾರಮಾಡಿದರೆ
ನಮಗೆ ಏನು ಕಂಡುಬರಬಹ.ದು? ನಿಜವಾಗಿ ಪ್ರಾಂಜಲಬುದ್ಧಿಯಿಂದ .
ವಿಚಾರಮಾಡಿದರೆ ಐವತ್ತು ವರ್ಷಗಳ ಹಿಂದಿನ ಮಹಾರಾಷ್ಟ್ರ-ಸಮಾಜ
ಸ್ಥಿತಿಯ ಚಿತ್ರವೇ ನಮ್ಮ ಈಗಿನ ಯಥಾಸಾಂಗವಾಗಿ ಸಾರಿ
ದೂರಿ ಹೇಳುತ್ತದೆ, ಹೀಗೆ ಐವತ್ತು ಐವತ್ತು ವರ್ಷಗಳ ಹಿಂದಿನಿಂದಲೇ
ಹೆಜ್ಜೆಯನ್ನಿ ಡುತ್ತ ನಡೆದರೆ, ನಮ್ಮ ಸಮಾಜವು ಪೂರ್ಣವಾಗಿ ಸುಧಾರಿಸ
ಬೇಕಾದರೆ ಇನ್ನು ಯಾವ ಯುಗವು ಬರುವದೋ ಯಾರು ಹೇಳುವರು?
ಸಮಾಜಕುಧಾರಣೆಯಾಗಬೇಕಾದರಿ ಸ್ಪಾರ್ಧತ್ಕಾಗಿಗಳಾದ ಸುಶಿಕ್ಷಿತ ದೆಂಪ
ತಿಗಳೇ ಮುಂದಾಗಬೇಕು. ಇಂಥವರಲ್ಲಿಯೇ ನಮ್ಮ ಸಮಾಜೋನ್ನತಿಯ
ಎಲ್ಲ ರಹಸ್ಯವು ಹರಡಿಕೊಂಡಿರುವದು, ಇಂಧವರು ಸಿದ್ಧರಾಗಿ ನಮ್ಮ ಕರ್ನಾ
ಟಕವನ್ನು ಉದ್ಭರಿಸಿ ಹರಿಸಲು ಮುಂದಿ ಬರಬೇಕೆಂದು ಅನನ್ಯಭಾವದಿಂದ
ಬೇಡಿಕೊಳ್ಳುವದಕ್ಕಾಗಿಯೇ ನಮ್ಮ " ಸಮಾಜ-ರಹಸ್ಯ"ಯವನ್ನು ಅಸ್ಥಿತ್ವದಲ್ಲಿ
-----------------------------------------
ತರುವ ಸುದೈವವು ಪರಮಗುರುವಾದ ಶ್ರೀರಾಮನ ಕೃಪೆಯಿಂದ ನಮಗೆ
ಬಂದಿರುವದು, ತೀವ್ರ ಕಾರ್ಯಭಾರವನ್ನು ಕೈಕೊಂಡು ಕೆಲವಾಂಶದಿಂದಾ
ದರೂ ಈಗಿನ ಶೋಚನೀಯ ಕರ್ನಾಟಕ ಸವಾಜಸ್ಥಿತಿಯನ್ನು ಸುಧಾರಿಸ
ಲೆತ್ನಿ ಸಿದರೆ ಪ್ರಸ್ತುತಕ್ಕೆ ಕೈಕೊಂಡ ನಮ್ಮ ಕಾರ್ಯವು ಅಂಶತಃವಾದರೂ
ಸಫಲವಾದಂತಾಗುವದು.
ಮದವಾಲ, ನಿಮ್ಮೆಲ್ಲರ ಸೇವಕ,
ವಿಜಯದಶಮಿ (೨೫-೧ಂ-೧೩), ದಾಮೋದರ,
-------------------------------------------
ಹೃದಯನಿವೇದನ. .
ಅಂತಃಕರುಣದೊಳಗಿನ ತಳಮಳಿಕೆಯನ್ನು ಸುಹೃದಯರ ಮುಂದೆ
ಹೇಳದಿದ್ದರೆ ದುಃಖವು ಕಡಿಮೆಯಾಗಲಾರದು. ಇದೂಂದು ಮನುಷ್ಯನ
ಪ್ರಕೃತಿಧರ್ಮನಿರುವದು. ಮೊದಲನಿಂದಲೇ ಸಮಾಜಸೇವೆಯನ್ನೂ ಭಾಷಾ
ಸೇವಯನ್ನೂ ಮಾಡಬೇಕೆಂಬ ನಮ್ಮ ಉತ್ಕಟೇಚ್ಛೆಯು ಈ ಸೇವೆಗಾಗಿ
ನಾವು ಯಾವತಶರದ ಶಿಕ್ರಣವನ್ನು ಪಡಿಯತಕ್ಕದ್ದು! ಸೇವೆಯನ್ನು ಹ್ಹಾಗೆ
ಮಾಡಬೇಕು? ನಮ್ಮ ಸೇವೆಯು ಸಮಾಜಕ್ಕೆ ರುಚಿಕರವಾದೀತೋ ಹೇಗೆ?
ಮುಂತಾದ ಎನ್ನೋ ವಿಚಾರಗಳು ದಿನಾಲು ನಮ್ಮನ್ನು ಪೀಡಿಸದೆ ಇರುವದಿಲ್ಲ
ಚಲೋ ಪುಸ್ತಕಗಳ ವಾಚನವು ಮನುಷ್ಯನ ಸದ್ಗುಣಕ್ಕ ಪುಷ್ಟಿಕರಣವಾಗಿ
ಸನ್ಮಾರ್ಗವನ್ನು ತೋರಿಸಿ ಕೊಡುವದೆಂದು ಪೂರ್ಣ ಸಂಬಿಗೆಯುಂಟಬಾಯಿತು.
ಇದಕ್ಕಾಗಿ ನಮ್ಮ ಕರ್ನಾಟಕದಲ್ಲಿ ದೂಡ್ಮ ದೊಡ್ಡ ಮಧ್ಯವರ್ತಿಯ ವಾಚ
ನಾಲಯಗಳೂ, ಪುನ್ತಕಸಂಗ್ರಹಾಲಯಗಳೂ (Central libraries) ಸ್ಥಾ
ಪಿಸಲ್ಪಟ್ಟು ಅವುಗಳಿಂದ ಎಷ್ಟೂ ಸಣ್ಣ ವಾಚನಾಲಯಗಳು ನಡಯಿಸಲ್ಪಡು
ವದಲ್ಲದೆ ಜನರಲ್ಲಿ ವಾಚನಾಭಿರುಚಿಯನ್ನೂ ಸುಸಂಸ್ಕೃತಜೀವಿತೇಜ್ಛಿಯನ್ನೂ
ಹೆ'ಚ್ಹಿಸುವ ಪ್ರಯತ್ನವು ನಡೆಯಬೇಕು ಹೀಗಾದರೆ ನಮ್ಮ ಕರ್ನಾಬವು
ತೀವ್ರವೆ ಉನ್ನತಿಹೂಂದಿ ಹಿಂದುಸ್ಟಾನಕ್ಕೆ ತಾನು ಮಾಡಬೇಕಾದ ಕರ್ತವ್ಯ
ವನ್ನು ವಾಡಿ ಹಿಂದ ಮಾಶೆಯ ಋಣಮುಕ್ತವಾಗಬಹುದು. ಪ್ರಾಧವಿಕ
ಶಿಕ್ಷಣವಿಲ್ಲದೆ ಜನರುಸುಸಂಸ್ಕೃತ ಜೀನಿತವನ್ನು ಹೊಂದುವದು ತೀರ ಅಶಕ್ಕ್ನ
ವೆಂದು ಇಷ್ಟು ದಿವಸದವರೆಗೆ ಅನುಭವಹೊಂದುತ್ತಿದ್ದ ನಮ್ಮ ಉದಾಹರಣೆ
ಯಿಂದಲೇ ಕಂಡುಹಿಡಿಯಬಹುದು.
ನಮ್ಮಿಂಡಾದಷ್ಟು ಈ ದೃಷ್ಟಿಯಿಂದ ಕರ್ನಾಛಕ ಸಾಹಿತ್ಯವನ್ನು ಬೆಳೆಯಿ
ಸಬೇಕೆಂದು " 'ಶ್ರೀಬಲಭೀಮ ವಾಜಿನಾಲಯ'' ವೆಂಬ ಸಂಸ್ಥಯನ್ನು ಕಳದ
೧೯೧೬ ಇಸ್ವಿಯ ಎಪ್ರಿಲ ತಿಂಗಳೂಳಗೆ ನಮ್ಮೂರಲ್ಲಿ ಸ್ಫಾಪಿಸಿದೆವು. ವಾಚ
ನಾಲಯವು ಇನ್ನು ತೀರ ಬಾಲ್ಯ ವಸ್ಟ್ರಯಲ್ಲಿರುವದೇನೋ ನಿಜವು ಆದರೂ
ನಮ್ಮ ಕರ್ನಾಟಕದ ಬಂಧು-ಭಗಿನಿಯರು ಸಹಾಯಮಾಡಿದರೆ ನಮ್ಮ ಈ
-------------------------------------------------------------
೨
ಮನೋಭಿಲಾಷವ್ರ ಕೈಗೂಡಲಿಕ್ಕೆ ನಮ್ಮ ತನು-ಮನ-ಧನ ಸರ್ವಸ್ನವನ್ನ
ಅರ್ಪಿಸಿ ಈ ಕಾರ್ಯದಲ್ಲಿ ಅವಶ್ರಾಂತ ಶ್ರಮಪಡುವೆವು.
ಇಂದ್ರ ಕಾರ್ಯಗಳು ಸಾರ್ವಜನಿಕ ಸಹಾಂಕುವೊ, ಸಾರ್ವಜನಿಕ
ಪ್ರೆ*ಮಾದರವೂ, ಇಲ್ಲದಿದ್ದರೆ ಅವ್ಯಾಹತವಾಗಿಯೂ,ಆಬಾಧವಾಗಿಯ್ಕೂ
ನಡೆಯಲಾರವು. ಆದ್ದರಿಂದ ನಮ್ಮ ಬಂಧು-ಭಗಿನಿಯರು ಎಲ್ಲತರದಿಂದಲೂ
ನಮ್ಮ ಕಾರ್ಯದಲ್ಲಿ ಸಹಾಯ ಮಾಡಲು ಮುಂದುವರಿಯದಿದ್ದರೆ ಸಾಗುವ
ಹಾಗಿಲ್ಲ.
ವಃಚನಾಲಯದಲ್ಲಿ ಪುಸ್ತಶ ಸಂಗ್ರಹಕಾರ್ಯವೂ ವಾಚನಾಭಿರುಚಿ
ಹೆಚ್ಚಿಸುವ ಕಾರ್ಯವೂ ನಡೆಯುವ ನಮ್ಮೆಲ್ಲರಲ್ಲಿಯೂ ಸ್ವಾರ್ಥ ತ್ಯಾಗಬುದ್ಧಿಯು
ಹೆಚ್ಚಿಸಿರರೆ ಇನ್ನು ತೀವ್ರವೇ ಕರ್ನಾಟಕವು ಆನಂದೈಶ್ವರ್ಯಗಳನ್ನು ಪಡೆದು |
ಸುಖಿಯಾಗಬಹುದು ಸಮಾಜ ಧನ ಅರ್ಥಭಾಗ ಯಿದ್ದ ಸ್ಮೀಯರೂ ವಿದ್ಯೆ
ಕಲಿತು ಉಚ್ಚತಮಧ್ಯೇಯ. ಪ್ರಾಪ್ತಿಗಾಗಿ ಯತ್ನಿಸುವ ತಮ್ಮ ಬಂಧು-ಬಗಿನಿ
ಯರಿಗೂ, ಪತಿಹಿರಿಯರಿಗೂ ಸಹಾಯಮಾಡಲು ಕೈಕೊಂಡ ಈ ಕಾರ್ಯವು
ಒಳ್ಳ ಭರದಿಂದ ನಡೆದು ಇನ್ನು ತುಸು ದಿನಗಳಲ್ಲಿಯೇ ಕರ್ನಾಟಕವು
ತನ್ನ ಉಳಿದೆದೇಶಭಗಿನಿಯರಂತೆ ಅವಂದದಿದ ಮೆರೆಯಬಹುದು ಇದ್ಯಾ
ದಾನವು ಎಲ್ಲಾ ದಾನಗಲಲ್ಲಿ ಮೆಲಾದದ್ದು! ವಿದ್ಯಾ ಪ್ರಸಾರವೇ ಜನಾಂಗ
ಉನ್ನತಿಯು!! ಇದೇ ಕಾರ್ಯವನ್ನು ಯಥಾಮಕ ಮಾಡಲು ನಮ್ಮ "ಬಲ
ಭೀಮನು' ಟೊಂಕಕದ್ಹೆ ನಿಂತಿರುವನು, ಆತನ ಧ್ವೇಯುವನ್ನಂತೂ ಕರ್ನಾ
ಬಕ ಬಂಧ-ಭಗಿನಿಯರಿಗೆ ತಿಳಿಸಿದ್ದೇವೆ ಇನ್ನು ಆತನ ಕೈಯಿಂದ ಕಾರ್ಯ
ಯನ್ನು ತೀವ್ರವಾಗಿ ಮಾಡಿಸುವದು ನಮ್ಮ ಕರ್ನಾಟಕ ಬಂಧು-ಭಗಿನಿಯ
ರನ್ನೇ ಕೂಡಿರುವದು, ಬಾಲಕನು ಸಣ್ಣವನು! ಇನ್ನು ಎಲ್ಲ ಜನರ ಸಹಾಯ
ವಿಲ್ಲ! ಆದ್ದರಿಂದ ಆತನು ದಿನಾಲು ಚಡಪಡಿಸ;ತ್ತಿರುವನು.!!
« ಸಾಮಾಜಿಕ-ಸಾವಿತ್ರಿ"' ಯನ್ನು ಪ್ರಸಿದ್ಧಿಸಿ ಈಗ್ಗ ೫-೬. ತಿಂಗಳಾ
ಯಿತು ಗೃಂಧಮಾಲೆಯ ಪ್ರಧಮಪುಷ್ಟವೆಂದು ಬರೆದು. ಬಿಟ್ಟ ದ್ದರಿಂದ ಮತ್ತೆ
ಎರಡನೇ ಗ್ರಂಥದ ಹಾದಿಯನ್ನು ನೋಡುತ್ತ ನಮ್ಮ ಬಂಧ.-ಭಗಿನಿಯರು
ಕುಳಿಕರು!! ಎರಡನೇ ಪುಸ್ತಕವು ಒರೆದು ಸಿದ ವಾಗಿ ಮುದ್ರಣಾಲಯವನ್ನು
--------------------------------------------------------------
೩'
ಈಗ ೩-೪ ತಿಂಗಳ ಹಿಂದೆಯೇ ಕಂಡಿರುವದೆಂದೂ ನಮ್ಮ ಎಷ್ಟೋ ಬಂಧು-
ಭಗಿನಿಯರು ಕೇಳಿದ್ದರು. ಆದರೂ ಘುಸ್ತಕವು ಪ್ರಸಿದ್ಧಿಗೆ ತಡವೇಕೆಂಬದು
ಅವರಿಗೆ ತಿಳಿಯದಾಯಿತು! ಕಡೆಗೆ ಜಡಮನಸ್ಸಿನಿಂದ " ಹಣದ ಕೊರತೆಯ
ಸಲುವಾಗಿ ' ಎಂದು ಉತ್ತರವನ್ನು ಒರೆದೆವು ಇದನ್ನು ಶೇಳಿ ರಾ॥ ರಾ||
ಶ್ರೀನಿವಾಸರಾವ ವೆಂಕಟರಾವ ದೇಸಾಯಿ ಮುಂತಾದ ನಮ್ಮ ಕೆಲಮಿತ್ರರು
ತಮ್ಮಿಂದಾದಷ್ಟು ದ್ರವ್ಯಸಹಾಯವನ್ನು ಮಾಡಿ "ಸಮಾಣಿರಹಸ್ಯ' ವನ್ನು
ಕನ್ನಡ ಬಂಧು-ಭಗಿನಿಯರ ಮುಂದೆ ಮಂಡಿಸಲು ಆಸ್ಪದವನ್ನಿ ತ್ಮರು ನಾವು
ಆ ಎಲ್ಲ ವಿತಿತ್ರರಿಗೂ ಖಃಣಿಯಾಗಿದ್ದೇವೆ ಎಲ್ಲರೀತಿಯಿಂದ ಸಹಾಯಮಾಡಿ
ನಮ್ಮ ಈ ಅಲ್ಲಸ(ವೆಯನ್ನು ಅನ.ಗೃಹಿಸುತ್ತ ಹೋಗಬೇಕೆಂದು ಎಲ್ಲ ಕನ್ನಡ
ಬಂಧು.-ಭಗಿನಿ ಯರಿಗೆ ನಾವು ಅನನ್ಯಭಾವದಿಂದ ಬೇಡಿಕೊಳ್ಳುತ್ತೇವೆ
ನಮ್ಮ ಎಲ್ಲ ಕಾರ್ಯಗಳಿಗೆ ಸಹಾನ.ಭೂತಿಯಿಂದ ಸಹಾಯಮಾಡಿ,
ನಮ್ಮ ಕಶಾರ್ಯದಿಶವನ್ನು ತಿಳಸುಕ್ತಬದ ಮ. ರಾ ರಾ ಕೃಷ್ಣಾಜಿ ಹಣಮಂತ
ಮುದವೇಡಕರ (" ಕರ್ನಾಟಕವೈತ್ವ ' ಸಂಪಾದಕರು) ಇವರಿಗ್ಳೂ ವಾಚ
ನಾಲಯದ ಅಧ್ಯಕ್ಷರೂ, ನಮ್ಮ ಎಚ್ಲ ಸಂಸ್ಥಿಗಳ ಹಿತಚಿಂತಕರೂ, ಸಹಾಯ್ಕ್ಯ
ಭೂತರೂ ಅದ ಡಾ ಹಣಮಂತ ವಂಕಟೇಶ ಸವಣೂರ, ಎಲ್. ಎಮ್
ಆಂಡ ಎಸ್ ಇವರಿಗೂ ನಾವು ಆಜನ್ಮ ಉಪಕಾರಬದ್ದರಾಗಿರುವವು
ಕಡೆಗೆ ಕಡೆಗೆ ಈ " ಹೃದಯನಿವೇದನ 'ವನ್ನು ಓದಿದ ಎಲ್ಲ ಕರ್ನಾ
ಬಕಸ್ಥರ ಮನದಲ್ಲಿ ನಾವು ಕೈಕೊಂಡ ಕಾರ್ಯದಲ್ಲಿ ಸಹಾಯ ಮಾಡಲು
ಸ್ಯೂರ್ತಿಯನ್ನು ಹುಟ್ಟಿಸಲು ಶಕ್ತನಾದ ಜಗನ್ನಿಯಮಕ 'ಶ್ರೀರಘುತಿ'ಗೆ
ಬೇಡಿಕೊಂಡು, ಪಸಕ್ತಕ ಕಾದಂಬರಿಯನ್ನು ತಿದ್ದುವ ಹೆಲನದಲ್ಬಿ ನಮಗೆ
ಸಹಾಯಕರಾದ ಮ, ರಾ ರಾ ರುಕ್ಮಾಂಗದ ಗೋವಿಂದರಾವ ದೇಶಪಾ€ಡೆ
ಬಿ.ಏ ಯವರಿಗೂ ಮುದ್ರಣವನ್ನು ಮುದ್ದಾಗಿ ಮಾಡಿಕೊಟ್ಟ ತ್ರೀ'
ದೇವೆಂದ್ರರವರಿಗೂ ನಾವು ತುಂಬ ಋಣಿ ಯಾಗಿದ್ದೇವೆಂದು ಹೇಳಿ ನಮ್ಮ
"ನಿವೇದನ 'ವನ್ನು ಮುಗಿಸುತ್ತೇವೆ
ಶಿ೯ಬಲಭೀವು ವಾಚನಾಲಯ ಕರ್ನಾಟಕ ನಮ್ರಸೇವಕನಾದ,
ಮದವಾಲ, ತಾ ೧-೧-೧೯೧೮ ಇಸ್ವಿ ದಾಮೋದರ ಸದಾಶಿವ ದೇಶಪಾಂಡೆ.
------------------------------------------------------------
ಪರಂಪರಾಗತ ಕೆಲ ದುಷ್ಟ ರೂಢಿ
ಬಂಧನಗಳಿಂದ
ತಳಮಳಿಸುತ್ತಿರುವ ನನ್ನ
ಬಂಧು-ಭಗಿನಿಯರಿಗೆ
ಈ ಅಲ್ಪ ಪ್ರಯತ್ನವನ್ನು
ಅತ್ಯಂತ ಪ್ರೇಮಭಾವದಿಂದ
ಅರ್ಪಿಸಿರುವೆನು.
ದಾ, ಸ ದೇ
---------------------------------------------------------------
|| ಶ್ರೀಸರಸ್ವತೀ ಪ್ರಸನ್ನ ॥
ಸಮಾಜರಹಸ್ಯ .
ಮ್ಯಾಟ್ರಿಕ್ಯುಲೇಕನ್ ಪರೀಕ್ಷೆಕೊಟ್ಟು ಸಂಪಾದಿಸಿದ ವಾತಾ
ವರಣದಲ್ಲಿ ಮನುಷ್ಯನು ಓಡಾಡಹತ್ತಿದನೆಂದರೆ, ಆತನ ವಿಚಾ
ರಗಳು ಪಕ್ವವಾಗಹತ್ತಿ, ಅತನ ಮನೋಧೈರ್ಯವಾದರೂ ಹೆಚ್ಚು
ತ್ತದೆ, ತನ್ನ ಸಮಾಜದ ಏಳ್ಗೆಗೂ, ತನ್ನ ದೇಶದ ಏಳ್ಗೆಗೂ, ತನ್ನಿಂದಾ
ದಷ್ಟು ಸಹಾಯಮಾಡಿ ಕೃತಕೃತ್ಯನಾಗಬೇಕಂಬ ಉದಾತ್ಮವಿಚಾರಗ
ಳಾದರೂ ವಿಶ್ವವಿದ್ಯಾಲಯದಲ್ಲಿ ಕಾಲಿಟ್ಟ ಕೂಡಲೆ ಆತನಲ್ಲಿ ತಲೆದೋರ
ಹತ್ತುತ್ತವೆ. ವಿಶ್ವವಿದ್ಯಾಲಯದ ಗಾಳೆಯೇ ಅಂತಹದಿರುವದು. ತನ್ನ
ವಿದ್ಯಾಭ್ಯಾಸದ ಹೊರ್ತಾಗಿ ಅಲ್ಲಿ ತನಗೆ ಹೆಜ್ಜೆಗೇನಾದರೂ ಕಲಿಯುವ
ದುಂಟೆಂದು ಆತನಿಗೆ ಸ್ಮಾಭಾವಿಕವಾಗಿಯೇ ತೋರಿ, ಅತನು ತನ್ನ
ಮುಂದಿನ ಧ್ಯೇಯವನ್ನು ಅಲ್ಲಿಯೇ ನಿರ್ಣಯಿಸಿ ಅದಕ್ಕಾಗಿ ಎಲ್ಲತರದ
ಜ್ಞಾನವನ್ನು ಮಾಡಿ ಕೊಳ್ಳಲು ಯತ್ನಿಸುವನು.
ಗುರುವಾರವಿದ್ದದರಿಂದ ಪುಣ್ಯಪುರದೊಳಗೆ ಪ್ರಸಿದ್ಧಿಗೆ ಬಂದಿದ್ದ
ದಕ್ಷಿಣ-ಮಹಾವಿದ್ಯಾಲಯದಲ್ಲಿ ಇಂದು ಒಂದೇ ತರದ ಗದ್ದಲವು ನಡೆ
ದಿತ್ತು, “ ಸಮಾಜಸೇವಕಮಂಡಲ” ವೆಂಬ ಸಂಘವು ಸ್ಥಾಪಿಸಲ್ಪಟ್ಟು
---------------------------------------
೨ ಸಮಾಜರಹಸ್ಯ.
ಇಂದಿಗೆ ಮೂರು ವರ್ಷಗಳು ಮುಗಿದು ನಾಲ್ಕನೇ ವರ್ಷವು ಪ್ರಾರಂಭ
ವಾಗುವದರಿಂದ, ಆ ಮಂಡಲದ ವಾರ್ಷಿಕಸಭೆಯು ನೆರೆಯತಕ್ಕ
ದ್ದಿತ್ತು; ಮೇಲಾಗಿ ಸಮಾಜಸೇವೆಯಲ್ಲಿಯೇ ತಮ್ಮ ಆಯುಷ್ಯವನ್ನು
ಕಳೆದು ತಮ್ಮ ಜೀವಿತವನ್ನು ಧನ್ಯವಾಗಿ ಮಾಡಿಕೊಂಡು, ಎಲ್ಲ ಜನರ
ಆದರಕ್ಕೆ ಪಾತ್ರರಾಗಿದ್ದ ವಿದ್ಯಾಸಂಪನ್ನರೂ, ಅನುಭವಿಕರೂ ಆದ
ನಾರಾಯಣರಾಯರು ಮಂಡಲಕ್ಕೆ ಕೆಲವು ಸೂಚನೆಗಳನ್ನು ಮಾಡಿ
ಕಾರ್ಯದಿಶೆಯನ್ನು ತಿಳಿಸಿಕೂಡುವದಕ್ಕಾಗಿ ಭಾಷಣ ಮಾಡುವವರಿದ್ದ
ರು. ಕಾಲೇಜದಲ್ಲಿ ಉಪನ್ಯಾಸವೆಂದರೆ ವಿಲ್ಲ ವಿದ್ಯಾರ್ಥಿಗಳು ಬರತಕ್ಕ
ವರೇ ಇಂದು ಸಮಾಜೋನ್ನತಿಯ ವಿಷಯಕ್ಕೆ ನಾರಾಯಣರಾಯ;
ರಂಥ ವಾಕ್ಪಟುಗಳು ಮಾತಾಡುವವರಿದ್ದದರಿಂದಂತೂ ಎಲ್ಲ ವಿದ್ಯಾ
ರ್ಧಿಗಳಲ್ಲಿ ಒಂದುತರದ ವಿಶಿಷ್ಠ ಉತ್ಸಾ ಹವೇ ಉಂಟಾಗಿತ್ತು; ಎಲ್ಲರೂ
ತಮ್ಮ ಇಳುಹೊತ್ತಿನ ಫಲಾರವನ್ನು ತೀರಿಸಿಕೊಂಡು, ಐದು ಹೊಡೆ
ಯುವ ದಾರಿಯನ್ನೇ ನೋಡುತ್ತಿದ್ದರು; ಇಚ್ಛಿಸಿದಂತೆ ತೀವ್ರವೇ ಐದು
ಹೊಡೆದಕೂಡಲೇ ಎಲ್ಲರೂ ಉಪನ್ಯಾಸಮುಂದಿರಕ್ಕೆ ಹೋದರು.
ನಾರಾಯಣರಾಯರು ಬಂದಗಳಗೆಗೇ ಚಪ್ಪಳೆಯ ಸಪ್ಪಳದಲ್ಲಿ ಎಲ್ಲರೂ
ಅವರಿಗೆ ಸ್ವಾಗತವನ್ನಿತ್ತರು. ಮಂಡಲವು ಇಂದಿನವರೆಗೆ ಮಾಡಿದ
ಕಾರ್ಯವನ್ನು ಕಾರ್ಯದರ್ಶಿಗಳು ಸವಿಸ್ತರವಾಗಿ ಹೇಳಿದಮೇಲೆ
ನಾರಾಯಣರಾಯರು ಮತ್ತೆ ಚಪ್ಪಾಳೆಯ 'ಕಡಕಡಾಟ `ದ ಗರ್ಜನೆ
ಯಲ್ಲಿ ಎದ್ದುನಿಂತು ಮಾತಾಡಹತ್ತಿದರು. “ ಮಿತ್ರರೇ, ಸುಮ್ಮನೆ ವಿದ್ಯಾ
ಲಯದಲ್ಲಿ ಕುಳಿತು ನಮ್ಮ ಸಮಾಜಸುಧಾರಣೆಯು ಈ ರೀತಿಯಿಂದ
ಆಗತಕ್ಕದ್ದು, ನಮ್ಮ ಸಮಾಜದಲ್ಲಿ ಇಂಧಿಂಥ ಸುಧಾರಣೆಗಳ ಅವಶ್ಯ
ಕತೆಯುಂಟು- ಎಂದು ಹೇಳಿದರೆ ಸಮಾಜಕ್ಕೆ ನಿಮ್ಮ ಮಂಡಲದಿಂದ
ಏನೂ ಲಾಭವಾಗಲರಿಯದು. ಈಗ ನಿಮ್ಮಂಧ ಕೆಲ ತರುಣರು ಆಜ
ನ್ಮಪರ್ಯಂತವೂ ಇದೇ ಕಾರ್ಯವನ್ನು ಕೈಕೊಂಡು, ಜಾತಿಯೊಳ
ಗಿನ ಕೆಲವು ರೂಢಿಗಳಿಂದ ಎಷ್ಟು ಹಾನಿಯಾಗುತ್ತದಿಂಬದನ್ನು ಉಪ
----------------------------------------
ಸಮಾಜಸೇವಕಮಂಡಲ, ೩
ನ್ಫಾಸಗಳ ರೂಪದಿಂದಲ್ಕೂ ಪ್ರತ್ಯಕ್ಷ ಉದಾಹರಣೆಯಿಂದಲೂ ಜನ
ರಿಗೆ ಚನ್ನಾಗಿ ತಿಳಸಿಕೊಡಬೇಕು, ಸತತ ಕಾರ್ಯದಕ್ಷರಾಗಿ ಸಮಾಜ
ಕಂಟಕರನ್ನು ಗೊತ್ತುಹಚ್ಚಿ ಅವರವರ ದುಷ್ಟ ಚಾಳಿಗಳನ್ನು ಬಿಡಿ
ಸಲು ಯತ್ನಿಸಬೇಕು, ಸಮಾಜಕ್ಕೆ ಹಾದಿತಟ್ಟುವಂಥ ಕೃತ್ಯಗಳನ್ನು
ಮಾಡಿದವರಿಗೆ ದಂಡಿಸದೆ ಬಿಡಬಾರದು; ವರದಕ್ಷಿಣೆ ತೆಗೆದುಕೊಳ್ಳು
ವದು, ಬಾಲಿಕೆಯರನ್ನು ಹೊಟ್ಟೆ ತುಂಬಿಕೊಳ್ಳುವ ಹಣದಾಶೆಗಾಗಿ
ಮಾರಿ ಕೊಳ್ಳುವದು ಬಾಲವಿವಾಹ ವಾಡುವದು, ಮುಂತಾದ ನೀಚ
ಕೃತ್ಯ ಮಾಡುವವರನ್ನು ಕಂಡುಹಿಡಿದು, ಮೊದಲು ಅವರಿಗೆ ಅವು
ಗಳ ದುಷ್ಪರಿಣಾಮವನ್ನು ತಿಳಿಸಿಕೊಡುತ್ತ ಹೋಗಬೇಕು; ಅದರಿಂದ
ಲೂ ಅವರು ತಮ್ಮ ದುಷ್ಕರ್ಮಗಳನ್ನು ಬಿಡದಿದ್ದರೆ ಸಮಾಜದಿಂದ
ಅವರಿಗೆ ' ಬಹಿಷ್ಳಾರ 'ವನ್ನು ಹಾಕಿಸಬೇಕು, ಈ ರೀತಿಯಿಂದ ನಡೆ
ಯಲು ನಿರ್ಧರಿಸಿ ಸಮಾಜಸೇವಯನ್ನು ಕೈಕೊಳ್ಳದಿದ್ದರೆ, ನಮ್ಮ
ಸಮಾಜಸುಧಾರಣೆಯ ಕೆಲಸವು ನೂರಾರು ವರ್ಷಗಳವರೆಗೆ ಇನ್ನೂ
ಹಾಗೆಯೇ ಉಳಿಯುವದು, ...." ನಾರಾಯಣರಾಯರು ಇನ್ನೂ
ಎಷ್ಟೋ ಸಮಯೋಚಿತ ಸೂಚನೆಗಳನ್ನು ಮಾಡಿದರು. ಆದರೆ ಅವು
ಗಳನ್ನೆಲ್ಲ ಇಲ್ಲಿ ಹೇಳುತ್ತ ಕುಳಿತುಕೊಂಡು ನಮ್ಮ ವಾಚಕರನ್ನು
ಬೇಸರಗೊಳಿಸಲೆತ್ನಿಸದೆ ಮುಂದಿನ ಕಾರ್ಯಕ್ರಮದ ಬಗ್ಗೆ ಇಷ್ಟ
ರಿಂದಲೇ ಅವರ ವಿಚಾರಗಳನ್ನು ಅರಿತುಕೊಳ್ಳಲು ನಮ್ಮ ವಾಚಕ
ರಿಗೆ ಬಿಟ್ಟು ಅವರ ಭಾಷಣದ ಪರಿಣಾಮವು ಶ್ರೋತೃಸಮುದಾಯದ
ಮೇಲೆ ಹೇಗೆ ಆಯಿತೆಂಬದನ್ನು ತಿಳಿದುಕೊಳ್ಳಲು ತಿರುಗುವಾ.
ಅದೋ ನೋಡಿರಿ! ದೂರದಲ್ಲಿ ವಿದ್ಯಾಧರನು ಹೇಗೆ ಸ್ಫೂರ್ತಿಗೊಂಡು
ಏನೋ ಹೇಳಬೇಕೆಂದು ವಿಚಾರಿಸಿ ಏಳುತ್ತಿರುವನು? ಆತನೇನು
ಮಾತಾಡುವನೋ ಎಂದು ಎಲ್ಲ ವಿದ್ಯಾರ್ಥಿಗಳು ಆತನ ಕಡೆಗೆ ಅಚಲ
ದೃಷ್ಟಿಯಿಂದ ನೋಡುತ್ತಿರುವರು; ನಾರಾಯಣರಾಯರೂ ಸಹ ಈತ
ನ ಚಲನವಿಚಲವೃತ್ತಿಯನ್ನು ಕಂಡು ಈತನ ಭಾಷಣವನ್ನು ಕೇಳಲು
-------------------------------------
೪ ಸಮಾಜರಹಸ್ಯ
ಆತುರಗೊಳ್ಳುತ್ತಿರುವರೆಂಬದು ಸ್ಪಷ್ಟವಾಗಿ, ಅವರ ಮುಖದಮೇ
ಲಿಂದ ತೋರುತ್ತಿರುವದು, ವಿದ್ಯಾಧರನ ಹತ್ತರವೇ ಕುಳಿತಿದ್ದ ಆತನ
ಪರಮ ಮಿತೃನಾದ ಮಾಧವನಿಗೆ ಈತನು ಮಾತಾಡುವ ವಿಚಾರ
ರಹಸ್ಯವು ತಿಳದಿರುವದು, ಮಾಧವನು ಲಗುಬಗೆಯಿಂದ ಆತನಿಗೆ
ಹಾಗೆ ಮಾಡಬೇಡಂದು ಆತನನ್ನು ಕೂಡಿಸಲು ಯತ್ನಿಸಿದನು, ಅದರೆ
ವಿದ್ಯಾಧರನು ಆತನ ಸೂಚನೆಯನ್ನು ಲೆಕ್ಕಿಸದೆ ಎದ್ದುನಿಂತು ಉಚ್ಚ
ಸ್ವರದಿಂದ ಮಾತಾಡಹತ್ತಿದನು..
“ ಮಹಾಶಯರೇ, ತಾವು ಹೇಳಿದಂತೆ ಕಾರ್ಯವನ್ನು ಜರುಗಿ
ಸುವದಕ್ಕಾಗಿ ಆಜನ್ಮ ಬ್ರಮ್ಹಚಾರಿಯಾಗಿದ್ದು ಸಮಾಜಸೇವೆಗಾಗಿ
ಯೇ ನನ್ನ ಆಯುಷ್ಯವನ್ನು ಕಳೆಯಬೇಕೆಂದು ನಾನು ಇಚ್ಛಿಸುತ್ತೇನೆ.
ಇಂದು ನಿಮ್ಮ ಸಾನ್ನಿಧ್ಯದಲ್ಲಿಯೇ ಅದಕ್ಕಾಗಿ ಪ್ರತಿಜ್ಞೆ ಮಾಡಿ
ಕಾರ್ಯವನ್ನು ಕೈಕೊಳ್ಳುವೆನು. ” ಎಂದು ಹೇಳಿ ಇನ್ನು ಪ್ರತಿಜ್ಞೆಯ
ಶಬ್ದಗಳನ್ನು ಉಚ್ಚರಿಸತಕ್ಕವನು. ಇಷ್ಟರಲ್ಲಿಯೇ ಮಾಧವನು
ಚಟ್ಟನೆ ಎದ್ದು ನಿಂತು ಆಂದದ್ದು:- "ಮಹಾಶಯರೇ, ಪ್ರತಿಜ್ಞಗೆ
ಹೀಗೆ ಅವಸರ ಮಾಡಿದರೆ ಅವಿಚಾರವಾಗುವ ಸಂಭವವುಟು, ಅವ
ಸರದಲ್ಲಿ ಮಾಡಿದ ಪ್ರತಿಜ್ಞೆಗಾಗಿ ಹಿಂದಿನಿಂದ ಪಶ್ಚಾತ್ತಪ ಪಡುವ
ಸಂಭವವುಂಟು, ಇನ್ನು ಸೂಟಿಯು ತೀರ ಸಮೀಪಕ್ಕೆ ಬಂದಿದೆ;
ಆದ್ದರಿಂದ ವಿದ್ಯಾಧರನ ಮನೋಧೈರ್ಯವೇ ಇಷ್ಟು ನಿಶ್ಚಲವಿದ್ದರೆ
ಸೂಟಿಯಲ್ಲಿ ಕೆಲವು ಕಡೆಗೆ ಹೋಗಿ, ಈ ಕೆಲಸವನ್ನು ತುಸು ದಿವಸ
ಗಳ ವರೆಗೆ ಮಾಡಿ ಅನುಭವ ತೆಗೆದುಕೂಂಡು, ಇನ್ನೂ ಬ್ರಮ್ಹಚಾ
ರಿವೃತದಿಂದಲೇ ಸಮಾಜಸೇವೆಯನ್ನು ಮಾಡುವದೇ ಆತನಿಗೆ ಸರಿ
ಯಾಗೆ ತೋರಿದರೆ ವಿದ್ಯಾಲಯವು ಮತ್ತೆ ಪ್ರಾರಂಭವಾದ ಮೇಲೆ
ಹಾಗೆ ಪ್ರತಿಜ್ಞೆಯನ್ನು ಮಾಡಿ, ಸುಮ್ಮನೆ ಇಂದು ಪ್ರತಿಜ್ಞೆಯನ್ನು
ಮಾಡಿ, ನಾಳೆ ಅದನ್ನು ಭಂಗಿಸುವದು ಮಾತ್ರ ಲೇಸಲ್ಲ; ಸಮಾಜ
-----------------------------------
ಸಮಾಜಸೇವಕಮಂಡಲ. ೫
ಸೇವೆಗಾಗಿ ಆಜನ್ಮ ಬ್ರಮ್ಹಚಾರಿವ್ರತದಿಂದಲೇ ಇರಬೇಕೆಂಬದೇನೂ
ನನಗೆ ಸರಿಯಾಗಿ ತೋರುವೆದಿಲ್ಲ. ” ಹೀಗೆ ಹೇಳಿ ವಿದ್ಯಾಧರನು
ಕುಳಿತುಕೊಂಡ ಮೇಲೆ ಎಲ್ಲ ಕಡೆಯಲ್ಲಿಯೊ ಶಾಂತತೆಯೇ ಉಂಟಾ
ಯಿತು, ಎಲ್ಲರೂ ಮಾಧವನ ಸಮಯೋಚಿತ ಭಾಷಣವನ್ನು ಹುರಿತು
ವಿಚಾರಿಸುತ್ತ ತುಸು ಹೊತ್ತು ಕಳೆದರು, ಕಡೆಗೆ ಕೆಲವರಿಗೆ ಮಾಧ
ವನ ವಾತಿನ ಸ್ಪಷ್ಟತೆಯು ಪೂರ್ಣವಾಗಿ ಹೊಳೆಯಿತು, ಕೆಲವು
ವಿದ್ಯಾರ್ಥಿಗಳು ಕೂಡಿ ಸೂಟಿಯಲ್ಲಿ ತುಸು ಕಾರ್ಯಭಾಗವನ್ನು
ಮಾಡಿ ಅನುಭವ ತೆಗೆದುಕೊಳ್ಳ ಬೇಕೆಂದು ನಿಷ್ಕರ್ಷೆಯಾಗಿ ಸಭೆಯ
ಕೆಲಸವು ತೀರಿತು.
ಎಲ್ಲರೂ ತಮ್ಮ ತಮ್ಮ ನಿಜಸ್ಥಾನಗೆಳಿಗೆ ತೆರಳಿದರು. ವಿದ್ಯಾಧ
ರನೂ, ಮಾಧವನೂ ಒಂದೇ ಕೋಣೆಯಲ್ಲಿ ಇರುತ್ತಿದ್ದರು, ವಿದ್ಯಾ
ಧರನು ತನ್ನ ಮಿತ್ರನ ಮೇಲೆ ಬಹಳೇ ಸಿಟ್ಟಿಗೆದ್ದಂತೆ ಎಲ್ಲರಿಗೂ
ತೋರಿತು ವಿದ್ಯಾಧರನು ಏನೂ ಮಾತಾಡದೆ, ಸುಮ್ಮನೆ ಬಂದು ತನ್ನ
ಹಾಸಿಗೆಯ ಮೇಲೆ ಬಿದ್ದು ಕೊಂಡನು. ಆತನ ಮನಸ್ಸಿನಲ್ಲಿ ತರತ
ರದ ವಿಚಾರಲಹರಿಗಳು ಬರಹತ್ತಿದವು. ಮಾಧವನನ್ನು ತಾನು ಅಣ್ಣ
ನೆಂದು ಮನ್ನಿಸುತ್ತಿದ್ದು ಆತನು ಇಂದು ಸಭೆಯಲ್ಲಿ ತನ್ನು ಮಾನಹಾನಿ
ಯನ್ನು ಯಾಕೆ ಮಾಡಲಿಚ್ಛಿಸಿದನೆಂಬದರ ಗೂಢವು ಆತನಿಗೆ ತಿಳಿಯ
ದಾಯಿತು. ಆತನು ದುರಭಿಮಾನಿಯೆಂದೂ ಸಹ ಒಮ್ಮೆ ಆತನಿಗೆ
ತೋರುತ್ತಿತ್ತು, ಮಾಧವನ ಈ ತರದ ವಿಲಕ್ಷಣ ನಡತೆಯ ವಿಷಯ
ದಲ್ಲಿ ವ್ಯಸನವಾಗಿ ಆತನು ತಳಮಳಿಸಹತ್ತಿದನು. ಕೆಲವು ಹೊತ್ತಿನ
ಮೇಲೆ ಈ ತರದ ಕೆಟ್ಟ ವಿಚಾರಗಳೆಲ್ಲ ಹೋಗಿ ಮನಸ್ಸು ತುಸು
ಶಾಂತವಾದ ಮೇಲೆ ಮಾಧವನು ಇಂದಿನವರೆಗೆ ಮಾಡಿದ ಉಪಕಾ
ರಗಳನ್ನು ಆತನು ನೆನಿಸಹತ್ತಿದನು; ಮಾಧವನ ನಿರ್ಮಲ ಅಂತಃಕ
ರಣಕ್ಕೆ ಮೆಚ್ಚಿ ಆತನ ಸಖ್ಯವನ್ನು ಬೆಳೆಯಿಸಲು ತಾನು ಹೇಗೆ ಆತುರ
೬ ಸಮಾಜರಹಸ್ಯ.
ಪಟ್ಟನೆಂಬದೂ, ಮುಂದೆ ಬರಬರುತ್ತ ತಮ್ಮಿಬ್ಬರ ಮಿತ್ರತ್ವವ ಬೆಳೆ
ಯುತ್ತ ಹೋಗಿ ಇಂದು ಅದು ಭ್ರಾತೃ-ಪ್ರೇಮವನ್ನೂ ಸಹ ಹೇಗೆ
ಮೀರಿರುವದೆಂಬದೂ, ಆತನಿಗೆ ನೆನಪಾಯಿತು. ಹೀಗಿದ್ದ ಮೇಲೆ
ಮಾಧವನು ತನ್ನ ಹಾದಿಯಲ್ಲಿ ಎಂದಿಗೂ ಅಡ್ಡಬರಲಾರನೆಂದು ಆತ
ನಿಗೆ ಅನಿಸಹತ್ತಿತ್ಕು ಇಂದಿನ ವರೆಗಿನ ಅತನ ಅನುಭವ, ಅತನ
ಇಂದಿನ ವಿಲಕ್ಷಣ ನಡತೆ ಇವುಗಳ ನಡುವೆ ತುಮುಲ ಯುದ್ಧವು
ಪ್ರಾರಂಭವಾಗಿ, ಕಡೆಗೆ ಆತನ ಅನುಭವದ ಕೊರಳಲ್ಲಿಯೇ ಜಯ
ಮಾಲೆಯು ತಳುಪಿಸಹತ್ತಿತ್ತು ಅದರೆ ಈಹೊತ್ತು ಆತನು ಹೀಗೆ
ಮಾಡಿದ ಕಾರಣವೇನೆಂಬದು ಮಾತ್ರ ಅತನ ಲಕ್ಷಕ್ಕೆ ಬರಲಿಲ್ಲ;
ಮಾಧವನನ್ನೇ ಇದರ ವಿಷಯಕ್ಕೆ ಕೇಲಬೇಕೆಂದು ಅತನು ಮನಸ್ಸಿ
ನಲ್ಲಿ ಮಾಡಿಕೂಂಡು, ಕೂಡಲೆ ಎದ್ದು ಕುಳಿತನು,
ಇಷ್ಟು ಹೊೂತ್ತಿನವರೆಗೆ ಮಾಧವನು ಏನೂ ಮಾತಾಡದೆ ತನ್ನ
ಕುರ್ಚಿಯ ಮೇಲೆ ಸುಮ್ಮನೆ ವಿಚಾರಿಸುತ್ತ ಕುಳಿತಿದ್ದನು. ತಾನು
ಇಂದು ಹೀಗೆ ಒಮ್ಮೆಲೇ ವಿದ್ಯಾಧರನ ಚಂಚಲತೆಯ ಸಭೆ
ಯಲ್ಲಿ ಹೇಳಿದ್ದರಿಂದ ಅತನು ಮನಸ್ಸಿನಲ್ಲಿ ನೊಂದುಕೊಂಡನೋ
ಏನೋ ಎಂದು ಮಾಧವನಿಗೆ ವಿಷಾದವೆನಿಸಿತ್ತು. ತಾನು ಒಂದು
ಕಾರ್ಯಕ್ಪಾಗಿ ಯತ್ನಿಸುತ್ತಿರಲು ಆ ಕಾರ್ಯವು ಮಾತ್ರ ಸಾಧ್ಯವಾ
ಗದೆ ಕಡೆಗೆ ಮಿತ್ರತ್ನಕ್ಕೆ ಬಾಧೆಯು ಬಂದು ಇಂದಿನವರೆಗೆ ಮಾಡಿದ
ತನ್ನ ಪ್ರಯತ್ನವೆಲ್ಲ ನಿಷ್ಫಲವಾಗುವದೋ ಏನೋ ಎಂದು ಆತನು
ವಿಚಾರಿಸುತ್ತಿದ್ದನು. ವಿದ್ಯಾಧರನು ಬಹಳ ಚಂಚಲ ವನಸ್ಸಿನವ
ನೆಂದು ಆತನಿಗೆ ಈ ಮೊದಲೇ ತಿಳಿದಿತ್ತು; ಬಾಲ್ಯದಲ್ಲಿ ಆತನಿಗೆ
ಚನ್ನಾಗಿ ಯಾರೂ ತಿಳಿಸಿಕೊಡದ್ದರಿಂದ ಸಮಾಜಸೇವೆಗಾಗಿ ಆತ
ನಲ್ಲಿ ಅಸ್ಪಷ್ಟ ವಿಚಾರಗಳೇ ತುಂಬಿರುವವೆಂದು ವಿದ್ಯಾಧರನು
ಕಂಡುಹಿಡಿದಿದ್ದನು. ಆದ್ದರಿಂದ ನಿಜವಾದ ಮಾರ್ಗವನ್ನು ಅತನಿಗೆ.
ಸಮಾಜಸೇವಕಮಂಡಲ, ೭
ಹೇಳಿಕೂಟ್ಟಿರೆ ತನ್ನ ಮೇಲೆ ಸಿಟ್ಟಾಗದೆ ಚಂಚಲ ಮನಸ್ಸಿಗಾಗಿ
ತನ್ನನ್ನೇ ದೂಷಿಸಿಕೊಂಡು ಸಮಯೋಚಿತ ಉಪಕಾರಕ್ಕಾಗಿ ತನ್ನನ್ನು
ಮನ್ನಿಸದೆ ಇರಲಾರನೆಂದು ಆತನು ತಿಳಕೊಂಡಿದ್ದನು. ವಿದ್ಯಾಧರನು
ಸುಶಿಕ್ಷಿತ ತರುಣನಿದ್ದು ಕೇವಲ ನಿರ್ಮಲ ಅಂತಃಕರುಣದವನು.
ಆತನಲ್ಲಿ ಕವಪಟಿನಾಟಕವು ಎಳ್ಳ ಪ್ಲಾದರೂ ಇರಲಾರದೆಂಬದಾಗಿ
ಮಾಧವನು ಪೂರ್ಣಮನಗಂಡಿದ್ದನು. ಇಂಧ ಉತ್ತಮೋತ್ತಮ
ಗುಣಗಳುಳ್ಳ ವಿದ್ಯಾಧರನ ಸ್ನೇಹವನ್ನು ಸಂಪಾದಿಸಿ ಮಾಧವನು ಧನ್ಯ
ನಾಗಿದ್ದನು.
ವಿದ್ಯಾಧರನು ಎದ್ದು ಕುಳತಿದ್ದನ್ನು ಕಂಡು ಮಾಧವನು ಸಾವ
ಕಾಶನಾಗಿ ಅಂದದ್ದು "ವಿದ್ಯಾಧರಾ, ನನ್ನ ಮೇಲೆ ಸಿಟ್ಟಿಗೆದ್ದೇನು ?
ನಾನು ಎನ್ನ ಹಿತಕ್ನಾಗಿಯೇ ಹಾಗೆ ಹೇಳಿದೆನು. ನಿನ್ನ ಅಹಿತವನ್ನು
ನಾನು ಜನ್ಮಜನ್ಮಾಂತರದಲ್ಲಿಯೂ ಬಯಸದೆ ಯಾವಾಗಲೂ
ನಿನ್ನ ಸಖ್ಯವನ್ನು ದಯಪಾಲಿಸೆಂದು ಅನನ್ಯಭಾವದಿಂದ ದೇವರಿಗೆ
ಬೇಡಿಕೊಳ್ಳುತ್ತಿರುವೆನು ಇಂದು ಹೀಗೆ ಮಾಡುವದರಲ್ಲಿ ನನ್ನ ಹೇತು
ವ್ಯಾವದೆಂದು ನೀನು ಕೇಳಬಹುದು; ಅದರೆ ಅದನ್ನು ಮಾತ್ರ ನಾನು
ಈಗ ನಿನಗೆ ಹೇಳಲಾರೆನು. ನನ್ನ ಮಾತಿನ ಅನುಭವ ಬಂದ ಮೇಲೆ
ನಿನಗೆ ನನ್ನ ಈ ಅಕಸ್ಮಿಕ ವರ್ತನದ ಕಾರಣವು ತಿಳಿಯಬಹುದು.
ಏಳು; ಹೀಗೆ ಸುಮ್ಮನೆ ಏನಾದರೊಂದು ತಿಳಿದುಕೊಂಡು ಅಸಮಾ
ಧಾನ ಹೊಂದುವದು ಹಿತಕರವಲ್ಲ. ನನ್ನ ಮಾತಿನ ಸತ್ಯತೆಯು ನಿನಗೆ
ಇನ್ನು ತುಸು ದಿವಸಗಳಲ್ಲಿಯೇ ತಿಳದೀತು. ? ಹೀಗೆ ಮಾಧವನು
ತಾನಾಗಿಯೇ ಮಾತಾಡಿದ್ದನ್ನು ಕಂಡು ವಿದ್ಯಾಧರನ ಮನಸ್ಸಿಗೆ ಆನಂ
ದವಾಯಿತು. ಇದಕ್ಕಾಗಿ ಇನ್ನು ಹೆಚ್ಚಿಗೇನೂ ಕೇಳದೆ ಮತ್ತೆ ಹೊತ್ತು
ಸಾಧಿಸಿದಾಗ ಅದನ್ನ ತಿಳಿದುಕೊಳ್ಳಬೇಕೆಂದು ನಿರ್ಧರಿಸಿ ಸುಮ್ಮ
ನಾದನು. ತಾನು ಮಾತಾಡದಿದ್ದರೆ ಮಾಧವನು ಮನಸ್ಸಿಗೆ ಕೆಡಕೆನಿಸ
೮ ಸಮಾಜರಹಸ್ಯ
ಕೊಳ್ಳಬಹುದೆಂದು ನಂಬಿ ಅತನ ಸಂಗಡ ತುಸು ಹೊತ್ತು ಮಾತಾ
ಡುತ್ತ ಕುಳಿತು... ತಾನು ಗೆದ್ದಿಲ್ಲವೆಂದೂ, ಆತನ ಮೇಲೆ ತನ್ನ
ಪೂರ್ಣ ವಿಶ್ವಾಸವುಂಟೆಂದೂ, ತನಗೆ ಆತನಿಗಿಂತ ಹೆಚ್ಚೆನ ಹಿತ
ಚಿಂತಕರಾರು ಇಲ್ಲೆಂದು ಹೇಳೆದದರಿಂದ ಮಾಧವನ ಮನಸ್ಸಿಗೆ
ಆನಂದವಾಯಿತು,
ಕಡೆಗೆ ತಿರಗಾಡ.ವ ಹೊತ್ತಾಯಿತೆಂದು ತಿಳಿದು ಇಬ್ಬರೂ
ಮಿತ್ರರು ಮತ್ತೆ ಅಂಗಿಯನ್ನು ಹಾಕಿಕೊಂಡು 'ಬಂಡ 'ವನದ ಕಡೆಗೆ
ಹೋದರು. ಹಾದಿಯಲ್ಲಿಯೂ ಸಹ ಬಹಳ ಮಾತಾಡದೆ ತಮ್ಮ ತಮ್ಮ
ಇಂದಿನ ಆಚರಣದ ವಿಚಾರದಲ್ಲಿಯೇ ತಲ್ಲೀನರಾಗಿ ಹೋಗಿದ್ದರು.
ತುಸು ಹೊತ್ತು ವನದಲ್ಲಿ ಮಲ್ಲಿಗೆ ಗಿಡಗಳ ಮೇಲಿಂದ ಹಾಯ್ದು
ತಂಪಾಗಿ ಸುವಾಸನೆಯಿಂದ ಕೂಡಿದ ಮಂದಮಾರುತನನ್ನು ಸೇವಿಸಿ
ತಿರುಗಿ ತಮ್ಮ ಕೋಣೆಗೆ ಬಂದು ಊಟ ಉಡಿಗೆಗಳನ್ನು ತೀರಿಸಿ
ಕೊಂಡು ಹತ್ತು ಹೂಡೆಯುವವರೆಗೆ ಅಭ್ಯಾಸಮಾಡಿ ಇಬ್ಬರೂ ಪರ
ಮಮಿತ್ರರು ನಿದ್ರಾವಶರಾದರು,
ದ್ವಿತೀಯ ಪರಿಚ್ಛೇದ.
ಪೂರ್ವಪರಿಚಯ.
ವಾಚಕವೃಂದ! ನಮ್ಮ ಈ ಮಿುತೈರ ಪೂರ್ವ ಇತಿಹಾಸ
ವನ್ನು ಹೇಳದೆ ತಮ್ಮನ್ನು ಇಷ್ಟು ವೇಳೆಯವರಿಗೆ ಏನೋ
ಹೇಳುತ್ತ ಕುಳಿತದ್ದಕ್ಕಾಗಿ ನಮ್ಮಮೇಲೆ ತಾವು ಮಾತ್ರ
ಸಿಟ್ಟಾಗಲಿಲ್ಲವೇ ?
ಎರಡನೆಯವರ ಪೂರ್ವಾಪರ ಇತಿಹಾಸವನ್ನು ಪರೀಕ್ಷಿಸದೆ
ಕುರುಡರಾಗಿ ಅವರ ಅನುಕರಣವಾಣಡ;ವದು ಕಾಲಾಂತರದಿಂದ
ಪೂರ್ವಪರಿಚಯ ೯
ಪಶ್ಚಾತ್ತಾಪಕ್ಕೆ ಕಾರಣವಾಗುತ್ತದೆ ದೊಡ್ಡ ದೊಡ್ಡ ಗ್ರಂಥಗಳನ್ನು
ಓದುವಾಗ್ಗೆ ನಮಗೆ ಎಷ್ಟೋ ತರದ ಉದಾಹರಣೆಗಳು ಕಾಣುತ್ತವೆ.
ಆದರೆ ಅವುಗಳಲ್ಲಿ ಗ್ರಾಹ್ಮ್ಯಾಂತವು ಎಷ್ಟಿರುವುದು. ಇಲ್ಲವೆ ಅವು ನಮ್ಮ
ದೇಶ-ಕಾಲಕ್ಕನುಸರಿಸಿ ಎಷ್ಟರಮಟ್ಟಿಗೆ ಅನುಕರಣಿಯವಾಗಿರು
ವವು ಇವೇ ಮೊದಲಾದ ಪ್ರಶ್ನೆಗಳ ಬಗ್ಗೆ ನಾವು ಎಳ್ಳಷ್ಟಾದರೂ
ವಿಚಾರಮಾಡುವದಿಲ್ಲ. ಆ ಉದಾಹರಣೆಯ ಬಾಹ್ಯಾಂಗವೇ ಅಷ್ಟು
ಮನೋಹರವಾಗಿರುವದು.. ನೋಡಿದ ಕೂಡಲೆ ಆದನ್ನು ನಾವೂ
ಮಾಡಿ ನೋಡಿ ನಾಶ ಹೊಂದದೆ ನಮ್ಮಲ್ಲಿ ಶಾಂತತೆಯುಂಟಾಗಲಾರದು.
ಹೀಗೆ ಹೇಳಿದ್ದರಿಂದ ಯಾವದರಲ್ಲಿಯೂ ಸತ್ಯಾಂಶವಿರುವದಿಲ್ಲೆಂದು
ಮಾತ್ರ ವಾಚಕರು ತಿಳೆಯುವ ಕಾರಣವಿಲ್ಲ, ಇರಬಹುದು ಕೆಲವಡೆ
ಯಲ್ಲಿ ಸತ್ಯಾಂಶವು ಶತಾಂಕದಿಂದಲೂ ನಿಜವಿರಬಹುದು, ಅದರೆ ಇಂಧ
ಉದಾಹರಣಗಳು ಮಾತ್ರ ಕಡಿಮೆ. ಮೇಲಾಗಿ ಅನುಭವ-ಕಿರೀಟ
ವಿಲ್ಲದೆ ಸುಮ್ಮನೆ ಗುರುತರ ಕಾರ್ಯ-ಸಿಂಹಾಸನದವಮೇಲೆ ಕೂಡಲು
ಹವಣಿಸಿ ಸತ್ಯನಾಶವನ್ನು ಮಾಡಿಕೊಳ್ಳುವದ ರಲ್ಲಿ ಕೆಲವರಿಗೆ ಯಾಕೆ
ಸಂತೋಷವಾಗುತ್ತದೆಯೋ ನಮಗಂತೂ ಹೇಳಲಾಗದು. ಸಾಧಾರ
ಣವಾಗಿ ನಮ್ಮ ವಿದ್ಯಾಧರನು ಈ ಜಾತಿಯವನಿದ್ದನು. ಆತಣಗೆ ಮೊ
ದಲಿನಿಂದಲೇ ಸಮಾಜಸೇವೆಯ ವಿಜವಾದ ಮಾರ್ಗವನ್ನು ಹೇಳಿಕೊ
ಡುವವೆರು ಯರೂ ಇಲ್ಲದ್ದರಿಂದ ಆತನಿಗೆ ತಾನು ಓದಿದ್ದರ ಮೇಲೆ
ಯೇ ಮನೋರಾಜ್ಯದ ಗಿಡಗಳನ್ನು ಬೆಳೆಸಿ ಫಲಗಳನ್ನು ಪರೀಕ್ಷಿಸ
ಬೇಕಾಗುತ್ತಿತ್ತು. ಆತನ ಹತ್ತಿರ ಮೊದಲು ಮೊದಲು ಇಂಧ ಕಾರ್ಯ
ದ ಅನುಭವವುಳ್ಳವರು ಯಾರೂ ಇಲ್ಲದ್ದರಿಂದ ಆತನ ಸಮಾಜಸೇವೆ
ಯ ವಿಚಾರಗಳೇನೋ ತಪ್ಪಿ ಕೆಲವು ಸಾರೆ ಇದಕ್ಕಾಗಿ ಸಂಕಟದೊ
ಳಗೆ ಸಹ ಬೀಳುತ್ತದ್ದನು. ಹೀಗಾಗಿದ್ದರಿಂದಲೇ ಆತನ ಮನಸ್ಸು
ಚಂಚಲವಾಗಿತ್ತು; ಒಂದು ಮಾರ್ಗವನ್ನು ಅನುಸರಿಸಿ ತುಸುಹೊತ್ತು
ಅದನ್ನು ಕ್ರಮಿಸಿಮೇಲೆ ಅದರ ಪರಿಣಾಮವು ಅಷ್ಟೇನು ಚನ್ನಾಗಿ
೧೦ ಸಮಾಜರಹಸ್ಯ
ಆಗಲಿಕ್ಕಿಲ್ಲೆಂಬ ಭ್ರಾಮಕ ಕಲ್ಪನೆಯಿಂದಲೇ ಅದನ್ನು ಬಿಟ್ಟು ಕೊಟ್ಟು
ಹೊಸ ಕಾರ್ಯಕ್ಕೆ ಆರಂಭಿಸುತ್ತಿದನು. ಒಂದು ಕಾರ್ಯದ
ಬೆನ್ನುಹತ್ತಿ ಮನಸುಗೊಟ್ಟು ಅದಕ್ಕಾಗಿ ಅವಿಶ್ರಾಂತಶ್ರಮಪಟ್ಟು,
ಅದರ ಸುಪರಿಣಾಮವನ್ನು ಕಾಣುವ ಸುದಿನದುಪಭೋಗವು ಕ್ವಚಿ
ತ್ತಾಗಿಯೇ ಆತನ ಪಾಲಿಗೆ ಬರುತ್ತಿತ್ತು. ಹೀಗಿದ್ದರೂ ಸಹ ಆತನು
ಸರಸ್ವತೀದೇವಿಯ ಕೇವಲ ಪರಮ ಭಕ್ತನಿದ್ದದರಿಂದ ಆಕೆಯು
ಮಾತ್ರ ಪೂರ್ಣ ಆತನಿಗೆ ಪ್ರಸನ್ನಳಾಗಿದ್ದಳು ಆತನು ಈ. ವರ್ಷ
ಬಿ.ಏ. ಪರೀಕ್ಷೆಗೆ ಕೂಡತಕ್ಕವನಿದ್ದನು. ಸುದೈವದಿಂದ ದಕ್ಷಿಣ
ಮಹಾವಿದ್ಯಾಲಯದಲ್ಲಿ ಬಂದಂದಿನಿಂದ ಮೇಲೆ ಹೇಳಿದಂತೆ ಆತನಿಗೆ
ಸರ್ವ ಗುಣಸಂಪನ್ಮವಾದ `ಮಾಧವನು ಜೊತೆಗಾರನಾದನು.
ಮಾಧವನು ಮೊದಲಿನಿಂದ ದಕ್ಷರಾದ ತಂದೆತಾಯಿಗಳ ಮೇಲ್ವಿ
ಚಾರಣೆಯ ಕೆಳಗೆ ಬೆಳೆದದ್ದರಿಂದ ಆತನಿಗೆ ಎಲ್ಲತರಹದ ಅನುಭವವು
ಸಜ್ಜನರ ಉದಾಹರಣೆಯಿಂದಲೂ ಸ್ವಂತ ಆಚರಣೆಯಿಂದಲೂ
ಬಂದಿತ್ತು. ಶ್ರೀನಿವಾಸರಾಯರು... ಅಂದರೆ ಮಾಧವನ ತಂದೆಯವರು
ಸರ್ವ ವಿದ್ಯಾಪಂಡಿತರಾಗಿದ್ದರು. ಜಗತ್ತಿನ ಆಶ್ಚರ್ಯಕ್ಕೂ ಆಭಿ
ನಂದನಿಗೂ ಕಾರಣವಾದ ಮುಂಬಾಪುರದಂಥ ಕಾರ್ಯದೇವಿಯ
ಮನೆಯಲ್ಲಿ ವಾಸಿಸುತ್ತಿದ್ದರು. ಕ್ರೀನಿವಾಸರಾಯರು ಉಂಡುಟ್ಟು
ಸುಖದಿಂದ ವಿದ್ಯಾದೇವಿಯ ಪೂಜೆಯಲ್ಲಿ ತತ್ಪರರಾದವರೆಂದು ಅವರ
ಮಿತ್ರಮಂಡಲಕ್ಕ್ಯೂ ಅವರ ನೆರೆಹೂರಯವರಿಗೂ ಗೊತ್ತಾದ
ಮಾತಾಗಿತ್ತು. ಮಾಧವನು ಇಂಧವರ ಮಗನಿದ್ದದರಿಂದ ಆತನಿಗೆ
ಮೇಲುತರದ ಉದಾತ್ತ ಶಿಕ್ಷಣವೇ ಸಿಕ್ಕಿತ್ತು. ಆತನ ತಾಯಿ
ಯು ಸಹ ಸುಶಿಕ್ಷಿತಳೂ ಕಾರ್ಯದಕ್ಷಳೂ ಆಗಿದ್ದಳು. ಮಕ್ಕಳ
ಲಾಲನೆಪಾಲನೆಯ ವಿಷಯಕ್ಕಂತೂ ನಿಸರ್ಗದೇವಿಯನ್ನು ಕೂಡ
ನಾಚಿಸುವಂಥವಳು, ಹೀಗಿದ್ದಮೇಲೆ ನಮ್ಮ ಮಾಧವನು ಮನೆ
ಪೂರ್ವಪರಿಚಯ, ೧೧
ಯಲ್ಲಿ ಆದರ್ಶಭೂತ ಆಜ್ಞಾಧಾರಕಪುತ್ರನೂ ಕಾಲೇಜದಲ್ಲಿ ಉತ್ತಮ
ಮಿತ್ರನೂ ಆಗಿದ್ದನೆಂದು ಬೇರೆಯಾಗಿ ಹೇಳಬೇಕಾಗಿಲ್ಲ. ಇಂಧವರೇ
ಸಮಾಜದ ಪ್ರಾಣಜ್ಯೋತಿಗಳು, ಆತನು ಮ್ಯಾಟ್ರಿಕ್ಯುಲೇಕನ್ ಪರೀಕ್ಷೆ
ಪಾಸಾದನಂತರ ಹಾನು ಪುಣ್ಯಪುರದಂಧ ೧ಸರ್ಗದೇವಿಯ ಮಂದಿರದ
ಲ್ಲಿಯೇ ಸರಸ್ನ್ಸತಿಯನ್ನು ಪೂಜಿಸಲು ಯತ್ನಿಸುವೆನೆಂದು ಹೇಳಿ ಮಾತಾ
ಪಿತೃಗಳ ಆಜ್ಞೆಯನ್ನೂ, ಆಶೀರ್ವಾದಗಳನ್ನೂ ಪಡೆದು ಪುಣ್ಯಪುರದ
ದಕ್ಷಿಣ ಮಹಾವಿದ್ಯಾಲಯದಲ್ಲಿಯೇ ತನ್ನಮುಂದಿನ ಶಿಕ್ಷಣಕ್ರನುವನ್ನು
ಪ್ರಾರಂಭಿಸಿದ್ದನು. ಅದಕ್ಕೆ ಈಗ ೩.೪ ವರ್ಷಗಳಾಗಿ ವಿದ್ಯಾಧರ
ನಂತೆ ಆತನೂ ಈವರ್ಷ ಬಿ, ಏ. ಪರೀಕ್ಷೆಗೆ ಕೂಡ್ರತಕ್ಕವನಿದ್ದನು.
ಒಂದೇತರದ ಅಭ್ಯಾಸ, ಒಂದೇ ಕೋಣೆಯಲ್ಲಿಯ ವಾಸ, ಹೀಗಾದ
ಮೇಲೆ ಒಬ್ಬರ ಗುಣಾವಗುಣಗಳು ಮತ್ತೊಬ್ಬರಿಗೆ ತಿಳಿಯಹತ್ತಿ
ಮಾಧವನ ಅಸಾಧಾರಣ ಗುಣಗಳನ್ನು ಕಂಡು ವಿದ್ಯಾಧರನು ಆತನನ್ನು
ಒಡಹುಸ್ಟದ ಅಣ್ಣನಂತೆ ಪ್ರೀತಿಸುತ್ತಿದ್ದದ್ಲೇನು ಆಶ್ಚರ್ಯವಲ್ಲ! ಪ್ರೀತಿ
ಯಿಂದ ಪ್ರೀತಿಯು ಹುಟ್ಟುತ್ತದೆ, ವಿದ್ಯಾಧರನೇನು ವ್ಯಸನಾಧೀನನಿರದೆ,
ಆತನೂ ತನ್ನಷ್ಟು ವಿದ್ಯಾಪರಿಪೂರಿತನೂ, ಸಭ್ಯನೂ, ಸುಗುಣಶೀಲನೂ,
ಇರುವನೆಂದು ಕಂಡು ಮಾಧವನಾದರೂ ವಿದ್ಯಾಧರನ ಬಂಧುಪ್ರೇಮ
ವನ್ನು ಕಂಡು ತಕ್ಕ್ ಪ್ರತಿಪ್ರೇಮವನ್ನೇ ತೋರಿಸಹತ್ತಿದನು, ಹೀಗಾಗಿದ್ದ
ರಿಂದ ೩.೪ ವರ್ಷದ ಸಹವಾಸದಿಂದ ಅವರ ಈ ಪ್ರೇಮವು ವೃದ್ಧಿಂಗ
ತವಾಗುತ್ತ ನಡೆದಿತ್ತು. ನಮ್ಮ ಚಾಣಾಕ್ಷನಾದ ಮಾಧವನು ವಿದ್ಯಾ
ಧರನ ಕಲವು ಅಸ್ಪಸ್ಟ ವಿಚಾರಗಳನ್ನು ಕೇಳಿ ಆತನ ಮನಶ್ಚಾಂಚಲ್ಯ
ವನ್ನು ಕಂಡುಹಿಂಡಿಯರದೆ ಇರಲಿಲ್ಲ. ಹೀಗಾಗುವದಕ್ಕೆ ಕಾರಣವೇ
ನೆಂಬದೂ ಆತನ ಮನಸ್ಸಿನಲ್ಲಿ ಹೊಳೆದುಹೋಯಿತು, ಅದನ್ನೆಲ್ಲ
ತಾನು ವೇಳೆ ಸಾಧಿಸಿದಾಗ ಚನ್ನಾಗಿ ಖಂಡಿಸುತ್ತಹೋಗಿ ಆತನ ಭ್ರಮೆ
ಯನ್ನೂ ಮನಶ್ಚಂಚಲತೆಯನ್ನೂ ಹೋಗಲಾಡಿಸಬೇಕೆಂದು ಆತನು
ನಿಶ್ಚಿಯಿನಿದ್ದನು. ಇಷ್ಟರಲ್ಲಿಯೇ ಈ ಕಾರ್ಯದಲ್ಲಿ ಆತವಿಗೆ ಕೆಲ
೧೨ ಸಮಾಜರಹಸ್ಸ,
ವಾಂಶದಿಂದ ಯಸಸ್ಸು ನಿಕ್ಕತ್ತು. ಹೀಗೆ ತನ್ನ ಏಳೆಗೆಗಾಗಿಯೂ, ವಿದ್ಯೆ
ಗಾಗಿಯೂ, ಮಾಧವನು ಹೆಣಗುತ್ತಿರುವದನ್ನು ಕಂಡು ವಿದ್ಯಾಧರನು
ವಿಶೇಷವಾಗಿ ಪ್ರೇಮಿಸಹತ್ತಿದನು, ಆತನೇ ತಂದೆಯು. ಆತನೇ ಗುರು
ವು, ಆತನೀ ಮಿತ್ರನು, ಬಹಳವೇಳೆ, ಮಾಧವನೇ ತನ್ನ ಸರ್ವಸ್ಥ
ವೆಂದು ವಿದ್ಯಾಧರನು ತಿಳಕೊಳ್ಳಹತ್ತಿದನು. ಇದನ್ನೇ ಕಂಡು ಮಾ
ಧವನಿಗೂ ತುಸು ಅನಂದವಾಗಿತ್ತು ನಿಜವಾಗಿ ಹೀಗಾಗುವದು ಸ್ವಾ
ಭಾವಿಕವೇ ! ತಾವು ಪರರ ಕಲ್ಯಾಣಕ್ಕಾಗಿ ಹೆಣಗಿದ್ದರ ಫಲವು
ದೊರಕುವ ಮಾರ್ಗಪ್ರತೀಕ್ಷೆಯನ್ನು ಯಾರು ಮಾಡಲಾರರು!!
ವಸ್ತಸ್ಥಿತಿಯು ಹೀಗಿದ್ದುದರಿಂದಲೇ ಮೊದಲನೆ ಪರಿಚ್ಛೇದದಲ್ಲಿ ವರ್ಣಿ
ಸಿದ ವಿದ್ಯಧರನ ಅಸಮಾಧಾನವು ಅಷ್ಟು ತೀವ್ರವೇ ಹಾರಿಹೋಯಿತು,
ಮತ್ತೆ ಇಬ್ಬರು ಮೊದಲಿನಂತೆ ಇರಹತ್ತಿದರು. ಆದರೂ ಅಂದಿನ
ವಿಷಯವನ್ನೇ ಬೇರೆ ಬೇರೆ ರೀತಿಯಿಂದ ಚರ್ಚಸುವದನ್ನು ಮಾತ್ರ
ಬಿಡಲಿಲ್ಲ. ವಿದ್ದಾಧರನು ತೀರ ಚಿಕ್ಕವನಾರುವಾಗಲೇ ತಾಯಿತಂದೆ
ಗಳು ತೀರಿಕೊಂಡಿದ್ದರಿಂದ ಅನಾಧ ಬಾಲಕನ ಸಂರಕ್ಷಣೆಯ ಭಾರ
ವು ಆತನ ದೂರಿನ ಆಪ್ತರಾದ ದಿವಾಕರಸಂತರಮೇಲೆ ಬಿದ್ದಿತು ;
ಅವರು ಒಳ್ಳೇ ದಕ್ಷತೆಯಿಂದ ಬಾಲಕನನ್ನು ದೊಡ್ಡವನಾಗಿ ಮಾಡಿ
ಶಿಶ್ಷಣಕ್ಕೆ ಹತ್ತುವ ಹಣವನ್ನು ಪೂರೈಸಿ ವಿದ್ಯಾರ್ಜನೆಗೆ ತಿಮ್ಮಿಂದಾ ಸಹಾಯವಾಣಡುತ್ತಿದ್ದರು ವಿದ್ಯಾಧರನ ತಂದೆಯು ದೊಡ್ಡ
ಜಮೀನದಾರವಿದ್ದದರಿಂದ ಹೀಗೆ ಸುಲಭವಾಗಿಯೇ ದಿವಾಕರಪಂತ
ರಿಗೆ ಹಣವನ್ನು ಪೂರೈಸಲು ಬರುತ್ತಿತ್ತು, ದಿವಾಕರಪಂತರಮೇಲೆ
ವಿದ್ಯಾಧರನ ಪೂರ್ಣ ವಿಶ್ವಾಸವು. ವಿದ್ಯಾಧರನು ದೊಡ್ಡವನಾದಂದಿ
ನಿಂದ ದಿವಾಕರಪಂತರಾದರೂ ಈ ವಿಶ್ವಾಸದ ದುರುಪಯೋಗವನ್ನು
ಮಾಡಲು ಕನಸುಮನಸಿನಲ್ಲಿಯೂ ಕೂಡ ಎಣಿಸದಸೆ ಹೊಲದ ಲೆಕ್ಕ
ಪತ್ರಗಳನ್ನೂ, ಆದಾಯದ ' ಜಮಾಖರ್ಚ" ಪಟ್ಟಿಯನ್ನೂ ಈತನಿಗೆ
ಕಳಸುತ್ತಿದ್ದರು.
ಪೂರ್ವ ಪರಿಚಯ ೧೩
ವಾಚಕಮಹಾಶಯ, ಇಲ್ಲಿಯೇ ಇನ್ನೊಂದು ಮಾತು! ಮಾಧ
ವನು ವಿದ್ಯಾಧರನ ವಿಷಯದಲ್ಲಿ ಇಷ್ಟು ನಿಃಸ್ಟಾರ್ಧ ಬುದ್ಧಿಯಿಂದಲೂ,
ಅಲೌಕಿಕ ಪ್ರೇಮದಿಂದಲೂ ನಡಯುತ್ತಿದ್ದು, ತಾನು ಒಂದು ಕಾರ್ಯ
ಕ್ಕಾಗಿ ವಿದ್ಯಾಧರನನ್ನು ಸಭೆಯಲ್ಲಿ ಆ ದಿವಸ ಪ್ರತಿಜ್ಞೆಯನ್ನು ಮಾಡು
ವದರಿಂದೆ ತಡೆದಿರಲು ಆತನು ತನ್ನಮೇಲೆ ಕೋಪಿಸುವನೋ
ಏನೋ ಎಂದು. ಅಂಜಿದನೆಂದು ಹಿಂದೆ ಹೇಳಿದ್ದೇವೆ ಮುಂದೆ ಆತನ
ಈ ಅಂಬಿಕೆಯಾದರೂ ಸುಳ್ಳಾಯಿತೆಂಬದು ವಾಚಕರು ಕಂಡುಹಿಡಿ
ದೇ ಇರುವರು. ಆತನ ಕಾರ್ಯವ್ಯಾವದೆಂದು ಮಾತ್ರ ಇನ್ನು ವಾಚ
ಕರಿಗೆ ತಿಳಿಸಲೇ ಇಲ್ಲ.
ಶ್ರೀನಿವಾಸರಾಯರಿಗೆ ಮಾಧವನಿಂಬ ಸತ್ಪುತ್ರನಲ್ಲದೆ
ಸರಸ್ವತಿಯೆಂಬವಳೊಬ್ಬ ೧೩.-೧೪ ವರ್ಷದ ಮಗಳಿದ್ದಳು
ಶ್ರೀನಿವಾಸರಾಯರ ಮಹಾಭಾಗ್ಯವೇ ಅಂಥದು ! ಸುಪತ್ನಿ' ಸುಪುತ್ರ!
ಸುಕನ್ಯೆ!! ತಿನ್ನಲಿಕ್ಕೆ ಉಣ್ಣಲಿಕ್ಕೆ ಮನೆಯಲ್ಲಿ ಬೇಕಾದಷ್ಟು!! ಈಗಿನ
ಸುಧಾರಿಸಿದ ಜನರಂತೆ ಹೆಂಗಸರು ವಕೀಲಿಯನ್ನು ಮಾಡತಕ್ಕದ್ದು.
ಅಥವಾ ಗಂಡಸರಷ್ಟು ಸಮಾನ ಹಕ್ಕಿನಿಂದ ರಾಜಮಂದಿರದಲ್ಲಿ ಮೆರೆ
ಯತಕ್ಕದ್ದು- ಇವೇ ಮೊದಲಾದ ವಿಚಾರದವರಾಗದಿದ್ದರೂ ಹೆಂಗ
ಸರಿಗೆ ಶಿಕ್ಷಣವು ಅವಕ್ಕವಾಗಿ ಕೊಡತಕ್ಕಲ್ಲೆಂದು ಅವರ ಅಭಿಪ್ರಾ
ಯವು. ಆದರೆ ಈಗಿನಂತೆ ಗಂಡು ಹುಡುಗರ ಶಾಲೆಯಲ್ಲಿ ಅವರಿಗೆ
ಶಿಕ್ಷಣವನ್ನು ಕೊಡದೆ, ಸುಶಿಕ್ಷಿತ ಮರ್ಯಾದೆಶೀಲ ಹೆಂಗಸರೇ ಬೇರೆ
ಸ್ಥಾಪಿಸಿದ ಹೆಣ್ಣು ಹುಡುಗರ ಶಾಲೆಯಲ್ಲಿ, ಅವರಿಗೆ ಕಲಿಸತಕ್ಕದ್ದೆಂದು.
ಶ್ರೀನಿವಾಸರಾಯರು ಆಗಾಗ್ಗೆ ಹೇಳುತ್ತಿದ್ದರು. ಹೆಂಗಸರ ವಿದ್ಯಾಭ್ಯಾ
ಸದ ವಿಷಯಕ್ನಂತೂ ಅವರ ಮತ ಬೇರೆ. ಬೀಜಗಣಿತ, ರಸಾಯನ
ಶಾಸ್ತ್ರ ಮುಂತಾದ ವಿಷಯಗಳನ್ನು ಕಲಿಸಿ ಬಾಲಿಕೆಯರನ್ನು ಪೀಡಿಸು
ವದಕ್ಕಿಂತ, ಗೃಹಕೃತ್ಯ, ಹಣೆಯುವದು, ಚಿತ್ರತಗೆಯುವದು, ಗಾಯನ,
೧೪ ಸಮಾಜರಹಸ್ಯ.
ಶಿಶುಸಂಗೋಪನ, ತಕ್ಕಮಟ್ಟಿಗೆ ವೈದ್ಯಶಾಸ್ತ್ರ, ಸಂಸ್ಕೃತ ಮುಂತಾದ
ವಿಷಯಗಳನ್ನು ಅವಶ್ಯವಾಗಿಯೇ ಕಲಿಸಿ ಅವರನ್ನು ನಿಪ್ರುಣರನ್ನಾಗಿ
ಮಾಡಿ ಸುಸಂಸ್ಕೃತ ಆಯುಷ್ಯವನ್ನು ಕಳೆಯಬೇಕೆಂದು ಅವರ ಇಚ್ಛೆ
ಯು. ವಿಶೇಷವಾಗಿ ಸಂಸ್ಕೃತ ಅಭ್ಯಾಸ ವಾಡಿಸುವದರ ಮೇಲೆ ಅವ
ರಿಗೆ ಮನಸ್ಸು ಬಹಳ. ಸಂಸ್ಕೃತ ಭಾಂಡಾರದಲ್ಲಿದ್ದ ಉದಾತ್ರ ಜೀವನ
ರಹಸ್ಸಗಳನ್ನೂ ಜೀವಿತಸನ್ನಾರ್ಗವನ್ನೂ, ಭಾರತೀ-ಸಾಧ್ವಿಯರ
ಚರಿತ್ರೆಗಳನ್ನೂ ಪ್ರತಿಒಬ್ಬ ಹೆಂಗಸು ಅಭ್ಯಾಸಿಸಬೇಕೆಂದು ಅವರು
ಯಾವಾಗಲೂ ಅನ್ನುತ್ತಿದ್ದರು ಆದ್ದರಿಂದ ಅವರು ಸರಸ್ವತಿಯನ್ನು
ಈ ರೀತಿ ಹೊಸದಾಗಿ ಸಾವಿಸಲ್ಪಟ್ಟ ಮುಹಿಳಾ-ವಿದ್ಯಾಲಯಕ್ಕೆ
ಕಳುಹಿಸುತ್ತಿದ್ದರು. ಈಗ ಆಕೆಯು ಇಂಗ್ಲಿಷ ಪ್ರವೇಶಪರೀಕ್ಷೆಯ
ವರೆಗೆ ಅಭ್ಯಾಸಿಸದ್ದಳು. ಶ್ರೀನಿವಾಸರಾಯರು ಮನಯಲ್ಲಿ ಸ್ವತಃ
ಆಕೆಗೆ ಸಂಸ್ಕೃತ ಕಲಿಸುತ್ತಿದ್ದದರಿಂದ ಆಕೆಯು ಈಗ ಸಾವಿತ್ರಿ-
ಆಖ್ಯಾನ, ನಲೋಪಾಖ್ಯಾನ, ಮುಂತಾದ ಬೋಧಪರ ಪುಸ್ತಕಗಳನ್ನು
ಸಹಜರೀತಿಯಿಂದ ಓದಿ ವಿಶೇಷ ಮಾರ್ಮಿಕ ರೀತಿಯಿಂದ ಅರ್ಥವನ್ನು
ತಿಳಿದುಕೊಳ್ಳುತ್ತಿದ್ದಳು. ತಮ್ಮ ಉತ್ಕಟೇಚ್ಛೆಯನ್ನು ಮಗಳು ಪೂರೈ
ಸಿದಳೆಂದು ತಿಳಿದು ಶ್ರೀನಿವಾಸರಾಯರಿಗೆ ಪರಮಾನಂದವಾಗಿತ್ತು.
ಹೀಗೆ ಸರಸ್ವತಿಯು ಪೌರ್ವಾತ್ಯ, ಪಾಶ್ಚಿಮಾತ್ಯಭಾಷೆಗಳಲ್ಲಿ ನಿಷ್ಣಾತ
ಳಾಗಿದ್ದಳಲ್ಲದೆ, ಗೃಹಕೃತ್ಯದಲ್ಲಿಯೂ ಆಕಯ ಜಾಣತನವನ್ನು ನೋಡಿ
ಅಕೆಯ ತಾಯಿಯಾದ ಮನೋರಮಾಬಾಯಿವರಿಗೆ ಹಿಡಿಸಲಾರದಷ್ಟು
ಅನಂದವಾಗಿತ್ತು. ಇನ್ನು ಸರಸ್ವತಿಯು ಚಲೋ ಗಂಡನನ್ನು ಪಡದ
ಳೆಂದರೆ ತಮ್ಮನ್ನು ಸುಖಿಗಳು ಯಾರೂ ಆಗಲಿಕ್ಕಿಲ್ಲೆಂದು ಅವರು
ಅನ್ನುತ್ತಿದ್ದರು. ಮಗಳು ಇನ್ನು ದೊಡ್ಡ ವಳಾದದ್ದರಿಂದ ಮದುವೆ
ಯನ್ನು ಮಾಡಲೇಬೇಕೆಂದು ಮನೋರಮಾಬಾಯಿಯವರು ಪತಿಯ
ಹತ್ತರ ಹಟಹಿಡಿದರು. ಶ್ರೀನಿವಾಸರಾಯರಿಗೆ ತಾವು ಸ್ವತಃ ಗಂಡ
ನನ್ನು ಹುಡುಕಹತ್ತಿದಲ್ಲದೆ ಮಾಧವನಿಗೂ ಅದರ ವಿಷಯಕ್ಕೆ ಶೋಧಿ
ಬ್ರಮ್ಮಚಾರಿವ್ರತವೋ, ಗೃಹಸ್ಥಾಶ್ರಮವಪೋ?...... ೧೫
ಸಲು ಹೇಳಿಟ್ಬದ್ದರು. ಮಾಧವನಮೇಲೆ ಅವರ ವಿಶ್ವಾಸವೂ ಪ್ರೇಮವೂ
ಬಹಳ,
ಮಾಧವನು ತನ್ನ ಓರಿಗೆಯವನನ್ನೂ ಸುಶೀಲನನ್ನ್ಯೂ ತನ್ನ
ವಿದ್ಯಾಲಯದಲ್ಲಿ ಹುಡುಕಬಹುದಿಂದು ನಂಬಿ ಅವನ ಮಾತೆಯವರಾದ ಮನೋರಮಾಬಾಯಿಯವರು ವಿದ್ಯಾಧರನ ಮುಂದೆ ಯಾವಾಗಲೂ
"तरुण, कुलिन, गोरा, पाहिजे मुलिला, चतुर सद्जुणि, सुंदरसा
नवरा" * ಎಂದು ಶಾರದಾ ನಾಟಕದಲ್ಲಿಯ ಶಾರದೆ ತಾಯಿಯ ಶಬ್ದ
ದಿಂದ ಹಾಡಿ ಸರಸ್ವತಿಯ ಬೆನ್ನು ಚಪ್ಪರಿಸಿ ನಗುತ್ತ ಹೇಳುತ್ತಿದ್ದರು.
ತೃತೀಯ ಪರಿಚ್ಚೇದ.
ಬ್ರಮ್ಹಚಾರಿಯವೃತವೋ ಗ್ರಹಸ್ಫಾರ್ರಮವೋ?
ವಾಚಕರಿಗೆ ಇನ್ನು ಮಾಧವನ ಕಾರ್ಯವ್ಯಾವದಿಂದು ಹೇ
ಳುವ ಕಾರಣವಿಲ್ಲ, ಸರಸ್ವತಿಯ ಉಲ್ಲೇಖದಿಂದಲೂ,
ಮಾತಾಪಿತೃಗಳು ಮಾಧವನಿಗೆ ಪ್ರೀತಿಯಿಂದ ಒಪ್ಪಿಸಿದ
ಕಾರ್ಯವನ್ನು ನಮ್ಮ ಚಾಣಾಕ್ಸರಾದ ವಾಚಕ
ರಿಗೆ ಆತನ ಕಾರ್ಯರಹಸ್ಯವು ತಿಳಿದಿರಬಹುದು. ತನ್ನ ತಂಗಿಯ
ಕಲ್ಲ್ಯಾಣಕ್ಕಾಗಿ ಆಕೆಗೆ ಅನುರೂಪವಾಗಿಯೇ ಇದ್ದು ಸಕಲಗುಣ
ಮಂಡಿತನೂ, ಬಹಳವೇಕೆ,, ಮನೋರವಾಜಚಾಯಿಯವರು ವರ್ಣಿಸಿ
ದಂತೆಯೇ ಇದ್ದ ವಿದ್ಯಾಧರನನ್ನೇ ತನ್ನ ಬೀಗನಾಗಿ ಆರಿಸಿರಬಹು
ದೆದು ಸಹ ನಮ್ಮ ವಾಚಕರು ಊಹಿಯರಬಹುದು. ಹೌದು!
ನೀವು ತಿಳಿದದ್ದು ನಿಜವು! ಆದರೆ ಇದುವರೆಗೆ ತನ್ನ ಇಚ್ಛೆ ಯನ್ನು
----------------
* ತರುಣನೂ, ಕುಲೀನನ್ಕೂ ಸುಶೀಲನೂ, ಸದಗ್ಗುಣಿಯೂ ಆದಂಥವನನ್ನೇ ನನ್ನ ಮಗ - ಳಿಗೆ ಪತಿಯಾಗಿ ಆರಿಸು.
೧೬ ಸಮಾಜರಹಸ್ಯ,
ಮಾತ್ರ ಆತನು ಯಾರಿಗೂ ತಿಳಸಿದ್ದಿಲ್ಲ. ಆದರೆ ತಾಯಿತಂದೆಗಳು
ಆತನನ್ನು ಸರಸ್ಮೃತಿಗೆ ಗಂಡನನ್ನುಹುಡುಕುವುದಕ್ಕಾಗಿ ಕೇಳುವದರ
ಪೂರ್ವದಲ್ಲಿಯೇ, ತಂಗಿಯ ಮೇಲಿನ ಅಚಲ ಪ್ರೇಮನೂ, ಆಕೆಯ
ಗುಣಗಳ ಬಗ್ಯೆ ಆದರವೂ ಆಕೆಯು ತನ್ನನ್ನು ಈಗೀಗ ಯಾವಾ
ಗಲೂ ಹೇಗೆ ಅರ್ಧಪೂರ್ಣ ದೃಷ್ಟಿಯಿಂದ ವ್ಯಾಕುಲಚಿತ್ತಳಾಗಿ
ನೋಡುವಳೆಂಬದೂ ಆತನ ಲಕ್ಷಕ್ಕೆ ಬಂದು ಕಾರ್ಯವನ್ನು ಈ
ಮೊದಲೇ ಕೈಕೊಂಡಿದ್ದನು ತೀವ್ರವೇ ವಿದ್ಯಾಧರನು ಆತನಿಗೆ ಯೋ
ಗ್ಯವರವಾಗಿ ತೋರಿದನು. ಆತನ ಸರಲ ವೃತ್ತಿಯನ್ನು ಕಂಡು ತನ್ನ
ಭಗಿನಿಗೆ ಈತನು ಯೋಗ್ಯ ಪತಿಯಾಗಬಹುದೆಂದು ನಿಶ್ಲಯಿಸಿ,
ಸೂಕ್ಷ್ಮರೀತಿಯಿಂದ ಅತನ ಗುಣಾವಗುಣಗಳ ನಿರೀಕ್ಷ್ಷಣ ಮಾಡುವ
ದಕ್ಕಾಗಿಯೇ ತಾನೂ ವಿದ್ಯಾಧರನೂ ಒಂದೇ ಕೋಣೆಯಲ್ಲಿ ಇರುತ್ತೇ
ವೆಂದು ವಿದ್ಯಾರ್ಥಿಗಳ ಮೇಲ್ವಿಚಾರಕರಿಗೆ ಹೇಳೆ ಕೂಂಡಿದ್ದನು ಈಗ
೨.೩ ವರ್ಷದ ಸಹವಾಸದಿಂದ ವಿದ್ಯಾಧರನ ವಿಷಯಕ್ಕೆ ಆತನ ಅಭಿ
ಪ್ರಾಯವು ಚನ್ನಾಗಿ ಆಗುತ್ತ ಹೋಗಿ ಆತನ ಪ್ರೇಮವನ್ನಾದರೂ ಸಂಪಾ
ದಿಸಿದ್ದನು..ಹೀಗಿರಲು ಅತನು ತನ್ನ ಭಗಿನಿಯ ವಿಷಯಕ್ಕೆ ವಿದ್ಯಾ
ದರನ ಮುಂದೆ ಮಾತುತೆಗೆದು ಮೇಲಿಂದ ಮೇಲೆ ಆಕೆಯ ನಿಜಗುಣಾ
ನುವಾದವನ್ನು ಮಾಡದೆ ಇರುತ್ತಿದ್ದ ಲ್ಲ ಎರಡು ವರ್ಷದ ಕೆಳಗೆ
ಮಾಧವನು ವಿದ್ಯಾಧರನನ್ನು ತಾನಿರುತ್ತಿದ್ದ ಮುಂಬಾಪುರಿಗೆ ಕರೆದೊ
ಯ್ದಿದ್ದನು. ಅಲ್ಲಿ ಅತನ ಕುಟುಂಬದವರ ಸರಲವೃತ್ತಿಯನ್ನೂ,
ನಿರ್ಮಲ ಅಂತಃ ಕರುಣವನ್ನೂ ಅವರ ವಿದ್ಯಾರ್ಜನೆಯನ್ನೂ, ಸುಶೀಲ
ತನವನ್ನೂ ಕಂಡು ಮಾಧವನ ಮನೆಯೆಂದರೆ ಆನಂದದೇವತೆಯ
ಸುಖಮಂದಿರವೇ ಎಂದು ವಿದ್ಯಾಧರನು ತಿಳಿಯುತ್ತಿದ್ದನು. ಹೀಗೆ ಎಲ್ಲ
ರೀತಿಯಿಂದಲೂ ಮಾಧವನೆಂದರೆ ವಿದ್ಯಾಧರನ ಸರ್ವಸ್ವವಾಗಿ ಹೋ
ಗಿತ್ತು. ತನ್ನ ತಂಗಿಯ ಕಡೆಯಿಂದ ಬರುಶ್ತಿದ್ದ ಪತ್ರಗಳನ್ನು ವಿದ್ಯಾ
ಧರನಿಗೆ ತೋರಿಓ ಆಕೆಯ ಸರಲ ಅಂತಃಕರಣವನ್ನು ನಿವೇದಿಸುವ
ಬ್ರಮ್ಮ ಚಾರಿವ್ರತವೋ, ಗೃಹಸ್ಥಾಶ್ರಮವೋ ೧೩
ಒಂದಾದರೂ ಪ್ರಸಂಗವನ್ನು ಮಾಧವನು ವ್ಶರ್ಥವಾಗಿ ಹೋಗಗೊಡು
ತ್ತಿದ್ದಿಲ್ಲ.. ಇದನ್ನೆಲ್ಲ ಕಂಡು ವಿದ್ಯಾಧರನು ಸೆರಸ್ತ್ಮತಿಯನ್ನು ಆಕೆಯ
ಕೇವಲ ನಿರ್ಮಲಾಂತಕರಣಕ್ಕಾಗಿ ಪ್ರೀತಿಸುವನಂದೂ, ಈ ಪ್ರೇ
ಮವು ಪ್ರಣಯಪ್ರೇಮವಲ್ಲೆಂದೂ ಮಾಧವನು ತಿಳಿದಿದ್ದನು,
ಆದರೆ ಇತ್ತ ನಮ್ಮ ವಿದ್ಯಾಧರನ ವಿಚಾರ ಬೇರೆ ಸರಸ್ವತಿಯ
ಗುಣಗಳನ್ನು ಕಂಡು ಆಕೆಯು ನಿಜವಾಗಿ ಸರಸ್ವತೀ ದೀವಿಯಂತೆ
ವಿದ್ಯಾಧರನಿಗೆ ತೋರುತ್ತಿದ್ದಳು, ಇಂಧವಳನ್ನು ಮದುವೆಯೂಗುವದು
ತನ್ನಂಧವನಿಗೆ ಶಕ್ಯವಿಲ್ಲೆಂದು ಕಂಡು ಮೊದಲು ವೊದಲು ನಿರ್ಮಲ
ಅಂತಃಕರುಣದಿಂದ ಪ್ರೀತಿಸುತ್ತಿದ್ದನು. ಆದರೆ ಬರಬರುತ್ತ ಇದೆಲ್ಲ
ಹೋಯಿತು. ಆತನಿಗೆ ಸರಸ್ವತಿಯ ರಮ್ಯವಾದ ಮೂರ್ತಿಯು
ಮೇಲಿಂದಮೇಲೆ ನೆನಪಾಗಹತ್ತಿತು. ಸರಸ್ವತಿಯ ಪತ್ರಗಳನ್ನು ಓದಿ
ಮನಸ್ಸಿನಲ್ಲಿಯೇ ಆನಂದಪಡುತ್ತಿದ್ದನು ಸರಸ್ವತಿಯ ಗುಣಾನುವರ್ಣ
ನವನ್ನು ಕೇಳುತ್ತ ಕೂಡುವದರಲ್ಲಿ ಆತನು ಸಂತೋಷಪಡಹತ್ರಿದನ್ನು,
ಆದರೆ ಇವ. ವಿಚಾರಗಳು ಕಾಲಾಂತರದಿಂದ ಮಾಧವನ ದೃಷ್ಟೋ
ತ್ಪತ್ತಿಗೆ ಬೀಳದೆ ಉಳಿಯಲ್ಲ. ವಿದ್ಯಾಧರನು ತಾನು ಸರಸ್ವತಿಯನ್ನು
ಪ್ರೀತಿಸುತ್ತೇನೆಂದು ಮಾಧವದಣಿಗೆ ಇನ್ನೂ ಹೇಳದ್ದಿಲ್ಲ ಮಾಧನನಾ
ದರೂ ಯಾವ ಕಾರಣದಿಂದಲೋ ಏನೋ ಸರಸ್ಪತಿಯನ್ನು ಮದುವೆ
ಯಾಗೆಂದು ವಿದ್ಯಾಧರನನ್ನು ಇನ್ನೂ ಕೇಳಿದ್ದಿಲ್ಲ. ವಿವಾಹದ ವಿಷ
ಯಕ್ಕೆ ವಿದ್ಯಾಧರನ ವಿಚಾರಗಳೇನೋ ಅಪಕ್ವವಿರುವವೆಂದು ಆತನಿಗೆ
ಗೊತ್ತಿತ್ತು. ಸವಮಾಜಸೇವೆಗಾಗಿ ಆಜನ್ಮವೂ ಬೃಮ್ಹುಚಾರಿವೃತವನ್ನು
ಕೈಕೊಳ್ಳಬೇಕೆಂದು ಯಾರು ಆತನಿಗೆ ಹೇಳಿದ್ದರೊ ಏನೋ! ಇ.ದ
ಕ್ಕಾಗಿ ಆತನ ಎಲ್ಲ ವಿಚಾರಗಳನ್ನು ಸಂಪೂರ್ಣವಾಗಿ ಒಮ್ಮೆ ಕೇಳಿ
ಕೊಳ್ಳಬೇಕೆಂದು ಆತನು ಮಾಡಿದನು. ಅದರಂತೆ ಹೊತ್ತು ಸಾಧಿಓ
ದಾಗ ಲಕ್ಷಗೊಟ್ಟು ಅಕದಿಗೆ ಎಲ್ಲ ವಿಚಾರಗಳನ್ನು ಚನ್ನಾಗಿ ತಿಳಿಸಿ
೧೮ ಸಮಾಜರಹಸ್ಥ.
ಹೇಳಿ ಸಮಾಜಸೇವೆಯ ಯೋಗ್ಯ ಮಾರ್ಗಕ್ಕೆ ಹಚ್ಚಬೇಕೆಂದು ಆತನ
ಉತ್ಕಟೇಚ್ಛೆಯಿತ್ತು. ಈ ಕಾರ್ಯದಲ್ಲಿ ತನ್ನ ತಂದೆಯವರ ಸಹಾಯ
ವನ್ನು ಪಡೆಯಬಹುದೆಂದು ಅತನು ನಂಬಿದ್ದನು,
ಮಹಾವಿದ್ಯಾಲಯದ ಸೂಟಿಯ ದಿವಸಗಳು ತೀರ ಸಮೀಪಕ್ಕೆ
ಬಂದವು ಇನ್ನು ೪೫ ದಿವಸಗಳಲ್ಲಿಯೇ ವಿದ್ಯಾಲಯಕ್ಕೆ ಸೂಟಿಯಾ
ಗುವದಿತ್ತು, ಆಗ್ಯೆ ಒಂದು ದಿವಸ ಮಾಧವನೂ ವಿದ್ಯಾಧರನೂ ಕೂಡಿ
' ಭಂಡ 'ವನದಕಡೆಗೆ ಹೋದರು.
ದರ್ಪಣ ಮಹಾವಿದ್ಯಾಲಯವು ಪುಣ್ಯಪುರದೆೊಳಗೆ ಇರುವ
ದೆಂದು ಎಲ್ಲರೂ ಅನ್ನುತ್ತಿದರೂ ನಿಜವಾದ ಸಂಗತಿಯು ಹಾಗಿಲ್ಲ.
ದಕ್ಷಿಣ ಮಹಾನಿದ್ಯಾಲಯಕ್ಕೂ ಪುಣ್ಯಪುರಕ್ಕೂ ೨-೩. ಮೈಲು
ಅಂತರ, ಊರಹವೆಯು ಸ್ವಚ್ಚವಾದದ್ದಲ್ಲದೆಂದೂ ವಿದ್ಯಾಭ್ಯಾಸಕ್ಕೆ
ಏಕಾಂತಸ್ಪಾನವು ಒಳ್ಳೇದೆಂದೂ, ಈ ವಿದ್ಯಾಲಯವನ್ನು ಪುರಣೆಯ
ಉತ್ತರಕ್ಕೆ ಇರುವ ಖಡಕಿ ಎಂಬ ಹಳ್ಳಿಯ ಹತ್ತರ ಒಂದು ಪ್ರಶಸ್ತ
ವಾದ ದಿನ್ನಿಯ ಮೇಲೆ ಕಟ್ಟಿರುವರು. ಖಡಕಿಯಲ್ಲಿ ೧೮೧೮ನೇ ಇಸ್ವಿ
ಯಲ್ಲಿ ಪೇಶ್ವೆಯರಿಗೂ ಇಂಗ್ಲೀಷರಿಗೂ ಒಂದು ದೊಡ್ಡ ಕಾಳಗವಾ
ಯಿತಂದು ಇತಿಹಾಸಬಲ್ಲ ವಾಚಕರ ನೆನಪಿನಲ್ಲಿರಬಹದು ಆ ಸಮ
ರಾಂಗಣದ ಹತ್ತರವೇ ನಮ್ಮ ದಕ್ಷಿಣ ಮಹಾವಿದ್ಯಾಲಯವಿರುವದು.
ಎತ್ತರದ ಮೇಲೆ ಕಟ್ಟಿದ್ದರಿಂದ ಹವೆಯಂತೊ ಬಹಳೇ ಚನ್ನಾಗಿ
ಇರುವದು, ಮುಂಬೈಯ ಹವೆಯ ಸೇವನೆಗಿಂತ ಪುಣ್ಣಪು
ರದ ಹತ್ತಿರಿದ್ದ ದಕ್ಷಿಣ ವಿದ್ಯಾಲಯದ ಸ್ವಚ್ಛ ವಾತಾವರಣವನ್ನು
ವಿದ್ಯಾರ್ಥಿಗಳು ಹೀಗೆ ಬಯಸುತ್ತಿದ್ದರೆಂಬದು ಮುಂಬಾಪುರಸ ನಾದ
ಮಾಧವನ ಸ್ಥಿತಿಯಿಂದ ಕಂಡುಕೊಳ್ಳಬಹುದು.
ದಕ್ಷಿಣ ಮಹಾವಿದ್ಯಾಲಯಸ್ಥರಿಗೆ ಇನ್ನೊಂದು ಆಲ್ಹಾದಕಾರಕ
ಸಂಗತಿಯೆಂದರೆ ಮೇಲೆ ಹೇಳಿದ್ದ ಬಂಡವನವು. ಈ ವನವು ವಿದ್ಯಾಲ
ಬ್ರಮ್ಮ ಚಾರಿವ್ರತವೋ, ಗೃಹಸ್ಥಾಶ್ರಮವೋ ೧೯
ಯದ ತೀರ ಸಮೀಪದಲ್ಲಿದ್ದದರಿಂದ ವಿಜ ವಿದ್ಯಾರ್ಥಿಗಳು ಸಂಜೆಯ
ಮುಂದೆ ಈವನದ ಕಡೆಗೆ ಹೋಗುವ ಪರಿಪಾಠವನ್ನು ಇಟ್ಟದ್ದರು
ಅಕ್ಕತಂಗಿಯರಂತೆ ಮುಳಾಮುಠಾ ನದಿಗಳು ಒಂದನ್ನೊಂದು
ತೆಕ್ಕೆಹಾಯ್ದು ಉಲ್ಹಾಸದ ಮಂಜುಲ ಧ್ವನಿಯಿಂದ ಹಾಡುತ್ತ ಬಂಡ
ವನದ ಹತ್ತಿರದಿಂದಲೇ ಹಾಯ್ದು ಹೋಗುತ್ತವೆ. ವನದ ಪಶ್ಚಿಮ
ದಂಡೆಯ ಸಮೀಪದಲ್ಲಿ ನದಿಗಳ ಪ್ರವಾಹಕ್ಕೆ ದೊಡ್ಡ ಒಡ್ಡು (Bund)
ಹಾಕಿರುವರು ಆದ್ದರಿಂದಲೇ ಈ ವನಕ್ಕೆ' ಬಂಡ 'ವನವೆಂದು ಹೆಸರು
ಬಿದ್ದದೆ. ತಮ್ಮ ಸಂಗೀತಕ್ಕೆ ಅಡ್ಡಿ ಮಾಡುವದಕ್ಕಾಗಿ ಯಾರೋ
ತಮ್ಮ ಹಾದಿಯಲ್ಲಿ ಅಡ್ಡವಾಗಿ ಮಲಗಿರುವರಂದು ತಿಳಿದು ಈ ನದಿ
ಗಳು ಹಾಡುತ್ತಲೇ ತುಸು ತೀವ್ರದಿಂದ ನಡಿಯುತ್ತ ಬಂದು ಜಿಗಿದು
ಹೋಗುವಂತೆ ಈ ಒಡ್ಡಿನ ಮೇಲಿಂದ ಜಿಗಿದು ತುಷಾರ ರೂಪದಿಂದ
ಕಣ್ಣಿಗೆ ಮನೋಹರವಾಗಿ ಕಾಣಿಸುತ್ತವೆ. ಸಂಜೆಯ ವೇಳೆಯ
ಲ್ಲಂತೂ ಈ ತುಷಾರದೊಳಗಿಂದ ವಿಶೇಷ ರಮಣೀಯವಾಗಿ ಕಾಣುವ
ಕಾಮನಬಿಲ್ಲನ್ನು ನೋಡುವದಕ್ಕಾಯೋ ಏನೋ ಈ ಒಡ್ಡಿನ
ಹತ್ತರ ಜನರು ಒಂದೇಸವನೆ ನೆರೆಯುತ್ತಲೇ ಇರುವರು. ಪಾಪ! ನದಿ
ಗಳಿಗೆ ಒಡ್ಡು ಜಿಗಿದು ಹೋಗುವದಕ್ಳಾಗಿ ಎಷ್ಟು ಶ್ರಮ! ಆದರೆ
ಪ್ರೇಕ್ಷಕರುಮಾತ್ರ ಈ ಅಕ್ಕತಂಗಿಯರ ವಕ್ರಗತಿಯನ್ನು ನಿಂದಿಸಿ
ಕುಚೇಷ್ಟೆಯನ್ನು ಮಾಡಿ ನಗುತ್ತ, ಅಲ್ಲಿಯೇ ಇದ್ದ ಪಾವುಟಿಗೆಗಳ
ಮೇಲೆ ಕುಳಿತುಕೂಳ್ಳುವರು. ಒಬ್ಬರ ಸಂಕಟಕ್ಕೆ ಮತ್ತೊಬ್ಬರು
ನಗುವರು! ನೋಡಿದಿರಾ ಸೃಷ್ಟಿನಿಯಮವನ್ನು'!
ಇದೇ ನದಿಯಲ್ಲಿ ಮತ್ತೊಂದು ಕಡೆಗೆ ದಕ್ಷಿಣ ಮಹಾವಿದ್ಯಾ
ಲಯದ ' ನೌಕಾಲಯು 'ವಿರುವದು. ಸಂಜೆಯ ವೇಳೆಯಲ್ಲಿ ಎಷ್ಟೊ
ವಿದ್ಯಾರ್ಥಿಗಳು ತಮ್ಮ ನೌಕೆಗಳನ್ನು ತೆಗೆದುಕೊಂಡು ಅತ್ತಿಂದ ಇತ್ತ
ಇತ್ತಿಂದ ಅತ್ತ ನೀರಿನಲ್ಲಿ ಓಡಾಡಿಸುತ್ತಿರುವರು. ಇದರಿಂದ ಆ ನೌಕೆಗೆ
೨೦ ಸಮಾಜರಹಸ್ಯ
ಮಾತ್ರ ಏನೂ ಶ್ರಮವಾಗದಂತೆ ತೋರುತ್ತದೆ. ವಾಚಕರೇ, ಅತ್ತ
ಕಡೆಗೆ ನೋಡಿರಿ ಒಂದು ನೌಕೆಯು ಮತ್ತೊಂದು ನೌಕೆಯ ಹತ್ತರ
ಹೋಗಿ ತಬ್ಬಿ ಆನೆಗಳು ಜಲಕ್ರೀಡೆಯನ್ನು ಮಾಡುವಂತೆ ಹೇಗೆ
ಉಲ್ಲಾಸವೃತ್ತಿಯಿಂದ ಜಿಗಿದಾಡುತ್ತಿರುವವು, ಈ ಜಲಕ್ರೀಡೆಯನ್ನು
ನೋಡುವದಸಕ್ನಾಗಿಯೂ ಎಷ್ಟೋ ಜನರು ನೆರೆದಿರುವರು,. ತರುಣರೂ
ತರುಣಿಯರೂ ಏನೋ ಹುಡುಕಾಡುತ್ತಿರುವಂತೆ ಅತ್ತಿಂದ
ಇತ್ತ ಇತ್ತಿಂದ ಅತ್ತ ಓಡಾಡುತ್ತಿರುವರು. ಅವರಲ್ಲಿ ಕೆಲವರು ಹುಡು
ಕುವ ವಸ್ತುವು ಲಭಿಸಿತೆಂದು ಆನಂದದಿಂದ ನಕ್ಕು ತಮ್ಮ ಮಿತ್ರರಿಗೂ
ಅದನ್ನು ತೋರಿಸುತ್ತಿರುವರು. ಕೆಲವರು ಅಪಜಯದಿಂದ ಕ್ರೋಧ
ಗೊಂಡು ಒಮ್ಮೆ ನೌಕೆಯನ್ನೂ ಮತ್ತೊಮ್ಮೆ ನೀರಿನ ಹಾರಾಟವನ್ನೂ
ನೋಡುತ್ತ ಹೇಗಾದರೂ ಮಾಡಿ ಕಾಲ್ಫನಿಕ ಮನರಂಜನೆಯನ್ನು
ಮಾಡಿ ಕೊಳ್ಳುತ್ತಿರುವರು ವಾಚಕರೇ, ಮತ್ತೊಂದು ಕಡೆಗೆ ನೋಡಿ
ದಿರೇನು? ನೋಡಿರಿ! ಅಲ್ಲಿ ಹೇಗೆ ಸಣ್ಣ ಬಾಲಕರು. ವನದೊ
ಳಗೆ ಅಲ್ಲಲ್ಲಿ ಮಾಡಿಟ್ಟಿದ್ದ ಕಲ್ಲಿನ ಹುಲಿಸಿಂಹಗಳ ಮೇಲೆ ಜಿಗಿಜಿಗಿದು
ಕುಳಿತು ತಮ್ಮ ಅಚಲ ಧೈರ್ಯವನ್ನೂ ಪರಾಕ್ರಮವನ್ನೂ, ಹುಲಿ
ಯ ಅಪೌರುಷತ್ವವನ್ನೂ ತಮ್ಮ ತಾಯಿಗೆ ಹೇಳೆ ಉರಳಾಡಿ ನಗು
ತ್ತಿರುವವು ಮತ್ತೆ ಕೆಲ ಬಾಲಕರು ಅಂಜಿಕೆಯಿಲ್ಲದೆ ಹುಲಿಯ ಬಾ
ಯಲ್ಲಿ ತಮ್ಮ ಕೋಮಲವಾದ ಕರಗಳನ್ನು ಹಾಕುತ್ತಿರುವರು, ಸಣ್ಣ
ಹುಡುಗರನ್ನು ನೊಯ್ಯಿಸಬಾರದೆಂಬ ವಿಚಾರವನ್ನು ಮಾಡಿಯೇ
ಹುಲಿಯು ಸುಮ್ಮನ ಕುಳಿತು ಈ ಚೇಷ್ಟೆಗಳನ್ನು ತಡಕೊಳ್ಳುವದು!
ಪ್ರತಿದಿನ ಸಂಜೆಯಲ್ಲಿಯೂ ಇದೇ ತರದ ಗೊಂದಲವಾದರೂ ವನವು
ದೊಡ್ಡದಿದ್ದದರಿಂದ ವನದಲ್ಲಿ ಏಕಾಂತ ಸ್ಥಳಗಳನ್ನು ಬಹಳವಾಗಿ
ಕಾಣಬಹುದಾಗಿದೆ. ಈ ಸ್ಫಳದಲ್ಲಿ ಸಂಜೆಗೆ ಅಷ್ಟರಸಗಳನ್ನು
ಕಾಣಬಹುದೆಂದು ಹೇಳುತ್ತಾರೆ. ಯಾರ ಮುಖದ ಮೇಲೆ ಅನಂದವು
ಹೊಳೆಯುತ್ತಿದ್ದು, ಮತ್ತೆ ಯಾರ ಮುಖದ ಮೇಲೆ ಗಾಂಭೀರ್ಯವು
ಬ್ರಹ್ಮಚಾರಿವ್ರಕವೋ, ಗೃಹಸ್ಥಶ್ರಮವೋ? ೨೧
ತಲೆದೋರುತ್ತದೆ; ಮತ್ತೆ ಕೆಲವರ ಮುಖಗಳ ಮೇಲೆ ಸುಪ್ರಸನ್ನ
ತೆಯೂ ಕುಣಿಯುತ್ತಿರುವದು. ಕೆಲವರು ಸಿಟ್ಟಿನಿಂದ ಕಾಲು ಅಪ್ಪಳಿ
ಸುತ್ತ ವಸುಂಧರಯನ್ನು ಒಳ್ಳೇ ಬಲದಿಂದ ಒದೆದು ಆಕೆಗೆ ಶಾಪವ
ನ್ನೀಯುತ್ತಿರುವಂತೆ ತೋರುತ್ತಿತ್ತು. ಬಾಲಕರ ನಿಸರ್ಗ ಸೌಂದ
ರ್ಯವೂ ಅವರ ಮಂಜುಳ ಕಿಲಕಿಲಾಟವೂ, ಎತ್ತ ನೋಡಿದತ್ತ ಹಬ್ಬಿ
ಕೊಂಡು ಪ್ರೇಕ್ಷರಿಗೆ ಆನಂದವನ್ನೀಯುತ್ತಿರುವದು. ಇಂಧ ತಂಪು
ಹೊತ್ತಿನಲ್ಲಿ ವಾಸರ-ಮಣಿಯು ಸಹಸ್ರಕರಗಳನ್ನು ಚಾಚಿ ಮುಗುಳು
ನಗೆಯಿಂದ ವನದೊಳಗಿನವರನ್ನು ಸಾವಕಾಕವಾಗಿ ಬೆನ್ನ ಮೇಲೆ
ಚಪ್ಪರಿಸಿ ಆನಂದದಿಂದ ರಕ್ತರ್ವಣದ ಮಾಡಿಕೊಂಡು ವನಸ್ಥ
ನಾಗರಿಕರನ್ನು ಹೆಚ್ಚಿಗೆ ಅನಂದಗೊಳಸುತ್ತೆಲ್ಲೇ ತನ್ನ ಇತಃಪರ
ರಾಜ್ಯವನ್ನು ಆಳಲಿಕ್ಕೆ ಅಪ್ಪಣೆಯನ್ನು ಪಡೆಯುತ್ತಿದ್ದನು.
ಇರಲಿ ಇಂಧ ಮನೋಹರ ಸ್ಪಳದಲ್ಲಿ ಆನಂದರಸವನ್ನು
ಸೇವಿಸುವದಕ್ಕ ನಮ್ಮ ವಿದ್ಯಾಧರನೂ ಮಾಧವನೂ ಬಂದಿದ್ದರು.
ಇಬ್ಬರು ಮಿತ್ರರು ಅತ್ತಿತ್ತ ತಿರುಗಾಡಿ ಕಡೆಗೆ ಮಲಿಗೆಯ ಮಂಟಪ
ದೊಳಗೆ ಇಟ್ಟಿದ್ದ ಒಂದು ಬಾಕಿನ ಮೇಲೆ ಕುಳಿತುಕೊಂಡರು. ಇತ್ತ
ಕಡೆಗೆ ಯಾವ ತರದ ಗೊಂದಲವು ಇಲ್ಲದ್ದರಿಂದ ಮಂದಮಾರು
ತನು ಮಲ್ಲಿಗೆಯ ಮಂಟಪದೊಳೆಗೆ ಬಂದು ಮಂದಮಂದವಾಗಿ
ಸುಗಂಧರಸವನ್ನು ಬೀರುತ್ತಿದ್ದನು. ಇಂದು ವಿದ್ಯಾಧರನ ಎಲ್ಲ ವಿಚಾ
ರಗಳನ್ನು ಕೇಳಬೇಕಂದು ಮಾಧವನ ಮನಸ್ಸಿನಲ್ಲಿ ಬಂದಿತು. ಆತನು
ಅದರಂತೆಯೇ ಮಾತು ಮಾತಾಡುವಾಗ ಅಂದದ್ದು---
ಮಾಧವ.--ವಿದ್ಯಾಧರಾ, ಇನ್ನು ತುಸು ದಿವಸಗಳಲ್ಲಿಯೇ
ಸೂಟಿಯಾಗುವದು. ಆದ್ದರಿಂದ ನೀನು ಹೋಗಬೇಕೆಂದು
ನಿಶ್ಚಯಿಸಿರುವಿ?
೨೨ ಸಮಾಜರಹಸ್ಥ,
ವಿದ್ಯಾ:-- ಸಮಾಜಸೇವೆಯ ಕಾರ್ಯವನ್ನು ಮಾಡಲು ನಿಶ್ಚ
ಯಿಸಿದ್ದೇನೆ. ಆದ್ದರಿಂದ ಎಲ್ಲಕಡೆಯಲ್ಲಿಯೂ ತಿರುಗಾಡಿ ಅದಕ್ಕಾಗಿ
ಯತ್ನಿಸುವೆನು.
ಮಾಧ:- ಹೌದು ! ಒಳ್ಳೇ ನೆನಪಾಯಿತು !! ವಾರ್ಷಿಕ
ಸಭೆಯ ದಿವಸದಿಂದ ಒಮ್ಮೆ ವಿವಾಹದ ವಿಷಯಕ್ಕೆ ನಿನ್ನ ಎಲ್ಲ ವಿಚಾ
ರಗಳನ್ನು ತಿಳಿದುಕೊಳ್ಳಬೇಕೆಂದು ನನಗೆ ಕುತೂಹಲವುಂಟಾಗಿರು
ವದು. ದಯಮಾತಾಡಿ ಹೇಳಿದರೆ ನೆಟ್ಟಗಾಗುವದು. ಒಬ್ಬರ ವಿಚಾರ
ಗಳನ್ನು ಮತ್ತೊಬ್ಬರಿಗೆ ಹೇಳಿ ಯೋಗ್ಯ ಮಾರ್ಗದಿಂದಲೇ ನಡೆಯ
ಲಿಕ್ಕೆ ಒಳ್ಳೇದಾಗುವದು. ಹೇಳು ನೋಡುವಾ ! ಒಮ್ಮೆ ನಿನ್ನ ಎಲ್ಲ
ವಿಚಾರಗಳನ್ನು!
ವಿದ್ಯಾ:--ವಿಚಾರವೆಂಥದು! ಈ ಕಷ್ಟಮಯ ಸಂಸಾರ
ಯಾತ್ರೆಯು ಓಮ್ಮೆ ಹತ್ತಿತೆಂದರೆ ಯಾವ ಯಾವ ಸಂಕಟಗಳು ಬರ
ಬಹುದೆಂಬ ಕಲ್ಪನೆಯೇ ನನಗೆ ಆಸಹ್ಯವಾಗಿರುವದು. ಒಮ್ಮೆ
ಪ್ರಪಂಚದಲ್ಲಿ ಬಿದ್ದೆವೆಂದರೆ ನಮ್ಮ ಸಮಾಜಕ್ಕೂ, ನಮ್ಮ ದೇಶಕ್ಕೂ
ಏನೂ ಸಹಾಯಮಾಡಲಿಕ್ಕಾಗುವದಿಲ್ಲ. ಹೆಂಡಿರುಮಕ್ಕಳಿಗೆ ಅನ್ನ
ವನ್ನು ತಂದುಹಾಕುವದರಲ್ಲಿಯೇ ಆಯುಷ್ಯವು ಕ್ಷೀಣವಾಗಬಹುದು.;
ಆದ್ದರಿಂದಲೇ ನಾನು ವಿವಾಹವನ್ನು ಮಾಡಿಕೊಳ್ಳದೆ ಆಜನ್ಮ ಬ್ರಮ್ಹ
ಚಾರಿವ್ರತದಿಂದಲೇ ಇದ್ದು ಶಕ್ತಿಯಿರುವವರೆಗ ಆನಂದದಿಂದಲೂ
ಉತ್ಸಾಹದಿಂದಲೂ ಸಮಾಜಸೇವೆಯನ್ನೂ ದೇಶಸೇವೆಯನ್ನೂ ಮಾಡದೆ
ಒಂದು ಕ್ಷಣವನ್ನು ಸಹ ವೆಚ್ಚಮಾಡಬಾರದೆಂದು ನಿಶ್ಚಿಯಿಸಿದ್ದೇನೆ.
ಅದರಂತೆ ಮೊನ್ನೆ ಪ್ರತಿಜ್ಞೆಯನ್ನು ಮಾಡುವ ಸುದಿನವು ಬಂದಿರಲು
ನೀನು ನಡುವೆ ಯಾಕೆ ಪ್ರತಿಬಂಧಿಸಿದಿಯೋ ಯಾರಿಗೆ ಗೊತ್ತು!
ಆದರೂ ನಿನ್ನ ವಿಚಾರಗಳೇನೋ ಬೇರೆ ಇರಬಹುದಿಂದು ನಂಬಿ
ಅಂಥ ಮಾನಹಾನಿಯನ್ನು ಸಹ ಸಹಸಿದೆನು.
ಬ್ರಹ್ಮಚಾರಿವ್ರತವೋ, ಗೃಹಸ್ಫಾಶ್ರಮವೋ? ೨೩
ಮಾ:--ನಿನ್ನ ಅವ್ಯಾಜ ಪ್ರೀತಿಗಾಗಿ ನಾನು ನಿನಗೆ ತುಂಬಾ
ಋಣಿಯಾಗಿದ್ದೇನೆ. ಆದರೆ ವಿವಾಹವೆಂದರೇನೋ ನಿನಗೆ ಚನ್ನಾಗಿ
ತಿಳಿದಂತೆ ತೋರುವದಿಲ್ಲ. ಎಲ್ಲಿಯಾದರೂ ಒಬ್ಬ ದುಷ್ಟಸ್ತ್ರೀಯನ್ನು
ನೋಡಿರಬಹುದು, ಅಥವಾ ಎಲ್ಲಿಯಾದರೂ ಅಂಥವಳ ಇತಿಹಾಸ
ವನ್ನು ಓದಿರಬಹುದು, ಇಷ್ಟರಿಂದಲೇ ಜಗತ್ತಿನೊಳಗಿನ ಎಲ್ಲ
ಸ್ತ್ರೀಯರೂ ಹಾಗೆ ಇದ್ದ ತಮ್ಮ ಗಂಡಂದಿರಿಗೆ ಸುಖಕೊಡದೆ ಆವರ
ಕರ್ತವ್ಯದಲ್ಲಿ ಅಡ್ಡಬರುವರೆಂದು ಮಾತ್ರ ತಿಳಕೊಂಡಿರ
ಬಹುದು. ವಿವಾಹವೆಂದರೆ ಸಮಾಜಸೇವೆಯ ಕಾರ್ಯದಲ್ಲಿ ವಿಘ್ನ
ವಲ್ಲ. ನಮ್ಮ ಮುಂದಿನ ಆಯುಷ್ಕ್ರಮದಲ್ಲಿಯ ಮಹತ್ವಾಕಾಂಕ್ಷೆಗ
ಳನ್ನೂ ನಮ್ಮ ದೇಶಕ್ಕಾಗಿ ನಾವು ಮಾಡುವ ಕರ್ತವ್ಯಕರ್ಮಗಳನ್ನೂ
ಜರುಗಿಸಿಕೊಳ್ಳುವದಕ್ಕೆ ಪ್ರತಿಬಂಧಮಾಡದೆ ನಮ್ಮ ಕಾರ್ಯದಲ್ಲಿ
ಪೂರ್ಣ ಸಹಾಯಕಳಾಗುವಂಥ ಒಬ್ಬ ಸ್ತ್ರೀಯಯನ್ನು ಧರ್ಮವಿಧಿಯಿಂದ
ಗ್ರಹಿಸುವದಕ್ಕೆ ವಿವಾಹವೆಂದೆನ್ನುವರು. ವಿವಾಹವಾದ ಮೇಲೆ ಹೆಂಡ
ತಿಯ ಸಹಾಯದಿಂದ ಇಮ್ಮಡಿ ಬಲಬಂದಂತಾಗಿ ನಮ್ಮ ಕಾರ್ಯದಲ್ಲಿ
ಯಶಸ್ಸು ದೊರೆಯುವದು ನಿಶ್ಚಯವೇ. ಗಂಡಹೆಂಡಂದಿರ ಶರೀರಗಳು
ಎರಡು ಇದ್ದರೂ ಅವರ ಅಂತಃಕರುಣವು ಒಂದೇ. ಗಂಡನ ಉನ್ನ
ತಿಯೇ ಹೆಂಡತಿಯ ಉನ್ನತಿಯ, ಅವನ ಸುಖವೇ ಆಕೆಯ ಸುಖವು,
ಅವನ ಕೀರ್ತಿಯೇ ಆಕೆಯ ಕೀರ್ತಿಯು. ಇದನ್ನೆಲ್ಲ ಬಿಟ್ಟು ವಿವಾಹ
ದಿಂದ ಸಮಾಜಸೇವೆಗೆ ವಿಘ್ನವಾಗಬಹುದೆಂಬ ವನ್ನ ವಿಚಾರವು,
ಹೆಂಡತಿಯೆಂದರೆ ಸಂತತಿಯನ್ನು ಹೆಚ್ಚಿಸುವ ಜೀವಂತ
ಯಂತ್ರವೆಂದು ತಿಳಿದು, ಅವಳನ್ನು ಅದೇ ರೀತಿಯಿಂದ ವಿದ್ಯೆ ಕಲಿಸದೆ
ಸತತ ಅಜ್ಞಾನದಲ್ಲಿಟ್ಟು ಆಕೆಯ ಯಾವತರದ ಉನ್ನತಿಗೂ ಯತ್ನಿಸ
ಬಾರದೆಂದು ಅನ್ನುವ ಮೂರ್ಖ್ಯರ ವಿಚಾರದಷ್ಟು ಹಾಸ್ಯಾಸ್ಪದವಾಗಿ
ರುವದು. ಜೀವದಿಂದ, ಧರ್ಮದಿಂದ ಯಾರು ಬದ್ಧರಾಗುವರೋ,
ಕರ್ತವ್ಯದಲ್ಲಿ ನಮಗೆ ಯಾರು ಅನಂತ ಸಹಾಯವನ್ನು ಮಾಡುವ
೨೪ ಸಮಾಜರಹಸ್ಯ
ರೋ, ನಮಗೆ ಉದಾಸೀನತೆ ಬಂದಾಗ ಬೇನೆಬಂದಾಗ ಏಕಜೀವತ್ವ
ದಿಂದ ಶುಸ್ರೂಷೆಯನ್ನು ಮಾಡಿ, ನಾವು ಆನಂದದಿಂದಿದ್ದಾಗ್ಗೆ ತಮ್ಮ
ಸ್ವರ್ಗೀಯಪ್ರೇಮದಿಂದ ಸ್ವರ್ಗವು ಇನ್ನು ಎರಡೇ ಬೊಟ್ಟು ಉಳೆದಿ
ರುವದೆಂದು ತಿಳಿಯಲು ಯಾರು ಆಸ್ಪದವನ್ನೀಯುವರೋ, ಅವರಿಗೆ
ನಮ್ಮ ಕಾರ್ಯದಲ್ಲಿ ವಿಫ್ನವೆಂದು ತಿಳೆದುಕೊಳ್ಳುವದೆಂದರೆ ಎಷ್ಟು
ಮೂರ್ಖತನದ ವಿಚಾರವಿರುವದೆಂದು ನೀನೆ ತಿಳಿದುನೋಡು ಪ್ರಜೋ
ತ್ಪಾದನವು ವಿವಾಹದ ಮುಖ್ಯ ಕಾರಣವಲ್ಲ. ಈ ಜಗತ್ತಿನಲ್ಲಿ ಯಾವಾ
ಗಲೂ ನಮ್ಮಲ್ಲಿ ಐಕ್ಯಹೊಂದಿ ತನಮನದಿಂದಲೂ ನಮ್ಮನ್ನು ಹಿಂಬಾ
ಲಿಸಿ ನಮ್ಮ ಆಂಗೀಕೃತಕಾರ್ಯಕ್ಕೆ ಸಹಾಯಮಾಡುವವಳೇ ಹೆಂಡ
ತಿಯ ಸ್ವರ್ಗಿಯಪ್ರೇಮದಿಂದ ಯಾವ ಎರಡು ಅಂತಃಕರುಣಗಳು
ಒಂದರೊಂದಲ್ಲಿ ಲೀನವಾಗಿ ಹೋಗುವವೋ, ಆಯುಷ್ಯವೆಂದರೆ
ಸುಖೋಪಭೋಗದ ಸಾಧನವಿರದೆ ಯಾವದೋ ಒಂದು ಉಚ್ಚತಮ
ಧ್ಯೇಯಪ್ರಾಪ್ತಿಗಾಗಿ ಕೊಟ್ಟಿದ್ದ ಅಮೌಲ್ಯ ವೇಳೆಯೆಂದು ಯಾರ
ನಿಷ್ಠೆಯೋ ಇಂಧ ಎರಡು ಅಂತಃಕರುಣಗಳು ಒಂದೇ ಸ್ಥಳದಲ್ಲಿ
ಬಂದದರಿಂದ ಒಂದಕ್ಕೊಂದು ಆಕರ್ಷಿಸಲ್ಪಟ್ಟ ಎರಡೂ ಸಂಲಗ್ಗವಾದ
ಮೇಲೆ ಧರ್ಮಾನುಸಾರವಿಧಿಯಿಂದ ಬಂಧನೆಯೇ ವಿವಾಹವು. ಹೀಗಿ
ದ್ದರೆ ನಿನಗೆ ವಿಫ್ನವೆಲ್ಲಿ? ಅಶ್ಚಪತಿಯ ಮಗಳು ಈ ತರದ ಎರಡನೇ
ದೊಂದು ಪ್ರಾಣವನ್ನು ತಾನೇ ಹುಡುಕಿ ತೆಗೆದು ಕ್ಷೀಣಾಯುಯೆಂದು
ನಾರದಮಹರ್ಷಿಗಳು ಹೇಳಿದರೂ, ತಾಯಿತಂದೆಗಳು ಹಾಗೆ ಮಾಡ
ಬೇಡೆಂದು ತೆಡೆಯುತ್ತಿರಲೂ, ತನ್ನ ಪ್ರೇಮಬಲದಿಂದ ತಾನು ಬೇಕಾ
ದದ್ದು ಮಾಡಬಹುದೆಂದು ನಂಬಿ, ಅದವಾ ಈ ತರದ ಉತ್ಕಟಪ್ರೇಮ
ವನ್ನು ಒಂದು ವರ್ಷದವರೆಗೆ ಸೇವಿಸುವದೇ ಲೇಸೆಂದು ಹೇಳಿ ದ್ಯುಮ್ನ
ತ್ಸೇನ ಮಹಾರಾಜನ ಮಗನಾದ ಸತ್ಯವಾನನನ್ನು ಮದುವೆಯಾಗಲಿ
ಲ್ಲವೇ? ಮುಂದೆ ಆಕೆಯು ಪತಿಯಲ್ಲಿದ್ದ ತನ್ನ ಉತ್ಕಟಪ್ರೇಮಬಲದಿಂದ
ತನ್ನ ತಂದೆಮಾವಂದರಿಗೆ ಸಂತತಿಸುಖೈಶ್ವರ್ಯವನ್ನೂ, ಪ್ರತ್ಯಕ್ಷ ತನ್ನ
ಬ್ರಹ್ಮಚಾರಿವ್ರತವೋ, ಗೃಹಸ್ಥಾಶ್ರಮವೋ? ೨೫
ಪತಿಗೆ ಪ್ರಾಣದಾನವನ್ನೂ ದೊರಕಿಸಿಕೊಂಡು ಎಲ್ಲರನ್ನು ಸುಖಿಯಾಗ
ಮಾಡಲ್ಲವೇ? ಮೇಲಾಗಿ ಸುಶಿಕ್ಷಿತ ಗಂಡಹೆಂಡಂದಿರಿಂದ ಒಳ್ಳೇ
ಸಂತತಿಯಾಗಿ ಸಮಾಜಸುಧಾರಣೆಯು ತೀವ್ರವೇ ಆಗಲಿಕ್ಕೆ ಆಸ್ಪದವು
ದೊರೆಯುವದು ಇಲ್ಲದಿದ್ದರೆ ಮುಂದಿನ ಸಂತತಿಯು ದುರ್ಬಲ
ವಿಲ್ಲವೆ ದುಷ್ಚವಾದರೆ ನೀನೇ ಏಕೆ, ನಿನ್ನಂದ ಸಾವಿರಾರು ಜನರು
ಬ್ರಹ್ಮಚಾರಿವ್ರತದಿಂದ ಇದ್ದು ಸಮಾಜೋನ್ನತಿಗಾಗಿಯೇ ಏಳು ಜನ್ಮ
ತೆಗೆದುಕೂಂಡರೂ ಅದು ಇನ್ನೂ ಅಪೂರ್ಣವೇ ಉಳಿದೀತು: ಸುಶಿ
ಕ್ಷಿತ ಜನರು ವಿವಾಹಮಾತಾಡಿಕೊಂಡರೆ ಸಮಾಜದಲ್ಲಿಯ ಮತ್ತೊಂದು
ಜೀವದ ಉನ್ನತಿಯಾಗಿ ಅವರಿಂದ ಹುಟ್ಟಿದ ಸಂತತಿಯೂ ಸಮಾಜಕ್ಕೆ
ಭೂಷಣಾಸ್ಪದವಾದೀತು. ಹೆಂಗಸರಲ್ಲಿ ನಿನ್ನಷ್ಟ್ವೇ ಅಲೌಕಿಕಶಕ್ತಿಯೂ
ಬುದ್ಧಿ ಸಾಮರ್ಥ್ಯವೂ ಇರುವದು. ನಿನ್ನನ್ನು ಶಾಲೆಗೆ ಹಾಕಿ ವಿದ್ಯೆ ಕಲಿ
ಸದಿದ್ದರೆ ನೀನು 'ಮನುಷ್ಯರೂಪಿಮೃಗವಾಗಿ' ಹೇಗೆ ಚರಿಸುತ್ತಿದ್ದಿಯೋ
ಹಾಗೆಯೇ ಹೆಂಗಸರನ್ನು ವಿದ್ಯೆಕಲಿಸಿ ಸುಶಿಕ್ಷಿತರನ್ನಾಗಿ ಮಾಡಿ ಅವರ
ಕಡೆಯಿಂದ ಸಮಾಜಕ್ಕೆ ಆಗತಕ್ಕ ಸಹಾಯಗಳನ್ನು ಮಾಡಿಸದಿದ್ದರೆ
ಸಮಾಜರೂಪಿ ರಥಕ್ಕೆ ಎರಡನ್ನೇ ಗಾಲಿಯಂತಿದ್ದ ಸ್ತ್ರೀಯು ನಿರುಪ
ಯೋಗಿಯಾಗಿ ಮೊದಲನೇ ಗಾಲಿಯೂ ಕೂಡ ನಿರುಪಯೋಗವಾಗು
ವದು. 'ಹೆಂಗಸರೆಂದರೆ ಮೊಣಕಾಲಿಗಿಂತ ಕಡೆ' ಎಂದು ಹೇಳಿ
ಅವರಿಗೆ ನಿಮ್ಮ ಅಂತಃಕರಣದಲ್ಲಿ ಸ್ಥಳಕೊಡದಿದ್ದರೆ ಎಲ್ಲವೂ ಹೇಗೆ
ನಿಲ್ಲುವದೆಂದು ನಿನಗೆ ಈಗಾದರೂ ತಿಳೆಯಿತೇ?
ಮಾಧವನು ಹೀಗೆಂದು ಸುಮ್ಮನಾದನು, ಅತ್ತ ವಿದ್ಯಾಧರನು
ಕಲ್ಲುಗೊಂಬೆಯಂತೆ ಇದನ್ನೇ ಕೇಳುತ್ತ ಆಶ್ಚರ್ಯಚಕಿತನಾಗಿ ಕುಳಿ
ತಿದ್ದನು. ಮಾಧವನ ಈ ತರದ ವಿಚಾರಕ್ಕಾಗಿ ಅತನು ಧನ್ಯನೆಂದು
ಅನ್ನಹತ್ತಿದನು. ಎಲ್ಲವೂ ಆತನಿಗೆ ಸರಿಯಾಗಿ ತೋರಿತು. ಇಷ್ಪು ದಿವ
ಸಗಳವರಗೆ ಆತನಲ್ಲಿದ್ದ ವಿಚಾರಗಳೆಲ್ಲ ಹೋಗಿ ಹೊಸ ಚೇತನೆ
೨೬ ಸಮಾಜರಹಸ್ಯ
ಬಂದಂತಾಗಿ ತಾನು ಈಗ ಹೊಸ ಜಗತ್ತಿನಲ್ಲಿ ಕುಳಿತಂತೆಯೂ
ತೋರಿತು; ಅಸ್ಚರಲ್ಲಿ ಪುನಃ
ಮಾಧವ:--ಯಾಕೆ ವಿದ್ಯಾಧರ ನನ್ನ ವಿಚಾರಗಳು ನಿನಗೆ
ಹೇಗೆ ತೋರುತ್ತವೆ? ಸುಮ್ಮನೆ ಆಜನ್ಮ ಬ್ರಹ್ಮಚಾರಿಯೆಂದು ಪ್ರತಿಜ್ಞೆ
ಮಾಡಲಿಕ್ಕೆ ಸಿದ್ದನಾದ ನಿನಗೆ ಈ ರಹಸ್ಯವು ಏನು ಗೊತ್ತು? ವಿವಾ
ಹವನ್ನು ಮಾಡಿಕೊಂಡು ಪತ್ನಿಯ ಸಹಾಯದಿಂದ ಸಮಾಜದ ಏಳ್ಗೆ
ಗಾಗಿ ಬೇಕಾದಷ್ಟು ಯತ್ನಿಸು. ನಿನಗೆ ಯಾರೂ ಬೇಡನ್ನಲಾರರು.
ವಿದ್ಯಾಧರನು ಏನೋ ಮಾತಾಡಬೇಕೆಂದು ಯತ್ನಿಸಿದನು
ಮಾಧ --ಮಾತಾಡು ಹೀಗೆ ಮುಗ್ಧನಂತೇಕೆ ಕುಳಿತಿರುವೆ?
ವಿದ್ಯಾ ಮಾತನ್ನು ಕೇಳೆ ನನಗೆ ನಿಜವಾಗಿ ಪುನಶ್ಚ
ಜೀವವು ಬಂದಂತಾಗಿರುವದು ನಿಜಕರ್ಮವನ್ನು ತಿಳಿಯದೆ ಆರ್ಜು
ನನು ಶಸ್ತ್ರಾಸ್ತ್ರಗಳನ್ನು ತೊರೆದು ನಿಂತಿರಲು ಕರ್ಮಯೋಗಪಾಠ
ವನ್ನು ಶ್ರೀಕೃಷ್ಣನು ಆತನಿಗೆ ತಿಳಿಸಿ ಹೇಳಿದಂತೆ ನೀನು ಇಂದು ನನಗೆ
ನಿಜ ಮಾರ್ಗವನ್ನು ಹೇಳಿಕೊಟ್ಟಿರುವಿ, ನಾನು ಜನ್ಮಜನ್ಮಾಂತರದಲ್ಲಿ
ಯೂ ನಿನ್ನ ಈ ಉಪಕಾರವನ್ನು ಮರೆಯಲಿಕ್ಕಿಲ್ಲ
ಮಾಧ;-- ಇದೆಲ್ಲ ಒತ್ತಟ್ಟಿಗಿರಲಿ! ಸೂಟಿಯಾದ ಕೂಡಲೆ
ದೀಪಾವಳಿಯ ಹಬ್ಬವಿದ್ದದರಿಂದ ಈಸಾರೆ ನೀನು ನಮ್ಮ ಊರಿಗೆ
ಬರಲಿಕ್ಕೇ ಬೇಕು. ತಂದೆಯವರೂ ಮಾತಾಜಿಯವರೂ ನಿನ್ನನ್ನು
ಮತ್ತೆ ನೋಡಬೇಕೆಂದು ಇಚ್ಛಿಸುತ್ತಿರುವರೆಂಬ ಸಂಗತಿಯು ಅವರ
ಪತ್ರದಿಂದ ಗೊತ್ತಾಗುವದು ಮೇಲಾಗಿ ಸರಸ್ಪತಿಯು ಈ ಸಾರೆ ಬರು
ವಾಗ್ಗೆ ನಿನ್ನನ್ನು ಕರೆದುಕೊಂಡುಬಾ ಎಂದು ಹೇಳಿರುವಳು ಇಷ್ಟೆಲ್ಲ
ಜನರ ಆಶೆಯನ್ನು ಭಂಗಮಾಡುವದು ಯೋಗ್ಯವಲ್ಲ.
ಸರಸ್ವತಿಯ ನೆನಪು ತಗೆದ ಕೂಡಲೆ ವಿದ್ಯಾಧರನ ಮುಖದ
ಮೇಲೆ ಆನಂದಲಹರಿಯು ಬಂದಂತಾಗಿ ಮುಗುಳುನಗೆಯಿಂದ ನಗುತ್ತ
ದಿವಾಕರಪಂತರು. ೨೭
ತಲೆಯನ್ನು ಆಲ್ಲಾಡಿಸಿ ತುಸು ಅನುಮತಿಯನ್ನಿತ್ತಂತೆ ಮಾಡಿದನು.
ತೀರ ಸಂಜಿಯಾಯಿತೆಂದು ತಿಳಿದು ಇಬ್ಬರೂ ವಿದ್ಯಾಲಯದಲ್ಲಿಯ
ತಮ್ಮ ಕೋಣೆಗೆ ಹೊರಟುಹೋದರು, ವಿದ್ಯಾಧರನು ಯಾವದೋ
ಒಂದು ಮನೋರಾಜ್ಯದಲ್ಲಿ ಈಸಾಡುತ್ತಿದ್ದನು
=====
ಚತುರ್ಥ ಪರಿಚ್ಛೇದ.
ದಿವಾಕರಪಂತರು
ಜಗತ್ತಿನಲ್ಲಿ ಸರ್ವಸುಖಯಾಗಿದ್ದ ಪ್ರಾಣಿಯು ಒಬ್ಬನೂ
ಇಲ್ಲ! " ಹೌದು ! -ಈ ಮಹಾತ್ಮರ ಅನುಭವದ ಶಬ್ಧ
ಗಳು ಅಕ್ಷರಶಃ ನಿಜವಿರುವವಿಂದು ನಾವಲ್ಲಟೂ ಮನ
ಗಾಣಬಹುದು. ಒಬ್ಬ ಮನುಷ್ಯನು ಇಂದು ತೀರ ಸುಖದಿಂದ ಇದ್ದರೆ
ನಾಳೆ ಆತನಿಗೆ ಸಂಕಟಪರಂಪರೆಯು ಬೆನ್ನುಹತ್ತಿ ಈ ಜಗತ್ತೇ ಆತ
ನಿಗೆ ಬೇಡಾಗಿಹೋಗುತ್ತದೆ. ಈಶ್ವರೀನಿಯಮವೇ ಆಂತಹದಿರುವದು !
ವಸುಂಧರೆಯು ದಿನಕರನ ಸಂಜೆಯ ಹೊತ್ತಿನ ಸುವರ್ಣಮಯ ಬೆಳ
ಕಿನಲ್ಲಿ ಆನಂದದಿಂದ ಕುಣಿದಾಡುತ್ತಿರಲು ಬರಬರುತ್ತ ಆಕೆಯ ಈ
ಆನಂದಕ್ಕೆ ಕಾರಣೀಭೂತನಾಗಿದ್ದ ದಿನಕರಮಣಿಯನ್ನು ನಿಶಾರಾಕ್ಷ
ಸಿಯು ತನ್ನ ಬಾಯಲ್ಲಿ ಹಾಕಿಕೊಂಡು ತನ್ನ ಭೀಷಣಕೃತ್ಯಕ್ಕಾಗಿ
ಕತ್ತಲೆಯ ಪಶದಿಂದ ( ಪಾಪ!) ವಸುಂಧರೆಯನ್ನು ಮೂರ್ಛಿತ
ಳಾಗಿ ಮಾಡುತ್ತಾಳೆ. ನಮ್ಮ ವಸುಂಧರೆಯು ಆಕೆಯ ಈ ಪ್ರಹಾರ
ದಿಂದ ಮೃತವತ್ತ ಆಗತಕ್ಕವಳೇ ಆದರೆ ಇಷ್ಟರಲ್ಲಿ, ದುರ್ಜನರ
ದಂಡನೆಗಾಗಿ ಸುಜನರು ಹಾತೊರೆಯುವಂತೆ ವಸುಂಧರೆಯ ಸಹಾ
ಯಕ್ಕಾಗಿಯೇ ರಜನೀನಾಥನು ನಕ್ಷತ್ರಗಣಸಹಿತವಾಗಿ ನಭೋಮಂಡ
೨೮ ಸಮಾಜರಹಸ್ಯ
ಲದಲ್ಲಿ ಕಾಣಿಸಿ, ಇನ್ನು ನಿನ್ನನ್ನು ಸಂರಕ್ಷಿಸುತ್ತೇನೆ, ಅಂಜಬೇಡ,
ಎಂದು ಹೇಳಾವದಕ್ಕಾಗಿಯೇ ಏನೋ, ಹುಡುಕುತ್ತ ತುಸುವೇಳೆಯ
ನಂತರ ಬಂದು ಆಕೆಯ ಮೂರ್ಛತೆಯನ್ನು ಹೋಗಲಾಡಿಸುವದ
ಕ್ಕಾಗಿ ಯತ್ನಿಸುವನು. ಪಾಪ! ಆತನಲ್ಲಿ ಎಲ್ಲಿ ಇಷ್ಟು ಶೌರ್ಯ!
ಮೇಲಾಗಿ ಶತ್ರುವಾದರೂ ಎಂಧ ದೊಡ್ಡವಳು. ಆತನಿಗೆ ಇದರಲ್ಲಿ
ಯಶಪ್ರಾಪ್ತಿಯಾಗದೆ ವಸುಂಧರೆಯನ್ನು ಕಾಯುತ್ತ ಕೂಡುವನು.
ಮುಂದೆ ಕೆಲವು ವೇಳೆಯನಂತರ ಹನುಮಂತನು ರಾಕ್ಷಸಿಯ ಹೊಟ್ಟೆ
ಯನ್ನು ಒಡೆದು ಹೊರಗೆ ಬಂದಂತೆ ನಿಶೆಯ ಹೊಟೈಯನ್ನು ಒಡೆದು
ವಸುಂಧರೆಯನ್ನು ಸಂತೋಷಿಸುವದಕ್ಕಾಗಿ ಮತ್ತೆ ದಿನಕರನು ತೀವ್ರ
ದಿಂದ ಓಡಿಬರುವನು. ಹೀಗೆ ಎಷ್ಟೋ ದಿವಸಗಳವರೆಗೆ ನಡದೇ
ಇರುವದು. ಆಕೆಗೆ ಪೂರ್ಣ ಆನಂದವೂ ಇಲ್ಲ ಇತ್ತ ಪೂರ್ಣ ಸಂಕ
ಟವೂ ಇಲ್ಲ. ಕೆಲವು ವೇಳೆ ಅದನ್ನು ಮತ್ತೆ ಕೆಲವು ವೇಳೆ ಎರಡನೇ
ದನ್ನು ಅನುಭವಿಸುತ್ತ ಕಾಲಕ್ರಮವನ್ನು ಮಾಡುತ್ತಿರುವಳು.
ಕಾಮಿನಿಯರಾದ ಸ್ತ್ರೀಯರ ಸ್ಥಿತಿಯೂ ಇದೇ. ತಮ್ಮ ಪ್ರಾಣ
ವಲ್ಲಭರ ಬೋಧಾಮೃತವನ್ನು ಸೇವಿಸುತ್ತ ಅನಂದದಿಂದ ಇರುತ್ತಿ
ರಲು "ಕೃಕಕಾರ್ಯಗಳಗೆ ಎಚ್ಚರಾಗಿರಿ, ಇನ್ನು ಪತ್ನಿಯರನ್ನು
ಬಿಟ್ಟು ಏಳಿರಿ " ಎಂದು ಕೂಗಿ ದಿನಕರನ ದೂತರಾದ ಕೋಗಿಲೆ,
ಕೋಳಿ ಮುಂತಾದವರು ಎಬ್ಬಿಸುತ್ತಿರಲು ಅದಕ್ಕೆ ಕೂಡ ನಾಚದೆ,
ದಿನಕರಮಣಿಯು ತನ್ನ ಪ್ರಖರವಾದ ಹಸ್ತಗಳನ್ನು ಕಿಡಿಕೆಯೊಳ
ಗಿಂದ ಚಾಚಿ ಹಾಸಿಗೆಗಳ ಮೇಲಿಂದ ಕಿತ್ತಿ ಹಾಕುತ್ತಿರಲು ಅವರಿಗೆಲ್ಲ
ಎಷ್ಟು ದುಃಖ !! ಆದರೆ ಮತ್ತೆ ಆನಂದದ ವೇಳೆ ತೀವ್ರ ಬರಬಹು
ದೆಂದು ನಂಬಿ ಎದ್ದು ತಮ್ಮ ಗೃಹಕೃತ್ಯಕ್ಕೆ ತೊಡಗುವರು.
ಕಮಲಿನಿಯಳಿಗೆ ಚಂದ್ರನನ್ನು ನೋಡಿದ ಕೂಡಲೆ ಎಷ್ಟು
ಆನಂದ! ಅದರೆ ಇದೆಲ ಕೆಲಹೂತ್ತಿನವರೆಗೆ ಮಾತ್ರ! !!
ದಿವಾಕರಪಂತರು ೨೯
ನಮ್ಮ ಸುಹೃದಯ ವಾಚಕರಿಗೆ ಇಂದು ಇಂಥದೊಂದು ಹೃದ
ಯದ್ರಾವಕ ಉದಾಹರಣೆಯನ್ನು ತೋರಿಸುವದಕ್ಕಾಗಿಯೇ ಅವರನ್ನು
ಇಷ್ಟು ದೂರದವರೆಗೆ ಪ್ರಣ್ಯಪುರದಿಂದ ನೂರಾರು ಹರದಾರಿಗಳವರೆಗೆ
ಪ್ರವಾಸ ಶ್ರಮವನ್ನು ಅನುಭವಿಸಲು ಹಚ್ಚಿ ದಿವಾಕರಪಂತರಕಡೆಗೆ
ಒಯ್ಯುತ್ತಿರುವೆವು. ಪುಣ್ಯಪುರದಿಂದ ದಕ್ಷಿಣಕ್ಕೆ ಧಾರವಾಡ ಹುಬ್ಬ
ಳ್ಳಿಯ ಕಡೆಗೆ ದಕ್ಷಿಣ ಮಹಾರಾಷ್ಟ್ರ ಕಂಪನಿಯನರದೊಂದು
ರೇಲುವಾಾರ್ಗವು ಹೋಗುವದು. ನಮ್ಮ ದಿವಾಕರಪಂತರ ಊರಿಗೆ
ಹೋಗಬೇಕಾದರೆ ಇತ್ತಕಡೆಗೆ ಹೊರಡಬೇಕಾಗುವದು. ೧೪-೧೫
ತಾಸುಗಳ ವರೆಗೆ ಬೇಸರಿಕೆಯಿಂದ ವ್ಯಥೆಗೊಂಡು ಬಂಡಿಯಿಂದ ಯಾ
ವಾಗ್ಗೆ ಇಳಿಯುವೆನೋ ಎಂದು ಅನಿಸಹತ್ತಲು 'ರಾಯಬಾಗ '
ಎಂಬ ದೊಡ್ಡ ಸ್ಟೇಶನದಲ್ಲಿ ಬಂಡಿಯು ಬಂದು ನಿಲ್ಲುವದು. ಹೆಸರಿ
ನಂತೆ ರಾಯಬಾಗ ಸ್ಪೇಶನದ ಹತ್ತರಿರುವ ಎಲ್ಲ ಪ್ರದೇಶವು ಎತ್ತ
ನೋಡಿದತ್ತ ಪುಷ್ಪಯುಕ್ತವಾದ ಗಿಡಗಳಿಂದಲೂ, ದೊಡ್ಡ ದೊಡ್ಡ
ಮರಗಳೆಂದಲೂ, ಬುಡದಲ್ಲೆಲ್ಲ ಎಳೆ ಹಸರು ಹುಲ್ಲಿನಿಂದ ಶೋಭಿತ
ವಾಗಿ ನೋಡಿದವರಿಗೆ ಆನಂದವನ್ನೀಯುತ್ತಿತ್ತು. ಎಲ್ಲರ ಮನಗಳು
ಆಗಲೇ ಆಕರ್ಷಿಸಲ್ಪಡುತ್ತಿದ್ದವು. ಶಿವಾಜಿ ರಾಯನ ವಂಶಸ್ಥರಾದ
ಕೊಲ್ಲಾಪುರದ ಈಗಿನ ಮಹಾರಾಜರು ಒಂದುಬದಿಗೆ ಬಹಳ ದೂರದ
ವರೆಗೆ ಕಬ್ಬಿಣ ಸಲಾಕಿಗಳನ್ನು ಹಾಕಿ ಒಳಗೆಲ್ಲ ತರತರದ ಮೃಗಗಳ
ನ್ನೂ ಪಶುಗಳನ್ನೂ ಬಿಟ್ಟಿದ್ದರಿಂದ ಬಂಡಿಯೊಳಗಿಂದ ಹೊರಗೆ ಮುಖ
ವನ್ನು ಹಾಕಲು ಕುದುರೆಯ ಚಲ್ಲಾಟ, ನಾಯಿಯ ಬೊಗಳಾಟ, ನವಿ
ಲುಗಳ ಕುಣಿದಾಟ ಇವೇ ಮುಂತಾದ ನೋಟಗಳು ಕಣ್ಣಿಗೆ ಮನೋ
ಹರವಾಗಿ ತೋರಿ ರಾಯಭಾಗವೆಂಬ ಹೆಸರನ್ನು ಸಾರ್ಧಕ ಮಾಡವ
ದಕ್ಕಾಗಿಯೇ ಎನೋ ಈ ತರದ ವ್ಯವಸ್ಥೆಯನ್ನು ಮಾಡಿರುವರು.
ವಾಚಕರೇ, ಇನ್ನು ನಿಮ್ಮ ಈ ನಿರೀಕ್ಷಣವನ್ನು ಸಾಕು ಮಾಡಿ,
ಬಂಡಿಯೊಳಗಿಂದ ಕೆಳಗಿಳಿಯಿರಿ, ನಮಗೆ ೩.೪ ಹರದಾರಿಯವರೆಗೆ
೩೦ ಸಮಾಜರಹಸ್ಯ
ಇನ್ನು ಎತ್ತಿನ ಬಂಡೆಯಲ್ಲಿ ಹೋಗುವದುಂಟು ಹೋಗುತ್ತ ಹಾದಿ
ಯಲ್ಲಿ ಎಷ್ಟೋ ರಮಣೀಯವಾದ ಸ್ಥಳಗಳನ್ನು ನೋಡುವದುಂಟು.
ಇಲ್ಲಿಯೇ ಇಷ್ಟು ವೇಳೆ ಮಾಡಿದರೆ ಹೇಗೆ ನಡಿದೀತು. ನಿಜವಾಗಿಯೇ
ರಾಯಬಾಗ ಸ್ಟೇಷನದಿಂದ ಎಡೂರ-ಇದೇ ನಮ್ಮ ದಿವಾಕರಪಂತರ
ಊರು--ವರೆಗೆ ಇರುವ ಪ್ರದೇಶವು ಬಹಳ ರರ್ಮಣೀಯವಾಗಿರು
ವದು. ಅಲ್ಲಲ್ಲಿ ಹಳ್ಳಿಗಳೂ, ಮಾವಿನ-ಹಲಿಸಿನ-ಗಿಡಗಳ ವನಗಳೂ
ಎತ್ತ ನೋಡಿದತ್ತ ಕಾಣುತ್ತಿರುವವು. ದಾರಿಯಗುಂಟ ಪ್ರವಾಸಕರಿಗೆ
ನೀರಿನ ಅಭಾವತೆಯುಂಟಾಗಬಾರದೆಂತಲೂ ಅಥವಾ ತನ್ನ ದಂಡೆ
ಯ ಮೇಲೆ ಇರುತ್ತಿದ್ದ ಎಡೂರ ಗ್ರಾಮದವರೆಗೆ ಪ್ರವಾಸಿಕರನ್ನು
ಸುಖರೂಪವಾಗಿ ಮುಟ್ಟಿಸಬೇಕಂತಲೋ ಕೃಷ್ಣೆಯು ಸಾವಕಾಶ
ವಾಗಿ ದಾರಿಯುಗುಂಟ ಹರಿಯುತ್ತಿದ್ದಾಳೆ ಈಗಿನ ಈಕೆಯ ಶಾಂತ
ಭಾವವನ್ನು ಕಂಡು ಯಾರದರೂ ಈಕೆಯನ್ನು ಪ್ರೀತಿಸಬಹುದಾ
ಗಿತ್ತು. ಆದರೆ ಈಕೆಯು ಒಮ್ಮೊಮ್ಮೆ ಸಿಟ್ಟಿಗೆದ್ದು ಆರ್ಭಟಿಸುತ್ತ ತನ್ನ
ಅಕ್ರಾಳ ವಿಕ್ರಾಳ ಸ್ವರೂಪವನ್ನು ಧರಿಸಿದಳೆಂದರೆ ಎಷ್ಟೋ ಗ್ರಾಮಗ
ಳಿಗೆ ಬಿಳಿಯಾಗಿ ಈಕೆಯ ಹಸಿವೆಯನ್ನು ಕಳೆಯಬೇಕಾಗುತ್ತದೆಂದು
ಅವರಿಗೇನು ಗೊತ್ತು ! ! ನದಿಯಲ್ಲಿ ಬಿಳೇ ಕಲ್ಲಿನಿಂದ ಅಲ್ಲಲ್ಲಿ ಕಟ್ಟಿದ್ದ
ಸಣ್ಣ ಸಣ್ಣ ಗುಡಿಗಳು ಆಕೆಯ ಕೊರಳೆೊಳಗೆ ಮೌಕ್ತಿಕ ಮಾಲೆಯೊ
ಳಗಿನ ಮಣಿಯಂತೆ ತಳುಪಿಸುತ್ತಿದ್ದವು. ಈ ದಾರಿಯಿಂದ ಹೋಗುವ
ವರು ಪರಮೇಶ್ವರ ನಿರ್ಮಿತ ಅಗಾಧ ರಚನೆಯನ್ನೂ ಇಲ್ಲಿಯ ಸೃಷ್ಠಿ
ವೈಚಿತ್ರ್ಯವನ್ನೂ ನೋಡಿ ಬೆರಗಾಗದೆ ಇರುತ್ತಿದ್ದಿಲ್ಲ. ಈ ದಾರಿಯಿಂದ
ಹೋಗಹತ್ತಿದ ಕೂಡಲೆ ಮನಸ್ಸಿನಲ್ಲಿ ಧಾರ್ಮಿಕ ವಿಚಾರಗಳೂ ಪರ
ಮೇಶ್ವರನ ಅಗಾಧ ಲೀಲೆಯ ವಿಷಯಕ್ಕೆ ಆನಂದವೂ ಹುಟ್ಟ, ಮನ
ಸ್ಸು ಪ್ರಫುಲ್ಲಿತವಾಗುತ್ತಿತ್ತು. ಇಂಥ ಮನಸೋಕ್ತ ಪ್ರದೇಶದ ಒಂದು
ಭಾಗದಲ್ಲಿ, ಕೃಷ್ಣಾನದಿಯ ಎಡ ದಂಡೆಯ ಮೇಲೆ ಇರುತ್ತಿದ್ದದರಿಂದ
' ಎಡೂರ ' ಎಂಬ ಹೆಸರಿನಿಂದ ಪ್ರಸಿದ್ಧಿಗೆ ಬಂದಿದ್ದ ಒಂದು ಮಧ್ಯಮ
ದಿವಾಕರ ಪಂತರು ೩೧
ಪ್ರತಿಯ ಗ್ರಾಮದಲ್ಲಿ ನಮ್ಮ ದಿವಾಕರಪಂತರು ತಮ್ಮ ಸಣ್ಣದೊಂದು
ಕುಟುಂಬದೊಡನೆ ಸುಖದಿಂದ ಇರುತ್ತಿದ್ದರು. ಊರೊಳಗೆ ನದಿಯ
ದಂಡೆಯ ಮೇಲೆಯೇ, ಒಂದು ಭವ್ಯವಾದ ಶಿವಾಲಯವಿರುವದು,
ಗುಡಿಯ ಸುತ್ತಮುತ್ತಲೂ ಭವ್ಯವಾಗಿ ಭದ್ರವಾಗಿದ್ದ ಗೋಡೆಯು
ಕಟ್ಟಲ್ಪಟ್ಟಿರುವುದು. ಒಳಗೆಲ್ಲ ಕಡೆಯಲ್ಲಿಯೂ ಯೋಗಿಗಳಿಗೆ ಸುಖ
ದಿಂದ ಈಶಚಿಂತನೆಯಲ್ಲಿ ಕಾಲುಕಳೆಯುವದಕ್ಕಾಗಿ ಪೌಲಿಗಳು ಕಟ್ಟ
ಲ್ಪಟ್ಟಿರುವವು. ಮಧ್ಯದಲ್ಲಿ ಒಂದು ಪ್ರಶಸ್ಥವಾದ ಶಿವಮಂದಿರವಿದ್ದು
ಶಿವಮೂರ್ತಿಯು ಮಾತ್ರ ನೆಲಕ್ಕಿಂತ ತುಸು ಕೆಳಭಾಗದಲ್ಲಿ ಇರು
ವದು ಇಲ್ಲಿ ದಿನಾಲು ನೂರಾರು ಜನ ಯಾತ್ರಿಕರು ಶಿವದರ್ಶನಕ್ಕಾಗಿ
ದೂರ ದೂರ ದೇಶದಿಂದ ಬರುವರು, ವರ್ನಕ್ಕೊಮ್ಮೆ ಇಲ್ಲಿ ಒಳ್ಳೇ
ವಿಜೃಂಭಗೆ ಯಿಂದ ಈಶ್ವರನ ಜಾತ್ರೆಯು ಸಾಗುವದು ಬಹುಕಾಲ
ದಿಂದ ಇಲ್ಲಿ ವೈದ್ಯರ ಪ್ರಖ್ಯತಿಯು ಬಹಳ ಬೇಕಾದಂಧ ರೋಗಕ್ಕೆ
ವನಸ್ಪತಿಗಳ ಔಷದಗಳಿಂದ ಗುಣಮವಾಡಿ ತೋರಿಸುತ್ತಿದ್ದದರಿಂದ
ರೋಗನಿವಾರಣಗೆಗಾಗಿಯೂ ಸಹ ಜನರು ಈ ಗ್ರಾಮಕ್ಕೆ ಬಂದೇ
ಬರುತ್ತಿರುವರು. ಹೀಗೆ ಎಲ್ಲ ರೀತಿಯಿಂದಲೂ ಈ ಗ್ರಾಮವು ಅತಿ
ಶಯ ಪ್ರಖ್ಯಾತಿಯನ್ನುಹೊಂದಿರುವದು.
ದಿವಾಕ್‌ರಪಂತರನ್ನು ವಾಚಕರು ಮೊದಲೇ ಅರಿತಿರುವರು.
ಇವರು ನಮ್ಮ ವಿದ್ಯಾಧರನ ದೂರಿನ ಆಪ್ತರೆಂದು ಹಿಂದೆ ಹೇಳಿದ್ದೇವೆ.
ಇವರ ನಿರ್ಮಲ ಆಚರಣೆಯನ್ನೂ ಸಹ ವಾಚಕರು ಕಂಡೇ ಇರು
ವರು, ಪತಿಸೇವಯಲ್ಲಿ ದಕ್ಷಳಾದ ಇವರ ಹೆಂಡತಿ ಇವರ ಒಬ್ಬಳೇ
ಒಬ್ಬ ಮಗಳಾದ ವಿಮಲೆಯೆಂಬ ೧೨-೧೩ ವರ್ಷದ ಕುಮಾರಿಕೆಯ
ಇಷ್ಟೇ ಜನರು ದಿವಾಕರ ಪಂತರ ಮನೆಯಲ್ಲಿ ಇದ್ದರು. ದಿವಾ
ಕರಪಂತರು ಪರೋಪಕಾರ ಬುದ್ಧಿಯಿಂದ ರೋಗಿಗಳಿಗೆ ಔಷಧ
ವನ್ನು ಕೊಟ್ಟು ಈಶಚಿಂತನೆಯಲ್ಲಿಯೇ ಕಾಲಕಳೆಯುತ್ತಿದ್ದರು.
೩೨ ಸಮಾಜರಹಸ್ಥ,
ವಿದ್ಯಾಧರನ ಮಾತಾಪಿತೃಗಳು ತೀರಿದ್ದರಿಂದ ಅವನ ಸಂರಕ್ಷಣದ
ಭಾರವು ದಿವಾಕರಪಂತರ ಮೇಲೆ ಬಂದದರಿಂದ ಅತನೂ ಈ
ಕುಟುಂಬದೊಳಗಿನವನಾಗಿದ್ದನು. ವಿದ್ಯಾಧರನ ಆದಾಯವು ಇದೇ
ಊರ ಹತ್ತರದಲ್ಲಿ ಇರುವ ಮತ್ತೊಂದು ಹಳ್ಳಿಯಲ್ಲಿ ಇತ್ತು. ದಿವಾ
ಕರಪಂತರು ತಮ್ಮಲ್ಲಿದ್ದ ಔಷದ ಜ್ಞಾನವನ್ನೂ, ಸಂಸ್ಕೃತ ಜ್ಞಾನ
ವನ್ನೂ ತಮ್ಮ ಪ್ರೀತಿಯ ಮಗಳಾದ ವಿಮಲೆಗೆ ಚನ್ನಾಗಿ ಕಲಿಸಿದ್ದರು.
ವಿಮಲೆಯ ರೂಪಗಿಂಗಲೂ ಗುಣದಿಂಲೂ ಆಚರಣೆಯಿಂದಲೂ
ತನ್ನ ಮಾತಾಪಿತೃಗಳನ್ನು ಆನಂದಗೊಳಿಸುತ್ತಿದ್ದಳು. ವಿದ್ಯಾಧರನ
ಪ್ರೇಮವು ಅಕೆಯ ಮೇಲೆ ಬಹಳ. ಆಕೆಯನ್ನು ಆತನು ತನ್ನ ಒಡಹು
ಟ್ಟಿದ ತಂಗಿಯಂತೆಯೇ ಪ್ರೀತಿಸುತ್ತಿದ್ದನ್ನು ಎಂದಾದರೊಮ್ಮೆ ವಿದ್ಯಾ
ಧರನು ಎಡೂರಿಗೆ ಬಂದಾಗ್ಗೆ ಆಕೆಯು ತನ್ನ ಆಚಾರ ವಿಚಾರಗಳೆಂದ
ಆತನನ್ನು ಆನಂದಗೊಳಿಸಲು ಮರೆಯುತ್ತಿದ್ದಿಲ್ಲ ದಿವಾಕರಪಂತರ
ವಯಸ್ಸು ಈಗ ೬೦-೬೫ ಮೀರಿತು. ಇಳಿ ವಯಸ್ಸಿನಲ್ಲಿಯೇ ಇವ
ರಿಗೆ ಕನ್ನಾರತ್ನವು ಲಭಸಿದ್ದರಿಂದ ಗಂಡಹೆಂಡಂದಿರು ವಿಮಲೆಯನ್ನು
ಬಹಳ ಪ್ರೀತಿಸುತ್ತಿದ್ದರು. ವಿದ್ಯಾಧರನೂ ತಮ್ಮ ಮಗನಂದೇ ತಿಳಿದು
ಕೊಂಡು ಅತನ ವಿದ್ಯೆಗಾಗಿ ತಮ್ಮಿಂದಾದಷ್ಟು ಸಹಾಯ ಮಾಡಿ ವಿಶ್ವ
ವಿದ್ಯಾಲಯದ ಬಿ.ಏ. ಪರೀಕ್ಷೆಯವರೆಗೆ ಕಲಿಸಿದ್ದರೆಂದು ವಾಚಕ
ರಿಗೆ ಗೊತ್ತಿರುವದು.
ಇರಲಿ -ದೈವಯೋಗವೂ, ಕಾಲಗತಿಯೂ ವಿಚಿತ್ರವಾಗಿರು
ವವು, ನಮ್ಮ ವಿದ್ಯಾಧರನೂ, ಮಾಧವನೂ ಕೂಡಿ ತಮ್ಮ ಧ್ಯೇಯವನ್ನು
ಮುಟ್ಟಿಲಿಕ್ಕೆ ಹಾದಿಯನ್ನು ಹುಡುಕಿ ಒಬ್ಬರ ವಿಚಾರಗಳನ್ನು ಮತ್ತೊ
ಬ್ಬರಿಗೆ ಹೇಳುತ್ತ ಬಂಡವನದಲ್ಲಿ ಕುಳಿತಿರಲು ಇತ್ತ ಎಡೂರಲ್ಲಿ
ಒಂದು ಭಯಂಕರ ಕೋಲಾಹಲವೇ ನಡೆದಿತ್ತು. ಊರಲ್ಲಿ ಬಹಳ
ದಿವಸಕ್ಕೆ ಬಂದಿದ್ದ ಪ್ಲೇಗು-ಮಾರಿಕಾ ಅಕ್ಕತಂಗಿಯರು ತಮ್ಮ ರಾಕ್ಷ
ದಿವಾಕರ ಪಂತರು ೩೩
ಸೀಕೃತ್ಯಗಳನ್ನು ಅಂಜದೆ ಮಾಡುತ್ತಿದ್ದರು. ವಾಚಕರೇ ಇಂಥ
ಧಾರ್ಮಿಕ ಸ್ಥಳದಲ್ಲಿ, ಪ್ರತ್ಯಕ್ಷ ಪರಮೇಶ್ವರನು ಅಲ್ಲಿಯೇ ಕುಳತಿರಲು
ಅತನನ್ನು ಸಹ ಲೆಕ್ಕಿಸದೆ ದುಷ್ಟರು ತಮ್ಮ ಕಾಳಕೃತ್ಯವನ್ನು ಹೇಗೆ
ಮಾಡವರು ನೋಡಿದಿರಾ! ದುರ್ಜನರು ಯಾರಿಗೂ ಅಲಂಜುವದಿ
ಲ್ಲೆಂದು ಹೇಳುವದು ನಿಜವಿರಬಹುದೇನು? ಊರಲ್ಲಿ ಒಂದೇ ತರದ
ಗೊಂದಲವು ನಡದಿತ್ತು. ನಿನ್ನೆ ಇವರು ತೀರಿಕೂಂಡರು, ಇಂದು
ಇಂಧವರಿಗೆ ಪ್ಲೇಗು ಬಂದಿರುವದು ಎಂದು ಹಾ ಹಾಕಾರವು ಊರ
ಲ್ಲೆಲ್ಲ ಎದ್ದಿತ್ತು. ಬರಬರುತ್ತ ಊರು ಬಿಟ್ಟು ಕೋಗುವದರೂಳಗಾ
ಗಿಯೇ ನಮ್ಮ ದಿವಾಕರಪಂತರಿಗೆ ಪ್ಲೇಗು ಬಂದಿತು,. ತೀರಿತು ಅವರ
ಹೆಂಡತಿಯ ಕೈಕಾಲೇ ಹೋದವು. ಆಕೆಯು ಬಡಬಡಕೊಂಡು ಅಳಹ
ತ್ತಿದಳು, ಇನ್ನು ತನ್ನ ಕುಂಕುಮದೊಡೆಯರು ನಿಜವಾಗಿಯೇ ತನ್ನನ್ನು
ಬಿಟ್ಟು ತೆರಳು ತಿಳಿದು ಆಕ್ರೋಶ ಮಾಡಹತ್ತಿದಳು. ಪಾಪ!
ವಿಮಲೆಯು ಅತ್ತು ಅತು ಬೇಸತ್ತಳು. ತಾಯಿಯೇ ಅಳುತ್ತ ಕುಳಿ
ತಿದ್ದ ಮೇಲೆ ಈ ಬಾಲಿಕಗೆ ಅಳಬೇಡೆಂದು ಯಾರು ಹೇಳಬೇಕು?
ನೆರೆಹೊರೆಯವರು ಎಷ್ಟು ಹೇಳಿದರೂ ಕೇಳದೆ ದಿವಾಕರಪಂತರ
ಹೆಂಡತಿಯು ಒಂದೇ ಸವನೆ ಅಕ್ರೋಶ ಮಾಡುತ್ತಿದ್ದಳು. ಮರುದಿವ
ಸವೇ “ ನಿನ್ನ ಪತಿಯ ಸಂಗಡ ನಿನ್ನನ್ನು ನಾನು ಸ್ವರ್ಗಕ್ಕೆ ಕಳಿಸುತ್ತೇ
ನೆಂ"ದು ಅನ್ನುತ್ತ ಮಾರಿಕಾ ತಂಗಿಯವರು ದಿವಾತರಪಂತರ ಹೆಂಡ
ತಿಗೆ ಗಂಟುಬಿದ್ದರು. ಮಾರಿಕಾ ಬೇನೆಯಿಂದ ತಾಸೆರಡು ತಾಸುಗಳ
ಲ್ಲಿಯೇ ಅವಳು ಜರ್ಜರಳಾಗಿಹೋದಳು. ಅವಳಿಗೆ ಮಾತಾಡಲಿಕ್ಕೂ
ಕೂಡ ಶಕ್ತಿಯಿಲ್ಲದಂತಾಗಿ ಹೋಯಿತು. ಅತ್ತ ದಿವಾಕರಪಂತ
ರಿಗೂ ನೆಟ್ಟಗಾಗುವ ಚಿನ್ಹವು ತೋರಲಿಲ್ಲ ವಿಮಲೆಯ ಮೇಲೆ ಆಕಾ
ಶವೇ ಹರಿದುಬದ್ದಂತಾಯಿತು, ದಿವಸಗಳ ಕೆಳಗೆ ಆನಂದ
ದಿಂದ ಮರೆಯುತ್ತಿದ್ದ ನಮ್ಮ ಈ ಕುಟುಂಬದ ಅವಸ್ಥೆಯನ್ನು ನೋಡಿ
೩೪ ಸಮಾಜರಹಸ್ಯ
ದಿರಾ! ಈಶ್ವರೇಚ್ಛೆಯನ್ನು ಯಾರು ಮೀರಲಾರರು? ದಿವಾಕರಪಂತರ
ಮಿತ್ರರು ಅವರ ಈ ದುಃಸ್ಥಿತಿಯನ್ನು ಕಂಡು ವಿದ್ಯಾಧರನನ್ನೂದರೂ
ಕರೆಕಳುಹಿಸಬೇಕೆಂದು ಗೊತ್ತುಮಾಡಿ ಅತನಿಗೆ ತಾರು ಮಾಡಿದರು.
ವಿಮಲೆಯ ಸಹಾಯಕ್ಕಾಗಿ ತಾವೇ ಬಂದು ದಂಪತಿಗಳ ಶುಶ್ರೂಷೆ
ಯನ್ನು ಮಾಡಹತ್ತಿದರು. ಒಂದು ದಿವಸಾಯಿತು, ಇನ್ನೂ ವಿದ್ಯಾಧ
ರನು ಬರಲಿಲ್ಲೆಂದು ಕಂಡು ವಿಮಲೆಯು ಹತಾಶಳಾದಳು. ಆದರೂ
ಧೈರ್ಯಗುಂದದೆ ಮಾತಾಪಿತೃಗಳ ಸೇವೆಯಲ್ಲಿ ಹಗಲರುಳೆನ್ನದೆ,
ನಿದ್ದೆನೀರಡಿಕೆಯಿಲ್ಲದೆ, ತತ್ಪರಳಾದಳು. ಆದರೆ ದೇವರು ಆಕೆಯ
ಈ ಸೇವೆಗೆ ತಕ್ಕ ಪ್ರತಿಫಲವನ್ನು ಕೊಡುವಂತೆ ಆಶೆ ಉಳಿಸಿದ್ದಿಲ್ಲ
ಇತ್ತ ಮೂರನೇ ದಿವಸ ಮಾಧವನು ಮುಂಜಾವಿನಲ್ಲಿ ಕಣ್ಣು
ಒರಿಸಿ ಕೊಳ್ಳುತ್ತ ಹೊೂರಗೆ ಬರಲು ಸಿಪಾಯಿಯು ಆತನ ಕೈಯ್ಯಲ್ಲಿ
ಒಂಬು ತಾರುತಂದು ಕೊಟ್ಟನು, ಕೂಡಲೆ ಲಗುಬಗೆಯಿಂದ ಹರಿದು
ಓದಿ ಗಾಬರಿಯಾಗಿ ಒಳಗೆಹೋಗಿ ವಿದ್ಯಾಧರನಿಗೆ ಅದನ್ನು ಕೊಟ್ಟನು.
ವಿದ್ಯಾಧರನು ಅಂಜುತ್ತಂಜುತ್ತಲೆ ಓದಹತ್ತಿದನು. ಮುಂದೆ ಮುಂದೆ
ಓದಹತ್ತಿದಹಾಗೆ ಆತನ ಮುಖ ತೇಜವು ಇಳಿಯುತ್ತ ಹೋಯಿತು.
ಆತನು ಬಹಳೇ ಸಂಕಟದಲ್ಲಿಬಿದ್ದನು. ಮಗನಂತೆ ಪ್ರೀತಿಸಿ ಪಾಲಿಸಿದ್ದ
ತನ್ನ ದಿವಾಕರಪಂತರೂ ಆತನ ಹೆಂಡತಿಯೂ ಹೀಗೆ ಮರಣೋ
ನ್ಮುಖರಾಗಿರುವರೆಂದು ಕಂಡು ಆತನಿಗೆ ಅಸಹ್ಯತರವಾದ ದುಃಖವಾ
ಯಿತು. ಕೂಡಲೆ ಅತನು ಎದ್ದು ಅಂಗಿಯನ್ನು ಹಾಕಿಕೊಂಡು ಮಾಧ
ವನ ಸಂಗಡ ವಿದ್ಯಾರ್ಥಿಗಳ ಮೇಲ್ಮಿಚಾರಕರಕಡೆಗೆ ಹೋದನು.
ಅವರ ಕೈಯ್ಯಲ್ಲಿ ತಾರು ಕೊಟ್ಟು ಇಬ್ಬರೂ ಸುಮ್ಮನೆ ನಿಂತರು,
ಮೆಲ್ವಿಚಾರಕರು ತಾರು ಹಿಡಿಕೊಂಡು “ ಒಳ್ಳೇದು ಹೋಗಿರಿ, ನಾನು
ರಜೆಯನ್ನು ಕೊಟ್ಟಿದ್ದೇನೆ " ಎಂದು ಹೇಳಿದರು. ವಿದ್ಯಾಧರನ ಆತ್ಯಾ
ಗ್ರಹದಿಂದ ಆತನಿಗೆ ಸಹಾಯಮಾಡುವದಕ್ಕಾಗಿ ಮಾಧವನೂ ಎಡೂರ
ದಿವಾಕರಪಂತರು ೩೫
ಗ್ರಾಮಕ್ಕೆ ಹೊರಟನು. ಅದೇ ರಾತ್ರಿ ೧೦ ಗಂಟೆಯ ಸುಮಾರಕ್ಕೆ ಅವ
ರಿಬ್ಬರು ಎಡೂರಕ್ಕೆ ಬಂದು ಮುಟ್ಟಿದರು, ಮನೆಯ ಹತ್ತರ ಬಂದ
ಕೂಡಲೆ ಬಾಗಿಲಲ್ಲಿ ಅಳುತ್ತ ನಿಂತಿದ್ದ ವಿಮಲೆಯು ಅವರ ದೃಷ್ಟಿಗೆ
ಬಿದ್ದಳು. ವಿದ್ಯಾಧರನನ್ನು ನೋಡಿದ ಕೂಡಲೆ ಆಕೆಯು ಚಿಟ್ಟನೆ ಚೀರಿ
ಮುಖವನ್ನು ಕೈಯಿಂದ ಮುಚ್ಚಿಕೊಂಡು ನಿಂತಲ್ಲೇ ನಿಂತಳು.
ವಿದ್ಯಾಧರನು ಬಹಳೇ ಗಾಬರಿಯಾದನು ಆತನು ಆಕೆಯು ಹತ್ತರಕ್ಕೆ
ಹೋಗಿ ನಾಲ್ಕು ಉಪಚಾರದ ಮಾತುಗಳನ್ನು ಹೇಳಲಿಕ್ಕೆ ಪ್ರಾರಂಭಿ
ಸಿದನು. ಆಕೆಯ ದುಃಖವೇಗವು ತುಸು ಕಡಿಮಯಾದಮೇಲೆ ಸಾವ
ಸಾವಕಾಶವಾಗಿ "ಕಕ್ಕನಿಗೆ ಹೇಗಿರುವದು? ಕಕ್ಕಿಗೆ ನೆಟ್ಟಗಾಯಿತೇನು?"
ಎಂದು ಕೇಳಿದನು. ವಿಮಲೆಯು ಮತ್ತೆ ದೊಡ್ಡ ಧ್ವನಿಯಿಂದ ಅಳ
ಹತ್ತಿದಳು. ಅಳುತ್ತಲೇ “ಇ-ಬ್ಬ-ರೂ ಇಂದು-ಮ-ದ್ಯಾ-ನ್ಹ-ದ-ಲ್ಲಿ ತೀರಿ
ಕೊಂ-ಡ-ರು '' ಎಂದು ನಡಗುತ್ತ ಹೇಳಿದಳು. ವಿದ್ಯಾಧರನ ಹೃದಯ
ಕ್ಕೆ ವಜ್ರಘಾತವಾದಂತಾಯಿತು. ಆತನು ವಿಮಲೆಯನ್ನು ಅಪ್ಪಿ
ಕೊಂಡು ದೊಡ್ಡ ಧ್ವನಿಯಿಂದ ಅಳಹತ್ತಿದನು. ಮಾಧವನಿಗೂ ಈ ಸುದ್ದಿ
ಯಿಂದ ಬಹಳೇ ದುಃಖವಾಯಿತು. ಅಳುವ ಭರವು ತುಸು ಕಡಿವೆು
ಯಾದ ಮೇಲೆ --
ಮಾಧ -- ವಿದ್ಯಾಧರ ಇನ್ನು ಅಳುತ್ತ ಹೀಗೆ ಎಷ್ಟು
ಹೊತ್ತಿನವರೆಗೆ ಕುಳಿತುಕೊಳ್ಳುವೆ? ಈಗಲೆ ಹನ್ನೆರಡು ಹೊಡೆದು
ಹೋಯಿತು ಎಲ್ಲರಿಗೂ ಸಮಾಧಾನವನ್ನು ಹೇಳಿ ನೀನು ಶಾಂತನಾಗು.
ಇನ್ನು ಅಳುತ್ತ ಕುಳಿತರೆ ಏನಾಗಬಹುದು? ಉಳಿದ ಎಲ್ಲ ವಿಚಾರ
ಗಳನ್ನು ಮಾಡಿ ಮುಂದಿನ ಕಾರ್ಯವನ್ನು ಹೇಗೆ ಮಾಡಬೇಕೆಂಬ
ದನ್ನು ನಿಶ್ಚಯಿಸು; ಏಳು.
ವಿದ್ಯಾಧರನು ತುಸು ಶಾಂತನಾಗಿ ವಿಮಲೆಯನ್ನು ಸಮಾಧಾನ
ಪಡಿಬದನು... ಕಡೆಗೆ ಸ್ಥಾನಮಾಡಿ ಮಾಧವನ ಜುಲುಮೆಯಿಂದ
೩೬ ಸಮಾಜರಹಸ್ಯ.
ಎಲ್ಲರೂ ತುಸು ಫಲಾರವನ್ನು ಮಾಡಿ ಮಲಗಿಕೂಂಡರು. ವಿಮಲೆಯು
ಇನ್ನೂ ಅಳುವದನ್ನು ಬಿಟ್ಟದ್ದಿಲ್ಲ. ವಿದ್ಯಾಧರನು ಆಗಾಗ್ಗೆ ಸಮಾ
ಧಾನ ಹೇಳುತ್ತಿದ್ದನು ಯಾರಿಗೂ ನಿದ್ದೆಹತ್ತಲಿಲ್ಲ. ತಾಸೆರಡು ತಾಸು
ರಾತ್ರಿಯಿರುವಾಗಲೆ ಬಲ್ಲರೂ ಎದ್ದು ಕುಳಿತರು. ಮಾಧವನು ಮುಂದೆ
ಏನು ಮಾಡಬೇಕೆಂದು ಕೇಳಿ.
ಮಾಧ--- ಈ ಊರಲ್ಲಿ ಇನ್ನು ಕ್ಷಣ ಹೊತ್ತಾದರೂ ನಿಲ್ಲು
ವುದು ಸರಿಯಲ್ಲ ಯಾಕಂದರೆ ಊರಲ್ಲಿ ಯಾವತರದ ಕೋಲಾಹಲವು
ನಡೆದಿರುವದೆಂಬದು ನಿನಗೆ ಗೊತ್ತೇ ಇರುವದು. ಇಂಥ ಸ್ಥಳದಲ್ಲಿ
ನಿಲ್ಲುವದೆಂದರೆ ಪ್ರತ್ಯಕ್ಷ ಮೃತ್ಯುವಿನ ಬಾಯೊಳಗೆ ಹಾರಿಕೊಂಡಂತೆ
ಯೇ ಸರಿ ಎಲ್ಲಿಯಾದರೂ ಇಲ್ಲಿಯೇ ಸಮೀಪದ ಪಟ್ಟಣದಲ್ಲಿ ಉತ್ತರ
ಕ್ರಿಯಾದಿಗಳನ್ನು ಮುಗಿಸಿಕೊಂಡು ಮುಂದಿನ ಎಲ್ಲ ವಿಚಾರಗಳನ್ನು
ಸ್ಥಿರಗೊಳಿಸುವಾ.
ಮಾಧವನು ಹೇಳಿದಂತೆಯೇ ವಿದ್ಯಾಧರನು ಕೂಡಲೆ ಎದ್ದು
ಮನೆಯಲ್ಲಿಯ ಎಲ್ಲ ವಸ್ತು-ವಡವೆಗಳನ್ನು, ಕಾಗದ-ಕತಬಿಗಳನ್ನು ತೆಗೆ
ದುಕೊಂಡು ಸಮೀಪದಲ್ಲಿಯೇ ಇದ್ದ ಕೊಲ್ಹಾಪುರಕ್ಕೆ ಹೋಗುವ ವ್ಯವ
ಸ್ಥೆಯಲ್ಲಿ ತೊಡಗಿದನು.
ಕೊಲ್ಹಾಪುರಕ್ಕೆ ಮುಟ್ಟದ ಮೇಲೆ ಮಾಧವನು ಸವಿಸ್ತಾರವಾಗಿ
ತನ್ನ ತಂದೆಯವರಿಗೆ ಒಂದು ಪತ್ರವನ್ನು ಬರೆದನು. ಉತ್ತರಕ್ರಿಯಾ
ದಿಗಳು ಯಥಾಸಾಂಗವಾಗಿ ಜರುಗಿದವು
ಇದೇನು ಗೊಂದಲ! ೩೭.
ಪಂಚಮ ಪರೀಚ್ಛೇದ.
ಇದೇನು ಗೊಂದಲ!
ಹಿಂದಿನ ಪರಿಚ್ಛೇದದಲ್ಲಿ ದಿವಾಕರಪಂತರ ನಿಧನದಿಂದ ಎಲ್ಲ
ರಿಗೂ ಎಸ್ಟು ದುಃಖವಾಯಿತೆಂದು ಹೇಳಿರುವೆವು.
ನಮ್ಮ ವಾಚಕರಿಗೂ ಸಹ ಆಷ್ಟು ನಿರ್ಮಲ ಅಂತಃಕರು
ಣದ ಒಬ್ಬ ಉತ್ತಮ ರೋಗಚಿಕಿತ್ಸಕನು ಪ್ಲೇಗದಿಂದ
ಇಲ್ಲದ ಹಾಗಾದನೆಂದು ತಿಳಿದು ಬಹಳ ಮಾಧ
ವನು ತಮ್ಮ ತಂದೆಯವರಿಗೆ ಕೊಲ್ಹಾಪುರದಿಂದ ಪತ್ರವನ್ನು ಬರೆದ
ನೆಂಬದನ್ನೂ ಹಿಂದೆ ಹೇಳೆದ್ದೇವೆ ಅದಕ್ಕಾಗಿ ಪತ್ರವನ್ನು ಅವರು ಓದಿ
ದರೋ ಇಲ್ಲವೋ ಎಂದು ತಿಳಿದುಕೊಳ್ಳುವದಕ್ಕಾಗಿ ಮತ್ತೆ ಸಂಹ್ಯಾ
ದ್ರಿ ಪರ್ವತಶ್ರೇಣಿಯ ಮೇಲಿಂದಲೂ ಖಂಡಾಳಾ ಮುಂತಾದ ಅಗಾಧ
ಧರಿಗಳೊಳಗಿಂದಲೂ ಸುರಕ್ಷಿತವಾಗಿ ದಾಟಿ ಹಿಂದುಸ್ಥಾನದ ಪಶ್ಚಿಮ
ತುದಿಗೆ ಇರುವ ಮುಂಬಾಪುರಿಗೆ ಇಂದು ನಮ್ಮ ವಾಚಕರನ್ನು ಒಯ್ಯ
ತಕ್ಕವರಿದೇವೆ. ವಾಚಕರೆ, ಸಿಟ್ಟಿಗೆದ್ದಿರೇನು. ಹೌದು! ಎದ್ದಿರಬ
ಹುದು, ನಮ್ಮಂಧವರ ಬೆನ್ನುಹತ್ತಿ ದಕ್ಷಿಣದಿಂದ ಪಶ್ಚಿಮಕ್ಕೆ ಪಶ್ಚಿಮ
ದಿಂದ ದಕ್ಷಿಣಕ್ಕೆ ಓಡಾಡಿ ದುಃಖದಾಯಕ ಸಂಗತಿಗಳಿಂದ ಮನವ್ಯ
ಥೆಪಡಿಸುವ ಸುಖವೇ ಸುಖವು! ಮತ್ತೆನೂ ಇಲ್ಲ! ಇರಲಿ! ಮಾಡು
ವದೇನು? ಇದಕ್ಕೆ ಎದೆಗೊಟ್ಟು ಎದೆಕೊಟ್ಟು ನಿಲ್ಲಬೇಕು. ಮಾಧವನ ಪತ್ರ
ವನ್ನು ಟಪಾಲ ಸಿಪಾಯಿಯು ತಂದು ಒಗೆದಾಗ್ಯೆ ಶ್ರೀನಿವಾಸರಾಯರು
ಮನೆಯಲ್ಲಿ ಇದ್ದಿಲ್ಲ. ಸರಸ್ವತಿಯು ಪತ್ರವನ್ನು ನೋಡಿ ಮಾಧವನ
ಕಡೆಯಿಂದ ಬಂದಿರುವದೆಂದು ತಿಳಿದು ಆತನು ಇನ್ನು ತೀವ್ರವೇ
ವಿದ್ಯಾಧರನನ್ನು ಕರಕೊಂಡು ಬರಬಹುದೆಂದು ಹಿಗ್ಗಿ ಪತ್ರವನ್ನು
೩೮ ಸಮಾಜರಹಸ್ಯ
ಹರಿಯ ಹತ್ತಿದಳು. ನಿಜವಾಗಿ ವಿದ್ಯಾಧರನನ್ನು ಕಂಡಂದಿನಿಂದ ಸರ
ಸ್ವತಿಯ ಮನಸ್ಸಿನಲ್ಲಿ ಅತನ ಬಗ್ಗೆ ಪ್ರೇಮವು ಹುಟ್ಟಿತ್ತು ಆದರೆ
ತಾನೇ ಪತಿಯನ್ನು ವರಿಸದೆ ತನ್ನ ತಾಯಿತಂದೆಗಳ ಅನುಮತಿಯಿಂದ
ಲೇ ಪತಿಯನ್ನು ಆರಿಸಬೇಕೆಂದು ಆಕೆಯ ಇಚ್ಛೆಯು, ಅಣ್ಣನೂ ತಂದೆ
ಯೂ ತನ್ನನ್ನು ಬಹಳೇ ಪ್ರೀತಿಸುವರೆಂಬದು ಆಕೆಗೆ ಗೊತ್ತಿತ್ತು, ಆದ್ದ
ರಿಂದಲೇ ಅವರು ಬೇಕಾದಂಥವನ ಕೊರಳಲ್ಲಿ ತನ್ನನ್ನು ಕಟ್ಟದೆ,
ತನ್ನ ಜನ್ಮಸಾರ್ಥಕವನ್ನು ಮಾಡಿಕೆೊಳ್ಳಲು ಆಸ್ಪದವನ್ನೀಯುವಂಧ
ಪತಿಯನ್ನೇ ಹುಡುಕಬೇಕೆಂದು ಆಕೆಯು ನಂಬಿದ್ದಳು. ಆದರೂ
ಆಕೆಯ ಇಚ್ಛೆಯಿಲ್ಲದೆ ಆಕೆಯ ಮನಸ್ಸು ವಿದ್ಯಾಧರನ ವಿಷಯಕ್ಕೆ
ಪ್ರಣಯಪ್ರೇಮರತವಾಗಿತ್ತು. ಇರಲಿ, ಸರಸ್ವತಿಯು ಪತ್ರವನ್ನು ಓದಿ
ಚಿಂತಾಕ್ರಾಂತಳಾದಳು. ಆಕೆಗೆ ಆ ಪತ್ರದ ಅರ್ಥವೇ ಚನ್ನಾಗಿ
ತಿಳಿದಂತಾಯಿತು. “ಮಾಧವನು ಕೊಲ್ಹಾಪುರದಲ್ಲಿ ಏಕೆ?
ವಿದ್ಯಾ....-ಅವರ ಊರು ಅದೇನು ಅಲ್ಲ. ಮೇಲಾಗಿ ಅವರ ಕಕ್ಕ
ರೂ-ಸತ್ತರು, ಛೇ ಎಲ್ಲವೂ ಗೊಂದಲವೇ! ಏನೇ ಇರಲಿ ಅವರೆಲ್ಲರು
ಯಾವದೋ ಒಂದು ದೊಡ ಸಂಕಟದಲ್ಲಿದ್ದಂತೆ ತೋರುತ್ತದೆ. ಆನಂ
ದದ ಸುದ್ದಿಯನ್ನು ಕಾಣಬಹುದೆಂದು ಪತ್ರವನ್ನು ಹರಿದು ನೋಡಿ
ದರೆ ಸಂಕಟದ ಸುದ್ದಿಯು, ಏನೋ ದುಶ್ಚಿನ್ಹವಿದ್ದಂತೆ ತೋರುತ್ತದೆ '
ಎಂದು ಬಾಯಿಯೇ ವಟವಟಿಸಹತ್ತಿದಳು.
ಇಷ್ಟರಲ್ಲಿ ಮನೋರಮಾಬಾಯಿಯವರು ಸರಸ್ವತಿಯು ಕೈ
ಯ್ಯಲ್ಲಿ ಪತ್ರವನ್ನು ಹಿಡಿದು ವಿಚಾರಮಗ್ನಳಾಗಿ ನಿಂತಿದ್ದ ಕೋಣೆ
ಯಲ್ಲಿ ಬಂದರು. ಮಗಳು ಚಿಂತಾಕ್ರಾಂತಳಾಗಿ ಯಾವದೋ ಒಂದು
ಗೂಢವಿಚಾರದಲ್ಲಿ ತೊಡಗಿರುವಳೆಂದು ಕಂಡು ಹತ್ತರ ಬಂದು
ಮನೋ-ಯಾಕೆ ಸರಸ್ವತೀ, ಏನು ವಿಚಾರಿಸುತ್ತಿರುವೆ? ಪತ್ರವ್ರಾ
ರದು? ಅದರಲ್ಲಿ ಏನು ಬರೆದಿರುವದು?
ಇದೇನು ಗೊಂದಲ! ೩೯
ತಾಯಿಯು ಒಮ್ಮೆಲೆ ಇಷ್ಟು ಪ್ರಶ್ನಗಳ್ನು ಕೇಳಿದ್ದರಿಂದ ಸರ
ಸ್ವತಿಗೆ ಮೊದಲು ಯಾವ ಪ್ರಶ್ನಕ್ಕೆ ಉತ್ತರಕೂಡಬೇಕೆಂಬದು ತಿಳಿಯ
ಲಿಲ್ಲ. ಇನೂ ಮಾತಾಡದೆ ತನ್ನ ಕೈಯ್ಯಲ್ಲಿದ್ದ ಪತ್ರವನ್ನು ಮನೋ
ರಮಾಬಾಯಿಯವರ ಕೈಯಲ್ಲಿ ಕೊಡುತ್ತ ವ್ಯಾಕಲತೆಯಿಂದಲೇ ಸರ
ಸ್ವತಿಯು “ ಮಾಧವನ ಪತ್ರವು ' ಎಂದು ಹೇಳಿ ತಾಯಿಯು ಏನ
ನ್ನುಳೋ ಕೇಳಬೇಬೆಂದು ಸುಮ್ಮನೆ ನಿಂತಳು. ಮೊದಲು ಮೊದಲು
ಮಾಧವನು ಸರಸ್ವತಿಯ ಪತಿಶೋಧನದ ವಿಷಯಕ್ಕೆ ಏನಾದರು
ಬರೆದಿರಬಹುದೆಂದೂ, ಅದರಿಂದಲೇ ಸರಸ್ವತಿಯು ಇಷ್ಟು ಗೂಢ
ವಿಚಾರಕ್ಕೆ ಬಿದ್ದಿರುವಳೆಂದೂ ಮನೋರಮಾಬಾಯಿಯವರು ನಂಬಿ
ಪತ್ರದಲ್ಲಿ ಆತನು ಏನು ಬರೆದಿರುವನೆಂದು ಕಂಡುಕೊಳ್ಳಲು ಉತ್ಸುಕ
ರಾಗಿದ್ದರು ಆದರೆ ಅವರು ಓದುತ್ತ ಹೋದಹಾಗೆ ಆಶ್ಚರ್ಯ ಉದ್ವಿಗ್ನತೆ
ಇವೇ ಅವರ ಮುಖದಲ್ಲಿ ತೋರಹತ್ತಿದವು. ಕಡಗೆ ಎದೂರಲ್ಲಿ
ಬಹಳ ಪ್ಲೇಗವಿದ್ದದರಿಂದ ಎಲ್ಲರೂ ಕೊಲ್ಹಾಪುರಕ್ಕೆ ಹೋಗಿ ವ್ಯವಸ್ಥೆ
ಮಾಡುವದಕ್ಕಾಗಿ ತುಸು ದಿವಸ ನಿಂತಿರಬಹುದು. ತಮ್ಮ
ಸಹಾಯಕ್ಕಾಗಿ ಇವರಿಗೂ ಬರಲಿಕ್ಕೆ ಕೇಳಿರುವನು. ದಿವಾಕರ
ಪಂತರ ಹಾಗೂ ಆವರ ಪತ್ನಿಯರ ನಿರ್ಮಲ ಅಂತಃಕರುಣಕ್ಕೆ
ವಿದ್ಯಾಧರನು ಇನ್ನು ಅಂತರಿಸಿದನೆಂದು ಕಂಡು ನನಗೂ ಬಹಳೇ
ದುಃಖವಾಗುತ್ತಿರುವದು. ಮಾಧವನು ವಿದ್ಯಾಧರನನ್ನು ಬಹಳೇ
ಪ್ರೀತಿಸುತ್ತಿದ್ದಾನೆ. ಅವರಿಬ್ಬರೂ ಕೂಡಿಯೇ ಕೊಲ್ಹಾಪುರಕ್ಕೆ ಹೋ
ದದ್ದು ಬಹಳ ಒಳ್ಳೇದಾಯಿತು. ಓಬ್ಬರೊಬ್ಬರ ಸಹಾಯದಿಂದ ಎಲ್ಲ
ಕೆಲಸವನ್ನು ಮಾಡುತ್ತಿರಬಹುದು. " ಎಂದು ವಿಚಾರಿಸಿ ಮಗಳ
ಉದ್ದಿಗ್ನತೆಯನ್ನು ಕಳೆಯುವುದಕ್ಕಾಗಿ
ಮನೋ- ಸರಸ್ವತಿ, ಇದಕ್ಕೆ ಇಷ್ಟು ಗಾಬರಿಯಾದಂತೆ ಯಾಕೆ
ತೋರುವಿ? ಮರಣವೆ ಯಾರ ಆಧೀನದಲ್ಲಿರುವದು? ಮಾಧವನೂ
೪೦ ಸಮಾಜರಹಸ್ಥ
ವಿದ್ಯಾಧರನೂ ಕೂಡಿರುವರು. ಅವರಿಗೆ ಈಗ ಬೇಕಾದಷ್ಟು ಧೈರ್ಯವು
ಬಂದಿರುವದು. ಈಗ ಸೇವಾಗೃಹದಿಂದ (office) ಬಂದ ಕೂಡಲೆ
ಅವರಿಗೆ ಈ ಪತ್ರವನ್ನು ತೋರಿಸು. ಅವರೂ ಹೋಗಿ ವಿದ್ಯಾಧರನಿಗೆ
ಆತನ ಕಾರ್ಯದಲ್ಲಿ ಸಹಾಯಮಾಡಿ ವ್ಯವಸ್ಥೆಯಿಂದ ಎಲ್ಲರನ್ನು ಇತ್ತ
ಕಡೆಗೆ ತುಸು ದವಸ ನಿಲ್ಲಲಿಕ್ಕೆ ಬರಬಹುದು.
ತಾಯಿಯ ಈ. ಶಬ್ದಗಳನ್ನು ಕೇಳಿ ಸರಸ್ವತಿಗೆ ತುಸು ಸಮಾ
ಧಾನವಾದಂತಾಯಿತು. ಸರಸ್ವತಿಯು ಸಹಜ ಗತಿಯಿಂದ ಕಿಡಿಕಿ
ಯೊಳಗೆ ಹಣಿಕಿ ಹಾಕಿ ತಂದೆಯು ಬಿರುವ್ ಮಾರ್ಗದ ಕಡೆಗೆ ನೊಡಿ
ದಳು.ಕೂಡಲೆ ಚಿಟ್ಟನೆ ಚೀರಿ ನೆಲಕ್ಕುರುಳಿದಳು. ಆ ಕ್ಷಣವೇ
ರಮಾಸಾಬಾಯಿಯವರು ಏನಾಯಿತೆಂದು ಕಿಡಕಿಯ ಹತ್ತರ ನೋಡ
ಲಿಕ್ಕೆ ಹೋದರು ಇಬ್ಬರು ಮೂವರು ಸೇವಕರೂ, ವೈದ್ಯರೂ ಶ್ರೀನಿ
ವಾಸರಾಯರನ್ನು ಬಂಡಿಯಿಂದ ಮೆಲ್ಲಗೆ ಎಚ್ಚರಿಕೆಯಿಂದ ಇಳಸುತ್ತಿ
ದ್ದದ್ದು ಅವರಿಗೆ ಕಾಣಿಸಿತು ಅವರು ತೀರ ಗಾಬರಿಯಾದರು. ಅವರ
ಕಣ್ಣಿಗೆ ಕತ್ತಲೆ ಬಂದಂತಾಗಿ ಕೂಡಲೆಅವರು ನೆಲದಮೇಲೆ ದೊಪ್ಪನೆ
ಬಿದ್ದರು. ಸರಸ್ವತಿಯು ಎದ್ದು ಸಾವಕಾಶವಾಗಿ ತಾಯಿಯನ್ನು ಎಬ್ಬಿ
ಸಲಿಕ್ಕೆ ಹೋಗುತ್ತಿರಲು ಆಕೆಗೆ ಬಾಗಿಲ ಮೇಲೆ ಯಾರೋ ಬಡಿ
ದಂತಾಯಿತು. ಆಂಜುತ್ತಂಜುತ್ತ ಹೋಗಿ ಬಾಗಿಲ ತೆಗೆದಳು. ಹಾಯ!
ಹಾಯ !! ಅಪ್ಪಾ ಹೀಗೇಕೆ ನಿಮ್ಮ ಗತಿ! "ಎಂದು. ಒದರಿ
ನೆಲದ ಮೇಲೆ ಕುಳಿತಳು, ವೈದ್ಯರು ಸರಸ್ವತಿಗೆ ಅಂಜಬೇಡೆಂದು
ಹೇಳೆ ಅಲ್ಲಿಯೇ ಇದ್ದ ಮಂಚದ ಮೇಲೆ ಶ್ರೀನಿವಾಸರಾಯರನ್ನು
ಮಲಗಿಸಿದರು, ಅತ್ತಿತ್ತ ತಮ್ಮ ದೃಷ್ಟಿಯನ್ನು ಹಾಕುತ್ತಿರಲು ಮನೋ
ರಮಾಬಾಯಿಯವರು ನಿಶ್ಚೇಷ್ಟತರಾಗಿ ಬಿದ್ದದ್ದೂ ಅವರ ತಲೆಯೊಳ
ಗಿಂದ ಅತುಲರಕ್ತವು ಹರಿಯುತ್ತಿದ್ದದ್ದೂ ವೈದ್ಯರಿಗೆ ಕಾಣಿಸಿಸಿತು. ಗಡಿ
ಬಡಿಯಂದ ಹೋಗಿ ಗಾಯವನ್ನು ಕಟ್ಟಿದರು. ಕೆಲವು ಹೊತ್ತಿನಮೇಲೆ
ಇದೇನು ಗೊಂದಲ ! ೪೧
ಮನೋರಮಾಜಾಯಿಯವರು ಕಣ್ಣು ತೆರೆದು ನಾಲ್ಕು ಕಡೆಗೆ ನೋಡಿ
ದರು. ಪತಿಯು ಮಂಚದ ಮೇಲೆ ನಿಶ್ಚೇಷ್ಟಿತನಾಗಿ ಬಿದ್ದದ್ದೂ, ಸರ
ಸ್ವತಿಯು ಗಾಬರಿಯಾಗಿ ಅಳುತ್ತಿರುವದೂ ಅವರಿಗೆ ಕಾಣಿಸಿತು.
ಕೂಡಲೇ ಮತ್ತೆ ಅವರ ತಲೆತಿರುಗಿದಂತಾಗಿ ಕೂತಲ್ಲಿಯೇ ಮತ್ತೆ
ಉರಳಿದರು. ಸರಸ್ವತಿಯು ಬಹಳೆ. ಆಂಜಿದಳು. ತಂದೆಯವರ
ಸ್ಥಿತಿಯು ಹೀಗಾಗಲಿಕ್ಕೆ ಕಾರಣವೇನೆಂದು ಕೇಳಲು ಯತ್ನಿಸುತ್ತಿರಲು
ಇಷ್ಟರಲ್ಲಿ ತಾಯಿಯ ಅವಸ್ಥೆಯು ಹೀಗಾದದ್ದು ಕಂಡು ಗಾಳಿಯನ್ನು
ಬೀಸಹತ್ತಿದಳು. ತುಸು ಹೊತ್ತಿನ ಮೇಲೆ " ಹಾಯ! ಹಾಯ!
ವಿಧಿಯೇ ಇದೇನು ಸಂಕಟ! !" ಎಂದು ಉಸುರ್ಗರೆಯುತ್ತ
ಮನೋರಮಾಬಾಯಿಯವರು ಎದ್ದು ಕುಳಿತರು.
ಈಗ ಮಾತ್ರ ಎಲ್ಲರಿಗೂ ತುಸು ಸಮಾಧಾನವಾಯಿತು. ಸರ
ಸ್ವತಿಯ ಕಣ್ಣೊಳಗಿಂದ ಗಂಗಾಮಾತೆಯು ಇನ್ನೂ ಪ್ರವಹಿಸು
ತ್ತಲೇ ಇದ್ದಳು. ಮನೋರಮಾಬಾಯಿಯವರೂ ಆಳುತ್ತಲೇ ಗಾಬ
ರಿಯಾಗಿ ಹುಚ್ಚ ಹಿಂಡಿದಂತೆ ಪತಿಯ ಮಂಚದ ಕಡೆಗೆ ಓಡಹತ್ತಿದರು.
ವೈದ್ಯರು ಸಾವಕಾಶವಾಗಿ ಸರಸ್ವತಿಯ ಕಡೆಗೆ ನೋಡಿ "% "Ask
your mother not to go there. He is miserable"
ಎಂದು ಹೇಳಿದರು. ಮನೋರಮಾಬಾಯಿಯವರ ಕೈಕಾ
ಲೇ ಹೋದವು. ಮತ್ತೆ ಅವರು ಹುಚ್ಚು ಹಿಡಿದವರಂತೆ ಓಡುತ್ತ ಬಂದು
ಸರಸ್ಮೃತಿಯನ್ನು ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅಳಹತ್ತಿದರು. ವೈದ್ಯರು
ಅಳಬೇಡೆಂದು ಹೇಲಿ ಶ್ರೀನಿವಾಸರಾಯರ ಕಡೆಗೆ ಓಮ್ಮೆ ದೃಷ್ಟಿ
ಯನ್ನು ತಿರುವಿದರು ಶ್ರೀನಿವಾಸರಾಯರು ಈಗೀಗ ತುಸು ಕಣ್ಣು
ತೆರೆದು ಎಲ್ಲ ಕಡೆಗೂ ನೋಡಬೇಕೆಂದು ಯತ್ನಿಸುತ್ತಿದ್ದರು. ಅಸಹ್ಯ
ತರವಾದ ಅಂತರ್ವೇದನೆಗಳಾಗುತ್ತಿದ್ದದರಿಂದ ಅವರಿಗೆ ಮಾತಾಡ
......
% ಮಂಚದಹತ್ತಿರ ಹೋಗಬೇಡೆಂದು ನಿಮ್ಮ ತಾಯಿಗೆ ಹೇಳು. ಶ್ರೀನಿವಾಸರಾಯರು
ನಿಶ್ತೇಷ್ಟಿತರಾಗಿರುವರು.
೪೨ ಸಮಾಜರಹಸ್ಯ.
ಲಿಕ್ಕೆ ಬರಲಿಲ್ಲ ಪತ್ನಿ ಪ್ರತ್ರಿಯರನ್ನು ಕಂಡು ಅವರ ಅಂತರ್ವೇದನೆ
ಗಳು ಹೆಚ್ಚಿ ಅವರು ಮತ್ತೆ ನಿಶ್ಚೇಷ್ಟಿತರಾದರು. ವೈದ್ಯರು ಮತ್ತೆ ಔಷ
ದೋಪಚಾರಗಳನ್ನು ವಾಡಿದರು
ಹೀಗಾಗುವದಕ್ಕೆ ಕಾರಣವೇನೆಂಬದನ್ನು ಸ್ನಲ್ಪದರಲ್ಲಿಯೇ
ಸರಸ್ವತಿಗೆ ಹೇಳಿ ಕೆಲವು ಔಷದಗಳನ್ನು ಕೊಟ್ಟು ಹೋಗಬೇಕೆಂಬ
ಉದ್ದೇಶದಿಂದ ಸರಸ್ವತಿಯನ್ನು ಹತ್ತರ ಕರೆದು ಸಾವಕಾಶವಾಗಿ ಎಲ್ಲ
ವನ್ನೂ ಚನ್ನಾಗಿ ತಿಳಿಯುವಂತೆ ವಿಸ್ತರಸಿ ಹೇಳಿದರು. ಒಮ್ಮೆಲೇ
ಹೀಗಾದ ಸುದ್ದಿಯನ್ನು ಕೇಳಿ ಅವರು ಎದೆಯೊಡಕೊಂಡಿರುವರೆಂದೂ
ಹೇಳಿ ಕೆಲವು ಓಷಧಗಳನ್ನು ಕೊಟ್ಟು ತಾವು ಸಂಜೆಯ ಎಂಟು
ಗಂಟೆಯ ಸುಮಾರಕ್ಕೆ ಮತ್ತೆ ಬರುತ್ತೇವೆಂದೂ ಹೇಳಿ ಹೊರಡುತ್ತಲೇ
* " Take care that you do not trouble him
in any way, Be silently waiting near him"
ಎಂದು ಹೆಳಿದರು. ವೈದ್ಯರು ಹೊರಟು ಹೋದಮೇಲೆ ಸರಸ್ವ
ತಿಯೂ ಮನೋರಮಾಬಾಯಿಯವರೂ ಒಬ್ಬರನ್ನೊಬ್ಬರು ಅಪ್ಪಿ
ಕೊಂಡು ಬಿಕ್ಕಿ ಅಳಹತ್ತಿದರು. ಅಳುವ ವೇಗವು ತುಸು ಕಡಿಮೆ
ಯಾದಮೇಲೆ ಸರಸ್ವತಿಯು ಎದ್ದು ಮಂಚದ ಹತ್ತರವೇ ಶಾಂತಚಿತ್ತ
ದಿಂದ ತಂದೆಯ ಮುಖನನ್ನು ನೋಡುತ್ತ ಕುಳಿತುಕೊಂಡಳು.
ಮನೋರಮಾಬಾಯಿಯವರೂ ಹಾಗೇಮಾಡಿದರು ತುಸು ವೇಳೆಯು
ಕ್ರಮಿಸಿದನಂತರ ಶ್ರೀನಿವಾಸರಾಯರು ಕಣ್ದೆರೆದು " ಸರಸ್ವತೀ,
ಮಾಧವಾ ” ಎಂದು ಸಾವಕಾಶವಾಗಿ ನಿಲ್ಲುತ್ತ ನಿಲ್ಲುತ್ತ ಅಂದರು.
ಸರಸ್ವತಿಯು ತೀರ ಹತ್ತರಹೋಗಿ ಬಗ್ಗಿ * ಅಪ್ಪಾ ನಮಗೇನು ಆಗು
ತ್ತದೆ?" ಎಂದ. ಕೇಳಿದಳು. ಶ್ರೀನಿವಾಸರಾಯರು ಮತ್ತೆ ಒಮ್ಮೆ
....................
* ಅವರಿಗೆ ಯಾವತೊಂದರೆಯನ್ನು ಕೊಡಬೇಡಿರಿ ಸುಮ್ಮನೆ ಆವರ ಹತ್ತರ ಕುಳಿತ
ಶುಸ್ರೂಷಣೆಯನ್ನು ಮಾಡಿರಿ.
ಇದೇನು ಗೊಂದಲ! ೪೩
ದೃಷ್ಟಿಯನ್ನುಎಲ್ಲಕಡೆಗೆ ಹಾಕಿದರು. ಕಣ್ಣೊಳಗಿಂದ ನೀರು ಹರಿ
ಯಹತ್ತಿತು ಮಾತಾಡಲಿಕ್ಕೆ ಬರದಂತಾಗಿ ಕಂಠವು ಬಿಗಿಹೋಯಿ
ತು ಇದನ್ನು ಕಂಡು ಸರಸ್ವತಿಯು ತಾಯಿಗೆ ಅಲ್ಲಿಂದ ಎದ್ದು ಹೋ
ಗಲು ಹೇಳಿ ತಂದೆಯ ಕಣ್ಣುಗಳನ್ನು ಒರಿಸುತ್ತ “ ಈಗ ನೀವು ಏನೂ
ಮಾತಾಡಬೇಡಿರಿ ಸ್ವಸ್ಥಚಿತ್ತದಿಂದ ಮಲಗಿಕೊಳ್ಳರಿ " ಎಂದು ಹೇಳಿ
ಮೋರೆಯಮೇಲೆ ತಿಳುವಾದ ವಸ್ತ್ರವನ್ನು ಹೊದ್ದಿಸಿ ಹತ್ತಿರವೇ ಕುಳಿ
ತುಕೊಂಡಳು. ಶ್ರೀನಿವಾಸರಾಯರು ಮತ್ತೆ ನಿಶ್ಚೇಷ್ಟಿತರಾದರು. ಸರ
ಸ್ವತಿಯು ಗಾಬರಿಯಾಗಿ ವೈದ್ಯರು ಹೇಳಿದಂತೆ ಔಷದೋಪಚಾರಗ
ಳನ್ನು ಮಾಡಿದಳು. ಇನ್ನು ಮುಂದೇನು ಮಾಡಬೇಕೆಂದು ಆಕೆಗೆ
ತೋಚದಾಯಿತು. ಅತ್ತ ಮಾಧವನು ತನ್ನ ಮಿತ್ರರ ಸಹಾಯಕ್ಕಾಗಿ
ಕೊಲ್ಹಾಪುರದಲ್ಲಿ! ಏನುಮಾಡಬೇಕು? ಕೂಡಲೆ ಮಾಧವನಿಗೆ
ತಾರುಮಾಡಬೇಕೆಂದು ಆಕೆಗೆ ತೋಚಿತು. ಇಷ್ಟರಲ್ಲಿಯೇ ಶ್ರೀನಿವಾ
ಸರಾಯರು ಎಚ್ಚರಾದಂತೆ ಮಾಡಿ 'ವಿದ್ಯಾಧರನೆಲ್ಲಿ?' ಎಂದು ಕೇಳಿ
ದರು. " ವಿದ್ಯಾಧರನಿಗೆ ಬರಲು ತಾರು ಮಾಡುವೆನು. ಮುುಂಜಾನೆ
ಬರಬಹುದೆ "ಂದು ಸರಸ್ವತಿಯು ಹೇಳಿದಳು. ಶ್ರೀನಿವಾಸರಾಯರು
ತುಸು ಸಮಾಧಾನದೃಷ್ಟ್ಟಿಯಿಂದ ಸರಸ್ವತಿಯನ್ನು ನೋಡಿ ಮತ್ತೆ
ಹೊದ್ದು ಕೊಂಡು ಮಲಗಿಕೊಂಡರು. ಇದನ್ನು ತಿಳಿದು ಸರಸ್ವತಿಯ
ತಾಯಿಯವರನ್ನು ಕರೆದು ಅಲ್ಲಿಯೇ ಕೂಡೆಂದು ಹೇಳಿ ತಾನು ಭರ
ದಿಂದ ಪಾವಟಿಗೆಗಳನ್ನು ಇಳಿದು ಅದೇ ಮನೆಯ ಕೆಳಗಿನ ಆಂತಸ್ತಿ
ನಲ್ಲಿದ್ದ ಅಂಚೆ ಕಟ್ಟಿಗೆ ಹೋಗಿ ತಾರುಮಾಡುವ ಕಾಗದವನ್ನು
ತೆಗೆದುಕೊಂಡು ಮಾಧವನು ಭಯಪಡದಂತೆ ಸಂಕ್ಷಿಪ್ತವಾಗಿ
ಶಬ್ದಗಳಲ್ಲಿ ಆತನಿಗೆ ಕೂಡಲೇ ಬರಬೇಕೆಂದು ಬರೆದಳು. ತಿರುಗಿ
ಕೋಣೆಗೆ ಬಂದು ನೋಡಲು ಶ್ರೀನಿವಾಸರಾಯರು ಆಗ ಪೂರ್ಣ
ವಾಗಿ ಕಣ್ಣೆರೆದು ವ್ಯಾಕುಲರಾಗಿ ನೋಡುತ್ತಿದ್ದರು. ಸರ
ಸ್ವತಿಯು ಬಂದಳೆಂದು ಕಂಡು ಕೈಸೊನ್ನೆಯಿಂದ ಆಕೆಗೆ ತನ್ನ ಹತ್ತರ
೪೪ ಸಮಾಜರಹಸ್ಯ.
ಕೂಡೆಂದು ತಿಳುಹಿ ಆಕೆಯ ಬೆನ್ನ ಮೇಲೆ ಕೈಯ್ಯಾಡಿಸಹತ್ತಿದರು.
ಸರಸ್ವತಿಯು ತಂದೆಯ ಕೈಸ್ಫರ್ಶವಾದ ಕೂಡಲೆ ಗಾಬರಿಯಾಗಿ
ಮತ್ತೊಮ್ಮೆ ಅವರ ಕ್ಸ ಹಿಡಿದು ನೋಡಿದಳು. ಭಯಂಕರ ಜ್ವರದಿಂದ
ಶ್ರೀನಿವಾಸರಾಯರ ಶರೀರವೆಲ್ಲ ಕಾಯ್ದು ಹೋಗಿತ್ತು. ಆಕೆಯ
ಧೈರ್ಯ ಕುಂದಹತ್ತಿತು.
ಹೇಳಿದಂತೆ. ಎಂಟು ಗಂಟೆಯ ಸುಮಾರಕ್ಕೆ, ವೈದ್ಯರು ಮತ್ತೆ
ಬಂದು ನಾಡೀ ನೋಡಿ ಜ್ವರವು ಬಹಳೇ ಬಂದಿರುವದನ್ನು ಕಂಡರು.
ಮಾನಸಿಕ ಶ್ರಮವು ಬಹಳ ವಾಗಿರುವದರಿಂದ ಈ ಬೇನೆಗೆ ಔಷಧವು
ತೀವ್ರ ನಡೆಯಲಾರದೆಂದು ಹೇಳಿ ಮತ್ತೆ ಶರೀರ ಪರೀಕ್ಷಣೆಗೆ ಹತ್ತಿ
ದರು, ಸರಸ್ವತಿಯು ವೈದ್ಯರು ಹೇಳದ್ದನ್ನು ಕಂಡು ಬಹಳ
ದುಃಖಿತಳಾದಳು, ವೈದ್ಯರು ಮತ್ತೆ ಓಷಧವನ್ನು ಕೊಟ್ಟು ಅದಕ್ಕೆ
ಮಾಡತಕ್ಕ ಕಾರ್ಯವನ್ನು ತಿಳುಹಿದರು. ಸರಸ್ವತಿಯು
ಔಿಷಧವನ್ನು ಇಸುಗೊಂಡು ಆದನ್ನು ಹೇಗೆ ಹೇಗೆ ಉಪಯೋಗಿಸಬೇ
ಕೆಂಬದನ್ನು ತಿಳಕೊಳ್ಳುತ್ತಿದ್ದಳು. ವೈದ್ಯರು ತಿರುಗಿ ಹೋಗಲಿಕ್ಕೆ
ಸಿದ್ದರಾಗಹತ್ತಿದರು. ಸರಸ್ವತಿಗೆ ಏನೋ ನೆನಪಾದಂತಾಗಿ
" *Sir, will you kindly see my mother's wounds. She
too is attacked by strong feaver" ಎಂದು vfykulcitft
ಳಾಗಿ ಪ್ರತಿ ಶಬ್ದಗಳನ್ನು ಕಷ್ಟದಿಂದಲೇ ಉಚ್ಚರಿಸುತ್ತ ವೈದ್ಯರಿಗೆ
ಹೇಳಿದಳು. ವೈದ್ಯರಿಗೆ ತಾವು ಮಧ್ಯಾನ್ಹದಲ್ಲಿ ಬಂದಾಗ್ಗೆ ಮನೋ
ರಮಾಬಾಯಿಯವರ ತಲೆಗೆ ಪೆಟ್ಟು ಹತ್ತಿ ನಿಶ್ಚೇಷ್ಟಿತರಾಗಿ ಬಿದ್ದಿರಲು
ತಾವು ಆವರಿಗೆ ಮಲಮ ಹಚ್ಚಿ ಔಷಧ ಕೊಟ್ಟದ್ದು ಈಗ
ನೆನವಾಯಿತು. ಅವರು "% Yes! and where is your mother?"
...............
* ಮಹಾಶಯ, ತಾಯಿಗೂ ಕೂಡ ಜ್ವರ ಬಂದು ಮುಂಜಾವಿನ ಗಾಯದಿಂದ ಆಕೆಯು
ಚಡಪಡಿಸುತ್ತಿರುವಳು. ಆಕೆಯ ಗಾಯವನ್ನಷ್ಟು ನೊಡಿವಿರಾ'
% 'ಒಳ್ಳೇದು. ಅವರು ಈಗ ಎಲ್ಲಿರುವರು.' ಎದರು ಈಗ ಎನ್ನರುವರು '
ಇದೇನು ಗೊಂದಲ! ೪೫
ಎಂದು ಹೇಳಿದರು, ಸರಸ್ವತಿಯು ತಾರು ಮಾಡಹೋಗಲು ಮನೋ
ರಮಾಬಾಯಿಯವರು ವ್ಯಥೆಯನ್ನು ತಾಳುತ್ತ ಅಲ್ಲಿಯೇ ಕೂಡ್ರಲಾರದೆ
ತುಸು ಹೊತ್ತು ಹತ್ತರದ ಕೋಣೆಯಲ್ಲಿ ಮಂಚದ ಮೇಲೆ ಮಲಗಿದ್ದರು.
ಸರಸ್ವತಿಯು ಹತ್ತರದ ಕೋಣೆಯ ಬಾಗಿಲವನ್ನು ತೆಗೆದಳು.
ಮಂಚದ ಮೇಲೆ ಮನೋರಮಾಬಾಯಿಯವರು ವಿಷಣ್ಣ ಹೃದಯ
ದಿಂದ ಕಣ್ಣಲ್ಲಿ ನೀರು ತುಂಬಿಕೊಂಡು ಊರ್ಧ್ವದೃಷ್ಟಿಯಿಂದ ದೇವ
ರನ್ನು ಧ್ಯಾನಿಸುತ್ತಿದ್ದರು ವೈದ್ಯರನ್ನು ಕಂಡು ಏಳಲಿಕ್ಕೆ ಯತ್ನಿಸಿ
'ನನ್ನ ಪತಿಗೆ ನೆಟ್ಟಗಾಗುವದೋ ಎಂಬ ಅರ್ಧಪೂರ್ಣದೃಷ್ಟಿ
ಯಿಂದ ಅವರ ಕಡೆಗೆ ನೋಡಿದರು ವೈದ್ಯರು 'ಹಾಗೆ ಆಗಬಹುದು
ನೀವೇನು ಚಿಂತಿಸಬೇಡಿರಿ, ' ಎಂಬ ದೃಷ್ಟಿಯಿಂದ ನೋಡುವಂತೆ
ತೋರಿತು. ಮನೋರಮಾಬಾಯಯವರ ಮುಖದ ಮೇಲೆ ತುಸು
ಆನಂದದ ಕಳೆಯೇರಿತು. ವೈದ್ಯರು ಗಾಯದ ಮೇಲಿನ ಪಟ್ಟಿಯನ್ನು
ತೆಗೆದು ಅದನ್ನು ಸ್ವಚ್ಛವಾಗಿ ತೊಳೆದು, ಮಲಮವನ್ನು ಹಚ್ಚಿ,
ಮುಂಜಾವಿನಲ್ಲಿ ಮತ್ತೆ ಬರುತ್ತೇನೆಂದು ಹೇಳಿ ಹೋಗಹತ್ತಿದರು. ಸರ
ಸ್ವತಿಯು "* I am ever thankful to you, Sir" ಎಂದು ಅವರು
ಹೋಗುವಾಗ್ಗೆ ಅಂದಳು. ಇದರಲ್ಲಿ ಉಪಕಾರ ಮನ್ನಿಸುವಷ್ಟು ವಿಶೇ
ಷವೇನಿಲ್ಲೆಂತಲೂ, ಶ್ರೀನಿವಾಸರಾಯರ ನಿರ್ಮಲ ಅಂತಃಕರುಣವು
ತನಗೆ ಅಂತರಿಸಲಾರದೆಂದೇ ಈ ಕಾರ್ಯವನ್ನು ಕೈಕೂಂಡಿರುವೆ
ನೆಂದೂ ಹೇಳಿ ಆವರು ಮುಖದಮೇಲೆ ಆನಂದದ ಕಳೆಯನ್ನು ತಂದು
ಕೊಳ್ಳಲು ಯತ್ನಿಸಿದರು. ಆದರೆ ಅವರ ಮುಖವು ಮತ್ತಿಷ್ಟು ಸಂಶ
ಯಾಸೃದವಾಗಿಯೇ ತೋರಹತ್ತಿ ಅವರು ಕಂಪಿಸತೊಡಗಿದರು.
ಮುಖದ ಮೇಲಿನ ಗಾಂಭೀರ್ಯವೆಲ್ಲ ಹೋಯಿತು. * ತಾವು ಭಯಂ
ಕರ ಕೃತ್ಯವನ್ನು ಮಾಡಿರುವೆವು ” ಎಂಬ ಅಕ್ಷರಗಳು ಅವರ ಮುಂದೆ
............
* 'ನಾನು ತಮಗೆ ಅಜನ್ಮ ಉಪಕಾರಬದ್ಧಳಾಗಿರುವೆನು.'
೪೬ ಸಮಾಜರಹಸ್ಯ
ಕುಣಿಯಕತ್ತಿದವು ವೈದ್ಯರು ಬಹಳೆೇ ಪೇಚಾಟದಲ್ಲಿ ಬಿದ್ದರು.
ಹೇಗಾದರೂ ಮಾಡಿ ಅಲ್ಲಿಂದ ಪಾರಾಗಿ ಹೋಗಬೇಕೆಂದುವಾಡಿ
“ಒಳ್ಳೇದು. ನಾನು ಹೋಗಿ ಬರುತ್ತೇನೆಂ"ದು ಹೇಳಿ ಹೊರ
ಟು ಹೋದರು.
ವೈದ್ಯರ ಆ ಮನಶ್ಚಾಂಚಲ್ಯವೂ ಅವರ ಕಂಪನೆಯೂ, ಅವರ
ಮುಖದ ಮೇಲಿನ ಆಗಿನ ಭಯಂಕರ ಕಳೆಯೂ ಸರಸ್ವತಿಯ ಮನ
ಸ್ಸಿನಲ್ಲಿ ಬರದೇ ಹೋಗಲಿಲ್ಲ. ಆಕೆಗೂ ಕೂಡ ಈ ಗೊಂದಲವು ತಿಳಿ
ಯದಾಯಿತು. ತನ್ನ ವಿಚಾರದಂತೆ ತಂದೆಯವರ ಬೇನೆಯು ಸಣ್ಣದಿ
ರದೆ ಒಮ್ಮೆಲೇ ಬಂದ ಆಪತ್ತಿನಿಂದ ಆವರ ಎದೆಯೊಡೆದು ಮಾನಸಿಕ
ಯಾತನೆಯು ಬಹಳವಾಗಿರುವದೆಂದು ತಿಳಿದಳು. ಆದರೂ ವೈದ್ಯರ
ವಿಷಯದಲ್ಲಿ ಮಾತ್ರ ಆಕೆಗೆ ಸಂಶಯ ಬರದೆ ಇರಲಿಲ್ಲ.
ಮನೋರಮಾಬಾಯಿಯವರಿಗೆ ಮಾತ್ರ ಬರಬರುತ್ತ ನೆಟ್ಟಿಗನಿ
ಸಹತ್ತಿತು ರಾತ್ರಿಯ ಹತ್ತು ಗಂಟೆಯ ಸುಮಾರಕ್ಕೆ ಅವರ ಜ್ವರವೆಲ್ಲ
ಕಡಿಮೆಯಾಗಲು ಅವರು ಶ್ರೀನಿವಾಸರಾಯರ ಹತ್ತಿರ ಬಂದು ಕುಳಿ
ತರು ಸರಸ್ವತಿಯಂತೂ ಹಗಲು-ಇರುಳೆನ್ನದೆ ಒಂದೇಸವನೆ ಶ್ರೀನಿ
ವಾಸರಾಯರ ಶುಶ್ರೂಷಣೆ ಮಾಡುವದರಲ್ಲಿಯೇ ತೊಡಗಿದ್ದಳು.
ಹನ್ನೆರಡು ಗಂಟೆಗೆ ಔಷಧವನ್ನು ಕೊಡಬೇಕಾಗಿತ್ತು, ಗಡಿಯಾ
ರದಲ್ಲಿ ವೇಳೆ ನೋಡಿ ಇನ್ನು ಅರ್ಧತಾಸು ವೇಳೆ ಇರುವದೆಂದು
ಕಂಡು ಸಮಾಧಾನಪಟ್ಟು ಹಾಲು ಕಾಯಿಸಬೇಕೆಂದು
ಮಾಡಿದಳು. ಹೋಗುತ್ತ ಹೋಗುತ್ತ ಓಷಧದ ಶಿಸೆಯನ್ನು ತೆಗೆದು
ಕೊಂಡು ಹೋದಳು 'ಸ್ಟೋವ್ಹ'ನ್ನು ಹಚ್ಚಿ ಹಾಲು ಕಾಸುತ್ತಾ ಕುಳಿ
ತಳು, ಇಷ್ಟರಲ್ಲಿ ಎಲ್ಲಿಯೋ ಹೋಗಿದ್ದ ಅವರ ಮನೆಯ ಬೆಕ್ಕು
“ ಮ್ಯಾಂವ ಮ್ಯಾಂವ" ಎಂದು ಒದರುತ್ತ ಅಕೆಯ ಬೆನ್ನಿಗೆ ಬೆನ್ನುಹಚ್ಚಿ
ಒದರಹತ್ತಿತು. ತುಸು ಹಾಲು ಹಾಕಬೇಕೆಂದು ವಿಚಾರಿಸಿ ಬಟ್ಟಲ
ಇದೇನು ಗೊಂದಲ! ೪೭
ವನ್ನು ತೆಗೆದುಕೊಂಡು ಅದರಲ್ಲಿ ಹಾಲು ಹಾಕಿದಳುು ಅಷ್ಟರಲ್ಲಿ ಆಕೆಗೆ
ಏನನಿಸಿತೋ ಯೂರಿಗೆ. ಗೊತ್ತು! ಓಷಧದ ಶಿಸೆಯನ್ನು ತೆಗೆದು
ಹಾಲಿನಲ್ಲಿ ೮-೧೦ ಹನಿಗಳನ್ನು ಹಾಕಿದಳು. ಬೆಕ್ಕು ಹಾಲು
ಹಾಕುತ್ತಿರುವದನ್ನು ಕಂಡು ಓಡುತ್ತ ಬಂದು ಔಷಧ ಹಾಕುತ್ತಿರು
ವಾಗಲೇ ಕುಡಿಯ ಹತ್ತಿತು. ತುಸು ಹೊತ್ತಿನ ಮೇಲೆ ಬೆಕ್ಕು ಹಾಲು
ಕುಡಿದು ಕೃತಜ್ಞತೆಯಿಂದ ಸರಸ್ವತಿಯ ಹತ್ತರವೇ ಓಡಾಡುತ್ತಿತ್ತು.
ಸರಸ್ವತಿಯಾದರೂ ಬೆಕ್ಕಿನ ಬೆನ್ನ ಮೇಲೆ ಕೈಯಾಡಿಸುತ್ತ ಕುಳಿ
ತಳು. ೫-೬ ನಿಮಿಷಗಳ ತರುವಾಯ ಬೆಕ್ಕು ಬಹಳೇ ಒದರ
ಹತ್ತಿತು. ಇದನ್ನು ಕಂಡು ಆದಕ್ಕೆ ಮತ್ತೆ ಹಾಲುಬೇಕೆಂದು ಎಣಿಸಿ
ಮತ್ತೆ ತುಸು ಹಾಲನ್ನು ಹಾಕಿ ಅದರ ಮುಂದೆ ಇಟ್ಟಳು, ಅದರೆ ಅದು
ಹಾಲು ಕುಡಿಯದೆ ಉರಳಾಡಿ ಒಂದೇಸವನೇ ಒದರಹತ್ತಿತು. ಸಹಜ
ವಾಗಿ ಆಕೆಗೆ ಸಂಶಯ ಬಂದು ಬಟ್ಟಲವನ್ನು ನೋಡಿದಳು.
ಹಾಲು ಹಚ್ಚಗೆ ಹಸರಾಗಿದ್ದು, ವಾಸನೆಯೆಂಥದೋ ಅದಕ್ಕೆ ಬರು
ತ್ತಿತ್ತು; ಆಕೆಯು ಶಿಸೆಯ ವಾಸನೆಯನ್ನು ನೋಡಿದಳು. ಔಷ
ಧವೇ ಹಾಗಿರಬಹುದೆಂದು ಶಿಸೆಯನ್ನು ಕೆಳಗಿಟ್ಟಳು. ಬೆಕ್ಕು
ಅಷ್ಟೊತ್ತಿನಲ್ಲಿ ಮರಣೋನ್ಮುಖವಾಗಿ ಬಳಲುತ್ತ ಕೆಳಗೆ ಬಿದ್ದಿತು.
ಸರಸ್ವತಿಯು ಗಾಬರಿಯಾದಳು. ಔಷಧವು ಏನೋ ಘಾತಕವಿರಬಹು
ದೆಂದು ನಂಬಿ ಬಿಟ್ಟಲವನ್ನು ಮುಚ್ಚಿ ಅಲ್ಲಿಯೇ ಇಟ್ಟು ಹಾಲು
ತೆಗೆದುಕೊಂಡು ತಂದೆಯವರ ಕೋಣೆಗೆ ಹೋದಳು. ಹೋಗುತ್ತ
ಹೋಗುತ್ತ ಬೆಕ್ಕು ಸಾಯುತ್ತಿರುವದನ್ನು ಕಂಡಳು. ತಂದೆಯವರು
ಮಲಗಿದ್ದರು; ತಾಯಿಯು ಎಚ್ಚರವಿದ್ದು ಹತ್ತಿರವೇ ಕುಳಿತಿದ್ದಳು.
ತಾಯಿಯ ಮುಂದೆ ಇದನ್ನೆಲ್ಲ ಹೇಳಬೇಕೆಂದು ಮಾಡಿದಳು; ಅದರೆ
ಮತ್ತೆ ಯಾವ ಕಾರಣದಿಂದಲೋ ಹೇಳಲೇ ಇಲ್ಲ. ತಂದೆಯ
ವರನ್ನು ಎಚ್ಚರಿಸ ತುಸು ಹಾಲು ಕುಡಿಸದಳು, ಔಷದವನ್ನು ಮಾತ್ರ
ಆಕೆಯು ಎಲ್ಲಿಯೋ ಇಟ್ಟುಬಿಟ್ಟಳು.
೪೮ ಸಮಾಜರಹಸ್ಯ.
ಏನೂ ಸಂಭವಿಸದಂತೆ ಮತ್ತೆ ತಂದೆಯ ಹತ್ತರ ಸ್ವಸ್ಥಚಿತ್ತ
ದಿಂದ ಕುಳಿತಳು. ಬರಬರುತ್ತ ಮುಂಬೈಯು ಶಾಂತವಾಗಹತ್ತಿತು.ಶ
೧೮ ತಾಸುಗಳ ವರೆಗೆ ಸಪ್ಪಳದ ಧ್ವನಿಗೆ ಬೇಸತ್ತಿದ್ದ ಜನರೆಲ್ಲರು
ಶಾಂತತೆಯುಂಟಾದ ಕೂಡಲೇ ನಿದ್ರಾದೇವಿಯನ್ನು ಧ್ಯಾನಿಸಹತ್ತಿದರು.
ಆಕೆಯಾದರೂ ಜನರು ಬಹಳ ದಣಿದಿರುವರೆಂದು ಕಂಡು ಎಲ್ಲರನ್ನು
ಚಪ್ಪರಿಸಹತ್ತಿದಳು. ಎಲ್ಲ ಕಡೆಯಲ್ಲಿಯೂ ಶಾಂತತೆಯ ರಾಜ್ಯವೆ
ಹಬ್ಬಿತು.
ನಮ್ಮ ಕುಟುಂಬದವರ ಕೂಡ ಮಾತ್ರ ನಿದ್ರಾದೇವಿಯು ಸಂ
ಪ್ತಳಾಗಿದ್ದಳು. ಸರಸ್ವತಿಯಾದರೂ ಆಕೆಯನ್ನು ಲೆಕ್ಕಸುತ್ತಿದ್ದಿಲ್ಲ.
ತಂದೆಯ ಶುಶ್ರೂಷೆಯಲ್ಲಿ ತತ್ಪರಳಾಗಿದ್ದ ತನ್ನನ್ನು ನಿದ್ರಾದೇವಿಯು
ಸಿಟ್ಟಿನ ಭರದಲ್ಲಿ ಪೀಡಿಸಲಿಕ್ಕೆ ಬಂದಿದ್ದರೆ ಆಕೆಯನ್ನು ಒದೆದು
ನಿಶ್ಚೇಷ್ಟಿತಳಾಗಿ ಮಾಡಬೇಕೆಂಬ ಮನೋಧೈರ್ಯದಿಂದಲೇ ನಮ್ಮ
ಸರಸ್ವತಿಯು ಕುಳಿತಿದ್ದಳು. ಕಡೆಗೆ ಗಡಿಯಾರವು ನಿದ್ದೆಯಿಂದ
ಎದ್ದು ಬಲದಿಂದ ನಾಲ್ಕ ಗಂಟೆಗಳನ್ನು ಹೊಡೆಯಿತು. ತೂಕಡಿಕೆ
ಯಿಂದ ತಲೆಬಾಗಿಸಿಕೊಂಡು ಕುಳಿತಿದ್ದ ಮನೋರಮಾಬಾಯಿಯ
ವರು ಪೂರ್ಣ ಎಚ್ಚತ್ತು ಸಾವರಿಸಿಕೊಂಡು ಕುಳಿತರು. ನಿಮಿಷಾರ್ಧ
ದಲ್ಲಿಯೇ ಬಾಗಿಲದ ಮೇಲೆ ಸಾವಕಾಶವಾಗಿ ಯಾರೋ ಬಡಿಯುತ್ತಿ
ರುವಂತೆ ಸಪ್ಪಳವಾಯಿತು. ಮನೋರಮಾಬಾಯಿಯವರು ಇಷ್ಟು
ರಾತ್ರಿಯಲ್ಲಿ ಯಾರು ಬಂದರೆಂದು ಅಂಜುತ್ತಂಜುತ್ತ ಬಾಗಿಲು
ತೆಗೆದರು. ಮಾಧವನು ಮುುಂಜಾನೆ ಬರಬಹುದೆಂದು ಅವರೆ
ಲ್ಲರ ಎಣಿಕೆ; ಆದರೆ ಬಾಗಿಲ ತೆರೆದ ಕೂಡಲೆ ಮಾಧವನು ಕಾಣಿಸಿ
ದನು. ಮನೋರಮಾಬಾಯಿಯವರಿಗೆ ಮತ್ತ ದುಃಖಾವೇಗವು ಬಂದಿ
ತು. ಹೀಗೆ ಒಮ್ಮೆಲೇ ತಾಯಿಯು ಅಳುವದನ್ನೂ ಮಂಚದ ಮೇಲೆ
ಸರಸ್ವತಿಯು ಏಕಾಗ್ರಚಿತ್ತದಿಂದ ಚಿಂತಾಕುಲಳಾಗಿ ಯಾರದೋ
ಭ್ರಮ-ನಿರಸನ. ೪೯
ಹತ್ತರ ಕುಳಿತಿರುವದನ್ನೂ ಕಂಡು ಆತನೂ ಸಹ ಗಾಬರಿಯಾದನು.
ತಾಯಿಯನ್ನು ತಬ್ಬಿಕೊಂಡು ಎಬ್ಬಿಸುತ್ತ " ಇದೇನು ಗೊಂದಲ ? "
ಎಂದು ಕೇಳಿದನು.
=======
ಆರನೇ ಪರಿಚ್ಚೇದ.
ಭ್ರಮ-ನಿರಸನ.
ಶ್ರೀನಿವಾಸರಾಯರು ಒಮ್ಮೆಲೇ ಮರಣೋಮ್ಮುಖರಾಗಿ ಹಾಸಿ
ಗೆಯನ್ನು ಹಿಡಿಯುವಷ್ಟು ಕಾರಣವೇನೆಂಬದು ತಿಳಿಯದೆ
ನಮ್ಮ ಪ್ರಿಯವಾಚಕರು ದಿಗಿಲುಗೊಂಡಿರಬಹುದು.
ಆದ್ದರಿಂದ ಮೊದಲು ಅವರ ಬೇನೆಯ ಕಾರಣವನ್ನು ಹೇಳಿ
ಮುಂದಿನ ಕಥಾ-ಭಾಗಕ್ಕೆ ಹತ್ತಬೇಕೆಂದು ಯೋಚಿಸದ್ದೇವೆ.
ಸರಸ್ವತಿಗೂ, ಮನೋರಮಾಬಾಯಿಯವರಿಗೂ ಇದರ
ಕಾರಣವು ಶ್ರೀನಿವಾಸರಾಯರು ತಮ್ಮ ಪರಮ ಮಿತ್ರರೆಂದು ಹೇಳಿ
ಕೊಂಡ ವೈದ್ಯರ ಮುಖದಿಂದ ತಿಳಿದೇ ಇರುವದು.
ಮುಂಬಾಪುರದಲ್ಲಿ ಕಬ್ಬಿಣ ಕಾರಖಾನೆಯನ್ನು ನಡೆಸುತ್ತಿದ್ದ
' ಟಾಟಾ ಮತ್ತು ಕಂಪನಿ, ' ಎಂಬವರ ಕಚೇರಿಯಲ್ಲಿ ಶ್ರೀನಿವಾಸ
ರಾಯರು ತಿಂಗಳೊಂದಕ್ಕೆ ಎರಡುನೂರು ರೂಪಾಯಿ ಸಂಬಳದ
ಮೇಲೆ ಕೆಲಸ ಮಾಡುತ್ತಿದ್ದರು, ಶ್ರೀನಿವಾಸರಾಯರು ಎಲ್. ಸೀ.
ಈ. ಎಂಬ ಪರೀಕ್ಷೆಯಲ್ಲಿ ಮೊದಲನೇ ತರಗತಿಯಲ್ಲಿ ಉತ್ತ್ರೀರ್ಣರಾ
ದ್ದರಿಂದ ಮೇಲೆ ಹೇಳಿದ್ದ ಪ್ರಸಿದ್ಧ ಕಂಪನಿಯವರು ಒಮ್ಮೆಲೇ ಇವ
ರನ್ನು ೧೫೦ ರೂಪಾಯಿ ಸಂಬಳದ ಮೇಲೆ ತಮ್ಮಲ್ಲಿ ಇಟ್ಟು ಕೊಂಡಿ
ದ್ದರು. ಮುಂದೆ ಇವರ ಕಾರ್ಯದಕ್ಷತೆಯನ್ನೂ, ಜಾಣತನವನ್ನೂ
ನೋಡಿ ಕಂಪನಿಯವರು ಇವರ ಸಂಬಳವನ್ನು ಎರಡು ನೂರು
೫೦ ಸಮಾಜರಹಸ್ಯ,.
ರೂಪಾಯಿವರೆಗೆ ಹೆಚ್ಚಿಸಿದ್ದಲ್ಲದೆ ಮತ್ತೆ ಕಲವು ಕಾರ್ಯಗಳನ್ನು
ಮಾಡಿಸಿಕೊಂಡು ಮೇಲಿಂದ ಮೇಲೆ ' ಇನಾಮು ' ಎಂದು ಎಷ್ಟೋ
ಹಣವನ್ನು ಕೊಡುತ್ತಿದ್ದರು, ಕಂಪನಿಯವರ ವಿಶ್ವಾಸವು ಶ್ರೀನಿವಾಸ
ರಾಯರಮೇಲೆ ದಿನೇದಿನೇ ಬೆಳೆಯಹತ್ತಿತು. ಶ್ರೀನಿವಾಸರಾಯರಿಗೆ
ಸ್ಥಾನಿಕ ಆದಾಯವಿಲ್ಲದ್ದರಿಂದ ಕೂಡಿಸಿದ ಹಣವನ್ನೆಲ್ಲ ' ಮುಂಬ
ಯಿಯ ವ್ಯಾಪಾರಿಸಂಘ ದಲ್ಲಿ ತೊಡಗಿಸಿದ್ದರು. ಹೀಗೆ ಮಾಡಿದ್ದ
ರಿಂದ ಅವರಿಗೆ ವ್ಯಾಪಾರದ ಲಾಭವೆಂದು ವರ್ಷಕ್ಕೆ ನೂರಾರು
ರೂಪಾಯಿಗಳು ಬರುತ್ತಿದ್ದವು ಮುಂದೆ ಚಾಕರಿಯ ಬೇಸರಿ
ಕೆಯು ಬಂದ ಮೇಲೆ ಸಂಘದ ತಮ್ಮ ಪಾಲುಗಳನ್ನು (Shares)
ಮಾರಿ, ಬಂದೆ ದುಡ್ಡಿನಿಂದ ಹೊಲಮನೆಗಳನ್ನು ಕೊಂಡು ಯಾವದಾದ
ರೂ ಒಂದು ಹಳ್ಳಿಯಲ್ಲಿ ಸುಖದಿಂದ ಕಾಲಕಳೆಯ ಬೇಕೆಂದು ಯೋಚಿ
ಸಿದ್ದರು. ಮನುಷ್ಯನ ಇಚ್ಛೆಯೊಂದು ದೇವರು ಮಾಡುವದೊಂದು !!
ಶ್ರೀನಿವಾಸರಾಯರು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಂದಿ
ನಿಂದ ಅಲ್ಲಿಯೇ ಅಚ್ಛುತರಾಯನೆಂಬ ಒಬ್ಬ ಪ್ರತಿಸ್ಕರ್ಧಿಯು ಉದ
ಯನಾಗಕುತ್ತಿದನು. ಅಚ್ಯುತರಾಯನು ಶ್ರೀನಿವಾಸರಾಯರ ಏಳ್ಗೆ
ಯನ್ನು ನೋಡಿ ಅವರನ್ನು ಬಹಳ ದ್ವೇಷಿಸುತ್ತಿದ್ದನು. ಇವರ ಏಳ್ಗೆಗೆ
ಆತನು ಹಲ್ಲುಕಚ್ಚುತ್ತಿದ್ದನು. ಕಂಪನಿಯವರು ಶ್ರೀವಿವಾಸರಾಯ
ರನ್ನು ಇಷ್ಟು ಪ್ರೀತಿಸುದ್ದದ್ದನ್ನು ಕಂಡು ಅತನು ಮತ್ಸರ ತಾಳಿ
ದ್ದನು. ಆತನಾದರೂ ಶ್ರೀನಿವಾಸರಾಯಷ್ಟೇ ಕಲಿತವನಿದ್ದನು. ಅದರೆ
ಆತನು ಮಹಾಕಾರಸ್ಥಾನಿಯು, ಯಜಮಾನರ ಸೇವೆಯನ್ನು ವಿಶ್ವಾಸ
ದಿಂದ ಮಾಡದೆ ಕಪಟನಾಟಕದಿಂದ ಕಂಪನಿಯ ದುಡ್ಡು ಎತ್ತಿ
ಹಾಕಿ ಶ್ರೀಮಂತನಾಗಬೇಕೆಂಬದೇ ಆತನ ರಾಕ್ಷಸೀಮಹತ್ವಾ
ಕಾಂಕ್ಷೆಯು. ತಾನು ಕಂಪನಿಯಲ್ಲಿ ಶ್ಶೀನಿವಾಸರಾಯರಿಗಿಂತ
ಹೆಚ್ಚು ವರ್ಷ ದುಡಿದದ್ದದರಿಂದ ಅವರು ಈಗಿದ ಸ್ಥಳಕ್ಕೆ ತಾನು
ಭ್ರಮ-ನಿರಸನ. ೫೧
ಯೋಗ್ಯನಿದ್ದು ಕಂಪನಿಯವರು ಆ ಸ್ಥಳವನ್ನು ಶ್ರೀನಿವಾಸರಾಯ
ರಿಗೆ ಕೊಟ್ಟದ್ದರಿಂದ ಅತನ ಮತ್ಸರವು ಈಗೀಗ ಬಹಳೇ ಹೆಚ್ಚತ್ತು.
ಕಂಪನಿಯೊಳಗಿಂದ ಈ ಮನುಷ್ಯನನ್ನು ಹೊರಗೆಡವದೆ ತನ್ನ
ಏಳ್ಗೆಗೆ ಆಸ್ಪದವಿಲ್ಲೆಂದು ಅತನು ಈಗ ಪೂರ್ಣವಾಗಿ ಮನಗಂಡಿ
ದ್ದನು. ಅದಕ್ಕಾಗಿ ಅತನು ಎಷ್ಟೋ ಸುಳ್ಳ ಸುದ್ದಿಯನ್ನು ಹುಟ್ಟಿಸಿ
ಶ್ರೀನಿವಾಸರಾಯರ ವಿಷಯಕ್ಕೆ ಕಂಪನಿಯವರ ಮನುಸ್ಸು ಕಲುಷಿ
ತವಾಗುವಂಕೆ ಮಾಡಲು ಯತ್ನಿಸುತ್ತಿದ್ದನು. ಅದರೆ ಪ್ರತಿಸಾರೆ ಆತನ
ಪ್ರಯತ್ನವು ನಿಷ್ಫಲವಾಗಿದ್ದಲ್ಲದೆ ಪ್ರತಿಸಾರೆಯು ತಾನೇ ಅವಿಶ್ವಾಸುಕ
ನೆಂದು ನಿರ್ಣಯಿಸಲ್ಪಡುತ್ತೇನೆಂದು ಕಂಡದ್ದರಿಂದಂತೂ ಆತನು
ಭಯಂಕರ ಕೃತ್ಯಕ್ಕೆ ಎದುರಾಗಿದ್ದನು.
ಶ್ರೀನಿವಾಸರಾಯರು ನಿಶ್ಚೇಷ್ಟಿತರಾಗಿ ಮನೆಯನ್ನು ಪ್ರವೇಶಿ
ಸಿದ ದಿವಸ ಮುಂಜಾನೆ ೧೦ ಗಂಟೆಗೆ ಊಟಮಾಡಿ ತಮ್ಮ ಕಾರ್ಯಾ
ಲಯಕ್ಕೆ ಹೋಗಿ ತಮ್ಮ ಕಾರ್ಯದಲ್ಲಿ ತೊಡಗಿದರು. ಅಚ್ಯುತರಾ
ಯನು ಶ್ರೀನಿವಾಸರಾಯರು ಬಂದರೆಂದುಕಂಡು ನಮ್ರತೆಯಿಂದ ಆವ
ರಿಗೆ ತಲೆಬಾಗಿ ನಮಸ್ಕರಿಸಿದನು. ಶ್ರೀನಿವಾಸರಾಯರು ಅವನಿಗೆ
ಕೂಡ್ರಲಿಕ್ಕೆ ಮತ್ತೊಂದು ಕುರ್ಚಿಯನ್ನು ಕೊಟ್ಟು ತುಸು ಹೊತ್ತು
ಯುದ್ಧದ ಸುದ್ದಿಗಳನ್ನು ಮಾತಾಡುತ್ತ ಕುಳಿತರು. ಅಚ್ಚುತರಾಯನು
ಅತಿ ನೀಚನೆಂದು ಅವರಿಗೆ ಎಂದೂ ತೋರಿದ್ದಿಲ್ಲ, ಆತನೂ ಸಜ್ಜನನೇ
ಎಂದು ಶ್ರೀನಿವಾಸರಾಯರು ತಿಳಕೊಂಡಿದ್ದರು.
ಸಜ್ಜನರು ಸರ್ವಜಗತ್ತು ತಮ್ಮಂತೆಯೇ ಸುಗುಣಪರಿಪೂರಿತ
ವಾಗಿರುವದಂದು ತಿಳಿಯುತ್ತಾರೆ ದುರ್ಜನರ ಕೆಟ್ಟ ಕೃತಿಗಳ ಅಂತೆ
ರಂಗವು ಸುಜನರ ಅಂತಃಕರುಣಕ್ಕೆ ತಿಳಿಯುವಷ್ಟು ಅವರ ಹೃದ
ಯವು ಕಠೋರವಾಗಿರುವದಿಲ್ಲ ಶ್ರೀನಿವಾಸರಾಯರು ಅಚ್ಚುತರಾ
ಯನ ಒಳ್ಳೇ ಮನುಷ್ಯನೆಂದು ತಿಳಿದು ಆತನ ಸಂಗಡ ಯಾವಾ
೫೨ ಸಮಾಜರಹಸ್ಯ.
ಗಲೂ ಪ್ರೀತಿಯಿಂದಲೇ ನಡಕೊಳ್ಳುತ್ತಿದ್ದರು. ಅಚ್ಛುತರಾಯನು
ಎದ್ದು ಹೋದನಂತರ ಶ್ರೀನಿವಾಸರಾಯರು ಮತ್ತೆ ತಮ್ಮ ಕೆಲಸದಲ್ಲಿ
ತೊಡಗಿರಲು ಸಿಪಾಯಿಯು ಶ್ರೀನಿವಾಸರಾಯರ ಕೈಯ್ದಲ್ಲಿ ಒಂದು
ಪತ್ರವನ್ನು ತಂದುಕೊಟ್ಟನು ಲಗೆಬಿಗೆಯಿಂದ ಮೇಲ್ಕಾಗದವನ್ನು
ಹರಿದು ಪತ್ರವನ್ನು ಓದಹತ್ತಿದರು, ವಾಚಕರಿಗೆ ಅದರ ರಹಸ್ಯವು
ತಿಳಿಯಬೇಕೆಂದು ಅದರ ಸಾರಾಂಶವನ್ನೇ ಇಲ್ಲಿ ಕೊಡುತ್ತೇವೆ.
' ಹೆಡ್ ಆಫೀಸ ' " ವ್ಯಾಪಾರಿ ಸಂಘ ಆಫೀಸ”
ಲಂಡನ್ ೫೭ ಘೋರ್ಟರೋಡ
ಮುಂಬಯಿ.
ಮಹನೀಯರೇ,
ಹೆಡ್ ಆಫೀಯಿನಿಂದ ಇದೇ ಈಗ ತಾರುಬಂದಿರುವದು. ಮಾಲು
ಗಳನ್ನು ತುಂಬಿಕೊಂಡು ಕೆಲವು ಹಡಗಗಳು ಆಫ್ರಿಕೆಗೂ, ಕೆಲವು
ಹಿಂದುಸ್ತಾನಕ್ಕೂ ಬರುತ್ತಿರಲು ಜರ್ಮನರ ವಿಮಾನದಲ್ಲಿಯ ತೋಫಿನ
ಗುಂಡಿಗೆ ಬಲಿಯಾಗಿ ಎಲ್ಲ ಹಡಗಗಳು ಜಲಸಮಾಧಿಯನ್ನು ಹೊಂದಿ
ದವು. ಆದ್ದರಿಂದ ಸಂಘವು ಇಂದು ಮುರಿಯಲ್ಲಟ್ಟು ಪಾಲುಗಾರರ
ಹಣವನ್ನು ಸಹ ಕೊಡಲು ನಾವು ಈಗ ಶಕ್ತರಿಲ್ಲೆಂದು ತಿಳಿಸಲು
ಪರಾಕಷ್ಟದ ದುಃಖವಾಗುತ್ತದೆ.
ಮ್ಯಾನೇಜರ.
ಪತ್ರವನ್ನು ಓದಿ, ತಮ್ಮ ಜೀವಿತ ಸರ್ವಸ್ವವೂ, ಇಂದು ಜಲ
ಸಮಾಧಿಯನ್ನು ಹೊಂದಿತೆಂದು ಕಂಡು ಶ್ರೀನಿವಾಸರಾಯರ ತಲೆತಿರು
ಗಿದಂತಾಗಿ ಎದೆಎದೆ ಬಡಕೊಂಡು ಒದರುತ್ತ ಕುಂರ್ಚಿಯ ಮೇಲಿಂದ
ನಿಶ್ಚೇಷ್ಠಿತರಾಗಿ ದೊಪ್ಪನೆ ಕೆಳಗೆ ಬಿದ್ದರು, ಅವರ ಅಕ್ರೋಶವನ್ನು
ಕೇಳಿ ಹತ್ತರದ ಕೋಣೆಯಲ್ಲಿಯೇ ಬರೆಯುತ್ತ ಕುಳಿತಿದ್ದ ಅಚ್ಚತರಾ
ಯನು ಓಡಿಬಂದು ಇದೇನು ಗದ್ದಲವೆಂದು ನೋಡಿದನು. ಶ್ರೀನಿವಾಸ
ರಾಯರ ನೆತ್ತಿಗೆ ವಿದ್ಯುಲ್ಲತೆಯಿಂದ ತಿರಗುವ ಬೀಸಣಿಕೆಯ
ಭ್ರಮ-ನಿರಸನ. ೫೩
( Electric fan) ಭಯಂಕ್ರ. ಆಫಘಾತವಾಗಿ ಅದರೊಳಗಿಂದ
ಅತುಲ ರಕ್ತವು ಹರಿಯುತ್ತಿದ್ದದ್ದು ಆತನಿಗೆ ಕಾಣಿಸಿತು. ಕೂಡಲೇ
ಸಿಪಾಯಿಯನ್ನು ಕರೆದು ವೈದ್ಯನಾದ ತನ್ನ ಒಬ್ಬ ಮಿತ್ರನ ಕಡೆಗೆ
ಚೀಟಿಯನ್ನು ಬರೆದು ಕಳುಸಿದನು. ವೈದ್ಯರು ಕೂಡಲೇ ಬಂದರು.
ಇಷ್ಟರಲ್ಲಿಆಚ್ಛುತಂರಾಯನು ಮೇಜಿನ ಮೇಲೆ ಬಿದ್ದಿದ್ದ ಸಂಘ
ದವರ ಕಾಗದವನ್ನು ಓದುತ್ತಿದ್ದನು ವೈದ್ಯರು ಬಂದ ಮೇಲೆ
ಅವರಿಗೆ ಸಂಘದ ಸುದ್ದಿಯನ್ನು ಹೇಳಿ ಅದಕ್ಕಾಗಿ ಅವರು ಎದೆಯೊಡ
ಕೊಂಡಿರಬಹುದೆಂದು ಸೂಚಿಸಿದನು. ವೈದ್ಯರು ಗಾಯವನ್ನು ಕಟ್ಟಿ
ಔಷದೋಪಚಾರಗಳನ್ನು ಮಾಡಿ ಸಿಪಾಯಿಯ ಸಹಾಯದಿಂದ
ಮಂಚದ ಮೇಲೆ ಮಲಗಿಸಿದರು. ವೈದ್ಯರು ತುಸು ಹೊತ್ತು ಅಚ್ಚುತ
ರಾಯನ ಸಂಗಡ ಮಾತನಾಡುತ್ತ ಕುಳಿತರು. " ಗಾಯವು ಬಹಳವಾ
ಗಿರುವದು ಮೇಲಾಗಿ ಅಂತರ್ವೇದನೆ, ಇದರೊಳಗಿಂದ ಶ್ರೀನಿವಾಸ
ರಾಯರು ಉಳಿಯುವದು ದುರ್ಲಭವೇ? ಎಂದು ಹೇಳಿದರು. ಅಚ್ಚುತ
ರಾಯನಿಗೂ ಅದೇ ಬೇಕಾಗಿತ್ತು. ಇನ್ನು ನೀವೇ ಹೋಗಿ ಶ್ರೀನಿವಾಸ
ರಾಯರನ್ನು ಅವರ ಮನೆಗೆ ಒಯ್ದು ಕುಟುಂಬದವರಿಗೆ ಎಲ್ಲವನ್ನು
ಹೇಳಿ ಔಷದಕೊಟ್ಟಂತೆ ತೋರಿಸಿ ಬನ್ನಿರೆಂದು ಹೇಳಿದನು. ಮೊದಲು
ವೈದ್ಯರು ಒಲ್ಲೆಂದು ಅನ್ನಹತ್ತಿದರು. ಕಡೆಗೆ ಅಚ್ಯುತರಾಯನು ೧೦೦
ರೂಪಾಯಿ ನೋಟನ್ನು ತೆಗೆದು ಅವರ ಕೈಯ್ಯಲ್ಲಿಟ್ಟು ಇನ್ನಾದರೂ
ಹೋಗಿರೆಂದು ಹೇಳಿದನು. ತಾವು ಕೆಲಸ ಮಾಡಹತ್ತಿದಿಂದ ಇನ್ನುವರೆಗೆ
ಇಷ್ಟು ರೂಪಾಯಿಗಳನ್ನು ತಮಗೆ ಯಾರೂ ಕೊಟ್ಟಿಲ್ಲವಾದ್ದರಿಂದ
ಹಿಗ್ಗಿ ಲಗುಬಿಗೆಯಿಂದ ಗಾಡಿಯನ್ನು ತರಿಸಿ ಶ್ರೀನಿವಾಸರಾಯರನ್ನು
ತಕ್ಕೊಂಡು ಮನೆಗೆ ಬಂದರು. ಎರಡು ಗಂಟೆಯ ಸುಮಾರಕ್ಕೆ ಸರ
ಸ್ವತಿಯು ಪತ್ರವನ್ನು ಓದುತ್ತ ನಿಂತಿರಲು ಆಕೆಯು ತಂದೆಯನ್ನು
ಹೇಗೆ ಅಕಸ್ಮಿಕವಾಗಿ ನೋಡಿದಳೆಂಬದೂ ಮನೋರವಮಾಬಾಯಿಯ
ವರ ಸ್ಥಿತಿಯು ಹೇಗೆ ಆಯಿತೆಂಬದೂ ವಾಚಕರಿಗೆ ಈ ಮೊದಲೇ
೫೪ ಸಮಾಜರಹಸ್ಯ.
ಹೇಳಿರುವೆವು. ಮುಂದೆ ವೈದ್ಯರು ಔಷಧವನ್ನು ಕೊಟ್ಟು ಶ್ರೀನಿವಾಸ
ರಾಯರ ಮನಯನ್ನು ಬಟ್ಟವರೇ ಅಚ್ಛತರಾಯನ ಹತ್ತರ ಬಂದರು.
ತನ್ನ ಪ್ರತಿಸ್ಪರ್ಧೆಯನ್ನು ಪೃಥ್ವಿಯ ಮೇಲೆ ಇರಗೊಡದಿರುವದಕ್ಕೆ
ಇದು ಒಳ್ಳೇ ಸಮಯುವೆಂದು ತಿಳಿದು ಔಷಧದಲ್ಲಿ ವಿಷವನ್ನು ಕೂಡಿಸಿ
ತೀವ್ರವೇ ಮರಣಕ್ಕೆ ಗುರಿಯಾಗುವ ಹಾಗೆ ಮಾಡಬೇಕೆಂದು ಅಚ್ಚತ
ರಾಯನು ವೈದ್ಯರಿಗೆ ಹೇಳಿ ಮತ್ತೆ ೫೦೦ ರೂಪಾಯಿಗಳನ್ನು ಕೊಟ್ಟು
ಅವರ ಮನೆಯಲ್ಲಿ ಯಾರು ಯಾರು ಇದ್ದರೆಂದು ಕೇಳಿಕೊಂಡು
ವೈದ್ಯರಿಗೆ ಹೋಗಲು ಅಪ್ಪಣೆಯನ್ನಿತ್ತನು. ಮುಂದೆ ಆ ಔಷಧವು ಹೇಗೆ
ಸರಸ್ವತಿಗೆ ಗೊತ್ತಾಯಿತೆಂಬದೂ, ವೈದ್ಯರು ಔಷದ ಕೊಟ್ಟು ಮನೆಗೆ
ಹೋಗುತ್ತಿರಲು ಅವರ ಮುಖಚರ್ಯದಲ್ಲಿ ಆದ ವ್ಯತ್ಯಯವನ್ನು
ನೋಡಿ ಸಂಶಯಪಟ್ಟ ಸರಸ್ವತಿಯು ಆ ಓಷಧವನ್ನು ಬೆಕ್ಕಿನ ಮೇಲೆ
ಹೇಗೆ ಪ್ರಯೋಗಿಸಿ ನೋಡಿದಿಳೆಂಬದು ನಮಗ ಈ ಮೊದಲೇ ಗೊತ್ತಿ
ರುವದು. ಇರಲಿ. ಇತ್ತ ಮಾಧವನು ಬಂದ ತುಸು ಹೊತ್ತಿನಲ್ಲಿಯೇ
ಶ್ರೀನಿವಾಸರಾಯರಿಗೆ ಬಹಳೇ ಜ್ವರ ಬಂದು ತಲೆನೋವು ತಾಳಲಾರದೆ
ಅವರು ಒದರಹತ್ತಿದರು. ಮಾಧವನು ತಾಯಿಯನ್ನು ಎಚ್ಚರಿಸಿ
ತಂದೆಯ ಹತ್ತರ ಹೋಗಿ ಕುಳಿತು “ ಅಪ್ಪ ನಿಮಗೇವಾಗುವದು? "
ಎಂದು ಕೇಳಿದನು, ಶ್ರೀನಿವಾಸರಾಯರು ತಾವು ಇನ್ನು ಈ ಅಂತ
ರ್ವೇದಗಳೊಳಗಿಂದಲೂ, ತಲೆ ನೋವಿನೊಳಗಿಂದಲೂ ಜೀವದಿಂದ
ಉಳಿಯುವದಿಲ್ಲೆಂದು ಕಂಡು ಆದ ಸುದ್ದಿಯನ್ನೆಲ್ಲ ತಮ್ಮ ಕುಟುಂಬಕ್ಕೆ
ಹೇಳೆ ಎಲ್ಲರ ಕ್ಷಮೆಯನ್ನು ಬೇಡಿಕೊಂಡು, ಎಲ್ಲರಿಂದಲೂ ತಮ್ಮ
ಕಡೆಯ ಅಪ್ಪಣೆಯನ್ನು ತೆಗೆದು ಕೊಳ್ಳಬೇಕೆಂದೂ ಮಾತಾಡಲಿಕ್ಕೆ
ಯತ್ತಿಸಹತ್ತಿದರು. " ಇನ್ನು ಉಳಿದವರನ್ನೂದರೂ ಸುಖಿಯಾಗಿಡು”
ಎಂದು ಪರಮೇಶ್ವರನಿಗೆ ಹೇಳುವದಕ್ಕೆ ತಮ್ಮ ಕೈಯ್ಯಗಳನ್ನು ಎತ್ತಿ
ಊರ್ಧ್ವದೃಷ್ಟಿಯಿಂದ ಒಮ್ಮೆ ಆಕಾಶದ ಕಡಿಗೆ ನೋಡಿ ಇಹಲೋ
ಕದ ಯಾತ್ರೆಯನ್ನು ಮುಗಿಸಬೇಕಂತಲೇ ಎಲ್ಲರನ್ನು ತಮ್ಮ ಹತ್ತರ
ಭ್ರಮ-ನಿರಸನ ೫೫
ಕರೆದು ಅತಿ ಪ್ರಯಾಸದಿಂದ, ಮೇಲಿಂದ ಮೇಲೆ ಗಂಟಲವನ್ನಿರಿಸಿ
ಕೊಳ್ಳುತ್ತ, ನಿಶ್ಚೇಷ್ಟಿತರಾಗುತ್ತ, ವ್ಯಾಪಾರ ಸಂಘವು ಮುಣುಗಿದ್ದ
ರಿಂದ ಒಮ್ಮೆಲೆ ತಮ್ಮ ಎದೆಯೊಡೆದು ಭಾಸವು ತಪ್ಪಿ ಕುರ್ಚಿಯ
ಮೇಲಿಂದ ಬಿದ್ದದಕ್ಕೆ ತಮಗೆ ಎಷ್ಟು ಪೆಟ್ಟು ಹತ್ತಿರುವದೆಂದು ಹೇಳಿ
ತಾವು ಇನ್ನು ಬಹಳ ಹೊತ್ತು ಬದಕಲಾರವೆಂದೂ ಸಹ ಹೇಳಿದರು.
ಅವರು ಅಂದದ್ದು “ ಮಾಧವಾ ನಿನ್ನ ವಿದ್ಯೆಯನ್ನು ಪೂರ್ಣಮಾಡು
ವಷ್ಟು ನಾನು ಶಕ್ತನಾಗಲಿಲ್ಲ. ಅರ್ಧಹಾದಿಯಿಂದಲೇ ನಾನು ನನ್ನ
ಕರ್ತವ್ಯದಿಂದ ಪರಾನ್ನುಖವಾಗುತ್ತೇನೆ.. ಇದಕ್ಕಾಗಿ ನನ್ನನ್ನು
ಕ್ಷಮಿಸಿ, ಸಮಾಧಾನದಿಂದ ನನಗೆ ಪರಲೋಕಕ್ಕೆ ಹೋಗಗೊಡು.
ನೀನು ಈ ವರ್ಷ ಬಿ.ಎ. ಪರೀಕ್ಷೆಗೆ ಕೂಡುವಿ. ಮುಂದೆ ಎಲ್ಲಿ
ಯಾದರೂ ವಿಶ್ವಾಸದಿಂದ ಚಾಕರಿಮಾಡಿ ನಿನ್ನ ತಾಯಿಯನ್ನೂ
ನಿನ್ನ ತಂಗಿಯನ್ನೂ ರಕ್ಷಿಸು." ಸರಸ್ವತಿಯೂ ಮನೋರಮಾ
ಬಾಯಿಯವರೂ, ದೊಡ್ಡ ಧ್ವನಿಯಿಂದ ಎದೆ ಎದೆ ಬಡಕೊಂಡು
ಅಳಹತ್ತಿದರು. ಶ್ರೀನಿವಾಸರಾಯರು ಸುಮ್ಮನಾಗಿರಿ; ಅಳಬೇಡಿ
ರೆಂದು ಕೈಸೊನ್ನೆಯಿಂದ ಹೇಳಿ ಮುಂದೆ ಆಂದದ್ದು " ಸರಸ್ವತಿ-
ವಿದ್ಯಾಧರನು ಇರುವನು, ನೀನು ಏನೂ ಚಿಂತಿಸಬೇಡ, ನಿನ್ನ ವಿಷ
ಯಕ್ಕೆ ಆತನು ಎಲ್ಲ ವ್ಯವಸ್ಥೆಯನ್ನು ಮಾಡುವನು. " ಮಾಧವನ
ತಿರುಗಿ " ಮಾದವಾ ಸಮಾಜ-ಸೇವೆಗೆ-ನಿನ್ನಿಂದಾದಷ್ಟು ಸಹಾ
ಯಮಾಡು. ದೇವರು ಸಮಾಜರೂಪಿ-ಯಾಗಿ-ದ್ದಾನೆಂಬದನ್ನು ಮರೆಯ
ಬೇಡ, ಸಮಾಜಸೇವೆಯೇ ದೇವರ ಸೇವೆಯು; ಸವಾಜಸೇವೆಯೇ
ಮಾತಾ-ಪಿತೃ ಸೇವೆಯು, " ಶ್ರೀನಿವಾಸರಾಯರಿಗೆ ಬಹಳ ವೇದನೆ
ಗಳಾಗಹತ್ತಿ ಚಡಪಡಿಸಹತ್ತಿದರು. ಸರಸ್ವತಿಯು ಖಿನ್ನಮುಖಯಾಗಿ
ಅಳುತ್ತಲೇ ಎದ್ದು ತಂದೆಯವರ ಕಾಲುಗಳನ್ನು ಒತ್ತಹತ್ತಿದಳು;
ಮಾಧವನು ತುಸು ಹಾಲು ಹಾಕಹತ್ತಿದನು, ಮನೋರಮಾಬಾಯಿ
ಯವರು ಪತಿಯ ತಲೆಗಿಂಬಿನ ಹತ್ತರ ಗಾಯವನ್ನು ನೋಡುತ್ತ
೫೬ ಸಮಾಜರಹಸ್ಯ,
ಕಣ್ಣೀರಿನಿಂದ ಗಾಯವನ್ನು ತೊಳೆಯಹತ್ತಿದ್ದರು; ತುಸು ಸಮಾಧಾನ
ವೆನಿಸಿದ ಮೇಲೆ ಶ್ರೀನಿವಾಸರಾಯರು;--" ಮಾಧವಾ ಇನ್ನು ನಾನು
ನಿಮಿಷಾರ್ಧ-ನಿಮಿಷದವನು; ನಾನು ಇನ್ನು ಬದಕುವದಿಲ್ಲ; ಈ
ವೇದನೆಗಳನ್ನು ನಾನು ಇನ್ನು ಸಹಿಸಲಾರೆನು, ನಾನು ಹೇಳಿದ್ದನ್ನು
ಮರೆಯಬೇಡ ನೆನಪಿನಲ್ಲಿಟ್ಟುಕೊಂಡು ನನ್ನ ಆಜ್ಞೆಯನ್ನು ಪಾಲಿಸಿ,
ನಿನ್ನ ತಾಯಿಗೆ ಸುಖವನ್ನಿತ್ತು, ದೇಶಸೇವೆಯನ್ನು ಮಾಡಿ, ನಿನ್ನ ಮಾ
ತೃಭೂಮಿ ಋಣದೊಳಗಿಂದ ಮುತ್ತನಾಗು, ನಾನು ಮಾತ್ರ ಹುಟ್ಟಿ
ವ್ಯರ್ಧವಾಯಿತು, ಸಮಾಜಕ್ಕೂ, ದೇಶಕ್ಕೂ ನನ್ನಿಂದ ಎಳ್ಳುಷ್ಟಾ
ದರೂ ಸಹಾಯವಾಗಲಿಲ್ಲ, ಆದ್ದರಿಂದ ನಾನು ಮಾಡಬೇಕಾಗಿದ್ದ
ಭಾಗವನ್ನೂ ನಿನ್ನ ಭಾಗವನ್ನೂ ನೀನೇ ಮಾಡಿ ಇಬ್ಬರನ್ನು ಆ ಋಣ
ದಿಂದ ಮುಕ್ತರನ್ನಾಗಿ ಮಾಡು, ಓಮ್ಮೆಲೇ-ನನ್ನ ಹಣವೆಲ್ಲ-ಹೀಗೆ-ಜಲ
ಸಮಾಧಿಯನ್ನು-ಹೊಂದಿದ ಮೇಲೆ ಇನ್ನು ನನ್ನ ಮಕ್ಕಳ ಗತಿಯೇ
ನೆಂದು-ನನಗೆ-ಬಹಳೇ-ತಲೆ ತಿರುಗಿ-ಬಿದ್ದು ಪೆಟ್ಟು ಹಚ್ಚಿಕೊಂಡು ಈ
ಅವಸ್ಥೆಯಿಂದ ಮರಣಹೊಂದುವೆನು, ದೇವರ ಇಚ್ಛೆಯು !!" ತುಸು
ಹೊತ್ತು ಎಲ್ಲ ಕಡೆಗೆ ನೋಡಿ ಮತ್ತೆ ಮಾತಾಡಹತ್ತಿದರು. " ಈ ನನ್ನ
ಪ್ರಿಯ ಸರಸ್ವತಿಯ ವಿವಾಹವನ್ನೂ ನಾನು ಮಾಡಲಿಲ್ಲ, ಅದನ್ನೂ
ನಿನ್ನ ಮೇಲೆಯೇ ಬಿಟ್ಟಿದ್ದೇನೆ, ಆಕೆಗೆ ಪತಿಯನ್ನು ತೋರಿಸಿ ಆಕೆಯ
ಇಚ್ಛೆಯಿಂದಲೂ ನಿನ್ನ ತಾಯಿಯ ಇಚ್ಛೆಯಿಂದಲೂ ಸರಿದೋರುವಂಥ
ಗಂಡನನ್ನು ಹುಡುಕು, " ಸರಸ್ವತಿಯ ಕಡೆಗೆ ನೋಡಿ “ ಸರಸ್ವತೀ,
ಅತಿಶ್ರಮ-ಪಟ್ಟು ನಾನು ಇಲ್ಲಿಯ ವರೆಗೆ ನಿನ್ನನ್ನು ಜೋಕೆಮಾಡಿ
ವಿದಯೆ ಕಲಿಸಿದ್ದೇನೆ, ವಿವಾಹವಾದ ಮೇಲೆ ಪತಿಯ ಸಂಗಡ ಚನ್ನಾಗಿ
ನಡೆದು ಅತನ ಕಾರ್ಯದಲ್ಲಿ ಯಾವಾಗಲೂ ಸಹಾಯಮಾಡಿ, ಸಮಾಜ
ಕಾರ್ಯವನ್ನು ಮಾಡಿ ನಿನ್ನ ಭಗಿನಿಯರನ್ನು ಉದ್ಧರಿಸಿ ನಿನ್ನ ಜೀವಿ
ತ್ವವನ್ನು ಧನ್ಯವಾಗಿ ಮಾಡಿಕೋ; ಇಷ್ಟೆ ನನ್ನ ಹೇಳುವಿಕೆಯು;
ಇದೇ ನನ್ನ ಆಜ್ಞೆಯು.'' ಹೆಂಡತಿಯ ಕಡೆಗೆ ತಿರುವಿ “ ಪ್ರಿಯಳೇ,
ಭ್ರಮನಿರಸನ, ೫೭
ನಿನ್ನ್ನ ಜೀವಕ್ಕಿಂತಲೂ-hಎಚ್ಚಿಗೆ-ನನ್ನನ್ನು ಪ್ರೀತಿಸಿ-ಇಷ್ಟು-ದಿವಸದ
ವರೆಗೆ. ಸತ್ಶೀಲಳಾಗಿ-ನನ್ನ ಸೇವೆಯಲ್ಲಿ-ತತ್ಪರಳಾಗಿ-ನನ್ನ ಕಾರ್ಯದಲ್ಲಿ
ಯಾವಾಗಲೂ-ಸಹಾಯಕಳಾಗಿದ್ದಿ; ಅದರ ಪ್ರತ್ಯು-ಪಕಾರವನ್ನು-
ಮಾಡದೆ, ನಿನಗೆ ಎಳ್ಳಷ್ಟು-ಸುಖೋಪಭೋಗವನ್ನು ಕೊಡದೆ ಇಂದು
ನಿನ್ನನ್ನು ಹೀಗೆಯೇ ಬಿಟ್ಟು ಹೊರಟೆನು, ಅದಕ್ಕಾಗಿ ನೀನೂ ನನ್ನ
ಮೇಲೆ ಸಿಟ್ಟಿಗೇಳಬೇಡ, ಇನ್ನು ನೀನಾದರೂ ಈಶಚಿಂತನೆಯಲ್ಲಿ
ಕಾಲುಕಳೆದು ನಿನ್ನಿಂದಾದಷ್ಟು ಸಮಾಜಕ್ಕೆ ಸಹಾಯವನ್ನು ಮಾಡು,
ಸಣ್ಣ ಹುಡುಗಿಯರನ್ನು ಕೂಡಿಸಿ ವಿದ್ಯೆ ಗೃಹಕೃತ್ಯ ಮುಂತಾದದ್ದನ್ನು
ಕಲಿಸಿ ಅವರಿಗೆ ಎಲ್ಲತರಹದ ಉಪಕಾರವನ್ನು ಮಾಡುತ್ತ ಹೋಗು;
ಸವಾಜಸೇವೆಯೇ ನನ್ನ ಸೇವೆಯು, ಇನ್ನು ಹೆಚ್ಚಿಗೇನು ಹೇಳಲಿ;
ನೀವೆಲ್ಲರೂ ಸುಖಿಯಾಗಿ ಬಾಳಿರಿ, ನಾನು ಇನ್ನು ಹೋಗಿಬರುತ್ತೇನೆ"
ಎಂದು ಕೇಳಿ ಸುಮ್ಮನಾದರು ಆವರ ವೇದನೆಗಳು ಬಹಳೇ ಹೆಚ್ಚಿ
ದವು; ಮಾಧವನು ವೈದ್ಯನನ್ನು ಕರೆತರುವೆನೆಂದು. ಹೇಳಿ ಹೋಗ
ಹತ್ತಿದನು. ಶ್ರೀನಿವಾಸರಾಯರು ಕೈಸೊನ್ನೆಯಿಂದ “ ಬೇಡ-ಇನ್ನು-
ಆ-ತ-ನಲ್ಲಿ-ನನ್ನ-ಉಳಿಸು-ವ ಶಕ್ತಿಯಿಲ್ಲೆ”ಂದು ಹೇಳಿ ತನ್ನ ಹತ್ತರವೇ
ಎಲ್ಲರಿಗೂ ಕುಳ್ಳಿರಲು ಹೇಳಿದರು, ಮಾಧವನು ಉಪಾಯಗಾಣದೆ
ಹತ್ತರ ಅಳುತ್ತ ಕುಳಿತನು. “ ಬಾಳಾ-ಮಾಧವಾ-ಅಳಬೇಡ, ಸರ-
ಸ್ವ-ತಿ ಅಳಬೇಡ, ಪ್ರಿಯಳೇ-ಅಳಬೇಡ ನಾನು ಇನ್ನು-ಸುಖರೂಪದಿಂದ
ಹೋಗುತ್ತೇನೆ. ನೀವು ಸು-ಖಿ-ಯಾಗಿ....? ಎಂದು ಹೇಳುತ್ತಿರಲು
ಶ್ರೀನಿವಾಸರಾಯರ ಪ್ರಾಣೋತ್ಕ್ರಮಣವಾಯಿತು, ಸಹಸ್ರಕರನು
ತನ್ನ ಎಲ ಕೈಗಳನ್ನು ಚಾಚಿ ಶ್ರೀನಿವಾಸರಾಯರ ಪ್ರಾಣಜ್ಯೋತಿ
ಯನ್ನು ತನ್ನ ಜ್ಯೋತಿಯಲ್ಲಿ ಕೂಡಿಸಿಕೊಂಡು ಆನಂದದಿಂದ ರಥ
ವನ್ನು ಹೊಡೆಯುತ್ತ ಸ್ವರ್ಗಾಭಿಮುಖಿಯಾಗಿ ಶ್ರೀನಿವಾಸರಾಯರ
ಅತ್ಮವನ್ನು ಮೇಲಿಂದ ಮೇಲೆ ಮುದ್ದಿಸುತ್ತ ನಡೆದನು.
========
೫೮ ಸಮಾಜರಹಸ್ಯ,
ಏಳನೇ ಪರಿಚ್ಛೇದ.
ತದನಂತರ!
(ಈ ಜಗತ್ತಿನಲ್ಲಿ ಕೆಲವು ವೇಳೆ ದುರ್ಜನರ ಉತ್ಕರ್ಷೆಯೂ
ಆಗುವದು, ಆದರೆ ಸಜ್ಜನರು ದುರ್ಜನರು ತರುವ ವಿಘ್ನ
ಗಳಿಗೆ ಅಂಜದೆ, ತನ್ನ ಸದಾಚಾರವನ್ನು ಬಿಡದೆ, ತಮ್ಮ
ಕರ್ತವ್ಯವನ್ನು ಮಾಡುತ್ತಲೇ ಇರುವರು; ಕಗ್ಗತ್ತಲೆ
ಯನ್ನು ನೂಕುವ ಭಾಸ್ಕರನು ನಭೋಮಂಡಲದಲ್ಲಿ ಮೆರೆಯುವನು;
ಸಜ್ಜನರಿಗೆ ನಿಜವಾದ ಸುಖವೂ ಆನಂದವೂ ದೊರಕುವದು. ನಮ್ಮ
ಅಚ್ಯುತರಾಯನು ತನ್ನ ಕಂಟಕವು ಇಂದು ಅನಾಯಾಸವಾಗಿ ದೂರಾ
ಯಿತೆಂದು ತಿಳಿದು ಹಿಗ್ಗಿದನು. ಆದರೆ ತುಸು ದಿವಸಗಳಲ್ಲಿಯೇ ತನ್ನ
ವೈದ್ಯನು ಶ್ರೀನಿವಾಸರಾಯರ ಮರಣಕ್ಕೆ, ಅಪ್ರತ್ಯಕ್ಷವಾಗಿ ಕಾರ
ಣೀಭೂತನಾಗಿರುವನೆಂದು ನಿರ್ಣಯಿಸಲ್ಪಟ್ಟು ಬಂದಿವಾಸವನ್ನನು
ಭವಿಸಲು ಒಯ್ಯಲ್ಪಟ್ಟನೆಂದು ಕೇಳಿ ಅಚ್ಯುತರಾಯನಿಗೆ ವಜ್ರಾಘಾತ
ವಾದಂತಾಯಿತು, ಒಂದು ದಿವಸ ಅತ್ಯುತರಾಯನು ಹತ್ತು ಗಂಟೆಗೆ
ಊಟಮಾಡಿ ವೀಳ್ಯವನ್ನು ತಿನ್ನುತ್ತ ಕುಳಿತಿರಲು ವರ್ತಮಾನಪತ್ರವು
ಅದೇ ಟಪಾಲಿಗೆ ಬಂದಿತು, ಪತ್ರವನ್ನು ಕೈಯ್ಯಲ್ಲಿ ತೆಗೆದುಕೊಂಡು
ಓದಹತ್ತಿದನು. ಬರಬರುತ್ತ ' ಎಡಿಟರರು ' ತಮ್ಮ ಸ್ಪುಟಲೇಖಗಳಲ್ಲಿ
ಕೆಳಗೆ ಕೊಟ್ಟಂತೆ ತಮ್ಮ ಅಭಿಪ್ರಾಯವನ್ನು ಪ್ರಕಟಿಸಿದ್ದರು.
" ಟಾಟಾ ಮತ್ತು ಕಂಪನಿಯಲ್ಲಿ ವಿಶ್ವಾಸುತನದಿಂದ ಕೆಲಸು
ಮಾಡಿ ಅವರ ಪೂರ್ಣ ಪ್ರೇಮಕ್ಕೆ ಪಾತ್ರರಾಗಿದ್ದ ಮಹಾಶಯರಾದ
ಶ್ರೀನಿವಾಸರಾವ, ಎಲ್, ಸೀ, ಈ. ಇವರು ಮೃತರಾದರೆಂದು ತಿಳಿ
ಸಲು ನನಗೆ ಅತ್ಯಂತ ವಿಷಾದವೆನಿಸುತ್ತದೆ. ' ವ್ಯಾಪಾರಿ ಸಂಘ 'ವು
ಮುಳುಗಿದ್ದರಿಂದ ಎದೆಯೊಡಕೊಂಡು ಸತ್ಯವೆಂದು ಹೇಳುವರು.
ತದನಂತರ! ೫೯
ಆದರೂ ನಮಗೆ ಅದೇನು ಸರಿಯಾಗಿ ತೋರುವದಿಲ್ಲೆಂದು ನಿನ್ನಿನ
ಸಂಚಿಕೆಯಲ್ಲಿ ಬರೆದಿದ್ದೆವು ಅದರಂತೆ ತಮ್ಮ ಕಾರ್ಯನಿಪುಣರಾದ
ಇಲ್ಲಿಯ ಪೋಲಿಸ ' ಸುಪರಿಂಟೆಂಡೆಂಟ'ರು ಶ್ರೀನಿವಾಸರಾಯರ ಮನೆಗೆ
ಸ್ವತಃ ಹೋಗಿ ಕುಟುಂಬದವರನ್ನು ಕೇಳಲಾಗಿ ವೈದ್ಯರು ಬಾಟಲಿ
ಯಲ್ಲಿ ವಿಷಹಾಕಿ ಕೊಟ್ಟಿದ್ದರೆಂದೂ ಗಾಯವನ್ನು ಉಪಚರಿಸದೆ ಬಿಟ್ಟ
ರೆಂದೂ, ಅವರಿಗೆ ತಿಳಿದು ಆ ವೈದ್ಯರನ್ನು ಇಂದು ಬಂದಿವಾಸಕ್ಕೆ
ಕಳಿಸಿರುವರು, ವೈದ್ಯರ ಈ ಕೆಲಸದಲ್ಲಿರದೆ ಅವರ ಮಿತ್ರಮುಖ
ಶತ್ರುರಾರೋ ಶ್ರೀನಿವಾಸರಾಯರಲ್ಲಿ ಮತ್ಸರತಾಳಿ ಹೀಗೆ ಮಾಡಿಸಿರುವ
ರೆಂದು ತಿಳಿದು ಅದರ ವಿಷಯಕ್ಕೆ ವಿಚಾರಣೆಯು ನಡೆದದೆ,
ಸರಕಾರದವರ, ಸಮಾಜಕಂಟಕರನ್ನು ನಾಶಿಸದೆ ಬಿಡಬಾರದು ”
ಲೇಖವನ್ನು ಓದಿ ಅಚ್ಯುತರಾಯರು ಬಹಳ ಗಾಬರಿಯಾದರು
ಇನ್ನು ವೈದ್ಯರು ತನ್ನ ಹೆಸರನ್ನು ಹೇಳಿ ತನಗೂ ಬಂದಿವಾಸವನ್ನೂ,
ಬಹುಶಃ “ ಕರೇನೀರಿನ ” ನಡುಗಡ್ಡೆಯಲ್ಲಿ ಇರುವ ಶಿಕ್ಷೆಯನ್ನು
ದೊರಕಿಸಿಕೊಡಬಹುದೆಂದು ಹೆದರಿ ಅಚ್ಯುತರಾಯರು ವಿಷಪ್ರಾಶನ
ಮಾಡಿ ಅಂದೇ ಸಂಜೆಯಾಗುವದರೊಳಗಾಗಿ ಇಹಲೋಕವನ್ನು
ಬಿಟ್ಟನು. ಪಾಪ! ಅಚ್ಯುತರಾಯನು ತನಗೆ ಶಿಕ್ಷೆಯನ್ನು ತಾನೇ
ಮಾಡಿಕೊಂಡನು ! !
* * * *
ಶ್ರೀನಿವಾಸರಾಯರ ನಿಧನದ ನಂತರ ವಿದ್ಯಾಧರನೂ, ವಿಮ
ಲೆಯೂ, ಮಾಧವನ ಪತ್ರದಂತೆ ಮುಂಭಾಪುರಿಗೆ ಬಂದರು. ಅವ
ರಿಗೂ ಬಹಳ ದುಃಖವಾಯಿತು. ಹಿರಿಯರು ಬೇಕಾದ ಹಾಗೆ ತಮ್ಮ
ವಿದ್ಯಾರ್ಜನೆಗೆ ಎಲ್ಲ ಸಾಧನಗಳನ್ನು ಪೂರೈಸುತ್ತಿರಲು ತಾವು ಹೇಗೆ
ಯಾವಾಗಲೂ ವಿದ್ಯೆಯ ಚಿಂತೆಯಲ್ಲಿಯೇ ರಮಿಸುತ್ತಿದ್ದೆವೆಂಬುದು
ಅವರಿಗೆ ನೆನಪಾಗಿ ಈ ಸಂಸಾರಯಾತ್ರೆಯು ಕರಿಣವಾಗಿ ತೋರಹ
ತ್ತಿತು. ಮಾಧವನು ಅಧೈರ್ಯಗೊಳ್ಳದೆ ಯಥಾಸಾಂಗವಾಗಿ ಎಲ್ಲ
೬೦ ಸಮಾಜ ರಹಸ್ಯ
ಕರ್ಮಗಳನ್ನು ತೀರಿಸಿದನು. ತಂದೆಯ ಕೊನೆ ಆಜ್ಞೆಯು ಇನ್ನು
ಆತನ ಕಿವಿಯಲ್ಲಿ ಗುಣಗುಟ್ಟುತ್ತಿತ್ತು, ತಾಯಿತಂಗಿಯರನ್ನು ಸಮಾ
ಧಾನಗೊಳಿಸಿ ಮುಂದಿನ ಕಾರ್ಯಕ್ಕೆ ತೊಡಗಿದನು; ವೈದ್ಯರ ದುಃಸ್ಥಿ
ತಿಯ ವಿಷಯಕ್ಕೆ, ಆತನು ಕನಿಕರಪಟ್ಟನು ! ಆದರೂ ದೇಶಕಟ್ಟಳೆ
ಗಳು ಆತನನ್ನು ಬಂಧಮುಕ್ತಮಾಡಲಿಲ್ಲ! ಅವರವರ ಕರ್ಮಫಲ
ವನ್ನನುಭವಿಸಲಿಕ್ಕೆ ಬಿಟ್ಟು ಬಿಟ್ಟನು. ಮಾಧವನೂ ವಿದ್ಯಾಧರನೂ
ಮತ್ತೆ ಎಡೂರಕ್ಕೆ ಹೋಗಿ ದಿವಾಕರಪಂತರ ಹಾಗೂ ತನ್ನ ಸ್ವಂತ
ಹೊಲಮನೆಯನ್ನು ವ್ಯವಸ್ಥೆಗೊಳಿಸಿದರು. ವಿದ್ಯಾಧರನ ಜುಲುಮೆ
ಯಿಂದ ಎಲ್ಲರೂ ಆತನು ಪುಣ್ಯಪುರದಲ್ಲಿ ಮಾಡಿದ ಮನೆಯಲ್ಲಿಯೇ
ಇರಹತ್ತಿದರು ಸರಸ್ವತಿಯ, ವಿಮಲೆಯ ಮನೋರಮಾಬಾಯಿ
ಯವರೂ ಒಬ್ಬರ ಸಹವಾಸದಲ್ಲಿ ಮತ್ತೊಬ್ಬರು ಆನಂದಪಡಹತ್ತಿದ
ರು. ಕಾಲಚಕ್ರವು ವಿಚಿತ್ರವಾದದ್ದು ಈ ಕುಟುಂಬಕ್ಕೆ ಸಂಕಟವನ್ನು
ತಂದಿದ್ದ ಕಾಲವೇ ಶ್ರೀನಿವಾಸರಾಯರ ಮರಣದಿಂದುಂಟಾದ ದುಃಖ
ವನ್ನು चक्रनेमिक्रमेण ಕಡಿಮೆ ಮಾಡಹತ್ತಿತು. ವಿಮಲೆ ಸರಸ್ವತಿ
ಯರ ಸಹವಾಸದಲ್ಲಿ ಮನೋರಮಾಬಾಯಿಯವರು ಹೇಗಾದರೂ
ಮಾಡಿ ಮನರಂಜನೆಯನ್ನು ಮಾಡಿಕೊಳ್ಳಹತ್ತಿದರು. ಸರಸ್ವತಿಯು
ವಿದ್ಯಾಧರನನ್ನು ಹೆಚ್ಚು ಹೆಚ್ಚಿಗೆ ಪ್ರೀತಿಸಹತ್ತಿದ್ದಳು, ಒಬ್ಬರ ಪರಿಚ
ಯವು ಮತ್ತೊಬ್ಬರಿಗೆ ಈಗ ಪೂರ್ಣವಾಗಿ ಆಗಿದ್ದರಿಂದ ಒಮ್ಮೊಮ್ಮೆ
ವಿಮಲಾ ಮಾಧವರ ' ಪ್ರೇಮ ' ವಾದರೂ ದೃಷ್ಟಿಗೆ ಬೀಳು
ತ್ತಿತ್ತು. ಮಾಧವನು ಮಾತ್ರ ಆಕೆಯನ್ನು ಭಗಿನಿ ಪ್ರೇಮದಿಂದಲೇ
ನೋಡುತ್ತಿದ್ದನು. ಸರಸ್ವತಿಯಲ್ಲಿ ದೃಢವಾಗಿದ್ದ ವಿದ್ಯಾಧರನ ಪ್ರೇಮ
ವನ್ನು ಕಂಡು ಮಾಧವನಿಗೂ, ಮನೋರಮಾಬಾಯಿಯವರಿಗೂ
ಆನಂದವಾಯಿತು.
ಮಾಧವನೂ, ವಿದ್ಯಾಧರನೂ ಮನಮುಟ್ಟ ಅಭ್ಯಾಸಿಸಿ ಅದೇ
ವರ್ಷ ಬಿ. ಏ. ಪರೀಕ್ಷೆಯಲ್ಲಿ ಇಬ್ಬರೂ ಉತ್ತೀರ್ಣರಾದರು. ವಿಮಲೆ
ತದನಂತರ! ೬೧
ಸರಸ್ವತಿಯರು ಒಬ್ಬರನ್ನೊಬ್ಬರನ್ನು ಅಕ್ಕತಂಗಿಯರಂತೆ ಪ್ರೀತಿಸಿ
ತಮಗೆ ಬರುವ ಜ್ಞಾನವನ್ನು ಇನ್ನೊಬ್ಬರಿಗೆ ಕಲಿಸಿ ಆನಂದದಿಂದ
ಇರಹತ್ತಿದರು, ಪರೀಕ್ಷೆ ಸುದ್ದಿಯ ಆನಂದದಲ್ಲಿ ಮಾತಾಡುತ್ತ ಒಂದು
ದಿವಸ ಕೌಮುದಿಯ ಬೆಳಕಿನಲ್ಲಿ ಮಾಧವನೂ ವಿದ್ಯಾಧರನೂ ಕುಳಿತಿ
ದ್ದರು. ಬರಬರುತ್ತ ವಿವಾಹದ ಸುದ್ದಿಯು ಹೊರಡಿತು.
ಮಾಧ-ವಿದ್ಯಾಧರಾ, ಸರಸ್ವತಿಯ ವಿವಾಹವನ್ನಂತೂ ಇನ್ನು
ಮಾಡಲೇ ಬೇಕು. ಆಕೆಯು ನಿನ್ನನ್ನು ಪ್ರೀತಿಸುವಳು; ನೀನು ಆಕೆ
ಯನ್ನು ಪ್ರೀತಿಸುವಿ, ಆಕೆಯು ಸಮಾಜಸೇವೆಯ ಕಾರ್ಯದಲ್ಲಿ ನಿನಗೆ
ಬೇಕಾದ ಹಾಗೆ ಸಹಾಯಮಾಡಬಹುದು, ತಂದೆಯವರು ಮರಣ
ಕಾಲಕ್ಕೆ ಹೇಳಿದ್ದನ್ನೂ ನಾನು ಈ ಮೊದಲೇ ನಿನಗೆ ತಿಳಿಸಿರುವೆನು;
ನನ್ನ ಕಾರ್ಯವಾದರೂ ಸಮಾಜಸೇವೆಯೇ, ಇಬ್ಬರೂ ಕೂಡಿ
ಅದೇ ಕೆಲಸವನ್ನು ಜರುಗಿಸಲು ಯತ್ನಿಸುವಾ. ಇನ್ನು ವಿವಾಹದ
ವಿಷಯಕ್ಕಂತೂ ನಿನಗೇನು ಹೆಚ್ಚಿಗೆ ಹೇಳುವ ಕಾರಣವಿಲ್ಲ; ಹೇಳು
ನಿನ್ನ ಮನಸ್ಸಿಗೆ ಸರಸ್ವತಿಯು ಬರುವಳೋ ಇಲ್ಲವೋ ?
ವಿದ್ಯಾಧರನೇನು ಮಾತಾಡುತ್ತಾನೆ ? ನಾಚಿ ತಲೆ ಬೊಗ್ಗಿಸಿ
ಸಮ್ಮತಿಯನ್ನೀಯಿದನು.
ವಿದ್ಯಾ-ಮಾಧವಾ, ಸರಸ್ವತಿಯಂಧ ಸುಗುಣಮಂಡಿತಳನ್ನು
ಮದುವೆ ಮಾಡಿಕೊಳ್ಳಲಿಕ್ಕೆ ಯಾರು ಒಪ್ಪಲಿಕ್ಕಿಲ್ಲ !! ನೀನು ಹಿಂದಕ್ಕೆ
ಒಮ್ಮೆ ವಿವಾಹದ ವ್ಯಾಖ್ಯಾನವನ್ನು ಹೇಳಿದ್ದು ನೆನಪಾಗುವದೇನು ?
ಮಾಧ-ಹೌದು, ನೆನಪುಂಟು. ಆ ತರದ ಪ್ರೇಮವು ನಿಮ್ಮಲ್ಲಿ
ಈಗ ಹುಟ್ಟಿರುವದು; ಸರಸ್ವತಿಯು ನಾನು ವರ್ಣಿಸಿದಂತೆ ಯೋಗ್ಯ
ಸತಿಧರ್ಮವನ್ನು ಆಚರಿಸಿ ನಿನ್ನ ಕಾರ್ಯದಲ್ಲಿ ಸಹಾಯಕಳಾಗುವ
ಳೆಂದು ನನಗೆ ಪೂರ್ಣ ವಿಶ್ವಾಸವುಂಟು. ಆದ್ದರಿಂದಲೇ ನಾನು ನಿನಗೆ
ಸರಸ್ವತಿಯನ್ನು ವಿವಾಹ-ವಿಧಿಯಿಂದ ಪ್ರತಿ-ಗೃಹಿಸಲು ಹೇಳಿದೆನು.
೬೨ ಸಮಾಜರಹಸ್ಯ.
ವಿದ್ಯಾ- ವಿದ್ಯಾಧರನು ಆನಂದದಿಂದ ತಲೆ ಅಲ್ಲಾಡಿಸಿ ಏನೋ
ನೆನಪು ಮಾಡಿಕೊಂಡು ಮಾಧವಾ, ' ಸಮಾಜಹಿತಕ್ಕಾಗಿ ಯತ್ನಿಸು '
ಎಂದು ನಿನ್ನ ತಂದೆಯವರು ಹೇಳಿದರೆಂದು ಯಾವಾಗಲೂ ಅನ್ನುವಿ.
ಒಂದು ಸಮಾಜಹಿತಕಾರ್ಯವನ್ನು ಮಾಡುವಿಯಾ ?
ಮಾಧ-ಅಗತ್ಯವಾಗಿ, ಮಾಡಲೇ ಬೇಕು. ಪಿತ್ರಾಜ್ಞೆಯನ್ನು
ಮನ್ನಿಸಲೇ ಬೇಕು, ಮೇಲಾಗಿ ಸಮಾಜಸೇವೆಯೇ ಪಿತೃಸೇವೆಯು.
ಅಂದಮೇಲೆ ಪಿತೃಸೇವಾಪರಾಙ್ಮುಖರಾಗುವ ಬಗೆ ಹೇಗೆ ?
ವಿದ್ಯಾ-ಹಾಗಾದರೆ ಈ ಜಗತ್ತಿನಲ್ಲಿ ಎರಡನೆಯವರು ಯಾ
ರೂ ಸಹಾಯಕರಿಲ್ಲದಂಧ ಸುಂದರಿಯ ಸದ್ಗುಣಿಯೂ ನಿನ್ನ ಸರ
ಸ್ವತಿಯಂತೆ ಸುಸಂಸ್ಕೃತಳ ಆಗಿದ್ದ ಬಾಲಿಕೆಯನ್ನು ನೀನು ವಿವಾಹ
ಮಾಡಿಕೊಳ್ಳುವಿಯಾ ? ನೋಡು, ಸಮಾಜಸೇವೆಗಾಗಿ, ತಂದೆಯ
ಆಜ್ಞಾಪಾಲನಮಾಡಿದ ಪುಣ್ಯವು ನಿನಗೆ ಲಭಿಸುವದು.
- ಮಾಧವನು ಗಾಬರಿಯಾಗಿ ಗೊಂದಲದಲ್ಲಿ ಬಿದ್ದಂತೆ ತೋರಿದನು.
ವಿದ್ಯಾ ಹಾಗಾದರೆ ಅನಾಥಳಾದ ನನ್ನ ವಿಮಲೆಯನ್ನು ಮದುವೆ
ಯಾಗು. ನೋಡು, ಇದೇ ಈಗ ಅಂದದ್ದನ್ನು ಮರೆಯಬೇಡ, ವಿಮ
ಲೆಯು ಸರ್ವಗುಣಸಂಪನ್ನಳಿರುವಳು. ಅನಾಥಳಾಗಿ ನಿನ್ನ ಹೊರ್ತು
ಜಗತ್ತಿಗೆ ತಿಲಾಂಜಲಿಯನ್ನು ಸಮರ್ಪಿಸಲು ಸಿದ್ಧಳಿರುವಳು. ನೀನು
ಆಕೆಯನ್ನು ವರಿಸದಿದ್ದರೆ ಆಕೆಯು ವ್ಯಾಕುಲಚಿತ್ತಳಾಗಿ ತನ್ನ ಜೀವಕ್ಕೆ
ಎರವಾಗಬಹುದು, ಅನಾಥ ಬಾಲಿಕೆಯ ಜೀವವನ್ನು ಉಳಿಸಿದಂಥ
ಉಚ್ಚತಮ-ಸಮಾಜಸೇವೆಯ ಪುಣ್ಯವನ್ನು ಕಟ್ಟಿಕೊಳ್ಳುವದಿಲ್ಲವೇ?
ನೀನು ಆಕೆಯನ್ನು ಇಂದಿನವರೆಗೆ ಈ ಪ್ರೇಮದಿಂದ ಎಂದೂ ನೋಡ
ದಿದ್ದದ್ದು ನಿಜವು; ಆದರೆ ಆಕೆಯ ಗುಣಗಳನ್ನು ನೀನು ದಿನಾಲು
ವರ್ಣಿಸುತ್ತಿರುವಿ. ಆದ್ದರಿಂದ ಮಿತ್ರನ ಇದೊಂದು ಬಿನ್ನಣವನ್ನು
ಮನ್ನಿಸಿ ಅನಾಥ ಬಾಲಿಕೆಯ ಜೀವವನ್ನು ಉಳಿಸು.
ತದನಂತರ ! ೬೩
ಮಾಧವನು ಗೂಢವಿಚಾರಕೊಳಗಾದನು. “ ವಿಮಲೆಯಲ್ಲಿ
ಎಲ್ಲ ಗುಣಗಳಿರುವದು ನಿಜವೂ ಆಕೆಯಿಂದ ನನಗೆ ಸುಖವಾಗಿ ಸಮಾ
ಜಸೇವೆಯ ಕಾರ್ಯದಲ್ಲಿಯೂ ಸಹಾಯವಾಗಬಹುದು. ಆಕೆಯ
ಪಾಣಿಗೃಹಣವನ್ನು ಮಾಡದಿದ್ದರೆ ಜೀವಕ್ಕೆ ಎರವಾಗುವಳ೦ತೆ !!
ಛೇ! ನಾನು ಸಮಾಜಕಂಟಕನು !! ಛೇ, ಎಂದಿಗೂ ಆಗಲಾರೆನು.
ತಂದೆಯವರು ಸಮಾಜಹಿತದ ಕಾರ್ಯವನ್ನು ಮಾಡಿದರೆ ತಮ್ಮ
ಸೇವೆಯನ್ನು ಮಾಡಿದ ಹಾಗಾಗುವದೆಂದೂ, ತಮ್ಮ ಎಲ್ಲ ಮನೋ
ರಥಗಳನ್ನು ಪೂರ್ಣ ಮಾಡಿದಂತಾಗುವದೆಂದೂ ಹೇಳಿದರಲ್ಲವೇ ?
ಹೌದು ! ತಂದೆಯವರ ಆಜ್ಞೆಯು ನನಗೆ ಶಿರಸಾಮಾನ್ಯವು, ಏನೂ
ಚಿಂತೆಯಿಲ್ಲ, ವಿದ್ಯೆಯ ಬಲದಿಂದ ಇನ್ನು ಬೇಕಾದ ಹಾಗೆ ತಾಯಿಗೂ
ಹೆಂಡತಿಗೂ ಹೊಟ್ಟೆಗೆ ಹಾಕಬಲ್ಲೆನು. ನಮ್ಮಿಬ್ಬರ ದೇಹವನ್ನು ಸಮಾ
ಜಸೇವೆಯಕಾರ್ಯದಲ್ಲಿಯೇ ಅರ್ಪಿಸಿದರಾಯಿತು. ” ಎಂದು ವಿಚಾ
ರಿಸುತ್ತ ಕುಳಿತನು. ತಾನು ಇಂದು ತನ್ನ ಒಂದು ಕರ್ತವ್ಯಮಾಡಿದ
ಹಾಗಾಗುವದೆಂದು ಕಂಡು ಆತನಿಗೆ ಅತ್ಯಾನಂದವಾಯಿತು. ಆತನ
ಮುಖವು ಪ್ರಫುಲ್ಲಿತವಾಯಿತು. ಮುಂದಿನ ಅಭ್ಯಾಸ, ಗೃಹವ್ಯವಸ್ಥೆ,
ವಿವಾಹಸಿದ್ದತೆ, ಮೊದಲಾದವುಗಳ ವಿಷಯಕ್ಕೆ ಎಷ್ಟೋ ವೇಳೆಯ
ವರೆಗೆ ಮಾತಾಡುತ್ತ ಕುಳಿತರು. ಬಹಳ ರಾತ್ರಿಯಾದಮೇಲೆ ಇಬ್ಬರೂ
ಮನೆಯೊಳಗೆ ಹೋಗಿ ಎಲ್ಲ ಸುದ್ದಿಯನ್ನು ಮನೋರಮಾಬಾಯಿಯ
ವರಿಗೆ ಹೇಳಿದರು, ವಿದ್ಯಾಧರನು ಸರಸ್ವತಿಯನ್ನು ವಿವಾಹವಿಧಿಯಿಂದ
ಸ್ವೀಕರಿಸಲು ಸಿದ್ದನಿರುವನೆಂದೂ, ವಿಮಲೆಯನ್ನು ಮಾಧವನು ಮಾಡಿ
ಕೊಳ್ಳಲೊಪ್ಪಿದನೆಂದೂ ಕೇಳಿ ಅವರಿಗೆ ಅತ್ಯಾನಂದವಾಯಿತು. ಸರಸ್ವ
ತಿಯ ವಿಮಲೆಯೂ ಬಹಳ ಆನಂದಸಾಗರದಲ್ಲಿ ತೇಲಾಡಹತ್ತಿ
ತಮ್ಮ ತಮ್ಮ ಅಣ್ಣಂದಿರಿಗೆ ಮನದಿಂದಲೂ, ಭಕ್ತಿಭಾವದಿಂದ ನಮ
ಸ್ಮರಿಸಿದರು ಎಲ್ಲರೂ ಮಲಗಿಕೊಂಡರು.
೬೪ ಸಮಜರಹಸ್ಯ.
ಉಪಸಂಹಾರ.
ಮೇಲೆ ಹೇಳಿದ ಪ್ರಸಂಗಕ್ಕೆ ಈಗ ೩-೪ ವರ್ಷಗಳಾಗಿಹೋದವು.
ಈಗ ಮನೋರಮಾಬಾಯಿಯವರು ಮೊಮ್ಮಕ್ಕಳನ್ನು ಆಡಿಸುತ್ತ,
ಆನಂದದಲ್ಲಿ ಕಾಲುಕಳೆಯುತ್ತಿರುವರು. ವಿದ್ಯಾಧರನೂ ಸರಸ್ವತಿಯ
ಒಂದು ಕ್ಷಣಹೊತ್ತು ವಿಶ್ರಾಂತಿಯಿಲ್ಲದೆ ಅಲ್ಲಿ ಉಪನ್ಯಾಸವನ್ನು ಮಾಡು,
ಇಲ್ಲಿ ಸಭೆಗೆ ಅಧ್ಯಕ್ಷರಾಗು, ಹೀಗೆ ಒಂದೇ ಸವನೆ ಸಮಾಜೋನ್ನತಿಯ
ಕೆಲಸಕ್ಕೆ ಎಡೆಬಿಡದೆ ಹತ್ತಿರುವರು, ಈ ವರ್ಷ ಪುಣ್ಯಪುರದಲ್ಲಿ
ಸಾಮಾಜಿಕ ಪರಿಷತ್ತು ಕೂಡುವದಿತ್ತು. ಮಾಧವನು ಅಧ್ಯಕ್ಷನಾಗಿ
ಆರಿಸಲ್ಪಟ್ಟಿದ್ದನು. ಸ್ವಾಗತಮಂಡಲದ ಅಧ್ಯಕ್ಷನಾದ ವಿದ್ಯಾಧರನಿಗೂ
ಕೂಡ ಎಷ್ಟೋ ಜನರಿಗೆ ಸ್ವಾಗತಮಾಡಬೇಕಾಗುತ್ತಿತ್ತು! ಈಗೀಗ
ಮಾತ್ರ ನಮ್ಮ ದಂಪತಿದ್ವಯಕ್ಕೆ ಜನ್ಮಸಾರ್ಥಕವಾದಂತೆ ತೋರ
ಹತ್ತಿರುವದು ! ಸರಸ್ವತಿ-ವಿಮಲೆಯರೂ ಎಷ್ಟು ಸಹಾಯಮಾಡುತ್ತಿ
ದುವರಲ್ಲ! ಸ್ವತಃ ಓಡಾಡಿ ಪರಿಷತ್ತನ್ನು ಪೂರ್ಣ ಯಶಸ್ವಿಯಾಗಿ ಮಾ
ಡುವದಕ್ಕೆ ಸರಸ್ವತಿ-ವಿದ್ಯಾಧರದಂಪತಿಯ ಶ್ರಮವೇ ಮುಖ್ಯ ಕಾರಣ
ವೆಂದು ಎಲ್ಲರೂ ಅವರನ್ನು ಎಷ್ಟು ಅಭಿನಂದಿಸುವದು ! ! ನಮ್ಮ
ಸರಸ್ವತಿಗೆ ಸ್ವರ್ಗವೂ ಇನ್ನು ಎರಡೇ ಬೊಟ್ಟು ಉಳಿದದೆ.
* * * *
- ಪ್ರಿಯವಾಚಕರೇ, ವೈದ್ಯರು ಆಜನ್ಮತುರಂಗವಾಸದಲ್ಲಿಯೇ
ತಮ್ಮ ಆಯುಷ್ಯವನ್ನು ಕ್ಷೀಣಿಸುತ್ತಿರುವರಲ್ಲವೇ? ರೋಗಿಗಳಿಗೆ ವಿಷ
ಪ್ರಾಶನ ಮಾಡಲೆತ್ನಿಸಿದವರಿಗೆ ಇದು ಸಾಕಷ್ಟು ಶಾಸನವಾಗದಿದ್ದರೂ
ಈ ಲೋಕವನ್ನು ಬಿಟ್ಟು ಹೋದಮೇಲೆ ಆ ಸರ್ವಶಕ್ತನಾದ ಪರಮೇ
ಶ್ವರನ ಶಾಸನವನ್ನು ಅನುಭವಿಸಲಿಕ್ಕೆ ಹೋಗಬೇಕಲ್ಲವೇ?
ದೇವರೂ ಎಲ್ಲರಿಗೂ ದೇಶಸೇವೆಗಾಗಿ ಉದಂಡ ಅಯುಷ್ಯವನ್ನಿಯಲಿ
ಶ್ರೀಕೃಷ್ಣಾರ್ಪಣಮಸ್ತು
ಸಂಪೂರ್ಣ.
========================================
https://archive.org/details/dli.osmania.3870 कर्मण्येवाधिकारस्ते मा फलेषु कदाचन । ಶ್ರೀಕೃಷ್ಣ-ಕರ್ಮಯೋಗಶಾಸ್ತ್ರ. ಶ್ರೀಬಲಭೀಮ-ವಾಚನಾಲಯ-ಗ್ರಂಥಮಾಲೆ, ದ್ವಿತೀಯ ಪುಷ್ಪ ಸಮಾಜರಹಸ್ಯ. " The Woman's cause is man's, They rise or sink, To-gether dwatted, God-like, bound or free, If she be small, slight natured, miserable, How Shall man grow ? - Tennayson, ಲೇಖಕ ದಾಮೋದರ ಸದಾಶಿವ ದೇಶಪಾಂಡೆ-ಮಧುಪುರ, ಮೊದಲನೆ ಆವೃತ್ತಿ ೧೦೦೦ --------------------------------------------------------------` ಬೆಳಗಾವಿಯೊಳಗೆ ದೇವೇಂದ್ರ ಫಡಪ್ಪು ಚೌಗುಲೆ ಇವರು ತಮ್ಮ ಶ್ರೀಮಹಾವೀರ ಮುದ್ರಣಾಲಯದಲ್ಲಿ ಮುದ್ರಿಸಿದರು ಸದಾಶಿವ ದೇಶವಾಂದೆ ಇವರು ಮದವಾಲದೊಳಗೆ ಶ್ರೀಬಲಭೀಮ ವಾಚನಾಲಯದಲ್ಲ ಪ್ರಕಟಿಸಿದರು --------------------------------------------------------------- ಪ್ರಾರಂಭಕ್ಕೆ ಎರಡು ಶಬ್ದಗಳು. ಸುಶಿಕ್ಷಿತ ಕೆಲ ಸ್ತ್ರೀ-ಪುಗುಷರು ಹಿಂದುಳಿದ ಅಂಧು-ಭಗಿನಿಯರನ್ನು ತಿದ್ದು ವದರಲ್ಲಿ ಸ್ವಾರ್ಥತ್ಯಾಗಿಗಳಾಗಿ ತಮ್ಮ ತನ-ಮನ-ಧನಸರ್ವಸ್ವವನ್ನರ್ಪಿಸಿ ಎಡೆಬಿಡದೆ ಯತ್ನಿ ಸುವದೇ ನಿಜ ಸಮಾಜ-ಸೇವಾಧರ್ಮವು. ಇದೇ ಅವರ ಆದ್ಯಕರ್ತವ್ಯವು. ಬರೇ ಪುರುಷರಿಂದಲೇ ಹೇಗೆ ಸಮಾಜವಾಗುವದಿಲ್ಲವೋ ಹಾಗೆಯೇ ಬರೆ ಪುರುಷರನ್ನಷ್ಟು ಸುಶಿಕ್ಷಿತರನ್ನಾಗಿ ಮಾಡಿದರೆ ಸಮಾಜೋನ್ನ ತಿಯೂ ಇದರಿಂದಲೇ ಅಗುವ ದೇಶೋನ್ನತಿಯೂ ಎಂದಿಗೂ ಅಗಲಾರವು, ಸ್ತ್ರೀಯರೂ ಕೂಡ ಸುಶಿಕ್ಷಿತರೂ ಸುಸಂಸ್ಕೃತರೂ ಆಗಿ ಸಮಾಜಕ್ಕ ತಾವು ಮಾಡಒಹುದಾದ ಕಾರ್ಯವನ್ನು ಯಧಾಶಕ್ತಿಯಿಂದಲೂ ಯಥಾಸಾಂಗವಾ ಗಿಯೂ ಮಾಡಲೇ ಬೇಕು ಆದಕ್ಕಾಗಿ ಅವರು ಚಲೋ ಸಂಸ್ಕೃತಿಯನ್ನು ಪಡೆಯಲೇ ಬೇಕು. ಇದೇ ಸಮಾಜೋನ್ನ ತಿಯ---ಹಾಗೆಯೇ ದೇಶೋನ್ನ ತಿಯ--ರಹಸ್ಸವು ವಾಚಕಮಹಾಶಯ! "ನಾವು ಯಾರು1 ನಮ್ಮ ಸಮಾಸಜಸ್ಥಿತಿಯ: ಈಗ ಹೇಗಿರುವದೆಂಬದನ್ನು ಕರ್ನಾಟಕಸ್ಥರಾದ ನಾವು ವಿಚಾರಮಾಡಿದರೆ ನಮಗೆ ಏನು ಕಂಡುಬರಬಹ.ದು? ನಿಜವಾಗಿ ಪ್ರಾಂಜಲಬುದ್ಧಿಯಿಂದ . ವಿಚಾರಮಾಡಿದರೆ ಐವತ್ತು ವರ್ಷಗಳ ಹಿಂದಿನ ಮಹಾರಾಷ್ಟ್ರ-ಸಮಾಜ ಸ್ಥಿತಿಯ ಚಿತ್ರವೇ ನಮ್ಮ ಈಗಿನ ಯಥಾಸಾಂಗವಾಗಿ ಸಾರಿ ದೂರಿ ಹೇಳುತ್ತದೆ, ಹೀಗೆ ಐವತ್ತು ಐವತ್ತು ವರ್ಷಗಳ ಹಿಂದಿನಿಂದಲೇ ಹೆಜ್ಜೆಯನ್ನಿ ಡುತ್ತ ನಡೆದರೆ, ನಮ್ಮ ಸಮಾಜವು ಪೂರ್ಣವಾಗಿ ಸುಧಾರಿಸ ಬೇಕಾದರೆ ಇನ್ನು ಯಾವ ಯುಗವು ಬರುವದೋ ಯಾರು ಹೇಳುವರು? ಸಮಾಜಕುಧಾರಣೆಯಾಗಬೇಕಾದರಿ ಸ್ಪಾರ್ಧತ್ಕಾಗಿಗಳಾದ ಸುಶಿಕ್ಷಿತ ದೆಂಪ ತಿಗಳೇ ಮುಂದಾಗಬೇಕು. ಇಂಥವರಲ್ಲಿಯೇ ನಮ್ಮ ಸಮಾಜೋನ್ನತಿಯ ಎಲ್ಲ ರಹಸ್ಯವು ಹರಡಿಕೊಂಡಿರುವದು, ಇಂಧವರು ಸಿದ್ಧರಾಗಿ ನಮ್ಮ ಕರ್ನಾ ಟಕವನ್ನು ಉದ್ಭರಿಸಿ ಹರಿಸಲು ಮುಂದಿ ಬರಬೇಕೆಂದು ಅನನ್ಯಭಾವದಿಂದ ಬೇಡಿಕೊಳ್ಳುವದಕ್ಕಾಗಿಯೇ ನಮ್ಮ " ಸಮಾಜ-ರಹಸ್ಯ"ಯವನ್ನು ಅಸ್ಥಿತ್ವದಲ್ಲಿ ----------------------------------------- ತರುವ ಸುದೈವವು ಪರಮಗುರುವಾದ ಶ್ರೀರಾಮನ ಕೃಪೆಯಿಂದ ನಮಗೆ ಬಂದಿರುವದು, ತೀವ್ರ ಕಾರ್ಯಭಾರವನ್ನು ಕೈಕೊಂಡು ಕೆಲವಾಂಶದಿಂದಾ ದರೂ ಈಗಿನ ಶೋಚನೀಯ ಕರ್ನಾಟಕ ಸವಾಜಸ್ಥಿತಿಯನ್ನು ಸುಧಾರಿಸ ಲೆತ್ನಿ ಸಿದರೆ ಪ್ರಸ್ತುತಕ್ಕೆ ಕೈಕೊಂಡ ನಮ್ಮ ಕಾರ್ಯವು ಅಂಶತಃವಾದರೂ ಸಫಲವಾದಂತಾಗುವದು. ಮದವಾಲ, ನಿಮ್ಮೆಲ್ಲರ ಸೇವಕ, ವಿಜಯದಶಮಿ (೨೫-೧ಂ-೧೩), ದಾಮೋದರ, ------------------------------------------- ಹೃದಯನಿವೇದನ. . ಅಂತಃಕರುಣದೊಳಗಿನ ತಳಮಳಿಕೆಯನ್ನು ಸುಹೃದಯರ ಮುಂದೆ ಹೇಳದಿದ್ದರೆ ದುಃಖವು ಕಡಿಮೆಯಾಗಲಾರದು. ಇದೂಂದು ಮನುಷ್ಯನ ಪ್ರಕೃತಿಧರ್ಮನಿರುವದು. ಮೊದಲನಿಂದಲೇ ಸಮಾಜಸೇವೆಯನ್ನೂ ಭಾಷಾ ಸೇವಯನ್ನೂ ಮಾಡಬೇಕೆಂಬ ನಮ್ಮ ಉತ್ಕಟೇಚ್ಛೆಯು ಈ ಸೇವೆಗಾಗಿ ನಾವು ಯಾವತಶರದ ಶಿಕ್ರಣವನ್ನು ಪಡಿಯತಕ್ಕದ್ದು! ಸೇವೆಯನ್ನು ಹ್ಹಾಗೆ ಮಾಡಬೇಕು? ನಮ್ಮ ಸೇವೆಯು ಸಮಾಜಕ್ಕೆ ರುಚಿಕರವಾದೀತೋ ಹೇಗೆ? ಮುಂತಾದ ಎನ್ನೋ ವಿಚಾರಗಳು ದಿನಾಲು ನಮ್ಮನ್ನು ಪೀಡಿಸದೆ ಇರುವದಿಲ್ಲ ಚಲೋ ಪುಸ್ತಕಗಳ ವಾಚನವು ಮನುಷ್ಯನ ಸದ್ಗುಣಕ್ಕ ಪುಷ್ಟಿಕರಣವಾಗಿ ಸನ್ಮಾರ್ಗವನ್ನು ತೋರಿಸಿ ಕೊಡುವದೆಂದು ಪೂರ್ಣ ಸಂಬಿಗೆಯುಂಟಬಾಯಿತು. ಇದಕ್ಕಾಗಿ ನಮ್ಮ ಕರ್ನಾಟಕದಲ್ಲಿ ದೂಡ್ಮ ದೊಡ್ಡ ಮಧ್ಯವರ್ತಿಯ ವಾಚ ನಾಲಯಗಳೂ, ಪುನ್ತಕಸಂಗ್ರಹಾಲಯಗಳೂ (Central libraries) ಸ್ಥಾ ಪಿಸಲ್ಪಟ್ಟು ಅವುಗಳಿಂದ ಎಷ್ಟೂ ಸಣ್ಣ ವಾಚನಾಲಯಗಳು ನಡಯಿಸಲ್ಪಡು ವದಲ್ಲದೆ ಜನರಲ್ಲಿ ವಾಚನಾಭಿರುಚಿಯನ್ನೂ ಸುಸಂಸ್ಕೃತಜೀವಿತೇಜ್ಛಿಯನ್ನೂ ಹೆ'ಚ್ಹಿಸುವ ಪ್ರಯತ್ನವು ನಡೆಯಬೇಕು ಹೀಗಾದರೆ ನಮ್ಮ ಕರ್ನಾಬವು ತೀವ್ರವೆ ಉನ್ನತಿಹೂಂದಿ ಹಿಂದುಸ್ಟಾನಕ್ಕೆ ತಾನು ಮಾಡಬೇಕಾದ ಕರ್ತವ್ಯ ವನ್ನು ವಾಡಿ ಹಿಂದ ಮಾಶೆಯ ಋಣಮುಕ್ತವಾಗಬಹುದು. ಪ್ರಾಧವಿಕ ಶಿಕ್ಷಣವಿಲ್ಲದೆ ಜನರುಸುಸಂಸ್ಕೃತ ಜೀನಿತವನ್ನು ಹೊಂದುವದು ತೀರ ಅಶಕ್ಕ್ನ ವೆಂದು ಇಷ್ಟು ದಿವಸದವರೆಗೆ ಅನುಭವಹೊಂದುತ್ತಿದ್ದ ನಮ್ಮ ಉದಾಹರಣೆ ಯಿಂದಲೇ ಕಂಡುಹಿಡಿಯಬಹುದು. ನಮ್ಮಿಂಡಾದಷ್ಟು ಈ ದೃಷ್ಟಿಯಿಂದ ಕರ್ನಾಛಕ ಸಾಹಿತ್ಯವನ್ನು ಬೆಳೆಯಿ ಸಬೇಕೆಂದು " 'ಶ್ರೀಬಲಭೀಮ ವಾಜಿನಾಲಯ'' ವೆಂಬ ಸಂಸ್ಥಯನ್ನು ಕಳದ ೧೯೧೬ ಇಸ್ವಿಯ ಎಪ್ರಿಲ ತಿಂಗಳೂಳಗೆ ನಮ್ಮೂರಲ್ಲಿ ಸ್ಫಾಪಿಸಿದೆವು. ವಾಚ ನಾಲಯವು ಇನ್ನು ತೀರ ಬಾಲ್ಯ ವಸ್ಟ್ರಯಲ್ಲಿರುವದೇನೋ ನಿಜವು ಆದರೂ ನಮ್ಮ ಕರ್ನಾಟಕದ ಬಂಧು-ಭಗಿನಿಯರು ಸಹಾಯಮಾಡಿದರೆ ನಮ್ಮ ಈ ------------------------------------------------------------- ೨ ಮನೋಭಿಲಾಷವ್ರ ಕೈಗೂಡಲಿಕ್ಕೆ ನಮ್ಮ ತನು-ಮನ-ಧನ ಸರ್ವಸ್ನವನ್ನ ಅರ್ಪಿಸಿ ಈ ಕಾರ್ಯದಲ್ಲಿ ಅವಶ್ರಾಂತ ಶ್ರಮಪಡುವೆವು. ಇಂದ್ರ ಕಾರ್ಯಗಳು ಸಾರ್ವಜನಿಕ ಸಹಾಂಕುವೊ, ಸಾರ್ವಜನಿಕ ಪ್ರೆ*ಮಾದರವೂ, ಇಲ್ಲದಿದ್ದರೆ ಅವ್ಯಾಹತವಾಗಿಯೂ,ಆಬಾಧವಾಗಿಯ್ಕೂ ನಡೆಯಲಾರವು. ಆದ್ದರಿಂದ ನಮ್ಮ ಬಂಧು-ಭಗಿನಿಯರು ಎಲ್ಲತರದಿಂದಲೂ ನಮ್ಮ ಕಾರ್ಯದಲ್ಲಿ ಸಹಾಯ ಮಾಡಲು ಮುಂದುವರಿಯದಿದ್ದರೆ ಸಾಗುವ ಹಾಗಿಲ್ಲ. ವಃಚನಾಲಯದಲ್ಲಿ ಪುಸ್ತಶ ಸಂಗ್ರಹಕಾರ್ಯವೂ ವಾಚನಾಭಿರುಚಿ ಹೆಚ್ಚಿಸುವ ಕಾರ್ಯವೂ ನಡೆಯುವ ನಮ್ಮೆಲ್ಲರಲ್ಲಿಯೂ ಸ್ವಾರ್ಥ ತ್ಯಾಗಬುದ್ಧಿಯು ಹೆಚ್ಚಿಸಿರರೆ ಇನ್ನು ತೀವ್ರವೇ ಕರ್ನಾಟಕವು ಆನಂದೈಶ್ವರ್ಯಗಳನ್ನು ಪಡೆದು | ಸುಖಿಯಾಗಬಹುದು ಸಮಾಜ ಧನ ಅರ್ಥಭಾಗ ಯಿದ್ದ ಸ್ಮೀಯರೂ ವಿದ್ಯೆ ಕಲಿತು ಉಚ್ಚತಮಧ್ಯೇಯ. ಪ್ರಾಪ್ತಿಗಾಗಿ ಯತ್ನಿಸುವ ತಮ್ಮ ಬಂಧು-ಬಗಿನಿ ಯರಿಗೂ, ಪತಿಹಿರಿಯರಿಗೂ ಸಹಾಯಮಾಡಲು ಕೈಕೊಂಡ ಈ ಕಾರ್ಯವು ಒಳ್ಳ ಭರದಿಂದ ನಡೆದು ಇನ್ನು ತುಸು ದಿನಗಳಲ್ಲಿಯೇ ಕರ್ನಾಟಕವು ತನ್ನ ಉಳಿದೆದೇಶಭಗಿನಿಯರಂತೆ ಅವಂದದಿದ ಮೆರೆಯಬಹುದು ಇದ್ಯಾ ದಾನವು ಎಲ್ಲಾ ದಾನಗಲಲ್ಲಿ ಮೆಲಾದದ್ದು! ವಿದ್ಯಾ ಪ್ರಸಾರವೇ ಜನಾಂಗ ಉನ್ನತಿಯು!! ಇದೇ ಕಾರ್ಯವನ್ನು ಯಥಾಮಕ ಮಾಡಲು ನಮ್ಮ "ಬಲ ಭೀಮನು' ಟೊಂಕಕದ್ಹೆ ನಿಂತಿರುವನು, ಆತನ ಧ್ವೇಯುವನ್ನಂತೂ ಕರ್ನಾ ಬಕ ಬಂಧ-ಭಗಿನಿಯರಿಗೆ ತಿಳಿಸಿದ್ದೇವೆ ಇನ್ನು ಆತನ ಕೈಯಿಂದ ಕಾರ್ಯ ಯನ್ನು ತೀವ್ರವಾಗಿ ಮಾಡಿಸುವದು ನಮ್ಮ ಕರ್ನಾಟಕ ಬಂಧು-ಭಗಿನಿಯ ರನ್ನೇ ಕೂಡಿರುವದು, ಬಾಲಕನು ಸಣ್ಣವನು! ಇನ್ನು ಎಲ್ಲ ಜನರ ಸಹಾಯ ವಿಲ್ಲ! ಆದ್ದರಿಂದ ಆತನು ದಿನಾಲು ಚಡಪಡಿಸ;ತ್ತಿರುವನು.!! « ಸಾಮಾಜಿಕ-ಸಾವಿತ್ರಿ"' ಯನ್ನು ಪ್ರಸಿದ್ಧಿಸಿ ಈಗ್ಗ ೫-೬. ತಿಂಗಳಾ ಯಿತು ಗೃಂಧಮಾಲೆಯ ಪ್ರಧಮಪುಷ್ಟವೆಂದು ಬರೆದು. ಬಿಟ್ಟ ದ್ದರಿಂದ ಮತ್ತೆ ಎರಡನೇ ಗ್ರಂಥದ ಹಾದಿಯನ್ನು ನೋಡುತ್ತ ನಮ್ಮ ಬಂಧ.-ಭಗಿನಿಯರು ಕುಳಿಕರು!! ಎರಡನೇ ಪುಸ್ತಕವು ಒರೆದು ಸಿದ ವಾಗಿ ಮುದ್ರಣಾಲಯವನ್ನು -------------------------------------------------------------- ೩' ಈಗ ೩-೪ ತಿಂಗಳ ಹಿಂದೆಯೇ ಕಂಡಿರುವದೆಂದೂ ನಮ್ಮ ಎಷ್ಟೋ ಬಂಧು- ಭಗಿನಿಯರು ಕೇಳಿದ್ದರು. ಆದರೂ ಘುಸ್ತಕವು ಪ್ರಸಿದ್ಧಿಗೆ ತಡವೇಕೆಂಬದು ಅವರಿಗೆ ತಿಳಿಯದಾಯಿತು! ಕಡೆಗೆ ಜಡಮನಸ್ಸಿನಿಂದ " ಹಣದ ಕೊರತೆಯ ಸಲುವಾಗಿ ' ಎಂದು ಉತ್ತರವನ್ನು ಒರೆದೆವು ಇದನ್ನು ಶೇಳಿ ರಾ॥ ರಾ|| ಶ್ರೀನಿವಾಸರಾವ ವೆಂಕಟರಾವ ದೇಸಾಯಿ ಮುಂತಾದ ನಮ್ಮ ಕೆಲಮಿತ್ರರು ತಮ್ಮಿಂದಾದಷ್ಟು ದ್ರವ್ಯಸಹಾಯವನ್ನು ಮಾಡಿ "ಸಮಾಣಿರಹಸ್ಯ' ವನ್ನು ಕನ್ನಡ ಬಂಧು-ಭಗಿನಿಯರ ಮುಂದೆ ಮಂಡಿಸಲು ಆಸ್ಪದವನ್ನಿ ತ್ಮರು ನಾವು ಆ ಎಲ್ಲ ವಿತಿತ್ರರಿಗೂ ಖಃಣಿಯಾಗಿದ್ದೇವೆ ಎಲ್ಲರೀತಿಯಿಂದ ಸಹಾಯಮಾಡಿ ನಮ್ಮ ಈ ಅಲ್ಲಸ(ವೆಯನ್ನು ಅನ.ಗೃಹಿಸುತ್ತ ಹೋಗಬೇಕೆಂದು ಎಲ್ಲ ಕನ್ನಡ ಬಂಧು.-ಭಗಿನಿ ಯರಿಗೆ ನಾವು ಅನನ್ಯಭಾವದಿಂದ ಬೇಡಿಕೊಳ್ಳುತ್ತೇವೆ ನಮ್ಮ ಎಲ್ಲ ಕಾರ್ಯಗಳಿಗೆ ಸಹಾನ.ಭೂತಿಯಿಂದ ಸಹಾಯಮಾಡಿ, ನಮ್ಮ ಕಶಾರ್ಯದಿಶವನ್ನು ತಿಳಸುಕ್ತಬದ ಮ. ರಾ ರಾ ಕೃಷ್ಣಾಜಿ ಹಣಮಂತ ಮುದವೇಡಕರ (" ಕರ್ನಾಟಕವೈತ್ವ ' ಸಂಪಾದಕರು) ಇವರಿಗ್ಳೂ ವಾಚ ನಾಲಯದ ಅಧ್ಯಕ್ಷರೂ, ನಮ್ಮ ಎಚ್ಲ ಸಂಸ್ಥಿಗಳ ಹಿತಚಿಂತಕರೂ, ಸಹಾಯ್ಕ್ಯ ಭೂತರೂ ಅದ ಡಾ ಹಣಮಂತ ವಂಕಟೇಶ ಸವಣೂರ, ಎಲ್. ಎಮ್ ಆಂಡ ಎಸ್ ಇವರಿಗೂ ನಾವು ಆಜನ್ಮ ಉಪಕಾರಬದ್ದರಾಗಿರುವವು ಕಡೆಗೆ ಕಡೆಗೆ ಈ " ಹೃದಯನಿವೇದನ 'ವನ್ನು ಓದಿದ ಎಲ್ಲ ಕರ್ನಾ ಬಕಸ್ಥರ ಮನದಲ್ಲಿ ನಾವು ಕೈಕೊಂಡ ಕಾರ್ಯದಲ್ಲಿ ಸಹಾಯ ಮಾಡಲು ಸ್ಯೂರ್ತಿಯನ್ನು ಹುಟ್ಟಿಸಲು ಶಕ್ತನಾದ ಜಗನ್ನಿಯಮಕ 'ಶ್ರೀರಘುತಿ'ಗೆ ಬೇಡಿಕೊಂಡು, ಪಸಕ್ತಕ ಕಾದಂಬರಿಯನ್ನು ತಿದ್ದುವ ಹೆಲನದಲ್ಬಿ ನಮಗೆ ಸಹಾಯಕರಾದ ಮ, ರಾ ರಾ ರುಕ್ಮಾಂಗದ ಗೋವಿಂದರಾವ ದೇಶಪಾ€ಡೆ ಬಿ.ಏ ಯವರಿಗೂ ಮುದ್ರಣವನ್ನು ಮುದ್ದಾಗಿ ಮಾಡಿಕೊಟ್ಟ ತ್ರೀ' ದೇವೆಂದ್ರರವರಿಗೂ ನಾವು ತುಂಬ ಋಣಿ ಯಾಗಿದ್ದೇವೆಂದು ಹೇಳಿ ನಮ್ಮ "ನಿವೇದನ 'ವನ್ನು ಮುಗಿಸುತ್ತೇವೆ ಶಿ೯ಬಲಭೀವು ವಾಚನಾಲಯ ಕರ್ನಾಟಕ ನಮ್ರಸೇವಕನಾದ, ಮದವಾಲ, ತಾ ೧-೧-೧೯೧೮ ಇಸ್ವಿ ದಾಮೋದರ ಸದಾಶಿವ ದೇಶಪಾಂಡೆ. ------------------------------------------------------------ ಪರಂಪರಾಗತ ಕೆಲ ದುಷ್ಟ ರೂಢಿ ಬಂಧನಗಳಿಂದ ತಳಮಳಿಸುತ್ತಿರುವ ನನ್ನ ಬಂಧು-ಭಗಿನಿಯರಿಗೆ ಈ ಅಲ್ಪ ಪ್ರಯತ್ನವನ್ನು ಅತ್ಯಂತ ಪ್ರೇಮಭಾವದಿಂದ ಅರ್ಪಿಸಿರುವೆನು. ದಾ, ಸ ದೇ --------------------------------------------------------------- || ಶ್ರೀಸರಸ್ವತೀ ಪ್ರಸನ್ನ ॥ ಸಮಾಜರಹಸ್ಯ . ಮ್ಯಾಟ್ರಿಕ್ಯುಲೇಕನ್ ಪರೀಕ್ಷೆಕೊಟ್ಟು ಸಂಪಾದಿಸಿದ ವಾತಾ ವರಣದಲ್ಲಿ ಮನುಷ್ಯನು ಓಡಾಡಹತ್ತಿದನೆಂದರೆ, ಆತನ ವಿಚಾ ರಗಳು ಪಕ್ವವಾಗಹತ್ತಿ, ಅತನ ಮನೋಧೈರ್ಯವಾದರೂ ಹೆಚ್ಚು ತ್ತದೆ, ತನ್ನ ಸಮಾಜದ ಏಳ್ಗೆಗೂ, ತನ್ನ ದೇಶದ ಏಳ್ಗೆಗೂ, ತನ್ನಿಂದಾ ದಷ್ಟು ಸಹಾಯಮಾಡಿ ಕೃತಕೃತ್ಯನಾಗಬೇಕಂಬ ಉದಾತ್ಮವಿಚಾರಗ ಳಾದರೂ ವಿಶ್ವವಿದ್ಯಾಲಯದಲ್ಲಿ ಕಾಲಿಟ್ಟ ಕೂಡಲೆ ಆತನಲ್ಲಿ ತಲೆದೋರ ಹತ್ತುತ್ತವೆ. ವಿಶ್ವವಿದ್ಯಾಲಯದ ಗಾಳೆಯೇ ಅಂತಹದಿರುವದು. ತನ್ನ ವಿದ್ಯಾಭ್ಯಾಸದ ಹೊರ್ತಾಗಿ ಅಲ್ಲಿ ತನಗೆ ಹೆಜ್ಜೆಗೇನಾದರೂ ಕಲಿಯುವ ದುಂಟೆಂದು ಆತನಿಗೆ ಸ್ಮಾಭಾವಿಕವಾಗಿಯೇ ತೋರಿ, ಅತನು ತನ್ನ ಮುಂದಿನ ಧ್ಯೇಯವನ್ನು ಅಲ್ಲಿಯೇ ನಿರ್ಣಯಿಸಿ ಅದಕ್ಕಾಗಿ ಎಲ್ಲತರದ ಜ್ಞಾನವನ್ನು ಮಾಡಿ ಕೊಳ್ಳಲು ಯತ್ನಿಸುವನು. ಗುರುವಾರವಿದ್ದದರಿಂದ ಪುಣ್ಯಪುರದೊಳಗೆ ಪ್ರಸಿದ್ಧಿಗೆ ಬಂದಿದ್ದ ದಕ್ಷಿಣ-ಮಹಾವಿದ್ಯಾಲಯದಲ್ಲಿ ಇಂದು ಒಂದೇ ತರದ ಗದ್ದಲವು ನಡೆ ದಿತ್ತು, “ ಸಮಾಜಸೇವಕಮಂಡಲ” ವೆಂಬ ಸಂಘವು ಸ್ಥಾಪಿಸಲ್ಪಟ್ಟು --------------------------------------- ೨ ಸಮಾಜರಹಸ್ಯ. ಇಂದಿಗೆ ಮೂರು ವರ್ಷಗಳು ಮುಗಿದು ನಾಲ್ಕನೇ ವರ್ಷವು ಪ್ರಾರಂಭ ವಾಗುವದರಿಂದ, ಆ ಮಂಡಲದ ವಾರ್ಷಿಕಸಭೆಯು ನೆರೆಯತಕ್ಕ ದ್ದಿತ್ತು; ಮೇಲಾಗಿ ಸಮಾಜಸೇವೆಯಲ್ಲಿಯೇ ತಮ್ಮ ಆಯುಷ್ಯವನ್ನು ಕಳೆದು ತಮ್ಮ ಜೀವಿತವನ್ನು ಧನ್ಯವಾಗಿ ಮಾಡಿಕೊಂಡು, ಎಲ್ಲ ಜನರ ಆದರಕ್ಕೆ ಪಾತ್ರರಾಗಿದ್ದ ವಿದ್ಯಾಸಂಪನ್ನರೂ, ಅನುಭವಿಕರೂ ಆದ ನಾರಾಯಣರಾಯರು ಮಂಡಲಕ್ಕೆ ಕೆಲವು ಸೂಚನೆಗಳನ್ನು ಮಾಡಿ ಕಾರ್ಯದಿಶೆಯನ್ನು ತಿಳಿಸಿಕೂಡುವದಕ್ಕಾಗಿ ಭಾಷಣ ಮಾಡುವವರಿದ್ದ ರು. ಕಾಲೇಜದಲ್ಲಿ ಉಪನ್ಯಾಸವೆಂದರೆ ವಿಲ್ಲ ವಿದ್ಯಾರ್ಥಿಗಳು ಬರತಕ್ಕ ವರೇ ಇಂದು ಸಮಾಜೋನ್ನತಿಯ ವಿಷಯಕ್ಕೆ ನಾರಾಯಣರಾಯ; ರಂಥ ವಾಕ್ಪಟುಗಳು ಮಾತಾಡುವವರಿದ್ದದರಿಂದಂತೂ ಎಲ್ಲ ವಿದ್ಯಾ ರ್ಧಿಗಳಲ್ಲಿ ಒಂದುತರದ ವಿಶಿಷ್ಠ ಉತ್ಸಾ ಹವೇ ಉಂಟಾಗಿತ್ತು; ಎಲ್ಲರೂ ತಮ್ಮ ಇಳುಹೊತ್ತಿನ ಫಲಾರವನ್ನು ತೀರಿಸಿಕೊಂಡು, ಐದು ಹೊಡೆ ಯುವ ದಾರಿಯನ್ನೇ ನೋಡುತ್ತಿದ್ದರು; ಇಚ್ಛಿಸಿದಂತೆ ತೀವ್ರವೇ ಐದು ಹೊಡೆದಕೂಡಲೇ ಎಲ್ಲರೂ ಉಪನ್ಯಾಸಮುಂದಿರಕ್ಕೆ ಹೋದರು. ನಾರಾಯಣರಾಯರು ಬಂದಗಳಗೆಗೇ ಚಪ್ಪಳೆಯ ಸಪ್ಪಳದಲ್ಲಿ ಎಲ್ಲರೂ ಅವರಿಗೆ ಸ್ವಾಗತವನ್ನಿತ್ತರು. ಮಂಡಲವು ಇಂದಿನವರೆಗೆ ಮಾಡಿದ ಕಾರ್ಯವನ್ನು ಕಾರ್ಯದರ್ಶಿಗಳು ಸವಿಸ್ತರವಾಗಿ ಹೇಳಿದಮೇಲೆ ನಾರಾಯಣರಾಯರು ಮತ್ತೆ ಚಪ್ಪಾಳೆಯ 'ಕಡಕಡಾಟ `ದ ಗರ್ಜನೆ ಯಲ್ಲಿ ಎದ್ದುನಿಂತು ಮಾತಾಡಹತ್ತಿದರು. “ ಮಿತ್ರರೇ, ಸುಮ್ಮನೆ ವಿದ್ಯಾ ಲಯದಲ್ಲಿ ಕುಳಿತು ನಮ್ಮ ಸಮಾಜಸುಧಾರಣೆಯು ಈ ರೀತಿಯಿಂದ ಆಗತಕ್ಕದ್ದು, ನಮ್ಮ ಸಮಾಜದಲ್ಲಿ ಇಂಧಿಂಥ ಸುಧಾರಣೆಗಳ ಅವಶ್ಯ ಕತೆಯುಂಟು- ಎಂದು ಹೇಳಿದರೆ ಸಮಾಜಕ್ಕೆ ನಿಮ್ಮ ಮಂಡಲದಿಂದ ಏನೂ ಲಾಭವಾಗಲರಿಯದು. ಈಗ ನಿಮ್ಮಂಧ ಕೆಲ ತರುಣರು ಆಜ ನ್ಮಪರ್ಯಂತವೂ ಇದೇ ಕಾರ್ಯವನ್ನು ಕೈಕೊಂಡು, ಜಾತಿಯೊಳ ಗಿನ ಕೆಲವು ರೂಢಿಗಳಿಂದ ಎಷ್ಟು ಹಾನಿಯಾಗುತ್ತದಿಂಬದನ್ನು ಉಪ ---------------------------------------- ಸಮಾಜಸೇವಕಮಂಡಲ, ೩ ನ್ಫಾಸಗಳ ರೂಪದಿಂದಲ್ಕೂ ಪ್ರತ್ಯಕ್ಷ ಉದಾಹರಣೆಯಿಂದಲೂ ಜನ ರಿಗೆ ಚನ್ನಾಗಿ ತಿಳಸಿಕೊಡಬೇಕು, ಸತತ ಕಾರ್ಯದಕ್ಷರಾಗಿ ಸಮಾಜ ಕಂಟಕರನ್ನು ಗೊತ್ತುಹಚ್ಚಿ ಅವರವರ ದುಷ್ಟ ಚಾಳಿಗಳನ್ನು ಬಿಡಿ ಸಲು ಯತ್ನಿಸಬೇಕು, ಸಮಾಜಕ್ಕೆ ಹಾದಿತಟ್ಟುವಂಥ ಕೃತ್ಯಗಳನ್ನು ಮಾಡಿದವರಿಗೆ ದಂಡಿಸದೆ ಬಿಡಬಾರದು; ವರದಕ್ಷಿಣೆ ತೆಗೆದುಕೊಳ್ಳು ವದು, ಬಾಲಿಕೆಯರನ್ನು ಹೊಟ್ಟೆ ತುಂಬಿಕೊಳ್ಳುವ ಹಣದಾಶೆಗಾಗಿ ಮಾರಿ ಕೊಳ್ಳುವದು ಬಾಲವಿವಾಹ ವಾಡುವದು, ಮುಂತಾದ ನೀಚ ಕೃತ್ಯ ಮಾಡುವವರನ್ನು ಕಂಡುಹಿಡಿದು, ಮೊದಲು ಅವರಿಗೆ ಅವು ಗಳ ದುಷ್ಪರಿಣಾಮವನ್ನು ತಿಳಿಸಿಕೊಡುತ್ತ ಹೋಗಬೇಕು; ಅದರಿಂದ ಲೂ ಅವರು ತಮ್ಮ ದುಷ್ಕರ್ಮಗಳನ್ನು ಬಿಡದಿದ್ದರೆ ಸಮಾಜದಿಂದ ಅವರಿಗೆ ' ಬಹಿಷ್ಳಾರ 'ವನ್ನು ಹಾಕಿಸಬೇಕು, ಈ ರೀತಿಯಿಂದ ನಡೆ ಯಲು ನಿರ್ಧರಿಸಿ ಸಮಾಜಸೇವಯನ್ನು ಕೈಕೊಳ್ಳದಿದ್ದರೆ, ನಮ್ಮ ಸಮಾಜಸುಧಾರಣೆಯ ಕೆಲಸವು ನೂರಾರು ವರ್ಷಗಳವರೆಗೆ ಇನ್ನೂ ಹಾಗೆಯೇ ಉಳಿಯುವದು, ...." ನಾರಾಯಣರಾಯರು ಇನ್ನೂ ಎಷ್ಟೋ ಸಮಯೋಚಿತ ಸೂಚನೆಗಳನ್ನು ಮಾಡಿದರು. ಆದರೆ ಅವು ಗಳನ್ನೆಲ್ಲ ಇಲ್ಲಿ ಹೇಳುತ್ತ ಕುಳಿತುಕೊಂಡು ನಮ್ಮ ವಾಚಕರನ್ನು ಬೇಸರಗೊಳಿಸಲೆತ್ನಿಸದೆ ಮುಂದಿನ ಕಾರ್ಯಕ್ರಮದ ಬಗ್ಗೆ ಇಷ್ಟ ರಿಂದಲೇ ಅವರ ವಿಚಾರಗಳನ್ನು ಅರಿತುಕೊಳ್ಳಲು ನಮ್ಮ ವಾಚಕ ರಿಗೆ ಬಿಟ್ಟು ಅವರ ಭಾಷಣದ ಪರಿಣಾಮವು ಶ್ರೋತೃಸಮುದಾಯದ ಮೇಲೆ ಹೇಗೆ ಆಯಿತೆಂಬದನ್ನು ತಿಳಿದುಕೊಳ್ಳಲು ತಿರುಗುವಾ. ಅದೋ ನೋಡಿರಿ! ದೂರದಲ್ಲಿ ವಿದ್ಯಾಧರನು ಹೇಗೆ ಸ್ಫೂರ್ತಿಗೊಂಡು ಏನೋ ಹೇಳಬೇಕೆಂದು ವಿಚಾರಿಸಿ ಏಳುತ್ತಿರುವನು? ಆತನೇನು ಮಾತಾಡುವನೋ ಎಂದು ಎಲ್ಲ ವಿದ್ಯಾರ್ಥಿಗಳು ಆತನ ಕಡೆಗೆ ಅಚಲ ದೃಷ್ಟಿಯಿಂದ ನೋಡುತ್ತಿರುವರು; ನಾರಾಯಣರಾಯರೂ ಸಹ ಈತ ನ ಚಲನವಿಚಲವೃತ್ತಿಯನ್ನು ಕಂಡು ಈತನ ಭಾಷಣವನ್ನು ಕೇಳಲು ------------------------------------- ೪ ಸಮಾಜರಹಸ್ಯ ಆತುರಗೊಳ್ಳುತ್ತಿರುವರೆಂಬದು ಸ್ಪಷ್ಟವಾಗಿ, ಅವರ ಮುಖದಮೇ ಲಿಂದ ತೋರುತ್ತಿರುವದು, ವಿದ್ಯಾಧರನ ಹತ್ತರವೇ ಕುಳಿತಿದ್ದ ಆತನ ಪರಮ ಮಿತೃನಾದ ಮಾಧವನಿಗೆ ಈತನು ಮಾತಾಡುವ ವಿಚಾರ ರಹಸ್ಯವು ತಿಳದಿರುವದು, ಮಾಧವನು ಲಗುಬಗೆಯಿಂದ ಆತನಿಗೆ ಹಾಗೆ ಮಾಡಬೇಡಂದು ಆತನನ್ನು ಕೂಡಿಸಲು ಯತ್ನಿಸಿದನು, ಅದರೆ ವಿದ್ಯಾಧರನು ಆತನ ಸೂಚನೆಯನ್ನು ಲೆಕ್ಕಿಸದೆ ಎದ್ದುನಿಂತು ಉಚ್ಚ ಸ್ವರದಿಂದ ಮಾತಾಡಹತ್ತಿದನು.. “ ಮಹಾಶಯರೇ, ತಾವು ಹೇಳಿದಂತೆ ಕಾರ್ಯವನ್ನು ಜರುಗಿ ಸುವದಕ್ಕಾಗಿ ಆಜನ್ಮ ಬ್ರಮ್ಹಚಾರಿಯಾಗಿದ್ದು ಸಮಾಜಸೇವೆಗಾಗಿ ಯೇ ನನ್ನ ಆಯುಷ್ಯವನ್ನು ಕಳೆಯಬೇಕೆಂದು ನಾನು ಇಚ್ಛಿಸುತ್ತೇನೆ. ಇಂದು ನಿಮ್ಮ ಸಾನ್ನಿಧ್ಯದಲ್ಲಿಯೇ ಅದಕ್ಕಾಗಿ ಪ್ರತಿಜ್ಞೆ ಮಾಡಿ ಕಾರ್ಯವನ್ನು ಕೈಕೊಳ್ಳುವೆನು. ” ಎಂದು ಹೇಳಿ ಇನ್ನು ಪ್ರತಿಜ್ಞೆಯ ಶಬ್ದಗಳನ್ನು ಉಚ್ಚರಿಸತಕ್ಕವನು. ಇಷ್ಟರಲ್ಲಿಯೇ ಮಾಧವನು ಚಟ್ಟನೆ ಎದ್ದು ನಿಂತು ಆಂದದ್ದು:- "ಮಹಾಶಯರೇ, ಪ್ರತಿಜ್ಞಗೆ ಹೀಗೆ ಅವಸರ ಮಾಡಿದರೆ ಅವಿಚಾರವಾಗುವ ಸಂಭವವುಟು, ಅವ ಸರದಲ್ಲಿ ಮಾಡಿದ ಪ್ರತಿಜ್ಞೆಗಾಗಿ ಹಿಂದಿನಿಂದ ಪಶ್ಚಾತ್ತಪ ಪಡುವ ಸಂಭವವುಂಟು, ಇನ್ನು ಸೂಟಿಯು ತೀರ ಸಮೀಪಕ್ಕೆ ಬಂದಿದೆ; ಆದ್ದರಿಂದ ವಿದ್ಯಾಧರನ ಮನೋಧೈರ್ಯವೇ ಇಷ್ಟು ನಿಶ್ಚಲವಿದ್ದರೆ ಸೂಟಿಯಲ್ಲಿ ಕೆಲವು ಕಡೆಗೆ ಹೋಗಿ, ಈ ಕೆಲಸವನ್ನು ತುಸು ದಿವಸ ಗಳ ವರೆಗೆ ಮಾಡಿ ಅನುಭವ ತೆಗೆದುಕೂಂಡು, ಇನ್ನೂ ಬ್ರಮ್ಹಚಾ ರಿವೃತದಿಂದಲೇ ಸಮಾಜಸೇವೆಯನ್ನು ಮಾಡುವದೇ ಆತನಿಗೆ ಸರಿ ಯಾಗೆ ತೋರಿದರೆ ವಿದ್ಯಾಲಯವು ಮತ್ತೆ ಪ್ರಾರಂಭವಾದ ಮೇಲೆ ಹಾಗೆ ಪ್ರತಿಜ್ಞೆಯನ್ನು ಮಾಡಿ, ಸುಮ್ಮನೆ ಇಂದು ಪ್ರತಿಜ್ಞೆಯನ್ನು ಮಾಡಿ, ನಾಳೆ ಅದನ್ನು ಭಂಗಿಸುವದು ಮಾತ್ರ ಲೇಸಲ್ಲ; ಸಮಾಜ ----------------------------------- ಸಮಾಜಸೇವಕಮಂಡಲ. ೫ ಸೇವೆಗಾಗಿ ಆಜನ್ಮ ಬ್ರಮ್ಹಚಾರಿವ್ರತದಿಂದಲೇ ಇರಬೇಕೆಂಬದೇನೂ ನನಗೆ ಸರಿಯಾಗಿ ತೋರುವೆದಿಲ್ಲ. ” ಹೀಗೆ ಹೇಳಿ ವಿದ್ಯಾಧರನು ಕುಳಿತುಕೊಂಡ ಮೇಲೆ ಎಲ್ಲ ಕಡೆಯಲ್ಲಿಯೊ ಶಾಂತತೆಯೇ ಉಂಟಾ ಯಿತು, ಎಲ್ಲರೂ ಮಾಧವನ ಸಮಯೋಚಿತ ಭಾಷಣವನ್ನು ಹುರಿತು ವಿಚಾರಿಸುತ್ತ ತುಸು ಹೊತ್ತು ಕಳೆದರು, ಕಡೆಗೆ ಕೆಲವರಿಗೆ ಮಾಧ ವನ ವಾತಿನ ಸ್ಪಷ್ಟತೆಯು ಪೂರ್ಣವಾಗಿ ಹೊಳೆಯಿತು, ಕೆಲವು ವಿದ್ಯಾರ್ಥಿಗಳು ಕೂಡಿ ಸೂಟಿಯಲ್ಲಿ ತುಸು ಕಾರ್ಯಭಾಗವನ್ನು ಮಾಡಿ ಅನುಭವ ತೆಗೆದುಕೊಳ್ಳ ಬೇಕೆಂದು ನಿಷ್ಕರ್ಷೆಯಾಗಿ ಸಭೆಯ ಕೆಲಸವು ತೀರಿತು. ಎಲ್ಲರೂ ತಮ್ಮ ತಮ್ಮ ನಿಜಸ್ಥಾನಗೆಳಿಗೆ ತೆರಳಿದರು. ವಿದ್ಯಾಧ ರನೂ, ಮಾಧವನೂ ಒಂದೇ ಕೋಣೆಯಲ್ಲಿ ಇರುತ್ತಿದ್ದರು, ವಿದ್ಯಾ ಧರನು ತನ್ನ ಮಿತ್ರನ ಮೇಲೆ ಬಹಳೇ ಸಿಟ್ಟಿಗೆದ್ದಂತೆ ಎಲ್ಲರಿಗೂ ತೋರಿತು ವಿದ್ಯಾಧರನು ಏನೂ ಮಾತಾಡದೆ, ಸುಮ್ಮನೆ ಬಂದು ತನ್ನ ಹಾಸಿಗೆಯ ಮೇಲೆ ಬಿದ್ದು ಕೊಂಡನು. ಆತನ ಮನಸ್ಸಿನಲ್ಲಿ ತರತ ರದ ವಿಚಾರಲಹರಿಗಳು ಬರಹತ್ತಿದವು. ಮಾಧವನನ್ನು ತಾನು ಅಣ್ಣ ನೆಂದು ಮನ್ನಿಸುತ್ತಿದ್ದು ಆತನು ಇಂದು ಸಭೆಯಲ್ಲಿ ತನ್ನು ಮಾನಹಾನಿ ಯನ್ನು ಯಾಕೆ ಮಾಡಲಿಚ್ಛಿಸಿದನೆಂಬದರ ಗೂಢವು ಆತನಿಗೆ ತಿಳಿಯ ದಾಯಿತು. ಆತನು ದುರಭಿಮಾನಿಯೆಂದೂ ಸಹ ಒಮ್ಮೆ ಆತನಿಗೆ ತೋರುತ್ತಿತ್ತು, ಮಾಧವನ ಈ ತರದ ವಿಲಕ್ಷಣ ನಡತೆಯ ವಿಷಯ ದಲ್ಲಿ ವ್ಯಸನವಾಗಿ ಆತನು ತಳಮಳಿಸಹತ್ತಿದನು. ಕೆಲವು ಹೊತ್ತಿನ ಮೇಲೆ ಈ ತರದ ಕೆಟ್ಟ ವಿಚಾರಗಳೆಲ್ಲ ಹೋಗಿ ಮನಸ್ಸು ತುಸು ಶಾಂತವಾದ ಮೇಲೆ ಮಾಧವನು ಇಂದಿನವರೆಗೆ ಮಾಡಿದ ಉಪಕಾ ರಗಳನ್ನು ಆತನು ನೆನಿಸಹತ್ತಿದನು; ಮಾಧವನ ನಿರ್ಮಲ ಅಂತಃಕ ರಣಕ್ಕೆ ಮೆಚ್ಚಿ ಆತನ ಸಖ್ಯವನ್ನು ಬೆಳೆಯಿಸಲು ತಾನು ಹೇಗೆ ಆತುರ ೬ ಸಮಾಜರಹಸ್ಯ. ಪಟ್ಟನೆಂಬದೂ, ಮುಂದೆ ಬರಬರುತ್ತ ತಮ್ಮಿಬ್ಬರ ಮಿತ್ರತ್ವವ ಬೆಳೆ ಯುತ್ತ ಹೋಗಿ ಇಂದು ಅದು ಭ್ರಾತೃ-ಪ್ರೇಮವನ್ನೂ ಸಹ ಹೇಗೆ ಮೀರಿರುವದೆಂಬದೂ, ಆತನಿಗೆ ನೆನಪಾಯಿತು. ಹೀಗಿದ್ದ ಮೇಲೆ ಮಾಧವನು ತನ್ನ ಹಾದಿಯಲ್ಲಿ ಎಂದಿಗೂ ಅಡ್ಡಬರಲಾರನೆಂದು ಆತ ನಿಗೆ ಅನಿಸಹತ್ತಿತ್ಕು ಇಂದಿನ ವರೆಗಿನ ಅತನ ಅನುಭವ, ಅತನ ಇಂದಿನ ವಿಲಕ್ಷಣ ನಡತೆ ಇವುಗಳ ನಡುವೆ ತುಮುಲ ಯುದ್ಧವು ಪ್ರಾರಂಭವಾಗಿ, ಕಡೆಗೆ ಆತನ ಅನುಭವದ ಕೊರಳಲ್ಲಿಯೇ ಜಯ ಮಾಲೆಯು ತಳುಪಿಸಹತ್ತಿತ್ತು ಅದರೆ ಈಹೊತ್ತು ಆತನು ಹೀಗೆ ಮಾಡಿದ ಕಾರಣವೇನೆಂಬದು ಮಾತ್ರ ಅತನ ಲಕ್ಷಕ್ಕೆ ಬರಲಿಲ್ಲ; ಮಾಧವನನ್ನೇ ಇದರ ವಿಷಯಕ್ಕೆ ಕೇಲಬೇಕೆಂದು ಅತನು ಮನಸ್ಸಿ ನಲ್ಲಿ ಮಾಡಿಕೂಂಡು, ಕೂಡಲೆ ಎದ್ದು ಕುಳಿತನು, ಇಷ್ಟು ಹೊೂತ್ತಿನವರೆಗೆ ಮಾಧವನು ಏನೂ ಮಾತಾಡದೆ ತನ್ನ ಕುರ್ಚಿಯ ಮೇಲೆ ಸುಮ್ಮನೆ ವಿಚಾರಿಸುತ್ತ ಕುಳಿತಿದ್ದನು. ತಾನು ಇಂದು ಹೀಗೆ ಒಮ್ಮೆಲೇ ವಿದ್ಯಾಧರನ ಚಂಚಲತೆಯ ಸಭೆ ಯಲ್ಲಿ ಹೇಳಿದ್ದರಿಂದ ಅತನು ಮನಸ್ಸಿನಲ್ಲಿ ನೊಂದುಕೊಂಡನೋ ಏನೋ ಎಂದು ಮಾಧವನಿಗೆ ವಿಷಾದವೆನಿಸಿತ್ತು. ತಾನು ಒಂದು ಕಾರ್ಯಕ್ಪಾಗಿ ಯತ್ನಿಸುತ್ತಿರಲು ಆ ಕಾರ್ಯವು ಮಾತ್ರ ಸಾಧ್ಯವಾ ಗದೆ ಕಡೆಗೆ ಮಿತ್ರತ್ನಕ್ಕೆ ಬಾಧೆಯು ಬಂದು ಇಂದಿನವರೆಗೆ ಮಾಡಿದ ತನ್ನ ಪ್ರಯತ್ನವೆಲ್ಲ ನಿಷ್ಫಲವಾಗುವದೋ ಏನೋ ಎಂದು ಆತನು ವಿಚಾರಿಸುತ್ತಿದ್ದನು. ವಿದ್ಯಾಧರನು ಬಹಳ ಚಂಚಲ ವನಸ್ಸಿನವ ನೆಂದು ಆತನಿಗೆ ಈ ಮೊದಲೇ ತಿಳಿದಿತ್ತು; ಬಾಲ್ಯದಲ್ಲಿ ಆತನಿಗೆ ಚನ್ನಾಗಿ ಯಾರೂ ತಿಳಿಸಿಕೊಡದ್ದರಿಂದ ಸಮಾಜಸೇವೆಗಾಗಿ ಆತ ನಲ್ಲಿ ಅಸ್ಪಷ್ಟ ವಿಚಾರಗಳೇ ತುಂಬಿರುವವೆಂದು ವಿದ್ಯಾಧರನು ಕಂಡುಹಿಡಿದಿದ್ದನು. ಆದ್ದರಿಂದ ನಿಜವಾದ ಮಾರ್ಗವನ್ನು ಅತನಿಗೆ. ಸಮಾಜಸೇವಕಮಂಡಲ, ೭ ಹೇಳಿಕೂಟ್ಟಿರೆ ತನ್ನ ಮೇಲೆ ಸಿಟ್ಟಾಗದೆ ಚಂಚಲ ಮನಸ್ಸಿಗಾಗಿ ತನ್ನನ್ನೇ ದೂಷಿಸಿಕೊಂಡು ಸಮಯೋಚಿತ ಉಪಕಾರಕ್ಕಾಗಿ ತನ್ನನ್ನು ಮನ್ನಿಸದೆ ಇರಲಾರನೆಂದು ಆತನು ತಿಳಕೊಂಡಿದ್ದನು. ವಿದ್ಯಾಧರನು ಸುಶಿಕ್ಷಿತ ತರುಣನಿದ್ದು ಕೇವಲ ನಿರ್ಮಲ ಅಂತಃಕರುಣದವನು. ಆತನಲ್ಲಿ ಕವಪಟಿನಾಟಕವು ಎಳ್ಳ ಪ್ಲಾದರೂ ಇರಲಾರದೆಂಬದಾಗಿ ಮಾಧವನು ಪೂರ್ಣಮನಗಂಡಿದ್ದನು. ಇಂಧ ಉತ್ತಮೋತ್ತಮ ಗುಣಗಳುಳ್ಳ ವಿದ್ಯಾಧರನ ಸ್ನೇಹವನ್ನು ಸಂಪಾದಿಸಿ ಮಾಧವನು ಧನ್ಯ ನಾಗಿದ್ದನು. ವಿದ್ಯಾಧರನು ಎದ್ದು ಕುಳತಿದ್ದನ್ನು ಕಂಡು ಮಾಧವನು ಸಾವ ಕಾಶನಾಗಿ ಅಂದದ್ದು "ವಿದ್ಯಾಧರಾ, ನನ್ನ ಮೇಲೆ ಸಿಟ್ಟಿಗೆದ್ದೇನು ? ನಾನು ಎನ್ನ ಹಿತಕ್ನಾಗಿಯೇ ಹಾಗೆ ಹೇಳಿದೆನು. ನಿನ್ನ ಅಹಿತವನ್ನು ನಾನು ಜನ್ಮಜನ್ಮಾಂತರದಲ್ಲಿಯೂ ಬಯಸದೆ ಯಾವಾಗಲೂ ನಿನ್ನ ಸಖ್ಯವನ್ನು ದಯಪಾಲಿಸೆಂದು ಅನನ್ಯಭಾವದಿಂದ ದೇವರಿಗೆ ಬೇಡಿಕೊಳ್ಳುತ್ತಿರುವೆನು ಇಂದು ಹೀಗೆ ಮಾಡುವದರಲ್ಲಿ ನನ್ನ ಹೇತು ವ್ಯಾವದೆಂದು ನೀನು ಕೇಳಬಹುದು; ಅದರೆ ಅದನ್ನು ಮಾತ್ರ ನಾನು ಈಗ ನಿನಗೆ ಹೇಳಲಾರೆನು. ನನ್ನ ಮಾತಿನ ಅನುಭವ ಬಂದ ಮೇಲೆ ನಿನಗೆ ನನ್ನ ಈ ಅಕಸ್ಮಿಕ ವರ್ತನದ ಕಾರಣವು ತಿಳಿಯಬಹುದು. ಏಳು; ಹೀಗೆ ಸುಮ್ಮನೆ ಏನಾದರೊಂದು ತಿಳಿದುಕೊಂಡು ಅಸಮಾ ಧಾನ ಹೊಂದುವದು ಹಿತಕರವಲ್ಲ. ನನ್ನ ಮಾತಿನ ಸತ್ಯತೆಯು ನಿನಗೆ ಇನ್ನು ತುಸು ದಿವಸಗಳಲ್ಲಿಯೇ ತಿಳದೀತು. ? ಹೀಗೆ ಮಾಧವನು ತಾನಾಗಿಯೇ ಮಾತಾಡಿದ್ದನ್ನು ಕಂಡು ವಿದ್ಯಾಧರನ ಮನಸ್ಸಿಗೆ ಆನಂ ದವಾಯಿತು. ಇದಕ್ಕಾಗಿ ಇನ್ನು ಹೆಚ್ಚಿಗೇನೂ ಕೇಳದೆ ಮತ್ತೆ ಹೊತ್ತು ಸಾಧಿಸಿದಾಗ ಅದನ್ನ ತಿಳಿದುಕೊಳ್ಳಬೇಕೆಂದು ನಿರ್ಧರಿಸಿ ಸುಮ್ಮ ನಾದನು. ತಾನು ಮಾತಾಡದಿದ್ದರೆ ಮಾಧವನು ಮನಸ್ಸಿಗೆ ಕೆಡಕೆನಿಸ ೮ ಸಮಾಜರಹಸ್ಯ ಕೊಳ್ಳಬಹುದೆಂದು ನಂಬಿ ಅತನ ಸಂಗಡ ತುಸು ಹೊತ್ತು ಮಾತಾ ಡುತ್ತ ಕುಳಿತು... ತಾನು ಗೆದ್ದಿಲ್ಲವೆಂದೂ, ಆತನ ಮೇಲೆ ತನ್ನ ಪೂರ್ಣ ವಿಶ್ವಾಸವುಂಟೆಂದೂ, ತನಗೆ ಆತನಿಗಿಂತ ಹೆಚ್ಚೆನ ಹಿತ ಚಿಂತಕರಾರು ಇಲ್ಲೆಂದು ಹೇಳೆದದರಿಂದ ಮಾಧವನ ಮನಸ್ಸಿಗೆ ಆನಂದವಾಯಿತು, ಕಡೆಗೆ ತಿರಗಾಡ.ವ ಹೊತ್ತಾಯಿತೆಂದು ತಿಳಿದು ಇಬ್ಬರೂ ಮಿತ್ರರು ಮತ್ತೆ ಅಂಗಿಯನ್ನು ಹಾಕಿಕೊಂಡು 'ಬಂಡ 'ವನದ ಕಡೆಗೆ ಹೋದರು. ಹಾದಿಯಲ್ಲಿಯೂ ಸಹ ಬಹಳ ಮಾತಾಡದೆ ತಮ್ಮ ತಮ್ಮ ಇಂದಿನ ಆಚರಣದ ವಿಚಾರದಲ್ಲಿಯೇ ತಲ್ಲೀನರಾಗಿ ಹೋಗಿದ್ದರು. ತುಸು ಹೊತ್ತು ವನದಲ್ಲಿ ಮಲ್ಲಿಗೆ ಗಿಡಗಳ ಮೇಲಿಂದ ಹಾಯ್ದು ತಂಪಾಗಿ ಸುವಾಸನೆಯಿಂದ ಕೂಡಿದ ಮಂದಮಾರುತನನ್ನು ಸೇವಿಸಿ ತಿರುಗಿ ತಮ್ಮ ಕೋಣೆಗೆ ಬಂದು ಊಟ ಉಡಿಗೆಗಳನ್ನು ತೀರಿಸಿ ಕೊಂಡು ಹತ್ತು ಹೂಡೆಯುವವರೆಗೆ ಅಭ್ಯಾಸಮಾಡಿ ಇಬ್ಬರೂ ಪರ ಮಮಿತ್ರರು ನಿದ್ರಾವಶರಾದರು, ದ್ವಿತೀಯ ಪರಿಚ್ಛೇದ. ಪೂರ್ವಪರಿಚಯ. ವಾಚಕವೃಂದ! ನಮ್ಮ ಈ ಮಿುತೈರ ಪೂರ್ವ ಇತಿಹಾಸ ವನ್ನು ಹೇಳದೆ ತಮ್ಮನ್ನು ಇಷ್ಟು ವೇಳೆಯವರಿಗೆ ಏನೋ ಹೇಳುತ್ತ ಕುಳಿತದ್ದಕ್ಕಾಗಿ ನಮ್ಮಮೇಲೆ ತಾವು ಮಾತ್ರ ಸಿಟ್ಟಾಗಲಿಲ್ಲವೇ ? ಎರಡನೆಯವರ ಪೂರ್ವಾಪರ ಇತಿಹಾಸವನ್ನು ಪರೀಕ್ಷಿಸದೆ ಕುರುಡರಾಗಿ ಅವರ ಅನುಕರಣವಾಣಡ;ವದು ಕಾಲಾಂತರದಿಂದ ಪೂರ್ವಪರಿಚಯ ೯ ಪಶ್ಚಾತ್ತಾಪಕ್ಕೆ ಕಾರಣವಾಗುತ್ತದೆ ದೊಡ್ಡ ದೊಡ್ಡ ಗ್ರಂಥಗಳನ್ನು ಓದುವಾಗ್ಗೆ ನಮಗೆ ಎಷ್ಟೋ ತರದ ಉದಾಹರಣೆಗಳು ಕಾಣುತ್ತವೆ. ಆದರೆ ಅವುಗಳಲ್ಲಿ ಗ್ರಾಹ್ಮ್ಯಾಂತವು ಎಷ್ಟಿರುವುದು. ಇಲ್ಲವೆ ಅವು ನಮ್ಮ ದೇಶ-ಕಾಲಕ್ಕನುಸರಿಸಿ ಎಷ್ಟರಮಟ್ಟಿಗೆ ಅನುಕರಣಿಯವಾಗಿರು ವವು ಇವೇ ಮೊದಲಾದ ಪ್ರಶ್ನೆಗಳ ಬಗ್ಗೆ ನಾವು ಎಳ್ಳಷ್ಟಾದರೂ ವಿಚಾರಮಾಡುವದಿಲ್ಲ. ಆ ಉದಾಹರಣೆಯ ಬಾಹ್ಯಾಂಗವೇ ಅಷ್ಟು ಮನೋಹರವಾಗಿರುವದು.. ನೋಡಿದ ಕೂಡಲೆ ಆದನ್ನು ನಾವೂ ಮಾಡಿ ನೋಡಿ ನಾಶ ಹೊಂದದೆ ನಮ್ಮಲ್ಲಿ ಶಾಂತತೆಯುಂಟಾಗಲಾರದು. ಹೀಗೆ ಹೇಳಿದ್ದರಿಂದ ಯಾವದರಲ್ಲಿಯೂ ಸತ್ಯಾಂಶವಿರುವದಿಲ್ಲೆಂದು ಮಾತ್ರ ವಾಚಕರು ತಿಳೆಯುವ ಕಾರಣವಿಲ್ಲ, ಇರಬಹುದು ಕೆಲವಡೆ ಯಲ್ಲಿ ಸತ್ಯಾಂಶವು ಶತಾಂಕದಿಂದಲೂ ನಿಜವಿರಬಹುದು, ಅದರೆ ಇಂಧ ಉದಾಹರಣಗಳು ಮಾತ್ರ ಕಡಿಮೆ. ಮೇಲಾಗಿ ಅನುಭವ-ಕಿರೀಟ ವಿಲ್ಲದೆ ಸುಮ್ಮನೆ ಗುರುತರ ಕಾರ್ಯ-ಸಿಂಹಾಸನದವಮೇಲೆ ಕೂಡಲು ಹವಣಿಸಿ ಸತ್ಯನಾಶವನ್ನು ಮಾಡಿಕೊಳ್ಳುವದ ರಲ್ಲಿ ಕೆಲವರಿಗೆ ಯಾಕೆ ಸಂತೋಷವಾಗುತ್ತದೆಯೋ ನಮಗಂತೂ ಹೇಳಲಾಗದು. ಸಾಧಾರ ಣವಾಗಿ ನಮ್ಮ ವಿದ್ಯಾಧರನು ಈ ಜಾತಿಯವನಿದ್ದನು. ಆತಣಗೆ ಮೊ ದಲಿನಿಂದಲೇ ಸಮಾಜಸೇವೆಯ ವಿಜವಾದ ಮಾರ್ಗವನ್ನು ಹೇಳಿಕೊ ಡುವವೆರು ಯರೂ ಇಲ್ಲದ್ದರಿಂದ ಆತನಿಗೆ ತಾನು ಓದಿದ್ದರ ಮೇಲೆ ಯೇ ಮನೋರಾಜ್ಯದ ಗಿಡಗಳನ್ನು ಬೆಳೆಸಿ ಫಲಗಳನ್ನು ಪರೀಕ್ಷಿಸ ಬೇಕಾಗುತ್ತಿತ್ತು. ಆತನ ಹತ್ತಿರ ಮೊದಲು ಮೊದಲು ಇಂಧ ಕಾರ್ಯ ದ ಅನುಭವವುಳ್ಳವರು ಯಾರೂ ಇಲ್ಲದ್ದರಿಂದ ಆತನ ಸಮಾಜಸೇವೆ ಯ ವಿಚಾರಗಳೇನೋ ತಪ್ಪಿ ಕೆಲವು ಸಾರೆ ಇದಕ್ಕಾಗಿ ಸಂಕಟದೊ ಳಗೆ ಸಹ ಬೀಳುತ್ತದ್ದನು. ಹೀಗಾಗಿದ್ದರಿಂದಲೇ ಆತನ ಮನಸ್ಸು ಚಂಚಲವಾಗಿತ್ತು; ಒಂದು ಮಾರ್ಗವನ್ನು ಅನುಸರಿಸಿ ತುಸುಹೊತ್ತು ಅದನ್ನು ಕ್ರಮಿಸಿಮೇಲೆ ಅದರ ಪರಿಣಾಮವು ಅಷ್ಟೇನು ಚನ್ನಾಗಿ ೧೦ ಸಮಾಜರಹಸ್ಯ ಆಗಲಿಕ್ಕಿಲ್ಲೆಂಬ ಭ್ರಾಮಕ ಕಲ್ಪನೆಯಿಂದಲೇ ಅದನ್ನು ಬಿಟ್ಟು ಕೊಟ್ಟು ಹೊಸ ಕಾರ್ಯಕ್ಕೆ ಆರಂಭಿಸುತ್ತಿದನು. ಒಂದು ಕಾರ್ಯದ ಬೆನ್ನುಹತ್ತಿ ಮನಸುಗೊಟ್ಟು ಅದಕ್ಕಾಗಿ ಅವಿಶ್ರಾಂತಶ್ರಮಪಟ್ಟು, ಅದರ ಸುಪರಿಣಾಮವನ್ನು ಕಾಣುವ ಸುದಿನದುಪಭೋಗವು ಕ್ವಚಿ ತ್ತಾಗಿಯೇ ಆತನ ಪಾಲಿಗೆ ಬರುತ್ತಿತ್ತು. ಹೀಗಿದ್ದರೂ ಸಹ ಆತನು ಸರಸ್ವತೀದೇವಿಯ ಕೇವಲ ಪರಮ ಭಕ್ತನಿದ್ದದರಿಂದ ಆಕೆಯು ಮಾತ್ರ ಪೂರ್ಣ ಆತನಿಗೆ ಪ್ರಸನ್ನಳಾಗಿದ್ದಳು ಆತನು ಈ. ವರ್ಷ ಬಿ.ಏ. ಪರೀಕ್ಷೆಗೆ ಕೂಡತಕ್ಕವನಿದ್ದನು. ಸುದೈವದಿಂದ ದಕ್ಷಿಣ ಮಹಾವಿದ್ಯಾಲಯದಲ್ಲಿ ಬಂದಂದಿನಿಂದ ಮೇಲೆ ಹೇಳಿದಂತೆ ಆತನಿಗೆ ಸರ್ವ ಗುಣಸಂಪನ್ಮವಾದ `ಮಾಧವನು ಜೊತೆಗಾರನಾದನು. ಮಾಧವನು ಮೊದಲಿನಿಂದ ದಕ್ಷರಾದ ತಂದೆತಾಯಿಗಳ ಮೇಲ್ವಿ ಚಾರಣೆಯ ಕೆಳಗೆ ಬೆಳೆದದ್ದರಿಂದ ಆತನಿಗೆ ಎಲ್ಲತರಹದ ಅನುಭವವು ಸಜ್ಜನರ ಉದಾಹರಣೆಯಿಂದಲೂ ಸ್ವಂತ ಆಚರಣೆಯಿಂದಲೂ ಬಂದಿತ್ತು. ಶ್ರೀನಿವಾಸರಾಯರು... ಅಂದರೆ ಮಾಧವನ ತಂದೆಯವರು ಸರ್ವ ವಿದ್ಯಾಪಂಡಿತರಾಗಿದ್ದರು. ಜಗತ್ತಿನ ಆಶ್ಚರ್ಯಕ್ಕೂ ಆಭಿ ನಂದನಿಗೂ ಕಾರಣವಾದ ಮುಂಬಾಪುರದಂಥ ಕಾರ್ಯದೇವಿಯ ಮನೆಯಲ್ಲಿ ವಾಸಿಸುತ್ತಿದ್ದರು. ಕ್ರೀನಿವಾಸರಾಯರು ಉಂಡುಟ್ಟು ಸುಖದಿಂದ ವಿದ್ಯಾದೇವಿಯ ಪೂಜೆಯಲ್ಲಿ ತತ್ಪರರಾದವರೆಂದು ಅವರ ಮಿತ್ರಮಂಡಲಕ್ಕ್ಯೂ ಅವರ ನೆರೆಹೂರಯವರಿಗೂ ಗೊತ್ತಾದ ಮಾತಾಗಿತ್ತು. ಮಾಧವನು ಇಂಧವರ ಮಗನಿದ್ದದರಿಂದ ಆತನಿಗೆ ಮೇಲುತರದ ಉದಾತ್ತ ಶಿಕ್ಷಣವೇ ಸಿಕ್ಕಿತ್ತು. ಆತನ ತಾಯಿ ಯು ಸಹ ಸುಶಿಕ್ಷಿತಳೂ ಕಾರ್ಯದಕ್ಷಳೂ ಆಗಿದ್ದಳು. ಮಕ್ಕಳ ಲಾಲನೆಪಾಲನೆಯ ವಿಷಯಕ್ಕಂತೂ ನಿಸರ್ಗದೇವಿಯನ್ನು ಕೂಡ ನಾಚಿಸುವಂಥವಳು, ಹೀಗಿದ್ದಮೇಲೆ ನಮ್ಮ ಮಾಧವನು ಮನೆ ಪೂರ್ವಪರಿಚಯ, ೧೧ ಯಲ್ಲಿ ಆದರ್ಶಭೂತ ಆಜ್ಞಾಧಾರಕಪುತ್ರನೂ ಕಾಲೇಜದಲ್ಲಿ ಉತ್ತಮ ಮಿತ್ರನೂ ಆಗಿದ್ದನೆಂದು ಬೇರೆಯಾಗಿ ಹೇಳಬೇಕಾಗಿಲ್ಲ. ಇಂಧವರೇ ಸಮಾಜದ ಪ್ರಾಣಜ್ಯೋತಿಗಳು, ಆತನು ಮ್ಯಾಟ್ರಿಕ್ಯುಲೇಕನ್ ಪರೀಕ್ಷೆ ಪಾಸಾದನಂತರ ಹಾನು ಪುಣ್ಯಪುರದಂಧ ೧ಸರ್ಗದೇವಿಯ ಮಂದಿರದ ಲ್ಲಿಯೇ ಸರಸ್ನ್ಸತಿಯನ್ನು ಪೂಜಿಸಲು ಯತ್ನಿಸುವೆನೆಂದು ಹೇಳಿ ಮಾತಾ ಪಿತೃಗಳ ಆಜ್ಞೆಯನ್ನೂ, ಆಶೀರ್ವಾದಗಳನ್ನೂ ಪಡೆದು ಪುಣ್ಯಪುರದ ದಕ್ಷಿಣ ಮಹಾವಿದ್ಯಾಲಯದಲ್ಲಿಯೇ ತನ್ನಮುಂದಿನ ಶಿಕ್ಷಣಕ್ರನುವನ್ನು ಪ್ರಾರಂಭಿಸಿದ್ದನು. ಅದಕ್ಕೆ ಈಗ ೩.೪ ವರ್ಷಗಳಾಗಿ ವಿದ್ಯಾಧರ ನಂತೆ ಆತನೂ ಈವರ್ಷ ಬಿ, ಏ. ಪರೀಕ್ಷೆಗೆ ಕೂಡ್ರತಕ್ಕವನಿದ್ದನು. ಒಂದೇತರದ ಅಭ್ಯಾಸ, ಒಂದೇ ಕೋಣೆಯಲ್ಲಿಯ ವಾಸ, ಹೀಗಾದ ಮೇಲೆ ಒಬ್ಬರ ಗುಣಾವಗುಣಗಳು ಮತ್ತೊಬ್ಬರಿಗೆ ತಿಳಿಯಹತ್ತಿ ಮಾಧವನ ಅಸಾಧಾರಣ ಗುಣಗಳನ್ನು ಕಂಡು ವಿದ್ಯಾಧರನು ಆತನನ್ನು ಒಡಹುಸ್ಟದ ಅಣ್ಣನಂತೆ ಪ್ರೀತಿಸುತ್ತಿದ್ದದ್ಲೇನು ಆಶ್ಚರ್ಯವಲ್ಲ! ಪ್ರೀತಿ ಯಿಂದ ಪ್ರೀತಿಯು ಹುಟ್ಟುತ್ತದೆ, ವಿದ್ಯಾಧರನೇನು ವ್ಯಸನಾಧೀನನಿರದೆ, ಆತನೂ ತನ್ನಷ್ಟು ವಿದ್ಯಾಪರಿಪೂರಿತನೂ, ಸಭ್ಯನೂ, ಸುಗುಣಶೀಲನೂ, ಇರುವನೆಂದು ಕಂಡು ಮಾಧವನಾದರೂ ವಿದ್ಯಾಧರನ ಬಂಧುಪ್ರೇಮ ವನ್ನು ಕಂಡು ತಕ್ಕ್ ಪ್ರತಿಪ್ರೇಮವನ್ನೇ ತೋರಿಸಹತ್ತಿದನು, ಹೀಗಾಗಿದ್ದ ರಿಂದ ೩.೪ ವರ್ಷದ ಸಹವಾಸದಿಂದ ಅವರ ಈ ಪ್ರೇಮವು ವೃದ್ಧಿಂಗ ತವಾಗುತ್ತ ನಡೆದಿತ್ತು. ನಮ್ಮ ಚಾಣಾಕ್ಷನಾದ ಮಾಧವನು ವಿದ್ಯಾ ಧರನ ಕಲವು ಅಸ್ಪಸ್ಟ ವಿಚಾರಗಳನ್ನು ಕೇಳಿ ಆತನ ಮನಶ್ಚಾಂಚಲ್ಯ ವನ್ನು ಕಂಡುಹಿಂಡಿಯರದೆ ಇರಲಿಲ್ಲ. ಹೀಗಾಗುವದಕ್ಕೆ ಕಾರಣವೇ ನೆಂಬದೂ ಆತನ ಮನಸ್ಸಿನಲ್ಲಿ ಹೊಳೆದುಹೋಯಿತು, ಅದನ್ನೆಲ್ಲ ತಾನು ವೇಳೆ ಸಾಧಿಸಿದಾಗ ಚನ್ನಾಗಿ ಖಂಡಿಸುತ್ತಹೋಗಿ ಆತನ ಭ್ರಮೆ ಯನ್ನೂ ಮನಶ್ಚಂಚಲತೆಯನ್ನೂ ಹೋಗಲಾಡಿಸಬೇಕೆಂದು ಆತನು ನಿಶ್ಚಿಯಿನಿದ್ದನು. ಇಷ್ಟರಲ್ಲಿಯೇ ಈ ಕಾರ್ಯದಲ್ಲಿ ಆತವಿಗೆ ಕೆಲ ೧೨ ಸಮಾಜರಹಸ್ಸ, ವಾಂಶದಿಂದ ಯಸಸ್ಸು ನಿಕ್ಕತ್ತು. ಹೀಗೆ ತನ್ನ ಏಳೆಗೆಗಾಗಿಯೂ, ವಿದ್ಯೆ ಗಾಗಿಯೂ, ಮಾಧವನು ಹೆಣಗುತ್ತಿರುವದನ್ನು ಕಂಡು ವಿದ್ಯಾಧರನು ವಿಶೇಷವಾಗಿ ಪ್ರೇಮಿಸಹತ್ತಿದನು, ಆತನೇ ತಂದೆಯು. ಆತನೇ ಗುರು ವು, ಆತನೀ ಮಿತ್ರನು, ಬಹಳವೇಳೆ, ಮಾಧವನೇ ತನ್ನ ಸರ್ವಸ್ಥ ವೆಂದು ವಿದ್ಯಾಧರನು ತಿಳಕೊಳ್ಳಹತ್ತಿದನು. ಇದನ್ನೇ ಕಂಡು ಮಾ ಧವನಿಗೂ ತುಸು ಅನಂದವಾಗಿತ್ತು ನಿಜವಾಗಿ ಹೀಗಾಗುವದು ಸ್ವಾ ಭಾವಿಕವೇ ! ತಾವು ಪರರ ಕಲ್ಯಾಣಕ್ಕಾಗಿ ಹೆಣಗಿದ್ದರ ಫಲವು ದೊರಕುವ ಮಾರ್ಗಪ್ರತೀಕ್ಷೆಯನ್ನು ಯಾರು ಮಾಡಲಾರರು!! ವಸ್ತಸ್ಥಿತಿಯು ಹೀಗಿದ್ದುದರಿಂದಲೇ ಮೊದಲನೆ ಪರಿಚ್ಛೇದದಲ್ಲಿ ವರ್ಣಿ ಸಿದ ವಿದ್ಯಧರನ ಅಸಮಾಧಾನವು ಅಷ್ಟು ತೀವ್ರವೇ ಹಾರಿಹೋಯಿತು, ಮತ್ತೆ ಇಬ್ಬರು ಮೊದಲಿನಂತೆ ಇರಹತ್ತಿದರು. ಆದರೂ ಅಂದಿನ ವಿಷಯವನ್ನೇ ಬೇರೆ ಬೇರೆ ರೀತಿಯಿಂದ ಚರ್ಚಸುವದನ್ನು ಮಾತ್ರ ಬಿಡಲಿಲ್ಲ. ವಿದ್ದಾಧರನು ತೀರ ಚಿಕ್ಕವನಾರುವಾಗಲೇ ತಾಯಿತಂದೆ ಗಳು ತೀರಿಕೊಂಡಿದ್ದರಿಂದ ಅನಾಧ ಬಾಲಕನ ಸಂರಕ್ಷಣೆಯ ಭಾರ ವು ಆತನ ದೂರಿನ ಆಪ್ತರಾದ ದಿವಾಕರಸಂತರಮೇಲೆ ಬಿದ್ದಿತು ; ಅವರು ಒಳ್ಳೇ ದಕ್ಷತೆಯಿಂದ ಬಾಲಕನನ್ನು ದೊಡ್ಡವನಾಗಿ ಮಾಡಿ ಶಿಶ್ಷಣಕ್ಕೆ ಹತ್ತುವ ಹಣವನ್ನು ಪೂರೈಸಿ ವಿದ್ಯಾರ್ಜನೆಗೆ ತಿಮ್ಮಿಂದಾ ಸಹಾಯವಾಣಡುತ್ತಿದ್ದರು ವಿದ್ಯಾಧರನ ತಂದೆಯು ದೊಡ್ಡ ಜಮೀನದಾರವಿದ್ದದರಿಂದ ಹೀಗೆ ಸುಲಭವಾಗಿಯೇ ದಿವಾಕರಪಂತ ರಿಗೆ ಹಣವನ್ನು ಪೂರೈಸಲು ಬರುತ್ತಿತ್ತು, ದಿವಾಕರಪಂತರಮೇಲೆ ವಿದ್ಯಾಧರನ ಪೂರ್ಣ ವಿಶ್ವಾಸವು. ವಿದ್ಯಾಧರನು ದೊಡ್ಡವನಾದಂದಿ ನಿಂದ ದಿವಾಕರಪಂತರಾದರೂ ಈ ವಿಶ್ವಾಸದ ದುರುಪಯೋಗವನ್ನು ಮಾಡಲು ಕನಸುಮನಸಿನಲ್ಲಿಯೂ ಕೂಡ ಎಣಿಸದಸೆ ಹೊಲದ ಲೆಕ್ಕ ಪತ್ರಗಳನ್ನೂ, ಆದಾಯದ ' ಜಮಾಖರ್ಚ" ಪಟ್ಟಿಯನ್ನೂ ಈತನಿಗೆ ಕಳಸುತ್ತಿದ್ದರು. ಪೂರ್ವ ಪರಿಚಯ ೧೩ ವಾಚಕಮಹಾಶಯ, ಇಲ್ಲಿಯೇ ಇನ್ನೊಂದು ಮಾತು! ಮಾಧ ವನು ವಿದ್ಯಾಧರನ ವಿಷಯದಲ್ಲಿ ಇಷ್ಟು ನಿಃಸ್ಟಾರ್ಧ ಬುದ್ಧಿಯಿಂದಲೂ, ಅಲೌಕಿಕ ಪ್ರೇಮದಿಂದಲೂ ನಡಯುತ್ತಿದ್ದು, ತಾನು ಒಂದು ಕಾರ್ಯ ಕ್ಕಾಗಿ ವಿದ್ಯಾಧರನನ್ನು ಸಭೆಯಲ್ಲಿ ಆ ದಿವಸ ಪ್ರತಿಜ್ಞೆಯನ್ನು ಮಾಡು ವದರಿಂದೆ ತಡೆದಿರಲು ಆತನು ತನ್ನಮೇಲೆ ಕೋಪಿಸುವನೋ ಏನೋ ಎಂದು. ಅಂಜಿದನೆಂದು ಹಿಂದೆ ಹೇಳಿದ್ದೇವೆ ಮುಂದೆ ಆತನ ಈ ಅಂಬಿಕೆಯಾದರೂ ಸುಳ್ಳಾಯಿತೆಂಬದು ವಾಚಕರು ಕಂಡುಹಿಡಿ ದೇ ಇರುವರು. ಆತನ ಕಾರ್ಯವ್ಯಾವದೆಂದು ಮಾತ್ರ ಇನ್ನು ವಾಚ ಕರಿಗೆ ತಿಳಿಸಲೇ ಇಲ್ಲ. ಶ್ರೀನಿವಾಸರಾಯರಿಗೆ ಮಾಧವನಿಂಬ ಸತ್ಪುತ್ರನಲ್ಲದೆ ಸರಸ್ವತಿಯೆಂಬವಳೊಬ್ಬ ೧೩.-೧೪ ವರ್ಷದ ಮಗಳಿದ್ದಳು ಶ್ರೀನಿವಾಸರಾಯರ ಮಹಾಭಾಗ್ಯವೇ ಅಂಥದು ! ಸುಪತ್ನಿ' ಸುಪುತ್ರ! ಸುಕನ್ಯೆ!! ತಿನ್ನಲಿಕ್ಕೆ ಉಣ್ಣಲಿಕ್ಕೆ ಮನೆಯಲ್ಲಿ ಬೇಕಾದಷ್ಟು!! ಈಗಿನ ಸುಧಾರಿಸಿದ ಜನರಂತೆ ಹೆಂಗಸರು ವಕೀಲಿಯನ್ನು ಮಾಡತಕ್ಕದ್ದು. ಅಥವಾ ಗಂಡಸರಷ್ಟು ಸಮಾನ ಹಕ್ಕಿನಿಂದ ರಾಜಮಂದಿರದಲ್ಲಿ ಮೆರೆ ಯತಕ್ಕದ್ದು- ಇವೇ ಮೊದಲಾದ ವಿಚಾರದವರಾಗದಿದ್ದರೂ ಹೆಂಗ ಸರಿಗೆ ಶಿಕ್ಷಣವು ಅವಕ್ಕವಾಗಿ ಕೊಡತಕ್ಕಲ್ಲೆಂದು ಅವರ ಅಭಿಪ್ರಾ ಯವು. ಆದರೆ ಈಗಿನಂತೆ ಗಂಡು ಹುಡುಗರ ಶಾಲೆಯಲ್ಲಿ ಅವರಿಗೆ ಶಿಕ್ಷಣವನ್ನು ಕೊಡದೆ, ಸುಶಿಕ್ಷಿತ ಮರ್ಯಾದೆಶೀಲ ಹೆಂಗಸರೇ ಬೇರೆ ಸ್ಥಾಪಿಸಿದ ಹೆಣ್ಣು ಹುಡುಗರ ಶಾಲೆಯಲ್ಲಿ, ಅವರಿಗೆ ಕಲಿಸತಕ್ಕದ್ದೆಂದು. ಶ್ರೀನಿವಾಸರಾಯರು ಆಗಾಗ್ಗೆ ಹೇಳುತ್ತಿದ್ದರು. ಹೆಂಗಸರ ವಿದ್ಯಾಭ್ಯಾ ಸದ ವಿಷಯಕ್ನಂತೂ ಅವರ ಮತ ಬೇರೆ. ಬೀಜಗಣಿತ, ರಸಾಯನ ಶಾಸ್ತ್ರ ಮುಂತಾದ ವಿಷಯಗಳನ್ನು ಕಲಿಸಿ ಬಾಲಿಕೆಯರನ್ನು ಪೀಡಿಸು ವದಕ್ಕಿಂತ, ಗೃಹಕೃತ್ಯ, ಹಣೆಯುವದು, ಚಿತ್ರತಗೆಯುವದು, ಗಾಯನ, ೧೪ ಸಮಾಜರಹಸ್ಯ. ಶಿಶುಸಂಗೋಪನ, ತಕ್ಕಮಟ್ಟಿಗೆ ವೈದ್ಯಶಾಸ್ತ್ರ, ಸಂಸ್ಕೃತ ಮುಂತಾದ ವಿಷಯಗಳನ್ನು ಅವಶ್ಯವಾಗಿಯೇ ಕಲಿಸಿ ಅವರನ್ನು ನಿಪ್ರುಣರನ್ನಾಗಿ ಮಾಡಿ ಸುಸಂಸ್ಕೃತ ಆಯುಷ್ಯವನ್ನು ಕಳೆಯಬೇಕೆಂದು ಅವರ ಇಚ್ಛೆ ಯು. ವಿಶೇಷವಾಗಿ ಸಂಸ್ಕೃತ ಅಭ್ಯಾಸ ವಾಡಿಸುವದರ ಮೇಲೆ ಅವ ರಿಗೆ ಮನಸ್ಸು ಬಹಳ. ಸಂಸ್ಕೃತ ಭಾಂಡಾರದಲ್ಲಿದ್ದ ಉದಾತ್ರ ಜೀವನ ರಹಸ್ಸಗಳನ್ನೂ ಜೀವಿತಸನ್ನಾರ್ಗವನ್ನೂ, ಭಾರತೀ-ಸಾಧ್ವಿಯರ ಚರಿತ್ರೆಗಳನ್ನೂ ಪ್ರತಿಒಬ್ಬ ಹೆಂಗಸು ಅಭ್ಯಾಸಿಸಬೇಕೆಂದು ಅವರು ಯಾವಾಗಲೂ ಅನ್ನುತ್ತಿದ್ದರು ಆದ್ದರಿಂದ ಅವರು ಸರಸ್ವತಿಯನ್ನು ಈ ರೀತಿ ಹೊಸದಾಗಿ ಸಾವಿಸಲ್ಪಟ್ಟ ಮುಹಿಳಾ-ವಿದ್ಯಾಲಯಕ್ಕೆ ಕಳುಹಿಸುತ್ತಿದ್ದರು. ಈಗ ಆಕೆಯು ಇಂಗ್ಲಿಷ ಪ್ರವೇಶಪರೀಕ್ಷೆಯ ವರೆಗೆ ಅಭ್ಯಾಸಿಸದ್ದಳು. ಶ್ರೀನಿವಾಸರಾಯರು ಮನಯಲ್ಲಿ ಸ್ವತಃ ಆಕೆಗೆ ಸಂಸ್ಕೃತ ಕಲಿಸುತ್ತಿದ್ದದರಿಂದ ಆಕೆಯು ಈಗ ಸಾವಿತ್ರಿ- ಆಖ್ಯಾನ, ನಲೋಪಾಖ್ಯಾನ, ಮುಂತಾದ ಬೋಧಪರ ಪುಸ್ತಕಗಳನ್ನು ಸಹಜರೀತಿಯಿಂದ ಓದಿ ವಿಶೇಷ ಮಾರ್ಮಿಕ ರೀತಿಯಿಂದ ಅರ್ಥವನ್ನು ತಿಳಿದುಕೊಳ್ಳುತ್ತಿದ್ದಳು. ತಮ್ಮ ಉತ್ಕಟೇಚ್ಛೆಯನ್ನು ಮಗಳು ಪೂರೈ ಸಿದಳೆಂದು ತಿಳಿದು ಶ್ರೀನಿವಾಸರಾಯರಿಗೆ ಪರಮಾನಂದವಾಗಿತ್ತು. ಹೀಗೆ ಸರಸ್ವತಿಯು ಪೌರ್ವಾತ್ಯ, ಪಾಶ್ಚಿಮಾತ್ಯಭಾಷೆಗಳಲ್ಲಿ ನಿಷ್ಣಾತ ಳಾಗಿದ್ದಳಲ್ಲದೆ, ಗೃಹಕೃತ್ಯದಲ್ಲಿಯೂ ಆಕಯ ಜಾಣತನವನ್ನು ನೋಡಿ ಅಕೆಯ ತಾಯಿಯಾದ ಮನೋರಮಾಬಾಯಿವರಿಗೆ ಹಿಡಿಸಲಾರದಷ್ಟು ಅನಂದವಾಗಿತ್ತು. ಇನ್ನು ಸರಸ್ವತಿಯು ಚಲೋ ಗಂಡನನ್ನು ಪಡದ ಳೆಂದರೆ ತಮ್ಮನ್ನು ಸುಖಿಗಳು ಯಾರೂ ಆಗಲಿಕ್ಕಿಲ್ಲೆಂದು ಅವರು ಅನ್ನುತ್ತಿದ್ದರು. ಮಗಳು ಇನ್ನು ದೊಡ್ಡ ವಳಾದದ್ದರಿಂದ ಮದುವೆ ಯನ್ನು ಮಾಡಲೇಬೇಕೆಂದು ಮನೋರಮಾಬಾಯಿಯವರು ಪತಿಯ ಹತ್ತರ ಹಟಹಿಡಿದರು. ಶ್ರೀನಿವಾಸರಾಯರಿಗೆ ತಾವು ಸ್ವತಃ ಗಂಡ ನನ್ನು ಹುಡುಕಹತ್ತಿದಲ್ಲದೆ ಮಾಧವನಿಗೂ ಅದರ ವಿಷಯಕ್ಕೆ ಶೋಧಿ ಬ್ರಮ್ಮಚಾರಿವ್ರತವೋ, ಗೃಹಸ್ಥಾಶ್ರಮವಪೋ?...... ೧೫ ಸಲು ಹೇಳಿಟ್ಬದ್ದರು. ಮಾಧವನಮೇಲೆ ಅವರ ವಿಶ್ವಾಸವೂ ಪ್ರೇಮವೂ ಬಹಳ, ಮಾಧವನು ತನ್ನ ಓರಿಗೆಯವನನ್ನೂ ಸುಶೀಲನನ್ನ್ಯೂ ತನ್ನ ವಿದ್ಯಾಲಯದಲ್ಲಿ ಹುಡುಕಬಹುದಿಂದು ನಂಬಿ ಅವನ ಮಾತೆಯವರಾದ ಮನೋರಮಾಬಾಯಿಯವರು ವಿದ್ಯಾಧರನ ಮುಂದೆ ಯಾವಾಗಲೂ "तरुण, कुलिन, गोरा, पाहिजे मुलिला, चतुर सद्जुणि, सुंदरसा नवरा" * ಎಂದು ಶಾರದಾ ನಾಟಕದಲ್ಲಿಯ ಶಾರದೆ ತಾಯಿಯ ಶಬ್ದ ದಿಂದ ಹಾಡಿ ಸರಸ್ವತಿಯ ಬೆನ್ನು ಚಪ್ಪರಿಸಿ ನಗುತ್ತ ಹೇಳುತ್ತಿದ್ದರು. ತೃತೀಯ ಪರಿಚ್ಚೇದ. ಬ್ರಮ್ಹಚಾರಿಯವೃತವೋ ಗ್ರಹಸ್ಫಾರ್ರಮವೋ? ವಾಚಕರಿಗೆ ಇನ್ನು ಮಾಧವನ ಕಾರ್ಯವ್ಯಾವದಿಂದು ಹೇ ಳುವ ಕಾರಣವಿಲ್ಲ, ಸರಸ್ವತಿಯ ಉಲ್ಲೇಖದಿಂದಲೂ, ಮಾತಾಪಿತೃಗಳು ಮಾಧವನಿಗೆ ಪ್ರೀತಿಯಿಂದ ಒಪ್ಪಿಸಿದ ಕಾರ್ಯವನ್ನು ನಮ್ಮ ಚಾಣಾಕ್ಸರಾದ ವಾಚಕ ರಿಗೆ ಆತನ ಕಾರ್ಯರಹಸ್ಯವು ತಿಳಿದಿರಬಹುದು. ತನ್ನ ತಂಗಿಯ ಕಲ್ಲ್ಯಾಣಕ್ಕಾಗಿ ಆಕೆಗೆ ಅನುರೂಪವಾಗಿಯೇ ಇದ್ದು ಸಕಲಗುಣ ಮಂಡಿತನೂ, ಬಹಳವೇಕೆ,, ಮನೋರವಾಜಚಾಯಿಯವರು ವರ್ಣಿಸಿ ದಂತೆಯೇ ಇದ್ದ ವಿದ್ಯಾಧರನನ್ನೇ ತನ್ನ ಬೀಗನಾಗಿ ಆರಿಸಿರಬಹು ದೆದು ಸಹ ನಮ್ಮ ವಾಚಕರು ಊಹಿಯರಬಹುದು. ಹೌದು! ನೀವು ತಿಳಿದದ್ದು ನಿಜವು! ಆದರೆ ಇದುವರೆಗೆ ತನ್ನ ಇಚ್ಛೆ ಯನ್ನು ---------------- * ತರುಣನೂ, ಕುಲೀನನ್ಕೂ ಸುಶೀಲನೂ, ಸದಗ್ಗುಣಿಯೂ ಆದಂಥವನನ್ನೇ ನನ್ನ ಮಗ - ಳಿಗೆ ಪತಿಯಾಗಿ ಆರಿಸು. ೧೬ ಸಮಾಜರಹಸ್ಯ, ಮಾತ್ರ ಆತನು ಯಾರಿಗೂ ತಿಳಸಿದ್ದಿಲ್ಲ. ಆದರೆ ತಾಯಿತಂದೆಗಳು ಆತನನ್ನು ಸರಸ್ಮೃತಿಗೆ ಗಂಡನನ್ನುಹುಡುಕುವುದಕ್ಕಾಗಿ ಕೇಳುವದರ ಪೂರ್ವದಲ್ಲಿಯೇ, ತಂಗಿಯ ಮೇಲಿನ ಅಚಲ ಪ್ರೇಮನೂ, ಆಕೆಯ ಗುಣಗಳ ಬಗ್ಯೆ ಆದರವೂ ಆಕೆಯು ತನ್ನನ್ನು ಈಗೀಗ ಯಾವಾ ಗಲೂ ಹೇಗೆ ಅರ್ಧಪೂರ್ಣ ದೃಷ್ಟಿಯಿಂದ ವ್ಯಾಕುಲಚಿತ್ತಳಾಗಿ ನೋಡುವಳೆಂಬದೂ ಆತನ ಲಕ್ಷಕ್ಕೆ ಬಂದು ಕಾರ್ಯವನ್ನು ಈ ಮೊದಲೇ ಕೈಕೊಂಡಿದ್ದನು ತೀವ್ರವೇ ವಿದ್ಯಾಧರನು ಆತನಿಗೆ ಯೋ ಗ್ಯವರವಾಗಿ ತೋರಿದನು. ಆತನ ಸರಲ ವೃತ್ತಿಯನ್ನು ಕಂಡು ತನ್ನ ಭಗಿನಿಗೆ ಈತನು ಯೋಗ್ಯ ಪತಿಯಾಗಬಹುದೆಂದು ನಿಶ್ಲಯಿಸಿ, ಸೂಕ್ಷ್ಮರೀತಿಯಿಂದ ಅತನ ಗುಣಾವಗುಣಗಳ ನಿರೀಕ್ಷ್ಷಣ ಮಾಡುವ ದಕ್ಕಾಗಿಯೇ ತಾನೂ ವಿದ್ಯಾಧರನೂ ಒಂದೇ ಕೋಣೆಯಲ್ಲಿ ಇರುತ್ತೇ ವೆಂದು ವಿದ್ಯಾರ್ಥಿಗಳ ಮೇಲ್ವಿಚಾರಕರಿಗೆ ಹೇಳೆ ಕೂಂಡಿದ್ದನು ಈಗ ೨.೩ ವರ್ಷದ ಸಹವಾಸದಿಂದ ವಿದ್ಯಾಧರನ ವಿಷಯಕ್ಕೆ ಆತನ ಅಭಿ ಪ್ರಾಯವು ಚನ್ನಾಗಿ ಆಗುತ್ತ ಹೋಗಿ ಆತನ ಪ್ರೇಮವನ್ನಾದರೂ ಸಂಪಾ ದಿಸಿದ್ದನು..ಹೀಗಿರಲು ಅತನು ತನ್ನ ಭಗಿನಿಯ ವಿಷಯಕ್ಕೆ ವಿದ್ಯಾ ದರನ ಮುಂದೆ ಮಾತುತೆಗೆದು ಮೇಲಿಂದ ಮೇಲೆ ಆಕೆಯ ನಿಜಗುಣಾ ನುವಾದವನ್ನು ಮಾಡದೆ ಇರುತ್ತಿದ್ದ ಲ್ಲ ಎರಡು ವರ್ಷದ ಕೆಳಗೆ ಮಾಧವನು ವಿದ್ಯಾಧರನನ್ನು ತಾನಿರುತ್ತಿದ್ದ ಮುಂಬಾಪುರಿಗೆ ಕರೆದೊ ಯ್ದಿದ್ದನು. ಅಲ್ಲಿ ಅತನ ಕುಟುಂಬದವರ ಸರಲವೃತ್ತಿಯನ್ನೂ, ನಿರ್ಮಲ ಅಂತಃ ಕರುಣವನ್ನೂ ಅವರ ವಿದ್ಯಾರ್ಜನೆಯನ್ನೂ, ಸುಶೀಲ ತನವನ್ನೂ ಕಂಡು ಮಾಧವನ ಮನೆಯೆಂದರೆ ಆನಂದದೇವತೆಯ ಸುಖಮಂದಿರವೇ ಎಂದು ವಿದ್ಯಾಧರನು ತಿಳಿಯುತ್ತಿದ್ದನು. ಹೀಗೆ ಎಲ್ಲ ರೀತಿಯಿಂದಲೂ ಮಾಧವನೆಂದರೆ ವಿದ್ಯಾಧರನ ಸರ್ವಸ್ವವಾಗಿ ಹೋ ಗಿತ್ತು. ತನ್ನ ತಂಗಿಯ ಕಡೆಯಿಂದ ಬರುಶ್ತಿದ್ದ ಪತ್ರಗಳನ್ನು ವಿದ್ಯಾ ಧರನಿಗೆ ತೋರಿಓ ಆಕೆಯ ಸರಲ ಅಂತಃಕರಣವನ್ನು ನಿವೇದಿಸುವ ಬ್ರಮ್ಮ ಚಾರಿವ್ರತವೋ, ಗೃಹಸ್ಥಾಶ್ರಮವೋ ೧೩ ಒಂದಾದರೂ ಪ್ರಸಂಗವನ್ನು ಮಾಧವನು ವ್ಶರ್ಥವಾಗಿ ಹೋಗಗೊಡು ತ್ತಿದ್ದಿಲ್ಲ.. ಇದನ್ನೆಲ್ಲ ಕಂಡು ವಿದ್ಯಾಧರನು ಸೆರಸ್ತ್ಮತಿಯನ್ನು ಆಕೆಯ ಕೇವಲ ನಿರ್ಮಲಾಂತಕರಣಕ್ಕಾಗಿ ಪ್ರೀತಿಸುವನಂದೂ, ಈ ಪ್ರೇ ಮವು ಪ್ರಣಯಪ್ರೇಮವಲ್ಲೆಂದೂ ಮಾಧವನು ತಿಳಿದಿದ್ದನು, ಆದರೆ ಇತ್ತ ನಮ್ಮ ವಿದ್ಯಾಧರನ ವಿಚಾರ ಬೇರೆ ಸರಸ್ವತಿಯ ಗುಣಗಳನ್ನು ಕಂಡು ಆಕೆಯು ನಿಜವಾಗಿ ಸರಸ್ವತೀ ದೀವಿಯಂತೆ ವಿದ್ಯಾಧರನಿಗೆ ತೋರುತ್ತಿದ್ದಳು, ಇಂಧವಳನ್ನು ಮದುವೆಯೂಗುವದು ತನ್ನಂಧವನಿಗೆ ಶಕ್ಯವಿಲ್ಲೆಂದು ಕಂಡು ಮೊದಲು ವೊದಲು ನಿರ್ಮಲ ಅಂತಃಕರುಣದಿಂದ ಪ್ರೀತಿಸುತ್ತಿದ್ದನು. ಆದರೆ ಬರಬರುತ್ತ ಇದೆಲ್ಲ ಹೋಯಿತು. ಆತನಿಗೆ ಸರಸ್ವತಿಯ ರಮ್ಯವಾದ ಮೂರ್ತಿಯು ಮೇಲಿಂದಮೇಲೆ ನೆನಪಾಗಹತ್ತಿತು. ಸರಸ್ವತಿಯ ಪತ್ರಗಳನ್ನು ಓದಿ ಮನಸ್ಸಿನಲ್ಲಿಯೇ ಆನಂದಪಡುತ್ತಿದ್ದನು ಸರಸ್ವತಿಯ ಗುಣಾನುವರ್ಣ ನವನ್ನು ಕೇಳುತ್ತ ಕೂಡುವದರಲ್ಲಿ ಆತನು ಸಂತೋಷಪಡಹತ್ರಿದನ್ನು, ಆದರೆ ಇವ. ವಿಚಾರಗಳು ಕಾಲಾಂತರದಿಂದ ಮಾಧವನ ದೃಷ್ಟೋ ತ್ಪತ್ತಿಗೆ ಬೀಳದೆ ಉಳಿಯಲ್ಲ. ವಿದ್ಯಾಧರನು ತಾನು ಸರಸ್ವತಿಯನ್ನು ಪ್ರೀತಿಸುತ್ತೇನೆಂದು ಮಾಧವದಣಿಗೆ ಇನ್ನೂ ಹೇಳದ್ದಿಲ್ಲ ಮಾಧನನಾ ದರೂ ಯಾವ ಕಾರಣದಿಂದಲೋ ಏನೋ ಸರಸ್ಪತಿಯನ್ನು ಮದುವೆ ಯಾಗೆಂದು ವಿದ್ಯಾಧರನನ್ನು ಇನ್ನೂ ಕೇಳಿದ್ದಿಲ್ಲ. ವಿವಾಹದ ವಿಷ ಯಕ್ಕೆ ವಿದ್ಯಾಧರನ ವಿಚಾರಗಳೇನೋ ಅಪಕ್ವವಿರುವವೆಂದು ಆತನಿಗೆ ಗೊತ್ತಿತ್ತು. ಸವಮಾಜಸೇವೆಗಾಗಿ ಆಜನ್ಮವೂ ಬೃಮ್ಹುಚಾರಿವೃತವನ್ನು ಕೈಕೊಳ್ಳಬೇಕೆಂದು ಯಾರು ಆತನಿಗೆ ಹೇಳಿದ್ದರೊ ಏನೋ! ಇ.ದ ಕ್ಕಾಗಿ ಆತನ ಎಲ್ಲ ವಿಚಾರಗಳನ್ನು ಸಂಪೂರ್ಣವಾಗಿ ಒಮ್ಮೆ ಕೇಳಿ ಕೊಳ್ಳಬೇಕೆಂದು ಆತನು ಮಾಡಿದನು. ಅದರಂತೆ ಹೊತ್ತು ಸಾಧಿಓ ದಾಗ ಲಕ್ಷಗೊಟ್ಟು ಅಕದಿಗೆ ಎಲ್ಲ ವಿಚಾರಗಳನ್ನು ಚನ್ನಾಗಿ ತಿಳಿಸಿ ೧೮ ಸಮಾಜರಹಸ್ಥ. ಹೇಳಿ ಸಮಾಜಸೇವೆಯ ಯೋಗ್ಯ ಮಾರ್ಗಕ್ಕೆ ಹಚ್ಚಬೇಕೆಂದು ಆತನ ಉತ್ಕಟೇಚ್ಛೆಯಿತ್ತು. ಈ ಕಾರ್ಯದಲ್ಲಿ ತನ್ನ ತಂದೆಯವರ ಸಹಾಯ ವನ್ನು ಪಡೆಯಬಹುದೆಂದು ಅತನು ನಂಬಿದ್ದನು, ಮಹಾವಿದ್ಯಾಲಯದ ಸೂಟಿಯ ದಿವಸಗಳು ತೀರ ಸಮೀಪಕ್ಕೆ ಬಂದವು ಇನ್ನು ೪೫ ದಿವಸಗಳಲ್ಲಿಯೇ ವಿದ್ಯಾಲಯಕ್ಕೆ ಸೂಟಿಯಾ ಗುವದಿತ್ತು, ಆಗ್ಯೆ ಒಂದು ದಿವಸ ಮಾಧವನೂ ವಿದ್ಯಾಧರನೂ ಕೂಡಿ ' ಭಂಡ 'ವನದಕಡೆಗೆ ಹೋದರು. ದರ್ಪಣ ಮಹಾವಿದ್ಯಾಲಯವು ಪುಣ್ಯಪುರದೆೊಳಗೆ ಇರುವ ದೆಂದು ಎಲ್ಲರೂ ಅನ್ನುತ್ತಿದರೂ ನಿಜವಾದ ಸಂಗತಿಯು ಹಾಗಿಲ್ಲ. ದಕ್ಷಿಣ ಮಹಾನಿದ್ಯಾಲಯಕ್ಕೂ ಪುಣ್ಯಪುರಕ್ಕೂ ೨-೩. ಮೈಲು ಅಂತರ, ಊರಹವೆಯು ಸ್ವಚ್ಚವಾದದ್ದಲ್ಲದೆಂದೂ ವಿದ್ಯಾಭ್ಯಾಸಕ್ಕೆ ಏಕಾಂತಸ್ಪಾನವು ಒಳ್ಳೇದೆಂದೂ, ಈ ವಿದ್ಯಾಲಯವನ್ನು ಪುರಣೆಯ ಉತ್ತರಕ್ಕೆ ಇರುವ ಖಡಕಿ ಎಂಬ ಹಳ್ಳಿಯ ಹತ್ತರ ಒಂದು ಪ್ರಶಸ್ತ ವಾದ ದಿನ್ನಿಯ ಮೇಲೆ ಕಟ್ಟಿರುವರು. ಖಡಕಿಯಲ್ಲಿ ೧೮೧೮ನೇ ಇಸ್ವಿ ಯಲ್ಲಿ ಪೇಶ್ವೆಯರಿಗೂ ಇಂಗ್ಲೀಷರಿಗೂ ಒಂದು ದೊಡ್ಡ ಕಾಳಗವಾ ಯಿತಂದು ಇತಿಹಾಸಬಲ್ಲ ವಾಚಕರ ನೆನಪಿನಲ್ಲಿರಬಹದು ಆ ಸಮ ರಾಂಗಣದ ಹತ್ತರವೇ ನಮ್ಮ ದಕ್ಷಿಣ ಮಹಾವಿದ್ಯಾಲಯವಿರುವದು. ಎತ್ತರದ ಮೇಲೆ ಕಟ್ಟಿದ್ದರಿಂದ ಹವೆಯಂತೊ ಬಹಳೇ ಚನ್ನಾಗಿ ಇರುವದು, ಮುಂಬೈಯ ಹವೆಯ ಸೇವನೆಗಿಂತ ಪುಣ್ಣಪು ರದ ಹತ್ತಿರಿದ್ದ ದಕ್ಷಿಣ ವಿದ್ಯಾಲಯದ ಸ್ವಚ್ಛ ವಾತಾವರಣವನ್ನು ವಿದ್ಯಾರ್ಥಿಗಳು ಹೀಗೆ ಬಯಸುತ್ತಿದ್ದರೆಂಬದು ಮುಂಬಾಪುರಸ ನಾದ ಮಾಧವನ ಸ್ಥಿತಿಯಿಂದ ಕಂಡುಕೊಳ್ಳಬಹುದು. ದಕ್ಷಿಣ ಮಹಾವಿದ್ಯಾಲಯಸ್ಥರಿಗೆ ಇನ್ನೊಂದು ಆಲ್ಹಾದಕಾರಕ ಸಂಗತಿಯೆಂದರೆ ಮೇಲೆ ಹೇಳಿದ್ದ ಬಂಡವನವು. ಈ ವನವು ವಿದ್ಯಾಲ ಬ್ರಮ್ಮ ಚಾರಿವ್ರತವೋ, ಗೃಹಸ್ಥಾಶ್ರಮವೋ ೧೯ ಯದ ತೀರ ಸಮೀಪದಲ್ಲಿದ್ದದರಿಂದ ವಿಜ ವಿದ್ಯಾರ್ಥಿಗಳು ಸಂಜೆಯ ಮುಂದೆ ಈವನದ ಕಡೆಗೆ ಹೋಗುವ ಪರಿಪಾಠವನ್ನು ಇಟ್ಟದ್ದರು ಅಕ್ಕತಂಗಿಯರಂತೆ ಮುಳಾಮುಠಾ ನದಿಗಳು ಒಂದನ್ನೊಂದು ತೆಕ್ಕೆಹಾಯ್ದು ಉಲ್ಹಾಸದ ಮಂಜುಲ ಧ್ವನಿಯಿಂದ ಹಾಡುತ್ತ ಬಂಡ ವನದ ಹತ್ತಿರದಿಂದಲೇ ಹಾಯ್ದು ಹೋಗುತ್ತವೆ. ವನದ ಪಶ್ಚಿಮ ದಂಡೆಯ ಸಮೀಪದಲ್ಲಿ ನದಿಗಳ ಪ್ರವಾಹಕ್ಕೆ ದೊಡ್ಡ ಒಡ್ಡು (Bund) ಹಾಕಿರುವರು ಆದ್ದರಿಂದಲೇ ಈ ವನಕ್ಕೆ' ಬಂಡ 'ವನವೆಂದು ಹೆಸರು ಬಿದ್ದದೆ. ತಮ್ಮ ಸಂಗೀತಕ್ಕೆ ಅಡ್ಡಿ ಮಾಡುವದಕ್ಕಾಗಿ ಯಾರೋ ತಮ್ಮ ಹಾದಿಯಲ್ಲಿ ಅಡ್ಡವಾಗಿ ಮಲಗಿರುವರಂದು ತಿಳಿದು ಈ ನದಿ ಗಳು ಹಾಡುತ್ತಲೇ ತುಸು ತೀವ್ರದಿಂದ ನಡಿಯುತ್ತ ಬಂದು ಜಿಗಿದು ಹೋಗುವಂತೆ ಈ ಒಡ್ಡಿನ ಮೇಲಿಂದ ಜಿಗಿದು ತುಷಾರ ರೂಪದಿಂದ ಕಣ್ಣಿಗೆ ಮನೋಹರವಾಗಿ ಕಾಣಿಸುತ್ತವೆ. ಸಂಜೆಯ ವೇಳೆಯ ಲ್ಲಂತೂ ಈ ತುಷಾರದೊಳಗಿಂದ ವಿಶೇಷ ರಮಣೀಯವಾಗಿ ಕಾಣುವ ಕಾಮನಬಿಲ್ಲನ್ನು ನೋಡುವದಕ್ಕಾಯೋ ಏನೋ ಈ ಒಡ್ಡಿನ ಹತ್ತರ ಜನರು ಒಂದೇಸವನೆ ನೆರೆಯುತ್ತಲೇ ಇರುವರು. ಪಾಪ! ನದಿ ಗಳಿಗೆ ಒಡ್ಡು ಜಿಗಿದು ಹೋಗುವದಕ್ಳಾಗಿ ಎಷ್ಟು ಶ್ರಮ! ಆದರೆ ಪ್ರೇಕ್ಷಕರುಮಾತ್ರ ಈ ಅಕ್ಕತಂಗಿಯರ ವಕ್ರಗತಿಯನ್ನು ನಿಂದಿಸಿ ಕುಚೇಷ್ಟೆಯನ್ನು ಮಾಡಿ ನಗುತ್ತ, ಅಲ್ಲಿಯೇ ಇದ್ದ ಪಾವುಟಿಗೆಗಳ ಮೇಲೆ ಕುಳಿತುಕೂಳ್ಳುವರು. ಒಬ್ಬರ ಸಂಕಟಕ್ಕೆ ಮತ್ತೊಬ್ಬರು ನಗುವರು! ನೋಡಿದಿರಾ ಸೃಷ್ಟಿನಿಯಮವನ್ನು'! ಇದೇ ನದಿಯಲ್ಲಿ ಮತ್ತೊಂದು ಕಡೆಗೆ ದಕ್ಷಿಣ ಮಹಾವಿದ್ಯಾ ಲಯದ ' ನೌಕಾಲಯು 'ವಿರುವದು. ಸಂಜೆಯ ವೇಳೆಯಲ್ಲಿ ಎಷ್ಟೊ ವಿದ್ಯಾರ್ಥಿಗಳು ತಮ್ಮ ನೌಕೆಗಳನ್ನು ತೆಗೆದುಕೊಂಡು ಅತ್ತಿಂದ ಇತ್ತ ಇತ್ತಿಂದ ಅತ್ತ ನೀರಿನಲ್ಲಿ ಓಡಾಡಿಸುತ್ತಿರುವರು. ಇದರಿಂದ ಆ ನೌಕೆಗೆ ೨೦ ಸಮಾಜರಹಸ್ಯ ಮಾತ್ರ ಏನೂ ಶ್ರಮವಾಗದಂತೆ ತೋರುತ್ತದೆ. ವಾಚಕರೇ, ಅತ್ತ ಕಡೆಗೆ ನೋಡಿರಿ ಒಂದು ನೌಕೆಯು ಮತ್ತೊಂದು ನೌಕೆಯ ಹತ್ತರ ಹೋಗಿ ತಬ್ಬಿ ಆನೆಗಳು ಜಲಕ್ರೀಡೆಯನ್ನು ಮಾಡುವಂತೆ ಹೇಗೆ ಉಲ್ಲಾಸವೃತ್ತಿಯಿಂದ ಜಿಗಿದಾಡುತ್ತಿರುವವು, ಈ ಜಲಕ್ರೀಡೆಯನ್ನು ನೋಡುವದಸಕ್ನಾಗಿಯೂ ಎಷ್ಟೋ ಜನರು ನೆರೆದಿರುವರು,. ತರುಣರೂ ತರುಣಿಯರೂ ಏನೋ ಹುಡುಕಾಡುತ್ತಿರುವಂತೆ ಅತ್ತಿಂದ ಇತ್ತ ಇತ್ತಿಂದ ಅತ್ತ ಓಡಾಡುತ್ತಿರುವರು. ಅವರಲ್ಲಿ ಕೆಲವರು ಹುಡು ಕುವ ವಸ್ತುವು ಲಭಿಸಿತೆಂದು ಆನಂದದಿಂದ ನಕ್ಕು ತಮ್ಮ ಮಿತ್ರರಿಗೂ ಅದನ್ನು ತೋರಿಸುತ್ತಿರುವರು. ಕೆಲವರು ಅಪಜಯದಿಂದ ಕ್ರೋಧ ಗೊಂಡು ಒಮ್ಮೆ ನೌಕೆಯನ್ನೂ ಮತ್ತೊಮ್ಮೆ ನೀರಿನ ಹಾರಾಟವನ್ನೂ ನೋಡುತ್ತ ಹೇಗಾದರೂ ಮಾಡಿ ಕಾಲ್ಫನಿಕ ಮನರಂಜನೆಯನ್ನು ಮಾಡಿ ಕೊಳ್ಳುತ್ತಿರುವರು ವಾಚಕರೇ, ಮತ್ತೊಂದು ಕಡೆಗೆ ನೋಡಿ ದಿರೇನು? ನೋಡಿರಿ! ಅಲ್ಲಿ ಹೇಗೆ ಸಣ್ಣ ಬಾಲಕರು. ವನದೊ ಳಗೆ ಅಲ್ಲಲ್ಲಿ ಮಾಡಿಟ್ಟಿದ್ದ ಕಲ್ಲಿನ ಹುಲಿಸಿಂಹಗಳ ಮೇಲೆ ಜಿಗಿಜಿಗಿದು ಕುಳಿತು ತಮ್ಮ ಅಚಲ ಧೈರ್ಯವನ್ನೂ ಪರಾಕ್ರಮವನ್ನೂ, ಹುಲಿ ಯ ಅಪೌರುಷತ್ವವನ್ನೂ ತಮ್ಮ ತಾಯಿಗೆ ಹೇಳೆ ಉರಳಾಡಿ ನಗು ತ್ತಿರುವವು ಮತ್ತೆ ಕೆಲ ಬಾಲಕರು ಅಂಜಿಕೆಯಿಲ್ಲದೆ ಹುಲಿಯ ಬಾ ಯಲ್ಲಿ ತಮ್ಮ ಕೋಮಲವಾದ ಕರಗಳನ್ನು ಹಾಕುತ್ತಿರುವರು, ಸಣ್ಣ ಹುಡುಗರನ್ನು ನೊಯ್ಯಿಸಬಾರದೆಂಬ ವಿಚಾರವನ್ನು ಮಾಡಿಯೇ ಹುಲಿಯು ಸುಮ್ಮನ ಕುಳಿತು ಈ ಚೇಷ್ಟೆಗಳನ್ನು ತಡಕೊಳ್ಳುವದು! ಪ್ರತಿದಿನ ಸಂಜೆಯಲ್ಲಿಯೂ ಇದೇ ತರದ ಗೊಂದಲವಾದರೂ ವನವು ದೊಡ್ಡದಿದ್ದದರಿಂದ ವನದಲ್ಲಿ ಏಕಾಂತ ಸ್ಥಳಗಳನ್ನು ಬಹಳವಾಗಿ ಕಾಣಬಹುದಾಗಿದೆ. ಈ ಸ್ಫಳದಲ್ಲಿ ಸಂಜೆಗೆ ಅಷ್ಟರಸಗಳನ್ನು ಕಾಣಬಹುದೆಂದು ಹೇಳುತ್ತಾರೆ. ಯಾರ ಮುಖದ ಮೇಲೆ ಅನಂದವು ಹೊಳೆಯುತ್ತಿದ್ದು, ಮತ್ತೆ ಯಾರ ಮುಖದ ಮೇಲೆ ಗಾಂಭೀರ್ಯವು ಬ್ರಹ್ಮಚಾರಿವ್ರಕವೋ, ಗೃಹಸ್ಥಶ್ರಮವೋ? ೨೧ ತಲೆದೋರುತ್ತದೆ; ಮತ್ತೆ ಕೆಲವರ ಮುಖಗಳ ಮೇಲೆ ಸುಪ್ರಸನ್ನ ತೆಯೂ ಕುಣಿಯುತ್ತಿರುವದು. ಕೆಲವರು ಸಿಟ್ಟಿನಿಂದ ಕಾಲು ಅಪ್ಪಳಿ ಸುತ್ತ ವಸುಂಧರಯನ್ನು ಒಳ್ಳೇ ಬಲದಿಂದ ಒದೆದು ಆಕೆಗೆ ಶಾಪವ ನ್ನೀಯುತ್ತಿರುವಂತೆ ತೋರುತ್ತಿತ್ತು. ಬಾಲಕರ ನಿಸರ್ಗ ಸೌಂದ ರ್ಯವೂ ಅವರ ಮಂಜುಳ ಕಿಲಕಿಲಾಟವೂ, ಎತ್ತ ನೋಡಿದತ್ತ ಹಬ್ಬಿ ಕೊಂಡು ಪ್ರೇಕ್ಷರಿಗೆ ಆನಂದವನ್ನೀಯುತ್ತಿರುವದು. ಇಂಧ ತಂಪು ಹೊತ್ತಿನಲ್ಲಿ ವಾಸರ-ಮಣಿಯು ಸಹಸ್ರಕರಗಳನ್ನು ಚಾಚಿ ಮುಗುಳು ನಗೆಯಿಂದ ವನದೊಳಗಿನವರನ್ನು ಸಾವಕಾಕವಾಗಿ ಬೆನ್ನ ಮೇಲೆ ಚಪ್ಪರಿಸಿ ಆನಂದದಿಂದ ರಕ್ತರ್ವಣದ ಮಾಡಿಕೊಂಡು ವನಸ್ಥ ನಾಗರಿಕರನ್ನು ಹೆಚ್ಚಿಗೆ ಅನಂದಗೊಳಸುತ್ತೆಲ್ಲೇ ತನ್ನ ಇತಃಪರ ರಾಜ್ಯವನ್ನು ಆಳಲಿಕ್ಕೆ ಅಪ್ಪಣೆಯನ್ನು ಪಡೆಯುತ್ತಿದ್ದನು. ಇರಲಿ ಇಂಧ ಮನೋಹರ ಸ್ಪಳದಲ್ಲಿ ಆನಂದರಸವನ್ನು ಸೇವಿಸುವದಕ್ಕ ನಮ್ಮ ವಿದ್ಯಾಧರನೂ ಮಾಧವನೂ ಬಂದಿದ್ದರು. ಇಬ್ಬರು ಮಿತ್ರರು ಅತ್ತಿತ್ತ ತಿರುಗಾಡಿ ಕಡೆಗೆ ಮಲಿಗೆಯ ಮಂಟಪ ದೊಳಗೆ ಇಟ್ಟಿದ್ದ ಒಂದು ಬಾಕಿನ ಮೇಲೆ ಕುಳಿತುಕೊಂಡರು. ಇತ್ತ ಕಡೆಗೆ ಯಾವ ತರದ ಗೊಂದಲವು ಇಲ್ಲದ್ದರಿಂದ ಮಂದಮಾರು ತನು ಮಲ್ಲಿಗೆಯ ಮಂಟಪದೊಳೆಗೆ ಬಂದು ಮಂದಮಂದವಾಗಿ ಸುಗಂಧರಸವನ್ನು ಬೀರುತ್ತಿದ್ದನು. ಇಂದು ವಿದ್ಯಾಧರನ ಎಲ್ಲ ವಿಚಾ ರಗಳನ್ನು ಕೇಳಬೇಕಂದು ಮಾಧವನ ಮನಸ್ಸಿನಲ್ಲಿ ಬಂದಿತು. ಆತನು ಅದರಂತೆಯೇ ಮಾತು ಮಾತಾಡುವಾಗ ಅಂದದ್ದು--- ಮಾಧವ.--ವಿದ್ಯಾಧರಾ, ಇನ್ನು ತುಸು ದಿವಸಗಳಲ್ಲಿಯೇ ಸೂಟಿಯಾಗುವದು. ಆದ್ದರಿಂದ ನೀನು ಹೋಗಬೇಕೆಂದು ನಿಶ್ಚಯಿಸಿರುವಿ? ೨೨ ಸಮಾಜರಹಸ್ಥ, ವಿದ್ಯಾ:-- ಸಮಾಜಸೇವೆಯ ಕಾರ್ಯವನ್ನು ಮಾಡಲು ನಿಶ್ಚ ಯಿಸಿದ್ದೇನೆ. ಆದ್ದರಿಂದ ಎಲ್ಲಕಡೆಯಲ್ಲಿಯೂ ತಿರುಗಾಡಿ ಅದಕ್ಕಾಗಿ ಯತ್ನಿಸುವೆನು. ಮಾಧ:- ಹೌದು ! ಒಳ್ಳೇ ನೆನಪಾಯಿತು !! ವಾರ್ಷಿಕ ಸಭೆಯ ದಿವಸದಿಂದ ಒಮ್ಮೆ ವಿವಾಹದ ವಿಷಯಕ್ಕೆ ನಿನ್ನ ಎಲ್ಲ ವಿಚಾ ರಗಳನ್ನು ತಿಳಿದುಕೊಳ್ಳಬೇಕೆಂದು ನನಗೆ ಕುತೂಹಲವುಂಟಾಗಿರು ವದು. ದಯಮಾತಾಡಿ ಹೇಳಿದರೆ ನೆಟ್ಟಗಾಗುವದು. ಒಬ್ಬರ ವಿಚಾರ ಗಳನ್ನು ಮತ್ತೊಬ್ಬರಿಗೆ ಹೇಳಿ ಯೋಗ್ಯ ಮಾರ್ಗದಿಂದಲೇ ನಡೆಯ ಲಿಕ್ಕೆ ಒಳ್ಳೇದಾಗುವದು. ಹೇಳು ನೋಡುವಾ ! ಒಮ್ಮೆ ನಿನ್ನ ಎಲ್ಲ ವಿಚಾರಗಳನ್ನು! ವಿದ್ಯಾ:--ವಿಚಾರವೆಂಥದು! ಈ ಕಷ್ಟಮಯ ಸಂಸಾರ ಯಾತ್ರೆಯು ಓಮ್ಮೆ ಹತ್ತಿತೆಂದರೆ ಯಾವ ಯಾವ ಸಂಕಟಗಳು ಬರ ಬಹುದೆಂಬ ಕಲ್ಪನೆಯೇ ನನಗೆ ಆಸಹ್ಯವಾಗಿರುವದು. ಒಮ್ಮೆ ಪ್ರಪಂಚದಲ್ಲಿ ಬಿದ್ದೆವೆಂದರೆ ನಮ್ಮ ಸಮಾಜಕ್ಕೂ, ನಮ್ಮ ದೇಶಕ್ಕೂ ಏನೂ ಸಹಾಯಮಾಡಲಿಕ್ಕಾಗುವದಿಲ್ಲ. ಹೆಂಡಿರುಮಕ್ಕಳಿಗೆ ಅನ್ನ ವನ್ನು ತಂದುಹಾಕುವದರಲ್ಲಿಯೇ ಆಯುಷ್ಯವು ಕ್ಷೀಣವಾಗಬಹುದು.; ಆದ್ದರಿಂದಲೇ ನಾನು ವಿವಾಹವನ್ನು ಮಾಡಿಕೊಳ್ಳದೆ ಆಜನ್ಮ ಬ್ರಮ್ಹ ಚಾರಿವ್ರತದಿಂದಲೇ ಇದ್ದು ಶಕ್ತಿಯಿರುವವರೆಗ ಆನಂದದಿಂದಲೂ ಉತ್ಸಾಹದಿಂದಲೂ ಸಮಾಜಸೇವೆಯನ್ನೂ ದೇಶಸೇವೆಯನ್ನೂ ಮಾಡದೆ ಒಂದು ಕ್ಷಣವನ್ನು ಸಹ ವೆಚ್ಚಮಾಡಬಾರದೆಂದು ನಿಶ್ಚಿಯಿಸಿದ್ದೇನೆ. ಅದರಂತೆ ಮೊನ್ನೆ ಪ್ರತಿಜ್ಞೆಯನ್ನು ಮಾಡುವ ಸುದಿನವು ಬಂದಿರಲು ನೀನು ನಡುವೆ ಯಾಕೆ ಪ್ರತಿಬಂಧಿಸಿದಿಯೋ ಯಾರಿಗೆ ಗೊತ್ತು! ಆದರೂ ನಿನ್ನ ವಿಚಾರಗಳೇನೋ ಬೇರೆ ಇರಬಹುದಿಂದು ನಂಬಿ ಅಂಥ ಮಾನಹಾನಿಯನ್ನು ಸಹ ಸಹಸಿದೆನು. ಬ್ರಹ್ಮಚಾರಿವ್ರತವೋ, ಗೃಹಸ್ಫಾಶ್ರಮವೋ? ೨೩ ಮಾ:--ನಿನ್ನ ಅವ್ಯಾಜ ಪ್ರೀತಿಗಾಗಿ ನಾನು ನಿನಗೆ ತುಂಬಾ ಋಣಿಯಾಗಿದ್ದೇನೆ. ಆದರೆ ವಿವಾಹವೆಂದರೇನೋ ನಿನಗೆ ಚನ್ನಾಗಿ ತಿಳಿದಂತೆ ತೋರುವದಿಲ್ಲ. ಎಲ್ಲಿಯಾದರೂ ಒಬ್ಬ ದುಷ್ಟಸ್ತ್ರೀಯನ್ನು ನೋಡಿರಬಹುದು, ಅಥವಾ ಎಲ್ಲಿಯಾದರೂ ಅಂಥವಳ ಇತಿಹಾಸ ವನ್ನು ಓದಿರಬಹುದು, ಇಷ್ಟರಿಂದಲೇ ಜಗತ್ತಿನೊಳಗಿನ ಎಲ್ಲ ಸ್ತ್ರೀಯರೂ ಹಾಗೆ ಇದ್ದ ತಮ್ಮ ಗಂಡಂದಿರಿಗೆ ಸುಖಕೊಡದೆ ಆವರ ಕರ್ತವ್ಯದಲ್ಲಿ ಅಡ್ಡಬರುವರೆಂದು ಮಾತ್ರ ತಿಳಕೊಂಡಿರ ಬಹುದು. ವಿವಾಹವೆಂದರೆ ಸಮಾಜಸೇವೆಯ ಕಾರ್ಯದಲ್ಲಿ ವಿಘ್ನ ವಲ್ಲ. ನಮ್ಮ ಮುಂದಿನ ಆಯುಷ್ಕ್ರಮದಲ್ಲಿಯ ಮಹತ್ವಾಕಾಂಕ್ಷೆಗ ಳನ್ನೂ ನಮ್ಮ ದೇಶಕ್ಕಾಗಿ ನಾವು ಮಾಡುವ ಕರ್ತವ್ಯಕರ್ಮಗಳನ್ನೂ ಜರುಗಿಸಿಕೊಳ್ಳುವದಕ್ಕೆ ಪ್ರತಿಬಂಧಮಾಡದೆ ನಮ್ಮ ಕಾರ್ಯದಲ್ಲಿ ಪೂರ್ಣ ಸಹಾಯಕಳಾಗುವಂಥ ಒಬ್ಬ ಸ್ತ್ರೀಯಯನ್ನು ಧರ್ಮವಿಧಿಯಿಂದ ಗ್ರಹಿಸುವದಕ್ಕೆ ವಿವಾಹವೆಂದೆನ್ನುವರು. ವಿವಾಹವಾದ ಮೇಲೆ ಹೆಂಡ ತಿಯ ಸಹಾಯದಿಂದ ಇಮ್ಮಡಿ ಬಲಬಂದಂತಾಗಿ ನಮ್ಮ ಕಾರ್ಯದಲ್ಲಿ ಯಶಸ್ಸು ದೊರೆಯುವದು ನಿಶ್ಚಯವೇ. ಗಂಡಹೆಂಡಂದಿರ ಶರೀರಗಳು ಎರಡು ಇದ್ದರೂ ಅವರ ಅಂತಃಕರುಣವು ಒಂದೇ. ಗಂಡನ ಉನ್ನ ತಿಯೇ ಹೆಂಡತಿಯ ಉನ್ನತಿಯ, ಅವನ ಸುಖವೇ ಆಕೆಯ ಸುಖವು, ಅವನ ಕೀರ್ತಿಯೇ ಆಕೆಯ ಕೀರ್ತಿಯು. ಇದನ್ನೆಲ್ಲ ಬಿಟ್ಟು ವಿವಾಹ ದಿಂದ ಸಮಾಜಸೇವೆಗೆ ವಿಘ್ನವಾಗಬಹುದೆಂಬ ವನ್ನ ವಿಚಾರವು, ಹೆಂಡತಿಯೆಂದರೆ ಸಂತತಿಯನ್ನು ಹೆಚ್ಚಿಸುವ ಜೀವಂತ ಯಂತ್ರವೆಂದು ತಿಳಿದು, ಅವಳನ್ನು ಅದೇ ರೀತಿಯಿಂದ ವಿದ್ಯೆ ಕಲಿಸದೆ ಸತತ ಅಜ್ಞಾನದಲ್ಲಿಟ್ಟು ಆಕೆಯ ಯಾವತರದ ಉನ್ನತಿಗೂ ಯತ್ನಿಸ ಬಾರದೆಂದು ಅನ್ನುವ ಮೂರ್ಖ್ಯರ ವಿಚಾರದಷ್ಟು ಹಾಸ್ಯಾಸ್ಪದವಾಗಿ ರುವದು. ಜೀವದಿಂದ, ಧರ್ಮದಿಂದ ಯಾರು ಬದ್ಧರಾಗುವರೋ, ಕರ್ತವ್ಯದಲ್ಲಿ ನಮಗೆ ಯಾರು ಅನಂತ ಸಹಾಯವನ್ನು ಮಾಡುವ ೨೪ ಸಮಾಜರಹಸ್ಯ ರೋ, ನಮಗೆ ಉದಾಸೀನತೆ ಬಂದಾಗ ಬೇನೆಬಂದಾಗ ಏಕಜೀವತ್ವ ದಿಂದ ಶುಸ್ರೂಷೆಯನ್ನು ಮಾಡಿ, ನಾವು ಆನಂದದಿಂದಿದ್ದಾಗ್ಗೆ ತಮ್ಮ ಸ್ವರ್ಗೀಯಪ್ರೇಮದಿಂದ ಸ್ವರ್ಗವು ಇನ್ನು ಎರಡೇ ಬೊಟ್ಟು ಉಳೆದಿ ರುವದೆಂದು ತಿಳಿಯಲು ಯಾರು ಆಸ್ಪದವನ್ನೀಯುವರೋ, ಅವರಿಗೆ ನಮ್ಮ ಕಾರ್ಯದಲ್ಲಿ ವಿಫ್ನವೆಂದು ತಿಳೆದುಕೊಳ್ಳುವದೆಂದರೆ ಎಷ್ಟು ಮೂರ್ಖತನದ ವಿಚಾರವಿರುವದೆಂದು ನೀನೆ ತಿಳಿದುನೋಡು ಪ್ರಜೋ ತ್ಪಾದನವು ವಿವಾಹದ ಮುಖ್ಯ ಕಾರಣವಲ್ಲ. ಈ ಜಗತ್ತಿನಲ್ಲಿ ಯಾವಾ ಗಲೂ ನಮ್ಮಲ್ಲಿ ಐಕ್ಯಹೊಂದಿ ತನಮನದಿಂದಲೂ ನಮ್ಮನ್ನು ಹಿಂಬಾ ಲಿಸಿ ನಮ್ಮ ಆಂಗೀಕೃತಕಾರ್ಯಕ್ಕೆ ಸಹಾಯಮಾಡುವವಳೇ ಹೆಂಡ ತಿಯ ಸ್ವರ್ಗಿಯಪ್ರೇಮದಿಂದ ಯಾವ ಎರಡು ಅಂತಃಕರುಣಗಳು ಒಂದರೊಂದಲ್ಲಿ ಲೀನವಾಗಿ ಹೋಗುವವೋ, ಆಯುಷ್ಯವೆಂದರೆ ಸುಖೋಪಭೋಗದ ಸಾಧನವಿರದೆ ಯಾವದೋ ಒಂದು ಉಚ್ಚತಮ ಧ್ಯೇಯಪ್ರಾಪ್ತಿಗಾಗಿ ಕೊಟ್ಟಿದ್ದ ಅಮೌಲ್ಯ ವೇಳೆಯೆಂದು ಯಾರ ನಿಷ್ಠೆಯೋ ಇಂಧ ಎರಡು ಅಂತಃಕರುಣಗಳು ಒಂದೇ ಸ್ಥಳದಲ್ಲಿ ಬಂದದರಿಂದ ಒಂದಕ್ಕೊಂದು ಆಕರ್ಷಿಸಲ್ಪಟ್ಟ ಎರಡೂ ಸಂಲಗ್ಗವಾದ ಮೇಲೆ ಧರ್ಮಾನುಸಾರವಿಧಿಯಿಂದ ಬಂಧನೆಯೇ ವಿವಾಹವು. ಹೀಗಿ ದ್ದರೆ ನಿನಗೆ ವಿಫ್ನವೆಲ್ಲಿ? ಅಶ್ಚಪತಿಯ ಮಗಳು ಈ ತರದ ಎರಡನೇ ದೊಂದು ಪ್ರಾಣವನ್ನು ತಾನೇ ಹುಡುಕಿ ತೆಗೆದು ಕ್ಷೀಣಾಯುಯೆಂದು ನಾರದಮಹರ್ಷಿಗಳು ಹೇಳಿದರೂ, ತಾಯಿತಂದೆಗಳು ಹಾಗೆ ಮಾಡ ಬೇಡೆಂದು ತೆಡೆಯುತ್ತಿರಲೂ, ತನ್ನ ಪ್ರೇಮಬಲದಿಂದ ತಾನು ಬೇಕಾ ದದ್ದು ಮಾಡಬಹುದೆಂದು ನಂಬಿ, ಅದವಾ ಈ ತರದ ಉತ್ಕಟಪ್ರೇಮ ವನ್ನು ಒಂದು ವರ್ಷದವರೆಗೆ ಸೇವಿಸುವದೇ ಲೇಸೆಂದು ಹೇಳಿ ದ್ಯುಮ್ನ ತ್ಸೇನ ಮಹಾರಾಜನ ಮಗನಾದ ಸತ್ಯವಾನನನ್ನು ಮದುವೆಯಾಗಲಿ ಲ್ಲವೇ? ಮುಂದೆ ಆಕೆಯು ಪತಿಯಲ್ಲಿದ್ದ ತನ್ನ ಉತ್ಕಟಪ್ರೇಮಬಲದಿಂದ ತನ್ನ ತಂದೆಮಾವಂದರಿಗೆ ಸಂತತಿಸುಖೈಶ್ವರ್ಯವನ್ನೂ, ಪ್ರತ್ಯಕ್ಷ ತನ್ನ ಬ್ರಹ್ಮಚಾರಿವ್ರತವೋ, ಗೃಹಸ್ಥಾಶ್ರಮವೋ? ೨೫ ಪತಿಗೆ ಪ್ರಾಣದಾನವನ್ನೂ ದೊರಕಿಸಿಕೊಂಡು ಎಲ್ಲರನ್ನು ಸುಖಿಯಾಗ ಮಾಡಲ್ಲವೇ? ಮೇಲಾಗಿ ಸುಶಿಕ್ಷಿತ ಗಂಡಹೆಂಡಂದಿರಿಂದ ಒಳ್ಳೇ ಸಂತತಿಯಾಗಿ ಸಮಾಜಸುಧಾರಣೆಯು ತೀವ್ರವೇ ಆಗಲಿಕ್ಕೆ ಆಸ್ಪದವು ದೊರೆಯುವದು ಇಲ್ಲದಿದ್ದರೆ ಮುಂದಿನ ಸಂತತಿಯು ದುರ್ಬಲ ವಿಲ್ಲವೆ ದುಷ್ಚವಾದರೆ ನೀನೇ ಏಕೆ, ನಿನ್ನಂದ ಸಾವಿರಾರು ಜನರು ಬ್ರಹ್ಮಚಾರಿವ್ರತದಿಂದ ಇದ್ದು ಸಮಾಜೋನ್ನತಿಗಾಗಿಯೇ ಏಳು ಜನ್ಮ ತೆಗೆದುಕೂಂಡರೂ ಅದು ಇನ್ನೂ ಅಪೂರ್ಣವೇ ಉಳಿದೀತು: ಸುಶಿ ಕ್ಷಿತ ಜನರು ವಿವಾಹಮಾತಾಡಿಕೊಂಡರೆ ಸಮಾಜದಲ್ಲಿಯ ಮತ್ತೊಂದು ಜೀವದ ಉನ್ನತಿಯಾಗಿ ಅವರಿಂದ ಹುಟ್ಟಿದ ಸಂತತಿಯೂ ಸಮಾಜಕ್ಕೆ ಭೂಷಣಾಸ್ಪದವಾದೀತು. ಹೆಂಗಸರಲ್ಲಿ ನಿನ್ನಷ್ಟ್ವೇ ಅಲೌಕಿಕಶಕ್ತಿಯೂ ಬುದ್ಧಿ ಸಾಮರ್ಥ್ಯವೂ ಇರುವದು. ನಿನ್ನನ್ನು ಶಾಲೆಗೆ ಹಾಕಿ ವಿದ್ಯೆ ಕಲಿ ಸದಿದ್ದರೆ ನೀನು 'ಮನುಷ್ಯರೂಪಿಮೃಗವಾಗಿ' ಹೇಗೆ ಚರಿಸುತ್ತಿದ್ದಿಯೋ ಹಾಗೆಯೇ ಹೆಂಗಸರನ್ನು ವಿದ್ಯೆಕಲಿಸಿ ಸುಶಿಕ್ಷಿತರನ್ನಾಗಿ ಮಾಡಿ ಅವರ ಕಡೆಯಿಂದ ಸಮಾಜಕ್ಕೆ ಆಗತಕ್ಕ ಸಹಾಯಗಳನ್ನು ಮಾಡಿಸದಿದ್ದರೆ ಸಮಾಜರೂಪಿ ರಥಕ್ಕೆ ಎರಡನ್ನೇ ಗಾಲಿಯಂತಿದ್ದ ಸ್ತ್ರೀಯು ನಿರುಪ ಯೋಗಿಯಾಗಿ ಮೊದಲನೇ ಗಾಲಿಯೂ ಕೂಡ ನಿರುಪಯೋಗವಾಗು ವದು. 'ಹೆಂಗಸರೆಂದರೆ ಮೊಣಕಾಲಿಗಿಂತ ಕಡೆ' ಎಂದು ಹೇಳಿ ಅವರಿಗೆ ನಿಮ್ಮ ಅಂತಃಕರಣದಲ್ಲಿ ಸ್ಥಳಕೊಡದಿದ್ದರೆ ಎಲ್ಲವೂ ಹೇಗೆ ನಿಲ್ಲುವದೆಂದು ನಿನಗೆ ಈಗಾದರೂ ತಿಳೆಯಿತೇ? ಮಾಧವನು ಹೀಗೆಂದು ಸುಮ್ಮನಾದನು, ಅತ್ತ ವಿದ್ಯಾಧರನು ಕಲ್ಲುಗೊಂಬೆಯಂತೆ ಇದನ್ನೇ ಕೇಳುತ್ತ ಆಶ್ಚರ್ಯಚಕಿತನಾಗಿ ಕುಳಿ ತಿದ್ದನು. ಮಾಧವನ ಈ ತರದ ವಿಚಾರಕ್ಕಾಗಿ ಅತನು ಧನ್ಯನೆಂದು ಅನ್ನಹತ್ತಿದನು. ಎಲ್ಲವೂ ಆತನಿಗೆ ಸರಿಯಾಗಿ ತೋರಿತು. ಇಷ್ಪು ದಿವ ಸಗಳವರಗೆ ಆತನಲ್ಲಿದ್ದ ವಿಚಾರಗಳೆಲ್ಲ ಹೋಗಿ ಹೊಸ ಚೇತನೆ ೨೬ ಸಮಾಜರಹಸ್ಯ ಬಂದಂತಾಗಿ ತಾನು ಈಗ ಹೊಸ ಜಗತ್ತಿನಲ್ಲಿ ಕುಳಿತಂತೆಯೂ ತೋರಿತು; ಅಸ್ಚರಲ್ಲಿ ಪುನಃ ಮಾಧವ:--ಯಾಕೆ ವಿದ್ಯಾಧರ ನನ್ನ ವಿಚಾರಗಳು ನಿನಗೆ ಹೇಗೆ ತೋರುತ್ತವೆ? ಸುಮ್ಮನೆ ಆಜನ್ಮ ಬ್ರಹ್ಮಚಾರಿಯೆಂದು ಪ್ರತಿಜ್ಞೆ ಮಾಡಲಿಕ್ಕೆ ಸಿದ್ದನಾದ ನಿನಗೆ ಈ ರಹಸ್ಯವು ಏನು ಗೊತ್ತು? ವಿವಾ ಹವನ್ನು ಮಾಡಿಕೊಂಡು ಪತ್ನಿಯ ಸಹಾಯದಿಂದ ಸಮಾಜದ ಏಳ್ಗೆ ಗಾಗಿ ಬೇಕಾದಷ್ಟು ಯತ್ನಿಸು. ನಿನಗೆ ಯಾರೂ ಬೇಡನ್ನಲಾರರು. ವಿದ್ಯಾಧರನು ಏನೋ ಮಾತಾಡಬೇಕೆಂದು ಯತ್ನಿಸಿದನು ಮಾಧ --ಮಾತಾಡು ಹೀಗೆ ಮುಗ್ಧನಂತೇಕೆ ಕುಳಿತಿರುವೆ? ವಿದ್ಯಾ ಮಾತನ್ನು ಕೇಳೆ ನನಗೆ ನಿಜವಾಗಿ ಪುನಶ್ಚ ಜೀವವು ಬಂದಂತಾಗಿರುವದು ನಿಜಕರ್ಮವನ್ನು ತಿಳಿಯದೆ ಆರ್ಜು ನನು ಶಸ್ತ್ರಾಸ್ತ್ರಗಳನ್ನು ತೊರೆದು ನಿಂತಿರಲು ಕರ್ಮಯೋಗಪಾಠ ವನ್ನು ಶ್ರೀಕೃಷ್ಣನು ಆತನಿಗೆ ತಿಳಿಸಿ ಹೇಳಿದಂತೆ ನೀನು ಇಂದು ನನಗೆ ನಿಜ ಮಾರ್ಗವನ್ನು ಹೇಳಿಕೊಟ್ಟಿರುವಿ, ನಾನು ಜನ್ಮಜನ್ಮಾಂತರದಲ್ಲಿ ಯೂ ನಿನ್ನ ಈ ಉಪಕಾರವನ್ನು ಮರೆಯಲಿಕ್ಕಿಲ್ಲ ಮಾಧ;-- ಇದೆಲ್ಲ ಒತ್ತಟ್ಟಿಗಿರಲಿ! ಸೂಟಿಯಾದ ಕೂಡಲೆ ದೀಪಾವಳಿಯ ಹಬ್ಬವಿದ್ದದರಿಂದ ಈಸಾರೆ ನೀನು ನಮ್ಮ ಊರಿಗೆ ಬರಲಿಕ್ಕೇ ಬೇಕು. ತಂದೆಯವರೂ ಮಾತಾಜಿಯವರೂ ನಿನ್ನನ್ನು ಮತ್ತೆ ನೋಡಬೇಕೆಂದು ಇಚ್ಛಿಸುತ್ತಿರುವರೆಂಬ ಸಂಗತಿಯು ಅವರ ಪತ್ರದಿಂದ ಗೊತ್ತಾಗುವದು ಮೇಲಾಗಿ ಸರಸ್ಪತಿಯು ಈ ಸಾರೆ ಬರು ವಾಗ್ಗೆ ನಿನ್ನನ್ನು ಕರೆದುಕೊಂಡುಬಾ ಎಂದು ಹೇಳಿರುವಳು ಇಷ್ಟೆಲ್ಲ ಜನರ ಆಶೆಯನ್ನು ಭಂಗಮಾಡುವದು ಯೋಗ್ಯವಲ್ಲ. ಸರಸ್ವತಿಯ ನೆನಪು ತಗೆದ ಕೂಡಲೆ ವಿದ್ಯಾಧರನ ಮುಖದ ಮೇಲೆ ಆನಂದಲಹರಿಯು ಬಂದಂತಾಗಿ ಮುಗುಳುನಗೆಯಿಂದ ನಗುತ್ತ ದಿವಾಕರಪಂತರು. ೨೭ ತಲೆಯನ್ನು ಆಲ್ಲಾಡಿಸಿ ತುಸು ಅನುಮತಿಯನ್ನಿತ್ತಂತೆ ಮಾಡಿದನು. ತೀರ ಸಂಜಿಯಾಯಿತೆಂದು ತಿಳಿದು ಇಬ್ಬರೂ ವಿದ್ಯಾಲಯದಲ್ಲಿಯ ತಮ್ಮ ಕೋಣೆಗೆ ಹೊರಟುಹೋದರು, ವಿದ್ಯಾಧರನು ಯಾವದೋ ಒಂದು ಮನೋರಾಜ್ಯದಲ್ಲಿ ಈಸಾಡುತ್ತಿದ್ದನು ===== ಚತುರ್ಥ ಪರಿಚ್ಛೇದ. ದಿವಾಕರಪಂತರು ಜಗತ್ತಿನಲ್ಲಿ ಸರ್ವಸುಖಯಾಗಿದ್ದ ಪ್ರಾಣಿಯು ಒಬ್ಬನೂ ಇಲ್ಲ! " ಹೌದು ! -ಈ ಮಹಾತ್ಮರ ಅನುಭವದ ಶಬ್ಧ ಗಳು ಅಕ್ಷರಶಃ ನಿಜವಿರುವವಿಂದು ನಾವಲ್ಲಟೂ ಮನ ಗಾಣಬಹುದು. ಒಬ್ಬ ಮನುಷ್ಯನು ಇಂದು ತೀರ ಸುಖದಿಂದ ಇದ್ದರೆ ನಾಳೆ ಆತನಿಗೆ ಸಂಕಟಪರಂಪರೆಯು ಬೆನ್ನುಹತ್ತಿ ಈ ಜಗತ್ತೇ ಆತ ನಿಗೆ ಬೇಡಾಗಿಹೋಗುತ್ತದೆ. ಈಶ್ವರೀನಿಯಮವೇ ಆಂತಹದಿರುವದು ! ವಸುಂಧರೆಯು ದಿನಕರನ ಸಂಜೆಯ ಹೊತ್ತಿನ ಸುವರ್ಣಮಯ ಬೆಳ ಕಿನಲ್ಲಿ ಆನಂದದಿಂದ ಕುಣಿದಾಡುತ್ತಿರಲು ಬರಬರುತ್ತ ಆಕೆಯ ಈ ಆನಂದಕ್ಕೆ ಕಾರಣೀಭೂತನಾಗಿದ್ದ ದಿನಕರಮಣಿಯನ್ನು ನಿಶಾರಾಕ್ಷ ಸಿಯು ತನ್ನ ಬಾಯಲ್ಲಿ ಹಾಕಿಕೊಂಡು ತನ್ನ ಭೀಷಣಕೃತ್ಯಕ್ಕಾಗಿ ಕತ್ತಲೆಯ ಪಶದಿಂದ ( ಪಾಪ!) ವಸುಂಧರೆಯನ್ನು ಮೂರ್ಛಿತ ಳಾಗಿ ಮಾಡುತ್ತಾಳೆ. ನಮ್ಮ ವಸುಂಧರೆಯು ಆಕೆಯ ಈ ಪ್ರಹಾರ ದಿಂದ ಮೃತವತ್ತ ಆಗತಕ್ಕವಳೇ ಆದರೆ ಇಷ್ಟರಲ್ಲಿ, ದುರ್ಜನರ ದಂಡನೆಗಾಗಿ ಸುಜನರು ಹಾತೊರೆಯುವಂತೆ ವಸುಂಧರೆಯ ಸಹಾ ಯಕ್ಕಾಗಿಯೇ ರಜನೀನಾಥನು ನಕ್ಷತ್ರಗಣಸಹಿತವಾಗಿ ನಭೋಮಂಡ ೨೮ ಸಮಾಜರಹಸ್ಯ ಲದಲ್ಲಿ ಕಾಣಿಸಿ, ಇನ್ನು ನಿನ್ನನ್ನು ಸಂರಕ್ಷಿಸುತ್ತೇನೆ, ಅಂಜಬೇಡ, ಎಂದು ಹೇಳಾವದಕ್ಕಾಗಿಯೇ ಏನೋ, ಹುಡುಕುತ್ತ ತುಸುವೇಳೆಯ ನಂತರ ಬಂದು ಆಕೆಯ ಮೂರ್ಛತೆಯನ್ನು ಹೋಗಲಾಡಿಸುವದ ಕ್ಕಾಗಿ ಯತ್ನಿಸುವನು. ಪಾಪ! ಆತನಲ್ಲಿ ಎಲ್ಲಿ ಇಷ್ಟು ಶೌರ್ಯ! ಮೇಲಾಗಿ ಶತ್ರುವಾದರೂ ಎಂಧ ದೊಡ್ಡವಳು. ಆತನಿಗೆ ಇದರಲ್ಲಿ ಯಶಪ್ರಾಪ್ತಿಯಾಗದೆ ವಸುಂಧರೆಯನ್ನು ಕಾಯುತ್ತ ಕೂಡುವನು. ಮುಂದೆ ಕೆಲವು ವೇಳೆಯನಂತರ ಹನುಮಂತನು ರಾಕ್ಷಸಿಯ ಹೊಟ್ಟೆ ಯನ್ನು ಒಡೆದು ಹೊರಗೆ ಬಂದಂತೆ ನಿಶೆಯ ಹೊಟೈಯನ್ನು ಒಡೆದು ವಸುಂಧರೆಯನ್ನು ಸಂತೋಷಿಸುವದಕ್ಕಾಗಿ ಮತ್ತೆ ದಿನಕರನು ತೀವ್ರ ದಿಂದ ಓಡಿಬರುವನು. ಹೀಗೆ ಎಷ್ಟೋ ದಿವಸಗಳವರೆಗೆ ನಡದೇ ಇರುವದು. ಆಕೆಗೆ ಪೂರ್ಣ ಆನಂದವೂ ಇಲ್ಲ ಇತ್ತ ಪೂರ್ಣ ಸಂಕ ಟವೂ ಇಲ್ಲ. ಕೆಲವು ವೇಳೆ ಅದನ್ನು ಮತ್ತೆ ಕೆಲವು ವೇಳೆ ಎರಡನೇ ದನ್ನು ಅನುಭವಿಸುತ್ತ ಕಾಲಕ್ರಮವನ್ನು ಮಾಡುತ್ತಿರುವಳು. ಕಾಮಿನಿಯರಾದ ಸ್ತ್ರೀಯರ ಸ್ಥಿತಿಯೂ ಇದೇ. ತಮ್ಮ ಪ್ರಾಣ ವಲ್ಲಭರ ಬೋಧಾಮೃತವನ್ನು ಸೇವಿಸುತ್ತ ಅನಂದದಿಂದ ಇರುತ್ತಿ ರಲು "ಕೃಕಕಾರ್ಯಗಳಗೆ ಎಚ್ಚರಾಗಿರಿ, ಇನ್ನು ಪತ್ನಿಯರನ್ನು ಬಿಟ್ಟು ಏಳಿರಿ " ಎಂದು ಕೂಗಿ ದಿನಕರನ ದೂತರಾದ ಕೋಗಿಲೆ, ಕೋಳಿ ಮುಂತಾದವರು ಎಬ್ಬಿಸುತ್ತಿರಲು ಅದಕ್ಕೆ ಕೂಡ ನಾಚದೆ, ದಿನಕರಮಣಿಯು ತನ್ನ ಪ್ರಖರವಾದ ಹಸ್ತಗಳನ್ನು ಕಿಡಿಕೆಯೊಳ ಗಿಂದ ಚಾಚಿ ಹಾಸಿಗೆಗಳ ಮೇಲಿಂದ ಕಿತ್ತಿ ಹಾಕುತ್ತಿರಲು ಅವರಿಗೆಲ್ಲ ಎಷ್ಟು ದುಃಖ !! ಆದರೆ ಮತ್ತೆ ಆನಂದದ ವೇಳೆ ತೀವ್ರ ಬರಬಹು ದೆಂದು ನಂಬಿ ಎದ್ದು ತಮ್ಮ ಗೃಹಕೃತ್ಯಕ್ಕೆ ತೊಡಗುವರು. ಕಮಲಿನಿಯಳಿಗೆ ಚಂದ್ರನನ್ನು ನೋಡಿದ ಕೂಡಲೆ ಎಷ್ಟು ಆನಂದ! ಅದರೆ ಇದೆಲ ಕೆಲಹೂತ್ತಿನವರೆಗೆ ಮಾತ್ರ! !! ದಿವಾಕರಪಂತರು ೨೯ ನಮ್ಮ ಸುಹೃದಯ ವಾಚಕರಿಗೆ ಇಂದು ಇಂಥದೊಂದು ಹೃದ ಯದ್ರಾವಕ ಉದಾಹರಣೆಯನ್ನು ತೋರಿಸುವದಕ್ಕಾಗಿಯೇ ಅವರನ್ನು ಇಷ್ಟು ದೂರದವರೆಗೆ ಪ್ರಣ್ಯಪುರದಿಂದ ನೂರಾರು ಹರದಾರಿಗಳವರೆಗೆ ಪ್ರವಾಸ ಶ್ರಮವನ್ನು ಅನುಭವಿಸಲು ಹಚ್ಚಿ ದಿವಾಕರಪಂತರಕಡೆಗೆ ಒಯ್ಯುತ್ತಿರುವೆವು. ಪುಣ್ಯಪುರದಿಂದ ದಕ್ಷಿಣಕ್ಕೆ ಧಾರವಾಡ ಹುಬ್ಬ ಳ್ಳಿಯ ಕಡೆಗೆ ದಕ್ಷಿಣ ಮಹಾರಾಷ್ಟ್ರ ಕಂಪನಿಯನರದೊಂದು ರೇಲುವಾಾರ್ಗವು ಹೋಗುವದು. ನಮ್ಮ ದಿವಾಕರಪಂತರ ಊರಿಗೆ ಹೋಗಬೇಕಾದರೆ ಇತ್ತಕಡೆಗೆ ಹೊರಡಬೇಕಾಗುವದು. ೧೪-೧೫ ತಾಸುಗಳ ವರೆಗೆ ಬೇಸರಿಕೆಯಿಂದ ವ್ಯಥೆಗೊಂಡು ಬಂಡಿಯಿಂದ ಯಾ ವಾಗ್ಗೆ ಇಳಿಯುವೆನೋ ಎಂದು ಅನಿಸಹತ್ತಲು 'ರಾಯಬಾಗ ' ಎಂಬ ದೊಡ್ಡ ಸ್ಟೇಶನದಲ್ಲಿ ಬಂಡಿಯು ಬಂದು ನಿಲ್ಲುವದು. ಹೆಸರಿ ನಂತೆ ರಾಯಬಾಗ ಸ್ಪೇಶನದ ಹತ್ತರಿರುವ ಎಲ್ಲ ಪ್ರದೇಶವು ಎತ್ತ ನೋಡಿದತ್ತ ಪುಷ್ಪಯುಕ್ತವಾದ ಗಿಡಗಳಿಂದಲೂ, ದೊಡ್ಡ ದೊಡ್ಡ ಮರಗಳೆಂದಲೂ, ಬುಡದಲ್ಲೆಲ್ಲ ಎಳೆ ಹಸರು ಹುಲ್ಲಿನಿಂದ ಶೋಭಿತ ವಾಗಿ ನೋಡಿದವರಿಗೆ ಆನಂದವನ್ನೀಯುತ್ತಿತ್ತು. ಎಲ್ಲರ ಮನಗಳು ಆಗಲೇ ಆಕರ್ಷಿಸಲ್ಪಡುತ್ತಿದ್ದವು. ಶಿವಾಜಿ ರಾಯನ ವಂಶಸ್ಥರಾದ ಕೊಲ್ಲಾಪುರದ ಈಗಿನ ಮಹಾರಾಜರು ಒಂದುಬದಿಗೆ ಬಹಳ ದೂರದ ವರೆಗೆ ಕಬ್ಬಿಣ ಸಲಾಕಿಗಳನ್ನು ಹಾಕಿ ಒಳಗೆಲ್ಲ ತರತರದ ಮೃಗಗಳ ನ್ನೂ ಪಶುಗಳನ್ನೂ ಬಿಟ್ಟಿದ್ದರಿಂದ ಬಂಡಿಯೊಳಗಿಂದ ಹೊರಗೆ ಮುಖ ವನ್ನು ಹಾಕಲು ಕುದುರೆಯ ಚಲ್ಲಾಟ, ನಾಯಿಯ ಬೊಗಳಾಟ, ನವಿ ಲುಗಳ ಕುಣಿದಾಟ ಇವೇ ಮುಂತಾದ ನೋಟಗಳು ಕಣ್ಣಿಗೆ ಮನೋ ಹರವಾಗಿ ತೋರಿ ರಾಯಭಾಗವೆಂಬ ಹೆಸರನ್ನು ಸಾರ್ಧಕ ಮಾಡವ ದಕ್ಕಾಗಿಯೇ ಎನೋ ಈ ತರದ ವ್ಯವಸ್ಥೆಯನ್ನು ಮಾಡಿರುವರು. ವಾಚಕರೇ, ಇನ್ನು ನಿಮ್ಮ ಈ ನಿರೀಕ್ಷಣವನ್ನು ಸಾಕು ಮಾಡಿ, ಬಂಡಿಯೊಳಗಿಂದ ಕೆಳಗಿಳಿಯಿರಿ, ನಮಗೆ ೩.೪ ಹರದಾರಿಯವರೆಗೆ ೩೦ ಸಮಾಜರಹಸ್ಯ ಇನ್ನು ಎತ್ತಿನ ಬಂಡೆಯಲ್ಲಿ ಹೋಗುವದುಂಟು ಹೋಗುತ್ತ ಹಾದಿ ಯಲ್ಲಿ ಎಷ್ಟೋ ರಮಣೀಯವಾದ ಸ್ಥಳಗಳನ್ನು ನೋಡುವದುಂಟು. ಇಲ್ಲಿಯೇ ಇಷ್ಟು ವೇಳೆ ಮಾಡಿದರೆ ಹೇಗೆ ನಡಿದೀತು. ನಿಜವಾಗಿಯೇ ರಾಯಬಾಗ ಸ್ಟೇಷನದಿಂದ ಎಡೂರ-ಇದೇ ನಮ್ಮ ದಿವಾಕರಪಂತರ ಊರು--ವರೆಗೆ ಇರುವ ಪ್ರದೇಶವು ಬಹಳ ರರ್ಮಣೀಯವಾಗಿರು ವದು. ಅಲ್ಲಲ್ಲಿ ಹಳ್ಳಿಗಳೂ, ಮಾವಿನ-ಹಲಿಸಿನ-ಗಿಡಗಳ ವನಗಳೂ ಎತ್ತ ನೋಡಿದತ್ತ ಕಾಣುತ್ತಿರುವವು. ದಾರಿಯಗುಂಟ ಪ್ರವಾಸಕರಿಗೆ ನೀರಿನ ಅಭಾವತೆಯುಂಟಾಗಬಾರದೆಂತಲೂ ಅಥವಾ ತನ್ನ ದಂಡೆ ಯ ಮೇಲೆ ಇರುತ್ತಿದ್ದ ಎಡೂರ ಗ್ರಾಮದವರೆಗೆ ಪ್ರವಾಸಿಕರನ್ನು ಸುಖರೂಪವಾಗಿ ಮುಟ್ಟಿಸಬೇಕಂತಲೋ ಕೃಷ್ಣೆಯು ಸಾವಕಾಶ ವಾಗಿ ದಾರಿಯುಗುಂಟ ಹರಿಯುತ್ತಿದ್ದಾಳೆ ಈಗಿನ ಈಕೆಯ ಶಾಂತ ಭಾವವನ್ನು ಕಂಡು ಯಾರದರೂ ಈಕೆಯನ್ನು ಪ್ರೀತಿಸಬಹುದಾ ಗಿತ್ತು. ಆದರೆ ಈಕೆಯು ಒಮ್ಮೊಮ್ಮೆ ಸಿಟ್ಟಿಗೆದ್ದು ಆರ್ಭಟಿಸುತ್ತ ತನ್ನ ಅಕ್ರಾಳ ವಿಕ್ರಾಳ ಸ್ವರೂಪವನ್ನು ಧರಿಸಿದಳೆಂದರೆ ಎಷ್ಟೋ ಗ್ರಾಮಗ ಳಿಗೆ ಬಿಳಿಯಾಗಿ ಈಕೆಯ ಹಸಿವೆಯನ್ನು ಕಳೆಯಬೇಕಾಗುತ್ತದೆಂದು ಅವರಿಗೇನು ಗೊತ್ತು ! ! ನದಿಯಲ್ಲಿ ಬಿಳೇ ಕಲ್ಲಿನಿಂದ ಅಲ್ಲಲ್ಲಿ ಕಟ್ಟಿದ್ದ ಸಣ್ಣ ಸಣ್ಣ ಗುಡಿಗಳು ಆಕೆಯ ಕೊರಳೆೊಳಗೆ ಮೌಕ್ತಿಕ ಮಾಲೆಯೊ ಳಗಿನ ಮಣಿಯಂತೆ ತಳುಪಿಸುತ್ತಿದ್ದವು. ಈ ದಾರಿಯಿಂದ ಹೋಗುವ ವರು ಪರಮೇಶ್ವರ ನಿರ್ಮಿತ ಅಗಾಧ ರಚನೆಯನ್ನೂ ಇಲ್ಲಿಯ ಸೃಷ್ಠಿ ವೈಚಿತ್ರ್ಯವನ್ನೂ ನೋಡಿ ಬೆರಗಾಗದೆ ಇರುತ್ತಿದ್ದಿಲ್ಲ. ಈ ದಾರಿಯಿಂದ ಹೋಗಹತ್ತಿದ ಕೂಡಲೆ ಮನಸ್ಸಿನಲ್ಲಿ ಧಾರ್ಮಿಕ ವಿಚಾರಗಳೂ ಪರ ಮೇಶ್ವರನ ಅಗಾಧ ಲೀಲೆಯ ವಿಷಯಕ್ಕೆ ಆನಂದವೂ ಹುಟ್ಟ, ಮನ ಸ್ಸು ಪ್ರಫುಲ್ಲಿತವಾಗುತ್ತಿತ್ತು. ಇಂಥ ಮನಸೋಕ್ತ ಪ್ರದೇಶದ ಒಂದು ಭಾಗದಲ್ಲಿ, ಕೃಷ್ಣಾನದಿಯ ಎಡ ದಂಡೆಯ ಮೇಲೆ ಇರುತ್ತಿದ್ದದರಿಂದ ' ಎಡೂರ ' ಎಂಬ ಹೆಸರಿನಿಂದ ಪ್ರಸಿದ್ಧಿಗೆ ಬಂದಿದ್ದ ಒಂದು ಮಧ್ಯಮ ದಿವಾಕರ ಪಂತರು ೩೧ ಪ್ರತಿಯ ಗ್ರಾಮದಲ್ಲಿ ನಮ್ಮ ದಿವಾಕರಪಂತರು ತಮ್ಮ ಸಣ್ಣದೊಂದು ಕುಟುಂಬದೊಡನೆ ಸುಖದಿಂದ ಇರುತ್ತಿದ್ದರು. ಊರೊಳಗೆ ನದಿಯ ದಂಡೆಯ ಮೇಲೆಯೇ, ಒಂದು ಭವ್ಯವಾದ ಶಿವಾಲಯವಿರುವದು, ಗುಡಿಯ ಸುತ್ತಮುತ್ತಲೂ ಭವ್ಯವಾಗಿ ಭದ್ರವಾಗಿದ್ದ ಗೋಡೆಯು ಕಟ್ಟಲ್ಪಟ್ಟಿರುವುದು. ಒಳಗೆಲ್ಲ ಕಡೆಯಲ್ಲಿಯೂ ಯೋಗಿಗಳಿಗೆ ಸುಖ ದಿಂದ ಈಶಚಿಂತನೆಯಲ್ಲಿ ಕಾಲುಕಳೆಯುವದಕ್ಕಾಗಿ ಪೌಲಿಗಳು ಕಟ್ಟ ಲ್ಪಟ್ಟಿರುವವು. ಮಧ್ಯದಲ್ಲಿ ಒಂದು ಪ್ರಶಸ್ಥವಾದ ಶಿವಮಂದಿರವಿದ್ದು ಶಿವಮೂರ್ತಿಯು ಮಾತ್ರ ನೆಲಕ್ಕಿಂತ ತುಸು ಕೆಳಭಾಗದಲ್ಲಿ ಇರು ವದು ಇಲ್ಲಿ ದಿನಾಲು ನೂರಾರು ಜನ ಯಾತ್ರಿಕರು ಶಿವದರ್ಶನಕ್ಕಾಗಿ ದೂರ ದೂರ ದೇಶದಿಂದ ಬರುವರು, ವರ್ನಕ್ಕೊಮ್ಮೆ ಇಲ್ಲಿ ಒಳ್ಳೇ ವಿಜೃಂಭಗೆ ಯಿಂದ ಈಶ್ವರನ ಜಾತ್ರೆಯು ಸಾಗುವದು ಬಹುಕಾಲ ದಿಂದ ಇಲ್ಲಿ ವೈದ್ಯರ ಪ್ರಖ್ಯತಿಯು ಬಹಳ ಬೇಕಾದಂಧ ರೋಗಕ್ಕೆ ವನಸ್ಪತಿಗಳ ಔಷದಗಳಿಂದ ಗುಣಮವಾಡಿ ತೋರಿಸುತ್ತಿದ್ದದರಿಂದ ರೋಗನಿವಾರಣಗೆಗಾಗಿಯೂ ಸಹ ಜನರು ಈ ಗ್ರಾಮಕ್ಕೆ ಬಂದೇ ಬರುತ್ತಿರುವರು. ಹೀಗೆ ಎಲ್ಲ ರೀತಿಯಿಂದಲೂ ಈ ಗ್ರಾಮವು ಅತಿ ಶಯ ಪ್ರಖ್ಯಾತಿಯನ್ನುಹೊಂದಿರುವದು. ದಿವಾಕ್‌ರಪಂತರನ್ನು ವಾಚಕರು ಮೊದಲೇ ಅರಿತಿರುವರು. ಇವರು ನಮ್ಮ ವಿದ್ಯಾಧರನ ದೂರಿನ ಆಪ್ತರೆಂದು ಹಿಂದೆ ಹೇಳಿದ್ದೇವೆ. ಇವರ ನಿರ್ಮಲ ಆಚರಣೆಯನ್ನೂ ಸಹ ವಾಚಕರು ಕಂಡೇ ಇರು ವರು, ಪತಿಸೇವಯಲ್ಲಿ ದಕ್ಷಳಾದ ಇವರ ಹೆಂಡತಿ ಇವರ ಒಬ್ಬಳೇ ಒಬ್ಬ ಮಗಳಾದ ವಿಮಲೆಯೆಂಬ ೧೨-೧೩ ವರ್ಷದ ಕುಮಾರಿಕೆಯ ಇಷ್ಟೇ ಜನರು ದಿವಾಕರ ಪಂತರ ಮನೆಯಲ್ಲಿ ಇದ್ದರು. ದಿವಾ ಕರಪಂತರು ಪರೋಪಕಾರ ಬುದ್ಧಿಯಿಂದ ರೋಗಿಗಳಿಗೆ ಔಷಧ ವನ್ನು ಕೊಟ್ಟು ಈಶಚಿಂತನೆಯಲ್ಲಿಯೇ ಕಾಲಕಳೆಯುತ್ತಿದ್ದರು. ೩೨ ಸಮಾಜರಹಸ್ಥ, ವಿದ್ಯಾಧರನ ಮಾತಾಪಿತೃಗಳು ತೀರಿದ್ದರಿಂದ ಅವನ ಸಂರಕ್ಷಣದ ಭಾರವು ದಿವಾಕರಪಂತರ ಮೇಲೆ ಬಂದದರಿಂದ ಅತನೂ ಈ ಕುಟುಂಬದೊಳಗಿನವನಾಗಿದ್ದನು. ವಿದ್ಯಾಧರನ ಆದಾಯವು ಇದೇ ಊರ ಹತ್ತರದಲ್ಲಿ ಇರುವ ಮತ್ತೊಂದು ಹಳ್ಳಿಯಲ್ಲಿ ಇತ್ತು. ದಿವಾ ಕರಪಂತರು ತಮ್ಮಲ್ಲಿದ್ದ ಔಷದ ಜ್ಞಾನವನ್ನೂ, ಸಂಸ್ಕೃತ ಜ್ಞಾನ ವನ್ನೂ ತಮ್ಮ ಪ್ರೀತಿಯ ಮಗಳಾದ ವಿಮಲೆಗೆ ಚನ್ನಾಗಿ ಕಲಿಸಿದ್ದರು. ವಿಮಲೆಯ ರೂಪಗಿಂಗಲೂ ಗುಣದಿಂಲೂ ಆಚರಣೆಯಿಂದಲೂ ತನ್ನ ಮಾತಾಪಿತೃಗಳನ್ನು ಆನಂದಗೊಳಿಸುತ್ತಿದ್ದಳು. ವಿದ್ಯಾಧರನ ಪ್ರೇಮವು ಅಕೆಯ ಮೇಲೆ ಬಹಳ. ಆಕೆಯನ್ನು ಆತನು ತನ್ನ ಒಡಹು ಟ್ಟಿದ ತಂಗಿಯಂತೆಯೇ ಪ್ರೀತಿಸುತ್ತಿದ್ದನ್ನು ಎಂದಾದರೊಮ್ಮೆ ವಿದ್ಯಾ ಧರನು ಎಡೂರಿಗೆ ಬಂದಾಗ್ಗೆ ಆಕೆಯು ತನ್ನ ಆಚಾರ ವಿಚಾರಗಳೆಂದ ಆತನನ್ನು ಆನಂದಗೊಳಿಸಲು ಮರೆಯುತ್ತಿದ್ದಿಲ್ಲ ದಿವಾಕರಪಂತರ ವಯಸ್ಸು ಈಗ ೬೦-೬೫ ಮೀರಿತು. ಇಳಿ ವಯಸ್ಸಿನಲ್ಲಿಯೇ ಇವ ರಿಗೆ ಕನ್ನಾರತ್ನವು ಲಭಸಿದ್ದರಿಂದ ಗಂಡಹೆಂಡಂದಿರು ವಿಮಲೆಯನ್ನು ಬಹಳ ಪ್ರೀತಿಸುತ್ತಿದ್ದರು. ವಿದ್ಯಾಧರನೂ ತಮ್ಮ ಮಗನಂದೇ ತಿಳಿದು ಕೊಂಡು ಅತನ ವಿದ್ಯೆಗಾಗಿ ತಮ್ಮಿಂದಾದಷ್ಟು ಸಹಾಯ ಮಾಡಿ ವಿಶ್ವ ವಿದ್ಯಾಲಯದ ಬಿ.ಏ. ಪರೀಕ್ಷೆಯವರೆಗೆ ಕಲಿಸಿದ್ದರೆಂದು ವಾಚಕ ರಿಗೆ ಗೊತ್ತಿರುವದು. ಇರಲಿ -ದೈವಯೋಗವೂ, ಕಾಲಗತಿಯೂ ವಿಚಿತ್ರವಾಗಿರು ವವು, ನಮ್ಮ ವಿದ್ಯಾಧರನೂ, ಮಾಧವನೂ ಕೂಡಿ ತಮ್ಮ ಧ್ಯೇಯವನ್ನು ಮುಟ್ಟಿಲಿಕ್ಕೆ ಹಾದಿಯನ್ನು ಹುಡುಕಿ ಒಬ್ಬರ ವಿಚಾರಗಳನ್ನು ಮತ್ತೊ ಬ್ಬರಿಗೆ ಹೇಳುತ್ತ ಬಂಡವನದಲ್ಲಿ ಕುಳಿತಿರಲು ಇತ್ತ ಎಡೂರಲ್ಲಿ ಒಂದು ಭಯಂಕರ ಕೋಲಾಹಲವೇ ನಡೆದಿತ್ತು. ಊರಲ್ಲಿ ಬಹಳ ದಿವಸಕ್ಕೆ ಬಂದಿದ್ದ ಪ್ಲೇಗು-ಮಾರಿಕಾ ಅಕ್ಕತಂಗಿಯರು ತಮ್ಮ ರಾಕ್ಷ ದಿವಾಕರ ಪಂತರು ೩೩ ಸೀಕೃತ್ಯಗಳನ್ನು ಅಂಜದೆ ಮಾಡುತ್ತಿದ್ದರು. ವಾಚಕರೇ ಇಂಥ ಧಾರ್ಮಿಕ ಸ್ಥಳದಲ್ಲಿ, ಪ್ರತ್ಯಕ್ಷ ಪರಮೇಶ್ವರನು ಅಲ್ಲಿಯೇ ಕುಳತಿರಲು ಅತನನ್ನು ಸಹ ಲೆಕ್ಕಿಸದೆ ದುಷ್ಟರು ತಮ್ಮ ಕಾಳಕೃತ್ಯವನ್ನು ಹೇಗೆ ಮಾಡವರು ನೋಡಿದಿರಾ! ದುರ್ಜನರು ಯಾರಿಗೂ ಅಲಂಜುವದಿ ಲ್ಲೆಂದು ಹೇಳುವದು ನಿಜವಿರಬಹುದೇನು? ಊರಲ್ಲಿ ಒಂದೇ ತರದ ಗೊಂದಲವು ನಡದಿತ್ತು. ನಿನ್ನೆ ಇವರು ತೀರಿಕೂಂಡರು, ಇಂದು ಇಂಧವರಿಗೆ ಪ್ಲೇಗು ಬಂದಿರುವದು ಎಂದು ಹಾ ಹಾಕಾರವು ಊರ ಲ್ಲೆಲ್ಲ ಎದ್ದಿತ್ತು. ಬರಬರುತ್ತ ಊರು ಬಿಟ್ಟು ಕೋಗುವದರೂಳಗಾ ಗಿಯೇ ನಮ್ಮ ದಿವಾಕರಪಂತರಿಗೆ ಪ್ಲೇಗು ಬಂದಿತು,. ತೀರಿತು ಅವರ ಹೆಂಡತಿಯ ಕೈಕಾಲೇ ಹೋದವು. ಆಕೆಯು ಬಡಬಡಕೊಂಡು ಅಳಹ ತ್ತಿದಳು, ಇನ್ನು ತನ್ನ ಕುಂಕುಮದೊಡೆಯರು ನಿಜವಾಗಿಯೇ ತನ್ನನ್ನು ಬಿಟ್ಟು ತೆರಳು ತಿಳಿದು ಆಕ್ರೋಶ ಮಾಡಹತ್ತಿದಳು. ಪಾಪ! ವಿಮಲೆಯು ಅತ್ತು ಅತು ಬೇಸತ್ತಳು. ತಾಯಿಯೇ ಅಳುತ್ತ ಕುಳಿ ತಿದ್ದ ಮೇಲೆ ಈ ಬಾಲಿಕಗೆ ಅಳಬೇಡೆಂದು ಯಾರು ಹೇಳಬೇಕು? ನೆರೆಹೊರೆಯವರು ಎಷ್ಟು ಹೇಳಿದರೂ ಕೇಳದೆ ದಿವಾಕರಪಂತರ ಹೆಂಡತಿಯು ಒಂದೇ ಸವನೆ ಅಕ್ರೋಶ ಮಾಡುತ್ತಿದ್ದಳು. ಮರುದಿವ ಸವೇ “ ನಿನ್ನ ಪತಿಯ ಸಂಗಡ ನಿನ್ನನ್ನು ನಾನು ಸ್ವರ್ಗಕ್ಕೆ ಕಳಿಸುತ್ತೇ ನೆಂ"ದು ಅನ್ನುತ್ತ ಮಾರಿಕಾ ತಂಗಿಯವರು ದಿವಾತರಪಂತರ ಹೆಂಡ ತಿಗೆ ಗಂಟುಬಿದ್ದರು. ಮಾರಿಕಾ ಬೇನೆಯಿಂದ ತಾಸೆರಡು ತಾಸುಗಳ ಲ್ಲಿಯೇ ಅವಳು ಜರ್ಜರಳಾಗಿಹೋದಳು. ಅವಳಿಗೆ ಮಾತಾಡಲಿಕ್ಕೂ ಕೂಡ ಶಕ್ತಿಯಿಲ್ಲದಂತಾಗಿ ಹೋಯಿತು. ಅತ್ತ ದಿವಾಕರಪಂತ ರಿಗೂ ನೆಟ್ಟಗಾಗುವ ಚಿನ್ಹವು ತೋರಲಿಲ್ಲ ವಿಮಲೆಯ ಮೇಲೆ ಆಕಾ ಶವೇ ಹರಿದುಬದ್ದಂತಾಯಿತು, ದಿವಸಗಳ ಕೆಳಗೆ ಆನಂದ ದಿಂದ ಮರೆಯುತ್ತಿದ್ದ ನಮ್ಮ ಈ ಕುಟುಂಬದ ಅವಸ್ಥೆಯನ್ನು ನೋಡಿ ೩೪ ಸಮಾಜರಹಸ್ಯ ದಿರಾ! ಈಶ್ವರೇಚ್ಛೆಯನ್ನು ಯಾರು ಮೀರಲಾರರು? ದಿವಾಕರಪಂತರ ಮಿತ್ರರು ಅವರ ಈ ದುಃಸ್ಥಿತಿಯನ್ನು ಕಂಡು ವಿದ್ಯಾಧರನನ್ನೂದರೂ ಕರೆಕಳುಹಿಸಬೇಕೆಂದು ಗೊತ್ತುಮಾಡಿ ಅತನಿಗೆ ತಾರು ಮಾಡಿದರು. ವಿಮಲೆಯ ಸಹಾಯಕ್ಕಾಗಿ ತಾವೇ ಬಂದು ದಂಪತಿಗಳ ಶುಶ್ರೂಷೆ ಯನ್ನು ಮಾಡಹತ್ತಿದರು. ಒಂದು ದಿವಸಾಯಿತು, ಇನ್ನೂ ವಿದ್ಯಾಧ ರನು ಬರಲಿಲ್ಲೆಂದು ಕಂಡು ವಿಮಲೆಯು ಹತಾಶಳಾದಳು. ಆದರೂ ಧೈರ್ಯಗುಂದದೆ ಮಾತಾಪಿತೃಗಳ ಸೇವೆಯಲ್ಲಿ ಹಗಲರುಳೆನ್ನದೆ, ನಿದ್ದೆನೀರಡಿಕೆಯಿಲ್ಲದೆ, ತತ್ಪರಳಾದಳು. ಆದರೆ ದೇವರು ಆಕೆಯ ಈ ಸೇವೆಗೆ ತಕ್ಕ ಪ್ರತಿಫಲವನ್ನು ಕೊಡುವಂತೆ ಆಶೆ ಉಳಿಸಿದ್ದಿಲ್ಲ ಇತ್ತ ಮೂರನೇ ದಿವಸ ಮಾಧವನು ಮುಂಜಾವಿನಲ್ಲಿ ಕಣ್ಣು ಒರಿಸಿ ಕೊಳ್ಳುತ್ತ ಹೊೂರಗೆ ಬರಲು ಸಿಪಾಯಿಯು ಆತನ ಕೈಯ್ಯಲ್ಲಿ ಒಂಬು ತಾರುತಂದು ಕೊಟ್ಟನು, ಕೂಡಲೆ ಲಗುಬಗೆಯಿಂದ ಹರಿದು ಓದಿ ಗಾಬರಿಯಾಗಿ ಒಳಗೆಹೋಗಿ ವಿದ್ಯಾಧರನಿಗೆ ಅದನ್ನು ಕೊಟ್ಟನು. ವಿದ್ಯಾಧರನು ಅಂಜುತ್ತಂಜುತ್ತಲೆ ಓದಹತ್ತಿದನು. ಮುಂದೆ ಮುಂದೆ ಓದಹತ್ತಿದಹಾಗೆ ಆತನ ಮುಖ ತೇಜವು ಇಳಿಯುತ್ತ ಹೋಯಿತು. ಆತನು ಬಹಳೇ ಸಂಕಟದಲ್ಲಿಬಿದ್ದನು. ಮಗನಂತೆ ಪ್ರೀತಿಸಿ ಪಾಲಿಸಿದ್ದ ತನ್ನ ದಿವಾಕರಪಂತರೂ ಆತನ ಹೆಂಡತಿಯೂ ಹೀಗೆ ಮರಣೋ ನ್ಮುಖರಾಗಿರುವರೆಂದು ಕಂಡು ಆತನಿಗೆ ಅಸಹ್ಯತರವಾದ ದುಃಖವಾ ಯಿತು. ಕೂಡಲೆ ಅತನು ಎದ್ದು ಅಂಗಿಯನ್ನು ಹಾಕಿಕೊಂಡು ಮಾಧ ವನ ಸಂಗಡ ವಿದ್ಯಾರ್ಥಿಗಳ ಮೇಲ್ಮಿಚಾರಕರಕಡೆಗೆ ಹೋದನು. ಅವರ ಕೈಯ್ಯಲ್ಲಿ ತಾರು ಕೊಟ್ಟು ಇಬ್ಬರೂ ಸುಮ್ಮನೆ ನಿಂತರು, ಮೆಲ್ವಿಚಾರಕರು ತಾರು ಹಿಡಿಕೊಂಡು “ ಒಳ್ಳೇದು ಹೋಗಿರಿ, ನಾನು ರಜೆಯನ್ನು ಕೊಟ್ಟಿದ್ದೇನೆ " ಎಂದು ಹೇಳಿದರು. ವಿದ್ಯಾಧರನ ಆತ್ಯಾ ಗ್ರಹದಿಂದ ಆತನಿಗೆ ಸಹಾಯಮಾಡುವದಕ್ಕಾಗಿ ಮಾಧವನೂ ಎಡೂರ ದಿವಾಕರಪಂತರು ೩೫ ಗ್ರಾಮಕ್ಕೆ ಹೊರಟನು. ಅದೇ ರಾತ್ರಿ ೧೦ ಗಂಟೆಯ ಸುಮಾರಕ್ಕೆ ಅವ ರಿಬ್ಬರು ಎಡೂರಕ್ಕೆ ಬಂದು ಮುಟ್ಟಿದರು, ಮನೆಯ ಹತ್ತರ ಬಂದ ಕೂಡಲೆ ಬಾಗಿಲಲ್ಲಿ ಅಳುತ್ತ ನಿಂತಿದ್ದ ವಿಮಲೆಯು ಅವರ ದೃಷ್ಟಿಗೆ ಬಿದ್ದಳು. ವಿದ್ಯಾಧರನನ್ನು ನೋಡಿದ ಕೂಡಲೆ ಆಕೆಯು ಚಿಟ್ಟನೆ ಚೀರಿ ಮುಖವನ್ನು ಕೈಯಿಂದ ಮುಚ್ಚಿಕೊಂಡು ನಿಂತಲ್ಲೇ ನಿಂತಳು. ವಿದ್ಯಾಧರನು ಬಹಳೇ ಗಾಬರಿಯಾದನು ಆತನು ಆಕೆಯು ಹತ್ತರಕ್ಕೆ ಹೋಗಿ ನಾಲ್ಕು ಉಪಚಾರದ ಮಾತುಗಳನ್ನು ಹೇಳಲಿಕ್ಕೆ ಪ್ರಾರಂಭಿ ಸಿದನು. ಆಕೆಯ ದುಃಖವೇಗವು ತುಸು ಕಡಿಮಯಾದಮೇಲೆ ಸಾವ ಸಾವಕಾಶವಾಗಿ "ಕಕ್ಕನಿಗೆ ಹೇಗಿರುವದು? ಕಕ್ಕಿಗೆ ನೆಟ್ಟಗಾಯಿತೇನು?" ಎಂದು ಕೇಳಿದನು. ವಿಮಲೆಯು ಮತ್ತೆ ದೊಡ್ಡ ಧ್ವನಿಯಿಂದ ಅಳ ಹತ್ತಿದಳು. ಅಳುತ್ತಲೇ “ಇ-ಬ್ಬ-ರೂ ಇಂದು-ಮ-ದ್ಯಾ-ನ್ಹ-ದ-ಲ್ಲಿ ತೀರಿ ಕೊಂ-ಡ-ರು '' ಎಂದು ನಡಗುತ್ತ ಹೇಳಿದಳು. ವಿದ್ಯಾಧರನ ಹೃದಯ ಕ್ಕೆ ವಜ್ರಘಾತವಾದಂತಾಯಿತು. ಆತನು ವಿಮಲೆಯನ್ನು ಅಪ್ಪಿ ಕೊಂಡು ದೊಡ್ಡ ಧ್ವನಿಯಿಂದ ಅಳಹತ್ತಿದನು. ಮಾಧವನಿಗೂ ಈ ಸುದ್ದಿ ಯಿಂದ ಬಹಳೇ ದುಃಖವಾಯಿತು. ಅಳುವ ಭರವು ತುಸು ಕಡಿವೆು ಯಾದ ಮೇಲೆ -- ಮಾಧ -- ವಿದ್ಯಾಧರ ಇನ್ನು ಅಳುತ್ತ ಹೀಗೆ ಎಷ್ಟು ಹೊತ್ತಿನವರೆಗೆ ಕುಳಿತುಕೊಳ್ಳುವೆ? ಈಗಲೆ ಹನ್ನೆರಡು ಹೊಡೆದು ಹೋಯಿತು ಎಲ್ಲರಿಗೂ ಸಮಾಧಾನವನ್ನು ಹೇಳಿ ನೀನು ಶಾಂತನಾಗು. ಇನ್ನು ಅಳುತ್ತ ಕುಳಿತರೆ ಏನಾಗಬಹುದು? ಉಳಿದ ಎಲ್ಲ ವಿಚಾರ ಗಳನ್ನು ಮಾಡಿ ಮುಂದಿನ ಕಾರ್ಯವನ್ನು ಹೇಗೆ ಮಾಡಬೇಕೆಂಬ ದನ್ನು ನಿಶ್ಚಯಿಸು; ಏಳು. ವಿದ್ಯಾಧರನು ತುಸು ಶಾಂತನಾಗಿ ವಿಮಲೆಯನ್ನು ಸಮಾಧಾನ ಪಡಿಬದನು... ಕಡೆಗೆ ಸ್ಥಾನಮಾಡಿ ಮಾಧವನ ಜುಲುಮೆಯಿಂದ ೩೬ ಸಮಾಜರಹಸ್ಯ. ಎಲ್ಲರೂ ತುಸು ಫಲಾರವನ್ನು ಮಾಡಿ ಮಲಗಿಕೂಂಡರು. ವಿಮಲೆಯು ಇನ್ನೂ ಅಳುವದನ್ನು ಬಿಟ್ಟದ್ದಿಲ್ಲ. ವಿದ್ಯಾಧರನು ಆಗಾಗ್ಗೆ ಸಮಾ ಧಾನ ಹೇಳುತ್ತಿದ್ದನು ಯಾರಿಗೂ ನಿದ್ದೆಹತ್ತಲಿಲ್ಲ. ತಾಸೆರಡು ತಾಸು ರಾತ್ರಿಯಿರುವಾಗಲೆ ಬಲ್ಲರೂ ಎದ್ದು ಕುಳಿತರು. ಮಾಧವನು ಮುಂದೆ ಏನು ಮಾಡಬೇಕೆಂದು ಕೇಳಿ. ಮಾಧ--- ಈ ಊರಲ್ಲಿ ಇನ್ನು ಕ್ಷಣ ಹೊತ್ತಾದರೂ ನಿಲ್ಲು ವುದು ಸರಿಯಲ್ಲ ಯಾಕಂದರೆ ಊರಲ್ಲಿ ಯಾವತರದ ಕೋಲಾಹಲವು ನಡೆದಿರುವದೆಂಬದು ನಿನಗೆ ಗೊತ್ತೇ ಇರುವದು. ಇಂಥ ಸ್ಥಳದಲ್ಲಿ ನಿಲ್ಲುವದೆಂದರೆ ಪ್ರತ್ಯಕ್ಷ ಮೃತ್ಯುವಿನ ಬಾಯೊಳಗೆ ಹಾರಿಕೊಂಡಂತೆ ಯೇ ಸರಿ ಎಲ್ಲಿಯಾದರೂ ಇಲ್ಲಿಯೇ ಸಮೀಪದ ಪಟ್ಟಣದಲ್ಲಿ ಉತ್ತರ ಕ್ರಿಯಾದಿಗಳನ್ನು ಮುಗಿಸಿಕೊಂಡು ಮುಂದಿನ ಎಲ್ಲ ವಿಚಾರಗಳನ್ನು ಸ್ಥಿರಗೊಳಿಸುವಾ. ಮಾಧವನು ಹೇಳಿದಂತೆಯೇ ವಿದ್ಯಾಧರನು ಕೂಡಲೆ ಎದ್ದು ಮನೆಯಲ್ಲಿಯ ಎಲ್ಲ ವಸ್ತು-ವಡವೆಗಳನ್ನು, ಕಾಗದ-ಕತಬಿಗಳನ್ನು ತೆಗೆ ದುಕೊಂಡು ಸಮೀಪದಲ್ಲಿಯೇ ಇದ್ದ ಕೊಲ್ಹಾಪುರಕ್ಕೆ ಹೋಗುವ ವ್ಯವ ಸ್ಥೆಯಲ್ಲಿ ತೊಡಗಿದನು. ಕೊಲ್ಹಾಪುರಕ್ಕೆ ಮುಟ್ಟದ ಮೇಲೆ ಮಾಧವನು ಸವಿಸ್ತಾರವಾಗಿ ತನ್ನ ತಂದೆಯವರಿಗೆ ಒಂದು ಪತ್ರವನ್ನು ಬರೆದನು. ಉತ್ತರಕ್ರಿಯಾ ದಿಗಳು ಯಥಾಸಾಂಗವಾಗಿ ಜರುಗಿದವು ಇದೇನು ಗೊಂದಲ! ೩೭. ಪಂಚಮ ಪರೀಚ್ಛೇದ. ಇದೇನು ಗೊಂದಲ! ಹಿಂದಿನ ಪರಿಚ್ಛೇದದಲ್ಲಿ ದಿವಾಕರಪಂತರ ನಿಧನದಿಂದ ಎಲ್ಲ ರಿಗೂ ಎಸ್ಟು ದುಃಖವಾಯಿತೆಂದು ಹೇಳಿರುವೆವು. ನಮ್ಮ ವಾಚಕರಿಗೂ ಸಹ ಆಷ್ಟು ನಿರ್ಮಲ ಅಂತಃಕರು ಣದ ಒಬ್ಬ ಉತ್ತಮ ರೋಗಚಿಕಿತ್ಸಕನು ಪ್ಲೇಗದಿಂದ ಇಲ್ಲದ ಹಾಗಾದನೆಂದು ತಿಳಿದು ಬಹಳ ಮಾಧ ವನು ತಮ್ಮ ತಂದೆಯವರಿಗೆ ಕೊಲ್ಹಾಪುರದಿಂದ ಪತ್ರವನ್ನು ಬರೆದ ನೆಂಬದನ್ನೂ ಹಿಂದೆ ಹೇಳೆದ್ದೇವೆ ಅದಕ್ಕಾಗಿ ಪತ್ರವನ್ನು ಅವರು ಓದಿ ದರೋ ಇಲ್ಲವೋ ಎಂದು ತಿಳಿದುಕೊಳ್ಳುವದಕ್ಕಾಗಿ ಮತ್ತೆ ಸಂಹ್ಯಾ ದ್ರಿ ಪರ್ವತಶ್ರೇಣಿಯ ಮೇಲಿಂದಲೂ ಖಂಡಾಳಾ ಮುಂತಾದ ಅಗಾಧ ಧರಿಗಳೊಳಗಿಂದಲೂ ಸುರಕ್ಷಿತವಾಗಿ ದಾಟಿ ಹಿಂದುಸ್ಥಾನದ ಪಶ್ಚಿಮ ತುದಿಗೆ ಇರುವ ಮುಂಬಾಪುರಿಗೆ ಇಂದು ನಮ್ಮ ವಾಚಕರನ್ನು ಒಯ್ಯ ತಕ್ಕವರಿದೇವೆ. ವಾಚಕರೆ, ಸಿಟ್ಟಿಗೆದ್ದಿರೇನು. ಹೌದು! ಎದ್ದಿರಬ ಹುದು, ನಮ್ಮಂಧವರ ಬೆನ್ನುಹತ್ತಿ ದಕ್ಷಿಣದಿಂದ ಪಶ್ಚಿಮಕ್ಕೆ ಪಶ್ಚಿಮ ದಿಂದ ದಕ್ಷಿಣಕ್ಕೆ ಓಡಾಡಿ ದುಃಖದಾಯಕ ಸಂಗತಿಗಳಿಂದ ಮನವ್ಯ ಥೆಪಡಿಸುವ ಸುಖವೇ ಸುಖವು! ಮತ್ತೆನೂ ಇಲ್ಲ! ಇರಲಿ! ಮಾಡು ವದೇನು? ಇದಕ್ಕೆ ಎದೆಗೊಟ್ಟು ಎದೆಕೊಟ್ಟು ನಿಲ್ಲಬೇಕು. ಮಾಧವನ ಪತ್ರ ವನ್ನು ಟಪಾಲ ಸಿಪಾಯಿಯು ತಂದು ಒಗೆದಾಗ್ಯೆ ಶ್ರೀನಿವಾಸರಾಯರು ಮನೆಯಲ್ಲಿ ಇದ್ದಿಲ್ಲ. ಸರಸ್ವತಿಯು ಪತ್ರವನ್ನು ನೋಡಿ ಮಾಧವನ ಕಡೆಯಿಂದ ಬಂದಿರುವದೆಂದು ತಿಳಿದು ಆತನು ಇನ್ನು ತೀವ್ರವೇ ವಿದ್ಯಾಧರನನ್ನು ಕರಕೊಂಡು ಬರಬಹುದೆಂದು ಹಿಗ್ಗಿ ಪತ್ರವನ್ನು ೩೮ ಸಮಾಜರಹಸ್ಯ ಹರಿಯ ಹತ್ತಿದಳು. ನಿಜವಾಗಿ ವಿದ್ಯಾಧರನನ್ನು ಕಂಡಂದಿನಿಂದ ಸರ ಸ್ವತಿಯ ಮನಸ್ಸಿನಲ್ಲಿ ಅತನ ಬಗ್ಗೆ ಪ್ರೇಮವು ಹುಟ್ಟಿತ್ತು ಆದರೆ ತಾನೇ ಪತಿಯನ್ನು ವರಿಸದೆ ತನ್ನ ತಾಯಿತಂದೆಗಳ ಅನುಮತಿಯಿಂದ ಲೇ ಪತಿಯನ್ನು ಆರಿಸಬೇಕೆಂದು ಆಕೆಯ ಇಚ್ಛೆಯು, ಅಣ್ಣನೂ ತಂದೆ ಯೂ ತನ್ನನ್ನು ಬಹಳೇ ಪ್ರೀತಿಸುವರೆಂಬದು ಆಕೆಗೆ ಗೊತ್ತಿತ್ತು, ಆದ್ದ ರಿಂದಲೇ ಅವರು ಬೇಕಾದಂಥವನ ಕೊರಳಲ್ಲಿ ತನ್ನನ್ನು ಕಟ್ಟದೆ, ತನ್ನ ಜನ್ಮಸಾರ್ಥಕವನ್ನು ಮಾಡಿಕೆೊಳ್ಳಲು ಆಸ್ಪದವನ್ನೀಯುವಂಧ ಪತಿಯನ್ನೇ ಹುಡುಕಬೇಕೆಂದು ಆಕೆಯು ನಂಬಿದ್ದಳು. ಆದರೂ ಆಕೆಯ ಇಚ್ಛೆಯಿಲ್ಲದೆ ಆಕೆಯ ಮನಸ್ಸು ವಿದ್ಯಾಧರನ ವಿಷಯಕ್ಕೆ ಪ್ರಣಯಪ್ರೇಮರತವಾಗಿತ್ತು. ಇರಲಿ, ಸರಸ್ವತಿಯು ಪತ್ರವನ್ನು ಓದಿ ಚಿಂತಾಕ್ರಾಂತಳಾದಳು. ಆಕೆಗೆ ಆ ಪತ್ರದ ಅರ್ಥವೇ ಚನ್ನಾಗಿ ತಿಳಿದಂತಾಯಿತು. “ಮಾಧವನು ಕೊಲ್ಹಾಪುರದಲ್ಲಿ ಏಕೆ? ವಿದ್ಯಾ....-ಅವರ ಊರು ಅದೇನು ಅಲ್ಲ. ಮೇಲಾಗಿ ಅವರ ಕಕ್ಕ ರೂ-ಸತ್ತರು, ಛೇ ಎಲ್ಲವೂ ಗೊಂದಲವೇ! ಏನೇ ಇರಲಿ ಅವರೆಲ್ಲರು ಯಾವದೋ ಒಂದು ದೊಡ ಸಂಕಟದಲ್ಲಿದ್ದಂತೆ ತೋರುತ್ತದೆ. ಆನಂ ದದ ಸುದ್ದಿಯನ್ನು ಕಾಣಬಹುದೆಂದು ಪತ್ರವನ್ನು ಹರಿದು ನೋಡಿ ದರೆ ಸಂಕಟದ ಸುದ್ದಿಯು, ಏನೋ ದುಶ್ಚಿನ್ಹವಿದ್ದಂತೆ ತೋರುತ್ತದೆ ' ಎಂದು ಬಾಯಿಯೇ ವಟವಟಿಸಹತ್ತಿದಳು. ಇಷ್ಟರಲ್ಲಿ ಮನೋರಮಾಬಾಯಿಯವರು ಸರಸ್ವತಿಯು ಕೈ ಯ್ಯಲ್ಲಿ ಪತ್ರವನ್ನು ಹಿಡಿದು ವಿಚಾರಮಗ್ನಳಾಗಿ ನಿಂತಿದ್ದ ಕೋಣೆ ಯಲ್ಲಿ ಬಂದರು. ಮಗಳು ಚಿಂತಾಕ್ರಾಂತಳಾಗಿ ಯಾವದೋ ಒಂದು ಗೂಢವಿಚಾರದಲ್ಲಿ ತೊಡಗಿರುವಳೆಂದು ಕಂಡು ಹತ್ತರ ಬಂದು ಮನೋ-ಯಾಕೆ ಸರಸ್ವತೀ, ಏನು ವಿಚಾರಿಸುತ್ತಿರುವೆ? ಪತ್ರವ್ರಾ ರದು? ಅದರಲ್ಲಿ ಏನು ಬರೆದಿರುವದು? ಇದೇನು ಗೊಂದಲ! ೩೯ ತಾಯಿಯು ಒಮ್ಮೆಲೆ ಇಷ್ಟು ಪ್ರಶ್ನಗಳ್ನು ಕೇಳಿದ್ದರಿಂದ ಸರ ಸ್ವತಿಗೆ ಮೊದಲು ಯಾವ ಪ್ರಶ್ನಕ್ಕೆ ಉತ್ತರಕೂಡಬೇಕೆಂಬದು ತಿಳಿಯ ಲಿಲ್ಲ. ಇನೂ ಮಾತಾಡದೆ ತನ್ನ ಕೈಯ್ಯಲ್ಲಿದ್ದ ಪತ್ರವನ್ನು ಮನೋ ರಮಾಬಾಯಿಯವರ ಕೈಯಲ್ಲಿ ಕೊಡುತ್ತ ವ್ಯಾಕಲತೆಯಿಂದಲೇ ಸರ ಸ್ವತಿಯು “ ಮಾಧವನ ಪತ್ರವು ' ಎಂದು ಹೇಳಿ ತಾಯಿಯು ಏನ ನ್ನುಳೋ ಕೇಳಬೇಬೆಂದು ಸುಮ್ಮನೆ ನಿಂತಳು. ಮೊದಲು ಮೊದಲು ಮಾಧವನು ಸರಸ್ವತಿಯ ಪತಿಶೋಧನದ ವಿಷಯಕ್ಕೆ ಏನಾದರು ಬರೆದಿರಬಹುದೆಂದೂ, ಅದರಿಂದಲೇ ಸರಸ್ವತಿಯು ಇಷ್ಟು ಗೂಢ ವಿಚಾರಕ್ಕೆ ಬಿದ್ದಿರುವಳೆಂದೂ ಮನೋರಮಾಬಾಯಿಯವರು ನಂಬಿ ಪತ್ರದಲ್ಲಿ ಆತನು ಏನು ಬರೆದಿರುವನೆಂದು ಕಂಡುಕೊಳ್ಳಲು ಉತ್ಸುಕ ರಾಗಿದ್ದರು ಆದರೆ ಅವರು ಓದುತ್ತ ಹೋದಹಾಗೆ ಆಶ್ಚರ್ಯ ಉದ್ವಿಗ್ನತೆ ಇವೇ ಅವರ ಮುಖದಲ್ಲಿ ತೋರಹತ್ತಿದವು. ಕಡಗೆ ಎದೂರಲ್ಲಿ ಬಹಳ ಪ್ಲೇಗವಿದ್ದದರಿಂದ ಎಲ್ಲರೂ ಕೊಲ್ಹಾಪುರಕ್ಕೆ ಹೋಗಿ ವ್ಯವಸ್ಥೆ ಮಾಡುವದಕ್ಕಾಗಿ ತುಸು ದಿವಸ ನಿಂತಿರಬಹುದು. ತಮ್ಮ ಸಹಾಯಕ್ಕಾಗಿ ಇವರಿಗೂ ಬರಲಿಕ್ಕೆ ಕೇಳಿರುವನು. ದಿವಾಕರ ಪಂತರ ಹಾಗೂ ಆವರ ಪತ್ನಿಯರ ನಿರ್ಮಲ ಅಂತಃಕರುಣಕ್ಕೆ ವಿದ್ಯಾಧರನು ಇನ್ನು ಅಂತರಿಸಿದನೆಂದು ಕಂಡು ನನಗೂ ಬಹಳೇ ದುಃಖವಾಗುತ್ತಿರುವದು. ಮಾಧವನು ವಿದ್ಯಾಧರನನ್ನು ಬಹಳೇ ಪ್ರೀತಿಸುತ್ತಿದ್ದಾನೆ. ಅವರಿಬ್ಬರೂ ಕೂಡಿಯೇ ಕೊಲ್ಹಾಪುರಕ್ಕೆ ಹೋ ದದ್ದು ಬಹಳ ಒಳ್ಳೇದಾಯಿತು. ಓಬ್ಬರೊಬ್ಬರ ಸಹಾಯದಿಂದ ಎಲ್ಲ ಕೆಲಸವನ್ನು ಮಾಡುತ್ತಿರಬಹುದು. " ಎಂದು ವಿಚಾರಿಸಿ ಮಗಳ ಉದ್ದಿಗ್ನತೆಯನ್ನು ಕಳೆಯುವುದಕ್ಕಾಗಿ ಮನೋ- ಸರಸ್ವತಿ, ಇದಕ್ಕೆ ಇಷ್ಟು ಗಾಬರಿಯಾದಂತೆ ಯಾಕೆ ತೋರುವಿ? ಮರಣವೆ ಯಾರ ಆಧೀನದಲ್ಲಿರುವದು? ಮಾಧವನೂ ೪೦ ಸಮಾಜರಹಸ್ಥ ವಿದ್ಯಾಧರನೂ ಕೂಡಿರುವರು. ಅವರಿಗೆ ಈಗ ಬೇಕಾದಷ್ಟು ಧೈರ್ಯವು ಬಂದಿರುವದು. ಈಗ ಸೇವಾಗೃಹದಿಂದ (office) ಬಂದ ಕೂಡಲೆ ಅವರಿಗೆ ಈ ಪತ್ರವನ್ನು ತೋರಿಸು. ಅವರೂ ಹೋಗಿ ವಿದ್ಯಾಧರನಿಗೆ ಆತನ ಕಾರ್ಯದಲ್ಲಿ ಸಹಾಯಮಾಡಿ ವ್ಯವಸ್ಥೆಯಿಂದ ಎಲ್ಲರನ್ನು ಇತ್ತ ಕಡೆಗೆ ತುಸು ದವಸ ನಿಲ್ಲಲಿಕ್ಕೆ ಬರಬಹುದು. ತಾಯಿಯ ಈ. ಶಬ್ದಗಳನ್ನು ಕೇಳಿ ಸರಸ್ವತಿಗೆ ತುಸು ಸಮಾ ಧಾನವಾದಂತಾಯಿತು. ಸರಸ್ವತಿಯು ಸಹಜ ಗತಿಯಿಂದ ಕಿಡಿಕಿ ಯೊಳಗೆ ಹಣಿಕಿ ಹಾಕಿ ತಂದೆಯು ಬಿರುವ್ ಮಾರ್ಗದ ಕಡೆಗೆ ನೊಡಿ ದಳು.ಕೂಡಲೆ ಚಿಟ್ಟನೆ ಚೀರಿ ನೆಲಕ್ಕುರುಳಿದಳು. ಆ ಕ್ಷಣವೇ ರಮಾಸಾಬಾಯಿಯವರು ಏನಾಯಿತೆಂದು ಕಿಡಕಿಯ ಹತ್ತರ ನೋಡ ಲಿಕ್ಕೆ ಹೋದರು ಇಬ್ಬರು ಮೂವರು ಸೇವಕರೂ, ವೈದ್ಯರೂ ಶ್ರೀನಿ ವಾಸರಾಯರನ್ನು ಬಂಡಿಯಿಂದ ಮೆಲ್ಲಗೆ ಎಚ್ಚರಿಕೆಯಿಂದ ಇಳಸುತ್ತಿ ದ್ದದ್ದು ಅವರಿಗೆ ಕಾಣಿಸಿತು ಅವರು ತೀರ ಗಾಬರಿಯಾದರು. ಅವರ ಕಣ್ಣಿಗೆ ಕತ್ತಲೆ ಬಂದಂತಾಗಿ ಕೂಡಲೆಅವರು ನೆಲದಮೇಲೆ ದೊಪ್ಪನೆ ಬಿದ್ದರು. ಸರಸ್ವತಿಯು ಎದ್ದು ಸಾವಕಾಶವಾಗಿ ತಾಯಿಯನ್ನು ಎಬ್ಬಿ ಸಲಿಕ್ಕೆ ಹೋಗುತ್ತಿರಲು ಆಕೆಗೆ ಬಾಗಿಲ ಮೇಲೆ ಯಾರೋ ಬಡಿ ದಂತಾಯಿತು. ಆಂಜುತ್ತಂಜುತ್ತ ಹೋಗಿ ಬಾಗಿಲ ತೆಗೆದಳು. ಹಾಯ! ಹಾಯ !! ಅಪ್ಪಾ ಹೀಗೇಕೆ ನಿಮ್ಮ ಗತಿ! "ಎಂದು. ಒದರಿ ನೆಲದ ಮೇಲೆ ಕುಳಿತಳು, ವೈದ್ಯರು ಸರಸ್ವತಿಗೆ ಅಂಜಬೇಡೆಂದು ಹೇಳೆ ಅಲ್ಲಿಯೇ ಇದ್ದ ಮಂಚದ ಮೇಲೆ ಶ್ರೀನಿವಾಸರಾಯರನ್ನು ಮಲಗಿಸಿದರು, ಅತ್ತಿತ್ತ ತಮ್ಮ ದೃಷ್ಟಿಯನ್ನು ಹಾಕುತ್ತಿರಲು ಮನೋ ರಮಾಬಾಯಿಯವರು ನಿಶ್ಚೇಷ್ಟತರಾಗಿ ಬಿದ್ದದ್ದೂ ಅವರ ತಲೆಯೊಳ ಗಿಂದ ಅತುಲರಕ್ತವು ಹರಿಯುತ್ತಿದ್ದದ್ದೂ ವೈದ್ಯರಿಗೆ ಕಾಣಿಸಿಸಿತು. ಗಡಿ ಬಡಿಯಂದ ಹೋಗಿ ಗಾಯವನ್ನು ಕಟ್ಟಿದರು. ಕೆಲವು ಹೊತ್ತಿನಮೇಲೆ ಇದೇನು ಗೊಂದಲ ! ೪೧ ಮನೋರಮಾಜಾಯಿಯವರು ಕಣ್ಣು ತೆರೆದು ನಾಲ್ಕು ಕಡೆಗೆ ನೋಡಿ ದರು. ಪತಿಯು ಮಂಚದ ಮೇಲೆ ನಿಶ್ಚೇಷ್ಟಿತನಾಗಿ ಬಿದ್ದದ್ದೂ, ಸರ ಸ್ವತಿಯು ಗಾಬರಿಯಾಗಿ ಅಳುತ್ತಿರುವದೂ ಅವರಿಗೆ ಕಾಣಿಸಿತು. ಕೂಡಲೇ ಮತ್ತೆ ಅವರ ತಲೆತಿರುಗಿದಂತಾಗಿ ಕೂತಲ್ಲಿಯೇ ಮತ್ತೆ ಉರಳಿದರು. ಸರಸ್ವತಿಯು ಬಹಳೆ. ಆಂಜಿದಳು. ತಂದೆಯವರ ಸ್ಥಿತಿಯು ಹೀಗಾಗಲಿಕ್ಕೆ ಕಾರಣವೇನೆಂದು ಕೇಳಲು ಯತ್ನಿಸುತ್ತಿರಲು ಇಷ್ಟರಲ್ಲಿ ತಾಯಿಯ ಅವಸ್ಥೆಯು ಹೀಗಾದದ್ದು ಕಂಡು ಗಾಳಿಯನ್ನು ಬೀಸಹತ್ತಿದಳು. ತುಸು ಹೊತ್ತಿನ ಮೇಲೆ " ಹಾಯ! ಹಾಯ! ವಿಧಿಯೇ ಇದೇನು ಸಂಕಟ! !" ಎಂದು ಉಸುರ್ಗರೆಯುತ್ತ ಮನೋರಮಾಬಾಯಿಯವರು ಎದ್ದು ಕುಳಿತರು. ಈಗ ಮಾತ್ರ ಎಲ್ಲರಿಗೂ ತುಸು ಸಮಾಧಾನವಾಯಿತು. ಸರ ಸ್ವತಿಯ ಕಣ್ಣೊಳಗಿಂದ ಗಂಗಾಮಾತೆಯು ಇನ್ನೂ ಪ್ರವಹಿಸು ತ್ತಲೇ ಇದ್ದಳು. ಮನೋರಮಾಬಾಯಿಯವರೂ ಆಳುತ್ತಲೇ ಗಾಬ ರಿಯಾಗಿ ಹುಚ್ಚ ಹಿಂಡಿದಂತೆ ಪತಿಯ ಮಂಚದ ಕಡೆಗೆ ಓಡಹತ್ತಿದರು. ವೈದ್ಯರು ಸಾವಕಾಶವಾಗಿ ಸರಸ್ವತಿಯ ಕಡೆಗೆ ನೋಡಿ "% "Ask your mother not to go there. He is miserable" ಎಂದು ಹೇಳಿದರು. ಮನೋರಮಾಬಾಯಿಯವರ ಕೈಕಾ ಲೇ ಹೋದವು. ಮತ್ತೆ ಅವರು ಹುಚ್ಚು ಹಿಡಿದವರಂತೆ ಓಡುತ್ತ ಬಂದು ಸರಸ್ಮೃತಿಯನ್ನು ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅಳಹತ್ತಿದರು. ವೈದ್ಯರು ಅಳಬೇಡೆಂದು ಹೇಲಿ ಶ್ರೀನಿವಾಸರಾಯರ ಕಡೆಗೆ ಓಮ್ಮೆ ದೃಷ್ಟಿ ಯನ್ನು ತಿರುವಿದರು ಶ್ರೀನಿವಾಸರಾಯರು ಈಗೀಗ ತುಸು ಕಣ್ಣು ತೆರೆದು ಎಲ್ಲ ಕಡೆಗೂ ನೋಡಬೇಕೆಂದು ಯತ್ನಿಸುತ್ತಿದ್ದರು. ಅಸಹ್ಯ ತರವಾದ ಅಂತರ್ವೇದನೆಗಳಾಗುತ್ತಿದ್ದದರಿಂದ ಅವರಿಗೆ ಮಾತಾಡ ...... % ಮಂಚದಹತ್ತಿರ ಹೋಗಬೇಡೆಂದು ನಿಮ್ಮ ತಾಯಿಗೆ ಹೇಳು. ಶ್ರೀನಿವಾಸರಾಯರು ನಿಶ್ತೇಷ್ಟಿತರಾಗಿರುವರು. ೪೨ ಸಮಾಜರಹಸ್ಯ. ಲಿಕ್ಕೆ ಬರಲಿಲ್ಲ ಪತ್ನಿ ಪ್ರತ್ರಿಯರನ್ನು ಕಂಡು ಅವರ ಅಂತರ್ವೇದನೆ ಗಳು ಹೆಚ್ಚಿ ಅವರು ಮತ್ತೆ ನಿಶ್ಚೇಷ್ಟಿತರಾದರು. ವೈದ್ಯರು ಮತ್ತೆ ಔಷ ದೋಪಚಾರಗಳನ್ನು ವಾಡಿದರು ಹೀಗಾಗುವದಕ್ಕೆ ಕಾರಣವೇನೆಂಬದನ್ನು ಸ್ನಲ್ಪದರಲ್ಲಿಯೇ ಸರಸ್ವತಿಗೆ ಹೇಳಿ ಕೆಲವು ಔಷದಗಳನ್ನು ಕೊಟ್ಟು ಹೋಗಬೇಕೆಂಬ ಉದ್ದೇಶದಿಂದ ಸರಸ್ವತಿಯನ್ನು ಹತ್ತರ ಕರೆದು ಸಾವಕಾಶವಾಗಿ ಎಲ್ಲ ವನ್ನೂ ಚನ್ನಾಗಿ ತಿಳಿಯುವಂತೆ ವಿಸ್ತರಸಿ ಹೇಳಿದರು. ಒಮ್ಮೆಲೇ ಹೀಗಾದ ಸುದ್ದಿಯನ್ನು ಕೇಳಿ ಅವರು ಎದೆಯೊಡಕೊಂಡಿರುವರೆಂದೂ ಹೇಳಿ ಕೆಲವು ಓಷಧಗಳನ್ನು ಕೊಟ್ಟು ತಾವು ಸಂಜೆಯ ಎಂಟು ಗಂಟೆಯ ಸುಮಾರಕ್ಕೆ ಮತ್ತೆ ಬರುತ್ತೇವೆಂದೂ ಹೇಳಿ ಹೊರಡುತ್ತಲೇ * " Take care that you do not trouble him in any way, Be silently waiting near him" ಎಂದು ಹೆಳಿದರು. ವೈದ್ಯರು ಹೊರಟು ಹೋದಮೇಲೆ ಸರಸ್ವ ತಿಯೂ ಮನೋರಮಾಬಾಯಿಯವರೂ ಒಬ್ಬರನ್ನೊಬ್ಬರು ಅಪ್ಪಿ ಕೊಂಡು ಬಿಕ್ಕಿ ಅಳಹತ್ತಿದರು. ಅಳುವ ವೇಗವು ತುಸು ಕಡಿಮೆ ಯಾದಮೇಲೆ ಸರಸ್ವತಿಯು ಎದ್ದು ಮಂಚದ ಹತ್ತರವೇ ಶಾಂತಚಿತ್ತ ದಿಂದ ತಂದೆಯ ಮುಖನನ್ನು ನೋಡುತ್ತ ಕುಳಿತುಕೊಂಡಳು. ಮನೋರಮಾಬಾಯಿಯವರೂ ಹಾಗೇಮಾಡಿದರು ತುಸು ವೇಳೆಯು ಕ್ರಮಿಸಿದನಂತರ ಶ್ರೀನಿವಾಸರಾಯರು ಕಣ್ದೆರೆದು " ಸರಸ್ವತೀ, ಮಾಧವಾ ” ಎಂದು ಸಾವಕಾಶವಾಗಿ ನಿಲ್ಲುತ್ತ ನಿಲ್ಲುತ್ತ ಅಂದರು. ಸರಸ್ವತಿಯು ತೀರ ಹತ್ತರಹೋಗಿ ಬಗ್ಗಿ * ಅಪ್ಪಾ ನಮಗೇನು ಆಗು ತ್ತದೆ?" ಎಂದ. ಕೇಳಿದಳು. ಶ್ರೀನಿವಾಸರಾಯರು ಮತ್ತೆ ಒಮ್ಮೆ .................... * ಅವರಿಗೆ ಯಾವತೊಂದರೆಯನ್ನು ಕೊಡಬೇಡಿರಿ ಸುಮ್ಮನೆ ಆವರ ಹತ್ತರ ಕುಳಿತ ಶುಸ್ರೂಷಣೆಯನ್ನು ಮಾಡಿರಿ. ಇದೇನು ಗೊಂದಲ! ೪೩ ದೃಷ್ಟಿಯನ್ನುಎಲ್ಲಕಡೆಗೆ ಹಾಕಿದರು. ಕಣ್ಣೊಳಗಿಂದ ನೀರು ಹರಿ ಯಹತ್ತಿತು ಮಾತಾಡಲಿಕ್ಕೆ ಬರದಂತಾಗಿ ಕಂಠವು ಬಿಗಿಹೋಯಿ ತು ಇದನ್ನು ಕಂಡು ಸರಸ್ವತಿಯು ತಾಯಿಗೆ ಅಲ್ಲಿಂದ ಎದ್ದು ಹೋ ಗಲು ಹೇಳಿ ತಂದೆಯ ಕಣ್ಣುಗಳನ್ನು ಒರಿಸುತ್ತ “ ಈಗ ನೀವು ಏನೂ ಮಾತಾಡಬೇಡಿರಿ ಸ್ವಸ್ಥಚಿತ್ತದಿಂದ ಮಲಗಿಕೊಳ್ಳರಿ " ಎಂದು ಹೇಳಿ ಮೋರೆಯಮೇಲೆ ತಿಳುವಾದ ವಸ್ತ್ರವನ್ನು ಹೊದ್ದಿಸಿ ಹತ್ತಿರವೇ ಕುಳಿ ತುಕೊಂಡಳು. ಶ್ರೀನಿವಾಸರಾಯರು ಮತ್ತೆ ನಿಶ್ಚೇಷ್ಟಿತರಾದರು. ಸರ ಸ್ವತಿಯು ಗಾಬರಿಯತಾಗಿ ವೈದ್ನರು ಹೇಳಿದಂತೆ ಔಷದೋಪಚಾರಗ ಳನ್ನು ಮಾಡಿದಳು. ಇನ್ನು ಮುಂದೇನು ಮಾಡಬೇಕೆಂದು ಆಕೆಗೆ ತೋಚದಾಯಿತು. ಅತ್ತ ಮಾಧವನು ತನ್ನ ಮಿತ್ರರ ಸಹಾಯಕ್ಕಾಗಿ ಕೊಲ್ಹಾಪುರದಲ್ಲಿ! ಏನುಮಾಡಬೇಕು? ಕೂಡಲೆ ಮಾಧವನಿಗೆ ತಾರುಮಾಡಬೇಕೆಂದು ಆಕೆಗೆ ತೋಚಿತು. ಇಷ್ಟರಲ್ಲಿಯೇ ಶ್ರೀನಿವಾ ಸರಾಯರು ಎಚ್ಚರಾದಂತೆ ಮಾಡಿ 'ವಿದ್ಯಾಧರನೆಲ್ಲಿ?' ಎಂದು ಕೇಳಿ ದರು. " ವಿದ್ಯಾಧರನಿಗೆ ಬರಲು ತಾರು ಮಾಡುವೆನು. ಮುುಂಜಾನೆ ಬರಬಹುದೆ "ಂದು ಸರಸ್ವತಿಯು ಹೇಳಿದಳು. ಶ್ರೀನಿವಾಸರಾಯರು ತುಸು ಸಮಾಧಾನದೃಷ್ಟ್ಟಿಯಿಂದ ಸರಸ್ವತಿಯನ್ನು ನೋಡಿ ಮತ್ತೆ ಹೊದ್ದು ಕೊಂಡು ಮಲಗಿಕೊಂಡರು. ಇದನ್ನು ತಿಳಿದು ಸರಸ್ವತಿಯ ತಾಯಿಯವರನ್ನು ಕರೆದು ಅಲ್ಲಿಯೇ ಕೂಡೆಂದು ಹೇಳಿ ತಾನು ಭರ ದಿಂದ ಪಾವಟಿಗೆಗಳನ್ನು ಇಳಿದು ಅದೇ ಮನೆಯ ಕೆಳಗಿನ ಆಂತಸ್ತಿ ನಲ್ಲಿದ್ದ ಅಂಚೆ ಕಟ್ಟಿಗೆ ಹೋಗಿ ತಾರುಮಾಡುವ ಕಾಗದವನ್ನು ತೆಗೆದುಕೊಂಡು ಮಾಧವನು ಭಯಪಡದಂತೆ ಸಂಕ್ಷಿಪ್ತವಾಗಿ ಶಬ್ದಗಳಲ್ಲಿ ಆತನಿಗೆ ಕೂಡಲೇ ಬರಬೇಕೆಂದು ಬರೆದಳು. ತಿರುಗಿ ಕೋಣೆಗೆ ಬಂದು ನೋಡಲು ಶ್ರೀನಿವಾಸರಾಯರು ಆಗ ಪೂರ್ಣ ವಾಗಿ ಕಣ್ಣೆರೆದು ವ್ಯಾಕುಲರಾಗಿ ನೋಡುತ್ತಿದ್ದರು. ಸರ ಸ್ವತಿಯು ಬಂದಳೆಂದು ಕಂಡು ಕೈಸೊನ್ನೆಯಿಂದ ಆಕೆಗೆ ತನ್ನ ಹತ್ತರ ೪೪ ಸಮಾಜರಹಸ್ಯ. ಕೂಡೆಂದು ತಿಳುಹಿ ಆಕೆಯ ಬೆನ್ನ ಮೇಲೆ ಕೈಯ್ಯಾಡಿಸಹತ್ತಿದರು. ಸರಸ್ವತಿಯು ತಂದೆಯ ಕೈಸ್ಫರ್ಶವಾದ ಕೂಡಲೆ ಗಾಬರಿಯಾಗಿ ಮತ್ತೊಮ್ಮೆ ಅವರ ಕ್ಸ ಹಿಡಿದು ನೋಡಿದಳು. ಭಯಂಕರ ಜ್ವರದಿಂದ ಶ್ರೀನಿವಾಸರಾಯರ ಶರೀರವೆಲ್ಲ ಕಾಯ್ದು ಹೋಗಿತ್ತು. ಆಕೆಯ ಧೈರ್ಯ ಕುಂದಹತ್ತಿತು. ಹೇಳಿದಂತೆ. ಎಂಟು ಗಂಟೆಯ ಸುಮಾರಕ್ಕೆ, ವೈದ್ಯರು ಮತ್ತೆ ಬಂದು ನಾಡೀ ನೋಡಿ ಜ್ವರವು ಬಹಳೇ ಬಂದಿರುವದನ್ನು ಕಂಡರು. ಮಾನಸಿಕ ಶ್ರಮವು ಬಹಳ ವಾಗಿರುವದರಿಂದ ಈ ಬೇನೆಗೆ ಔಷಧವು ತೀವ್ರ ನಡೆಯಲಾರದೆಂದು ಹೇಳಿ ಮತ್ತೆ ಶರೀರ ಪರೀಕ್ಷಣೆಗೆ ಹತ್ತಿ ದರು, ಸರಸ್ವತಿಯು ವೈದ್ಯರು ಹೇಳದ್ದನ್ನು ಕಂಡು ಬಹಳ ದುಃಖಿತಳಾದಳು, ವೈದ್ಯರು ಮತ್ತೆ ಓಷಧವನ್ನು ಕೊಟ್ಟು ಅದಕ್ಕೆ ಮಾಡತಕ್ಕ ಕಾರ್ಯವನ್ನು ತಿಳುಹಿದರು. ಸರಸ್ವತಿಯು ಔಿಷಧವನ್ನು ಇಸುಗೊಂಡು ಆದನ್ನು ಹೇಗೆ ಹೇಗೆ ಉಪಯೋಗಿಸಬೇ ಕೆಂಬದನ್ನು ತಿಳಕೊಳ್ಳುತ್ತಿದ್ದಳು. ವೈದ್ಯರು ತಿರುಗಿ ಹೋಗಲಿಕ್ಕೆ ಸಿದ್ದರಾಗಹತ್ತಿದರು. ಸರಸ್ವತಿಗೆ ಏನೋ ನೆನಪಾದಂತಾಗಿ " *Sir, will you kindly see my mother's wounds. She too is attacked by strong feaver" ಎಂದು vfykulcitft ಳಾಗಿ ಪ್ರತಿ ಶಬ್ದಗಳನ್ನು ಕಷ್ಟದಿಂದಲೇ ಉಚ್ಚರಿಸುತ್ತ ವೈದ್ಯರಿಗೆ ಹೇಳಿದಳು. ವೈದ್ಯರಿಗೆ ತಾವು ಮಧ್ಯಾನ್ಹದಲ್ಲಿ ಬಂದಾಗ್ಗೆ ಮನೋ ರಮಾಬಾಯಿಯವರ ತಲೆಗೆ ಪೆಟ್ಟು ಹತ್ತಿ ನಿಶ್ಚೇಷ್ಟಿತರಾಗಿ ಬಿದ್ದಿರಲು ತಾವು ಆವರಿಗೆ ಮಲಮ ಹಚ್ಚಿ ಔಷಧ ಕೊಟ್ಟದ್ದು ಈಗ ನೆನವಾಯಿತು. ಅವರು "% Yes! and where is your mother?" ............... * ಮಹಾಶಯ, ತಾಯಿಗೂ ಕೂಡ ಜ್ವರ ಬಂದು ಮುಂಜಾವಿನ ಗಾಯದಿಂದ ಆಕೆಯು ಚಡಪಡಿಸುತ್ತಿರುವಳು. ಆಕೆಯ ಗಾಯವನ್ನಷ್ಟು ನೊಡಿವಿರಾ' % 'ಒಳ್ಳೇದು. ಅವರು ಈಗ ಎಲ್ಲಿರುವರು.' ಎದರು ಈಗ ಎನ್ನರುವರು ' ಇದೇನು ಗೊಂದಲ! ೪೫ ಎಂದು ಹೇಳಿದರು, ಸರಸ್ವತಿಯು ತಾರು ಮಾಡಹೋಗಲು ಮನೋ ರಮಾಬಾಯಿಯವರು ವ್ಯಥೆಯನ್ನು ತಾಳುತ್ತ ಅಲ್ಲಿಯೇ ಕೂಡ್ರಲಾರದೆ ತುಸು ಹೊತ್ತು ಹತ್ತರದ ಕೋಣೆಯಲ್ಲಿ ಮಂಚದ ಮೇಲೆ ಮಲಗಿದ್ದರು. ಸರಸ್ವತಿಯು ಹತ್ತರದ ಕೋಣೆಯ ಬಾಗಿಲವನ್ನು ತೆಗೆದಳು. ಮಂಚದ ಮೇಲೆ ಮನೋರಮಾಬಾಯಿಯವರು ವಿಷಣ್ಣ ಹೃದಯ ದಿಂದ ಕಣ್ಣಲ್ಲಿ ನೀರು ತುಂಬಿಕೊಂಡು ಊರ್ಧ್ವದೃಷ್ಟಿಯಿಂದ ದೇವ ರನ್ನು ಧ್ಯಾನಿಸುತ್ತಿದ್ದರು ವೈದ್ಯರನ್ನು ಕಂಡು ಏಳಲಿಕ್ಕೆ ಯತ್ನಿಸಿ 'ನನ್ನ ಪತಿಗೆ ನೆಟ್ಟಗಾಗುವದೋ ಎಂಬ ಅರ್ಧಪೂರ್ಣದೃಷ್ಟಿ ಯಿಂದ ಅವರ ಕಡೆಗೆ ನೋಡಿದರು ವೈದ್ಯರು 'ಹಾಗೆ ಆಗಬಹುದು ನೀವೇನು ಚಿಂತಿಸಬೇಡಿರಿ, ' ಎಂಬ ದೃಷ್ಟಿಯಿಂದ ನೋಡುವಂತೆ ತೋರಿತು. ಮನೋರಮಾಬಾಯಯವರ ಮುಖದ ಮೇಲೆ ತುಸು ಆನಂದದ ಕಳೆಯೇರಿತು. ವೈದ್ಯರು ಗಾಯದ ಮೇಲಿನ ಪಟ್ಟಿಯನ್ನು ತೆಗೆದು ಅದನ್ನು ಸ್ವಚ್ಛವಾಗಿ ತೊಳೆದು, ಮಲಮವನ್ನು ಹಚ್ಚಿ, ಮುಂಜಾವಿನಲ್ಲಿ ಮತ್ತೆ ಬರುತ್ತೇನೆಂದು ಹೇಳಿ ಹೋಗಹತ್ತಿದರು. ಸರ ಸ್ವತಿಯು "* I am ever thankful to you, Sir" ಎಂದು ಅವರು ಹೋಗುವಾಗ್ಗೆ ಅಂದಳು. ಇದರಲ್ಲಿ ಉಪಕಾರ ಮನ್ನಿಸುವಷ್ಟು ವಿಶೇ ಷವೇನಿಲ್ಲೆಂತಲೂ, ಶ್ರೀನಿವಾಸರಾಯರ ನಿರ್ಮಲ ಅಂತಃಕರುಣವು ತನಗೆ ಅಂತರಿಸಲಾರದೆಂದೇ ಈ ಕಾರ್ಯವನ್ನು ಕೈಕೂಂಡಿರುವೆ ನೆಂದೂ ಹೇಳಿ ಆವರು ಮುಖದಮೇಲೆ ಆನಂದದ ಕಳೆಯನ್ನು ತಂದು ಕೊಳ್ಳಲು ಯತ್ನಿಸಿದರು. ಆದರೆ ಅವರ ಮುಖವು ಮತ್ತಿಷ್ಟು ಸಂಶ ಯಾಸೃದವಾಗಿಯೇ ತೋರಹತ್ತಿ ಅವರು ಕಂಪಿಸತೊಡಗಿದರು. ಮುಖದ ಮೇಲಿನ ಗಾಂಭೀರ್ಯವೆಲ್ಲ ಹೋಯಿತು. * ತಾವು ಭಯಂ ಕರ ಕೃತ್ಯವನ್ನು ಮಾಡಿರುವೆವು ” ಎಂಬ ಅಕ್ಷರಗಳು ಅವರ ಮುಂದೆ ............ * 'ನಾನು ತಮಗೆ ಅಜನ್ಮ ಉಪಕಾರಬದ್ಧಳಾಗಿರುವೆನು.' ೪೬ ಸಮಾಜರಹಸ್ಯ ಕುಣಿಯಕತ್ತಿದವು ವೈದ್ಯರು ಬಹಳೆೇ ಪೇಚಾಟದಲ್ಲಿ ಬಿದ್ದರು. ಹೇಗಾದರೂ ಮಾಡಿ ಅಲ್ಲಿಂದ ಪಾರಾಗಿ ಹೋಗಬೇಕೆಂದುವಾಡಿ “ಒಳ್ಳೇದು. ನಾನು ಹೋಗಿ ಬರುತ್ತೇನೆಂ"ದು ಹೇಳಿ ಹೊರ ಟು ಹೋದರು. ವೈದ್ಯರ ಆ ಮನಶ್ಚಾಂಚಲ್ಯವೂ ಅವರ ಕಂಪನೆಯೂ, ಅವರ ಮುಖದ ಮೇಲಿನ ಆಗಿನ ಭಯಂಕರ ಕಳೆಯೂ ಸರಸ್ವತಿಯ ಮನ ಸ್ಸಿನಲ್ಲಿ ಬರದೇ ಹೋಗಲಿಲ್ಲ. ಆಕೆಗೂ ಕೂಡ ಈ ಗೊಂದಲವು ತಿಳಿ ಯದಾಯಿತು. ತನ್ನ ವಿಚಾರದಂತೆ ತಂದೆಯವರ ಬೇನೆಯು ಸಣ್ಣದಿ ರದೆ ಒಮ್ಮೆಲೇ ಬಂದ ಆಪತ್ತಿನಿಂದ ಆವರ ಎದೆಯೊಡೆದು ಮಾನಸಿಕ ಯಾತನೆಯು ಬಹಳವಾಗಿರುವದೆಂದು ತಿಳಿದಳು. ಆದರೂ ವೈದ್ಯರ ವಿಷಯದಲ್ಲಿ ಮಾತ್ರ ಆಕೆಗೆ ಸಂಶಯ ಬರದೆ ಇರಲಿಲ್ಲ. ಮನೋರಮಾಬಾಯಿಯವರಿಗೆ ಮಾತ್ರ ಬರಬರುತ್ತ ನೆಟ್ಟಿಗನಿ ಸಹತ್ತಿತು ರಾತ್ರಿಯ ಹತ್ತು ಗಂಟೆಯ ಸುಮಾರಕ್ಕೆ ಅವರ ಜ್ವರವೆಲ್ಲ ಕಡಿಮೆಯಾಗಲು ಅವರು ಶ್ರೀನಿವಾಸರಾಯರ ಹತ್ತಿರ ಬಂದು ಕುಳಿ ತರು ಸರಸ್ವತಿಯಂತೂ ಹಗಲು-ಇರುಳೆನ್ನದೆ ಒಂದೇಸವನೆ ಶ್ರೀನಿ ವಾಸರಾಯರ ಶುಶ್ರೂಷಣೆ ಮಾಡುವದರಲ್ಲಿಯೇ ತೊಡಗಿದ್ದಳು. ಹನ್ನೆರಡು ಗಂಟೆಗೆ ಔಷಧವನ್ನು ಕೊಡಬೇಕಾಗಿತ್ತು, ಗಡಿಯಾ ರದಲ್ಲಿ ವೇಳೆ ನೋಡಿ ಇನ್ನು ಅರ್ಧತಾಸು ವೇಳೆ ಇರುವದೆಂದು ಕಂಡು ಸಮಾಧಾನಪಟ್ಟು ಹಾಲು ಕಾಯಿಸಬೇಕೆಂದು ಮಾಡಿದಳು. ಹೋಗುತ್ತ ಹೋಗುತ್ತ ಓಷಧದ ಶಿಸೆಯನ್ನು ತೆಗೆದು ಕೊಂಡು ಹೋದಳು 'ಸ್ಟೋವ್ಹ'ನ್ನು ಹಚ್ಚಿ ಹಾಲು ಕಾಸುತ್ತಾ ಕುಳಿ ತಳು, ಇಷ್ಟರಲ್ಲಿ ಎಲ್ಲಿಯೋ ಹೋಗಿದ್ದ ಅವರ ಮನೆಯ ಬೆಕ್ಕು “ ಮ್ಯಾಂವ ಮ್ಯಾಂವ" ಎಂದು ಒದರುತ್ತ ಅಕೆಯ ಬೆನ್ನಿಗೆ ಬೆನ್ನುಹಚ್ಚಿ ಒದರಹತ್ತಿತು. ತುಸು ಹಾಲು ಹಾಕಬೇಕೆಂದು ವಿಚಾರಿಸಿ ಬಟ್ಟಲ ಇದೇನು ಗೊಂದಲ! ೪೭ ವನ್ನು ತೆಗೆದುಕೊಂಡು ಅದರಲ್ಲಿ ಹಾಲು ಹಾಕಿದಳುು ಅಷ್ಟರಲ್ಲಿ ಆಕೆಗೆ ಏನನಿಸಿತೋ ಯೂರಿಗೆ. ಗೊತ್ತು! ಓಷಧದ ಶಿಸೆಯನ್ನು ತೆಗೆದು ಹಾಲಿನಲ್ಲಿ ೮-೧೦ ಹನಿಗಳನ್ನು ಹಾಕಿದಳು. ಬೆಕ್ಕು ಹಾಲು ಹಾಕುತ್ತಿರುವದನ್ನು ಕಂಡು ಓಡುತ್ತ ಬಂದು ಔಷಧ ಹಾಕುತ್ತಿರು ವಾಗಲೇ ಕುಡಿಯ ಹತ್ತಿತು. ತುಸು ಹೊತ್ತಿನ ಮೇಲೆ ಬೆಕ್ಕು ಹಾಲು ಕುಡಿದು ಕೃತಜ್ಞತೆಯಿಂದ ಸರಸ್ವತಿಯ ಹತ್ತರವೇ ಓಡಾಡುತ್ತಿತ್ತು. ಸರಸ್ವತಿಯಾದರೂ ಬೆಕ್ಕಿನ ಬೆನ್ನ ಮೇಲೆ ಕೈಯಾಡಿಸುತ್ತ ಕುಳಿ ತಳು. ೫-೬ ನಿಮಿಷಗಳ ತರುವಾಯ ಬೆಕ್ಕು ಬಹಳೇ ಒದರ ಹತ್ತಿತು. ಇದನ್ನು ಕಂಡು ಆದಕ್ಕೆ ಮತ್ತೆ ಹಾಲುಬೇಕೆಂದು ಎಣಿಸಿ ಮತ್ತೆ ತುಸು ಹಾಲನ್ನು ಹಾಕಿ ಅದರ ಮುಂದೆ ಇಟ್ಟಳು, ಅದರೆ ಅದು ಹಾಲು ಕುಡಿಯದೆ ಉರಳಾಡಿ ಒಂದೇಸವನೇ ಒದರಹತ್ತಿತು. ಸಹಜ ವಾಗಿ ಆಕೆಗೆ ಸಂಶಯ ಬಂದು ಬಟ್ಟಲವನ್ನು ನೋಡಿದಳು. ಹಾಲು ಹಚ್ಚಗೆ ಹಸರಾಗಿದ್ದು, ವಾಸನೆಯೆಂಥದೋ ಅದಕ್ಕೆ ಬರು ತ್ತಿತ್ತು; ಆಕೆಯು ಶಿಸೆಯ ವಾಸನೆಯನ್ನು ನೋಡಿದಳು. ಔಷ ಧವೇ ಹಾಗಿರಬಹುದೆಂದು ಶಿಸೆಯನ್ನು ಕೆಳಗಿಟ್ಟಳು. ಬೆಕ್ಕು ಅಷ್ಟೊತ್ತಿನಲ್ಲಿ ಮರಣೋನ್ಮುಖವಾಗಿ ಬಳಲುತ್ತ ಕೆಳಗೆ ಬಿದ್ದಿತು. ಸರಸ್ವತಿಯು ಗಾಬರಿಯಾದಳು. ಔಷಧವು ಏನೋ ಘಾತಕವಿರಬಹು ದೆಂದು ನಂಬಿ ಬಿಟ್ಟಲವನ್ನು ಮುಚ್ಚಿ ಅಲ್ಲಿಯೇ ಇಟ್ಟು ಹಾಲು ತೆಗೆದುಕೊಂಡು ತಂದೆಯವರ ಕೋಣೆಗೆ ಹೋದಳು. ಹೋಗುತ್ತ ಹೋಗುತ್ತ ಬೆಕ್ಕು ಸಾಯುತ್ತಿರುವದನ್ನು ಕಂಡಳು. ತಂದೆಯವರು ಮಲಗಿದ್ದರು; ತಾಯಿಯು ಎಚ್ಚರವಿದ್ದು ಹತ್ತಿರವೇ ಕುಳಿತಿದ್ದಳು. ತಾಯಿಯ ಮುಂದೆ ಇದನ್ನೆಲ್ಲ ಹೇಳಬೇಕೆಂದು ಮಾಡಿದಳು; ಅದರೆ ಮತ್ತೆ ಯಾವ ಕಾರಣದಿಂದಲೋ ಹೇಳಲೇ ಇಲ್ಲ. ತಂದೆಯ ವರನ್ನು ಎಚ್ಚರಿಸ ತುಸು ಹಾಲು ಕುಡಿಸದಳು, ಔಷದವನ್ನು ಮಾತ್ರ ಆಕೆಯು ಎಲ್ಲಿಯೋ ಇಟ್ಟುಬಿಟ್ಟಳು. ೪೮ ಸಮಾಜರಹಸ್ಯ. ಏನೂ ಸಂಭವಿಸದಂತೆ ಮತ್ತೆ ತಂದೆಯ ಹತ್ತರ ಸ್ವಸ್ಥಚಿತ್ತ ದಿಂದ ಕುಳಿತಳು. ಬರಬರುತ್ತ ಮುಂಬೈಯು ಶಾಂತವಾಗಹತ್ತಿತು.ಶ ೧೮ ತಾಸುಗಳ ವರೆಗೆ ಸಪ್ಪಳದ ಧ್ವನಿಗೆ ಬೇಸತ್ತಿದ್ದ ಜನರೆಲ್ಲರು ಶಾಂತತೆಯುಂಟಾದ ಕೂಡಲೇ ನಿದ್ರಾದೇವಿಯನ್ನು ಧ್ಯಾನಿಸಹತ್ತಿದರು. ಆಕೆಯಾದರೂ ಜನರು ಬಹಳ ದಣಿದಿರುವರೆಂದು ಕಂಡು ಎಲ್ಲರನ್ನು ಚಪ್ಪರಿಸಹತ್ತಿದಳು. ಎಲ್ಲ ಕಡೆಯಲ್ಲಿಯೂ ಶಾಂತತೆಯ ರಾಜ್ಯವೆ ಹಬ್ಬಿತು. ನಮ್ಮ ಕುಟುಂಬದವರ ಕೂಡ ಮಾತ್ರ ನಿದ್ರಾದೇವಿಯು ಸಂ ಪ್ತಳಾಗಿದ್ದಳು. ಸರಸ್ವತಿಯಾದರೂ ಆಕೆಯನ್ನು ಲೆಕ್ಕಸುತ್ತಿದ್ದಿಲ್ಲ. ತಂದೆಯ ಶುಶ್ರೂಷೆಯಲ್ಲಿ ತತ್ಪರಳಾಗಿದ್ದ ತನ್ನನ್ನು ನಿದ್ರಾದೇವಿಯು ಸಿಟ್ಟಿನ ಭರದಲ್ಲಿ ಪೀಡಿಸಲಿಕ್ಕೆ ಬಂದಿದ್ದರೆ ಆಕೆಯನ್ನು ಒದೆದು ನಿಶ್ಚೇಷ್ಟಿತಳಾಗಿ ಮಾಡಬೇಕೆಂಬ ಮನೋಧೈರ್ಯದಿಂದಲೇ ನಮ್ಮ ಸರಸ್ವತಿಯು ಕುಳಿತಿದ್ದಳು. ಕಡೆಗೆ ಗಡಿಯಾರವು ನಿದ್ದೆಯಿಂದ ಎದ್ದು ಬಲದಿಂದ ನಾಲ್ಕ ಗಂಟೆಗಳನ್ನು ಹೊಡೆಯಿತು. ತೂಕಡಿಕೆ ಯಿಂದ ತಲೆಬಾಗಿಸಿಕೊಂಡು ಕುಳಿತಿದ್ದ ಮನೋರಮಾಬಾಯಿಯ ವರು ಪೂರ್ಣ ಎಚ್ಚತ್ತು ಸಾವರಿಸಿಕೊಂಡು ಕುಳಿತರು. ನಿಮಿಷಾರ್ಧ ದಲ್ಲಿಯೇ ಬಾಗಿಲದ ಮೇಲೆ ಸಾವಕಾಶವಾಗಿ ಯಾರೋ ಬಡಿಯುತ್ತಿ ರುವಂತೆ ಸಪ್ಪಳವಾಯಿತು. ಮನೋರಮಾಬಾಯಿಯವರು ಇಷ್ಟು ರಾತ್ರಿಯಲ್ಲಿ ಯಾರು ಬಂದರೆಂದು ಅಂಜುತ್ತಂಜುತ್ತ ಬಾಗಿಲು ತೆಗೆದರು. ಮಾಧವನು ಮುುಂಜಾನೆ ಬರಬಹುದೆಂದು ಅವರೆ ಲ್ಲರ ಎಣಿಕೆ; ಆದರೆ ಬಾಗಿಲ ತೆರೆದ ಕೂಡಲೆ ಮಾಧವನು ಕಾಣಿಸಿ ದನು. ಮನೋರಮಾಬಾಯಿಯವರಿಗೆ ಮತ್ತ ದುಃಖಾವೇಗವು ಬಂದಿ ತು. ಹೀಗೆ ಒಮ್ಮೆಲೇ ತಾಯಿಯು ಅಳುವದನ್ನೂ ಮಂಚದ ಮೇಲೆ ಸರಸ್ವತಿಯು ಏಕಾಗ್ರಚಿತ್ತದಿಂದ ಚಿಂತಾಕುಲಳಾಗಿ ಯಾರದೋ ಭ್ರಮ-ನಿರಸನ. ೪೯ ಹತ್ತರ ಕುಳಿತಿರುವದನ್ನೂ ಕಂಡು ಆತನೂ ಸಹ ಗಾಬರಿಯಾದನು. ತಾಯಿಯನ್ನು ತಬ್ಬಿಕೊಂಡು ಎಬ್ಬಿಸುತ್ತ " ಇದೇನು ಗೊಂದಲ ? " ಎಂದು ಕೇಳಿದನು. ======= ಆರನೇ ಪರಿಚ್ಚೇದ. ಭ್ರಮ-ನಿರಸನ. ಶ್ರೀನಿವಾಸರಾಯರು ಒಮ್ಮೆಲೇ ಮರಣೋಮ್ಮುಖರಾಗಿ ಹಾಸಿ ಗೆಯನ್ನು ಹಿಡಿಯುವಷ್ಟು ಕಾರಣವೇನೆಂಬದು ತಿಳಿಯದೆ ನಮ್ಮ ಪ್ರಿಯವಾಚಕರು ದಿಗಿಲುಗೊಂಡಿರಬಹುದು. ಆದ್ದರಿಂದ ಮೊದಲು ಅವರ ಬೇನೆಯ ಕಾರಣವನ್ನು ಹೇಳಿ ಮುಂದಿನ ಕಥಾ-ಭಾಗಕ್ಕೆ ಹತ್ತಬೇಕೆಂದು ಯೋಚಿಸದ್ದೇವೆ. ಸರಸ್ವತಿಗೂ, ಮನೋರಮಾಬಾಯಿಯವರಿಗೂ ಇದರ ಕಾರಣವು ಶ್ರೀನಿವಾಸರಾಯರು ತಮ್ಮ ಪರಮ ಮಿತ್ರರೆಂದು ಹೇಳಿ ಕೊಂಡ ವೈದ್ಯರ ಮುಖದಿಂದ ತಿಳಿದೇ ಇರುವದು. ಮುಂಬಾಪುರದಲ್ಲಿ ಕಬ್ಬಿಣ ಕಾರಖಾನೆಯನ್ನು ನಡೆಸುತ್ತಿದ್ದ ' ಟಾಟಾ ಮತ್ತು ಕಂಪನಿ, ' ಎಂಬವರ ಕಚೇರಿಯಲ್ಲಿ ಶ್ರೀನಿವಾಸ ರಾಯರು ತಿಂಗಳೊಂದಕ್ಕೆ ಎರಡುನೂರು ರೂಪಾಯಿ ಸಂಬಳದ ಮೇಲೆ ಕೆಲಸ ಮಾಡುತ್ತಿದ್ದರು, ಶ್ರೀನಿವಾಸರಾಯರು ಎಲ್. ಸೀ. ಈ. ಎಂಬ ಪರೀಕ್ಷೆಯಲ್ಲಿ ಮೊದಲನೇ ತರಗತಿಯಲ್ಲಿ ಉತ್ತ್ರೀರ್ಣರಾ ದ್ದರಿಂದ ಮೇಲೆ ಹೇಳಿದ್ದ ಪ್ರಸಿದ್ಧ ಕಂಪನಿಯವರು ಒಮ್ಮೆಲೇ ಇವ ರನ್ನು ೧೫೦ ರೂಪಾಯಿ ಸಂಬಳದ ಮೇಲೆ ತಮ್ಮಲ್ಲಿ ಇಟ್ಟು ಕೊಂಡಿ ದ್ದರು. ಮುಂದೆ ಇವರ ಕಾರ್ಯದಕ್ಷತೆಯನ್ನೂ, ಜಾಣತನವನ್ನೂ ನೋಡಿ ಕಂಪನಿಯವರು ಇವರ ಸಂಬಳವನ್ನು ಎರಡು ನೂರು ೫೦ ಸಮಾಜರಹಸ್ಯ,. ರೂಪಾಯಿವರೆಗೆ ಹೆಚ್ಚಿಸಿದ್ದಲ್ಲದೆ ಮತ್ತೆ ಕಲವು ಕಾರ್ಯಗಳನ್ನು ಮಾಡಿಸಿಕೊಂಡು ಮೇಲಿಂದ ಮೇಲೆ ' ಇನಾಮು ' ಎಂದು ಎಷ್ಟೋ ಹಣವನ್ನು ಕೊಡುತ್ತಿದ್ದರು, ಕಂಪನಿಯವರ ವಿಶ್ವಾಸವು ಶ್ರೀನಿವಾಸ ರಾಯರಮೇಲೆ ದಿನೇದಿನೇ ಬೆಳೆಯಹತ್ತಿತು. ಶ್ರೀನಿವಾಸರಾಯರಿಗೆ ಸ್ಥಾನಿಕ ಆದಾಯವಿಲ್ಲದ್ದರಿಂದ ಕೂಡಿಸಿದ ಹಣವನ್ನೆಲ್ಲ ' ಮುಂಬ ಯಿಯ ವ್ಯಾಪಾರಿಸಂಘ ದಲ್ಲಿ ತೊಡಗಿಸಿದ್ದರು. ಹೀಗೆ ಮಾಡಿದ್ದ ರಿಂದ ಅವರಿಗೆ ವ್ಯಾಪಾರದ ಲಾಭವೆಂದು ವರ್ಷಕ್ಕೆ ನೂರಾರು ರೂಪಾಯಿಗಳು ಬರುತ್ತಿದ್ದವು ಮುಂದೆ ಚಾಕರಿಯ ಬೇಸರಿ ಕೆಯು ಬಂದ ಮೇಲೆ ಸಂಘದ ತಮ್ಮ ಪಾಲುಗಳನ್ನು (Shares) ಮಾರಿ, ಬಂದೆ ದುಡ್ಡಿನಿಂದ ಹೊಲಮನೆಗಳನ್ನು ಕೊಂಡು ಯಾವದಾದ ರೂ ಒಂದು ಹಳ್ಳಿಯಲ್ಲಿ ಸುಖದಿಂದ ಕಾಲಕಳೆಯ ಬೇಕೆಂದು ಯೋಚಿ ಸಿದ್ದರು. ಮನುಷ್ಯನ ಇಚ್ಛೆಯೊಂದು ದೇವರು ಮಾಡುವದೊಂದು !! ಶ್ರೀನಿವಾಸರಾಯರು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಂದಿ ನಿಂದ ಅಲ್ಲಿಯೇ ಅಚ್ಛುತರಾಯನೆಂಬ ಒಬ್ಬ ಪ್ರತಿಸ್ಕರ್ಧಿಯು ಉದ ಯನಾಗಕುತ್ತಿದನು. ಅಚ್ಯುತರಾಯನು ಶ್ರೀನಿವಾಸರಾಯರ ಏಳ್ಗೆ ಯನ್ನು ನೋಡಿ ಅವರನ್ನು ಬಹಳ ದ್ವೇಷಿಸುತ್ತಿದ್ದನು. ಇವರ ಏಳ್ಗೆಗೆ ಆತನು ಹಲ್ಲುಕಚ್ಚುತ್ತಿದ್ದನು. ಕಂಪನಿಯವರು ಶ್ರೀವಿವಾಸರಾಯ ರನ್ನು ಇಷ್ಟು ಪ್ರೀತಿಸುದ್ದದ್ದನ್ನು ಕಂಡು ಅತನು ಮತ್ಸರ ತಾಳಿ ದ್ದನು. ಆತನಾದರೂ ಶ್ರೀನಿವಾಸರಾಯಷ್ಟೇ ಕಲಿತವನಿದ್ದನು. ಅದರೆ ಆತನು ಮಹಾಕಾರಸ್ಥಾನಿಯು, ಯಜಮಾನರ ಸೇವೆಯನ್ನು ವಿಶ್ವಾಸ ದಿಂದ ಮಾಡದೆ ಕಪಟನಾಟಕದಿಂದ ಕಂಪನಿಯ ದುಡ್ಡು ಎತ್ತಿ ಹಾಕಿ ಶ್ರೀಮಂತನಾಗಬೇಕೆಂಬದೇ ಆತನ ರಾಕ್ಷಸೀಮಹತ್ವಾ ಕಾಂಕ್ಷೆಯು. ತಾನು ಕಂಪನಿಯಲ್ಲಿ ಶ್ಶೀನಿವಾಸರಾಯರಿಗಿಂತ ಹೆಚ್ಚು ವರ್ಷ ದುಡಿದದ್ದದರಿಂದ ಅವರು ಈಗಿದ ಸ್ಥಳಕ್ಕೆ ತಾನು ಭ್ರಮ-ನಿರಸನ. ೫೧ ಯೋಗ್ಯನಿದ್ದು ಕಂಪನಿಯವರು ಆ ಸ್ಥಳವನ್ನು ಶ್ರೀನಿವಾಸರಾಯ ರಿಗೆ ಕೊಟ್ಟದ್ದರಿಂದ ಅತನ ಮತ್ಸರವು ಈಗೀಗ ಬಹಳೇ ಹೆಚ್ಚತ್ತು. ಕಂಪನಿಯೊಳಗಿಂದ ಈ ಮನುಷ್ಯನನ್ನು ಹೊರಗೆಡವದೆ ತನ್ನ ಏಳ್ಗೆಗೆ ಆಸ್ಪದವಿಲ್ಲೆಂದು ಅತನು ಈಗ ಪೂರ್ಣವಾಗಿ ಮನಗಂಡಿ ದ್ದನು. ಅದಕ್ಕಾಗಿ ಅತನು ಎಷ್ಟೋ ಸುಳ್ಳ ಸುದ್ದಿಯನ್ನು ಹುಟ್ಟಿಸಿ ಶ್ರೀನಿವಾಸರಾಯರ ವಿಷಯಕ್ಕೆ ಕಂಪನಿಯವರ ಮನುಸ್ಸು ಕಲುಷಿ ತವಾಗುವಂಕೆ ಮಾಡಲು ಯತ್ನಿಸುತ್ತಿದ್ದನು. ಅದರೆ ಪ್ರತಿಸಾರೆ ಆತನ ಪ್ರಯತ್ನವು ನಿಷ್ಫಲವಾಗಿದ್ದಲ್ಲದೆ ಪ್ರತಿಸಾರೆಯು ತಾನೇ ಅವಿಶ್ವಾಸುಕ ನೆಂದು ನಿರ್ಣಯಿಸಲ್ಪಡುತ್ತೇನೆಂದು ಕಂಡದ್ದರಿಂದಂತೂ ಆತನು ಭಯಂಕರ ಕೃತ್ಯಕ್ಕೆ ಎದುರಾಗಿದ್ದನು. ಶ್ರೀನಿವಾಸರಾಯರು ನಿಶ್ಚೇಷ್ಟಿತರಾಗಿ ಮನೆಯನ್ನು ಪ್ರವೇಶಿ ಸಿದ ದಿವಸ ಮುಂಜಾನೆ ೧೦ ಗಂಟೆಗೆ ಊಟಮಾಡಿ ತಮ್ಮ ಕಾರ್ಯಾ ಲಯಕ್ಕೆ ಹೋಗಿ ತಮ್ಮ ಕಾರ್ಯದಲ್ಲಿ ತೊಡಗಿದರು. ಅಚ್ಯುತರಾ ಯನು ಶ್ರೀನಿವಾಸರಾಯರು ಬಂದರೆಂದುಕಂಡು ನಮ್ರತೆಯಿಂದ ಆವ ರಿಗೆ ತಲೆಬಾಗಿ ನಮಸ್ಕರಿಸಿದನು. ಶ್ರೀನಿವಾಸರಾಯರು ಅವನಿಗೆ ಕೂಡ್ರಲಿಕ್ಕೆ ಮತ್ತೊಂದು ಕುರ್ಚಿಯನ್ನು ಕೊಟ್ಟು ತುಸು ಹೊತ್ತು ಯುದ್ಧದ ಸುದ್ದಿಗಳನ್ನು ಮಾತಾಡುತ್ತ ಕುಳಿತರು. ಅಚ್ಚುತರಾಯನು ಅತಿ ನೀಚನೆಂದು ಅವರಿಗೆ ಎಂದೂ ತೋರಿದ್ದಿಲ್ಲ, ಆತನೂ ಸಜ್ಜನನೇ ಎಂದು ಶ್ರೀನಿವಾಸರಾಯರು ತಿಳಕೊಂಡಿದ್ದರು. ಸಜ್ಜನರು ಸರ್ವಜಗತ್ತು ತಮ್ಮಂತೆಯೇ ಸುಗುಣಪರಿಪೂರಿತ ವಾಗಿರುವದಂದು ತಿಳಿಯುತ್ತಾರೆ ದುರ್ಜನರ ಕೆಟ್ಟ ಕೃತಿಗಳ ಅಂತೆ ರಂಗವು ಸುಜನರ ಅಂತಃಕರುಣಕ್ಕೆ ತಿಳಿಯುವಷ್ಟು ಅವರ ಹೃದ ಯವು ಕಠೋರವಾಗಿರುವದಿಲ್ಲ ಶ್ರೀನಿವಾಸರಾಯರು ಅಚ್ಚುತರಾ ಯನ ಒಳ್ಳೇ ಮನುಷ್ಯನೆಂದು ತಿಳಿದು ಆತನ ಸಂಗಡ ಯಾವಾ ೫೨ ಸಮಾಜರಹಸ್ಯ. ಗಲೂ ಪ್ರೀತಿಯಿಂದಲೇ ನಡಕೊಳ್ಳುತ್ತಿದ್ದರು. ಅಚ್ಛುತರಾಯನು ಎದ್ದು ಹೋದನಂತರ ಶ್ರೀನಿವಾಸರಾಯರು ಮತ್ತೆ ತಮ್ಮ ಕೆಲಸದಲ್ಲಿ ತೊಡಗಿರಲು ಸಿಪಾಯಿಯು ಶ್ರೀನಿವಾಸರಾಯರ ಕೈಯ್ದಲ್ಲಿ ಒಂದು ಪತ್ರವನ್ನು ತಂದುಕೊಟ್ಟನು ಲಗೆಬಿಗೆಯಿಂದ ಮೇಲ್ಕಾಗದವನ್ನು ಹರಿದು ಪತ್ರವನ್ನು ಓದಹತ್ತಿದರು, ವಾಚಕರಿಗೆ ಅದರ ರಹಸ್ಯವು ತಿಳಿಯಬೇಕೆಂದು ಅದರ ಸಾರಾಂಶವನ್ನೇ ಇಲ್ಲಿ ಕೊಡುತ್ತೇವೆ. ' ಹೆಡ್ ಆಫೀಸ ' " ವ್ಯಾಪಾರಿ ಸಂಘ ಆಫೀಸ” ಲಂಡನ್ ೫೭ ಘೋರ್ಟರೋಡ ಮುಂಬಯಿ. ಮಹನೀಯರೇ, ಹೆಡ್ ಆಫೀಯಿನಿಂದ ಇದೇ ಈಗ ತಾರುಬಂದಿರುವದು. ಮಾಲು ಗಳನ್ನು ತುಂಬಿಕೊಂಡು ಕೆಲವು ಹಡಗಗಳು ಆಫ್ರಿಕೆಗೂ, ಕೆಲವು ಹಿಂದುಸ್ತಾನಕ್ಕೂ ಬರುತ್ತಿರಲು ಜರ್ಮನರ ವಿಮಾನದಲ್ಲಿಯ ತೋಫಿನ ಗುಂಡಿಗೆ ಬಲಿಯಾಗಿ ಎಲ್ಲ ಹಡಗಗಳು ಜಲಸಮಾಧಿಯನ್ನು ಹೊಂದಿ ದವು. ಆದ್ದರಿಂದ ಸಂಘವು ಇಂದು ಮುರಿಯಲ್ಲಟ್ಟು ಪಾಲುಗಾರರ ಹಣವನ್ನು ಸಹ ಕೊಡಲು ನಾವು ಈಗ ಶಕ್ತರಿಲ್ಲೆಂದು ತಿಳಿಸಲು ಪರಾಕಷ್ಟದ ದುಃಖವಾಗುತ್ತದೆ. ಮ್ಯಾನೇಜರ. ಪತ್ರವನ್ನು ಓದಿ, ತಮ್ಮ ಜೀವಿತ ಸರ್ವಸ್ವವೂ, ಇಂದು ಜಲ ಸಮಾಧಿಯನ್ನು ಹೊಂದಿತೆಂದು ಕಂಡು ಶ್ರೀನಿವಾಸರಾಯರ ತಲೆತಿರು ಗಿದಂತಾಗಿ ಎದೆಎದೆ ಬಡಕೊಂಡು ಒದರುತ್ತ ಕುಂರ್ಚಿಯ ಮೇಲಿಂದ ನಿಶ್ಚೇಷ್ಠಿತರಾಗಿ ದೊಪ್ಪನೆ ಕೆಳಗೆ ಬಿದ್ದರು, ಅವರ ಅಕ್ರೋಶವನ್ನು ಕೇಳಿ ಹತ್ತರದ ಕೋಣೆಯಲ್ಲಿಯೇ ಬರೆಯುತ್ತ ಕುಳಿತಿದ್ದ ಅಚ್ಚತರಾ ಯನು ಓಡಿಬಂದು ಇದೇನು ಗದ್ದಲವೆಂದು ನೋಡಿದನು. ಶ್ರೀನಿವಾಸ ರಾಯರ ನೆತ್ತಿಗೆ ವಿದ್ಯುಲ್ಲತೆಯಿಂದ ತಿರಗುವ ಬೀಸಣಿಕೆಯ ಭ್ರಮ-ನಿರಸನ. ೫೩ ( Electric fan) ಭಯಂಕ್ರ. ಆಫಘಾತವಾಗಿ ಅದರೊಳಗಿಂದ ಅತುಲ ರಕ್ತವು ಹರಿಯುತ್ತಿದ್ದದ್ದು ಆತನಿಗೆ ಕಾಣಿಸಿತು. ಕೂಡಲೇ ಸಿಪಾಯಿಯನ್ನು ಕರೆದು ವೈದ್ಯನಾದ ತನ್ನ ಒಬ್ಬ ಮಿತ್ರನ ಕಡೆಗೆ ಚೀಟಿಯನ್ನು ಬರೆದು ಕಳುಸಿದನು. ವೈದ್ಯರು ಕೂಡಲೇ ಬಂದರು. ಇಷ್ಟರಲ್ಲಿಆಚ್ಛುತಂರಾಯನು ಮೇಜಿನ ಮೇಲೆ ಬಿದ್ದಿದ್ದ ಸಂಘ ದವರ ಕಾಗದವನ್ನು ಓದುತ್ತಿದ್ದನು ವೈದ್ಯರು ಬಂದ ಮೇಲೆ ಅವರಿಗೆ ಸಂಘದ ಸುದ್ದಿಯನ್ನು ಹೇಳಿ ಅದಕ್ಕಾಗಿ ಅವರು ಎದೆಯೊಡ ಕೊಂಡಿರಬಹುದೆಂದು ಸೂಚಿಸಿದನು. ವೈದ್ಯರು ಗಾಯವನ್ನು ಕಟ್ಟಿ ಔಷದೋಪಚಾರಗಳನ್ನು ಮಾಡಿ ಸಿಪಾಯಿಯ ಸಹಾಯದಿಂದ ಮಂಚದ ಮೇಲೆ ಮಲಗಿಸಿದರು. ವೈದ್ಯರು ತುಸು ಹೊತ್ತು ಅಚ್ಚುತ ರಾಯನ ಸಂಗಡ ಮಾತನಾಡುತ್ತ ಕುಳಿತರು. " ಗಾಯವು ಬಹಳವಾ ಗಿರುವದು ಮೇಲಾಗಿ ಅಂತರ್ವೇದನೆ, ಇದರೊಳಗಿಂದ ಶ್ರೀನಿವಾಸ ರಾಯರು ಉಳಿಯುವದು ದುರ್ಲಭವೇ? ಎಂದು ಹೇಳಿದರು. ಅಚ್ಚುತ ರಾಯನಿಗೂ ಅದೇ ಬೇಕಾಗಿತ್ತು. ಇನ್ನು ನೀವೇ ಹೋಗಿ ಶ್ರೀನಿವಾಸ ರಾಯರನ್ನು ಅವರ ಮನೆಗೆ ಒಯ್ದು ಕುಟುಂಬದವರಿಗೆ ಎಲ್ಲವನ್ನು ಹೇಳಿ ಔಷದಕೊಟ್ಟಂತೆ ತೋರಿಸಿ ಬನ್ನಿರೆಂದು ಹೇಳಿದನು. ಮೊದಲು ವೈದ್ಯರು ಒಲ್ಲೆಂದು ಅನ್ನಹತ್ತಿದರು. ಕಡೆಗೆ ಅಚ್ಯುತರಾಯನು ೧೦೦ ರೂಪಾಯಿ ನೋಟನ್ನು ತೆಗೆದು ಅವರ ಕೈಯ್ಯಲ್ಲಿಟ್ಟು ಇನ್ನಾದರೂ ಹೋಗಿರೆಂದು ಹೇಳಿದನು. ತಾವು ಕೆಲಸ ಮಾಡಹತ್ತಿದಿಂದ ಇನ್ನುವರೆಗೆ ಇಷ್ಟು ರೂಪಾಯಿಗಳನ್ನು ತಮಗೆ ಯಾರೂ ಕೊಟ್ಟಿಲ್ಲವಾದ್ದರಿಂದ ಹಿಗ್ಗಿ ಲಗುಬಿಗೆಯಿಂದ ಗಾಡಿಯನ್ನು ತರಿಸಿ ಶ್ರೀನಿವಾಸರಾಯರನ್ನು ತಕ್ಕೊಂಡು ಮನೆಗೆ ಬಂದರು. ಎರಡು ಗಂಟೆಯ ಸುಮಾರಕ್ಕೆ ಸರ ಸ್ವತಿಯು ಪತ್ರವನ್ನು ಓದುತ್ತ ನಿಂತಿರಲು ಆಕೆಯು ತಂದೆಯನ್ನು ಹೇಗೆ ಅಕಸ್ಮಿಕವಾಗಿ ನೋಡಿದಳೆಂಬದೂ ಮನೋರವಮಾಬಾಯಿಯ ವರ ಸ್ಥಿತಿಯು ಹೇಗೆ ಆಯಿತೆಂಬದೂ ವಾಚಕರಿಗೆ ಈ ಮೊದಲೇ ೫೪ ಸಮಾಜರಹಸ್ಯ. ಹೇಳಿರುವೆವು. ಮುಂದೆ ವೈದ್ಯರು ಔಷಧವನ್ನು ಕೊಟ್ಟು ಶ್ರೀನಿವಾಸ ರಾಯರ ಮನಯನ್ನು ಬಟ್ಟವರೇ ಅಚ್ಛತರಾಯನ ಹತ್ತರ ಬಂದರು. ತನ್ನ ಪ್ರತಿಸ್ಪರ್ಧೆಯನ್ನು ಪೃಥ್ವಿಯ ಮೇಲೆ ಇರಗೊಡದಿರುವದಕ್ಕೆ ಇದು ಒಳ್ಳೇ ಸಮಯುವೆಂದು ತಿಳಿದು ಔಷಧದಲ್ಲಿ ವಿಷವನ್ನು ಕೂಡಿಸಿ ತೀವ್ರವೇ ಮರಣಕ್ಕೆ ಗುರಿಯಾಗುವ ಹಾಗೆ ಮಾಡಬೇಕೆಂದು ಅಚ್ಚತ ರಾಯನು ವೈದ್ಯರಿಗೆ ಹೇಳಿ ಮತ್ತೆ ೫೦೦ ರೂಪಾಯಿಗಳನ್ನು ಕೊಟ್ಟು ಅವರ ಮನೆಯಲ್ಲಿ ಯಾರು ಯಾರು ಇದ್ದರೆಂದು ಕೇಳಿಕೊಂಡು ವೈದ್ಯರಿಗೆ ಹೋಗಲು ಅಪ್ಪಣೆಯನ್ನಿತ್ತನು. ಮುಂದೆ ಆ ಔಷಧವು ಹೇಗೆ ಸರಸ್ವತಿಗೆ ಗೊತ್ತಾಯಿತೆಂಬದೂ, ವೈದ್ಯರು ಔಷದ ಕೊಟ್ಟು ಮನೆಗೆ ಹೋಗುತ್ತಿರಲು ಅವರ ಮುಖಚರ್ಯದಲ್ಲಿ ಆದ ವ್ಯತ್ಯಯವನ್ನು ನೋಡಿ ಸಂಶಯಪಟ್ಟ ಸರಸ್ವತಿಯು ಆ ಓಷಧವನ್ನು ಬೆಕ್ಕಿನ ಮೇಲೆ ಹೇಗೆ ಪ್ರಯೋಗಿಸಿ ನೋಡಿದಿಳೆಂಬದು ನಮಗ ಈ ಮೊದಲೇ ಗೊತ್ತಿ ರುವದು. ಇರಲಿ. ಇತ್ತ ಮಾಧವನು ಬಂದ ತುಸು ಹೊತ್ತಿನಲ್ಲಿಯೇ ಶ್ರೀನಿವಾಸರಾಯರಿಗೆ ಬಹಳೇ ಜ್ವರ ಬಂದು ತಲೆನೋವು ತಾಳಲಾರದೆ ಅವರು ಒದರಹತ್ತಿದರು. ಮಾಧವನು ತಾಯಿಯನ್ನು ಎಚ್ಚರಿಸಿ ತಂದೆಯ ಹತ್ತರ ಹೋಗಿ ಕುಳಿತು “ ಅಪ್ಪ ನಿಮಗೇವಾಗುವದು? " ಎಂದು ಕೇಳಿದನು, ಶ್ರೀನಿವಾಸರಾಯರು ತಾವು ಇನ್ನು ಈ ಅಂತ ರ್ವೇದಗಳೊಳಗಿಂದಲೂ, ತಲೆ ನೋವಿನೊಳಗಿಂದಲೂ ಜೀವದಿಂದ ಉಳಿಯುವದಿಲ್ಲೆಂದು ಕಂಡು ಆದ ಸುದ್ದಿಯನ್ನೆಲ್ಲ ತಮ್ಮ ಕುಟುಂಬಕ್ಕೆ ಹೇಳೆ ಎಲ್ಲರ ಕ್ಷಮೆಯನ್ನು ಬೇಡಿಕೊಂಡು, ಎಲ್ಲರಿಂದಲೂ ತಮ್ಮ ಕಡೆಯ ಅಪ್ಪಣೆಯನ್ನು ತೆಗೆದು ಕೊಳ್ಳಬೇಕೆಂದೂ ಮಾತಾಡಲಿಕ್ಕೆ ಯತ್ತಿಸಹತ್ತಿದರು. " ಇನ್ನು ಉಳಿದವರನ್ನೂದರೂ ಸುಖಿಯಾಗಿಡು” ಎಂದು ಪರಮೇಶ್ವರನಿಗೆ ಹೇಳುವದಕ್ಕೆ ತಮ್ಮ ಕೈಯ್ಯಗಳನ್ನು ಎತ್ತಿ ಊರ್ಧ್ವದೃಷ್ಟಿಯಿಂದ ಒಮ್ಮೆ ಆಕಾಶದ ಕಡಿಗೆ ನೋಡಿ ಇಹಲೋ ಕದ ಯಾತ್ರೆಯನ್ನು ಮುಗಿಸಬೇಕಂತಲೇ ಎಲ್ಲರನ್ನು ತಮ್ಮ ಹತ್ತರ ಭ್ರಮ-ನಿರಸನ ೫೫ ಕರೆದು ಅತಿ ಪ್ರಯಾಸದಿಂದ, ಮೇಲಿಂದ ಮೇಲೆ ಗಂಟಲವನ್ನಿರಿಸಿ ಕೊಳ್ಳುತ್ತ, ನಿಶ್ಚೇಷ್ಟಿತರಾಗುತ್ತ, ವ್ಯಾಪಾರ ಸಂಘವು ಮುಣುಗಿದ್ದ ರಿಂದ ಒಮ್ಮೆಲೆ ತಮ್ಮ ಎದೆಯೊಡೆದು ಭಾಸವು ತಪ್ಪಿ ಕುರ್ಚಿಯ ಮೇಲಿಂದ ಬಿದ್ದದಕ್ಕೆ ತಮಗೆ ಎಷ್ಟು ಪೆಟ್ಟು ಹತ್ತಿರುವದೆಂದು ಹೇಳಿ ತಾವು ಇನ್ನು ಬಹಳ ಹೊತ್ತು ಬದಕಲಾರವೆಂದೂ ಸಹ ಹೇಳಿದರು. ಅವರು ಅಂದದ್ದು “ ಮಾಧವಾ ನಿನ್ನ ವಿದ್ಯೆಯನ್ನು ಪೂರ್ಣಮಾಡು ವಷ್ಟು ನಾನು ಶಕ್ತನಾಗಲಿಲ್ಲ. ಅರ್ಧಹಾದಿಯಿಂದಲೇ ನಾನು ನನ್ನ ಕರ್ತವ್ಯದಿಂದ ಪರಾನ್ನುಖವಾಗುತ್ತೇನೆ.. ಇದಕ್ಕಾಗಿ ನನ್ನನ್ನು ಕ್ಷಮಿಸಿ, ಸಮಾಧಾನದಿಂದ ನನಗೆ ಪರಲೋಕಕ್ಕೆ ಹೋಗಗೊಡು. ನೀನು ಈ ವರ್ಷ ಬಿ.ಎ. ಪರೀಕ್ಷೆಗೆ ಕೂಡುವಿ. ಮುಂದೆ ಎಲ್ಲಿ ಯಾದರೂ ವಿಶ್ವಾಸದಿಂದ ಚಾಕರಿಮಾಡಿ ನಿನ್ನ ತಾಯಿಯನ್ನೂ ನಿನ್ನ ತಂಗಿಯನ್ನೂ ರಕ್ಷಿಸು." ಸರಸ್ವತಿಯೂ ಮನೋರಮಾ ಬಾಯಿಯವರೂ, ದೊಡ್ಡ ಧ್ವನಿಯಿಂದ ಎದೆ ಎದೆ ಬಡಕೊಂಡು ಅಳಹತ್ತಿದರು. ಶ್ರೀನಿವಾಸರಾಯರು ಸುಮ್ಮನಾಗಿರಿ; ಅಳಬೇಡಿ ರೆಂದು ಕೈಸೊನ್ನೆಯಿಂದ ಹೇಳಿ ಮುಂದೆ ಆಂದದ್ದು " ಸರಸ್ವತಿ- ವಿದ್ಯಾಧರನು ಇರುವನು, ನೀನು ಏನೂ ಚಿಂತಿಸಬೇಡ, ನಿನ್ನ ವಿಷ ಯಕ್ಕೆ ಆತನು ಎಲ್ಲ ವ್ಯವಸ್ಥೆಯನ್ನು ಮಾಡುವನು. " ಮಾಧವನ ತಿರುಗಿ " ಮಾದವಾ ಸಮಾಜ-ಸೇವೆಗೆ-ನಿನ್ನಿಂದಾದಷ್ಟು ಸಹಾ ಯಮಾಡು. ದೇವರು ಸಮಾಜರೂಪಿ-ಯಾಗಿ-ದ್ದಾನೆಂಬದನ್ನು ಮರೆಯ ಬೇಡ, ಸಮಾಜಸೇವೆಯೇ ದೇವರ ಸೇವೆಯು; ಸವಾಜಸೇವೆಯೇ ಮಾತಾ-ಪಿತೃ ಸೇವೆಯು, " ಶ್ರೀನಿವಾಸರಾಯರಿಗೆ ಬಹಳ ವೇದನೆ ಗಳಾಗಹತ್ತಿ ಚಡಪಡಿಸಹತ್ತಿದರು. ಸರಸ್ವತಿಯು ಖಿನ್ನಮುಖಯಾಗಿ ಅಳುತ್ತಲೇ ಎದ್ದು ತಂದೆಯವರ ಕಾಲುಗಳನ್ನು ಒತ್ತಹತ್ತಿದಳು; ಮಾಧವನು ತುಸು ಹಾಲು ಹಾಕಹತ್ತಿದನು, ಮನೋರಮಾಬಾಯಿ ಯವರು ಪತಿಯ ತಲೆಗಿಂಬಿನ ಹತ್ತರ ಗಾಯವನ್ನು ನೋಡುತ್ತ ೫೬ ಸಮಾಜರಹಸ್ಯ, ಕಣ್ಣೀರಿನಿಂದ ಗಾಯವನ್ನು ತೊಳೆಯಹತ್ತಿದ್ದರು; ತುಸು ಸಮಾಧಾನ ವೆನಿಸಿದ ಮೇಲೆ ಶ್ರೀನಿವಾಸರಾಯರು;--" ಮಾಧವಾ ಇನ್ನು ನಾನು ನಿಮಿಷಾರ್ಧ-ನಿಮಿಷದವನು; ನಾನು ಇನ್ನು ಬದಕುವದಿಲ್ಲ; ಈ ವೇದನೆಗಳನ್ನು ನಾನು ಇನ್ನು ಸಹಿಸಲಾರೆನು, ನಾನು ಹೇಳಿದ್ದನ್ನು ಮರೆಯಬೇಡ ನೆನಪಿನಲ್ಲಿಟ್ಟುಕೊಂಡು ನನ್ನ ಆಜ್ಞೆಯನ್ನು ಪಾಲಿಸಿ, ನಿನ್ನ ತಾಯಿಗೆ ಸುಖವನ್ನಿತ್ತು, ದೇಶಸೇವೆಯನ್ನು ಮಾಡಿ, ನಿನ್ನ ಮಾ ತೃಭೂಮಿ ಋಣದೊಳಗಿಂದ ಮುತ್ತನಾಗು, ನಾನು ಮಾತ್ರ ಹುಟ್ಟಿ ವ್ಯರ್ಧವಾಯಿತು, ಸಮಾಜಕ್ಕೂ, ದೇಶಕ್ಕೂ ನನ್ನಿಂದ ಎಳ್ಳುಷ್ಟಾ ದರೂ ಸಹಾಯವಾಗಲಿಲ್ಲ, ಆದ್ದರಿಂದ ನಾನು ಮಾಡಬೇಕಾಗಿದ್ದ ಭಾಗವನ್ನೂ ನಿನ್ನ ಭಾಗವನ್ನೂ ನೀನೇ ಮಾಡಿ ಇಬ್ಬರನ್ನು ಆ ಋಣ ದಿಂದ ಮುಕ್ತರನ್ನಾಗಿ ಮಾಡು, ಓಮ್ಮೆಲೇ-ನನ್ನ ಹಣವೆಲ್ಲ-ಹೀಗೆ-ಜಲ ಸಮಾಧಿಯನ್ನು-ಹೊಂದಿದ ಮೇಲೆ ಇನ್ನು ನನ್ನ ಮಕ್ಕಳ ಗತಿಯೇ ನೆಂದು-ನನಗೆ-ಬಹಳೇ-ತಲೆ ತಿರುಗಿ-ಬಿದ್ದು ಪೆಟ್ಟು ಹಚ್ಚಿಕೊಂಡು ಈ ಅವಸ್ಥೆಯಿಂದ ಮರಣಹೊಂದುವೆನು, ದೇವರ ಇಚ್ಛೆಯು !!" ತುಸು ಹೊತ್ತು ಎಲ್ಲ ಕಡೆಗೆ ನೋಡಿ ಮತ್ತೆ ಮಾತಾಡಹತ್ತಿದರು. " ಈ ನನ್ನ ಪ್ರಿಯ ಸರಸ್ವತಿಯ ವಿವಾಹವನ್ನೂ ನಾನು ಮಾಡಲಿಲ್ಲ, ಅದನ್ನೂ ನಿನ್ನ ಮೇಲೆಯೇ ಬಿಟ್ಟಿದ್ದೇನೆ, ಆಕೆಗೆ ಪತಿಯನ್ನು ತೋರಿಸಿ ಆಕೆಯ ಇಚ್ಛೆಯಿಂದಲೂ ನಿನ್ನ ತಾಯಿಯ ಇಚ್ಛೆಯಿಂದಲೂ ಸರಿದೋರುವಂಥ ಗಂಡನನ್ನು ಹುಡುಕು, " ಸರಸ್ವತಿಯ ಕಡೆಗೆ ನೋಡಿ “ ಸರಸ್ವತೀ, ಅತಿಶ್ರಮ-ಪಟ್ಟು ನಾನು ಇಲ್ಲಿಯ ವರೆಗೆ ನಿನ್ನನ್ನು ಜೋಕೆಮಾಡಿ ವಿದಯೆ ಕಲಿಸಿದ್ದೇನೆ, ವಿವಾಹವಾದ ಮೇಲೆ ಪತಿಯ ಸಂಗಡ ಚನ್ನಾಗಿ ನಡೆದು ಅತನ ಕಾರ್ಯದಲ್ಲಿ ಯಾವಾಗಲೂ ಸಹಾಯಮಾಡಿ, ಸಮಾಜ ಕಾರ್ಯವನ್ನು ಮಾಡಿ ನಿನ್ನ ಭಗಿನಿಯರನ್ನು ಉದ್ಧರಿಸಿ ನಿನ್ನ ಜೀವಿ ತ್ವವನ್ನು ಧನ್ಯವಾಗಿ ಮಾಡಿಕೋ; ಇಷ್ಟೆ ನನ್ನ ಹೇಳುವಿಕೆಯು; ಇದೇ ನನ್ನ ಆಜ್ಞೆಯು.'' ಹೆಂಡತಿಯ ಕಡೆಗೆ ತಿರುವಿ “ ಪ್ರಿಯಳೇ, ಭ್ರಮನಿರಸನ, ೫೭ ನಿನ್ನ್ನ ಜೀವಕ್ಕಿಂತಲೂ-hಎಚ್ಚಿಗೆ-ನನ್ನನ್ನು ಪ್ರೀತಿಸಿ-ಇಷ್ಟು-ದಿವಸದ ವರೆಗೆ. ಸತ್ಶೀಲಳಾಗಿ-ನನ್ನ ಸೇವೆಯಲ್ಲಿ-ತತ್ಪರಳಾಗಿ-ನನ್ನ ಕಾರ್ಯದಲ್ಲಿ ಯಾವಾಗಲೂ-ಸಹಾಯಕಳಾಗಿದ್ದಿ; ಅದರ ಪ್ರತ್ಯು-ಪಕಾರವನ್ನು- ಮಾಡದೆ, ನಿನಗೆ ಎಳ್ಳಷ್ಟು-ಸುಖೋಪಭೋಗವನ್ನು ಕೊಡದೆ ಇಂದು ನಿನ್ನನ್ನು ಹೀಗೆಯೇ ಬಿಟ್ಟು ಹೊರಟೆನು, ಅದಕ್ಕಾಗಿ ನೀನೂ ನನ್ನ ಮೇಲೆ ಸಿಟ್ಟಿಗೇಳಬೇಡ, ಇನ್ನು ನೀನಾದರೂ ಈಶಚಿಂತನೆಯಲ್ಲಿ ಕಾಲುಕಳೆದು ನಿನ್ನಿಂದಾದಷ್ಟು ಸಮಾಜಕ್ಕೆ ಸಹಾಯವನ್ನು ಮಾಡು, ಸಣ್ಣ ಹುಡುಗಿಯರನ್ನು ಕೂಡಿಸಿ ವಿದ್ಯೆ ಗೃಹಕೃತ್ಯ ಮುಂತಾದದ್ದನ್ನು ಕಲಿಸಿ ಅವರಿಗೆ ಎಲ್ಲತರಹದ ಉಪಕಾರವನ್ನು ಮಾಡುತ್ತ ಹೋಗು; ಸವಾಜಸೇವೆಯೇ ನನ್ನ ಸೇವೆಯು, ಇನ್ನು ಹೆಚ್ಚಿಗೇನು ಹೇಳಲಿ; ನೀವೆಲ್ಲರೂ ಸುಖಿಯಾಗಿ ಬಾಳಿರಿ, ನಾನು ಇನ್ನು ಹೋಗಿಬರುತ್ತೇನೆ" ಎಂದು ಕೇಳಿ ಸುಮ್ಮನಾದರು ಆವರ ವೇದನೆಗಳು ಬಹಳೇ ಹೆಚ್ಚಿ ದವು; ಮಾಧವನು ವೈದ್ಯನನ್ನು ಕರೆತರುವೆನೆಂದು. ಹೇಳಿ ಹೋಗ ಹತ್ತಿದನು. ಶ್ರೀನಿವಾಸರಾಯರು ಕೈಸೊನ್ನೆಯಿಂದ “ ಬೇಡ-ಇನ್ನು- ಆ-ತ-ನಲ್ಲಿ-ನನ್ನ-ಉಳಿಸು-ವ ಶಕ್ತಿಯಿಲ್ಲೆ”ಂದು ಹೇಳಿ ತನ್ನ ಹತ್ತರವೇ ಎಲ್ಲರಿಗೂ ಕುಳ್ಳಿರಲು ಹೇಳಿದರು, ಮಾಧವನು ಉಪಾಯಗಾಣದೆ ಹತ್ತರ ಅಳುತ್ತ ಕುಳಿತನು. “ ಬಾಳಾ-ಮಾಧವಾ-ಅಳಬೇಡ, ಸರ- ಸ್ವ-ತಿ ಅಳಬೇಡ, ಪ್ರಿಯಳೇ-ಅಳಬೇಡ ನಾನು ಇನ್ನು-ಸುಖರೂಪದಿಂದ ಹೋಗುತ್ತೇನೆ. ನೀವು ಸು-ಖಿ-ಯಾಗಿ....? ಎಂದು ಹೇಳುತ್ತಿರಲು ಶ್ರೀನಿವಾಸರಾಯರ ಪ್ರಾಣೋತ್ಕ್ರಮಣವಾಯಿತು, ಸಹಸ್ರಕರನು ತನ್ನ ಎಲ ಕೈಗಳನ್ನು ಚಾಚಿ ಶ್ರೀನಿವಾಸರಾಯರ ಪ್ರಾಣಜ್ಯೋತಿ ಯನ್ನು ತನ್ನ ಜ್ಯೋತಿಯಲ್ಲಿ ಕೂಡಿಸಿಕೊಂಡು ಆನಂದದಿಂದ ರಥ ವನ್ನು ಹೊಡೆಯುತ್ತ ಸ್ವರ್ಗಾಭಿಮುಖಿಯಾಗಿ ಶ್ರೀನಿವಾಸರಾಯರ ಅತ್ಮವನ್ನು ಮೇಲಿಂದ ಮೇಲೆ ಮುದ್ದಿಸುತ್ತ ನಡೆದನು. ======== ೫೮ ಸಮಾಜರಹಸ್ಯ, ಏಳನೇ ಪರಿಚ್ಛೇದ. ತದನಂತರ! (ಈ ಜಗತ್ತಿನಲ್ಲಿ ಕೆಲವು ವೇಳೆ ದುರ್ಜನರ ಉತ್ಕರ್ಷೆಯೂ ಆಗುವದು, ಆದರೆ ಸಜ್ಜನರು ದುರ್ಜನರು ತರುವ ವಿಘ್ನ ಗಳಿಗೆ ಅಂಜದೆ, ತನ್ನ ಸದಾಚಾರವನ್ನು ಬಿಡದೆ, ತಮ್ಮ ಕರ್ತವ್ಯವನ್ನು ಮಾಡುತ್ತಲೇ ಇರುವರು; ಕಗ್ಗತ್ತಲೆ ಯನ್ನು ನೂಕುವ ಭಾಸ್ಕರನು ನಭೋಮಂಡಲದಲ್ಲಿ ಮೆರೆಯುವನು; ಸಜ್ಜನರಿಗೆ ನಿಜವಾದ ಸುಖವೂ ಆನಂದವೂ ದೊರಕುವದು. ನಮ್ಮ ಅಚ್ಯುತರಾಯನು ತನ್ನ ಕಂಟಕವು ಇಂದು ಅನಾಯಾಸವಾಗಿ ದೂರಾ ಯಿತೆಂದು ತಿಳಿದು ಹಿಗ್ಗಿದನು. ಆದರೆ ತುಸು ದಿವಸಗಳಲ್ಲಿಯೇ ತನ್ನ ವೈದ್ಯನು ಶ್ರೀನಿವಾಸರಾಯರ ಮರಣಕ್ಕೆ, ಅಪ್ರತ್ಯಕ್ಷವಾಗಿ ಕಾರ ಣೀಭೂತನಾಗಿರುವನೆಂದು ನಿರ್ಣಯಿಸಲ್ಪಟ್ಟು ಬಂದಿವಾಸವನ್ನನು ಭವಿಸಲು ಒಯ್ಯಲ್ಪಟ್ಟನೆಂದು ಕೇಳಿ ಅಚ್ಯುತರಾಯನಿಗೆ ವಜ್ರಾಘಾತ ವಾದಂತಾಯಿತು, ಒಂದು ದಿವಸ ಅತ್ಯುತರಾಯನು ಹತ್ತು ಗಂಟೆಗೆ ಊಟಮಾಡಿ ವೀಳ್ಯವನ್ನು ತಿನ್ನುತ್ತ ಕುಳಿತಿರಲು ವರ್ತಮಾನಪತ್ರವು ಅದೇ ಟಪಾಲಿಗೆ ಬಂದಿತು, ಪತ್ರವನ್ನು ಕೈಯ್ಯಲ್ಲಿ ತೆಗೆದುಕೊಂಡು ಓದಹತ್ತಿದನು. ಬರಬರುತ್ತ ' ಎಡಿಟರರು ' ತಮ್ಮ ಸ್ಪುಟಲೇಖಗಳಲ್ಲಿ ಕೆಳಗೆ ಕೊಟ್ಟಂತೆ ತಮ್ಮ ಅಭಿಪ್ರಾಯವನ್ನು ಪ್ರಕಟಿಸಿದ್ದರು. " ಟಾಟಾ ಮತ್ತು ಕಂಪನಿಯಲ್ಲಿ ವಿಶ್ವಾಸುತನದಿಂದ ಕೆಲಸು ಮಾಡಿ ಅವರ ಪೂರ್ಣ ಪ್ರೇಮಕ್ಕೆ ಪಾತ್ರರಾಗಿದ್ದ ಮಹಾಶಯರಾದ ಶ್ರೀನಿವಾಸರಾವ, ಎಲ್, ಸೀ, ಈ. ಇವರು ಮೃತರಾದರೆಂದು ತಿಳಿ ಸಲು ನನಗೆ ಅತ್ಯಂತ ವಿಷಾದವೆನಿಸುತ್ತದೆ. ' ವ್ಯಾಪಾರಿ ಸಂಘ 'ವು ಮುಳುಗಿದ್ದರಿಂದ ಎದೆಯೊಡಕೊಂಡು ಸತ್ಯವೆಂದು ಹೇಳುವರು. ತದನಂತರ! ೫೯ ಆದರೂ ನಮಗೆ ಅದೇನು ಸರಿಯಾಗಿ ತೋರುವದಿಲ್ಲೆಂದು ನಿನ್ನಿನ ಸಂಚಿಕೆಯಲ್ಲಿ ಬರೆದಿದ್ದೆವು ಅದರಂತೆ ತಮ್ಮ ಕಾರ್ಯನಿಪುಣರಾದ ಇಲ್ಲಿಯ ಪೋಲಿಸ ' ಸುಪರಿಂಟೆಂಡೆಂಟ'ರು ಶ್ರೀನಿವಾಸರಾಯರ ಮನೆಗೆ ಸ್ವತಃ ಹೋಗಿ ಕುಟುಂಬದವರನ್ನು ಕೇಳಲಾಗಿ ವೈದ್ಯರು ಬಾಟಲಿ ಯಲ್ಲಿ ವಿಷಹಾಕಿ ಕೊಟ್ಟಿದ್ದರೆಂದೂ ಗಾಯವನ್ನು ಉಪಚರಿಸದೆ ಬಿಟ್ಟ ರೆಂದೂ, ಅವರಿಗೆ ತಿಳಿದು ಆ ವೈದ್ಯರನ್ನು ಇಂದು ಬಂದಿವಾಸಕ್ಕೆ ಕಳಿಸಿರುವರು, ವೈದ್ಯರ ಈ ಕೆಲಸದಲ್ಲಿರದೆ ಅವರ ಮಿತ್ರಮುಖ ಶತ್ರುರಾರೋ ಶ್ರೀನಿವಾಸರಾಯರಲ್ಲಿ ಮತ್ಸರತಾಳಿ ಹೀಗೆ ಮಾಡಿಸಿರುವ ರೆಂದು ತಿಳಿದು ಅದರ ವಿಷಯಕ್ಕೆ ವಿಚಾರಣೆಯು ನಡೆದದೆ, ಸರಕಾರದವರ, ಸಮಾಜಕಂಟಕರನ್ನು ನಾಶಿಸದೆ ಬಿಡಬಾರದು ” ಲೇಖವನ್ನು ಓದಿ ಅಚ್ಯುತರಾಯರು ಬಹಳ ಗಾಬರಿಯಾದರು ಇನ್ನು ವೈದ್ಯರು ತನ್ನ ಹೆಸರನ್ನು ಹೇಳಿ ತನಗೂ ಬಂದಿವಾಸವನ್ನೂ, ಬಹುಶಃ “ ಕರೇನೀರಿನ ” ನಡುಗಡ್ಡೆಯಲ್ಲಿ ಇರುವ ಶಿಕ್ಷೆಯನ್ನು ದೊರಕಿಸಿಕೊಡಬಹುದೆಂದು ಹೆದರಿ ಅಚ್ಯುತರಾಯರು ವಿಷಪ್ರಾಶನ ಮಾಡಿ ಅಂದೇ ಸಂಜೆಯಾಗುವದರೊಳಗಾಗಿ ಇಹಲೋಕವನ್ನು ಬಿಟ್ಟನು. ಪಾಪ! ಅಚ್ಯುತರಾಯನು ತನಗೆ ಶಿಕ್ಷೆಯನ್ನು ತಾನೇ ಮಾಡಿಕೊಂಡನು ! ! * * * * ಶ್ರೀನಿವಾಸರಾಯರ ನಿಧನದ ನಂತರ ವಿದ್ಯಾಧರನೂ, ವಿಮ ಲೆಯೂ, ಮಾಧವನ ಪತ್ರದಂತೆ ಮುಂಭಾಪುರಿಗೆ ಬಂದರು. ಅವ ರಿಗೂ ಬಹಳ ದುಃಖವಾಯಿತು. ಹಿರಿಯರು ಬೇಕಾದ ಹಾಗೆ ತಮ್ಮ ವಿದ್ಯಾರ್ಜನೆಗೆ ಎಲ್ಲ ಸಾಧನಗಳನ್ನು ಪೂರೈಸುತ್ತಿರಲು ತಾವು ಹೇಗೆ ಯಾವಾಗಲೂ ವಿದ್ಯೆಯ ಚಿಂತೆಯಲ್ಲಿಯೇ ರಮಿಸುತ್ತಿದ್ದೆವೆಂಬುದು ಅವರಿಗೆ ನೆನಪಾಗಿ ಈ ಸಂಸಾರಯಾತ್ರೆಯು ಕರಿಣವಾಗಿ ತೋರಹ ತ್ತಿತು. ಮಾಧವನು ಅಧೈರ್ಯಗೊಳ್ಳದೆ ಯಥಾಸಾಂಗವಾಗಿ ಎಲ್ಲ ೬೦ ಸಮಾಜ ರಹಸ್ಯ ಕರ್ಮಗಳನ್ನು ತೀರಿಸಿದನು. ತಂದೆಯ ಕೊನೆ ಆಜ್ಞೆಯು ಇನ್ನು ಆತನ ಕಿವಿಯಲ್ಲಿ ಗುಣಗುಟ್ಟುತ್ತಿತ್ತು, ತಾಯಿತಂಗಿಯರನ್ನು ಸಮಾ ಧಾನಗೊಳಿಸಿ ಮುಂದಿನ ಕಾರ್ಯಕ್ಕೆ ತೊಡಗಿದನು; ವೈದ್ಯರ ದುಃಸ್ಥಿ ತಿಯ ವಿಷಯಕ್ಕೆ, ಆತನು ಕನಿಕರಪಟ್ಟನು ! ಆದರೂ ದೇಶಕಟ್ಟಳೆ ಗಳು ಆತನನ್ನು ಬಂಧಮುಕ್ತಮಾಡಲಿಲ್ಲ! ಅವರವರ ಕರ್ಮಫಲ ವನ್ನನುಭವಿಸಲಿಕ್ಕೆ ಬಿಟ್ಟು ಬಿಟ್ಟನು. ಮಾಧವನೂ ವಿದ್ಯಾಧರನೂ ಮತ್ತೆ ಎಡೂರಕ್ಕೆ ಹೋಗಿ ದಿವಾಕರಪಂತರ ಹಾಗೂ ತನ್ನ ಸ್ವಂತ ಹೊಲಮನೆಯನ್ನು ವ್ಯವಸ್ಥೆಗೊಳಿಸಿದರು. ವಿದ್ಯಾಧರನ ಜುಲುಮೆ ಯಿಂದ ಎಲ್ಲರೂ ಆತನು ಪುಣ್ಯಪುರದಲ್ಲಿ ಮಾಡಿದ ಮನೆಯಲ್ಲಿಯೇ ಇರಹತ್ತಿದರು ಸರಸ್ವತಿಯ, ವಿಮಲೆಯ ಮನೋರಮಾಬಾಯಿ ಯವರೂ ಒಬ್ಬರ ಸಹವಾಸದಲ್ಲಿ ಮತ್ತೊಬ್ಬರು ಆನಂದಪಡಹತ್ತಿದ ರು. ಕಾಲಚಕ್ರವು ವಿಚಿತ್ರವಾದದ್ದು ಈ ಕುಟುಂಬಕ್ಕೆ ಸಂಕಟವನ್ನು ತಂದಿದ್ದ ಕಾಲವೇ ಶ್ರೀನಿವಾಸರಾಯರ ಮರಣದಿಂದುಂಟಾದ ದುಃಖ ವನ್ನು चक्रनेमिक्रमेण ಕಡಿಮೆ ಮಾಡಹತ್ತಿತು. ವಿಮಲೆ ಸರಸ್ವತಿ ಯರ ಸಹವಾಸದಲ್ಲಿ ಮನೋರಮಾಬಾಯಿಯವರು ಹೇಗಾದರೂ ಮಾಡಿ ಮನರಂಜನೆಯನ್ನು ಮಾಡಿಕೊಳ್ಳಹತ್ತಿದರು. ಸರಸ್ವತಿಯು ವಿದ್ಯಾಧರನನ್ನು ಹೆಚ್ಚು ಹೆಚ್ಚಿಗೆ ಪ್ರೀತಿಸಹತ್ತಿದ್ದಳು, ಒಬ್ಬರ ಪರಿಚ ಯವು ಮತ್ತೊಬ್ಬರಿಗೆ ಈಗ ಪೂರ್ಣವಾಗಿ ಆಗಿದ್ದರಿಂದ ಒಮ್ಮೊಮ್ಮೆ ವಿಮಲಾ ಮಾಧವರ ' ಪ್ರೇಮ ' ವಾದರೂ ದೃಷ್ಟಿಗೆ ಬೀಳು ತ್ತಿತ್ತು. ಮಾಧವನು ಮಾತ್ರ ಆಕೆಯನ್ನು ಭಗಿನಿ ಪ್ರೇಮದಿಂದಲೇ ನೋಡುತ್ತಿದ್ದನು. ಸರಸ್ವತಿಯಲ್ಲಿ ದೃಢವಾಗಿದ್ದ ವಿದ್ಯಾಧರನ ಪ್ರೇಮ ವನ್ನು ಕಂಡು ಮಾಧವನಿಗೂ, ಮನೋರಮಾಬಾಯಿಯವರಿಗೂ ಆನಂದವಾಯಿತು. ಮಾಧವನೂ, ವಿದ್ಯಾಧರನೂ ಮನಮುಟ್ಟ ಅಭ್ಯಾಸಿಸಿ ಅದೇ ವರ್ಷ ಬಿ. ಏ. ಪರೀಕ್ಷೆಯಲ್ಲಿ ಇಬ್ಬರೂ ಉತ್ತೀರ್ಣರಾದರು. ವಿಮಲೆ ತದನಂತರ! ೬೧ ಸರಸ್ವತಿಯರು ಒಬ್ಬರನ್ನೊಬ್ಬರನ್ನು ಅಕ್ಕತಂಗಿಯರಂತೆ ಪ್ರೀತಿಸಿ ತಮಗೆ ಬರುವ ಜ್ಞಾನವನ್ನು ಇನ್ನೊಬ್ಬರಿಗೆ ಕಲಿಸಿ ಆನಂದದಿಂದ ಇರಹತ್ತಿದರು, ಪರೀಕ್ಷೆ ಸುದ್ದಿಯ ಆನಂದದಲ್ಲಿ ಮಾತಾಡುತ್ತ ಒಂದು ದಿವಸ ಕೌಮುದಿಯ ಬೆಳಕಿನಲ್ಲಿ ಮಾಧವನೂ ವಿದ್ಯಾಧರನೂ ಕುಳಿತಿ ದ್ದರು. ಬರಬರುತ್ತ ವಿವಾಹದ ಸುದ್ದಿಯು ಹೊರಡಿತು. ಮಾಧ-ವಿದ್ಯಾಧರಾ, ಸರಸ್ವತಿಯ ವಿವಾಹವನ್ನಂತೂ ಇನ್ನು ಮಾಡಲೇ ಬೇಕು. ಆಕೆಯು ನಿನ್ನನ್ನು ಪ್ರೀತಿಸುವಳು; ನೀನು ಆಕೆ ಯನ್ನು ಪ್ರೀತಿಸುವಿ, ಆಕೆಯು ಸಮಾಜಸೇವೆಯ ಕಾರ್ಯದಲ್ಲಿ ನಿನಗೆ ಬೇಕಾದ ಹಾಗೆ ಸಹಾಯಮಾಡಬಹುದು, ತಂದೆಯವರು ಮರಣ ಕಾಲಕ್ಕೆ ಹೇಳಿದ್ದನ್ನೂ ನಾನು ಈ ಮೊದಲೇ ನಿನಗೆ ತಿಳಿಸಿರುವೆನು; ನನ್ನ ಕಾರ್ಯವಾದರೂ ಸಮಾಜಸೇವೆಯೇ, ಇಬ್ಬರೂ ಕೂಡಿ ಅದೇ ಕೆಲಸವನ್ನು ಜರುಗಿಸಲು ಯತ್ನಿಸುವಾ. ಇನ್ನು ವಿವಾಹದ ವಿಷಯಕ್ಕಂತೂ ನಿನಗೇನು ಹೆಚ್ಚಿಗೆ ಹೇಳುವ ಕಾರಣವಿಲ್ಲ; ಹೇಳು ನಿನ್ನ ಮನಸ್ಸಿಗೆ ಸರಸ್ವತಿಯು ಬರುವಳೋ ಇಲ್ಲವೋ ? ವಿದ್ಯಾಧರನೇನು ಮಾತಾಡುತ್ತಾನೆ ? ನಾಚಿ ತಲೆ ಬೊಗ್ಗಿಸಿ ಸಮ್ಮತಿಯನ್ನೀಯಿದನು. ವಿದ್ಯಾ-ಮಾಧವಾ, ಸರಸ್ವತಿಯಂಧ ಸುಗುಣಮಂಡಿತಳನ್ನು ಮದುವೆ ಮಾಡಿಕೊಳ್ಳಲಿಕ್ಕೆ ಯಾರು ಒಪ್ಪಲಿಕ್ಕಿಲ್ಲ !! ನೀನು ಹಿಂದಕ್ಕೆ ಒಮ್ಮೆ ವಿವಾಹದ ವ್ಯಾಖ್ಯಾನವನ್ನು ಹೇಳಿದ್ದು ನೆನಪಾಗುವದೇನು ? ಮಾಧ-ಹೌದು, ನೆನಪುಂಟು. ಆ ತರದ ಪ್ರೇಮವು ನಿಮ್ಮಲ್ಲಿ ಈಗ ಹುಟ್ಟಿರುವದು; ಸರಸ್ವತಿಯು ನಾನು ವರ್ಣಿಸಿದಂತೆ ಯೋಗ್ಯ ಸತಿಧರ್ಮವನ್ನು ಆಚರಿಸಿ ನಿನ್ನ ಕಾರ್ಯದಲ್ಲಿ ಸಹಾಯಕಳಾಗುವ ಳೆಂದು ನನಗೆ ಪೂರ್ಣ ವಿಶ್ವಾಸವುಂಟು. ಆದ್ದರಿಂದಲೇ ನಾನು ನಿನಗೆ ಸರಸ್ವತಿಯನ್ನು ವಿವಾಹ-ವಿಧಿಯಿಂದ ಪ್ರತಿ-ಗೃಹಿಸಲು ಹೇಳಿದೆನು. ೬೨ ಸಮಾಜರಹಸ್ಯ. ವಿದ್ಯಾ- ವಿದ್ಯಾಧರನು ಆನಂದದಿಂದ ತಲೆ ಅಲ್ಲಾಡಿಸಿ ಏನೋ ನೆನಪು ಮಾಡಿಕೊಂಡು ಮಾಧವಾ, ' ಸಮಾಜಹಿತಕ್ಕಾಗಿ ಯತ್ನಿಸು ' ಎಂದು ನಿನ್ನ ತಂದೆಯವರು ಹೇಳಿದರೆಂದು ಯಾವಾಗಲೂ ಅನ್ನುವಿ. ಒಂದು ಸಮಾಜಹಿತಕಾರ್ಯವನ್ನು ಮಾಡುವಿಯಾ ? ಮಾಧ-ಅಗತ್ಯವಾಗಿ, ಮಾಡಲೇ ಬೇಕು. ಪಿತ್ರಾಜ್ಞೆಯನ್ನು ಮನ್ನಿಸಲೇ ಬೇಕು, ಮೇಲಾಗಿ ಸಮಾಜಸೇವೆಯೇ ಪಿತೃಸೇವೆಯು. ಅಂದಮೇಲೆ ಪಿತೃಸೇವಾಪರಾಙ್ಮುಖರಾಗುವ ಬಗೆ ಹೇಗೆ ? ವಿದ್ಯಾ-ಹಾಗಾದರೆ ಈ ಜಗತ್ತಿನಲ್ಲಿ ಎರಡನೆಯವರು ಯಾ ರೂ ಸಹಾಯಕರಿಲ್ಲದಂಧ ಸುಂದರಿಯ ಸದ್ಗುಣಿಯೂ ನಿನ್ನ ಸರ ಸ್ವತಿಯಂತೆ ಸುಸಂಸ್ಕೃತಳ ಆಗಿದ್ದ ಬಾಲಿಕೆಯನ್ನು ನೀನು ವಿವಾಹ ಮಾಡಿಕೊಳ್ಳುವಿಯಾ ? ನೋಡು, ಸಮಾಜಸೇವೆಗಾಗಿ, ತಂದೆಯ ಆಜ್ಞಾಪಾಲನಮಾಡಿದ ಪುಣ್ಯವು ನಿನಗೆ ಲಭಿಸುವದು. - ಮಾಧವನು ಗಾಬರಿಯಾಗಿ ಗೊಂದಲದಲ್ಲಿ ಬಿದ್ದಂತೆ ತೋರಿದನು. ವಿದ್ಯಾ ಹಾಗಾದರೆ ಅನಾಥಳಾದ ನನ್ನ ವಿಮಲೆಯನ್ನು ಮದುವೆ ಯಾಗು. ನೋಡು, ಇದೇ ಈಗ ಅಂದದ್ದನ್ನು ಮರೆಯಬೇಡ, ವಿಮ ಲೆಯು ಸರ್ವಗುಣಸಂಪನ್ನಳಿರುವಳು. ಅನಾಥಳಾಗಿ ನಿನ್ನ ಹೊರ್ತು ಜಗತ್ತಿಗೆ ತಿಲಾಂಜಲಿಯನ್ನು ಸಮರ್ಪಿಸಲು ಸಿದ್ಧಳಿರುವಳು. ನೀನು ಆಕೆಯನ್ನು ವರಿಸದಿದ್ದರೆ ಆಕೆಯು ವ್ಯಾಕುಲಚಿತ್ತಳಾಗಿ ತನ್ನ ಜೀವಕ್ಕೆ ಎರವಾಗಬಹುದು, ಅನಾಥ ಬಾಲಿಕೆಯ ಜೀವವನ್ನು ಉಳಿಸಿದಂಥ ಉಚ್ಚತಮ-ಸಮಾಜಸೇವೆಯ ಪುಣ್ಯವನ್ನು ಕಟ್ಟಿಕೊಳ್ಳುವದಿಲ್ಲವೇ? ನೀನು ಆಕೆಯನ್ನು ಇಂದಿನವರೆಗೆ ಈ ಪ್ರೇಮದಿಂದ ಎಂದೂ ನೋಡ ದಿದ್ದದ್ದು ನಿಜವು; ಆದರೆ ಆಕೆಯ ಗುಣಗಳನ್ನು ನೀನು ದಿನಾಲು ವರ್ಣಿಸುತ್ತಿರುವಿ. ಆದ್ದರಿಂದ ಮಿತ್ರನ ಇದೊಂದು ಬಿನ್ನಣವನ್ನು ಮನ್ನಿಸಿ ಅನಾಥ ಬಾಲಿಕೆಯ ಜೀವವನ್ನು ಉಳಿಸು. ತದನಂತರ ! ೬೩ ಮಾಧವನು ಗೂಢವಿಚಾರಕೊಳಗಾದನು. “ ವಿಮಲೆಯಲ್ಲಿ ಎಲ್ಲ ಗುಣಗಳಿರುವದು ನಿಜವೂ ಆಕೆಯಿಂದ ನನಗೆ ಸುಖವಾಗಿ ಸಮಾ ಜಸೇವೆಯ ಕಾರ್ಯದಲ್ಲಿಯೂ ಸಹಾಯವಾಗಬಹುದು. ಆಕೆಯ ಪಾಣಿಗೃಹಣವನ್ನು ಮಾಡದಿದ್ದರೆ ಜೀವಕ್ಕೆ ಎರವಾಗುವಳ೦ತೆ !! ಛೇ! ನಾನು ಸಮಾಜಕಂಟಕನು !! ಛೇ, ಎಂದಿಗೂ ಆಗಲಾರೆನು. ತಂದೆಯವರು ಸಮಾಜಹಿತದ ಕಾರ್ಯವನ್ನು ಮಾಡಿದರೆ ತಮ್ಮ ಸೇವೆಯನ್ನು ಮಾಡಿದ ಹಾಗಾಗುವದೆಂದೂ, ತಮ್ಮ ಎಲ್ಲ ಮನೋ ರಥಗಳನ್ನು ಪೂರ್ಣ ಮಾಡಿದಂತಾಗುವದೆಂದೂ ಹೇಳಿದರಲ್ಲವೇ ? ಹೌದು ! ತಂದೆಯವರ ಆಜ್ಞೆಯು ನನಗೆ ಶಿರಸಾಮಾನ್ಯವು, ಏನೂ ಚಿಂತೆಯಿಲ್ಲ, ವಿದ್ಯೆಯ ಬಲದಿಂದ ಇನ್ನು ಬೇಕಾದ ಹಾಗೆ ತಾಯಿಗೂ ಹೆಂಡತಿಗೂ ಹೊಟ್ಟೆಗೆ ಹಾಕಬಲ್ಲೆನು. ನಮ್ಮಿಬ್ಬರ ದೇಹವನ್ನು ಸಮಾ ಜಸೇವೆಯಕಾರ್ಯದಲ್ಲಿಯೇ ಅರ್ಪಿಸಿದರಾಯಿತು. ” ಎಂದು ವಿಚಾ ರಿಸುತ್ತ ಕುಳಿತನು. ತಾನು ಇಂದು ತನ್ನ ಒಂದು ಕರ್ತವ್ಯಮಾಡಿದ ಹಾಗಾಗುವದೆಂದು ಕಂಡು ಆತನಿಗೆ ಅತ್ಯಾನಂದವಾಯಿತು. ಆತನ ಮುಖವು ಪ್ರಫುಲ್ಲಿತವಾಯಿತು. ಮುಂದಿನ ಅಭ್ಯಾಸ, ಗೃಹವ್ಯವಸ್ಥೆ, ವಿವಾಹಸಿದ್ದತೆ, ಮೊದಲಾದವುಗಳ ವಿಷಯಕ್ಕೆ ಎಷ್ಟೋ ವೇಳೆಯ ವರೆಗೆ ಮಾತಾಡುತ್ತ ಕುಳಿತರು. ಬಹಳ ರಾತ್ರಿಯಾದಮೇಲೆ ಇಬ್ಬರೂ ಮನೆಯೊಳಗೆ ಹೋಗಿ ಎಲ್ಲ ಸುದ್ದಿಯನ್ನು ಮನೋರಮಾಬಾಯಿಯ ವರಿಗೆ ಹೇಳಿದರು, ವಿದ್ಯಾಧರನು ಸರಸ್ವತಿಯನ್ನು ವಿವಾಹವಿಧಿಯಿಂದ ಸ್ವೀಕರಿಸಲು ಸಿದ್ದನಿರುವನೆಂದೂ, ವಿಮಲೆಯನ್ನು ಮಾಧವನು ಮಾಡಿ ಕೊಳ್ಳಲೊಪ್ಪಿದನೆಂದೂ ಕೇಳಿ ಅವರಿಗೆ ಅತ್ಯಾನಂದವಾಯಿತು. ಸರಸ್ವ ತಿಯ ವಿಮಲೆಯೂ ಬಹಳ ಆನಂದಸಾಗರದಲ್ಲಿ ತೇಲಾಡಹತ್ತಿ ತಮ್ಮ ತಮ್ಮ ಅಣ್ಣಂದಿರಿಗೆ ಮನದಿಂದಲೂ, ಭಕ್ತಿಭಾವದಿಂದ ನಮ ಸ್ಮರಿಸಿದರು ಎಲ್ಲರೂ ಮಲಗಿಕೊಂಡರು. ೬೪ ಸಮಜರಹಸ್ಯ. ಉಪಸಂಹಾರ. ಮೇಲೆ ಹೇಳಿದ ಪ್ರಸಂಗಕ್ಕೆ ಈಗ ೩-೪ ವರ್ಷಗಳಾಗಿಹೋದವು. ಈಗ ಮನೋರಮಾಬಾಯಿಯವರು ಮೊಮ್ಮಕ್ಕಳನ್ನು ಆಡಿಸುತ್ತ, ಆನಂದದಲ್ಲಿ ಕಾಲುಕಳೆಯುತ್ತಿರುವರು. ವಿದ್ಯಾಧರನೂ ಸರಸ್ವತಿಯ ಒಂದು ಕ್ಷಣಹೊತ್ತು ವಿಶ್ರಾಂತಿಯಿಲ್ಲದೆ ಅಲ್ಲಿ ಉಪನ್ಯಾಸವನ್ನು ಮಾಡು, ಇಲ್ಲಿ ಸಭೆಗೆ ಅಧ್ಯಕ್ಷರಾಗು, ಹೀಗೆ ಒಂದೇ ಸವನೆ ಸಮಾಜೋನ್ನತಿಯ ಕೆಲಸಕ್ಕೆ ಎಡೆಬಿಡದೆ ಹತ್ತಿರುವರು, ಈ ವರ್ಷ ಪುಣ್ಯಪುರದಲ್ಲಿ ಸಾಮಾಜಿಕ ಪರಿಷತ್ತು ಕೂಡುವದಿತ್ತು. ಮಾಧವನು ಅಧ್ಯಕ್ಷನಾಗಿ ಆರಿಸಲ್ಪಟ್ಟಿದ್ದನು. ಸ್ವಾಗತಮಂಡಲದ ಅಧ್ಯಕ್ಷನಾದ ವಿದ್ಯಾಧರನಿಗೂ ಕೂಡ ಎಷ್ಟೋ ಜನರಿಗೆ ಸ್ವಾಗತಮಾಡಬೇಕಾಗುತ್ತಿತ್ತು! ಈಗೀಗ ಮಾತ್ರ ನಮ್ಮ ದಂಪತಿದ್ವಯಕ್ಕೆ ಜನ್ಮಸಾರ್ಥಕವಾದಂತೆ ತೋರ ಹತ್ತಿರುವದು ! ಸರಸ್ವತಿ-ವಿಮಲೆಯರೂ ಎಷ್ಟು ಸಹಾಯಮಾಡುತ್ತಿ ದುವರಲ್ಲ! ಸ್ವತಃ ಓಡಾಡಿ ಪರಿಷತ್ತನ್ನು ಪೂರ್ಣ ಯಶಸ್ವಿಯಾಗಿ ಮಾ ಡುವದಕ್ಕೆ ಸರಸ್ವತಿ-ವಿದ್ಯಾಧರದಂಪತಿಯ ಶ್ರಮವೇ ಮುಖ್ಯ ಕಾರಣ ವೆಂದು ಎಲ್ಲರೂ ಅವರನ್ನು ಎಷ್ಟು ಅಭಿನಂದಿಸುವದು ! ! ನಮ್ಮ ಸರಸ್ವತಿಗೆ ಸ್ವರ್ಗವೂ ಇನ್ನು ಎರಡೇ ಬೊಟ್ಟು ಉಳಿದದೆ. * * * * - ಪ್ರಿಯವಾಚಕರೇ, ವೈದ್ಯರು ಆಜನ್ಮತುರಂಗವಾಸದಲ್ಲಿಯೇ ತಮ್ಮ ಆಯುಷ್ಯವನ್ನು ಕ್ಷೀಣಿಸುತ್ತಿರುವರಲ್ಲವೇ? ರೋಗಿಗಳಿಗೆ ವಿಷ ಪ್ರಾಶನ ಮಾಡಲೆತ್ನಿಸಿದವರಿಗೆ ಇದು ಸಾಕಷ್ಟು ಶಾಸನವಾಗದಿದ್ದರೂ ಈ ಲೋಕವನ್ನು ಬಿಟ್ಟು ಹೋದಮೇಲೆ ಆ ಸರ್ವಶಕ್ತನಾದ ಪರಮೇ ಶ್ವರನ ಶಾಸನವನ್ನು ಅನುಭವಿಸಲಿಕ್ಕೆ ಹೋಗಬೇಕಲ್ಲವೇ? ದೇವರೂ ಎಲ್ಲರಿಗೂ ದೇಶಸೇವೆಗಾಗಿ ಉದಂಡ ಅಯುಷ್ಯವನ್ನಿಯಲಿ ಶ್ರೀಕೃಷ್ಣಾರ್ಪಣಮಸ್ತು ಸಂಪೂರ್ಣ. ========================================

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ