ಸೋಮವಾರ, ಮಾರ್ಚ್ 15, 2021

ಚಂದ್ರಾವಲಿ ವಿಲಾಸಂ.-ಎಮ್‌, ತಿಮ್ಮಪ್ಪಯ್ಯ

 https://archive.org/details/198882ouchandraavalivilaasanm.timmappa_202003_678_w

198882_OU_Chan'draavali_Vilaasan'

 ‌ ಚಂದ್ರಾವಲಿ ವಿಲಾಸಂ.   

 ಕೆನರಾ ಹೈಸ್ಕೂಲ್‌ ಕರ್ಣಾಣಕ ಪಂಡಿತ   

 ಎಮ್‌, ತಿಮ್ಮಪ್ಪಯ್ಯನವರಿಂದ   

 ವಿರಚಿಸಲ್ಪಟ್ಟುದು.   

 ಪ್ರಥಮ ಮುದ್ರಣ ೧೦೦೦ ಪ್ರತಿಗಳು,  


 ಶಾರದಾ ಭಾಪಖಾನಯುಲ್ಲಿ ಛಾಪಿಸಲ್ಪಟ್ಟಿತು. 

 -------------------------------

  TO 

M. R. Ry. P. Bhoja Rao, Avl., B. A. 

IN TOKEN OF 

HIGH ESTEEM AWD. OF GRATITUDE 'FOR HELP RECEIVED 

THIS WORK IS RESPECTFULLY INSCRIBED BY 

The Author. 

-------------------------------------  

ಪ್ರಸ್ತಾವನೆ  

ಮಹಾಶಯರೇ!   ನಾನು ಅತಿಶಯವಾದ ಕಾವ್ಯರಚನಾ ಕೌಶಲ್ಯವ   

ನ್ನೂ ಹೊಂದಿದವನಲ್ಲ; ಆದರೂ ದೈವವಶಾತ್‌ ಒದಗಿದ ಅಲ್ಲವಾದ ಕವಿತಾ   

ಜ್ಞಾನವನ್ನು ತನ್ಮಾರ್ಗದಲ್ಲಿ ಪ್ರಯೋಗಿಸದಿದ್ದರೆ, ಕಾನನಕೌಮುದಿಯಂತೆ 

ನಿಷ್ಪಲವಾಗುವುದೆಂದೂ, ಮಹತ್ಸಥಾನುಸರಣವು ಶ್ರೇಯಸ್ವರವೆಂದೂ ಎಣಿಸಿ,   

ಶ್ರ್ಶೀ ಕೃಷ್ಣನು ಪರದಾರಾಭಿಗಮನವನ್ನು ಮಾಡಿದನೆಂಬ ಅಪವಾದಾ   

ರೋಪಣಕ್ಕೆ ಕಿವಿಗುಡುವವರ ಮನೋರೋಗ ನಿವಾರಣಾರ್ಥವಾಗಿ "ಚಂ   

ದ್ರಾವಳಿ ನಿಲಾಸಂ" ಎಂಬ ಈ ಗ್ರಂಥವನ್ನು ಗದ್ಯರೂಪವಾಗಿ   

ಬರದಿರುವೆನು. ಇದು "ಅದ್ಭುತರಾಮಾಯಣ" "ರಾಮಾಶ್ಚ,ಮೇಧಗಳೆಂಬ   

ಆರಾಮಗಳಲ್ಲಿ ವಿಹರಿಸಲಿಚ್ಚಿಸುವವರಿಗೆ ಪ್ರವೇಶ ದ್ವಾರವಾಗಿದೆ. ಮತ್ತು  

ಸರಳಪದಗರ್ಭತವಾಗಿಯೂ, ಶೈಂಗಾರ ರಸಪ್ರಧಾನವಾಗಿಯೂ, ಪ್ರಥಮಾ   

ವಲೋಕನದಲ್ಲೆ ವಾಚಕರ ಮನಸ್ಸಿಗೆ ಅವಗಾಹವಾಗುವಂತೆ ಇದೆ.   

ಇದರ ಮುದ್ರಣ ವಿಷಯದಲ್ಲಿ ಪೂರ್ಣ ಸಹಾಯವನ್ನು ಮಾಡಿ ನನ್ನ ಪ್ರಯ   

ತ್ನವನ್ನು ಸಫಲವನ್ನಾಗಿ ಮಾಡಲು ಪ್ರೋತ್ಸಾಹಿಸಿದೆ ಮ. ರಾ.ರಾ, ಮುನ್ಸಿ   

ಪಲ್‌ ಕೌನ್ಸಿಲರ್‌ ಬ. ಭೋಜರಾಯರು, ಬಿ. ಎ. ಇವರ ಉಪಕೃತಿಯು   

ಚಿರಸ್ರಮಣೀಯವಾಗಿದೆ. ಮತ್ತು ಇದರ ಶುದ್ಧಾಶುದ್ಧ ಪತ್ರಿಕೆಯನ್ನು ಸಿದ್ಧ   

ಪಡಿಸಲಿಕ್ಕೂ ಅಲ್ಲಲ್ಲಿನ ವಿಷಯಸ್ಸಾಲಿತ್ಯಗಳನ್ನು ಸರಿಪಡಿಸಲಿಕ್ಟ್ರೂ ತನ್ನ   

ಅಮಲ್ಯವಾದ ಸಮಯವನ್ನು ಉಪಯೋಗಿಸಿ ಸಹಾಯಮಾಡಿದ ಮಂ   

ಗಳೂರು ಕನರಾ ಹೈಸ್ಕೂಲ್‌ ಉಪಾಧ್ಯಾಯರು ಮ. ರಾ.ರಾ,ಕೆ ವಿ.   

ಪದ್ಮನಾಭಯ್ಭನವರು ಬಿ. ಎ, ಎಲ್‌,ಟಿ, ಇವರಿಗೆ ತುಂಬಾ ಕೃತಜ್ಞನಾ 

----------------------------------------

ಗಿರುತ್ತೇನೆ. ಈ ಕೃತಿಯಲ್ಲೇನಾದರೂ ದೋಷಗಳಿದ್ದರೆ "ಗಚ್ಚತಃ ಸ್ಮಲನಂ   

ನದೋಷಾಯ' ಎಂಬ ವಚನವನ್ನನುಸರಿಸಿ ದಯವಿಟ್ಟು ಆ ದೋಷಗ   

ಳನ್ನು ತಿಳಿಸಿದ ಭಾಷಾಭಿಮಾನಿಗಳಾದ ಮಹನೀಯರ ವಾಕ್ಯಗಳನ್ನು ಶಿರ   

ಸಾವಹಿನಿ ಮುಂದಣ ಮುದ್ರಣದಲ್ಲಿ ಸರಿಪಡಿಸುವೆನು.   

ಮತ್ತು   

||ಕಂದ || ಬೆರಲಂ ಸಿಡಿಯೆಲಿ ಪೊಗಳಲಿ |   

ಧರೆಯೊಳ್‌ ತಂತಮ್ಮ ಪುಟ್ಟುಗುಣದಂದದೊಳಾ |   

ನೆರಡರೊಳುಂ ಮುದಮಾಂಪೆಂ |   

ಇರುಳುಂ ಪಗಲುಂ ನರಂಗೆ ಸುಖಕರಮಲ್ತೆ ||  

 ಇತಿ ಸಜನ ಚರಣಾಬಭೃಂಗಃ      

 ಗ್ರಂಥಕಾರಃ 

-----------------------------------

ಶ್ರೀಃ   

ಚಂದ್ರಾವಲೀವಿಲಾಸಂ.  

ಓವೋ ತಣ್ಗಾಳಿಯ ಪೆಂಪೆ! ಅದೋ ವೇಣುವಿನ ಮಧುರಸ್ತೆರದಿಂ   

ಓರೊರ್ಮೆ ತಿರುಗುತ್ತಂ ದಾಕ್ಷಿಣ್ಯಯುಕ್ತಂ ಪರಿಮಳಮಂ ಬೀರುತ್ತಂ   

ಮೆಲ್ಲನೆ ಸಂಚರಿಸುಗುಂ.. ಇದೋ ಬಳ್ಳಿವೆಣ್ಣಳ್‌ ಚಂಚಲಾಂಗಿಯರಪ್ಪರ್‌.   

ಸೂಕ್ಷ್ಮಂ ಅತಿಸೂಕ್ಷ್ಮಂ ಚಿಗುರ್ವೆರಲ್ಗಳಿಂ ಬಾಬಾಯೆಂದು ಸೆನ್ನೆಗೈವರ್‌.   

ಮೇಣುಂ ಸುಮನೋರಾಗಂದಾಳ್ದು ಮೋಹಿಸಿ ತುಂಬಿಸರದಿಂ ಕರೆವರ್‌.   

ಯೋಚಿಸಿದೊಡೆ ಸರ್ವವ್ಯಾಪಿಯಾದೊಡುಂ ಲತಾಂಗಿಯರ್ಗೆ ಎರಗದೆ ಉಳಿ   

ಯನೆಂಬುದಂ ತಿಳಿಸೆಲೆಂಬವೊಲ್‌ ಈ ಮಾರುತಂ ಲತಾಂಗಸೆರಗುವಂ ನೊಂ   

ಡೆಲೆ ಕಾಂತಾಮಣಿ! ಎಂದು ಕಬ್ಬಿಗರಾಳ್ಚಂ ಮೊಗಸಾಲೆಯುಯ್ಯಲೆಯ   ಮನೋಹಾರಿಣಯಪ್ಪ ಭಾರತಿಗೊರೆವುತಿರ್ದಂ---   


ಭಾರತಿ _ ಕೇಳೆನ್ನ ಸೊಬಗುವಳ್ಳಿಯ ಮರಮೆ | ಮನಮಿದು   

ಇನ್ನುಂ ನಿ್ನ್ನ ಕಥಾಮೃತಮಂ ಪೀರಲ್‌ ಆತುರದೊಳಿರ್ಪ್ರದು; ಈ ಮಂದ   

ಮಾರುತನುಂ ತನ್ನ ಬೆಡಂಗಿಂ ಶ್ರೀಕೃಷ್ಣನಂ ನೆನೆಯಿಪಂ. . ಆದರಿಂ ಆ ಶ್ರೀ  

ಕೃಷ್ಣ್ಯವಿಲಾಸದೊಳೇನಾನುಮೊಂದು ಕತಯಂ ಪೇಳ--   


ಕಬ್ಬಿ ಗರಾಣ್ಮಂ -- ಪೇಳ್ವೆನೆನ್ಸ ಆನಂದಸ್ವೆರೂಪಿಣಿ! ಆದೊಡೆ ಶ್ರೀ   

ಕೃಷ್ಣವಿಲಾಸದೊಳಾವ ಕತೆಯಂ?   


ಭಾರತಿ-_ನೀಂ ರಾಧಾವಿಲಾಸಮಂ ಪೇಳ್ದ ಬಳಿಯಂ ಕೃಷ್ಣನಿನ್ನೊ   

ರ್ವಳಂ ವರಿಸಿದ ಕತೆಯಂ ಪೇಳ್ತೆನೆಂದೆಯಲ್ತೆ ? ಅದನೆ ನಲ್ಮೆಯಿನೊರೆ   

ದೊಡಾಯ್ತು. 

೨------------------------------------------- 

ಕಬ್ಬಿಗಂ -. ಇನ್ನೊರ್ವಳನೆಂದೊಡೆ ಆರಂ? ಅದೆನಗೆ ನೆನಂಬರಿಕೆ   

ಯಿಲ್ಲಂ. 


ಭಾರತಿ-- ಅವಳ್‌ ಆ ರಾಧೆಯ ತಂಗೆ,  ಆಕೆಯ ಪೆಸೆರ್‌ ಇದೋ   

ಬಸಿರ್ಗುಂಟು ಬಾಯ್ಗಿಲ್ಲಂ-- 


ಕಬ್ಬಿಗಂ-- ಕಾಂತೆ! ಓವೊ! ಅರಿತೆನರಿತೆಂ, ಚಂದ್ರಾವಳಿಯ      

ಕತೆಯಲ್ತೆ? 


ಭಾರತಿ. ಎನ್ನರಸ, ಅಪ್ಪುದಪ್ಪುದು; ಅದನೆ ಪ್ರಿಯಮಿಟ್ಟು  

ಪೇಳ್ದೊಡೆ ಪೆಣ್ಣಿನ ಒಂದಾಸೆ ಪೂರ್ತಿಯಕ್ಟುಂ.   


ಕಬ್ಬಿಗಂ-..ಪೇಳ್ದಪೆನೆಲೆ ಕಾಂತಾಮಣಿ | ಇದರ್ಕಿನಿತುಂ ಉಪಚಾ   

ರಮೆ? ಮನವಿಟ್ಟಾಲಿಸು, ಭಗವಂತಂ ಆನಂತಶಯನಂ ಧಾತ್ರೀಭಾರಮಂ   

ತಿರ್ದಲೆಂದು ಮಧುರೆಯೊಳ್‌ ಕಂಸನ ಸೆರೆಯೊಳಿರ್ಪ, ಅದಿತಿ ಕಶ್ಯಪರ ಅವ   

ತಾರಿಗಳಪ್ಪ, ದೇವಕೀವಸುದೇವರ್ಗೆ ಸಂಭವಿಸಿ, ಕಾರ್ಯಾಂತರದಿಂ ಗೋ   

ಕುಲದೂಳ್‌ ನಂದಂಗೆ ಮಗನಂತೆ ನಟಿಸಿ, ಪಲವುಂ  ಅಲೌಕಿಕಕೃತ್ಯಂಗಳಂ  

ಮಕ್ಕಳಾಟಿದ ಮಾಳ್ಕೆಯಿಂ ಮಾಡುತ್ತಂ, ಗೋವಳಿತಿಯರ್‌ ಗೈದ ಪುಣ್ಯಫಲ  

ಮನೆಂಬಂತೆವೊಲ್‌ ತನ್ನೊಲ್ಮೆಯಂ ಅವರೊಳ್‌ ಬೀರುತ್ತಮಿರ್ದಂ ಎಂಬುದಂ   

ಮೊದಲೆ ಪೇಳ್ದೆನಲ್ತೆ. ಬಳಿಯಮುಂ ಎಂತಪ್ಪರಾದೊಡುಂ ಕುಲಕ್ರಮಮಂ  

ಬಿಡಲಾಗದೆಂಬುದಂ ಇಳೆಗೆ ತಿಳಿಸಲೆಂಬಂತೆ ಗೋವಳರೊಡನೆ ಗೋವ್ಗಳಂ   

ಪೊರೆವುತ್ತುಮಿರ್ದಂ.   


ಓರೊರ್ಮೆ ಶ್ರೀಕೃಷ್ಣಂ ಒಂದು ಮಹಾವೃಷಭವಂ ಏರ್ದು, ಓ ಕೆಳೆ   

ಯರಿರ! ಆ ವೃಷಭವಾಹಂಗುಂ ಎನಗುಂ ಏಂ ಭೇದಂ, ಎಂದು ಕೇಳ್ವಂ.   

ಪಲರ್ಮೆ ಆ ಕಾಳಿಂಗನ ಪೆಡೆಯೊಳ್‌ ನಲಿದ ಎನಗುಂ ಶೇಷತಲ್ಪನಪ್ಪ ವಿಷ್ಣು   

ವಿಗುಂ ಏಂ ವ್ಯತಿರೇಕಂ ಎಂಬಂ.   


ಈ ಪರಿಯೊಳ್‌ ಬಾಲಚೇಷ್ಟೆಯ ನೆವದಿಂ ತನ್ನ ಯಥಾರ್ಥತೆಯಂ   

ಜಗತೆ ತಿಳಿಸುತ್ತಂ ಬಿನದಿಸುತೆ ಸಂತಸದ ಏಳ್ಗೆಯಿಂ ಓರೂರ್ಮೆ ಮುರಲಿ 

೩---------------------------------------------------------------------------------

ಯಂ ಬಾಜಿಸಿದನಾದೊಡೆ ಮನುಜರೆಲ್ಲರುಂ ಇರ್ಕೆ; ಪಸುಗಳುಂ ಮೇವಂ   

ನೀರಂ ತೊರೆದು ಬೇರೆಣಿಕೆಯಂ ಮರೆತು ಆಲಿಸುತ್ತಂ ಇರ್ದುವು. ಕೊಡ   

ವಾಲಂ ಕರೆವುವು. ಪಲವೇಂ? ಬಾಯ್ಗೂಡದ ಸೊರ್ಕುಂ ಬೋರಿಗಳ   

ನುಂ ಒಂದು ನೆಲೆಯೊಳ್‌ ನಿಲುಸಲುಂ ಕೊಳಲ ಸವಿಸೊರಮೇಸಾಯ   

ಮಾಯ್ತಲ್ಲದೆ, ಬೇರಾವೆದುಂ ಅನಾವಶ್ಯಕಮೆಂದಾಯ್ತು.   ಮೈಮರ 

ಆಶ್ರಯಮಿರ್ದೊಡೆ ಏನಸಾಧ್ಲ್ಯಂ! ಆ ವೇಣುವಿಗುಂ ಸಾಮರ್ಥ್ಯ್ಯಂ ಅನಿತುಂ  

 ಒದವಿತಲ್ಲೆ! 


 ಭಾರತಿ--ಎಲೆನಲ್ಲ! ವೀಣಾದಿಗಳ್‌ ಪಲವುಂಬಗೆಯ ವಾದ್ಯೆಂಗಳ್‌   

 ಇರಲ್‌ ವಾಸುದೇವಂ ಈ ವೇಣುವಾದ್ಯಮನೆ ಪಿಡಿಯಲ್‌  ಏನಾನುಂ      

ಕಾರಣಮುಂಟೆ? 

 

ಕಬ್ಬಿಗಂ--ಕೇಳಿನ್ನರಸಿ, ಕಾರಣವಿಲ್ಲದೆ. ಕಾರ್ಯಮೇನೊದವು   

ಗುಮೆ? ಪೇಳ್ವೆಂ ಈ ನೆಲದೊಳ್‌ ಪಿಂತೊರ್ವಂ ಸುಶರ್ಮನೆಂಬ ವಿಪ್ರಂ   

ಬ್ರಾಹ್ಮಣ ವರ್ಣಮಾಲೆಯ ಶಿಖಾಮಣಿಯೆನೆ ರಾರಾಜಿಸುತ್ತಮಿರ್ದೆಂ. ಆ   

ತಂಗೆ ರೂಪಿನ, ಮೇಣ್‌, ಸದ್ವಿದ್ಯೆಯ ಬಿತ್ತೆಂಬಂತೆ ಉದಿಸಿ ರತಿಸುಂದರಿ   

ಯಾಗಿಯುಂ ಸಕಲಕಲಾವತಿಯಾಗಿಯುಂ ಏಳ್ಗೆಯೊಂದುವ ವೇಣುವೆಸೆರ   ಮಗಳೊರ್ವಳುವಮುಂಟು. ಅಂತಾಕಗೆ ಪೂಸಜೌವನಮುಂ ಅಂತಕುರಿಸೆ. 


ಸುಶರ್ಮಂ--   ಎಲೆ ಮಗಳೆ! ನೀಂ ಬುದ್ದಿಯುಂ ಬಿಜ್ಜೆಯುಂ   

ಇಲ್ಲದ ನಾಡ ಪೆಣ್ಣಳಂತಲ್ಲಂ, ಓರೊರ್ಮೆ ಏನೆಗುಂ ಬುದ್ದಿವೇಳಲಿಪ್ಪ   

ವಳ್‌ (ಎಂಬನಿತರೊಳ್‌),  


ವೇಣು--(ಲಜ್ಜೆಯಿಂ) "ಅಪ್ಪ! ಇದೇಂ ಅಪರಿಚಿತರೊಳ್‌ ಗೈವಂತೆ   

ಮಗಳೊಳುಂ ಇನಿತುಂ ದಿನಮಿಲ್ಲದ ಉಪಚಾರಂ?"   


ಸುಶರ್ಮಂ-. ಮಗಳೆ! ಇಪ್ಪುದನೆ ಪೇಳ್ದೊಡೆ ಏನುಪಚಾ   

ರಮೆ! ಅಪ್ರಕೃತಮಂತೆ ಪೋಕೆ.  ನಿನ್ನಂಗಂಗಳುಂ ಅಂಗಭಂಗಿಗಳುಂ   

ಗೃಹಿಣೀತ್ವಮಂ ಪೊಂದಲ್ವೇಳ್ಕುಮೆಂಬ ಭಾವಮಂ ಸೊಚಿಪುವು, ಅದರಿಂ   

ನಿನ್ನ ಮನಃಪ್ರಿಯನಪ್ಸವಂ ಆವ ಲಚ್ಚಣದವಂ ಆಗಲ್ಬೇಳ್ಳುಮೆನೆ. 

೪--------------------------------------------------------------------------- 

ವೇಣು--(ನಾಣಂತಲಿವಾಗಿ ಬರಿದೆ ಇರ್ದೆಳ್‌).   


ಸುಶರ್ಮಂ--ಮಗಳೆ ಲಜ್ಜಿಯಂತಾಳದಿರ್‌. ನೀಂ ಪೇಳದೊಡೆ  

ನಿನ್ನ ಆಂತರ್ಯಮಂ ಆನಿಂತರಿವೆಂ. "ಭಿನ್ನರುಚಿರ್ಹಿಲೋಕಃ" ಎಂಬು   

ದಂ ನೀನೇನರಿಯದಳೆ?   


ವೇಣು--(ಲಜ್ಜೆಯಂ ಎಂತಾನುಂ ಸೈಸಿ) ತಾತ! ಇದೇಂ ನೀನರಿ   

ಯದರವೊಲ್‌ ಕೇಳ್ಪುದು? ಪಿತಂ ಬಾಲ್ಯದೊಳ್‌, ಪತಿ ಪ್ರಾಯದೊಳ್‌,  

ಸುತಂ ವಾರ್ಥಿಕ್ಯದೊಳ್‌ ರಕ್ತಕನಲ್ಲದೆ ಅಬಲೆಯರ್ಗೆ ಏಂ ಸ್ವತಂತ್ರ   

ಮಿರ್ಪುದೆ? ಅಂತುಮಲ್ಲದೆ ಸ್ವಯಂವರಮದು ರಾಜಕೀಯಮಲ್ತೆ.   

 

ಸುಶರ್ಮಂ--ಮಗಳೆ! ಪಿತಂ ಬಾಲ್ಯದೊಳ್‌ ಪಾಲಕಂ; ಅಂತಿ   

ರಲ್‌ ನಿನಗೆ ಈ ಜೌವನದೊಳುಂ ಆನೆಂತು ಪಾಲಕನಪ್ಹೆಂ?   


ವೇಣು-ಅಪ್ಪ! ತಂದೆಯೆಡೆಯ ಮಕ್ಳಳ್ಗೆ ಎಂದುಂ ಬಾಲ್ಯಾ   

ವಸ್ಥೆಯೆ. 


ಸುಶರ್ಮಂ--ಪುತ್ರಿಯೆ   ಅಂತಾದೊಡೆ ವರನಂ ಪುಡುಕುವೆಂ,   

ಬಳಿಯಮೆನ್ನಂದೊರಲಾಗದು ಎಂದು ಆಕೆಯ ಅನುಮತಿಯಿಂ ಪೊರಟಂ  

ಕೇಳೆನ್ನರಸಿರನ್ನೆ! ಅತ್ತಮಾ ಕಾಶಿಗೆ ಅನತಿದೂರದೊಳೋರ್ವಂಪೊಲೆಯಂ 

ಸಂಸಾರಮಂ ಪೊರೆಯಲೆಂದು ತನ್ನ ತಡಿಕೆವನೆಯಂಬಿಟ್ಟು ಬನದೊಳ್‌ 

ಬೇಂಟೆಯಾಡುತ್ತಮಿರ್ದಂ. ಅನ್ನೆಗಂ ಆಪೊಲೆಯಂ ವೇದಾಧ್ಯಯನ 

ಗೆಯ್ವಿತ್ತುಂ, ಶಾಸ್ತ್ರಂಗಳಂ ಪರಿಸುತ್ತುಂ, ಪುರಾಣಂಗಳಂ ಓದುತ್ತುಂ, 

ಇರ್ಪ ಮುನಿ ಕದಂಬಮಂ ಕಂಡು ಮುಂಜನ್ಮದ ಪುಣ್ಯಬಲದಿಂ ಈ ಮುನಿ 

ಕೃತ್ಯಮೇ ಸಂಸಾರಶರಧಿಯಂ ದಾಂಟಿಪ ನಾವೆಯೆಂದುಂ ಮುಕ್ತಿಕಾಂತಾ 

ಗೃಹಮಂ ತೋರ್ಪ ಮುಂದಾಳೆಂದುಂ ತಿಳಿದು, ಬೇರೆಣಿಕೆಯಂ ಮರೆತು 

ಆಯೆಡೆಯೊಳೆ ನಿಗಮಾಧ್ಯಯನಾದಿಗಳ ಪಾಠಪ್ರವಚನಂಗಳಂ ಕೇಳುತ್ತ 

ಮಿರ್ದಂ, ಅಂತೆ ಕೆಲಗಾಲಂ ಕಳೆಯೆ, ಸಜ್ಜನಸಂಗದಿಂ ತನ್ನೊಳ್ 

ಬ್ರಹ್ಮಜ್ಞಾನಂ ಮೊಳೆಯೆ, ಬ್ರಾಹ್ಮಣನಾಗಿ ಕಲಾವತಂಸನೆಂಬ ಪೆಸರಾಂತು 

ಅತಿಶೇಜಸ್ವಿಯುಮಾಗಿ, ಆರುಷಿಗಳೊಡನಿರ್ದಂ--   


೫---------------------------------------------------------------------------

ಅಂತಿರಲ್‌ ಒಂದು ದಿನಂ ಸುಶರ್ಮಂ ಆ ಮುನಿ   

ಗಳ ಆಶ್ರಮಕೆ ಬರ್ಪುದುಂ, ಆ ಸತ್ತಡಿಗಳೂಳ್‌ ಅಗ್ಗಳೆನಾದಾ ಕಲಾ   

ವತಂಸೆಂ. ಸುಶರ್ಮಂಗೆ ಗೆಯ್ದು ಕುಶಲಮಂ ಕೇಳ್ದು,   

ಇತ್ನಲ್‌ ಆಗಮನೆಂ ವಿತ್ಮಣಿಂ ಏಕೆ ಆಯ್ದು? ಎಂದು ಬೆಸೆಗೊಂಡಂ---  

 

ಸುಶರ್ಮಂ--(ಕಲಾವತಂಸನಂ ಕಂಡು ಎನ್ನೆ ಕಬ್ಬಳೆ ಫಲ   

ಮಾಯ್ಕೆಂದೆಣಿಸಿ) ಓ ಭೊದೇವಾಗ್ರಣ! ಅತಿ ಕಲಾವತಿಯಾಗಿಯುಂ,   

ರತಿಸುಂದರಿಯಾಗಿಯುಂ, ಪ್ರಾಪ್ತವಯಸ್ಸೆಯಾಗಿಯುಂ, ಇರ್ಪ ವೇಣು   

ವೆಸರ ಎನ್ನ ಮಗಳ್ಗೆ ಅನುರೂಪನಪ್ಪ ವರನಂ ಅರಸೆಲಿಂದು ಊರಲ್ಲಂ   

ಸುತ್ತಿದೊಡುಂ ದಣವಲ್ಲದೆ ಇನ್ನೆವರಂ ಆರುಂ ಮನಂಬೊಕ್ಕರಿಲ್ಲಂ.   

ಅದರಿಂ ಇತ್ತಲ್‌ ಬರವಾಯ್ತು. ಮುಖಸ್ತುತಿಯಂಬಿನಲ್ಲಂ, ನಿನ್ನಂ ನೋಡಿ   

ದೊಡನೆಯೆ ಎನ್ನ. ದಣಿವೆಲ್ಲಂ ತಣದುದು; ಪಲವೇಂ, ನೀನಿನ್ನೆನ್ನೊಳುಂ   

ಆ ಬಾಲಿಕಾಮಣಿಯೊಳುಂ, ದೆಯೆಯಿಡುವೆಯಾದೊಡೆ ಈ ವಿಪ್ರಶಿರೋ   

ಮಣಿಗಳೊಡನೆ ಅಲ್ಲಿಗೆ ನಡೆತಂದು ಬಿದಿಯಂತೆ ಆ ಕನ್ನೆಯಂ  ಕೈ ವಿಡಿಯ   

ಲ್ವೇಳ್ಕುಂ (ಎಂದು ಸೆವಿನಯಂ ಪೇಳ್ದ ಸುಶರ್ಮಂಗೆ).     


ಕಲಾವಶಂಸಂ-."ಓವೋ ಅತಿಥಿಗಳಗ್ಗಳ! ಮನೆಯವಂ ಅತಿ   

ಥಿಗಳ ಮನದಿಸಮಂ ಸಪೂರ್ತಿಪುದೊಪ್ಪಿತಂ; ನೀನೆಂದುದು. ಅತಿಥಿಯಪ್ಪ   

ನೀನೇ ಕನ್ನಿಕೆಯಂ ಕೊಟ್ಟು ಮನೆಯನನೆನ್ನಂ ಸಂತಸಂಬಡಿಪುದಿಂಬು   

ದಿದೊಂದು ಪೊಸಪರಿಯಲ್ತೆ?"    


ಸುಶರ್ಮಂ--ಕಲಾವತಂಸ! ಅಲ್ತು ಪೊಸಸರಿಯಲ್ತು ನೀನೆನ್ನ   

ಮಾತಂ ಮನ್ನಿಸಿದೂಡೆ ಅತಿಥಿಯ ಮನದಿಷ್ಟಮಂ ಪೂರ್ತಿಸಿದಂತಾಯ್ತು;   

ಇಲ್ಲದೊಡೆಯ ತದ್ವಿರುದ್ಧಮಲ್ತೆ?"  


ಕಲಾವತಂಸಂ..“ಸುಶರ್ಮ! ಆಯ್ತು "ವಿಪ್ರವಾಕ್ಯಂ ಜನಾ   

ರ್ದನಃ"- ಎಂಬ ನುಡಿಯೆಂ ಮೀರಲಾರೆಂ" ಎಂದು ಅಲ್ಲಿರ್ಪ ಮುನೀಂದ್ರ   

ರೊಡಂಗೊಡಿ, ಸುಶರ್ಮನೊಡನೆ ಆತನ ಮನೆಗೈತಂದು, ಸತ್ಕಾರಮಂ 

೬---------------------------------------------------------------------------


ಸ್ಟೀಕರಿಸಿ, ಆ ಕನ್ನಕಾಶಿರೋಮಣಿಯಂ ವಿಧ್ಯುಕ್ತಮಾಗಿ ಕೈವಿಡಿದಂ..   

ಬಳಿಯಂ ಆ ಕಲಾವತಂಸಂ ಆ ಪೆಣ್ಮಣಿಯೊಡನೆ ಪುಟ್ಟಿಂ ಸಫಲಮಾಗಿಸಿ,   

ಒರ್ಮೆ ಮುನಿಗಳೊಡನೆ, ಏನೋ ಉರ್ಯಾಂತರದಿಂ ಸಂಚಾರಗೊಂಡು   

ಪ್ರಯಾಣವಶದಿಂ ತನ್ನ ಪುಟ್ಟಿನ ಪೊಲೆವನೆಯ ಕಾಡಿಗೆ ಬಂದಂ. ಅಂತಾ   

ಕಾಡೊಳ್‌ ಮುನಿಗಳೆಲ್ಲರುಂ ತಂತಮ್ಮ ಕಾರ್ಯಾತುರದಿಂ ಎತ್ತೆತ್ತಮೋ 

ಪರಿಯೆ, ವಿಧಿವಶದಿಂ ಇವಂ ತನ್ನ ಪೊಲೆವನೆಯ ಅಂಗಳಕೆಯೆ ಇಳಿದಂ-   

ಅಂತಿಳಿದು ಬಂದವನಂ ಕಂಡಾತನ ಮುಂಬೆಂಡತಿಯಪ್ಪ (ಕುರು   

ಪುವಿಡಿದು ಕಣ್ತೀರ್ತುಂಬೆ ಓಡಿ ವಂದು) "ಓವೋನಲ್ಲ! ಏನೆನ್ನಂ ಕೈಪಿಡಿದ   

ಪೆಂಡತಿಯಂ ಅನಾಥಳಂ, ಈ ಮರಿಮಕ್ಕಳಂ ದಿಕ್ಕಿಲ್ಲದರಂ, ಈ ನಡು     

ಗಾಡೊಳೆ ಬಿಟ್ಟು ಕಲ್ಮನದಿಂ ಕಣ್ಮುರ್ಚಿ ಪೋಪುದೆ? ಈ ಕಾಡೊಳ್‌ ಇನಿ   

ಸುಂದಿನಂ ಅಬಲೆಯಾದೊಡುಂ ಕ್ರೂರಮೃಗಂಗಳ ಭಯಮಂ ಎಂತಾ   

ನುಂ ಸೈಸಿ ಮಕ್ಕಳಂ ಪೂರೆದೆಂ. ಮಕ್ಕಳ ಬಸಿರ್‌ ಇದೋ ಬೆನ್ನೊಳಿ   

ರ್ಕುಂ ನೋಡಗಿಡುವಂ ನೆಟ್ಟುಂ ನೀರರಯದವನಂತೆ ಈ ಮಕ್ಕಳುಮಂ.   

ಕಾಡೊಳೆ ತೊರೆದು... ಪೋದ--ಗಂಡರ ಮನಮೋ ಗುಂಡುಗಲ್ಲೊ?   

ಎಂಬೊಂದು ನುಡಿಯಂ ಪೊಳೆಯಿಸಿದಯ್‌, ನೀಂ ಪೋಪಾಗಳ್‌ ನಾಲ್ದಿಂ   

ಗಳ ಬಸಿರಿಯಾಗಿರ್ದೆಂ. ಬಳಿಯಂ ಪಡೆದ ಕೂಸಿದುು, ಈಗಳ್‌ ಮೂರುಂ   

ಬರಿಸಮಾಯ್ತು. ನೀನೀಗಳ್‌ ಬರ್ಪಾಗಳ್‌ (ತೊದಲ್ನುಡಿಯೂಳ್‌) "ಅಬ್ಬೆ!   

ಎನ್ನಪ್ಪಂ ಆರ್‌?" ವಿಂದೆನ್ನೊಳ್‌ ಈ ಸಿಸು ಒತ್ತಂಬದ ಪರಸನಂ ಗೈವು   

ತಿರ್ದುದು, ಓ ಮಗು! ಇದೋ ನಿನ್ನ ಪ್ರಶ್ನಕೆ ಉತ್ತರಂ, (ಎಂದಾಸಿ   

ಸುವಂ ಆತನ ಚರಣದೆಡೆಯೊಳ್‌ ಇಟ್ಟು   ಕಣ್ಣಿರ್ವಿಡುತಿರ್ದಳ್‌)    


ಕಲಾವತಂಸಂ--"ಆಃ! ಇದೇಂ ಆಕಸ್ಮಿಕದ ಒಂದು ಪೊಐಮಾಲೆ?"   

“ಎಂದು ಇನಿಸುಂಯೋಚಿಸಿ ಅರಿಕೆಯಾಗೆ ಸಿಡಿಲ ಪೊಡೆದೆ ಮರದಂತೆ   

ಮೈಮರೆತು ಅಂತೆ ಎಳ್ಚತ್ತು ಕುಡಿವರಿವ ಚಿಂತೆಯೆಂ ಎಂತಾನುಂ ಸೈಸಿ,   

ತಾಂ ಪೊರಟು ಅನ್ನೆವರಂ ಪೊರ್ದಿದ ಅವಸ್ಥೆಗಳಂ ಪೇಳ್ದಂ".   


ಚಂಡಾಳಿ--"ಎನ್ನೆರೆಯ! ಅಂತಾದೊಡೆ ಒಳ್ಳಿತಾಯ್ತು. ನೀನೀ 

೭----------------------------------------------------------------------

ಗಳ್‌ ದೊಡ್ಡಿದನಾಗಿ ಇರ್ಪೆಯಲ್ತೆ? ಅದರಿಂ ಆ ಪೆಂಡತಿಯಪ್ಪ ಎನ್ನ   

ತಂಗೆಯನುಂ, ಪಲವುಂ ಪಣಂಗಳನುಂ, ಅಲ್ಲಿಂದಿಲ್ಲಿಗೆ ತರಿಸಿ ಸೂಗದಿಂ   

ಇರಲಕ್ಕುಮಲ್ತೆ?'   


ಕಲಾವತಂಸಂ--"ಕಾಂತೆ! ಆಂ ಪೂರ್ವಾಸ್ದೆಯನಿದಂ ಪೊಂದಿ   

ದೊಡೆ ಪಣಮಿರ್ಕೆ, ಒಂದು ತೃಣಮುಮಂ ಈಯರ್‌; ಮೇಣೇಂ ವಿಪ್ರರ  

ಪೆಣ್ಣೊರ್ವಳ್ಗೆ ಆಧೋಗತಿಯನೊದವಿಸಿದನೆಂದು ಮುನಿಗಳಲ್ಲರುಂ ಕೂಡಿ  

ಪಾಪಮಂ ವುದು ನಿಜಂ." 


ಪೊಲೆಯಿತಿ--"ನಲ್ಲ! ಅದೆಂತಾನುಂ ಇರ್ಕೆ-ನೀನಿರ್ದೊಡೆ ಎನ್ನ   

ಐಸಿರಿ ಎಂಟುಮುಂಟು, ಅದುಂ ಪೋಕೆ ನೀನಗಲ್ದ ಸಜ್ಜೆಗೋಣೆಗೆ  

ಇನಿಸುಮಲಂಕಾರಮಿಲ್ಲಂ, ಅದರಿಂ ನಿನ್ನನೆ ಇದಿರ್ನೋಡುತಿರ್ಪುದು"   

ಎಂದು ಮರುಗಿಯುಂ, ಬೆಡಂಗಿಂ ಮರುಳ್ಮಾಡಿಯುಂ, ವಿಂತಣನುಂ ತನ್ನ 

ತಡಿಕೆವನೆಗೆ   ಎಳದುಯ್ದಳ್‌). "ಪಿರಿದ್ದೇಂ, ಆರ್ಗುಂ ಸಂಸಾರಪಾಶಂ   

ಪಿರಿದಲ್ಲವೆ!"   


ಕಲಾವಶಂಸಂ--ತನ್ಕೊಳೆ ತಾಂ “ಹಾ ಏಂ ಮಾಳ್ಪೆಂ! ಕೈವಿಡಿ   

ದಳನಿವಳುಮಂ, ಮಕ್ಕಳುವಂ, ತೂರೆವುದಿಂದೊಡೆ ಸ್ಪಾಮಿಯುಂ   

ಭೂಮಿಯುಂ ಮೆಚ್ಚದ ಕೆಲಸಂ, ಅತಿ ನಿಪುಣೆಯಂ, ತ್ರಿಲೋಕಸುಂದರಿ   

ಯಂ, ತ್ರಿಕರಣಪೂರ್ವಕಂ ಎನ್ನನೆ ನಂಬಿದ ವೇಣುವಂ ಮರೆತೊಡೆ ಇಹ   

ಪರವಿಹೀನನಪ್ಪುದೇ ಗತಿ. ಹುಂ, 'ತಲೆಯೊಳ್ ಬರೆದುದು. ಎಲೆಯೊಳ್‌   

ಪೂಸೆ ಮಾಸುವುದೆ?' ಎಂಬ ನಾಣ್ನ್ನುಡಿಯಂತೆ ಬಂದುದಂ ಅನುಭವಿಸು   

ವೆಂ (ಎಂದವಳೊಡನೆ ಪಲವುಂ ಕಾಲಮಲ್ಲಿರ್ದಂ).   


ಅಂತಿರಲ್‌ ಬ್ರಹ್ಮತೇಜಂಗಳಲ್ಲವುಂ,  ಕೃಷ್ಣಪಯೋಧರಂ ಅಮರ್ದ   

ಕಾರ್ಗಾಲದ ದೆವಸಂಗಳಂತೆ ಮಾಸಿದುವು. ಮೊಗಮೋ, ಚಂಡಾಳಿ ಪೀರ್ದ  

ಬೆಳ್ದಾವರೆಯಂತೆ ವಿರಸಮಾಯ್ತು. ಬಳಿಯಂ ಪಲವುಂ ಪಗಲುಂ ಕಳೆಯೆ   

ಆ ಪೊಲೆಯಂ ತನ್ನ ಅವಸ್ಥೆಯಂ ತಿಳಿಯದೆ ಸೊಡರಂ ಪಣ್ಣೆಂದು ಬಗೆವ 

೮---------------------------------------------------------------------- ಪತಂಗದಂತೆ ನೇಣುವನೆ ನೆನೆದು, ಮನೆಯಳ ಕಣ್ಮರೆಗೈ"********** 

ಮನೆಗೆ ಬಂದನೆ ಬಂದೆಂ.. ಅಂತು ಬಂದು ಮೆಟ್ರನೇರ್ದು ಜಗಲಿಗೆ ಅಡಿ   

ಯುಡುವುದುಂ.   


ಸುಶರ್ಮಂ--(ಉರಿದೇಳ್ದು) “ಚಿಃ ಪೊಲೆಯ, ನೀನಾರ್‌? ಏಕೈ   

ತಂದೆ? ಇದೇಂ ಬೊನ್ಮುಣರ ಮನೆಯೆಂಬುದೆಂ ಅರಿಯೆಯ? ತೊಲ   

ತೊಲಗು, ಅಂತುಂ ಏನಾನುಂ ಕಜ್ಜಮಿರ್ದೊಡೆ ದೂರಮಿರ್ದು ಗಳಪಿ   

ಪೋಗು" ಎಂದು ದಟ್ಟಿಸಿದಂ,   


ಚಂಡಾಲಂ-(ಆ ನುಡಿಗೇಳ್ದು ಬೆದೆರ್ದು ಅಚ್ಚರಿವಟ್ಟು) “ಮಾವ!   

ಏನಾಂ ಕಲಾವತಂಸೆನಲ್ಲವೆ? ಇನಿತರೊಳುಂ ಮರವೆಯೆ? ಬಿಸಿಲ್ಲೆ ಅತಿ   

ದೂರಂ ನಡೆದು ಮೈ ಇನಿಸುಂ ಕರಿದಾಯ್ತೆಂದು ಇಂಶಲ್ಲಂ ಪೊಲ್ಲದುದಂ  

ನುಡಿವುದೆ? 'ಕರ್ಬ ಡೊಂಕಾದೊಡೆ ಸೀಯುಂ ಡೊಂಕೆ?' ಎಂಬ ನಾಣ್ನ್ನು  

ಡಿಯನರಿಯೆಯ ? ಪಿಂದೆ ಹಿಮಕರುಕುಲಶೇಖರನಪ್ಪ ನಳಭೂಪನ   

ಮೈಯುಂ ಇಂತಯ ಕರಿದಾದೊಡುಂ ಬಳಿಯಮೇಂ ಕೀಳಾದೆನೆ?"  

   

ಸುಶರ್ಮಂ--(ಆ ಮಾತಂ ಕೇಳ್ದು ಸಂದೆಗದಿಂ ಭೆಯಕೋ   

ಪಂಗಳರಡುಂ ಒಟ್ಟಿಗೆ ಆಂ ತಾನೆನೆ ಮಗಳಂ ಕರೆದು) "ಎಲ್ಲಿ ಮಗಳೆ,   

ಇವಂ ಆವೊಂ? ಏಂ ನಿನ್ನೆರೆಯಂ?" ಎಂದು ಕೇಳ್ದಂ.   


ವೇಣು-- (ದಿಟ್ಟಿಸಿ ಮರುಕದಿಂ). “ಅಪ್ಪ, ಅಪ್ಪುದು; ಆದೊಡೆ   

ಇವನಂ ಪರೀಸಕ್ಷೆಸಿದೊಡೆ ನಿಕ್ಸುವಂ ಈಗಳ್‌ ಪೊಲೆಯೆನಾಗಿರ್ಪಂ."  


 ಚಂಡಾಲಂ-- " ಓ ಎನ್ನ ಕಾಂತಾಶಿಖಾಮಣಿ! ಏಂ ನೀನು   

 ಮಿಂತೆಲ್ಲಂ ಎನ್ನೊಳ್‌ ಅಪವಾದಾರೋಪಣಂ ಗೆಯ್ದಪ್ರದೆ ? " (ಎಂದು   

 ಮೆಲ್ಲನೆ ಆಕೆಯ ಸಮೀಪಕೆ ಅಡಿಯಿಡಲ್‌ !)  


(ಆ ಕಾಂತೆ ತೊಟ್ಟನೆ ತೊಲಗಿದೂರಮಿರ್ದು, ಅಪ್ಪೆಂಗೆ ಒರೆದ್ಕು   

ಭಟರಂ ಕರೆಯಿಸಿ, ಆತನೆ ಕಾಪಿಗೆ ಸೆಮನಿಸಿ) “ನಿನ್ನ ಪರಿ ಏತರಿಂ   

ಈತೆರನಾಯ್ತು? ಪೇಳ್‌, ಅಲ್ಲದೊಡೆ ನಿನ್ನ ಜೀವಿತಕೆಯೆ ಕಡೆಯಾ 

೯-----------------------------------------------------------------------


ಯ್ತು ಎಂದು ಬೆದರ್ಚಿ ಕೇಳ್ದಳ್‌.  ಆ ನುಡಿಗೇಳ್ದು ಆ ಪೊಲೆಯಂ   

ತನ್ನಂದಮನಲ್ತಂ ಬಿರ್ಚಿದಂ.   


ಬಳಿಯಂ ಆ ಕಾಂತಾಮಣಿ ಇನ್ನೀ ಮಲಿನಮಾದ ಪಾಳೊಡಲಂ   

ಉರಿಯೊಳೆ ಪುಗಿಸಿ ಪರಿಶುದ್ಧಮಾಗಿ, ಸುವಂಶದೂಳ್‌ ಪುಟ್ಟಿ ಪರಮಾ   

ತ್ಮನ ಕೈಯನೆ ಪೂರ್ದುವೆನೆಂದು ನಿರ್ಣಯಿಸಿ, ಅಂತೆ ತನ್ನ ಮೆಯ್ಯಂ  

ಕಿರ್ಚಿಗೆ ಸೆಮರ್ಪಿಸಿದಳ. ಆ ಪೊರೆಯನುಂ ವೇಣುವಂ ತೊರೆದ ಈ   

ಜೀವನಮೇಕೆ? ಎಂತಾನುಂ ಆಕೆಯನೆ ಪೂರ್ದುವೆನೆಂದು ಆ ಉರಿ   

ಯೊಳೆ ಅಸುಂಗಳೆದಂ.   


ಬಳಿಯಂ ಪಲವುಂ ಪಗಲುಂ ಕಳೆಯೆ. ಆ ಮಸಣದೊಳೆ ವಂಶ   

ಮೊಂದುದಿಸಿತು.   


ಭಾರತಿ-- (ಅಚ್ಚರಿಯಿಂ). "ಕಾಂತ, ಸ್ಮಶಾನದೊಳ್‌ ವಂಶಂ   

ಪುಟ್ಟುವುದೆಂತೊ? 'ರವಿ ಕಾಣದುದೆಂ ಕವಿ ಕಾಣ್ಬಂ' ಎಂಬರ್‌.   

ನಿನ್ನ ನುಡಿಯಂ ಕೇಳ್ದೊಡೆ, ರವಿ ಪುಸಿಯಂ ಕಾಣ್ಬಂ, ಕವಿ ಪುಸಿಯ   

ನುಂ ಕಾಣ್ಬಂ ಎಂದೇ ಆ ನುಡಿಯ ಅರ್ಥಂ ಏಂದೆಣಪೆಂ."   


ಕಬ್ಬಿಗಂ -_ (ಕಿವುಡಂಗೆ ಡವುಡೆಯೆ?) “ಎಂಬ ನುಡಿ ನಿನ್ನೊಳೆ   

ಸೋಲ್ದುದು, ಅಲ್ಲದೊಡೆ ವಂಶಶಬ್ಬಾರ್ಥಮನೆ ತಿಳಿಯದೆ ಇಂತೆಲ್ಲಂ   

ಅಸಂಬದದ್ಧಾರ್ಥಮಂ ಗಳಪುವೆಯ ?"   


ಭಾರತಿ-- "ನಲ್ಲ, ಅರಿಯದೆ ಪೇಳ್ದೆಂ. ಏಂ ವಂಶಮೆಂದೊಡೆ   

ಸಂತಾನಮಲ್ತುಮೆ?"   


ಕಬ್ಬಿಗಂ (ನಕ್ಕು), "ನಿಮ್ಮ ಪೆಣ್ಗಳ ಜಾತಿಗೆ ಏನೊರೆದೊ   

ಡುಂ ಒಂದು ಸಂತಾನದ ಯೋಚನೆ, ಅದಿರ್ಕೆ ಮುನ್ನೊರ್ವಳ್‌ ರಾಮಾ   

ಯಣಮಂ ಕೇಳ್ದು ಕಡೆಗೆ ರಾಮಂಗುಂ ಸೀತೆಗುಂ ಬಾಂಧವೃಮುಂಟೆ?   

ಎಂದು ಕೇಳ್ದಳಂತೆ. ಇಂತಿರ್ಪರ್ಗೆ 'ಅಜೀರ್ಣೇ ಭೋಜನಂ ವಿಷಂ---.   

ಎಂಬಂತೆವೋಲ್‌ ಕಥೆಯೇ ವ್ಯಥೆಯಲ್ತೆ?" 

೧ಂ------------------------------------------------------------------------


ಭಾರತಿ-- ಅರಿಯದೆ ಕೇಳ್ಬ ಶಬ್ದಾರ್ಥಂ ಇಂತೆಲ್ಲಂ ಬಿತ್ತರದೆ   

ಪುರಾಣಮೆ1? ಸಾಲ್ಗುಂ--ಪೇಳ್‌.   


ಕಬ್ಬಿ ಗಂ--"ಅರಿಯದೊಡೆ ಮೊದಲೇ ಕೇಳಲ್‌ ಏಂ ಮಾನೆಂ   

ಪಿರಿದಾಯ್ತೆ? ಹುಂ, ಕೇಳ್ದೊಡೆ ದೂರುವುದೆಂತು? ಇರ್ಕೆ ಒರ್ಮೆಗೆ    

ಸೈಸಿದೆಂ ನಂಶಮೆನೆ ಬಿದಿರೆಂಬ ಅರ್ಥಂ."   


ಭಾರತಿ. "ಎನ್ನರಸ, ತಿಳಿಯದೆ ಪೇಳ್ದುದರ್ಕೆ ಕೋಪಿಸದಿರ್‌ ;  

ಕಾಲ್ಗೆ ಎರಗುವೆಂ."   


ಕಬ್ಬಿಗರಾಳ್ದಂ.. (ಕೋಪಮಂ ನಟಿಸಿ), ಹುಂ, ತುಳಿದುಂ  

ಕಾಲ್ವಿಡಿವ ಒಂದಾಟಮಿದು. ಎಂದು (ಬಳಿಯಮುಸಿಕನಿರ್ದಂ).    


ಭಾರತಿ. “ಎಲೆ ನಲ್ಲ, ಇನ್ನುಂ ಮುನಿಸಿಟ್ಟೊಡೆ ಎನ್ನ ಎಕ್ಕೆ   

ಸರದ ಆಣೆ, ಮೇಣೇಂ ಪಟ್ಪೆಗುಪ್ಪಸೆದ ಆಣೆ."   


ಕಭ್ಬಿಗಂ-.. (ನಕ್ಕು), "ಕಾಂತೆ, ಇನ್ನದರೊಳಗಣ ಆಣೆಯು   

ಮುಂಟೆ?"   


ಭಾರತಿ... (ನಗೆಮುನಿಸಿಂ)..  "ಉಃ !  ನಾಣಲ್ಲದ ನುಡಿಯೆ?   

ಇರ್ಕೆ, 'ಸಂಕಲ್ಪದೊಳೆ ಪುಣ್ಯ ಕಾಲಂ ಕಳೆದುದು;' ಇನ್ನಾನುಂ ಕತೆ.   

ಯಂ ಪೇಳ್‌."   


ಕಬ್ಬಗಂ -- "ನೆಲ್ಲೆ, ಪೇಳ್ವೆಂ.  ಆದೊಡೆ ನೀನುಮಿಂತೆಲ್ಲಂ. ಅಸಂ   

ಬದ್ಭಾರ್ಥಂಗೊಂಡು ಬಾಯ್ಗೆವಂದಂತೆ ನುಡಿದೊಡೆ ನಿನಗುಂ ಎನ್ನ ನೇವಳ   

ದಾಣೆ, ಮತ್ತೇಂ ಎನ್ನ ಮುಂಡಾಸಿನಾಣೆ."   

   

ಭಾರತಿ..“ಕಾಂತ್ಕ ಏನಾಣೆಯ ಸಾಲಂ ತೀರ್ದುದಲ್ತೆ? ಇನ್ನಾ   

ನುಂ ಕತೆಯಂ ಪೇಳ್‌?   


ಕಬ್ಬಿಗಂ-_"ಸವಿನುಡಿವೆಣ್ಣೆ, ಬಳಿಯಮಾ ಶ್ರೀಕೃಷ್ಣಂ ಗೋವ್ಗ    

ಳಂ ಪೊರವವುತ್ತಂ-- 

೧೧--------------------------------------------------------------------------

ಭಾರತಿ--."ಊಃ! ಇದೇತರ ಕತೆಯೊ? ಏನಾಮಸಣದೊರ್ಳ್‌   

ಪುಟ್ಟಿದ ಬಿದಿರ ಕುಡಿ ಮುರುಂಟಿತೆ ?"   


ಕಬ್ಬಿಗಂ-- ಓ ಕಾಂತೆ! ಮರೆತೆಂ, ನೀನಿಂತೆಡೆಯೆಡೆಯೊಳೊಂ   

ದೊಂದಂ ಕೇಳ್ದೊಡೆ, ಅದಂ ಬಿತ್ತರಿಪಾಗಳೆ ಬೊಮ್ಮನ ಆಯುಸ್ಲಿಗೆ:  


ಮಂಗಳಮಕ್ಕುಂ. ಅಂತಿರಲ್‌ ಎಂತು ನೆನಂಬರಿಕೆ ಇರ್ಕುಂ."   


ಭಾರತಿ - (ನಕ್ಕು), ಎಂತಾದೊಡುಂ ನೀನೇ ಮೇಲ್‌, ಇನ್ನಾ   

ನುಂ ಪೇಳ್‌ ಪೇಳ್‌.   


ಕಬ್ಬಿಗಂ-_(ನಸುನಕ್ಕು). “ಮೇಲೋ ಕೀಳೋ, ಏಂತಾನು   

ಮಿರ್ಕೆ ಪರಿಹಾಸ್ಯಂ ಸಾಲ್ಗುಂ. ಬಳಿಯಂ, ಆ ಬಿದಿರ ಮೊಳೆ ಬೆಳೆಯೆ, ಕೆಲ   

ಗಾಲಂ ಕಳೆಯೆ, ಒಂದಿನಂ ವಾಸುದೇವಂ ಶ್ರೀಕೃಷ್ಣಂ ಆ ಯೆಡೆಯೊಳೆ, ಗೋ  

ವಳಕೂಡನೆ ಬರ್ಪುದುಂ, ಆ ಪಸುರ್ವಿದಿರಂ ಕಂಡಾ ಪರಮಾತ್ಮಂ, "ಓವೋ!?   

ಇದೇ ನೆಮ್ಮ ವೇಣೂದಯವೆ? ಇಂದಾಂ ಸಂತುಷ್ಟನಾದೆಂ, ನಂಬಿದರ ಮನ    

ದಿಷ್ಟಮಂ ಕೈಗೂಡಿಪದೆಂದೊಡೆ ಎಮ್ಮ ಕಜ್ಜದ ಕಳಸಮಲ್ತೆ!' ಎಂದು  

ಮಿತ್ರರೊಡನೆ ಆಮೂಲಮನೊರೆದು, ಅದರಿಂದೊಂದು ಭಾಗಮಂ ಕಡಿ   

ದು,  ಆ ಪೊಲೆಯನಂ ಪೊಂದಿದ ದುರಿತಂ, ಏಳುಂ ಜನ್ಮಕುಂ ಮೊಳೆ    

ದೋರಲಾಗದೆಂಬಂತೆವೊಲ್‌. 'ಸರಿಗೆಮಪದನಿ' ಎಂಬ ಸಪ್ತಸ್ವೆರಂಗಳ್ಗೆ 

ಅನಿತುಮೊಟ್ಟೆಯಂ ಗೈದು ವೇಣುವಾದ್ಯಮೆಂದೇ ಪಸೆರಿಟ್ಟು ಬಾಜಿಸಿದಂ.   

ಆ ಪೂಲೆಯನೆ ಅದರೆದೆಯ ಗಂಟು, ವಾದ್ಯಮಂ ಗೈವಾಗಳ್‌ ಅದು   

ಕಡಿದು ತೆಗೆಯೆಪಡುಗುಂ. ಎಲೆ ಕಾಂತಾಮಣಿ! ಭಗವಂತಂ ಶರಣ   

ರಕ್ತಣಕೆಂದು ಆ ವೇಣುವಂ ಧರಿಸಿದ ಬಿಸಯಂ ಅರಿಕಯಾಯ್ತೆ?"   


ಭಾರತಿ. “ಕಾಂತ! ಆಯ್ಕು ಅರಿಕೆಯಾಯ್ತು, ಮುಂಗತೆ

ಯೇಂ?"


ಕಬ್ಬಿಗಂ- ಬಳಿಯಮಾ ಶ್ರೀಕೈಷ್ಣಂ ವೇಣುವಂ  ಬಾಜಿಸುತ್ತುಂ 

ಕೆಳಯರೊಡನೆ ಬಿನದಿಸುತ್ತುಂ, ಇರ್ಪಾಗಳ್‌ ಒಂದು ಪಳೆಯ ಪಸುವಂ- 

ಬೆಂಬಿಡದೆ ಪೋಪ ಬತ್ತುಂಗರುವಂ ನೋಡಿ. 

೧೨--------------------------------------------------------------------------

ಮಣಿವರ್ಮನೆಂಬವನಂ " ಎಲೆ ಕೃಷ್ಣ, ಇದೋ, ಈ ಮೊಲೆ   

ಮರೆದೆ ಸೊರ್ಕುಂ ಬೋರಿ ನಿನ್ನಂ ನೆನೆಯಿಕುಂ."   


ಕೃಷ್ಣಂ.. “ಮಣಿವರ್ಮ, ಅದೆಂತು?"    


ಮಣಿವರ್ಮಂ --"ಕೃಷ್ಣ, "ಅನುಭವರಸಿಕೊ ವಿಜಾನಾತಿ'   

ಎಂಬ ನುಡಿಯಂತೆವೊಲ್‌ ಆನೆಂದೆ ಮಾತಿನ ಗುಟ್ಟಂ ನೀನಲ್ಲದೆ ತಿಳಿವ   

ನಾವಂ ?"   


ಕೃಷ್ಣಂ-- “ನಿನ್ನ ಮಾತಿನ ಅರ್ಥಂ ಆಕಾಶಪುಷ್ಪಮೆ; ಅದೆರಿಂ   

ಬರಿದಿ ಅನರ್ಥವಚನಂಗಳಂ ಎತ್ತದಿರ್‌."   


ಮಣಿವರ್ಮಂ--. "ಕೃಷ್ಣ! ಅನರ್ಥವಚನಂಗಳನೆತ್ತುವುದಾ   

ನೋ ಎನ್ನ ನುಡಿಯ ಅರ್ಥಮನರಿಯದ ನೀನೋ   


ಮಣಿವರ್ಮ--"ಅಂತಾದೊಡೆ ಅದೆಂ ಬಿತ್ತರಿಸಿ ಹೇಳ್‌, ಬರಿದೆ. ಈ   

ಕರುವನೆನ್ನೊಳ್‌ ಪೋಲಿಸಿದೊದೇನರ್ಥಂ?"   


ಮಣಿವರ್ಮಂ-..ಅರ್ಥಮೆ? ಬೇರೇನುಮಿಲ್ಲಂ; ನಿನಗೆ ಆವ   

ಬಿಸೆಯದೊಳುಂ ಅನುರೂಪಳಲ್ಲದ ರಾಧೆಯನೆ ನೀನೇಗಳುಂ ಬೆಂಬಿಡೆ  

ಯೆಂಬುದೇ."   


ಕೃಷ್ಣಂ--“ಇದೇಂ! ರಾಧೆ ಎನಗೆ ಅನುರೂಪಳಲ್ಲವೆ? ಅದೆಂತಾ   

ನಮಿರ್ಕೆ, ನಿನ್ನ ನುಡಿಯಂ ಕೇಳ್ದೊಡೆ ರಾಧೆಯಿನುಂ ಚೆಲ್ಸೆಯಾಗಿಯುಂ  

ಎನಗನುರೂಪಳಾಗಿಯುವಮೊರ್ವಳಿರ್ಪಳ್‌ ಎಂದಾಯ್ತಲ್ತೆ." 


ಮಣಿವರ್ಮಂ-- ಅದೇಮ ಪೊಸತೆ! 

 

ಕೃಷ್ಣಂ--"ಕೆಳೆಯ, ಅಂತಾದೊಡೆ ಅವಳಾರ್‌? ಪೇಳ್‌ ಕೃಷ್ಣನ   

ಒಂದು ಸಾಷ್ಟಾಂಗ ಪ್ರಣಾಮಂ."   


ಗುಣವರ್ಮನೆಂಬವ-"ಕಿಟ್ಟಿ, ಏನವಳೊಳುಂ ಕಣ್ಣೆ? ಅದು   

ತಾಗದು ಕಣಾ "  

೧೩------------------------------------------------------------------- 


ಕೃಷ್ಣಂ-"ಆ ಬಿಸಯಂ ನಿನಗೇಕೆ? 'ಪೋದೊಡೆ ಕಲ್ಲು ಬಂದೊಡೆ.   

ಪಣ್ಣು' ಎಂಬಂತೆವೊಲ್‌ ಪ್ರಯತ್ನಂಗೆಯ್ವೆಂ ಪೇಳ್‌."   


ಗುಣಂ--"ಅದಂ ಪೇಳೆಂ. ಪೇಳ್ದೊಡೆ ನಿನ್ನ ತಾಯ್ತಂದೆನವಿರ್‌   

ಗುಣವರ್ಮನುಂ ಎನ್ನಮಗಂಗೆ ದುರ್ಬುದ್ಧಿಯಂ ಕಲಿಸಿದನೆಂದೆನ್ನನುಂ      

ಬೈವರ್‌."   


ಕೃಷ್ಣಂ.--“ಓವೋ ನೀಂ ಮಾಪುನೀತಂ ಅಪವಾದಕೆ ಬೆದರ್ವ   

ವಂ. ನಿನ್ನ ನವೀನ ಸೌಜನಮೆಲ್ಲಮಿರ್ಕೆ; ಪೇಳ್ವೊಡೆ ಪೇಳ್‌; ಅಂತುಂ  

ಪೇಳದೊಡೆ ಪಡಿಯೊಂದು ಮನೆಯನುಂ ಪೊಕ್ಳು ಆ ಬೆಡಂಗುಗಾರ್ತಿಯಂ  

ನೋಡಿ ಮನಂಬಂದಂತ ಗೈಯದಿರೆಂ" (ಎಂದರೆಚಣವಮಿರ್ದು ಕೋಪಂ  

ಮುಡಿಯೆ) "ಎಲೆ. ಗುಣವರ್ಮ! ಪೇಳಯ್‌; ಫಲಮಿಲ್ಲದೆ ಬರಿದೆ   

ಪೇಳಲ್ವೇಳ್ಕುಮೆ ಎಂದೆಣಸೆದಿರ್‌, . ಆ ಮುದುಕಿ ಕಾಳಿಂದಿಯ ಮನೆ   

ಯಿಂ ಕಳ್ವ ಬೆಣ್ಣೆಯೊಳುಂ ಮೊಸರೊಳುಂ ಮಜ್ಜೆಗೆಯೊಳುಂ ಅರ್ಧಂ   

ಮೇಣೇಂ ಉಣಲ್‌ ಮುತ್ತಿನಂತಿರ್ಪ ತಂಗುಳಂ ಇಡಿಮಾಂಗಾಯುಮಂ  

ನನಗೀವೆಂ.”   


ಗುಣಂ--ಏನಾಂ ಲಂಚಂಗುಳಿಯೆಂದೆಣಸಿರ್ಪೆಯ? ಪೋ ಬೆಣ್ಣೆಯ:   

ಮಾತುಗಳ್ಗೆ ಮರುಳಪ್ಪನಲ್ಲಂ. ನೀನೆಂತಾನುಂ ಪ್ರಡುಕಿ ಆ ಮದಿರಾಕ್ಷ್ಮಿ   

ಯಂ ಮನಂಬಂದಂತೆ ಗೈವನಲ್ಲವೆ? ಅಂತಿರೆ ನಿನಗೆನ್ಸ ತೋಟಿಯೇಕೆ?"   


ಕೃಷ್ಣಂ--(ಗುಣವರ್ಮನ  ಕೈವಿಡಿದು) "ನಿನ್ನಂ ಕೆಳೆಯರೂಳೆಗ್ಗಳ   

ನೆಂದೆಣಿಸಿ ಬಿನದಕೆ ಅಂತೆಲ್ಲಂ ಮಾತಾಡಿದೆಂ ಅದರ್ಕುಂ ಕೋಪಮೆ?   

ಸಾಲ್ಗುಂ, ಸಾಲ್ಗುಂ?, ಇನ್ನಾದೊಡುಂ ಆ ಪೆಣ್ಮಣಿಯದಾರೆಂಬುದನುಸಿ   

ರಯ್‌, ನೀಂ ಹಾಯ್ಕಿದ ಕಡ್ಡಿಯನಾದೊಡುಂ ಮೀರಿ ನಡೆಯೆಂ,"   


ಗುಣಂ--"ಆಯ್ತು ಪೇಳ್ವೆಂ, ಕಡೆಗೆ ನಿನ್ನಬ್ಬೆಯೊ ಅಪ್ಪನೊ   

ಬೈದೊಡೆ ಆನೇನುಮಂ ಅರಿಯೆನೆಂಬೆಂ."   


ಕೃಷ್ಣಂ-..“ತಾಯ್ತಂದೆವಿರ ಬಿಸೆಯಮೊ? ಅದೆಂತಾನುಮಿರ್ಕೆ ಆ   

ಮುದುಕರಂ ಬೋಧಿಸಿ ಒದ್ದಿಪಫುದೇಂ ದೊಡ್ಡಿತೆ?” 

೧೪---------------------------------------------------------------------


ಗುಣಂ--"ಎನಗೇಂ? ಪೇಳ್ವೆಂ ಕೇಳಾದೊಡೆ, ನಿನ್ನೆ ರಾಧೆಗೆ  

ಚಂದ್ರಾವಳಿಯೆಂಬಳೊರ್ವಳ್‌ ತಂಗೆ ಇರ್ಪಳ್‌. ಆಕೆಗೆ ಪರಯಂ ಪದಿ   

ನಾರೊ? ಪದಿನೇಳೊ? ಪೆರ್ಚೇಂ? ಚೆಲ್ವಿಕೆಯಂ ಜಾಣ್ಮೆಗಳಂ ಅಂಗ   

ಭಂಗಿಗಳಂ ಬಣ್ಣಿಸಲ್‌ ಆ ಸೇಸಂಗುಮಸಾಧ್ಯಂ. ಬೊಮ್ಮನ ಕೈತಿರ್ದಿ   

ಕೆಯ ಸೆಚೇತನಮಾದೊಂದು ಬೊಂಬೆಯಂತಿರ್ಪಳ್‌."   


ಕೃಷ್ಣಂ--"ಏಂ ರಾಧೆಯ ತಂಗೆಯೆ? ಅಂತಾದೊಡೆ ಸಮಾಪದೆ   

ವಳಾಯ್ತು, ಆ ಬಿಸೆಯಂ ದೊಡ್ಡಿತಲ್ಲಂ." (ಎಂದಿನಿಸುಂ ಯೋಜಿಸಿ)   

ಅಂತಾದೊಡೆ ರಾಧೆ ಏಕೊರದಳಿಲ್ಲಂ!”   


ಗುಣಂ---"ಏಂ ನೀನಿನಿತುಂ ಮತಿವಿಕಳೆನೆ? ಉಸಿರ್ದೊಡೆ ನೀನ   

ವಳೊಳ್‌ ಕಣ್ಣಿಟ್ಟೊಡೆ, ಬಳಿಯೆಂ ಮುದುಕಿಗೆ ಎನಗೆ ಆವ ಗತಿಯೆಂದು"  


ಕೃಷ್ಣಂ--"ಎನ್ನ ರಾಧೆಯನಿತುಂ ಮುದುಕಿಯೆ?"   


ಗುಣಂ--(ನಕ್ಕು)“ಅಲ್ತಲ್ತು, ಮುದುತಿಯಲ್ತು "ಮೆಚ್ಚಿದೆಂಗೆ   

ಮಸಣಮುಂ ಸೊಗಂ' ಎಂಬ ನಾಣ್ಣುಡಿಯಂತ ನಿನ್ನ ಕಣ್ಗೆ ಪದಿನೆಂಟುಂ   '

ಬರಿಸದ ರತಿಸುಂದರಿಯೆ ನಿಜಂ."   


ಕೃಷ್ಣಂ--"ಪರಿಹಾಸ್ಯಮೆಲ್ಲಮಿರ್ಕೆ; ಆ ಚಂದ್ರಾವಳಿ ಎಲ್ಲಿರ್ಪಳ್‌?"  


ಗುಣಂ--"ಅದೀಗಳ್‌ ಅತಿಗಹನಂ. ನಿನ್ನ ಭಯೆದಿಂ ಆಕೆಯ   

ಗಂಡಂ ಚಂದನೆಂಬವಂ ಸೆಕುಟುಂಬಮಾಗಿ ತಾನಿಲ್ಲಿಗೆ ದೊರಮಿರ್ಪ ಸಿಂಧು  

ಗ್ರಾಮದೊಳ್‌ ಮನೆಗೈದಿರ್ಪಂ. ಬರಿಸೆಕೆ ಒರ್ಮೆಯಾದೊಡುಂ ಅಬ್ಬೆಯ   

ಮನೆಗೆ ಬಂದೊಡೆ, ಒಂದೇ ದಿನಂ, ತಪ್ಪಿದೊಡೆ ಎರಳ್ದೆವಸೆಂ ಮನೆಯೊಳ   

ಯಿಂಕೆಯೆ ಇರಲ್ಪೇಳ್ಕುಮೆಂದಾ ಚಂದ್ರಾನಳಿಗೆ ಚಂದನ ಆಜ್ಞೆಯಂತೆ."   


ಕೃಷ್ಣಂ--"ಆದೊಡೆ ಏನೀಗಳ್‌ ಬಂದ ವರ್ತಮಾನಮುಂಟೆ?  

ಮತ್ತೇನುಂ ಉಪಾಯಮಿಲ್ಲದೊಡೆ ಒರ್ಮೆ ಕಣ್ಣಪಾಸಮನಾದೊಡುಂ   

ಕಳೆವುದು," 

೧೫---------------------------------------------------------------------

ಗುಣಂ--"ನೆನ್ನೆ ಬಂದಿರ್ಪಳಂತೆ. ಆದೊಡೆ ಪೊರಡಲುಂ ಆಯ್ತು   

ಅಂತಿರ್ದೊಡುಂ ಒಳೆಗೆಯೆ ಇರ್ಪಳ್‌. ಏಂ ಗೈವುದು?  


ಕೃಷ್ಣಂ--"ಒಳಗೆಯೆ ಇರ್ದೊಡೇಂ? ಮೈ ಮರೆಯಿಸಿ  ಪೋಗಿ   

ಕೊಳಲಂ ಬಾರಿಸಿದೊಡೆ, ಕೇಳಲ್‌ ನವಯೌವನೆಯಾಕೆಯಿರ್ಕೆ, ಜೋ  

ಲ್ಮುದುಕಿ ಅವಳಜ್ಜಿಯುಂ ಪೆರಗೆ ನಿಲುಕುವಳ್‌, ಆ ಬಿಸೆಯಮಂತೆ ಪೋಕೆ  

ಬಂದಿರ್ಪುದು ನಿಜಮಲ್ತೆ?"  


ಮಣಿ--. "ನಿಕ್ಕುವಂ ಬಂದಿರ್ಪಳ್‌ ಆಂ ನೆನ್ನೆ ತಿಂಗಳಳ್ವೆಳಕಿನೊಳ್‌   

ವಿನೋದದಿಂ ತಿರುಗುತ್ತಂ ಆಕಯ ತವರ್ಮನೆಯ ಬಳಿಯೊಳೆ ಪೋ   

ದೆಂ.. ಆಗಳ್‌ ಆ ಮನೆಯೆ ಒಳಗಡೆಯಿಂ ಏನೇನೋ 'ಕುಸು ಕುಸು'   

ಕೇಳ್ದುದು. ಇದೇನೆಂದು ಕಿವಿಗೊಟ್ಟು ಕೇಳೆ, ಆ ಚಂದ್ರಾವಳಿಯೊಳೆ   

ಅವಳಬ್ಬೆ ಏನೋ ನಾಣ್ಣಡಿಗಳನೊರೆವುತುಂ ಕೇಳುತುಮಿರ್ದಳ್‌, ಎಡೆ   

ಎಡೆಯೊಳ್‌ ಮೆಲ್ಲನೆ ಮಾತಾಡೆನ್ನ ಮಗಳೆ! ಆ ಕೃಷ್ಣಂ ಈ ಸಮ   

ಯದೊಳ್‌ ಪೆರಗೆ ನಿಂದು, ಎಳೆವೆಣ್ಗಳ್‌ ಆರಾದೊಡುವಮಿರ್ಪರೊ ಎಂದು  

ಸೊರಮನಾಲಿಪ ಕಟ್ಟಿಳೆಯುಂಟು, ಅಂತೆ ಕೇಳ್ದು ನೀನೆಂದರಿತೊಡೆ, ನಿನ್ನ   

ನೆಂತುಂ ಬಿಡಂ, ತಾಗಿದ ಬೆರಲ್ಲೆಯೆ ತಾಗುವಂತೆ ಕಡೆಗೆನಗಿನ್ನೊಂದಪ   

ವಾದೆಮುಂ ನೆಲೆಗೊಳ್ಗುಂ". ಎಂದು ಪೇಳುತಿರ್ದೆಳ್‌. ತದನೆಂತರಂ, ಅಬ್ಬೆ!  

ಇಸ್ಸಿ--ಇದೇತರ ಮಾತು "ಕಾಡೊಳ್‌ ಪುಲಿಯಿರ್ಪುದೆಂದು ನಾಡಿಂದೊ   

ಕ್ಕಲಂ ತಗೆವುದೆ?" ಎಂಬ ನಾಣ್ಣುಡಿಯುಂ ಕೇಳ್ದುದು.   


ಕೃಷ್ಣಂ.. ಆಃ! ನಿನ್ನ ನುಡಿ ಅವಳ್‌ ಬಲ್ಸೊರ್ಕುವೆಣ್ಣೆಂಬುದಂ   

ಸಮರ್ಥಿಪುದು. ಮಾತ್ರಮಲ್ಲದೆ ಆಕೆಯೆ ವಾಕ್ಯಸರಣಿಯೊಳ್‌, ರಸಿಕೆ 

ಯೆಂಬುದುಂ ಗ್ರಾಹ್ಯಮೆ, ಒಳ್ಳಿತಾಯ್ಮು, ಅಂತಿರ್ಪಳೊಡನೆ ವಿಹರಿಸಿದನ  

ಜನ್ಮಮಲ್ತೆ ಸರ್ವೋತ್ಕೃಷ್ಟಂ? ಹುಂ, ರೋಗಿಗೆ ಮರ್ದೇ ಪಾಲಾಯ್ತು;   

ಸಾವನ್ನವರಂ, ನಿನ್ನುಪಕಾರಂ ಸ್ಮೃತಿಪಥಮನಗಲದು ಕೃಷ್ಣನ ನಂದನ 

ಮೇಗಳುವಮಿರ್ಕೆ."   


ಗುಣಂ.-. "ಓ ಕೃಷ್ಣ, ಪರಿಗತ್ತಿಯೆಂದು ಕಲ್ಲಂ ಕಡಿದೊಡೆ 

೧೬----------------------------------------------------------------------------- 

ಮಡಿಯದೆ? ಗುಣವರ್ಮನ ಮಾತಿದೆಂದು ಸೆರಂಗಿನೊಳ್‌ ಗಂಟಿಕ್ಕಿ   

ಕೊಳ್‌ ಆ ಚಂದೆನರಸಿಯಂ ಮನದೊಳೆ ಕೂಡಲ್ವೇಳ್ಕುಮಲ್ಲದೆ,  ಕಣ್ಣೊ   

ಳೊರ್ಮೆ ನೋಳ್ಬುದುಂ ಅಸಾಧ್ಯಮೆಂದೆಣಸು. ಆಕೆ ಬಲ್ಗಡುಸುಗಾತಿ   

ಕಣಾ.   


ಕೃಷ್ಣಂ... (ನಕ್ಕು, “ಎನ್ನ ಜಾಣ್ಮೆಯೆಲ್ಲಂ ಕಾರ್ಯದೊಳಿ   

ಮೊಳಗುಮಲ್ಲದೆ ಬಾಯೊಳ್‌ ಪೂರಟು ಪಾಳಾಗದು. ಬಳಿಯಂ ನೀಮೆ   

ಕೊಂಡಾಡಲುಂಟು. ಒಂದು ಕಡೆಗಣ್ಟೋಟಮಂ, ಮೇಣೊಂದು ಮು   

ಗುಳ್ನಗೆಯಂ, ಅಂತುಮೊಳಂಗಡೆಯೊಳೆ ಇರ್ದೊಡೆ ಒಂದು ಕೂಳಲ ಸೆವಿ  

 ಸೆರಮನಾದೊಡುಮಾ ನಿಮ್ಮ್ಮ ಗಡುಸುಗಾರ್ತಿ ಮೀರಿದೊಡೆ ತದನಂತರಂ   

 ಪೇಳಿಂ ಹುಂ "ಕೈನೆಲ್ಲಿಗೆ ಕೈಪಿಡಿಯೇಕೆ?'" ಎಂದು. ಚಂದ್ರಾವಳಿಯೆ.   

 ಡೆಗೆ ಪೊರಡಲ್‌ ಸನ್ನದ್ಧನಾಗಿರ್ದಂ.   

 

 ಎಂಬಲ್ಲಿಗೆ ಚಂದ್ರಾವಳೀವಿಲಾಸದೊಳ್‌ ಪ್ರಥಮಾಶ್ಶಾಸಂ.   

 

 ಅನ್ನೆಗಮಿತ್ತಮಾ ಚಂದ್ರಾವಳಿ-- ( ತನ್ನಬ್ಬೆಯ ಕಾಲ್ಗೆರಗಿ)   

“ಅಬ್ಬೆ ಈ ಬಿಸಿಲಜಳಮಂ ಸೈಸೆಂ, ಆಂ ಕೆಳದಿಯರ ಒಡಂಬಿರಸು ಉಪ   

ವನಕ್ಳದಿ ಜಲಕೇಳಿಗೊಂಡು ಬರ್ಪೆಂ, ಏನಾಗದೆ?"   


ಕುಲವತಿ-. (ಮಗಳಂ ತೆಗದಪ್ಲಿ ಮುಂಡಾಡಿ). "ಬೇಡಂ,   

ಪೆರಗೆಡಿಯಿಡಲ್‌ ಬೇಡ, ಆಂ ಮೊದಲೇ ಪೇಳ್ದಿರ್ಪೆನಲ್ತೆ! ಆ ಕೃಷ್ಣಗೆ  

ಮುದುಕಿಯೆಂದಿಲ್ಲಂ ಜೌವನೆಯೆಂದಿಲ್ಲಂ, ಮೇಣೇಂ ನೋಡಿದ ಒಂದು ಪೆಣ್ಣಿ‌  

ರುಂಪಯಾದೊಡುಂ ಪುತ್ತಂ ಪುಗದು, ನೀನೆ ತಿಳಿದಿರ್ಪೆಯಲ್ತೆ ನಿನ್ನ   

ಅಕ್ಕನಂ ರಾಧೆಯಂ ಅವಂ ಬಸಂಗೈದುದಂ. ಪೆರವೆಣ್ಣಳಂ ಕಿಡಿಪುದು   

ಅವನ ಪುಟ್ಟಿನ ಕಜ್ಜಂ. ಅಂತಿರೆ ನವಯೌವನೆಯಂ, ತ್ರಿಲೋಕಸುಂ   

ದರಿಯಂ, ನಿನ್ನಂ ಅವಂ ಕಂಡೊಡೆ ಬಳಿಯಂ ಐಂ ಪೇಳ್ವುದು? "ಪೂವಂ-  

ಕುಯ್ವೆಡೆಯೊಳ್‌ ತುಂಬಿಯೊಂದೆರಗಿ ಮೊಗಮನಿನಿಸುಂ ಕೀರಿ ಇನಿಸುಂ ಗಾ  

ಯಮಾಗೆ, ಬಳಿಯಂ ಸಜ್ಜೆವನೆಯೊಳ್‌ ಕಂಡು ಇದೇನೆಂದು ಸಂದೆಗಂ- 

೧೭-------------------------------------------------------------------

ಗೊಂಡು ಕೋವಪಿಸಿ ಅಸಹ್ಯಮಾಗಿ ಬಡಿದು. ಎರಳ್ಮೂರ್ದೆವಸಂ ವಿಮು  

ಖನಾಗಿರ್ದಂ ಕಾಂತನೆಂದು" ನಿನ್ನ ಗಂಡನ ಪರಿಯಂ ನೆನ್ನೆ ಇರುಳ್‌ ನೀನೆ  

ಪೇಳ್ದೀರ್ಪೆಯಲ್ತೆ? ಅದರಿಂ ಉದ್ಯಾನದಗಮನಮಂ ಮಾಣ್‌, ಎಂತುಂ   

ಸೆಕೆಯಂ ತಾಳಲಾರೆಯಾದೊಡೆ ಕೆಳದಿಯರೊಡನೆ ಅಂತಃಫುರದೊಳೆ ಪನಿ   

ನೀರ ಕೊಪ್ಪರಿಗೆಯೊಳ್‌ ಜಲಕವಾಡಿ ಕುಳಿರ್ಗೊಳಲಕ್ಕುಂ"ಎಂದು  

ಬುದ್ಧಿವೇಳ್ವತಾಯ್ಗೆ.   


ಚಂದ್ರಾವಳಿ--"ಅಬ್ಬೆ, ಆ ಮೇಪಿನ ತರಳಂ ಕೃಷ್ಣನೆನಿಸರವಂ,   

ಅವಂಗೆಯೆ ಬೆದರ್ದಪುದು? ಪೂಗಳೂಳೆಲ್ಲಂ ತಿರುಂಗಿದೊಡುಂ ತುಂಬಿ  

ಸಂಪಗೆಯಂ ಸೋಂಕುಗುಮೆ? ನಿನ್ನ ಕೃಷ್ಣಂ ಏನೆನ್ನಂ ಕಣ್ಣೆರೆದೀಕ್ಷಿ   

ಪಂ? ಅಕ್ಕನಂ ವಶೀಕರಿಸಿದುದಿರ್ಕೆ 'ಬಸಿರೊಂದಾದೊಡುಂ ಬಾಯಿ   

ಎರಡಲ್ತುಮೆ?' ಎಂಬ ನಾಣ್ಣುಡಿಯಂತೆ ರಾಧ ಅವನಂ ಪೊಂದಿದಳ್‌.   

ಅದಿರ್ಕೆ, ಪಗಲಿನ ಗುಮ್ಮನುತೆ ಮನೆಯೊಳಗೆ ಎಂತಿರ್ದೊಡುಂ ಅದಾ   

ವಸೊಗಂ? ಮೇಣುಂ, ಪೆಣ್ಬಳಗಂ ಇನಿತುಂ ಇರ್ಪಾಗಳ್‌ ಅವಂ   

ಗೈವುದೇಂ? ಆಂ ಫೋಗಿ ಬರ್ಪೆಂ."   


ಕುಲವತಿ_"ಕೇಳೆನ್ನ ಕೊಂಡಾಟಿದ ಬೊಂಬೆ, ಈ ಪೆಣ್ಣಳು   

ಮಂ ನಂಬುವುದೆ! ಇವರಲ್ಲರುಂ ಕೃಷ್ಣನ ಮೆಯ್ಗಾಳಿ ಬಡಿದೊಡನೆಯೆ   

ನಿನ್ನಂ ಬಿಟ್ಟು ಅವನೆಡೆಗೆಯೆ ಪಾರ್ವರ್‌."   


ಚಂದ್ರಾವಳಿ---“ಪುಟ್ಟು ಮೊದಲ್‌ ಎನಗೆ ಕೆಳದಿಯರ್ಕಾಳಾದಿ   

ವರ್‌ ಎನ್ನಂ ಬಿಡರ್‌; ಅಂತುಂ ಬಿಟ್ಟೊಡುಂ, "ದಾರವಂದಂ ಬಲಮಾ   

ಗಿರೆ ಚೋರನೇಂಗೈವಂ?' ಎಂಬಂತೆವೊಲ್‌ ಎನ್ನ ಮನಂ ದೃಢಮಿರ್ಪಾ   

ಗಳ್‌" ಅವಂ ಗೆಯ್ವುದೇಂ ?   


ಕುಲವತಿ-- “ಮಗಳೆ, ನೀನಾಕೃಷ್ಣನಂದಮನರಿಯದೆ ಅವನಂ   

ಪುಲ್ಗೆಬಗೆವೆ; ಆತನೆಂತಾದೊಡುಂ ಗಂಡು, ನೀಂ ಪೆಣ್ಣು, ಆಂತಿರೆ ನಿನ್ನ  

ಸಾಸೆಮೆಲ್ಲಮವನೊಳ್‌ ಬಿರುಗಾಳಿಯ ಪಳ್ತಿಯೆನಿಜಂ. ಅಂತುಮಲ್ಲದೆ   

ಪೆಣ್ಗಳಂ ಮರುಳ್ಗೆಯ್ವೊಡೆ ಮಾರಂ ಗೈದೊಂದು ವಶ್ಯ ಯಂತ್ರಮೆನಲಿರ್ಪಂ 

೧೮-------------------------------------------------------------------------

ಪಲವೇಂ, ಆ ನಂದಸುತಂ ನಿನ್ನಂ ಕಂಡೊಡೆ ಎಂತಾನುಂ ಬಿಡಂ ಸಂದೆ  

ಗಮಿಲ್ಲಂ, ಅಲ್ಲದೊಡೆ ನಿಕ್ಕುವಂ ಬೆಂದ ಭತ್ತಮಂ ಪುಟ್ಟಿಪೆಂ, ಪಿರಿಯರ   

ಮಾತಂ ಮೀರಲಾಗದೆಂಬರ್‌ ತಿಳಿದವರ, ಅದರಿಂ ಜಲಕೇಳಿಗೆಂದಿಯ್ದಿ  

ಅಪವಾದದೆ ಬಿತ್ತಿಗೆ ನೀರಂ ಪೊಯ್ಯದಿರೆನ್ನ ಮಗಳಿ."   


ಚಂದ್ರಾವಳಿ-"ಉಃ ಸಾಲ್ಗುಮಾತನ ಪೊಗಳ್ಕೆಯೆಲ್ಲಂ, ನಿನ್ನಂ   

ಮಾತಾಡಿ ಜಯಿಸಲ್‌ ಆಂ ಸೆಮರ್ಥಳಲ್ಲಂ, ಅದೆಂತಾನುಮುರ್ಕೆ"--   

(ಎಂದು ಚಲವಿಡಿದು. ಪೊರಡಲ್‌ ಉಜ್ಜುಗಿಫುದುಂ,)   


ಕುಲವತಿ-_"ಮಕ್ಕಳ್‌ ತನ್ನಿಂ ದೊಡ್ಡಿದರಾಗೆ ಅವರ ಮಾತನೆ   

ಕೇಳ್ವುದು. ಮತ್ತೇಂ ಗೆಯ್ವುದು? ಆದೊಡೆ ಬನದೊಳ್‌ ಕಳಕಳದ್ದನಿ   

ಯಂ ಗೈಯದಿರಿಂ , ಕಂಕಣಮಂ ಅಲುಗಿಸದಿರಿಂ, ಮೆಯ್ಯಪರಿಮಳಂ  

ಪಸರಿಸೆದಂತೆ ಘೋಷಮಂ ಬಲಿದು ಮುರ್ಚುವುದು ಪೆರ್ಚೇಂ? ಕಾಲ   

ಮಂ ಕಳೆಯದೆ ಜತನದಿಂ ಬರ್ಪೆದು" ಎಂದು ಬುದ್ದಿವೇಳ್ದು ಕೆಳದಿಯ   

ರಂ ಒದವಿಸಿದಳ್',   


ಚಂದ್ರಾವಳಿ--"ಅಬ್ಬೆಯ ನುಡಿಗೆ ಬಾಯೊಳ್‌ ಆಯ್ತು" ಎಂದು  

ಕೆಳದಿಯರೊಡನೆ ದಂಡಿಗೆಯೊಳೈದಿದೆಳ್‌,   


ಅನ್ನೆಗಮಾ ಶ್ರೀಕೃಷ್ಣನ ವಿದೂಷಕನೆನೆ ಚರಿಸುತಿರ್ದ ಮಂದೆ   

ಮಾರುತಂ, ಇದೋ ಸಮೀಪ ಕೈತಂದಿರ್ಪಳ್‌ ಆ ಬಾಲೆಯಿಂದು   

ತಿಳಿಸುವಂತೆ, ಪೆಣ್ಗಳೊಡಂಬೆರದ  ಚಂದ್ರಾವಳಿಯ ಮೆಯ್ಯ ಪರಿಮಳ   

ಮಂ ಕೊಂಡು ಗೋಪಾಲನಾಧಥನ ಮೂಗಿಗೆ ನಾಂಟಿಸಲೊಡಂ,, ಆ   

ಕೃಷ್ಣಂ "ಓವೋ! ಇದೇಂ ಪರಿಮಳದೊಂದೇಳ್ತರಂ  ಆ  ಚಂದ್ರಾವ   

ಳಿಯ ಶರೀರ ಗಂಧಮಂ ಕೊಂಡು ಪರಮಾನಂದದಿಂ ನೀನುಂ ಇನಿಸುಂ   

ಪರೀಕ್ಷಿಸಲೆಂದು ತಣ್ಣೆಲರೆ ತಂದಿತ್ತನೆ? ಅಂತಾದೊಡೆ ಓ ನಲ್ಗೆಳೆಯ ತಂಗಾ   

ಳಿಯೆ! ಆ ನಲ್ಲೆಯಂ ಫುಲ್ಲಾಕ್ಷಿಯಂ ಮುಟ್ಟಿದ ನೀನೆ ಕೃತಾರ್ಥಂ;   

ನಿನ್ನ ಸದಾಗತಿತ್ವಂ ಸಫಲಮಾಯ್ತು; ಆರ್ಗುಂ ಪೆಣ್ಗಳ ಬಿಸಯದೊಳ್‌  

ಮಚ್ಚರಂಗಡ, ಮೇಣೇಂ ಎನಗುಂ ಮಚ್ಚರಮೆ, ಅಂತಿರೆ ನೀನೆನ   

೧೯-------------------------------------------------------------------

ಗೊರೆದುದು ನಿಜಮಾದೊಡೆ ಏಗಳುಂ ಆಂ ನಿನ್ನ ನಿರ್ಮತ್ಸರತಗೆ ಕೃತಜ್ಞ   

ನಾಗಿರ್ಪೆಂ" (ಎಂದಲ್ಲಿಂ ಪೊರಟೈತಂದು ಇನಿತುಮಾಲಿಸಿ ಬೆರಗಿಂ) "ಆಃ   

ಇದೇಂ ನಲ್ಸರಂ?--(ಯೋಚಿಸಿ) ಓವೋ ಮಾನಿನಿಯರ ಸಲ್ಲಾಪದ   

ಬೆಡಂಗು. ಏನಾ ಚಂದ್ರಾವಳಿಯೆ ಬಂದಿರ್ಪಳೆ! ಅಂತಾದೊಡೆ  ಎನ್ನ   

ಮುಂಜನ್ಮದ ಪುಣ್ಯಮೆ ನಿಜಂ--ಇರ್ಕೆ; ಇನಿತರೊಳೇಂ ಕಕ್ಕಾಬಿಕ್ಕಿ?      

 ನೋಳ್ಬೆಂ” ಎಂದು ಮುಂದೈದಿ ಒಂದಶೋಕ ವೃಕ್ಷದ ಮರೆಯೊಳ್‌ ನಿಂದು  

ನಿಲುಕಿ ನೋಳ್ದುದುಂ, ದಂಡಿಗೆಯಿನಿಳಿದು ತರುಣಿಯರೊಡ್ಡಿನೊಡನೆ ಆ  

ಚಂದ್ರಾವಳಿ ಅಲ್ಲಿನ ತಣ್ಗೊಳಕೈತಂದೆು ಜಲಕೇಳಿಗೆಂದು ಪಟ್ಟಿದುಗುಲಂಗ   

ಳಂ ಪೆರ್ಚಿನ ಭೂಷಣಂಗಳುಮಂ ದಡದೊಳ್‌ ತಗೆದಿಟ್ಟು ಸೆರೋವರಕ್ಕಿಳಿ   

ದಿರ್ದಳ್‌.  


ಒಡನಾಸುದೇವಂ--"ಏನಿದೆನ್ನ ಬಗೆಯಂತೆ ಬಂದೆವಳಿವಳ್‌   

ಚಂದ್ರಾವಳಿಯೆ? ಇರ್ಕೆ” ಎಂದು ಕೆಲವುಂ ಕಲ್ವರಲ್ಗಳಂ ಕೊಂಡು ಆ   

ಕೊಳದ ಸನಿಹದ ತಮಾಲವೃಕ್ಷಮನೇರ್ದಂ.   


ಅನ್ನೆಗಮಾ ನೀರಾಟದೊಳ್‌ ಸೊಗಯಿಸುವ ಬಾಲಕಿಯರೊಳ್‌   

ಒರ್ವಳ್‌--ಎಲೆ ಚಂದ್ರಾವಳಿ, ಈ ಕೊಳದ ದಡೆಂಗಳ ಮರಂಗಳಂ   

ಅಡರ್ದ ಲತೆಗಳ್‌ ಲತಾಂಗಿಯಲ್ಗೆ ಒಳ್ದಾರಿಯಂ ತಿಳಿಯಿಸುವಂತಿರ್ಪುವಲ್ತೆ?   


ಕೃಷ್ಣಂ-(ತನ್ನೊಳೆ ತಾಂ) “ಓ! ಈಕೆಯೆ ಚಂದ್ರಾವಳಿ; ಇನಿ   

ಸುಂ ಕೇಳ್ವೆಂ, ಪೆಣ್ಗಳ ಅಂತರ್ಗತಂಗೆಳೆಲ್ಲವುಂ ಬಿರ್ಚುಗುಮೀಗಳ್‌."  


ಚಂದ್ರಾವಳಿ--(ನಕ್ಕು,) ಕೆಳದಿ, ಪೆಣ್ಗಳ ಜನ್ಮಮುಂ ಅಂತೆಯೇ   

ಸಾನುರೂಪಪ್ರಿಯರಂ ಪೊಂದಿದೊಡೆಯೆ ಸಾರ್ಥಕಂ.   


ಕೃಷ್ಣಂ--(ತನ್ನೊಳೆ) “ಎಲೆ ಕಾಂತೆ, ಈ ಗುಟ್ಟನೆಣಿಸುವ ಬಲ್ಮೆ   

ಯದು ನಿನ್ನೊಳಿರ್ದೊಡೆ ಆ ಚಂದನನೇಕೆ ಸೇರ್ದೆ? ಶಿವ! ಶಿವ! ನಿನ   

ಗುಮಾ ಕುರೂಪಿಯೊಡನೆ ಬಿನದಿಪ ಕಾಲಮೆ! ಕಸ್ಪಂ ಕಸ್ಟಂ! ಅವನ 

೨ಂ------------------------------------------------------------------


ಮೊಗಮೋ ರಾಹುಗ್ರಸ್ತ ಚಂದ್ರಂ, ಅಂಗಂಗಳೋ ಕಲ್ಗಟ್ಟಿಗೆಗಳ್‌, ರೂ   

ಪಮೋ ಮೀಯಿಸಿದ ಕೊಳ್ಳಿ, "   


ಸಖಿ--"ಚಂದ್ರಾವಳಿ, ಈ ಕಮಲಿನಿ ಅನುಕೂಲಮಪ್ಪ ನೀರಾಂ   

ತರಸಂಗೆದಿಂ ನಿನ್ನಂ ನಗುವಂತ ಏಂ ಮನಂಗೊಳಿಪುದು ನೋಡ!"  


ಕೃಷ್ಣಂ--(ತನ್ನೊಳೆ) "ಈಕೆ ಬಲ್‌ಜಾಣೆ-ನಲ್ನುಡಿಯನೆ ಪೇಳ್ದಳ್‌;   

ಮನಕೊಪ್ಪಿದ ನೀರನನೆ ಪೊಂದುವ ಕಾಂತೆಯಂತೆ ಈ ಕಮಲಿನಿ ತಿಳಿ   

ನೀರನೆ ಪೊಂದಿರ್ಪುದು ತಕ್ಕುದಲ್ತೆ,"   


ಚಂದ್ರಾವಳಿ--"ಕೆಳದಿ, ಇರ್ಕೆ, ಆದೊಡೆ ಅದರಿಂ ಎನ್ನಂ   

ನಗುವಂತೆವೊಲ್‌ ಅಪ್ಪುದೆ?"  


ಸಖಿ-"ಆದನಾನರಿಯಂ ನೀನೆ ಯೋಚಿಸು."   


ಕೃಷ್ಣಂ--"ಓ ಈಕೆ ಎನ್ನೆ ನುಡಿಗೆಯೆ ಸಾಯಂ ಗೆಯ್ವಳ್‌."   


ಚಂದಾ)ವಳಿ--(ಒಡನರಿತು ನಸುಮುನಿಸಿಂ) "ಸಖಿ, ಸಾಲ್ಗುಂ   

ನೀನೆನ್ನಂ   ಕೋಪಿಸದಿರ್‌."   


ಸಖಿ--(ನಕ್ಳು) "ಕೆಳದಿರನ್ನೆ, ನಿನಗೇಂ ಕೋಪಂ? ನಿನ್ನ ಗಂಡಂ   

ಕುರೂವಿ, ಆದೆರಿಂ ನಿನಗನುರೂಪನಲ್ಲನೆಂದು ಆನೇಂ ಬಾಯಿಂದುಸಿರ್ದೆನೆ?"  


ಚಂದ್ರಾವಳಿ--"ಬಾಯಿಂದುಸಿರ್ದೊಡೇಂ ಪೆರ್ಚೆ? ಈ ನುಡಿಯ   

ಜಾಣ್ಮೆಯನೆಲ್ಲಂ ಆರ್ಗೆ ಕಲಿಸುವುದು?"    


ಸಖಿ--"“ಆಂ ಪೇಳ್ದುದು ತಪ್ಪಿತಮಾಯ್ತು, ಕೋಪಿಸದಿರ್‌, ನಿನ್ನ   

ರಸಂ ಅತಿ ಸುಂದರಂ, ಪಲವೇಂ, ಕೃಷ್ಣನಿನುಂ ಚಲ್ವಂ, ಸಂತಸ   

ಮಾಯ್ತೆ?"   


ಚಂದ್ರಾವಳಿ--(ಬಲ್ಮುನಿಸಿಂ) "ಚಿಃ ಸಾಲ್ಗುಂ ನಿನ್ನ ಮೇಪಿನ   

ಬೆಣ್ಣಗಳ್ಳನ ಕೃಷ್ಣನ ನುಡಿಯಂ ಎನ್ನೊಳ್‌ ಎತ್ತದಿರ್‌, ಜತನಂ ಜತನಂ” 

೨೧`---------------------------------------------------------------------

ಕೃಷ್ಣಂ--(ಮನದೊಳ್)  “ಅಮಮಾ! ಇವಳ್‌ ಬಲ್ಸೊರ್ಕುವೆಣ್ಣು!   

ಏನೆನ್ನಾಸೆಗೆ ಸೊನ್ನೆಯೆ? ಇರ್ಕೆ” (ಎಂದು ವಿಳ್ಳನಿತುಂ ಮೈದೋರದಂತೆ   ಕೊಂಬೆಗಳೆಡೆಯೂಳ್‌ ಅಡಂಗಿ ಚಂದ್ರಾವಳಿಯ ಮೈಗೊಂಡು ಕಲ್ಬರಲಂ   

ಬಿಸುಂಟಂ.)   


ಚಂದ್ಅವಳಿ--(ಬಲ್‌ ಬೆರಗಿಂ ಸುತ್ತಂ ನೋಡಿ) "ಇದೇಂ   

ಆರೀಕಿರುಗಲ್ಲಂ ಮೆಯ್ಗೆ ಇಡುಕಿದರ್?" ಎಂಬನಿತರೊಳ್ ಮತ್ತೊಂದುಂ  

ಬೀಳ್ದುದು... ಒಡನುರಿದು ಚಂದ್ರಾವಳಿ, “ಇದಾರೋ ಕೂಳರ ನಿಜಂ,   

ಚಂದವನಂ ತಿಂಬೆನೆಂದು ಇಚ್ಛಿಸುವ ಮಂಕಡದಂತೆ ಮನದೊಳ್‌ ಏನೇನೊ   

ಯೋಜಿಸಿ ಅಡಂಗಿ ಕಲ್ಲನಿಸುವರ್‌. ಕಣ್ಗೆ ಕಂಡೊಡೆ ಮರ್ದಂ ಗೆಯ್ವೆಂ"   

ಎನೆ ಮತ್ತೊಂದುಂ ಇನ್ನೊಂದು. ಬೇರೊಂದುಂ ಎಂದಿಂತು ಪಲವುಂ ಕಲ್ಲಳ್‌   

ಬೀಳ್ದುವು. ಆಚಣಂ ಆ ಪೆಣ್ಗಳೆಲ್ಲರುಂ-"ಸಖಿ, ಚಂದ್ರಾವಳಿ! ಇದಲ್ಲಮಾ   

ಕಿಟ್ಟಿನ ಕಲಸೆಮೆ ನಿಜಂ. ಅದರಿಂ ಇನ್ನಿಲ್ಲಿರಲಾಗದು, ಅಂತುಂ   

ಇರ್ದೊಡೆ ವಿಮಗೊಂದಪವಾದಂ,"   


ಚಂದ್ರಾವಳಿ-(ಮನದೊಳ್‌ ಬೆದರ್ದೊಡುಂ ಅಭಿಮಾನದ   

ಒಪ್ಪಮಂ ಪೂಸಿ) "ಕೆಳದಿಯರಿರ! ಆ ಕೃಷ್ಣನ ಪೋಕತನಂ ಎಲ್ಲಮಂ   

ತಿರ್ಕೆ, ಅದಾವಗಣ್ಯಂ? ಆದೊಡುಂ ಬಂದು ಕಾಲಂ ಪಿರಿದಾಯ್ತು,   

ಅಬ್ಬೆಯ ಮಾತಂ ಮೀರಲಾಗದು ಅದರಿಂ ಪೋಪಂ." ಎಂದು ಕೊಳದಿಂ   

ಮೇಲಡರ್ದು ದುಗುಲಂಗಳನುಟ್ಟು, ತೊಡವುಗಳಂ ತೊಟ್ಟು, ಬಂದಂತೆ   

ಪೊರಟು ಪೋದರ್‌.   


ಅನಿತರೊಳಾ ವಾಸುದೇವಂ ಮದದಿಂದಿಳಿದು ಕವಲ್ಹಾರಿಯೊಳ್‌   

ಮುಂದೋಡಿ, ತಿರುಂಗಿ ಆ ಪೆಣ್ಗಳ ಮಾರ್ಗಕೆ ಇದಿರಾಗಿ ದಾರಿವೋಕ   

ನಂತೆ ನಡೆತಂದಂ. ಆಗಳ್‌ ತರುಣಯರ್‌ ಕೆಲರ್‌ ನಾಣ್ಚಿದರ್‌; ಪಲರ್‌   

ಬೆದರ್ದೆರ್‌, "ಅದೋ! ಕೃಷ್ಣಂ ಬಂದಂ, ಬಂದಂ, ಎಂಬೊಂದು ಕಳಕಳದ   

ಒಳಮಾತಿನ ಗುಜುಗುಜು ಪೆಣ್ಗಳೊಡ್ಡಿನೊಳೆಲ್ಲಂ ತುಂಬಿದುದ್ಕು ಅನಿತ     

೨೨------------------------------------------------------ 

ರೊಳಾ ಚಂದ್ರಾವಳಿ ದಂಡಿಗೆಯೊಳ್‌ ನಿಲುಕಿ ಕೃಷ್ಣನಂ ನೋಡಿ ಚಲ್ವಿ   

ಕೆಗೆ ಮರುಳಾಗಿ ಅಂತರ್ಮಾನಂ ಪೋದೊಡುಂ ಬಹಿರ್ಮಾನಂ ಕಿಡದೆ.   

“ಓವೋ! ಈತನ ಕತದಿಂದಮೆ ಇನಿಸಂ ಕೋಳಾಹಳಂ' ಮೂರುಂ   

ಮಾಂಗಾಯನಿತರ ಬಾಲನಿವನಾವಲೆಕ್ಕಂ? ಇಲಿಯಂ ಪುರಿಯಂ ಗೈವ   

ಎಣಿಕೆಗಳೆಲ್ಲವುಂ ಒಂದೆಡೆಯೊಳಿರ್ಕೆ,"   


ಎಂಬನ್ನೆಗಮಾ ಶ್ರೀ ಕೃಷ್ಣಂ ಮುಂಬಂದು, "ಓವೋ! ಇದಾರ್‌,   

ಎನ್ನ ನಚ್ಚಿನ ನಲ್ಲೆಯರಲ್ವೆ! ನೀಮಿನಿಬರುಂ ಒಡಂಗೂಡಿ ಈ ಬನಕೆ ಏಕೆ   

ಬಂದಿರ್ಪಿರಿಂ, ಪರಂತಪಂಗೆ ಕರುಣೆಯುಂಟೆ? ನಿಮ್ಮ ಬಾಗಿದ. ತಳಿ   

ರ್ಮೆಯ್ಯ ಬಡತನಮಂ ಇನಿಸುಮೆಣಸಂ, ಇದೋ! ಸೆಂತಾಪಂಗೆಯ್ವಂ,"   


ತರುಣಿಯರ್‌-(ತಮ್ಮೊಳ್‌ ನಕ್ಕು) "ಎಲೆ ಕೃಷ್ಣ, ಆ   

ಮೆಲ್ಲರುಂ ನಿರ್ದಯನಪ್ಪ ರವಿಯ ಜಳಮಂ ಸೈಸದೆ ತಣ್ಗೊಳಮನಾಶ್ರಯಿ   

ಸೆಲೆಂದು ಬಂದೆವು,"   


ಕೃಷ್ಣಂ-- "ಏಂ ತಪನನ ಕಾಟಮಂ ತಣ್ಣೊಳಂ ನಿವಾರಿಸಿತೆ?"   


ಕಾಂತೆಯರ್‌.."ಹುಂ ಆದೊಡುಂ ನಿನ್ನೆ ಕೊಳಲಂ ಕೇಳದೆ   

ನಿಸ್ಸೇಸಮಾಗದು, ಇನಿಸುಂ ಬಾಜಿಸಿದೊಡಕ್ಕುಂ."   


ಕೃಷ್ಣಂ--"ಕಾಂತೆಯರಿರ, ಈ ಮೆಯ್ಯನೆ ನಿಮಗೆಂದೇ ಮೀಸ   

ಲಂಗೆಯ್ದಿರಲ್‌ ಕೊಳಲಂ ಬಾಜಿಸೆನೆ! ಆದೊಡೆ ಎನಗೇನಾನುಂ ಬಹು   

ಮಾನದುಡುಗೊರೆಯೆಂ ಈಯಲ್ವೇಳ್ಕುಂ"   


ತರುಣರಿಯರ್‌--_ನಿನಗೆ ಪಲವುಂ ಉಡುಗೊರೆಗಳಂ ಮುನ್ನಮೆ   

ಕೊಟ್ಟಿರ್ಪೆವಲ್ತೆ? ಇನ್ನೇನೀವುದು? ಪೂರ್ವಪ್ರೇಮದಿಂ ಬಾಜಿಸಿದೊಡಕ್ಕುಂ”   


ಕೃಷ್ಣಂ--"ನಿಮ್ಮ ನುಡಿಯೊಪ್ಪಿತಂ ಆದೊಡುಂ ನೆನ್ನೆಯುಂ   

ಡೊಡೆ ಇಂದಿನ ಪಸಿವುಂ ತಣಿಯದು, ಅದರಿಂ ಏನಾನುಂ ಸೊಸೆತಂ.   

ಕಕೊಟ್ಟಡಕ್ಕುಂ, ಮೇಣೇಂ! ನಿಮ್ಮನೆಂದುಂ ಮರೆಯೆಂ.   

೨೩---------------------------------------------------------- 

ಪೆಣ್ಗಳ್‌ (ಪರಸ್ಪರಂ ನಕ್ಕು) “ಕೃಷ್ಣ, ಪೂಸೆತನೀಯಲ್‌ ಆಂ   

ಸಮರ್ಥರಲ್ಲಂ, ಆದೊಡೆ ನಿನ್ನ್ನ ಜಾಣ್ಮೆಗೆ ದೇವರೇ ಕುಡಿಸುಗುಂ, ಅದರ್ಕೆ   

ಎಮಗುಂ ಸೆಂತಸಮೆ,"   


ಕೃಷ್ಠಂ--"ಅಕ್ಕೆ, ನಿಮ್ಮ ನುಡಿಯೊಂದು ಪರಕೆಯಕ್ಕೆ” ಎಂದು   

ಮುರಲಿಯಂ ಪಿದಿದು  ಶ್ರುತಿಗೈದು.

  ಕಂದ| ಗಾನಂ ಪರಮಾನಂದಂ |   

ಗಾನಂ ಸರ್ವಾರ್ಥವಮಾರ್ಗಮದರಿಂ ಗಾನ ||   

ಜ್ಹಾನಿಯೆನ ನಿಂದಿಸಿದಪಂ |   

ಶ್ವಾನನಿನತ್ತಮೆಮದೊಡೇನತಿಶಯಮೇ||   


ಎಂಬೊಂದು ಪದ್ಯೆಮಂ ಶ್ರುತಿರಂಜನಿಯಿಂ ಬಾಜಿಸೆ ಪೆಣ್ಗಳಾನಂದ   

ಮಂ ಬಣ್ಣಿಪರಾರ್?  ಚಂದ್ರಾವಳಿಯೊ, ಈ ಗಾನಾಮ್ಭೃತಮಂ ಪೀರ್ದು   

ದರಿಂ ಆನಂದೆದಿಂ ಮೈಮರೆದು, ದಂಡಿಗೆಯೊಳಿರ್ಪನೊ, ನೆಲದೊಳಿರ್ಪೆನೊ,   

ಎಂಬುದನೆ ಅರಿಯೆದಾದಳ್‌.   


ತದನಂತರಂ ಶ್ರೀ ಕೃಷ್ಣಂ (ಬೆರಗಂ ನಹಿಸಿ) “ಓ ತರುಣಿಯರಿರ,   

ನಿಮ್ಮ ನಡುವೆ ದಂಡಿಗೆಯೊಳ್‌ ಬರ್ಪವಳ್‌ ಇವಳಾರ್‌?"   


ತರುಣಿಯರ್--"ಕೃಷ್ಣ, ಈಕೆ ಚಂದ್ರಾನಳಿಯೆಂಬವಳ್‌."   


ಕೃಷ್ಣಂ--(ಯೋಚನೆಯಂ ನಟಿಸಿ) "ಅದಾರ್‌ ಚಂದ್ರಾವಳಿ   

ಯಂದೊಡೆ! ಇನ್ನೆವರಂ ಎನ್ನ್ಪ ಲೆಕ್ಕಮಂ ಪೊಂದದ ಪೆಣ್ಣಳಾರುಂ ಗೋಕು   

ಲದೊಳಿಲ್ಲಂ, ಅಂತಿರಲ್‌, ಆನಿವಳಂ ಕಂಡುದುಂ ಇಲ್ಲಂ,"   


ಕಾಂತೆಯರ್‌ - _(ನಸುನಕ್ಟು) "ಇಂತೆಲ್ಲಂ ಪೊಲ್ಲದುದಂ ಸೊ   

ಲ್ಲಿಸದಿರ್, ಇವಳ್‌ ಎಲ್ಲರಂತಲ್ಲಂ," 


ಕೃಷ್ಣಂ--"ಅಂತೆ ಬಿಸೇಸದವಳಾದೊಡೆ ಎಂತುಂ ನೋಡಲ್ವೇ   

ಕ್ಕುಂ; ಇರ್ಕೆ ಇವಳಬ್ಬೆಯಾರ್‌?" 

೨೪-------------------------------------------------------- 

ಪೆಣ್ಗಳ್‌--"ಇವಳ್‌ ಕುಲವತಿಯ ಮಗಳ್‌, ನಿನ್ನ ರಾಧೆಗೆ   ತಂಗೆ,"   


ಕೃಷ್ಣಂ--"ಓ! ಅಂತಾದೊಡೆ ಕಬ್ಬಿನಜೇನಾಯ್ತು, ಬಾಂಧವ್ಯ   

ಮುಂ ಇರ್ಕುಮಲ್ತೆ?" (ಎಂದು ಮುಂದೈದಿ ಆ ಚಂದ್ರಾವಳಿಯ ದಂಡಿ   

ಗೆಯಂ ಪಿಡಿದು, "ಓ, ಎನ್ನತ್ತಿಗೆ! ನಿನ್ನೊಳ್‌ ಎರಳ್ನುಡಿಯೆಂ ನುಡಿಯ   

ಲ್ವೇಳ್ಕುಮೆಂದು ಮನದೊಳಿರ್ಕುಂ,"   


ಚಂದ್ರಾವಳಿ--(ಅತಿ ಕೋಪಾವಿಷ್ಟಳಾಗಿ) "ಚಿಃ ಬೆಣ್ಣೆಗ   

ಳ್ಳರ ಗುರು, ಅದಾವತ್ತಿಗೆ? ನಿನ್ನ ಚರಿತ್ರಂಗಳನೆಲ್ಲವಂ ಕೇಳ್ದಿರ್ಪೆಂ, ಅದು   

ಎನ್ನೊಳ್‌ ಸಾಗದು ಕಣಾ, ಪಲವುಂ ನಾಲ್ವೆಣ್ಗಳ್ ನಿನ್ನ ಬಿಡಂಗುಗಳ್ಗೆ   

ಸೋಲ್ದಿರ್ಪರಂ, ಎಂಬ ಪೇರ್ಮೆಯಿಂ ಏನೆನ್ನುಮಂ ಕೆಣಕಲ್‌ ಬರ್ಪೆಯ?   

ಸಾಲ್ಗುಂ ಉಸಿಕನಿರ್ದು, ಜತನದಿಂ ಫೋ, ಪೋ.   


ಕೃಷ್ಣಂ--"ಇದೇಂ ನೀಂ ಕಂಡೊಡನೆಯೆ ಸುಡು ನುಡಿಯನೆ   

ತ್ತುವೆ? ಹುಂ, ಪೆಣ್ಗಳ ಬೈಗಳುಂ ಪೊಗಳ್ಕೆ ಎಣಿಕೆ, ಅದಿರ್ಕೆ,   

ನಿನ್ನಕ್ಕನಂ ವರಿಸಿರ್ಪೆಂ, ಅದರಿನೇ ಅತ್ತಿಗೆಯೆಂದೆಂ, ಆದೇಂ ಪೆರ್ಚೆ?"   


ಚಂದ್ರಾವಳಿ_"ನಿನಗೀಕಿರುವರಯದೊಳೆ ಈ ಪೋಕತನಂ   

ಒಳ್ಳಿತಲ್ಲಂ, ಮಾತಾಡದೆ ದಾರಿಯಂ ಬಿಟ್ಟು ಪೋ.   


ಕೃಷ್ಣಂ--"ಈ ಪೋಕತನಮೀಗಳಲ್ಲಂ ಪುಟ್ಟಿನೊಡನೆಯೆ ಫುಟ್ಟಿ   

ರ್ಕುಂ ಅದರಿಂ 'ಪ್ರಟ್ಟುಗುಣಂ ಬೆಟ್ಟಮನಡರ್ದೊಡುಂ ಪೋಗದು' ಎಂಬ   

ನಾಣ್ಣುಡಿಯಂತೆ ನೀನೆಂದೊಡೇಂ ಪೋಕುಮೆ? ಅದೆಲ್ಲಮಿರ್ಕೆ, ನಿನ್ನೊ   

ಡನೆ ಮಾತಾಡಲ್ ಎಂತೀಗಳ್‌ ಸಮಯಮಿರ್ಪುದೋ?"  


ಚಂದ್ರಾವಳಿ-."ಹುಂ, ಗಳಪಿ, ಪೋ."   


ಕೃಷ್ಣಂ--“ಇದೇಂ ಕುಗ್ರಾಮದ ಪೆಣ್ಗಳಂತೆ ವಿರಸಮಾಗಿ ನುಡಿವೆ?   

ಅದಂತೆ ಪೋಕೆ, ಎನ್ನ ನುಡಿ ಬೇರಾವುದುಂ ಅಲ್ಲಂ; ಆನೊಂದು ಮಹಾ   

ಕಾರ್ಯಮಂ ಉಜ್ಜುಗಿಸಿರ್ಪೆಂ, ಆದರ್ಕೆ ಸಾಯಂ ಗೈಯಲ್ವೇಳ್ಕುಮೆಂದು."

೨೫---------------------------------------------------- 

ಚಂದ್ರಾವಳಿ--ಅದಾವುದು ಮಹಾಕಾರ್ಯಂ?"   


ಕ್ಸಷ್ಣಂ-"ಬೇರೇನುಮಲ್ಲಂ, ಒಂದು ವ್ರತಂ.   


ಚಂದ್ರಾವಳಿ-"ಆದೇಂ ವ್ರತಂ? ಅಂತುಂ ವ್ರಕಮಾದೊಡೆ   

ಪೆಣ್ಣಿದಪ್ಪ ಸಾಯಮಾವುದು?”   


ಕೃಷ್ಣಂ--"ಎನ್ನ್ನ ವ್ರತಕೆ ಪೆಣ್ಗಳ ಸಾಯಮೆ ಮುಖ್ಯಂ, ಬರಿದೆ   

ಅಮೌಲ್ಯಮಾದ ಮಾತಂ ಬೆಲೆಯಿಲ್ಲದೆ ಪಾಳ್ಗೈವಪುದೇಕೆ? ನೀನಾಣೆಗೊ   

ಟ್ಟೊಡೆ ಪೇಳ್ವೆಂ"   


ಚಂದ್ರಾವಳಿ--"ಅಕ್ಕೆ, ಮಹಾವ್ರತಮಾದೊಡೆ ಎನ್ನಿಂದಪ್ಪುಪ   

ಕಾರಮಂಗೈವೆಂ ಸಂದಗಮಿಡದಿರ್‌ ಎನ್ನಬ್ಬೆಯಾಣೆ,"   


ಕೃಷ್ಣಂ.--" ಹುಂ » ಸಂಶಯದ ಬಿತ್ತಳಿದುದು; ಪೇಳ್ವೆಂ, ಆನೀದೇ   

ಸದ ಪೆಣ್ಗಳನೆಲ್ಲರಂ ವರಿಸುವ 'ಸರ್ವ ಕಾಂತಾ ವರಣಂ' ಎಂಬೊಂದು   

ನವೀನ ವ್ರತಮಂ ಎತ್ತಿರ್ಪೆಂ.  ಅದರ್ಕೆ ಸಾಮಾನ್ಯಂ ನಿಮ್ಮ ಪೆಣ್ಗಳ   

'ಜಾತಿಯೆಲ್ಲಂ "ಪಲಂಬರ ಕೈವುಲ್ಲು ಒರ್ವನ ತಲೆವೊರೆ' ಎಂಬ ನುಡಿ   

ಯಂತೆ ಮನಃಪೂರ್ವಕಂ ಒಪ್ಪಿಗೆಗೊಟ್ಟು ಏಗಳುಂ ನೆರಂಗೆಯ್ವರ್‌, ದಯ 

ವಿಟ್ಟು ಅನುಕೂಲೆಯಾಗಿ ಈ ವ್ರತಮಂ ಪೂರ್ತಿಸುವ ಭಾರಂ ನಿನ್ನೊಳ್,   

ಎಲ್ಲವನರಿತಳ್ಗೆ ಪೇರ್ಚೆಂ ಪೇಳ್ವುದು?"   


ಚಂದ್ರಾವಳಿ-- (ಮನಗದೊಳ್ ನಾಣ್ಚಿ ಮೊಗದೊಳುರಿದು) "ಚಿಃ   

ನಾಣಿಲಿ! ನಿನ್ನ್ನ ವ್ರತದ ಪೆಸೆರೆ! ಒಳ್ಮಾತಿಂ ಪೋದೊಡಾಯ್ತು, ಇಲ್ಲ   

ದೊಡೆ ತಕ್ಕುದೆಂ ಯೋಜಿಪೆಂ,"   


ಕೃಷ್ಣಂ--ಅಃ ಇದೇತರ ಮಾತು! "ಎಲ್ಲೆ ಕಾಂತೆ, "ಪೋ"   

ಎಂದೊಡೆ ನಿನ್ನಾಣೆಗೆ ಔರ್ದ್ವದ್ಧಹಿಕಮೆ! ನುಡಿಯಂ ಬಿಡುವುದುಂ   

ಒಡಲಂ ಸುಡುವುದುವಮೊಂದೆ ಎಂಬರ್‌ ತಿಳಿದರ್‌,"   

೨೬-------------------------------------------------------- 

ಚಂದ್ರಾವಳಿ-"ಆಯ್ತಾಯ್ತು, ನಡೆ ನಡೆ."   


ಕೃಷ್ಣಂ--"ಇದು 'ಗಂಟೆಗೊಂದೆ ಸೊರಂ'' ಎಂಬಂತೆಯೆ ಆಯ್ತು.."'      


ಚಂದ್ರಾವಳಿ-ಇದೋ ಸಾರಿ ಪೇಳ್ವೆಂ; ಈ ಮಾನಿನಿಯರಿದಿ   

ರೊಳ್‌ ಒಪ್ಪಿತಮಲ್ಕದುದಂ ನುಡಿಯದೆ ತೆರಳ್‌,"   


ಕೃಷ್ಣಂ--"ಈ ಮಾನಿನಿಯರಿರ್ದೊದೇನಾಯ್ತು? ಇದರ್ಕೆಯೆ ಇನಿ   

ಸುಂ ಕೋಪಮಂ ನಟಿಸುವುದು? ಅದರ್ಕೆ ಬೆದರದಿರ್‌ ಇವರೆಲ್ಲರುಂ ಎನ್ನ   

ವರೆ"   


ಚಂದ್ರಾವಳಿ--"ಸಾಲ್ಗುಂ ಮತ್ತಮುಂ ಪೇಳೆ, ಅಪಮಾನ:   

ಕರವಚನಮೆತ್ತುವುದೊಳ್ಳಿತಲ್ಲಂ."   


ಕೃಷ್ಣಂ--ಆನೆಂ ದುದೇನಪಮಾನಕರಮೆ? ಎನ ನುಡಿಯಂ ಕೇ    

ಳ್ದೊಡನೆಯೆ, ಪೆಣ್ಣಡಣಮೆ ಆಜ್ಞಾನುಸಾರಮಾಗಿ ನಡೆಗುಂ; ಅಂತಿರೆ   

ಆನೇ ನಿನ್ನೆಡೆಗೆ ಬಂದು ಬೇಡುವುದೆಂದೊಡೆ ಬಹುಮಾನ ಮಲ್ತೆ?" (ಇನಿ   

ಸುಂ ಯೋಜಿಸಿ) "ನುಡಿಯೊಳ್‌ ಮೆಣಸು. ನೆಡೆಯೊಳ್‌ ಉಣಸು" ಎಂ   

ಬುದು ಕೆಲವೆಣ್ಗಳ ಲಚ್ಚಣಂ, ಅದರಿಂ ಅಂತೆ ನುಡಿಬೆಯಲ್ತೆ ಎನ್ನತ್ತಿಗೆ!"  


ಮತ್ತೂರ್ವಳ್ "ಎಲೆ ಕೃಷ್ಣ, ಕನ್ನಡಿಯ ಗಂಹಿಗೆ ಕೈಯಿಕ್ವಿ   

ದಂತೆ ಚಂದಗೋಪನ ಕಾಂತೆಗಿನಳ್ಗೆ ಮರುಳಾಗೆದಿರ್‌, ಅದಸಾಧ್ಯಂ     

ಕಣಾ "  


ಕೃಷ್ಣಂ--"ಲೋಕದೊಳ್‌ ಅಸಾಧ್ಯಮೆಂಬ ವಚನಮುಮಿರ್ಕೆ?   

ಅದು ಪೋಕ್ಕ ಏನಿವಳ್‌ ಆ ಪೆಸೆರಿನ ಚಂದನ ಅರಸಿಯೆ? ಕಷ್ಟಂ ಒಣ   

ಮರಕೆ ನವಮಲ್ಲಿಕಾಲತೆಯಂ ಪರ್ಬಿಸುವಂತೆ. ಈಕೆಯನಾಕುರೂಪಿ.   

ಶಿಖಾಮಣಗೆ ಗಂಟಿಕ್ಕಿದ ತಾಯ್ತಂದೆವಿರ್‌ ಏನೊಳ್ಳಿದರೊ? ಹುಂ--   

ಕೇಳೆಲೆ ಕಾಂತಾಮಣಿ!   

ಕಂದ[| ಅನುರೂರರನೊಂದಿದೆ ಕೇಳ್‌ |   

ಘನದಾಸರ್ಗುಪ್ಪು ನೀರಿನಂತರಸಿಕರೊಳ್‌ |   

ಮನಮಿಂಡ ಮೈಗಡದೊಳ್‌ ಜೀ |   

ದನಮದು ಸಂತಾಸವಸ್ನಿಯಿಂದಾರದೆ? ಪೇಳ್ ॥

೨೭-------------------------------------------------------------------

ಬಳಿಯಮೊರ್ವಳ್‌--“ಎಲ್ಲರೊಳ್‌ ನುಡಿವಂತ ಬಹು ಪತಿ-   

ವ್ರತೆಯೊಳ್‌ ಈಸೆಯೊಳುಂ ನುಡಿವಯ್‌?"   


ಕೃಷ್ಣಂ--"ಈಕೆ ಬಹು ಪತಿವ್ರತೆಯಾದೊಡೆ "ಬಂಡಿಯೆಂ ಪೊ   

ತ್ತಂಗೆ ತೃಣಂ ಭಾರನಮೆ?' ಎಂಬಂತೆ ಎನ್ನೆಣಿಕೆಗೆ ಏಕೆ ವಿಮುಖಳಾಗಿ   

ರ್ಪಳ್‌?"   


ಚಂದ್ರಾವಳಿ--(ಕೋಪದಿಂ) "ಹುಂ, ಕಲ್ಗೆ ನೀರನೆರೆದೆಂತೆ   

ಇವಂಗೆ ಎನಿತುಮುಸಿರ್ದೊಡುಂ ಏಂ ಫಲಂ? ಏಲೆ ದೂತಿಯರಿರ!  

ಈತನಿಂದಫ್ಪುದೇಂ? ದಂಡಿಗೆ ಮುಂದೆ ಪೋಕೆ"   


ಕೃಷ್ಣಂ--ಅಂತಾದೊಡೆ ಪೋಪ ಪುರುಳಂ ನೋಳ್ಪೆಂ, (ಎಂದು 

ದಂಡಿಗೆಯೊಳಯಿಂಕೆಗೊಂದು ಕೈಯಂ ಹಾಯ್ದಿದಂ,)   


ಒಡನಾ ಚಂದ್ರಾವಳಿ ಧುಮುಕಿ, "ಚಿಃ ಧೂರ್ತ! ಏನೆನ್ನಂ ನಾಡ   

ಗೋವಳಿತಿ ಯೆಂದೆಣಿಸಿರ್ಪೆಯೆ? ಎನ್ನ ಮೈಗೆ ಕೈಯಿಕ್ಯುವುದು ಬೆಣ್ಣೆಯ   

ಪಾತ್ರಕಿಕ್ಳುವಂತಲ್ಲಂ" (ಎಂದು ಕೃಷ್ಣನಂ ವಿಡಿದು ನೂಂತಿದಳ್‌.) 


ಕೃಷ್ಣಂ--(ತನ್ನೊಳೆ) "ಆಃ ಈಕೆಯ ಕೈಯದೇಂ ಮೆದುವೊ   

ಬೊಮ್ಮಂ ಈ ಕರಮನಾವುದರಿಂ ನಿರ್ಮಿಸಿದನಕ್ಕುಂ? ಹುಂ ಸಾಲ್ಗುಂ  

ಸಾಲ್ಗುಮೆಲೆಮನಮೆ! ಅಪ್ರಕೃತವಿಚಾರಕೀಗಳ್‌ ಸಮಯಮೆ? ಓ ಕಾಂತೆ!   

ನಿನ್ನ ಕೋಪನಮೆಲ್ಲಂ ಎನ್ನಂ ನೂಂಕಿಯಿ ತೀರ್ಗುಮಲ್ತೆ1"   


ಚಂದ್ರಾವಳಿ--"ಎಲೆ ಸಖಿಯರಿರ! ನಿಮಗೆ ಏಂ ಕಣ್ಣುಂ ಕಿವಿ   

ಯುಮಿಲ್ಲವೆ? ಎನ್ನೊಳತಿಕ್ರಮಂಗೈವ ಈತನಂ ಕಂಡುಂ ಬರಿದೆಯಿರ್ಪುದು  

ಅಬ್ಬೆಯ ಮಾತಂ ಪೂರ್ತಿಸೆಲೊ?" ಎನಲ್‌ ಆ ಪೆಣ್ಣಳೆಲ್ಲರುಂ ಚಂದಾ  

ವಳಿಯೊಳಿರ್ವ ದಾಕ್ಷಿಣ್ಯದಿಂ ಮೇಲ್ಭಾಯ್ಡರ್‌.   


ಬಳಿಯೆ ಮಾವಾಸುದೇವಂ ಆ ಪೆಣ್ಗಳ ಮಧ್ಯ್ಯದೊಳ್‌, ಅವರ್‌ ಸೆಳೆ 

೨೮-------------------------------------------------------------------

ದೊಡುಂ ನೂಂತಿದೊಡುಂ ಅವುಂಕಿದೊಡುಂ ಅತ್ಯಾನಂದಂದಳೆದು, ನಿದ್ದೆ  

ಗಣ್ಣವನಂ ಪಾಸಿಗೆಗೆ ನೂಂಕಿದೆಂತೆ  'ಇದೆನ್ನ ವ್ರತದ ಒಂದು ಭಾಗಮೆ   

ಆಯ್ತು' ಎಂದಂ, ಆಗಳ್‌ ಪೆಣ್ಗಳೆಲ್ಲರುಂ ನಕ್ಳರ್‌. ಚಂದ್ರಾವಳಿ, ಒಡ   

ನತಿಕೋಪದಿಂ ಪಿಡಿದು ನೂಂಕೆ   


ಕೃಷ್ಣಂ--ಇದೆನಗೆ ಸೆಮಯಮಲ್ಲಮೆಂದೆಣಸಿ ಬೀಳ್ದಂತೆ ನಟಿಸಿ   

ಎಳ್ದೋಡಿದಂ.   


ಚಂದ್ರಾವಳಿ-- (ನಗೆಮುನಿಸಿಂ) "ಏನೆಸನ್ಕೊಳತಿಕ್ರಮಂಗೈವುದೆಂ   

ದೊಡೆ ಗೋವ್ಗಳಂ ಮೇಯಿಪುದೆ? ಕಲ್ಲಿಗೂಳಂ ಮುಕ್ಳುವುದೆ? ಅಳಿಮೊ   

ಗೆಯೆಂ ಒಡೆವುದೆ!" ಎಂದು ಪರಿಪರಿಯಿಂ ಪರಿಹಾಸ್ಯಂಗೈದಳ್‌.   


ಶ್ರೀಕೃಷ್ಣಂ--(ತಿರುಂಗಿ) “ಎನ್ನೆಣಿಯಂ ಪೂರ್ತಿಸದೊಡೆ ಇದು   

ಕೊಳಲಲ್ಲಂ; ಮೇಣೇಂ? ಆಂ ಕೃಷ್ಣನೆ ಅಲ್ಲಂ" ಎಂದು ಕೈವೆರಲಿಂ   

ಸೆನ್ಸ ಗೈವುತ್ತಂ ನಡೆದಂ.   


ಚಂದ್ರಾವಳಿ--ಹುಂ, ಆಯ್ತಾಯ್ತು ಕನಸಿನ ಧಾನ್ಯಕ್ಕೆ ಗೋಣಿ   

ಯಂ ತಾಯೆಂದು, ನಕ್ಕು, ಅಭಿಮಾನಕ್ಕಿಂತೆಲ್ಲಂಗೈದೊಡುಂ ಕೃಷ್ಣನೊಳೆ   

ನೆಟ್ಟ ಮನದಿಂ ಹಾಸ್ಯಂಗೆಯ್ಯಲುಂ, ಬೈಯಲುಂ, ಎಂಬ ನೆವದಿಂ, ತಿರುಂಗಿ  

ನೋಡುತ್ತಂ, ನಂದಾತ್ಮಜನ ತಲೆ ಕಂಡುಂ ಕಾಣದಂತಾಗೆ ಶ್ರಮನಿಶ್ವಾ    

ಸಮನೆಂಬಂತ ಬಿರಯದ ಬಿಸುಸುಯ್ಸಂ ಬಿಡುತ್ತಂ, ಸೆಕೆಯದಿಮ್ಮಡಿ   

ಯಾಗೆ ಮಾತಾಡಿದೆ. ಸಖಿಯರೊಳ್‌ ಬಿರುನುಡಿಯನೆನುತ್ತುಂ, ತಾಯ್ಮ   

ನೆಗೆ ಸರಿದಳ್. 


   (ಅಂತು ಪೋಗಿ ಅಬ್ಬಗೆ ಈ ವೃತ್ತಾಂತಮಂ ಪೇಳೆ,)   

   

ಕುವತಿ--"ಮಗಳೆ, ಆಂ ಪೇಳ್ದಂತೆ ಕೆಲಸೆಂ ಕೆಟ್ಟುದು;   

ಕೃಷ್ಣನ ಕಣ್ಣೆ ಬೀಳ್ದವಳ್ಗೆ ಬೇರೆ ಗತಿಯಿಲ್ಲಂ, ಆ ಕೃಷ್ಣನೆ ಕಡೆಗಣ್ಣ್ಯೋ   

ಟಂ ಬೀಳ್ದೊಡೆ ಬಳಿಯಮವಳಂ ಎಂತಾನುಂ ಮನೆಯಂ ಪುಗಿಸೆನೆಂದುಸಿರ್ದ 

೨೯------------------------------------------------------------------------ 

ನಿನ್ನ್ನ ಗಂಡನಂ ಪಲವುಮಾಣಿಗಳಿಂ ನಂಬಿಸಿ, ಬಾರದೆ ಬಹುವರ್ಷಂಗ  

ಳಾದುವಲ್ತೆ ಎಂದು ಮನಂಗೇಳದೆ ನಿನ್ನನೊಡಂಗೊಂಡು ಬಂದೆಂ, ಅದೆಂ.  

ತಾನುಮಿರ್ಕೆ, ನೀನೀಗಳೆ ಗಂಡನ ಮನೆಗೆ ಪೋಗು" ಎಂದು   ತಾಯ್ಮ  

ನೆಯಂ ಬಿಡುವ ಚಿಂತೆಯಿನೊ? ಬೇರೇನಾನುಂ ಯೋಚನೆಯಿನೊ?   

ಆಕೆಯ ಮನಮನಾರ್‌ ಕಂಡಿರ್ಸರ್‌? ಆದೊಡುಂ ರಸಿಕರ್ಗೆ ವಿರಹಾ   

ವಸ್ಥೆಯಂ ಸೊಚಿಸುತೆ ಕಣ್ಣೀರ್ವಿಡುವ ಚಂದ್ರಾವಳಿಯಂ ಪಲವೆಣ್ಣಳೆಂ   

ಕಡಿ ಕಳುಪಿದಳ್‌.   


ಅನ್ನೆಗಮಿತ್ತಮಾ ಗೋಪೀಸುತಂ ಲಜ್ಜೆಯಂ ನಟಿಸಿ ತಲೆಯಂ   

ಬಾಗಿ ತನ್ನವರೆಡಗೆ ಪೋಪುದುಂ, ಆ ಕೃಷ್ಣನ ಪರಿಯಂ ಮರೆಯೂಳಿರ್ದು   

ಅರಿದ ಗೋವಳರೊಳೊರ್ವಂ, "ಓವೋ! ನಮ್ಮ ಕಿಟ್ಟನ ಮೋರೆಯ   

ಪುರುಳೆಂ ಕಂಡಿರೆ? ಚಂದ್ರಾವಳಿಯಂ ವರಿಸಿ ಬಂದಿರ್ಪಂ, ಪುಸಿಯಲ್ಲಂ.   

ಅದೋ ಪ್ರಣಯಕಲಹದೊಳ್‌ ಆದೆ ಉಗುರ ಗಾಯೆಂಗಳ್‌, ಕಣ್ಗೆ   

ಕಾಣ್ಕೆಗಳಕ್ಕುಂ. ಆಂತರ್ಯದ ಅನುರಾಗಮಂ ಪೊಳಯಿಸುವಂತೆ ರಕ್ತಂ   

ತೊಟ್ಟಿಡುಗುಮಿನಿಸಿನಿಸುಂ. ಕಿರಿಯನಲ್ಲವೆ? ಅದರಿಂ ಲಜ್ಜಿಯಿಂ ತಲೆ   

ಯಂ ಬಾಗಿರ್ಪಂ".   


ಎಲೆ ಕೃಷ್ಣ ! ಚಂದ್ರಾವಳಿಯ ರೂಪಮುಂ, ನುಡಿಯುಂ, ಮೇಳೆ   

ಮುಂ, ಮೇಣೀಂ, ವಿಲಾಸಮುಮೆಲ್ಲಂ ಅನ್ಯಾದೃಶಮಲ್ತೆ ?" 


ಒರ್ವಂ--(ಉಸಿಕನಿರ್ಪ ಕೃಷ್ಣನ ಮೆಯ್ಯಂ ಮುಟ್ಚಿ) "ಆಃ   

ಇದೇಂ ಮೆಯ್ಯೊಳೆಲ್ಲಂ ಧೂಳಿ!”   


ಮತ್ತೊರ್ವಂ--“ಅದು ಧೂಳಿಯಲ್ಲಂ, ಸೆಮ್ಮೇಳದ ಆನಂದ   

ದೊಳ್‌ ಚಂದ್ರಾವಳಿ ಪೂಸಿದ ಗಂಧಾದ್ಯನುಲೇಪಮಕ್ಕುಂ,"   


ಅನ್ನಿಗಂ.--. "ಗಂಧಾದ್ಯನುಲೇಪಮಾದೊಡೆ.. ಏಂ ಪರಿಮಳಮಿ   

ಲ್ಲವೆ?" 

೩೦------------------------------------------------------------------ 

ಮಣಿವರ್ಮಂ--" ಪಾರಿಮಳವಿಲ್ಲವೆ?   ಎ ದಧ ಸಾ   ಕೆಲಸಮಂ   

ಕೊಟ್ಟೊಡೆ ಅರಿಯಲಕ್ಕುಂ."   


ಶಂಖನರ್ಮಂ--(ಆಘ್ರಾಣನೆಯಂ ನಟಿಸಿ) ಹುಂ ಮೂಗಿನ   

ಕೆಲಸಮಾಯ್ತು."ಇದೇಂ! ಮಣ್ಣೇ."   


ಮಣಿ-- ಅದೇನೋ ಆತುರದ ಒರಸೊರಸಿಂ ಮಣಮೆಲ್ಲಂ   

ಸೋಗಿರಲ್‌ ಸಾಲ್ಗುಂ."   

 

ಬೇರೊರ್ವಂ--"ಇದೇಂ ತಲೆಗೂಂದಲ್‌ ಬಿರ್ಚಿ ಪತಾಕೆಯಂತೆ   

ಒಲಗುಂ."   


ಶಂಖಂ--"ನೀನೇಂ ಸ್ರೀ ಗೋಷ್ಠಿಯ ಬ್ರಹ್ಮಾನಂದದ ಪೊಲ   

ಬನೆ ತಿಳಿಯದವನೆ? ಓ ನಿನಗಿನ್ನುಂ ಬಾಲ್ಯಮಲ್ತೆ! ಕೇಳ್‌ ಆ ಕಾಲ  

ದೊಳಂತೆಲ್ಲಮಕ್ಕುಂ, ಮುಂದೆ ಪ್ರತ್ಯಕ್ಷಪ್ರಮಾಣಮಂ ಪೊಂದಿ ಸಂಶಯ   

ಮಂ ಕಳೆಯಲಕ್ಟುಂ"   


ಬಳಿಯಂ ಗುಣವರ್ಮಂ (ನಕ್ಕು,) "ನೀಮೇಕೆ ಇಂತೆಲ್ಲಂ   

ಕೃಷ್ಣನಂ ಹಾಸ್ಯಂ ಗೈವುದು]"  


ಶಂಖಂ---"ಏನಿದು ಹಾಸ್ಯಮೆ? ಅದೆಂತು?"   


ಗುಣಂ--"ಆಂ ಕೃಷ್ಣನವಸ್ಸೆಗಳನೆಲ್ಲವಂ ಮರೆಯೊಳಿರ್ದು ನೋ   

ಡಿದೆಂ.   


ಶಂಖಂ--ಅದೇನವಸ್ಥೆಗಳೆಂದೊಡೆ?”   


ಗುಣಂ--ಮೇಣೇಂ? ಪೆಣ್ಗಳೆಲ್ಲರುಂ ಸೇರ್ದು ಈಯಧಿಕಪ್ರಸಂಗಿ   

ಯಂ ನೂಂಕಿಯುಂ, ಸೆಳೆದುಂ, ಅವುಂಕಿಯುಂ, ಬಾರದ ಬನ್ನಮಂಗೈ   

ದರ್‌; ಇವನೇನೋ ಬಾಯ್ಗೆವಂದಂತೆ ಲಜ್ಜೆಯಿಲ್ಲದೆ ಗಳಪುತಿರ್ದಂ, ಎನ   

ಗದಂ ಈಗಳ್‌ ನುಡಿಯಲೇನಾಣಪ್ಪುದು. ಬಳಿಯಂ ಚಂದ್ರಾವಳಿ ಇವನ   

ನಲ್ಲಿಂ ನೂಂಕಿದಳ್‌ ಅದರಿಂ ಪೆರ್ಚು ಏನವಸ್ಥೆಗಳ್ಳ? 

೩೧--------------------------------------------------------------------- 

ಗೋವಳರ್‌--(ಚಿಂತೆಯಂ ನಟಿಸಿ) "ಆಃ ವಿಮ್ಮ ಕೆಳೆಯಂಗೆ  

ಈಯವಸ್ಥೆಯುಮಾಯ್ತೆ! ಆಣೆಗೊಟ್ಟು ಉಸಿರ್ದ ಮಾತಿಗುಂ ತಿಲೋ   

ದಕಮೆ? ಅದೆಂತಾನುಮಿರ್ಕೆ 'ತಲೆವೋಪಾಗಳ್‌" ಮುಂಡಾಸಿನ ಆಸೆಯೆ?   

ಎಂಬಂತೆ, ಮೆಯ್ಗೆ ಬಂದಿರಲ್‌, ಮಾತಿನ ಅನಮಾನಮದೇಂ ಎಲೆ   

ಕೃಷ್ಣ, ಮರ್ಯಾದೆಯೆಸೆಗದಿರ್". ಮೈವೇನೆಗೆ ಮರ್ದಂ ಗೈಸಲ್ವೇಳ್ಕುಮೆ?"  


ಗುಣಂ--"ಕೃಷ್ಣಂಗೆ ಔಷಧಮೇಕೆ? ಬೆಣ್ಣೆಯಂ ಕಳ್ವಾಗಳುಂ,   

ಪೆಣ್ಗಳಂ ಕೆಣಕುವಾಗಳುಂ, ಇಂತಪ್ಪ ಪೆಟ್ಟಿನೆನಿತಂ ತಿಂದನೊ? ಎನಿತಂ   

ತಿನಲಿರ್ಕುಮೊ? ಅದೆಲ್ಲಂ ಅವನನ ಶರೀರ ಲಾಘವಕೆಯೆ ಕಾರಣಂ,"   


ಕೃಷ್ಣಂ--(ಕೋಪಿಸಿ) "ಇರ್ಕೆ ನಿಮ್ಮ ಪರಿಹಾಸ್ಯಂಗಳೆಲ್ಲವು   

ಮಿರ್ಕೆ   


ಕೇಳಿಂ, ಎಂಟನೆಯ ದಿನದೊಳ್‌ ಸೂರ್ಯನಸ್ತೆಂಗತನಪ್ಪುದರಿಂ   

ಮುನ್ನಮೆ ಈ ಕೃಷ್ಣಂ ಆ ಚಂದ್ರಾವಳಿಯಂ ಒಡಂಗೂಡಿದೆನೆಂಬ ವಾರ್ತೆ   

ಯೆ ನಿಮ್ಮ ಹಾಸ್ಯಮೆಂಬ ರೋಗಕೆ ಮರ್ದಂ ಮಾಳ್ಪುದು; ಇಲ್ಲದೊಡೆ,  

ಕೆಳೆಯನಾದ ಈ ನಂದಾತ್ಮಜನ ಮೊಗಮಂ ಕನಸಿನೊಳಲ್ಲದೆ ಜಾಗ್ರದ   

ವಸ್ಥೆಯೊಳೆಂದುಂ ಕಾಣಲಾರಿರಿಂ," ಎಂದಾಣೆಗೊಟ್ಟು ನುಡಿಯೆ.   


ಮಣಿ--"ಏಂ ತರತರದ ಆಣೆಗಳ್‌ ಪುಟ್ಟುಗುಂ? ಈಗಳ್‌   

ಆಣೆಯ ಬೆಲೆ ಕಿರಿದೆ?"   


ಕೃಷ್ಣಂ--"ಕಿರಿದೋ, ಪಿರಿದೋ, ಎಂಬುದನರಿಯಲಕ್ಕುಂ ಕೆಲದಿನ   

ದೊಳ್‌, ಏಂ ಮೂಗಿಂ ಬಾಯ್ಗೆ ದೂರಮೆ?" ಎಂದವರೊಡನೆ ಅಲ್ಲಿಂ   

ತಳರ್ದಂ.   

....

ಎಂಬಲ್ಲಿಗೆ ಚಂದ್ರಾವಳೀ ವಿಲಾಸದೂಳ' ದ್ದೀತೀಯಶ್ಪಾಸಂ.   


ಇತ್ತಮಾ ಚಂದ್ರಾವಳಿ ಅಬ್ಬೆವನೆಯಿಂ ಒತ್ತಂಬದಿಂ ನೀರಾಶಯೆ   

ಕಿಳಿವ ಗೋವಿನಂತೆ ಗಂಡನ ಮನೆಗೆ ಬಂದು. ಅಸ್ವಸ್ಥೆಮೆಂದುಂ ಇನ್ನು 

೩೨--------------------------------------------------------------------

ಮೇನೇನೋ ನೆವಮಂ ಪಿಡಿದುಂ, ಶಯ್ಯಾಗೃಹದೊಳೆ ಇರ್ದಳ್‌; ಓರೊ:   

ರ್ಮೆ ಅರೆಗಣ್ಣಳ್‌ ನೋಡಿದೆಡೆಯನೆ ನೋಳ್ಪಳ್‌; ಮೇಣೋರ್ಮೆ ಬರಿದೆ   

ಕಣ್ಮುರ್ಚಿ ಪವಡಿಸುವಳ್‌; ಬಳಿಯಂ ಒರ್ಮೆ ಗವಾಕ್ಷದೆಡೆಯೊಳ್‌ ದಿಟ್ಟಿ   

ಸುತ್ತಿರೆ, ತಂಗಾಳಿಯೂಡನೈತಂದು ಮೊಗಕರಗುವ ತುಂಬಿಯಂ ಕಂಡ್ಕು.   

“ಓ ಅಳಿಯೆ! ನೀನೇಂ ಕೃಷ್ಣವರ್ಣಮಾತ್ರದ ಚಲ್ವಿಕೆಗೆ ಆಂ ಮರುಳ    

ಪ್ಲೆನೆಂದೆಣಸಿರ್ಪೆಯೆ? ಸಾಲ್ಗುಂ ಪೋ ಪೋ" ಎಂದು ನಿವಾರಿಪಳ್‌;   

ಪಲರ್ಮೆ ಕೊಳಲ್ಗೈಯನ ಚಿತ್ರಮಂ ಬರೆದು ನೋಳ್ಪಾಗಳ್‌, ಗಾಳಿಯು  

ರುಬೆಯಿಂ ಆ ಸಜ್ಜೆಗೋಣೆಯ ಕದಂ ತಿರ್ರನೆ ತೆರೆಯೆ ಕಳವಳಮಾಂತು.  

ಆ ಚಿತ್ರಪತ್ರಮಂ ನುಂಗುವಳ್; ತಾನೇನಾನುಂ ಕೈಗೊದವಿದ ಕೊಳವಿ   

ಗಳಂ ಪೂರಯಿಸಿ ಅಪಸ್ವರಮಂ ಸೈಸದೆ "ಚಿಃ ಈ ಎನ್ನ ಬಾಳ್ಕೆಯೇಕೆ ₹   

ಎಲೆ ವೇಣು, ಆ ಕೃಷ್ಣನ ತುಡಿಯ ಸವಿಯಂ ಇಳಗೊರೆನಂತಿರ್ಪ ನಿನ್ನ 

ಸುಸ್ವೆರಮನಾವಂ ಬಣ್ಣಿಪಂ? ಆ ನಂದಾತ್ಮಜನ ಬಗೆಯ ಪೊಂದಿದುದರಿಂ  

ಏನಾನಂದಮನಿತ್ತಪೆಯೊ! ಪೆರ್ಚೇಂ? ನಿನ್ಫ ಜನ್ಮಂ ಸಾರ್ಥಕಮಾಯ್ತು.   

ನಿನ್ನ ವಂಶಮೇ ವಂಶಮೆಂದಾಯ್ತು. ಹುಂ, ಇಂತೆಲ್ಲಂ ಮರುಳಿನೆಂತೆ ಗಳೆ  

ಪಿದೊಡೆ ಏಂ ಫಲಮೊ? ಆವುದಕುಂ ಅಕ್ಕನಂ ಕಂಡೊಡಕ್ಕುಂ, ಏಂ.   

ಗೃವೆಂ? ಆರಂ ಕಳುಪುವೆಂ?" ಎಂಬನಿತರೊಳ್‌ 'ಭವತಿ ಭಿಕ್ಪಾಂದೇಹಿ'     

ಎಂಬೊರ್ವ ಯಾಚಕ ವಿಪ್ರನ ಸೊರಮಂ ಕೇಳ್ದು, ಮನೆಯವರ್‌ ಎತ್ತೆ   

ತ್ತಮೋ ಪೋಗಿರ್ದುದರಿಂ, ತಾನೇ ಪೆರಗೈದಿ ವಿಪ್ರಂಗೆ ಸತ್ಯ್ಯಾರಂಗೈದು,   

ಕುಶಲಮಂ "ಕೇಳ್ದು ಪ್ರಸಂಗವರಿದಿಂ “ಎಲೆ ಭೂಸುರಾಗ್ರಣಿ! ನೀನಿನ್ನೆ   

ವರಂ ಆವಾವ. ದೇಸಂಗಳ್ಗೆ ಐದಿದೆ? ಉಂಛಧಾನ್ಯಮುಂ ಪಣಮುಂ- 

ಎನಿತ್ತಾದುದು?   


ವಿಪ್ರಂ--"ಕೇಳಿಲೆ ತರುಣೀಮಣಿ, ಆಂ ಸಾಧಾರಣಂ ಊರೆ   

ಲ್ಲಂ ತಿರುಂಗಿದೆಂ, ಗೋಕುಲವೊಂದು ಮಾತ್ರಮುಳಿದಿರ್ಕುಂ. ಮೇಣೇಂ?   

ಈಗಳ್‌ ಧಾನ್ಯಕ್ಕೆ ಬೆಲೆಯಧಿಕಮೆಂದು ಪೀಳಲೆಡೆಯುಂಟು, ಅದರಿಂ   

ಆರುಂ ಕುಡುವುದನಿಳಿಂಕೆ ಗೈದಿರ್ಪರ್‌, ಮೇಣೇಂ ಪಣಮಂ ಕುಡಲುಂ   

ಕೈ ಪಿಂದೆ ಕಳ್ತಲೆಯವರ್‌ ಸೊಡರ್ದಾರಿಯಂ ಕಾಣ್ಬರ್‌, ಸೊಡರಿ   

೩೩---------------------------------------------------------------------- 

ನವರ್‌ ಕಳ್ತಲೆದಾರಿಯಂ ಕಾಣರ್, ಅಂತಾಪರಿಯಿಂ, ದೊಡ್ಡಿದರಿರಮಂ   

ಬಡವರ ತಿಳಿವರ್, ಅವರ್‌ ಬಡತನದ ಪೊಲಬನೆ ತಿಳಿಯರ್.‌ ಇನ್ನುಂ   

ಪಲಂಬರ್‌ ಬೆಕ್ಕು ಪಿಟ್ಟೆಯಂ ಬೈತಿಡುವಂತ ಧನಮನಡಂಗಿಸುವರಲ್ಲದೆ,  

ಬಡವರ್ಗಿನಿತಾನುಮೀಯರ್ ಅಂತುಮಲ್ಲದೆ   


ಕಂ|| ಕಾಲಂ ಹಿಡಿದು ಧರಿಸೆ ತಲೆ   

ಮೇಲಕೆ ನೆರಲಂ ಕೊಡುವುದು ಕೊೂಡೆಕೊಡೆನೆನದೆ ॥   

ಓಲಗಿಸಿದೆೊಡಂತುಂದು  

ಶ್ಶೀಲಂಶಾನೀಯೆನೆಳ್ಳಿ ನನಿತುಮನಹಹಾ (|   

ಎಂದು ಕಬ್ಬಿಗರುಸಿರ್ವುದುಂ ನಿಜಮಾಯ್ಕು--ಅದಿರ್ಕೆ, ಇನ್ನೆ   

ಮ್ಮಂತಿರ್ಪವರ್‌ ಸಂಸಾರದೆ ಪೊಡೆಯಂ ಪೊರೆವುದೆಂತೊ? ಆಃ ಬಡವ   

ರ್ಗೆಯೆ, ಮನೆದುಂಬಿ ಮರಿಮಕ್ಕಳನೀವ ಬಿದಿಯ ಮಾಟಮನೇನೆಂಬೆನೊ!"   

ಎಂದು, ಪರಿಪರಿಯಿಂ ಪಳಯಿಸುತ್ತಿರಲ್‌.   


ಚಂದ್ರಾ--"ಬರಿದೆ ಚಿಂತಿಸಿ ಏಳ್ತೆರದ ಮುದುಪನಿದಂ ಇರ್ಮಡಿ   

ಗೈಯದಿರ್; ಇದಕೊಳ್‌, ಪೊರಲಾರ್ಪನಿತುಮಕ್ಕಿಯುಮಂ ಪಣ     

ಮುಮಂ ಈವೆಂ; ಮನೆಯವರ್‌ ಬೈವರ್‌, ಅದರಿಂ ಅವರ್‌ ಬರ್ಪುದರಿಂ  

ಮುನ್ನಮೆ ಪೋಗು." ಎಂದು ಅಂತೆಯೆ ಕೊಟ್ಟು ಉಲ್ವಿಡಿದು.   


“ನೀನಿನಿತಂ ಎನಗೆ ಒಳ್ಳಿತನೆಸೆಗಲ್ವೇಳ್ಕುಂ.. ಎಳವರಯದೆ ಪೆಣ್ಣೀಕೆ   

ಪಳೆ ಮುದುಕನಪ್ಪೆನ್ನೊಳ್‌ ಊಳಿಗಮಂ ಪೇಳ್ದಳಿಂದೆಣಿಸೆದಿರ್‌".   


ವಿಪ್ರಂ-- "(ಮಗಳೆ) ಅಂತೆನ್ನೊಳ್‌ ಕವಲೆಣಿಕೆಯನೂರದಿರ್‌  

ಮೈಗೈಗಳಿನಪ್ಪುದನೆಂತಾನುಂ ಗೈವೆಂ, ಅದೇಂ ಪೇಳ್‌".   


ಚಂದ್ರಾ--ಪಾರ್ವರಗ್ಗಳ ! ಪೆರ್ಜೇನುಮಿಲ್ಲಂ, ನೀನಿನ್ನು   

ಪೋಗಲುಳಿದ ಗೋಕುಲಕ್ಕೈದಲುಂಟೊ?"     


ವಿಪ್ರಂ--"ಹುಂ, ಉಂಟು; ನಿನಗೇನಾನುಂ ಕಾರ್ಯಮಿರ್ದೊಡೆ    

ಅತ್ಯವಶ್ಯಂ."

೩೪--------------------------------------------------------------------

ಚಂದ್ರಾ--“ಏನಗೆಂದೇ ಪೋಪುದಂ ಮಾಣ್‌, ಸ್ವಕಾರ್ಯದಿಂ   

ಪೋದೊಡೆ, ಅಲ್ಲಿ ರಾಧೆ ಯೆಂಬ ಎನ್ನಕ್ಕನುಂಟು, ಅವಳಂ ಕಾಣದೆ ಚಣಂ  

ಯುಗಮಾಗಿರ್ಕುಂ. ಅದರಿನೀಪರಿಯಂ ಪೇಳಿ, ಒರ್ಮೆ ಆಕೆಯನಿ   

ಲ್ಲಿಗೆ ಬರ್ಪಂತೆ ಗೈದೊಡಕ್ಟುಂ."   


ವಿಪ್ರಂ--"ಎನ್ನಬ್ಬೆ ಇದೇಂ ಪೆರ್ಜಿನ ಊಳಿಗಮೆ? ಮಾವಿಗೆ   

ನೀರೆರೆವುದರೊಳೇ ಪಿತೃತರ್ಪಣಮಂ ಪೂರಯಿಸಿದೆಂತೆ, ಎಂತಾನುಂ   

ಪೋಪ ಕಜ್ಜದೊಡನೆಯೆ ನಿನ್ನ ಕೆಲಸಮನುಂ ಗೈವೆಂ ನುಡಿಗೇಂ   

ನಷ್ಟಂ?" ಎಂದೆಲ್ಲಿಂ ಗೋಕುಲಕ್ಳೆ ತಂದು ಗೊಲ್ಲರ   

ಕೇರಿಯೊಳ್‌ ಪ್ರತಿಗೃಹಮನುಂ ಪೊಕ್ಕು ಯಾಚ್ಞಾದ್ರವ್ಯಮಂ ಕೊಂಡು,  

ವಿಚಾರಿಸುತೆ ರಾಧೆಯ ಮನೆಗೆಯ್ದಿದಂ--ಆಗಳ್‌ ಮನೆಗೆಲಸೆದೆ. ಅಸೆ   

ವಸದಿಂ, ರಾಧೆಯೊಳಂಗಡೆಯೊಳೆ ಇರ್ದಳ್‌. ಕೃಷ್ಣನುಂ ಒಡನೆ ಇನಿಸಿ  

ನಿಸುಮಾಕೆಯಂ ಕೆಣಕುತುಮಿರ್ದಂ.. ಅಂತಿರೆ ಪೆರಗಣಿಂ "ಭವತಿ   

ಭಿಕ್ಪಾಂ ದೇಹಿ" ಎಂಬ ನಿಡುಸರಂ ಕೇಳಿಸಿತು. ಮನೆಗಜ್ಜದೆ ಎಳ್ತರ   

ದಿಂ ರಾಧೆಯದನರಿತಳಿಲ್ಲಂ.   


ಕೃಷ್ಣಂ--ಆರವಮಂ ಕೇಳ್ದೊಡಿವಂದು ದ್ವಿಜನಂ ಆತಿಥ್ಯದಿಂ   

ಮನ್ನಿಸಿ, ಆಕಾರದಿನೇ ಆತನ ವೃತ್ತಿಯನರಿತು ಧರ್ಮಮನೀಯೆ--


ವಿಪ್ರಂ--(ಅದಂಕೊಂಡು) ಓ ಚೆಲ್ಮಣ್ಣ ರಾಧೆಯ ಮನೆಯಿ   

ದೆಂದು ಆರೋ ಪೇಳ್ದರ್‌, ಅವಳ್‌ ಈಗಳೇನೊಳಗಿಲ್ಲವೆ?   


ಕೃಷ್ಣಂ--ಇರ್ಪಳ್‌, ಆಕೆಯೊಳೇಂ ಕಜ್ಜಂ?   


ವಿಪ್ರಂ--ಬೀಸೇಸೆಮಿಲ್ಲಂ, ಸಿಂಧು ಗ್ರಾಮದೊಳಿರ್ಪ ರಾಧೆಯ   

ನುಜೆ ಚಂದ್ರಾವಳಿಯೆಂಬಳ್‌ ಅಕ್ಕಂಗಿನಿಸನೊರೆಯಲ್ವೇಳ್ಕುಮ ಎಂದು ಪೇ   

ಳ್ದಳ್.  ಅದರಿನಾರಾಧೆಯಂ ಕರೆದೊಡಕ್ಕುಂ.   


ಕೃಷ್ಣಂ--(ಘಟಿದೀಪದಂತೆ ಒಳಗಣ ಸಂತಸದಿಂ) ಹುಂ (ಎಂದು   

ತಟಕ್ಕನೆ ರಾಧೆಯೈತಂದೊಡೆ ಏಂಗೈವುದು? ಎಂಬ ಭಯದಿನುಂ ಒಳ 

೩೫---------------------------------------------------------------------

ಗೈದಿ, 'ಅದಂ ಗೆಯ್ಯಲ್ವೇಳ್ಕುಂ, ಇದಂ ಮಾಳ್ಬುದವಶ್ಶಂ', ಎಂದಾಕೆ       

ಯಂ ಕೆಲಸೆದೊಳೆ ನಿಯೋಗಿಸಿ ಬಂದು)--ವಿಪ್ರ! ಅವಳ್ಗೆ ಇನಿಸುಮ   

ಸ್ವಸ್ಥಂ, ಅದಿರ್ಕೆ, ಅಂತಲ್ಲದೆ ಗಾಢನಿದ್ರೆ. ಅದರಿಂ ವಿಚ್ಚರಿಸುದಸಾಧ್ಯಂ  

ಆಂತುಮಲ್ಲದೆ, ನಿದ್ರಾಭಂಗಂ ಅಕಾರ್ಯಮಲ್ತೆ? ಅದಿರ್ಕೆ ಚಂದ್ರಾವಳಿ   

ಏನೊರೆದಳ್‌ ಪೇಳ್‌, ಆನೆ ರಾಧೆಗುಸಿರ್ವೆಂ ಏನಾಗದೆ?   


ಪಾರ್ವಂ--ಅಕ್ಕುಂ, ಚಂದ್ರಾವಳಿಗೆ ಅಕ್ಕನಂ ಕಾಣದೆ ದಿನಂ   

ಪೋಪುದಿಲ್ಲಮಂತೆ, ಅದರಿಂ ಅಗ್ರಜೆಯಂ ಒರ್ಮೆ ಬರ್ಪಂತೆ ಪೇಳಲ್ವೇ   

ಳ್ಕುಮೆಂದು ಬನ್ನನೆ ಬಂದು ಮೂರುಂ ಮೂರುಂ ಬಾರಿ ನುಡಿದಿರ್ಪಳ್‌.   


ಕೃಷ್ಣಂ--ಅಕ್ಕೆ ತಂತಮ್ಮ ಬಂಧುಗಳಂ ನೋಳ್ಪುದೆಂದೊಡೆ   

ಆರ್ಗುಂ ಕುತೂಹಲಾಸ್ಪದಮೆ, ಅಂತಿರೆ ಅಸ್ವತಂತ್ರೆಯರಪ್ಪ ಅಬಲೆ   

ಯರ್ಗೆ ಏಂ ಪೇಳ್ವುದು?   


ವಿಪ್ರಂ--ಅಂತಾದೊಡೆ ಆಂ ಪೋಪೆಂ, ಪೇಳಲ್‌ ಮರೆತು,   

'ನಾಡಾಡಿಯಪ್ಪ ದ್ಕಿಜಂಗೆ ಬಿಕ್ಕೆಯಂ ಕುಡುವೆಡೆಯೊಳೆ ಗುರುತಲ್ಲದೆ   

ಬಳಿಯಮುಂಟೆ' ಎಂಬ ಆ ಚಂದ್ರಾವಳಿಯ ನುಡಿಗೆನ್ನಂ ಈಡೆಸಗದಿರ್‌.  


ಕೃಷ್ಣಂ--ಇನಿತರೊಳುಂ ಸಂದೆಗಮೆ? ಒಪ್ಪಿದೆ ಮೇಲೆ ಎಂತಾನುಂ 

ಈ ರಾಧೆಯಂ ಚಂದ್ರಾವಳಿಯೊಡಂಗೂಡಿಪ. ಭಾರಮೆನ್ನೊಳಲ್ತೆ, (ಎನೆ)   

ಆಯ್ತು ಎಂದಾವಿಪ್ರಂ ತೆರಳ್ದಂ--   


ಬಳಿಯಂ ಕೃಷ್ಣಂ ಪುಡುಕುವ ಮರ್ದುವಳ್ಳಿಯೆ ಕಾಲ್ಗೆಸುತ್ತಿದುದು 

ಎಂದು ಬಗೆದು, ಆಚಣವಮೆ ಪೊರಟು ರಾಧೆಯ ರೂಪಮನೆ ಧರಿಸಿ,   

ನೋಳ್ಪ ವಿಟರ ಎರ್ದೆ ಝಲ್ಲೆನೆ ಮದಗತಿಯ ಗಾಡಿಯಿಂ, ಅಂಗಭೆಂಗಿ   

ಗಳ ಮೋಡಿಯಿಂ, ಸಿಂಧುಗ್ರಾಮದೊಳಿರ್ಪ ಚಂದನ ಮನೆಗೆ ಬಂದಂ.   

ಅಂತೆ ಬಂದು ಮನೆಯ ಒಳವುಗುವುದುಂ.   


ಚಂದನ ಅಬ್ಬ ಸುಮುಖಿ 'ಓ ಚಂದ್ರಾವಳಿ! ಇದೋ ನಿನ್ನಕ್ಕಂ 

೩೬--------------------------------------------------------------------

ಬಂದೆಳ್‌' ಎಂದು ಪೇರ್ಸೆರದಿಂ ಕರಿದುಸಿರ್ದು, ರಾಧೆಗೆ ಪರಿಪರಿಯ ಸತ್ಕಾ   

ರಂ ಗೆಯ್ದಳ್‌. ಒಡನಾ ಚಂದ್ರಾವಳಿಯುಂ ಓಡಿ ವಂದು ಅಕ್ಕಂಗೆರಗೆ--    


ಕೃತ್ರ್ರಿಮೆ--ಓ ಪರಮಪ್ರಿಯೆಯಪ್ಪ ತಂಗೆ! ಸೊಬಗಿನ ಕಣಿ   

ಯಪ್ಪನಲ್ಲನೊಡನೆ ಸೊಗಂ ಬಾಳ್ಕೆ (ಎಂದು ಪರಸಿದಳ್‌.)   


ಚಂದ್ರಾ--ಅಕ್ಕು! ಆಂ ನಿನ್ನಂ ಕಾಣದೆ ಎನಿತ್ತೋ ಬರಿಸ   

ಮಾಯ್ತು. 


ಕೃತ್ರಿಮೆ--(ನಕ್ಕು) ಹುಂ ಸಾಲ್ಗುಂ. ನಿನ್ನ ನಲ್ಮೆಯೆಲ್ಲವಂ   

ಆನರಿಯೆನೆ? ಆ ಬಿತ್ತರಮೆಲ್ಲಂ ಒಂದೆಡೆಯೂಳೆ ಇರ್ಕೆ.   


ಚಂದ್ರಾ--ಅಕ್ಕ, ಇದೇಂ ನಿನ್ನ ನುಡಿಯೊಳ್‌ ಕೊಂಕು? ಅಂತೇ   

ನಾನುಂ ತಪ್ಪಿತಮಿರ್ದೊಡೆ ಕಿರಿಯಳೊಳ್‌ ಪೇಳಲಾಗದೆ?  


ಕ್ರುತ್ರಿಮೆ--ಪೇಳ್ಯುದೇಂ? ಮೊನ್ನೆ ಅಬ್ಬೆವನೆಗೆ ನೀನೆಯ್ತಂದುಂ   

ಎನ್ಸಂ ಲಕ್ಷಿಸದೆಯೆ ಇತ್ತಲ್‌ ಬಂದುದರಿನೇ, ಪ್ರೀತಿಯ ತೆರನೆಲ್ಲಂ ನಿರ್ಣ  

ಯಮಾಯ್ತು,  ಅನೋ ನೀಂ ಬಂದಿರ್ಪೆಯೆಂದು ಎನಿತ್ತಾತುರದೊಳ್‌   

ಇರ್ದಿನೆಂಬುದೆಂ ಬಲ್ಲರೆ ಬಲ್ಲರ್"   


ಸುಮುಖಿ--ರಾಧೆ! ಅವಳ್‌ ಮೊದಲೇ ಪೇಳ್ದಳಲ್ತೆ, ಆಂ ಕಿರಿ   

ಯಳಿಂದು ಅದರಿಂ ಆಕೆಯ ತಪ್ಪಂ ಕ್ಷಮಿಸಿ, ತಂಗೆಯಂ ನೀನಾದೊ   

ಡುಂ ನೋಡಿ ಬಿನದಿಸಲಕೆನಾಯ್ತು?  


ಕೃತ್ತಿಮೆ--ಅತ್ತೆ! ನೀಂ ಸೊಸೆಗೆ ಸಾಯಮಂ ಗೆಯ್ದಪೆ ಹುಂ   

ಇರ್ಕೆ. ಕಳೆದೆ ಬಿಸಯಂಗಳೆಲ್ಲವುಮಿರ್ಕೆ, (ಈ ಪರಿಯಿಂ ಸರಸ   

ಸಲ್ಲಾಪಂಗಳಿಂ ಪೊಳ್ತಿನಿಸುಂ ಕಳೆಯೆ,)   


ಕೃತ್ರಿಮೆ-- ಎರಳ್ಮೂರ್ದೆವಸಕೆ. ಒರ್ಮೆಯಾದೊಡುಂ ನಿಮ್ಮಂ   

ನೋಡಿ ಮುದಂದಾಳ್ವೆನೆಂದೊಡುಂ ಅದೃಷ್ಟವಶದಿಂ ಮನೆಯಿದು 

ಇನಿತ್ತುಂ   ದೂರಮಾಯ್ತು. 

೩೭-------------------------------------------------------------------

ಸುಮ ಖಿ--ಮನೆ ದೊರಮಾದೊಡೇಂ ಮನಂ ಸಮೀಪಮಲ್ತೆ?   

ಒರ್ಮೆ ಬಂದೊಡೆ ಪತ್ತುಂದಿನಮಿರ್ದು ಪೋದೊಡಾಯ್ತು, ಮತ್ತೇಂ?   


ಕೃತ್ರಿಮೆ--ಅಕ್ಕುಂ ಇನ್ನೆಂದು ಮಂತಕ್ಕುಂ,   


ಸುಮುಖಿ--ಎಂದು ಮೆಂದೇಂ, ಇಂದುಂ ನಿನ್ನಂ ಪೋಗಲಾರ್‌   

ಬಿಡುವರ್'   


ಕೃತ್ರ್ರಿಮೆ--ಆಂ ಬರ್ಪಾಗಳ್‌ ಮನೆಯೊಳ್‌ ಪೇಳ್ದೆನಿಲ್ಲಂ. ಅದ   

ರಿಂ ಪೋಗದೊಡೆ ಬೈವರ್‌.   


ಸುಮಖಿ--ನಿನ್ನಂ ಬೈವುದೆಲ್ಲಮಿರ್ಕೆ, ಆಂತುಂ ಪೋಗಲ್ವೇ   

ಕ್ಕುಮಾದೊಡೆ ಎರಳ್ಮೂರ್ವಗಲಾದೊಡುಮಿರ್ದು ಫೋಪುದು, ಮನೆವಾ   

ಳ್ತೆಯಂ, ನಾಡಿನಂದಮಂ, ಬಂಧುಗಳ ಪರಿಯಂ, ಒಂದುಮಂ ಕೇಳ್ದೆನಿಲ್ಲಂ,  


ಕೃತ್ರಿಮೆ--"ಒಳಗಣ ಗುಟ್ಟಿಂ ಶಿವನೇ ಬಲ್ಲಂ" ಎಂಬಂತೆ)   

ಎಮ್ಮ ಮನೆಯಂದಂ ಅರ್ಗುಮರಿಯದು. ಅದರಿನೀಗಳ್‌ ಪೋಪೆಂ   

ಇನ್ನೊರ್ಮೆ ಬರ್ಪೆಂ, ಮೇಣೇಂ ಆನಿಂದಿಲ್ಲಿ ಕೂಂತೂಡೆ ಮುಳ್ಳ ಮೇಲೆ   

ಕೂತಂತೆಯೆ ವಲಂ.   


ಸುಮುಖಿ-ಓವೋ ಮಾತಿನ ಪುರುಳೆ, ನಿನ್ನೊಳ್‌ ನುಡಿಯಲ್   

ಈ ಪಳ್ಳಿಯ ಪೆಣ್ಗಳಂತು ನೆರೆವರ್‌? ಅದೆಲ್ಲಮಿರ್ಕೆ, ನಿನ್ನ ತಂಗೆಗೆ ಕನ   

ಸಿನೊಳುಂ "ಅಕ್ಕಂ ಅಕ್ಕುಂ" ಎಂಬೊಂದು ಮಂತ್ರಂ, ಅದೆರಿಂ ಪೋಪೊಡೆ  

ಅವಳನೊಪ್ಪಿ,ಸಿ ಪೋಗು.   


ಚಂದ್ರಾ--ಅಕ್ಕ! ಮನೆಯೊಳ್‌ ನಿನಗಿರ್ಪ ಕಜ್ಜಂಗಳನೆಲ್ಲವಂ   

ಆನರಿ ವೆಂ, ಅದಿರ್ಕೆ, ನೀನಿಂದು ಪೋದೊಡೆ ಎನ್ನ ಎಂದಿನ ಕನಸಿನಂತೆ  

ಇದುವೊಂದು ಕನಸೇ.   


ಕೃತ್ರಿಮೆ-- ಕೇಳೆನ್ನ ಮನೋರಮೆ! ನೀನುಮಿಂತುಟು ಚಲವಿಡಿ   

ಯಲಾಗದು. ನಿನಗೆ ಮಾತ್ರಮಲ್ಲಂ ನಿನ್ನಿಂ ಪತ್ತುಂಮಡಿ ನಿನ್ನೆಂ ನೋಡ   

ಲಾಸೆ ಈ ರಾಧೆಗುಮುಂಟು. ಆ ನುಡಿಯಿರ್ಕೆ, ಪೆಣ್ಗಳ್ ಮನೆಯೊಳ್‌ 

೩೮------------------------------------------------------------------

ಪೇಳದೆಯೆ ಬೇರೆಡೆಯೊಳೆರುಳಂ ಕಳದೊಡೆ ಏನರ್ಥಂ! ನೀನೇನರಿಯದಳೆ?   

ಇದೋ ಸಂಜೆಯುಮಂಟಿತು, ಪೋಪೆಂ,   


ಚಂದಂ--(ನಸುನಕ್ಕು) ಓ ಅತ್ತಿಗೆ! ಜಾಣ್ಮೆಗಳೆಲ್ಲವುಮಿರ್ಕೆ.   

ನೀನೇ ಗೃಹಾಧಿದೇವತಯಾಗಿರಲ್‌ ಪೊರಡುವಾಗಳ್‌ ಚಾವಡಿಯೊಳ್‌  

ಪೇಳ್ವುದೋ ಬಾಗಲೊಳೊ? ಅದು ಪೋಕೆ, ನಿನ್ನ ನುಡಿಯನೆ ಮಹಾ  

ಪ್ರಸಾದಮೆಂದು ತಲೆಯೊಳೆ ಪೊತ್ತು ನಡೆಯಿಪನಾಕೃಷ್ಣಂ, ಅಂತಿರೆ ಬಯ  

ಲೊಳ್‌ ಅಡಂಗುವುದೇಕೆ? 'ಕೃಷ್ಣನಂ ಬಿಟ್ಟೊಡೆ ಈ ರಾತ್ರಿಯೊಳ್‌ ಜೀವಂ  

ನಿಲ್ಲದು' ಎಂದುಸಿರಲ್ಕಾಗದೆ? ಅಂತೆ ಜೀವಂ ನಿಲ್ಲದೊಡುಮೊಂದು  

ಉಪಾಯಮುಂಟು, ಪಲವುಂಬಗೆಯ ಶಾಸ್ತ್ರಂಗಳೊಳುಂ, ಲೌಕಿಕಾಚಾರ  

ದೊಳುಂ, ಉಪಾಯಮಿಲ್ಲದೊಡೆ ಒಂದಕೆ ಪಡಿಯಾಗಿ ತತ್ಸದೃಶವಸ್ತುವ  

ನಿನ್ನೊಂದಂ ಗೈಯಲಕ್ಕುಮೆಂಬ ಬಿದಿಯುಂಟು; ಅದರಿಂ ಅದರಂತೆ ಈ  

ಇರುಳೂಂದಕೆ, ಸಮಾನವ್ಯಕ್ತಿಯನೊದವಿಪೆಂ ಏನಾಗದೆ?   


ಕೃತ್ರಿಮೆ--(ಆ. ನುಡಿಯಂ ಕೇಳ್ದು ರೋಷಾವೇಷಮಂ ನಟಿಸಿ   

ಜಗ್ಗನೇಳ್ದು) ಎಲೆಲೆ ಚಂದ! ಏನೆನ್ನಂ ಸೂಳೆವೆಣ್ಣೆಂದು ಎಣಸಿರ್ಪೆಯೆ?  

ವಿಶ್ವವಲ್ಲಭನ ಶ್ರೀ ಕೃಷ್ಣನ ನಲ್ಮೆಯ ನಲ್ಲೆಯಾದೆನದರೊಳೇಂಕುಂದು?   

ಏಂ ನಿನ್ನ ಶಾಸ್ತ್ರಾಚಾರಂ ಲೊಕಾಚಾರಮೆಂಬಿವುಗಳ್ ಎನಗೆ ಮಾತ್ರಂ  

ಪುಟ್ಟಿದುವೆ! ಹುಂ "ಉಪ್ಪಂ ತಿಂದವಂ ನೀರಂ ಕುಡಿವಂ" "ತಲೆಗೆರೆದ   

ನೀರ್‌ ಕಾಲ್ಗಿಳಿಗುಂ" ಸೊರ್ಕಂ ತಳೆದುದರ್ಕೆ ತಕ್ಕ ಫಲಮಂ ತಿಂಬೆ.  

ಅದಿಂತಾನುಮಿರ್ಕೆ (ಎಂದು ಚಂದ್ರಾವಳಿಯಂ ನೋಡಿ ಕಣ್ಣಂ ಪೊಸೆದು  

ಎಂತಾನುಂ ಕಣ್ಣೀರಂ ಸುರಿಸಿ-) ಎಲೆ ತಂಗೆ! ಆನಿಂದಲ್ಲದೊಡೆ ಮುಂದೆ   

ಏಗಳುಂ ಬರಲ್ವೇಳ್ಕುಮೆಂದೆಣಸಿರ್ದೆಂ, ಆದೊಡೆ ಈ ದುರುಳನ ನಿನ್ನ ಗಂಡನ  

ನುಡಿಯಿಂ ಅದರ್ಕೆ ಉತ್ತರಕ್ರಿಯೆಯಾಯ್ತು,. ನೀಂ ಪೇಳಿ ಕಳುಪಿದೆ   

ಯಲ್ತೆ, ಎಂದು ಮನಂಗೇಳದೆ ಬಂದುದರ್ಕೆ, ಎನಗೆ ಮನ್ನಣೆಯಾಯ್ತು,   

ಇನ್ನುಂ ಆಳನಟ್ಟಿ ಎನಗಶನಮುಂ ನೀರುಂ ಮೆಯ್ಗೆ ಪಿಡಿಯದಂತ ಮಾಡ   

ದಿರ್, ಇದಂತ್ಯದರ್ಶನಂ, ಇದರೊಳ್‌ ಆಂ ನಿನ್ನಂ ನೀನೆನ್ನಂ ಮರೆವುದು 

೩೯--------------------------------------------------------------------------

(ಎಂದು ಆಲಿಂಗನೆಂಗೆಯ್ದು ಪರಮಾನಂದದಿಂ ಬಗೆಯೂಳ್‌ ನಕ್ಕು ಬಿಸಿಲ್ಮ  

ಳೆಯಂತೆ ಕಣ್ಣೀರಂ ಸುರಿಸಿ) ಓ ಅತ್ತೆ! ಎನ್ನಂತಿರ್ಪ ಗಣಕೆಯರ್‌ ನಿಮ್ಮ   

ನ್ನರ ಮನೆಯಂ ಪುಗಲಾಗದು, ಆಂ ಬಂದುದು ತಪ್ಪಿತಮಾಯ್ತು, ಈ  

ಬಾಲಕಿಯಾಳನಟ್ಟಿದಳೆಂದು ಮುಂದರಿಯದೆ ಬಂದುದೆರ್ಕೆ ಕೋಪಿಸದಿರಿಂ,  

(ಎಂದು ಪೊರಟಳ್‌).   


ಚಂದಾ--ಮನೆಯವರ ಭೆಯದಿಂ ರಾಧೆಯಂ ಎವೆಯಿಕ್ತದೆ   

ನೋಡುತ್ತಂ ಮರುಗುತಿರ್ದಳ್‌.   


ಕೃತ್ರಿಮೆ--ಎಲೆ ಬಾಲೆ! ನೀನೇಕೆ ಅಳ್ತಪೆ? "ಕೊಟ್ಟ ಕೂಸು   

ಕುಲದಿಂ ಪರಗೆ" ಎಂಬ ತಿಳಿಯೆಯ? ಬರಿದೆ ಚಿಂತಿಸಿ   

ಮೆದುಮೆಯ್ಯಂ ದಂಡಿಸದಿರ್‌ (ಎಂದು ಪಿಂದೆ ನೋಡದೆ ಪೋದಳ್‌).  


ಒಡನಾಸುಮುಖಿ--(ಓಡಿವಂದು ಕೃತ್ರಿಮೆಯಿದಿರೊಳ್‌ ನಿಂದು) ಎಲೆ   

ರಾಧೆ! ಚಂದನ ಪರಿಯಂ ನೀನಿನ್ನುಂ ತಿಳಿಯದವಳೆ? ಅವಂ ಯೋಚಿಸಿ  

ನುಡಿವುದಲ್ಲಂ, ನುಡಿದು ಯೋಚಿಪುದು, ಅದರಿಂ ಅವನ ಮಾತಿರ್ಕೆ;  

ಎನ್ನನುಂ, ನಿನ್ನ್ನ ತಂಗೆಯನುಂ, ನೋಡಿಯಾದೊಡುಮಿಂದು ಪೋಗಲಾ   

ಗದು.   


ಕೃತ್ರಿಮೆ--ಅತ್ತೆ! ನಿನ್ನ ಮನದಿರಮಂ ಆನರಿಯೆನೆ? ನಿನಗಿದೋ   

ಸಾಸಿರಸೂಳ್‌ ವಂದಿಪೆಂ.. ಅದು ಪೋಸ, ಮರದ ಬಂದಣಕೆಯಂತೆ   

ಯುಂ, ತಣ್ಗೊಳದ ಪಾವಸೆಯಂತೆಯುಂ, ನಿನ್ನ ಬಸಿರೊಳ್‌ ಪುಟ್ಟಿದ ಈ   

ಕೂಳಂ ಇರ್ದೆಡೆಯೊಳಿರ್ದೊಡೆ ಬಳಿಯಮೆನ್ನಂ ಮನೆಯಂ ಪುಗಿಸರ್‌.,  

ಅದರಿನಿವನಿರ್ಪ ಮಾಡೊಳ್‌ ನೀರಂ ಮುಟ್ಟೆಂ.   


ಸುಮುಖಿ- ಎಲೆ. ಚಂದ! ಮನೆಯವರೆಂದಿಲ್ಲಂ, ಬಂದವರೆಂದಿ   

ಲ್ಲಂ, ಬಾಯ್ಗೆವಂದಂತೆ ಗಳಪಿ ಎಮ್ಮ ಕುಲಕೊಂದು ಬಹುಮಾನಮಂ   

ತಂದೆ; ಸಾಲ್ಗುಂ, ಇನ್ನಾನುಂ ನಿನ್ನತ್ತಿಗೆಯಂ ಸೆಂತಯಿಸು, ಪಿರಿಯಳಂ.  

ಬೇಡಿದೊಡೆ ನಿನ್ನ ಮಾನಂ ಕಿರಿದಾಗದು (ಎಂದು ಮೂದಲಿಸೆ) 

೪೦-----------------------------------------------------------------------

ಕೃತ್ರಿಮೆ--ಆತ್ತೆ! ಇದೇತರ ಮಾತು? ನಿನ್ನ ಮಗಂ ಅತಿಪು   

ನೀತಂ, ಶಾಸ್ತ್ರಾದಿಗಳ ಆಚಾರಂಗಳಂ ಉದ್ದೆರಿಪ ಮೈಮಂ, ಎನ್ಕೊಳ್‌  

ಬೇಡುವುದಿಂದೊಡೇಂ? ಆವುದುಂ ಬೇಡಂ, ಅವನಿರ್ದೆಡೆಗೆಯೆ ಸ್ಸ ಮುಗಿ   

ವೆಂ (ಎಂದು ಮೆಲ್ಲನಡಿಯಿಡೆ)   


ಚಂದಂ-- (ಓಡಿವಂದು ಏರಗಿ) ಅತ್ತಿಗೆ! ಆಂ ತರಳತೆಯಿಂ   

ಪಿಂಮುಂದರಿಯದೆ ನುಡಿದ ಅಪರಾಧಮನೆಲ್ಲಂ ಕಮಿಸು, ನೀನೆನಗೆ   

ತಾಯ್ಗೆ ಪಾಸಟಿ, ಅಂತುಮಲ್ಲದೆ ನೀನಿರ್ಪ ಮಾಡಿನ ಒಳಗಟ್ಬಿಗೆ ಆಂ  

ಬರ್ಪುದಿಲ್ಲಂ, ಎನ್ನಬ್ಬೆಯಾಣೆ, ಕುಲದೈವದಾಣೆ, ಮೇಣೇಂ ಎಂತಾನು   

ಮಿಂದು ಪೋಗಲಾಗದು.   


ಕೃತ್ರಿಮೆ--(ತನ್ನೊಳೆ ತಾಂ) ಓ ಚೆಂದನಿವಂ ತನ್ನ ಕೊರಲ್ಲೆ   

ತಾನೇ ಉರುಲಂ ಬಿಗಿದಂ. "ಮೂಢೊ ಮೂರ್ಖೋ ಗರ್ದಭಶ್ಚೈಕ   

"ರಾಶಿಃ" ಎಂಬೊಂದು ನುಡಿ ಈತಂಗೆಯೆ ನಿದರ್ಶನಂ.   


ಬಳಿಯಂ ಚಂದ್ರಾವಳಿಯುಂ, ಸುಮುಖಿಯುಂ, ಕೋಪಮನಿಡದಿ   

ರೆಂದು ಕಾಡಿದರ್.   


ಕೃತ್ರಿಮೆ-- ಆಯ್ತು, ನೀಮೆಲ್ಲರುಮಿಂತು ನುಡಿವುದಾದೊಡೆ ಎನಗಿ   

ನಿಸುಂ ಕೋಪಮಿಲ್ಲಂ. ಪೊಳ್ತಾದೊಡೆ ಮೀರಿತು, ಈಗಳ್‌ ಪೋಗಿ   

ವರ್ಪೆಂ.   


ಚಂದಂ--ನೀನೀಗಳ್‌ ಪೋದೊಡೆ ಕೋಪದಿನೇ ಎಂದಾಯ್ತು.   

ಅಂತುಮಲ್ಲದೆ ಸಂಜೆಯುಮಿದೋ ಸನ್ನಣಮಂ ಗೆಯ್ಗಂ, ಮೇಣೇಂ ಏನ   

ಗೇನುಂ ಸೆಮಾಧಾನಮಿಲ್ಲಂ, ಇದರಿಂ ಮೇಲೆ ನಿನ್ನ ಚಿತ್ತಂ, ಪರ್ಚೇಂ   

ಪೇಳ್ವುದು? (ಸುಮುಖಿಯಂ ನೋಡಿ) ಅಬ್ಬೆ! ಅಂತಲ್ತೆ?   


ಕೃತ್ರಿಮೆ--(ತನ್ನೊಳ್‌) ಇದಂ ಬಿಟ್ಟೊಡೆ ಸಮಯಂ ಬೇರಿಲ್ಲಂ--   

(ಎಂದು) ಚಂದ! ನಿಮ್ಮೆಲ್ಲರ ನುಡಿಯಂ ಮೀರಲುಂ, ಮರುಗುವೀ  

ಚಂದ್ರಾವಳಿಯಂ ನೋಡಿ ಸೈಸೆಲುಮಾರೆಂ, ಅಕ್ಕೆ, ಮನೆಯೊಳ್‌ ಬಂದು 

೪೧--------------------------------------------------------------------

- 41 - 

ದಂ ಎಂತಾನುಂ ನೋಳ್ಪೆಂ, ಮತ್ತೇಂ ಮಾಳ್ಪುದು (ಎಂದು ತಿರುಂಗಿ 

ಅವರೊಡನೆ ಮನೆಯಂ ಪೊಕ್ಕಳ್).


ಆ ಸಮಯದೊಳ್ ಸೂರ್ಯಂ, ಇನ್ನುಮಾಂ ಇಂತಿರ್ದೊಡೆ, ಜಗ 

ತ್ಪಿತಂ ವಾಸುದೇವಂ, ಮುನಿಯದಿರಂ, ಎಂದೆಣಿಸುತ್ತಮೆಂಬಂತೆವೊಲ್ 

ಅಸ್ತಂಗತನಾದಂ.   


ಬಳಿಯಂ ಚಂದಂ ಗೃಹಾಂತರದೊಳೆ ಇರೆ, ಎಲ್ಲರುಂ ಕಾಲಾನು 

ಸಾರದಿಂ ಭೋಜನಮಂ ತೀರ್ಚಿ, ಚಾವಡಿಯೊಳ್ ನಾಡಬಿಸಯಂಗಳನೆ 

ತ್ತುತಿರಲ್, ನಡೆದ ದಣಿವನೆಂಬಂತೆವೊಲ್ ಕೃತ್ರಿಮಯ ಮಾತುಂ ಕಣ್ಣುಂ   

 ಮುರ್ಚುರೆ-ಸುಮುಖಿ-ಚಂದ್ರಾವಳಿ! ದೂರಂ ನಡೆದು ಬಲ್‌ದಣಿ 

 ದಿರ್ಪಳ್ ನಿನ್ನಕಂ, ಅದರಿಂ ಅವಳೊಡನೆ ಸಜ್ಜೆವನೆಗೆ ಐದು    

 

ಕೃತಿಮೆ (ನಕ್ಕು) ಅತ್ತೆ! ಏನಾಂ ಚಂದ್ರಾವಳಿಯೊಡನೆ ಪವ   

ಡಿಸುವುದೆ?


ಚಂದಂ--ಅಂಗಳದೊಳ್ ತಂಗಾಳಿಗೆ ತಿರುಗುತಿರ್ದವಂ ಬಾಯ್ದೆ 

ರೆದು, ನುಡಿಯಲ್ ಬೆದರ್ದು ಮನದೊಳೆ “ಚಂದ್ರಾವಳಿಯಲ್ಲದೆ ಕೃಷ್ಣ 

ನೆಲ್ಲಿ ರ್ಪo?"


ಸುಮುಖಿ--ಏಂ ನಿನ್ನ ತಂಗೆಯೊಡನೆ ನಿದ್ರಿಸಲುಂ ಸಂದೇಹಮೆ?  


ಕೃತಿಮೆ-(ನಕ್ಕು) ಕಾಣ್ಬರ್ಗೆ ಎನಗೆ ತಂಗೆಯಾದೊಡುಂ ನಿನ್ನ 

ಚಂದನ ಅಧೀನದೊಳಿರ್ಪಳಲ್ತೆ, ಅದರಿಂದಂತೆ ಪೇಳ್ವೆಂ.


ಚ ೦ ದಂ-ಇದೇನತ್ತಿಗೆ ಮಳೆ ಬಿಟ್ಟ ಮರದ ಅಡಿಯಂತೆ ಪೆರ 

ಗಿಲ್ಲ ದೊಡುಂ ನಿನ್ನ ಒಳಗಣ ಮಚ್ಚರಂ ಪಿರಿದಾಯ್ತ, ಎನ್ನ ವಶಂಗತ 

ಳಂ ನೀಂ ನಂಬೆಯಾದೊಡೆ ಆ ಕೃಷ್ಣನ ವಶಂಗತಳಾದ ನಿನ್ನೊಡನೆ ಪವಡಿ 

ಸಲ್ ಎನ್ನರಸಿಗೆಂತು ನೇಮಿಪುದು?  


- ಕೃತ್ರಿಮೆ- (ನಕ್ಕು) ಅನೆಂತಪ್ಪಳಾದೊಡುಂ ನಿಮ್ಮ ಮನೆಯೊಳ 

ಗಿರ್ಪೆ೦, ಅದರಿಂ ನಿನ್ನರಸಿಯಂ ಏಂಗೆಯ್ವೆಂ?

೪೨--------------------------

  

ಚಂದಂ--ಇದೆಮ್ಮ ಮನೆಯಾದೊಡುಂ ನಿನ್ನೊಡನೆ ಪವಡಿಸುವ   

ಳಿವಳ್‌ ಮೊದಲ್‌ ನಿನ್ನನುಜೆಯಾದವಳಲ್ತೆ!   


ಕೃತ್ರಿಮೆ--ಆಸಂದೆಗಮೆ ಎನಗವಶ್ಶಂ, ಒಳ್ಳಿತಾಯ್ತು; ಈ ನಿನ್ನ   

ಸಿರೆ ಎನ್ನೊಡನೆ ಪವಡಿಸಲ್‌ ಬೇಡಂ, ಕಾಲಗತಿಯಿಂ ಏನಾನುಂ ದೋಷಂ   

ಬರ ಬಳಿಯಂ ರಾಧೆಗಲ್ತೆ ಪೊರಲಾರದಪವಾದಂ.   


ಚಂದಂ-.ಹುಂ ಅಪವಾದಮೆಲ್ಲಮಿರ್ಕೆ, ನೀನಿನ್ನಾನುಂ ಆಗಳಾ   

ನೆಂದ ಮಾತಿನ ಮಚ್ಚರದ ಪಿಡಿಯಂ ಪಿಡಿದು ಈ ನುಡಿಗತ್ತಿಯಿಂ. ಎನ್ನೆಂ  

ಕುತ್ತದಿರ್ ರಾತ್ರಿಯಂ ಮೀರಿತು.   


ಕೃತ್ರಿಮೆ--ಆಕ್ಕೆ, ನಿನ್ನರಸಿಗೇನಾನುಂ ದುರ್ಯೋಚನೆಯಂಕುರಿ   

ಸಿದೊಡೆ, ಕಡೆಗೆ ಎನ್ನಂ ಜರೆಯದಿರ್‌, ಕಿವಿಯಂ ಚಿವುಂಟಿಕೊಳ್‌, ಪೇಳ್ದಿ   

ರ್ಪೆಂ ಎಚ್ಚರಮಿರ್ಕೆ.   


ಚಂದಂ--ನಿನಗೇಂ ಮರುಳುಂ ಪಿಡಿಯಿತೆ? ಪೋ ಬಂದುದಂ   

ಕಾಣ್ಬೆಂ, ನಿದ್ದಗೆಟ್ಟೊಡೆ ಎನಗೆ ಪಿತ್ತಮೇರ್ಗುಂ. (ಎಂದು ತಾನೊಂದೆಡೆಗೆ   

ನಿದಿಸಲೆಂದು ಪೋದಂ)   


ಕೃತ್ರಿಮೆ-- ಮನದೋಳ್‌, ನಿನಗೆ ಪಿತ್ತಮೀಗಳೆ ಏರಿರ್ಕುಂ,   

ಅಲ್ಲದೊಡೆನ್ನ ಮಾತಿನ ಪೊಲಬನೆ ತಿಳಿಯದೆ ಪೆಂಡತಿಯನೆನಗೊಪ್ಪಿಸೆ್ಯ,  

ಓ ಬಿದಿಯೆ! ಮಂಕನ ಕೈಗೆ ಮಾಣಕಮನಿತ್ತಂತೆಪೋಲ್‌ ಈ ಕುರೂ   

ಪಿಗೆ, ರತಿಸುಂದರಿಯನೀಕೆಯಂ ಗಂಟಕ್ಕಿದ ನಿನ್ನಂ ಜಡಜಭವನೆಂದು   

ಬಣ್ಣಪ ಕಬ್ಬಿಗನಾಶಯಂ ನಿರರ್ಥಮಾಗದು, (ಎಂದು ಚಂದ್ರಾವಳಿಯೊ   

ಡನೆ ಶಯ್ಯಾಗೃಹಮನಲಂಕರಿಸಲೆಂದು ಪೋದಂ)   

 

ಆಃ! ಆ ಸೆಜ್ಜೆವನೆಯಂ ಬಣ್ಣಿಪುದೆಂತು? ಎಾತಾಯನದೊಳೊಳೆ   

ಪೊಕ್ಕ ತನ್ನ ಕೆಳೆಯನಪ್ಪ ಮಂದಮಾರುತನೊಳ್‌, ಶ್ರೀಕೃಷ್ಣನ ಮೈಮೆ  

ಯನಾರ್ಗುಂ ಬಣ್ಣಿಸಲಸಾಧ್ಯಮೆಂದು ಶಿರಃಕಂಪನದಿಂ ತಿಳಿಸುವಂತೆವೋಲ್‌ 

ಪೆರ್ಜೊಡರೊಲೆಯುತಿರ್ದುದು. 

೪೩-------------------------------------------------------------------

ನೀಂ ಮಲಗುವ ಕೋಣೆಯೊಳೆ, ಪೆಂಡತಿಯಂ ಪೆರಂಗೊಪ್ಲಿಸಿದೆ:   

ನಿನ್ನಿಂಪೆರ್ಚಿನ ಮೂಡರಾರುಮಿಲ್ಲಮೆಂದ್ಕು, ಚಂದನಂ ಕೂರ್ತು ನಗುವ  

ನಗುವೆಳ್ಪು ಅಂತರದೊಳ್‌ ನಿಲಲಾರದೆ ಪೆರಸೊಸುಗುಮೆಂಬಂತೆ ಆ   

ದೀಪದ ತೇಜಂ ಒಳಯಿಂಕೆ ತುಂಬಿ ಗವಾಕ್ಷಂಗಳೊಳ್‌ ಮಿನುಮಿನುಂಗು.   

ತಿರ್ಕುಂ.   


ದುರುಳನುಂ ಕುರೂಪಿಯುಮಪ್ಪ ಚಂದನಂ ಬಿಟ್ಟು, ಕೃಷ್ಣಸ್ಪರ್ಶನ   

ದಿಂ ಧನ್ಯನಪ್ಪೆನೆಂದು ಕೆದರ್ದ ಮಲ್ಲಿಕಾ ಮಂದಾರಾದಿ ಕುಸುಮಂಗಳ   

ನೆವದಿಂ ಆ ಪಾಸಿಗೆ ಸುಮನೋರಾಗಂದಾಳ್ಗುಂ--  


ಈ ತೆರದೊಳ್‌ ಇನ್ನುಂ ಪರಿಪರಿಯಿಂ ಕಬ್ಬಿಗಂಗೆಡೆಗುಡುವ ಶಯ್ಯಾ   

ಗೃಹಮಂ ಗೋಪಾಲಂ ರಾಧಾಪ್ರಿಯಂ ಚಂದ್ರಾವಳಿಯೊಡನೆೊಳವೊಕ್ಕು,   

ಸಂತಸದಿಂ ಹಂಸತೂಲಿಕಾತಲ್ಪದೊಳ್‌ ಕೂಂತು ತಂಬುಲಮಂ ಸವಿವಾ   

ಗಳ್‌--   


ಚಂದ್ರಾ--ಅಕ್ಕ! ನೀನಿನಿತುಂ ಪೊಳ್ತು ಪೋಗದ ಮಾತುಗಳ   

ನಾಡಿ ಬರಿದೆ ತಡಂಗೆಯ್ದುದೇಕ? ಹುಂ, ನಿನಗೀಗಳ್‌ ಆ   

ಪರಿಯೊಳೆ ನುಡಿವ ಅಭ್ಯಾಸೆಮಿರಲ್‌ಸಾಲ್ಗುಂ,   


ಕೃತ್ರಿಮೆ--ಹುಂ, ಅಭ್ಯಾಸನಮೆ ಅಕ್ಕೆ-..ತಡಂಗೆಯ್ಯದೆ ಸಜ್ಜೆವನೆಗೆ   

ಬಂದು ಏಂ ಮಾಳ್ಪುದೊ?    


ಚಂ ದ್ರಾ-(ನಕ್ಕು) ಮಾಳ್ಬುದೇಂ? ನಿದ್ರಿಪುದು, ನೀನೇಂ ಕೃಷ್ಣ   

ನಿಲ್ಲಿಯುಂ ಇರ್ಪನೆಂದೆಣಸಿರ್ಪೆಯೆ?   


ಕೃತ್ರಿಮೆ--ನಿನ್ನ ಪರಿಹಾಸ್ಯಮೆಲ್ಲಮಿರ್ಕೆ, ಸರ್ವಾಂತರ್ಯಾಮಿ   

ಯಪ್ಪ ಶ್ರೀ ಕೃಷ್ಣಂ ಏನಿಲ್ಲಿ ಇರಲಾರನೆ?   


ಚಂ ದ್ರಾ--ಅಂತಾದೊಡವನಂ ಕಾಣಿಸ, ನೋಳ್ಪೆಂ.   


ಕೃತ್ರಿಮೆ--ಮಾಣಿಕಮಂ ಮುಚ್ಟಿದೊಡುಂ ಮಸಿಯಪ್ಪ ನಿರ್ಭಾ   

ಗ್ಯರ್ಗೆ ಆ ಮೈಮಂ ಇದಿರೂಳಿರ್ದೊಡುಂ ಏಂ ಕಾಣ್ಬನೆ? 

೪೪-------------------------------------------------------------

ಚಂದ್ರಾ--(ನಸುನೆಗೆಯಿಂ) ಆಯ್ತು, ಎನೆಗೆ ಆ ಭಾಗ್ಯಂ

ಬೇಡಂ, ಕಿರುವರಯದೆ ಮೇಪಿನ ಬಾಲಕನೊಡನೆ ವಿಹರಿಪ ನಿನಗೆಯೆ   

ಇರ್ಕೆ. ಪುಣ್ಯಮೆ ಸರ್ವೋತ್ತಮಂ.   


ಕೃತ್ರಿಮೆ--ನೀಂ ಪೇಳ್ವುದೇಂ! ಅಂತೆಯೆ ಇರ್ಕುಮಲ್ತೈ ಆ   

ದೊಡುಂ ಆ ಶ್ರೀ ಕೃಷ್ಣನಂದಮಂ ಕೇಳ್‌--ಅವಂ ಬಾಲರ್ಗೆ ಬಾಲಂ,   

ವೃದ್ಧರ್ಗೆ ವೃದ್ಧಂ, ರಸಿಕೆಯರಪ್ಪ ಪಣ್ಗಳ್ಗೆ ಜೌವನಿಗನಾಗಿಯುಂ, ಇನ್ನುಂ  

ಪಲಂಬರೆಣಕೆಗೆ ಪಲವುಂ ಪರಿಯಿಂ ಕಾಣ್ಬಂ.  


ಚಂದ್ರಾ--(ಆ ನುಡಿಗೇಳ್ದು ತನ್ನ ವಿರಹಾಂಕುರಕೆ ಮಳೆಗಾಲಂ  

ತಲದೋರ್ದೆಂಶಾದೊಡುಂ, ಗುಟ್ಟಂ ತಿಳಿಸೆದೆ) ಆ ಕಳ್ಳೆನನಿನಿತುಂ ಪೊಗ   

ಳ್ವುದೆ! ಆಂ ಮೊನ್ನೆ ನಮ್ಮಜ್ಜಿಯ ಮನೆಯಿಂ ಕೆರೆಮೀಯಲೆಂದು ಉಪ   

ವನಕೈದಿರಲ್‌, ಅತಿಕ್ರಮಂಗೆಯ್ದ ನಿನ್ನ ಆಮೈಮನಂ ನೂಂಕಿ ಬಾರದ   

ಬನ್ನಮಂ ಗೈದೆಂ. ಬಳಿಯಮವಂ, ಪೆಣ್ಗಳೆಲ್ಲರುಂ ಬೆಂಬತ್ತೆ ಕೈಯೊಳೆ   

ಜೀವಮಂ ಬಿಗಿವಿಡಿದು. ದಾರಿಯೊಳ್‌ ಪುಲ್ಲುಂ ಮೊಳೆಯದಂತೆ ಪಾರ್ದಂ,   

(ನಕ್ಕು) ನಿನ್ನ ಸರ್ವಾಂತರ್ಯಾಮಿ, ಎತ್ತೆತ್ತಮೊ ಪಾರ್ದುದು ಎತ್ತೆತ್ತಲುಂ  

ತಾನಿರ್ಪೆನೆಂಬುದಂ ತಿಳಿಸಲಲ್ತೆ?    


ಕೃತ್ರಿಮೆ--ಸಾಲ್ಗುಂ ನಿನ್ನ ವಿಶೇಷವಾರ್ತೆಗಳ್‌, ಯತಿಗಳಂತ   

ರಕುಂ ಮಿಂಚಿನಂತಿರ್ಪ ಶ್ರೀ ಕೃಷ್ಣಂ ಈ ರಾಧೆಯೊಳ್‌ ಐಕ್ಯಮಾಗಿರಲ್‌   

ಆ ವೃತ್ತಾಂತಮೇಂ ಪೊಸೆತೆ? ಎಲ್ಲವಂ ಈಕೆ ತಿಳಿದಿರ್ಪಳ್‌ ಎಂದೇ     

ಭಾವಿಸು.       


ಚಂದ್ರಾ--ನೀಂ ತಿಳಿಯಲ್‌ ಅವಂ ಪೇಳಲ್ವೇಳ್ಕುಂ, ಅಂತಾ   

ದೊಡೆಂ ನುಡಿದಂ?   


ಕೃತ್ರಿಮೆ--ಕೇಳಾದೊಡೆ, ಆ ಶ್ರೀ ಕೃಷ್ಣಂ ನಿದ್ದೆಯೊಳ್‌   

ಎನ್ನೊಳ್ 'ಎಲೆ ಕಾದಲೆ! ನಿನ್ನ ತಂಗೆಯಂ ಕಂಡರುಂ, ಕೇಳ್ದರುಂ, 

೪೫-------------------------------------------------------------

ಎಲ್ಲರುಂ ನಾಗಕನ್ನಿಕೆಯೂ? ದೇವ ಸ್ತ್ರೀಯೋ! ಎಂದು ನಾಲಗೆವಂದಂತೆ  

ಎಂತೆಂತೋ ಪೊಗಳ್ದರ್.. ಆಕಟಾ! ಆನುಮಾಮಾತಿಗೆ ಮರುಳಾಗಿ,   

ಮಾವಂ ಬಿಟ್ಟು ಬೇವಂ ಇಚ್ಚಿಪ ಕೋಗಿಲೆಯೊ ಎಂಬಂತೆವೊಲ್‌ ಉಪವನ  

ದೊಳ್‌ ಪೆಣ್ಣಡಣದೊಡನಿರ್ಪ ನಿನ್ನ ಚಂದ್ರಾವಳಿಯೆಡೆಗೆ ಪೋಗಿ ಮಾತಾ   

ಡಲ್‌, ಮಾತೋ ಬಿಸಗೆಯ್ಪೆ, ನೋಟಮೊ ಕಾಟಂ, ರೂಪಮಾದೊಡೆ  

ಸಾಮಾನ್ಯಮಿರ್ಕುಂ, ಎನ್ನಮನದನ್ನೆಯ ತಂಗೆಯಲ್ತೆ! ಹುಂ, ಇನ್ನವಳಿರ್ದೆ  

ಡೆಗೆಯೆ ಸಾಷ್ಟಾಂಗಂ, ಎಂದು ಇಂತೆಲ್ಲಂ ನುಡಿಪುತಿರ್ದಂ, ಎಲೆ ಮುಗುದೆ!   

ಆಂ ಪೂತನೀಭಂಜನಂ ತನಗೆ ಬೆದರ್ದನೆಂದೆಣಸಿದ ನಿನ್ನ ಅಜ್ಜಾನಕೇ  

ನೆಂಬೆನೊ!  


ಚಂದ್ರಾ--(ಅಭಿಮಾನಂ ಸೆವೆಯ) ಕೃಷ್ಣನಂತೆಲ್ಲಂ ಪೇಳ್ದುದು   

ನಿಜಮೆ!  

ಕೃತ್ರಿಮೆ--ಹುಂ, ನಿಜಮೆಲ್ಲಂ, ಪುಸಿಯೆ-ಏನೆನ್ನೊಳಾನಂದಿಸಿದೆ.   

ಮನದನ್ನಂ ಕನಸಿನೊಳಾದೊಡುಂ ಅನ್ಯಳಂ ಇಚ್ಚಿಪನೆ?   


ಚಂದ್ರಾವಳಿ ನಾಣ್ದಿ ತಲೆವಾಗಿ ಬರಿದೆ. ಇರ್ದಳ್‌.   


ಕೃತ್ರಿಮೆ--ಏನೀಗಳ್ ಸೊರ್ಕುಂನುಡಿವೆಟ್ಟಿಗೆಯ ಬಾಯಿ   

ಮುುರ್ಚಿತೆ?   


ಚಂ ದ್ರಾ--ಹಾಸ್ಯಂಗಳಲ್ಲವುಮಿರ್ಕೆ.. ಆಂ ನಿನ್ನೊಳೊಂದಂ  

ನುಡಿಯಲ್ವೇಳ್ಕುಮೆಂದೆಣಿಸಿರ್ಪೆಂ, ನೀನುಂ ಕೇಳ್ದುದನೊದವಿಸುವೆನೆಂದು.  

ಆಣೆಯಿತ್ತೂಡೆ ಪೇಳ್ವೆಂ.  


ಕೃತ್ರಿಮೆ-ಪೇಳ್‌ ಪೇಳ್‌, ಸಾಧ್ಯಮಾದೊಡದನೊದೆವಿಪೆಂ, ಎನ್ಸ   

ರಾದೆಯಾಣೆ.   


ಚಂದ್ರಾ--(ಬೆರಗಿಂ) ಇದೇಂ! ಎನ್ನ ರಾಧೆಯ ಆಣೆ' ಎಂದೊಡೆ   

ನೀನೇಂ ರಾಧೆಯಲ್ಲವೆ? 

೪೬-------------------------------------------------------------------

ಕೃತ್ರಿಮೆ--ಉಧೆಯಪ್ಪ ಎನ್ನ ಆಣೆಯೆಂದರ್ಥಂ, ಅಂತುಮಲ್ಲದೆ  

ರಾಧಾಕೃಷ್ಣರೊಳ್‌ ಇನಿಸುಂ ಭೇದೆಮಿಲ್ಲಂ ಅದರಿಂ ಅಂತೆನಲ್‌ ಕಾರಣ   

ಮಾಯ್ತು.   


ಚಂ ದ್ರಾ-- ಅಂತಾದೊಡೆ ಕೃಷ್ಣನಿನಪ್ಪ ಕಜ್ಜಂ ನಿನ್ನಿಂದಕ್ಕುಮೆ?   


ಕೃತ್ರಿಮೆ--ಅದರ್ಕೆ ಸಂದೆಯಮೆ? ಆನೇ ಕೃಷ್ಣಂ, ಕೃಷ್ಣನೇ      

ಆನಂದೆಣಿಸಲಕ್ಕುಂ.   


ಚಂದ್ರಾ--ಆಯ್ತು. ಆದೊಡೆ ಕೃಷ್ಣನ ರೂಪಮಂ ತಾಳ್‌.   


ಕೃತ್ರಿಮೆ-- ಕೃಷ್ಣನ ಆಕಾರಂ ನಿನಗೇಕೆ? ಆಮೈಮನಂನೋಳ್ಪ   

ಭಾಗ್ಯಮೆನಗನಾವಶ್ಶಕಂ, ಎಂದು ಹಾಸ್ಯಂಗೆಯ್ದೆಯಲ್ತೆ. ಅಂತುಮಲ್ಲದೆ   

ಅವಂ ಜಾರಂ, ಕಳ್ಳಂ, ಪಲವೇಂ? ದುರ್ಗುಣಂಗಳ್ಗೆ ತಾಯ್ವನೆಯೆನಿಪ್ಪ   

ನಲ್ಲವೆ?   


ಚಂದ್ರಾ-ಇಂತೆಲ್ಲಂ ಆರೆಂದರೊ! ಅದೆಲ್ಲಮಿರ್ಕೆ, ನೀನಾಣೆ   

ಗೊಟ್ಟುಂ ತಪ್ಪಿದಪೆಯೆ? ಪೆರತೇಂ ಪೇಳ್ವುದು? ಆ ಕೊಳಲ್ಗೈಯನಂ  

ತೋರ್ದೊಡೆ ಒಂದಾಸೆ ಪೂರ್ತಿಯಕ್ಕುಂ.   


ಕೃತ್ರಿಮೆ--ಆಃ ಈ ನುಡಿ, ಬೇಸೆಗೆಯ ಕಾರ್ಮುಗಿಲೊಡ್ಡು, ಏನಾ   

ಕಳ್ಳಂ ಹದಿಬದೆಯಪ್ಪ ನಿನ್ಸ ಮನಮನುಂ ಕಳ್ದನೆ! ಆನರಿವೆಂ ಅವಂ   

ಬಿಡಂ, ಅಂತುಂ ಬಿಟ್ಟೊಡುಂ, ಮೆಲ್ನಡೆಯುಂ, ನಗುಮೊಗಮು, ಮೇಣೇಂ,  

ಸವಿಗೂಳಲುಂ, ಎಂತುಂ ಬಿಡದೆ.   


ಚಂ ದ್ರಾ--ಅನೆಂದುದರ್ಕೆ ಉತ್ತರಮಿಂತೊ?   


ಕೃತ್ರಿಮೆ--ಆನಿಲ್ಲಿರ್ಪೆಂ,  ಶ್ರೀಕೃಷ್ಣಂ ಗೋಕುಲದೊಳಿರ್ಪಂ, ಅವ   

ನಂ ತೋರಲ್ವೇಳ್ಕುಮೆಂದೊಡೆ ನಿನಗೇಂಪುರ್ಚೆ? ನಡೆದೆ ದಣವುಂ ಪಿರಿ 

೪೭--------------------------------------------------------------

ಬಿರ್ಕುಂ, ಅದರಿಂ ನಿದ್ರಿಪೆನಿದೇ ಉತ್ತರಂ (ಎಂದು ಆಕೆಯ ತೊಡೆಯೂಳ್‌   

ತಲೆಯಿಟ್ಟು ಪವಡಿಸಿದಳ್‌)   


ಒಡನಾಚಂದ್ರಾವಳಿ--(ಎಂತಾನುಂ ತೋರದೊಜೆ ಬಿದೆನೆಂದು ಅವೆ   

ಳೆ ಪಿಡಿದು ಸೆಳೆದು ಎಬ್ಬಿಸಿ ಅಚ್ಚರಿಯಂ ತಾಳ್ಜು,) ಓ ಎನ್ನಕ್ಕ! ಇದೇಂ   

ನಿನ್ನ ಮೆದುಮೈ ಈಗಳ್‌ ಪುರುಷರ ಮೆಯ್ಯಂತೆ ಕಲ್ಲೆ ಪಾಸಾಟಿಯಾ   

ಗಿರ್ಕುಂ?   


ಕೃತ್ರ್ರಿಮೆ--ಆಂ ಪೇಳ್ದೆನಲ್ತೆ ಶ್ರೀ ಕೃಷ್ಣಂಗುಮೆನಗುಂ ಇನಿತುಂ   

ಭೇದಮಿಲ್ಲೆಂದು, ಅದರಿಂ ಈಗಳ್‌ ಗಂಡುಮೆಯ್ಯಾಗಿರ್ಕುಂ.   


ಚಂದ್ರಾ-ನಿನ್ನ ಪುಣ್ಯಮನೇನೆಂಬೆಂ! ಆನಾದೊಡೆ “ಅಂಗೈ   

ಯೊಳ್ ಬಂದ ಪಾಲಂ ಮುಂಗೈಯ್ಳೊಳ್‌ ನೂಂಕಿದಂತೆ " ತಾನಾಗಿ ಬಂದ   

ಆ ಮೈಮನಂ, ಎನ್ನ ದುರದೃಷ್ಟದಿನುಂ ಪಲವುಂ ಪೆಣ್ಗಳಿರ್ಪರೆಂಬ ಲಜ್ಜೆ   

ಯಿನುಂ, ಅತಿಗಳೆದೆಂ; ಅದನಿನ್ನೆಂದು ಫಲಮೇಂ? "ಕಡಿದ ನೀರ್‌ ಕಟ್ಟಕೆ   

ಬರ್ಪುದೆ?" ಪಲವೇಕ1 ಎನ್ನೊಳ್‌ ನಿನಗಾಸೆಯಿರ್ದೊಡೆ ಆ ತಾವರೆಗಣ್ಣ   

ಮನದಿನಿಯನಂ ತೋರ (ಎಂದು  ಕಾಲ್ವಿಡಿದಳ್). 


ಒಡನಾಚರಣದೊಳ್‌ ಕಮಲವಜ್ರರೇಖೆಗಳಂ ಕಂಡು ಬ್ರೆಮೆಗೊಂಡು   

ಮೇಲೆ ನೋಳ್ಪುದುಂ, ಸುಲಿಪಲ್ಲ, ಕಿರುನಗೆಯ, ತಾವರೆಮೊಗದ ನಿಡು   

ವುರ್ಬಿನ, ಮರಕತಮಣ ಮಾಲೆಯ, ನವಮೋಹನಾಂಗನೆಂ, ಭೆಕ್ಕಜನಾಭೀ   

ಷ್ಟದಾಯಕನಂ, ಶ್ರೀ ಕೃಷ್ತನಂ, ಕಂಡಳ್‌, ಆ ಸಮಯದೊಳ್‌ ಚಂದ್ರಾ   

ವಳಿಯ ಮನಮೆಂತಿರ್ಪುದೆಂದು ಬಣ್ಣಿಸಲ್‌ ಮನಕಲ್ಲದೆ ನಾಲಗೆಗರಿಯದು.    

ಒಡನೆ ಲಜ್ಜೆಯಿಂ ಕಣ್ಮುರ್ಚಿ ಅರೆನಿವಿಸದೊಳ್‌ ಅರೆಗಣ್ಣೊಳ್‌ ಈಕ್ಷಿಪು   

ದುಂ, ರಾಧೆಯ ರೂಪನೆ ಗೋಚರಿಸೆ, (ಬೆರಗಿಂ) ಎಲೆಲೆ ಅಕ್ಕ! ನೀನೀ   

ಗಳ್ ಕಣ್ಗಟ್ಟಿನ ಮಾಯೆಯಂ ಕಲ್ತಿರ್ಪೆ, ನಿನಗೇನೆನ್ನಂ ತಂಗೆಯಂ   

48---------------------------------------------------

ಹಿಂಸೆಗೆಯ್ಯಲ್ವೇಳ್ಕುಮೆಂಬ ವ್ರತಮೆ! ಎಂಬುದುಂ,-ಬಳಿಯಂ ಪಲವುಂ   

ಬಾರಿಯೊಳ್‌ ಕೃಷ್ಣನ ರೂಪಂ ತೋರಿ, ಇಂದ್ರಜಾಲಮೆಂಬಂತೆ ಅಡಂಗೆ--   


ಚದ್ರಾ--(ಕೃಷ್ಣನೆಂದೇ ಬಗೆದು) ಓ ಎಣಿಕೆಗುಮಳವಲ್ಲದೆ.   

ಅಚಿಂತ್ಯಮೂರ್ತಿಯೆ? ಎನ್ನೀ | ಮನದನುತಾಪಮಂ ತಿಳಿದೂಡೆ ಕಲ್ಲಾ   

ದೊಡುಂ ಕರಗುಗುಂ. ಅಂತಿರಲ್‌ ಕರುಣಾಂಬುಧಿಯೆಂದು ನೆಗಳ್ತೆವಡೆದ   

ನೀನೇ ಈ ಪರಿಯಿಂ ಬನ್ನಂಬಡಿಫುದೆ! ಮೊದಲ ತಪ್ಪಂ ಅಬಲೆಯೂಳಿಡ   

ದಿರೆಂದು. ಎನಿತುಂ ಬಾರಿ ಕಾಲ್ವಿಡಿಯಲ್ವೇಳ್ಕುಂ? ಪೆರ್ಚೇಂ? ಪಣ್ಣುುಂ   

ಕತ್ತಿಯುಂ ನಿನ್ನ ಬಸಂ. ಇದೋ ಮನಂಬಂದಂತೆ ಮಾಡು (ಎಂದೆರ   

ಳ್ಕೈಗಳಿನುಂ ಕಾಲ್ಗಳಂ ಬಿಗಿವಿಡಿದಳೆಂ ತೆಗೆದಿತ್ತಿ   


ಶ್ರೀ ಕೃಷ್ಣಂ--(ನಾಣಿಂ ಬಾಗಿದ ಮೊಗಮನುಮೆತ್ತಿ) ಓ ಮನಃ   

ಪ್ರಿಯೆ! ಮತ್ತೇನುಮಿಲ್ಲಂ, ನಿನಗೆ ಮೊಗಮಂ ತೋರಲ್ಕೆ  ಭಯ   

ಮಪ್ಪುದು--   


ಚಂದ್ರಾ--(ಅಡಿಮೊಗದಿಂ)) ಅದೇಂ ಆಂ ಪೂತನ್ಯಾದಿಗಳಂ.   

ಕೊಂದ ಬೆಯಂಕರಿಯೆ?   


ಕೃಷ್ಣಂ--ನಕ್ಕು ಪೂತನ್ಯಾದಿಗಳಂ ಕೊಂದ ಭಯಂಕರಂಗುಂ   

ಎಂತೆಂತೋ ಬನ್ನಂಗೊಳಿಸಿ ಭಯಂಕರಿಯಾದೆಯಲ್ತೆ? ಅದರಿನೆನ್ನಂ ಬಿಡು-   


ಚಂದ್ರಾ--(ಕಾತರತೆಯಿಂ) ಆಂ ಪೆಣ್ಣಾದೊಡುಂ ಲಜ್ಜೆಯಂ   

ಬಿಟ್ಟು ನಿನ್ನಂಕಾಲ್ವಿಡಿದಿರ್ಪೆನೆಂಬ ಗರ್ವದಿನೋ, ಇಂತೆಲ್ಲಂ ನುಡಿವುದು?   


ಕೃಷ್ಣಂ--ನಿನಗೆ ಮಾತ್ರಂ ಲಜ್ಜೆ, ಆನೇಂ ನಾಣಿಲ್ಲದ ಜಡನೆ?   

ಪಲವುಂ ಪೆಣ್ಗಳ ಇದಿರೊಳೆ ಎನ್ನಂ ಪರಿಪರಿಯಿಂ ಭಂಗಿಸಿದುದಂ ಮರೆ   

ತೆಯೆ?    


ಚಂದ್ರಾ--ಓವೋ! ಅರಿತೆಂ ನೀನನಿತುಂ ಮಾನಿಯಾದೊಡೆ ಅನಿ   

ಬರಿದಿರೊಳೆನ್ನಂಗಕೆ ಕೈಯಿಕ್ಕಲಕ್ಕುಮೆ? 

49---------------------------------------------------

ಕೃಷ್ಣಂ--ಆಯ್ತು, ಆನಪರಾಧಿ; ಇನ್ನೆನಗೆ ನಿನ್ನ ತೊಡಂಕೇ   

ಬೇಡಂ.  


ಚಂದ್ರಾ-- (ನಸುನಕ್ಕು) ಅಪರಾಧಿಯಾದುದರಿಂ ಇನ್ನಾಂ   

ಪೇಳ್ದಂತೆಯೆ ನಡೆಯಲ್ವೇಳ್ಕುಂ, ಈಗಳ್‌ ನಿನ್ನಂ ಬಿಡುವೆನೆಂದೆಣಸಿರ್ಪೆಯ?   

ಹುಂ ಅಕ್ಕಕ್ಕುಂ-ಮಾಡಿದುದಂ ತಿನಲ್ವೇಳ್ಕುಂ.   


ಕೃಷ್ಣಂ--ಸಾಲ್ಗುಂ ಸಾಲ್ಗುಂ ನಿನ್ನ ಬೆಡಂಗುಗಳ್‌, ಆಂ ಪೂರ್ವಾ   

ವಸ್ಥೆಯಂ ತಳವೆಂ.   


ಚಂದ್ರಾ--(ಆ ನುಡಿಗೇಳ್ದು, ಮೇಲ್ನೋಡೆ, ಮುಗುಳ್ಗೆಗೆಯಿನಿ   

ತುಮಿಲ್ಲದ ಶ್ರೀಕೃಷ್ಣನ ಮೊಗಂ, ತನ್ನಂ ಬಿಟ್ಟಪನೋ ಏಂಬ ಸಂದೆ   

ಗಮಂ ಮಾಡೆ, ಭೀತಿಯಿಂ ಕಣ್ಣೀರ್‌ ಸುರಿಯೆ, ಕೃಷ್ಣನಂ ಬಿಗಿವಿಡಿದು.)   


“ಎಲೆ ಮನದನ್ನ! ಸರ್ವಜ್ಞನಾಗಿಯುಂ ನಂಬಿರ್ದಳಂ ಅಬಲೆಯಂ   

ಇಂತೆಲ್ಲಂ ಕರಗಿಪುದೊಪ್ಪಿತಮೆ? ಎಂತುಂ ಎನ್ನಂ ಬಿಟ್ಟು, ನೀಂ ಪೂರ್ವಾ   

ವಸ್ಥೆಯಂ ಪೊರ್ದುವೆಯಾದೊಡೆ, ಎನಗಂತ್ಯಾವಸ್ಥೆಯಂ ಕೈಗೊಳಿಸು."   


ಎಂದು ಗದ್ಗಿದಸ್ನರದಿಂ ಕೇಳಿಸಿ ತಲೆಯಂ ಬಾಗಿಸಿದಳ್. ತಡೆ   

ತಡೆದಾಡುವ ನಿಡುಸುಯ್ಲೊಂದುಕೇಳುತಿರ್ದುದು; ಆಗಳ್‌ ಶ್ರೀಕಾಂತನ   

ಮನಮುಂ ತೆಲ್ದುದು.   


ಭಾರತಿ..ಎನ್ನರಸ! ಏನಾಕೃಷ್ಣನ ಕಲ್ಮನಮುಂ ನೀರಾಯ್ಕೆ?   

ಅಬ್ಬಾ! ಪುರುಷರ ಮನಂ ಪರುಷಮೆನಲ್ಕೆ, ಪುರುಷೋತ್ತಮನ ಮನಂ   

ಪರುಸೋತ್ತ್ರಮಮೆಂದೊಡೇಂ ಪಿರಿದೆ? 


ಕಬ್ಬಿಗೆಂ--(ನಸುಮುನಿಸಂ ನಟಿಸಿ)  ನೀಂ ಕತೆಯಂ ಕೇಳ್ವ   

ಳಲ್ಲಂ; ಎಂತಾನುಂ ಗಂಡರ್‌ ದುಟ್ಟರ್ ಪೆಣ್ಗಳ್‌ ಒಳ್ಳಿದರ್, ಎಂಬ     

ಸಿದ್ಧಾಂತಮಾಗಲೇಳ್ಕುಮಲ್ತೆ?  


ಭಾರತಿ-_ಕೋವಿಸದಿರ್, ಪುರುಷರ್ ದುಟ್ಟರೆಂಬ ಎಣಕೆಯಿಂ 

50------------------------------------------------

ದೊರೆದುದಲ್ಲಂ, ಚಂದ್ರಾವಳಿಯ ಮರುಕಮಂ ಯೋಚಿಸಿ ಪಿವಿಂಮುಂದೆ   

ರಿಯದೆ ನುಡಿದೆಂ "ಕೈಯಿಂ ಬೀಳ್ದುದಂ ಪೆರ್ಕಿದೊಂಡುಂ ಬಾಯಿಂ ಬೀಳ್ದು   

ದಂ ಪೆರ್ಕಲರಿದು" ಎಂಬ ಪಿರಿಯರ ಮಾತಂ ಮರೆತೆಂ; ಪೆಣ್ಣಿನ ತೆಪ್ಪ   

ನೊರ್ಮೆಗೆ ಸೈರಿಸು.   

  

ಕಬ್ಬಿಗಂ--ಎಂತಾನುಮಿರ್ಕೆ, ಕೇಳ್ವೆಯಾದೊಡೆ ಆ ನಾಲಗೆಗೆ ಇನಿ   

ಸುಂ ಬುದ್ದಿ ವೇಳ್‌.   

  

ಭಾರತಿ--(ನಕ್ಕು) ಆಯ್ತು, ಮುನಿಸಿಡದೆ ಪೇಳ್‌.   

  

ಕಬ್ಬಗರಣ್ಣಂ--ಕೇಳ್‌, ಬಳಿಯಂ (ಎಡೆವಿಡದೆ   

ಅಳುವಳೆಂ ನೋಡಿ ನಸುನಗುತ್ತೆ) 'ಓ ಮುಗುದೆ! ಇದೇನೊಂದು ಪೊಸ   

ಪರಿಯಗಾನಮೆ?' ನಿನ್ನೊಡನಿನ್ನು ಇಂತೆಟ್ಲಂ ಸರಸದ ಮಾತುಗಳನುಂ  

ಆಡಲ್ಕೆ  ಉಪಾಯಮಿಲ್ಲಮೆಂದಾಯ್ತು; ಇಸ್ಸಿ, ಪಳ್ಳಿಯ ಪೆಣ್ಗಳ ಪೆಸ   

ರಂ ಪೇಳಿಪೆಯೆ?' ಎಂದಾಕೆಯ ಕಣ್ಣೀರನೊರಸಿ ಬೇರೆ ಸವಿನುಡಿಗಳನೆತ್ತಿ   

ಸಂತಯಿುಸಿದಂ.   

ಬಳಿಯಂ ಇದೋ ಜರುಳುಂ ಮೀರಿತು, ಎಂದುಸಿರ್ದಂ, ಇನ್ನುಂ   

ಅವರ್‌ ಏಂ. ನುಡಿದೆರ್‌, ಏಂ ಗೆಯ್ದರ್‌, ಎಂಬುದನೊರೆಯಲ್ ಎನ್ನ್ನ   

ನಾಲಗೆ ತಿರುಗದೆ ಕಟ್ಟಿಬಡೆದಂತೆ ಇರ್ಕುಂ.   


ಭಾರತಿ--(ನಸುನಕ್ಕು)  ಏನಂತೆ ನಾಲಗೆವಾರದ ಒಂದು ರೋಗಮೆ?   

ಅಣ್ಣಂ--(ನಕ್ಕು) ಆನಿಂತಲ್ಲಂ ಮಾತಾಡುತಿರಲ್‌, ಅದಂ ನುಡಿ   

ವುದರ್ಕೆ ಮಾತ್ರಂ ರೋಗದ ಕಾಟಮೆ? ಕಾಂತಾಸಮಾಗಮಮಂ   

ಬಣ್ಣಿಸಿ, ಬಂಡೆಸಗಿ ಲಜ್ಜಾಸ್ಪದಂಗೆಯ್ಯದಿರೆಂದು ವಾಗ್ದೇವತೆಯೆ ಮಾಡಿದ   

ನೇಮಂ.   


ಭಾರತಿ--ಅಂತಾದೊಜೆ ಬಣ್ಣಸಿದ ಮೊದಲ ಕಬ್ಬಿಗರ್ಗೆ ಏಂ   

ವಾಣಿಯೆ ಆತಂಕಮಿಲ್ಲವೆ? 

51---------------------------------------------------

ಕಬ್ಬಿಗಂ--"ಸರ್ವಾಧಾರ: ಕಾಲ:" ಎಂಬುದರಿಂ, ಆ ಕಾಲದೊಳ   

ವರ್ಗೆ ಭಾರತೀದೇವಿಯ ಆತಂಕಮಿರ್ದುದೊ, ಇಲ್ಲವೊ, ಎಂಬುದನರಿಯ  

ಲಸಾಧ್ಯಂ; ಅದಿರ್ಕೆ, "ಪುರಾಣಮಿತ್ಯೇವ ನಸಾಧು ಸರ್ವಂ" ಎಂಬೊಂದು  

ವಚನದಿನೇ ಪೂರ್ವಮಾರ್ಗಮೆಂದು ಸರ್ವಮುಂ ಗ್ರಾಹ್ಯಮಲ್ಲಮೆಂದಾ   

ಯ್ತು. ಹುಂ ಸಕ್ಕದದ ನುಡಿಪೋಕೆ, “ಅಪ್ಪಂ ತೋಡಿದ ಬಾವಿಯೆಂದು   

ಸೌಳ್ನೀರಂ ಕುಡಿವುದೆ!" ಎಂಬುದು ಸರ್ವಸಾಮಾನ್ಯಮಲ್ತೆ! ಅಂತುಮೆ   

ಲ್ಲದೆ ಪಿರಿಯರ ಮತಮುಂ ದೇಶಕಾಲಾನುಸಾರಮಾಗಿ ನಡೆಯಲ್ವೇಳ್ಕು  

ಮೆಂಬುದೇ.   


ಭಾರತಿ-_ಎನ್ನರಸ! ಈ ನುಡಿಯೇ ಅತಿರಸಮಲ್ಲದ್ಕೆ, ಬೇರಾ   

ವುದುಮಲ್ಲಂ, ಬಲ್ಸಂತಸಮಾಯ್ರು; ಆದೊಡೆ ನಿನ್ನ್ನ ಮಾತಿದು ನಡು   

ವಗಲಂ ಫಡುವಿರುಳೆಂಬ ಅನಾಗರಿಕರ ಕಿವಿಗೆ ಬೀಳ್ದೊಡೆ, ಬಾಯೊಳ್‌  

ಮಾತ್ರಮಲ್ಲಂ, ಕೈಯೊಳುಂ ಮುಂದೆವರ್ಪರ್‌. ನಾಯಬಾಲಂ ನಳಿಗೆ  

ಯೊಳೊರ್ಮೆಗೆ ಸಮಮಕ್ಕುಂ, ಮೂಢ ಹೃದಯಂ ಒರ್ಮೆಯುಮಾಗದು.   

ಹುಂ, ಅದಂತಿರ್ಕೆ, ಮತ್ತೇನಾಯ್ಕು?   


ಕಬ್ಬಗರನ್ನಂ--ಕೇಳನ್ನ ಮನದನ್ನೆ! ಬಳಿಯಮಿನಿಸುಂ ಪೋಳ್ತುಂ   

ಕಳೆಯೆ, 'ನಿನ್ನಂ ಮೆಯ್ಮರೆಯಿಸಿ ನೆರೆದವಂ ಅದಾರ್‌? ಅದಾರ್‌?'   

ಎಂದು ಚಂದ್ರಾವಳಿಯಂ ಕೂರ್ತು ಚಂದನ ಪ್ರಶ್ನಮೆನೆ *"ಕೊ ಕೋ   

ಕೋ" ಎಂಬ ಕೋಳಿಸೊರಮುಂ ಕೇಳಿತು. ಒಡನೆ, ಆನಂದಾಂಕುರಕೆ   

ಬಿಸಿನೀರಂ ಪೊಯ್ದಂತಾಗೆ.   


ಚಂದ್ರಾ--ಓ ಮನದಿನಿಯ! ಈಕೆಟ್ಟ ಕೋಳಿಗುಮಿನಿತುಂ ಪಗೆ   

ಯಾಯ್ತೆ?   


ಕೃಷ್ಣಂ--(ನಸುನಕ್ಕು,) ಅದೇನಚ್ಚರಿಯೆ? ತನ್ನರಸೆನಂ ಬಿಟ್ಟು,   

ಪೆರನೊಳ್‌ ಮನವಿಟ್ಟಿ ದುರ್ವ್ಯತ್ತಿಯ ಪೆಣ್ಗೊಳ್, ಲೋಕಕೇ ಪಗ್ಗೆ   

.....

"ಕಃ  =  ಆರು

೫೨---------------------------------------------------------------------  

ಚಂದ್ರಾ-ಇದೇತರಮಾತು? ಅಂತುಂ ಪಗೆಯಿಡುವೊಡೆ ಕುರೂ   

ಪಿಯುಂ, ವಿದ್ಯಾವಿಹೀನನುಂ, ಅರಸಿಕರೊಡೆಯನುಂ, ಕಡುದುರುಳನುಮ  

ಪ್ಸಂಗೆ ಎನ್ನನಿತ್ತ ತಾಯ್ತಂದೆವಿರೂಳ್‌ ತಕ್ಕುದಲ್ಲದೆ "ಗಾಯಮೊಂದೆಡೆ  

ಮರ್ದೊಂದೆಡೆ್‌" ಎಂಬವೊಲ್‌ ಏನೆನ್ನೊಳೆಯೆ?   


ಕೃಷ್ಣಂ--ಓ ಒಳ್ನುಡಿಯಂ ಪೇಳ್ದೆ, ಸಂತೋಷಮಾಯ್ತು ; ಆ   

ದೊಡೆ ಕೋಳಿಯದು ಪಗೆಯಿಂ ಕೂಗಿದುದಲ್ಲಂ; ಮೇಣ್‌ ಏಕೆಂದೊಡೆ,   

ಇದೋ ಈ ಚಣದೊಳೆ ಉದಯಮಕ್ಕುಂ, ಅದರಿಂ ತಕ್ಕುದಂ ಯೋ   

ಚಿಸು, ಇಲ್ಲದೊಡೆ ಗಂಡನ ಕಠಿನಾಜ್ಞೆಗೊಳಗಪ್ಪೆಯೆಂಬುದಂ ಸೂಚಿ   

ಸಲ್ಕೆಯೆ.    


ಚಂದ್ರಾ--ಅಂತಾದೊಡೆ ಈಗಳ್‌ ಗತಿಯದೇಂ?   


ಕೃಷ್ಣಂ--(ನಕ್ಳು,) ಬೇರೇಂ? ಎನಗೆ ಪೆಣ್ಮೆಯ್ಯೇ ಗತಿ.   


ಚಂದ್ರಾ--ಪೇಳಲ್‌ ನಾಣ್ಚಿ, ಅದಾಗದಾಗದೆಂದು ಅತ್ತಿತ್ತಂ ತಲೆ   

ಯಾಡಿಸಿ ಸೂಚಿಸಿದೆಳ್‌.   


ಕೃಷ್ಣಂ-- (ಮುಗುಳ್ನಗೆಯಿಂ,) ಇದೇನೀಗಳ್‌ ಮೂಕವ್ಯಾಧಿ ನಿನ   

ಗೆಯೆ ಪ್ರಾರಂಭಿಸಿತೆ? ಅಭಿನಯಂಗಳ್‌ ಸಾಲ್ಗುಂ, ಬಾಯ್ವಿಟ್ಟು ಪೇಳ್‌.  


ಚಂದ್ರಾ-ಪೇಳ್ವುದೇಂ? ನೀನೀಗಳೆ ಪೂರ್ವರೂಪಮಂ ಪೊಂದಿ   

ದೊಡೆ 'ರಾಗಂ ಬರ್ಪಾಗಳ್‌ ತಂತಿ ಕಡಿದುದು' (ಎಂದು ಲಜ್ವೆಯಿನಡ್ಡಂ   ನೋಡುತಿರ್ದೆಳ್‌.)   


ಕೃಷ್ಣಂ--ಈ ನುಡಿಯಿಂ ಅಭಿನಯಮೇ ಒಳ್ಳಿತಿರ್ದುದು, ಮೂಲಾ   

ಪೇಕ್ಸೆಯಿಂ ಟಿಪ್ಪಣಿಯೇ ಕಠಿನಮಾಯ್ತು; ಆವರಾಗಂ ಬಂದುದೊ? ಅವ   

ತಂತಿ ಕಡಿದುದೊ? ಅಕಟಾ "ಪೆಣ್ಗಳ ತಳ್ಳಿ, ಕೊರಲ್ಲ್ಗೆ ಬಳ್ಳಿ" ಎಂಬುದ   ನರಿತೊಡುಂ ಅಜ್ಞಾನ ಬಸಿರ್ಗಿಲ್ಲದ ಕೂಳಾಯ್ತು.   

೫೩---------------------------------------------------------------------

ಚಂದ್ರಾ-- ಈ ಯೋಚನೆ,ಮೊದಲೇ ಘಟ್ಟಿದೊಡೆ ಒಳ್ಳೆತಿರ್ದುದು,   

ಉಂಡ ಮೇಲೆ ಜಾತಿಯಂ ಕೇಳ್ವುದು" ಎಂಬವೊಲ್‌ ಇನ್ನೇಂ ಫಲಂ?   


ಕೃಷ್ಣಂ--ಹಾ! "ಗುಟ್ಟಂ ಬಿಟ್ಟಂ ಎಂದು ನಾಣ್ಣುಡಿ,   

ಸಾರುತಿರೊಡುಂ, ಗುಟ್ಟನಿತ್ತ್ತು ಈಕೆಯ ಕಡೆಗಣ್ಣಿಕೆಗೀಡಾದೆನೆ!”   

ಹುಂ ಇರ್ಕೆ, ಇನ್ನುಂ ತಡಂ ಗೆಯ್ವುದುಚಿತಮಲ್ಲಮೆಂದು ತನ್ನೆ ಚಕ್ರ   

ಮಂ ಸೂರ್ಯಂಗೆ ಅಡ್ಡಂ ತಿರುಗುವಂತೆ ನೇಮಿಸಿದಂ--ಬಳಿಯಂ. ಐದುಂ   

ದಿನಂ ಗಾಢಾಂಧಕಾರಂ ಮುತ್ತಿರ್ದುದು; ಅಂತಿರೆ, ಕಾಲದೊಳ್ ಏಳ್ದುಂ   

ಬೆಳಗಿನ ಲಚ್ಚಣಮಂ ಕಾಣದೆ, ಅಂಗಳಕಿಳಿದು. ಮೂಡಲದೆಸೆಯಂ  

ನೋಡುತಿರ್ದರ್‌ ಕೆಲಂಬರ್‌--ಇನ್ನುಂ ಇರುಳ್‌ ಪೆರ್ಚಿರ್ಪದು, ಎಂದು  

ಪವಡಿಸುವರ್‌ ಪಲಂಬರ್‌--ಈಗಳೆ ಬೆಳಕುಂ ಪರಿಗುಂ, ಅದರಿಂ, ಅನ್ನೆ   

ವರಂ, ವೇದಾಧ್ಯನಂಗೆಯ್ವೆವು, ಎಂದು. ಅಂತೆ ಮಾಳ್ಪರ್  ಅರೆ   

ಬರ್‌-ಇನ್ನುಂ ಪೊಳ್ತುಂ ಪೋಗೆ, ಮಕ್ಕಳ್ಗೆ ಪಸಿವೆ ಪೆಣ್ಗಳ್ಗೆ ಆಲ   

ಸ್ಯಂ ; ಪ್ರರುಷರ್ಗೆ ಅಂಗಳದೊಳ್‌ ಅತ್ತಿತ್ತಂ ನಡೆವ ಬೆಸನಂ;   .

ಇಂತೊಂದಚ್ಚರಿಯ ಪೊಸಪರಿಯಾಗ್ಯೆ, ಐದನೆಯ ಪಗಲೊಳುಂ ರವಿಯಸ್ತೆಂ  

ಗತನಾಗಲ್‌, ಎಂದಿನಂತೆ ಕೃಷ್ಣಂ ಚಕ್ರಮಂ ತೆಗೆಯ್ಕೆ ಚಂದ್ರಾವಳೇ   

ಕೃಷ್ಣರ್ಗೆ, ಆ ರಾತ್ರಿಯುಂ ಕಣ್ಣೊಳೆ ಬೆಳಗಾಯ್ತು. ಬಳಿಯಂ ಶ್ರೀ   

ಕೃಷ್ಣಂ ಲೋಕೋಪದ್ರವಂ ತಕ್ಕುದಲ್ಲೆಂದು, ಚಂದ್ರಾವಳಿಯಂ ಎಂತಾನುಂ  

ಸಂತಯಿಸಿ ರಾಧೆಯ ರೂಪಮನೆ ತಳೆದು ಮರುದಿನಂ ಸುಮುಖಿಯೊಳಾ   

ಜ್ಞೆಯಂ ಕೊಂಡು, (ನಸುನಕ್ಕು) "ಎಲೆ ಚಂದ! ಇದೆಕೊಳ್‌ ನಿನ್ನ   

ಪೆಂಡತಿ ನಿನ್ನ ಬಸಂ ಇನ್ನಾಂಪೋಪೆಂ” ಎಂದು ಪೊರಟೈದಿದಂ.   


ಎಂಬಲ್ಲಿಗೆ ಚಂದ್ರಾವಳಿ ವಿಲಾಸದೊಳ್‌ ತ್ರುತೀಯಶ್ಲಾಸಂ.   

................

ಅನ್ನೆಗಮಿತ್ತಂ ಆ ಕಲಹಾಪ್ತಂ ನಾರದಂ ಈ ಬಿಸೆಯಮಂ ತಿಳಿದು   

ಗಾಳಿಗೆ ಪರಿಮಳೆಮೊದವಿದಂತಾಗೆ, ಮನೋವೇಗದಿಂ ಗೋಕುಲದ ನಂದ   ಗೋಪನ ಮನೆಗೆ ಬಂದಂ. ಅಂತೆ ಬಂದಾ ನಾರದನಂ ಕಂಡಾನಂದಂ 

೫೪------------------------------------------------------------------

ಏನೋ ಕಡೆಗುಡಿಗಳಂ ಪೊತ್ತಿಸಲ್‌ ಬಂದಿರ್ಪನೆಂದೆಣಸಿ ಇದಿರೈದಿ ಕಾಲ್ಗೆ 

ರಗಿ ಕರತಂದು ಗದ್ದುಗೆಯನೇರಿಸಿ ಸತ್ಕಾರಂಗೆಯ್ವುದಂ.


ನಾರದಂ -_ಓ, ನಂದ, ನಿನ್ನಮನ್ನಣೆಗಳ್ಗೆ ಆಂ ಮೆಚ್ಚಿದೆಂ,.   

ಹರಿಸಮಾಯ್ತು; ಏಂ ಊರೊಳೆತ್ತಲುಂ ಕುಶಲಮೆ? ಅಂತುಮಲ್ಲದೆ   

ಕೃಷ್ಣನ ಮಕ್ಕಳಾಟಿಕೆ, ಗಡುವಂ ದಾಂಟದೆ ಒಂದು ನೆಲೆಯೊಳ್‌ ಈಗಳಾ  

ದೊಡುಂ ನಿಂತಿರ್ಕುಮೆ?   


ನಂದಂ -. ಮೌನೀಶ್ವರನೆ, ನಿನ್ನ ಕರುಣಾಮೃತಧಾರಾಸೇಚನದಿಂ   

ಊರೊಳೆಲ್ಲಂ ಕಲ್ಯಾಣಮೆ. ಕೃಷ್ಣಂಗಾದೊಡೆ ಜೀವರತ್ನಮೆಂಬಂತೆ   

ವೊಲ್‌ ರಾಧೆಯೆಂಬೊರ್ವಳ್‌ ಒದವಿರ್ಪಳ್‌; ಈಗಳವನ ಮೆಯ್ಯೇ ಆಕೆಯ  

ಬಸಮಿರ್ಕುಂ, ಅದರಿಂ, ಊರೂರಂ ತಿರುಗಿ, ಮನೆಮನೆಗಳಂ ಪೊಕು,   

ಎನಗೆ ಪೆಸರಂತರ್ಪ ತೊಡಂಕೊಂದಿಲ್ಲಂ, ಆ ಕಾರಣದಿನಾನುಂ, ಎಂತಾನು   

ಮಕ್ಕೆ, ಎಂದು ಬರಿದೆ ಇರ್ಪೆಂ.   


ನಾರದಂ---ಆ ನುಡಿಯಂ ಕೇಳ್ದು ಒಡನೆಯೆ ಗಹಗಹಿಸಿ   

ಎಂತುಂ ಸೈಸದಿ ಮತ್ತಮುಂ ನಗುತಿರ್ದಂ.   


ನಂದಂ--ಕೇಳೈ ವಿರಿಂಚಾತ್ಮಜ, ಶಿಷ್ಯನನೆನ್ನಂ, ಈಪರಿಯಿಂ   

ಪರಿಹಾಸ್ಯಂ ಗೆಯ್ವುದೆ? ಎನ್ನೊಳ್‌, ಏನಾನುಂ ಕುಂದಿರ್ದೊಡೆ ಬಿರ್ಚಿ   

ಪೇಳಿ ಅದಂ ನಿವಾರಿಪುದು ನಿನ್ನಂತಿರ್ಪಗುರುಗಳ ಕರ್ತವ್ಯಮಲ್ತೆ?   


ನಾರದಂ ೨ ಎಲೆನಂದ, ಪೇಳಲೆಂದೇ ಬಂದೆಂ, ಆದೊಡೆ ಕುರು   

ಡಂ, ಆನೆಯಂ ಬಣ್ಣಿಸಿದಂತೆ ನೀಂ ಕೃಷ್ಣನ ಈಗಳಿನ ಅವಸ್ಥೆಯಂ   

ಪೇಳ್ವುದರ್ಕೆ, ಸುಳಿಗಾಳಿಯಂತೆ, ಸೈಸಲಸಾಧ್ಯ್ಯಮಾದ ನಗೆಯೊಂದು, ಹೃದ   

ಯಾಬ್ಜದತ್ತಣಿಂ, ತಿರ್ರನೆ ತಿರುಗಿ ಮೇಲೆರ್ದುದಲ್ಲದೆ, ನಿನ್ನಂ ಹಾಸ್ಯಂ   

ಗೆಯ್ದುದಲ್ಲಂ.   


ನಂದಂ-- ಸರ್ವಜ್ಞನೆ, ಅಂತಾದೊಡೆ ಕೃಷ್ಣನ ಈಗಳಿನ ಅವಸ್ಥೆ  

ಯೊಳ್‌ ಅದೇಂ ಬಿಸೇಸಂ? 

೫೫-----------------------------------------------------------

ನಾರದಂ--ಅದನುಸಿರಲೆಂದೇ ಯೋಚನೆ, ಅದೊಡೆ ಆಗುಟ್ಟಂ   

ಪೇಳ್ಕುದೋ, ಕೃಷ್ಣ ಗೆ. ಕೋಪಂ--ಪೇಳದಿರ್ಪುದೋ, ಮನಸ್ಸಾಕ್ಷಿಗೆ    

ವಿರೋಧಂ--ಅದರಿಂ "ಉಗುಳ್ದೊಡೆ ಅಮೃತಂ ನುಂಗಿದೊಡೆ ಬಿಸಂ"  

ಎಂಬಂತೆವೊಲ್‌ ಉಭಯಸಂಕಟಂ ಈನಾರದಂಗೊದವಿತಲ್ತೆ! ಇರ್ಕೆ  

ಸಂಕಲ್ಪಹಾನಿಯಂ ಗೆಯ್ಯಲಾಗದುದರಿಂ ಪೇಳ್ವೆಂ ; ನಿನ್ನಣುಗಂ,   

ಕೃಷ್ಣಂ, ಈಗಳ್‌ ಆರಾಭೆಯ ತಂಗೆಯಪ್ಪ ಚಂದ್ರಾವಳಿಯೆಂಬ ಬೆಡಂ   

ಗುಗಾರ್ತಿಯೊಡನೆ ಪಗಲುಮಿರುಳುಂ ನಲಿವಂ... ಬಹುಕಾಲದಿಂ ಮಕ್ಕ   

ಳಿಲ್ಲದೆ ದೈವದೊಲ್ಮೆಯಿಂ ಪಡೆದುದರ್ಕೆ ಈ ಬಾಲ್ಯದೊಳೇ ಮಗಂಗೆ  

"ಪರದಾರಾಪಹಾರಂ' ಎಂದೊಂದು ಪೊಸಬಿಬ್ದೆಯಂ ಕಲಿಸಿದೆ, ನಿನ್ನ  

ಕುಲಮಿನ್ನು ಪಾವನಮಶ್ಕುಂ, ಕೀರ್ತಿಯೋ, ಧ್ರುವಲೋಕಪರ್ಯಂತಂ   

ಪರ್ಬಿತು; ಇನ್ನೇಂ ಕೊರತೆ? ಪತ್ತುಜನದ ಕಳದೊಳ್‌, ನೀನು   

ಮೊರ್ವಂ ಸಭ್ಯನಾದೆ.   


ನಂದಂ -(ಅಚ್ಚರಿಪಟ್ಟು) ದೇವಮುನೀಂದ್ರ, ಸತ್ಯವಾದಿಯೆಂದು   

ನೆಗಳ್ತೆವಡೆದ ನಿನ್ನ ನುಡಿಯುಂ ಈಗಳ್‌ ಸೆಂದೇಹಾಸ್ಪದಮಾಗಿರ್ಕುಂ;  

ಅದೇಕೆಂದೊಡೆ, ಆ ಚಂದ್ರಾವಳಿಯ ಗಂಡಂ ಚಂದಂ ಕೃಷ್ಣನುಪಟಳಕೆ   

ಬೆದರ್ದು ಸಕುಟುಂಬಮಾಗಿ ಸಿಂಧುಗ್ರಾಮದೊಳ್‌ ಮನೆಗೆಯ್ದಿರ್ಪಂ.   

ಅಲ್ಲಿ ಇರ್ಪಾಗಳುಂ,. ವರ್ಷಕ್ಕೊರ್ಮೆ ತಾಯ್ವನೆಗೆ ಬಂದೊಡುಂ, ಅಪೆಣ್ಗೆ  

ಒಳಯಿಂಕೆಯಿಂ ಪೆರಗೆ ನಿಲುಕಲುಂ ಬಾರದೆಂಬ, ಕಟ್ಬಾಣತಿಯಂತೆ;   

ಅಂತಿರೆ ಕೃಷ್ಣಂಗೆ ಕೈಯೆಂತು? 


ನಾರದಂ--ನಿನ್ನ ಗ್ರಾಮ್ಯವಚನಂಗಳಂ ಕೇಳ್ದೊಡೆ ಇದೋ  

ದ್ವಾರಂಗಳೊಳೆಲ್ಲಂನಗೆ. “ಗಾಳಿವೋಗವ ತಾಣಮುಂಟೆ?" ಎಂಬಂತೆ   

ವೊಲ್‌ ಕೃಷ್ಣಂಗೆ ಸಾರಲಸಾಧ್ಯಮಾದ ಎಡೆಯದಾವುದು? ಅಂತುಮಲ್ಲದೆ   

ಪೆಣ್ಗಳುಂ ಕಣ್ಣಟ್ಟವನಂ, ಎಂತಾನುಂ ವರಿಸದೆ ಮಾಣರ್‌. ಅದರ್ಕೆ   

ಒಂದು ಕಥೆಯುಂಟು ಪೇಳ್ವೆಂ--  

೫೬-------------------------------------------------------------- 

ಮುನ್ನಂ ಬೊಮ್ಮಂಗೆ ಮಾನಸಪುತ್ರಿಯಾಗಿ ಒಯ್ಯಾರದೆ ಬಿತ್ತಿನಂತೆ,   

ಒಂದು ಪೆಣ್ಗೂಸುಪುಟ್ಟಿತು.  ಅಂತ ಪುಟ್ಟಿದ ಮಗಳ ಆಕಾರಮಂ   

ನೋಡಿ ಬಗೆಗೊಂಡು, ಅವಳ್ಗೆ ಆವಾಣೇವರಂ "ಮೊಹಿನಿ" ಎಂದು ಪೆಸೆ   

ರಿಟ್ಟಂ. ತದನಂತರಮಾಬಾಲೆ, ದಿನಕ್ರಮಂ ಏಳ್ಗೆಯೊಂದುತೆ ಯ್‌ವನಾ  

ವಸ್ಥೆಯಂ ಅಲಂಕರಿಸಿ ತಂದೆ ತನಗಿಟ್ಟ ಪೆಸರಂ ಸಾರ್ಥಕಂಗೆಯ್ಯದಿರ    

ಲಾಗದೆಂಬಂತೆವೊಲ್‌, ಮನೆಯವರೆಂದಿಲ್ಲಂ ಊರವರೆಂದಿಲ್ಲಂ ಕಂಡವ   

ರೊಳ್‌ ಕಣ್ಣಿಡಲ್‌, ಆರಂಭಿಸಿದಳ್‌. ಅಂತೀಕೆ ಕಡೆಕಣ್ಣ ಪಾಶಮಂ ಬೀಸಿ   

ದೊಡೆ, ಚಂಚಲಮಾಗದ ಗಂಡುನೊಳಮಾದೊಡುಮಿಲ್ಲಂ ಎಂದಾಯ್ತ್ಯ  

ಬಳಿಯಂ ದಿನೇದಿನೇ ಆ ಪೆಣ್ಣಿನ ಅಂತಶ್ಚೇಷ್ಟೆಯಂಕುರಂ, ಬಹಿರಂಗಕೆ  

ತಲೆದೋರುತ್ತಿರಲರಿತಾ ವಿರಿಂಚಿ, "ಆಃ! ಮಗಳಂ ಅಳ್ಕಿರಿಂ ಪಡೆದು,  

ಮಂಡಿಗೆಯಾಸೆಯಿಂ, ಪಾವಿನ ಪೆಟ್ಟಿಗೆಯಂ ಕರ್ಚಿದ ಇಲಿಯಂತಾದೆಂ   

ಪುತ್ರಿಯೇ ಶತ್ರುವಾದಳ್.  ಅಕಟಾ] ಲೋಗರ ತಲೆಯೊಳ್, ಬೆರಲ   

ನೊತ್ತುವ ಎನ್ನ ತಲೆಯ ಅಕ್ಕರಂ, ಇಂತುಟು, ಹೀನಮಾಯ್ತೆ! ಹುಂ, ಇರ್ಕೆ,  

ಇನ್ನಾದೊಡುಂ, ಆ ಮೋಹಿನಿಯಂ ತಕ್ಕವರಂಗೆ ಕೊಟ್ಟು, ವಿವಾಹಂಗೆಯ್ಯ  

ದೊಡೆ, ಆಕೆಯ ದುರ್ವೃತ್ತಿಗುಂ, ಆನೆಯೆ ಜನಕನಪ್ಸೆಂ, ಎಂದೆಣಿಸಿ ಬಹು   

ದೂರಂ ಜಾನಿಸಿ, ಸರ್ವಲೋಕದೊಳುಂ ಇರ್ಪ, ಪಾಪಿಗಳನೆಲ್ಲರಂ ನಿಯ  

ಮಿಸುತೆ, ಅನ್ನರ್ಥನಾಮನಪ್ಪ ಯಮಂಗೆಯೆ ಇತ್ತೊಡೆ, ಒರ್ಮೆಗೆ ಕವ  

ಲ್ದಾರಿಯಂ ಮೆಟ್ಟದಿರಲ್‌ ಸಾಲ್ಗುಂ, ಎಂದು ಬಗೆದು ಅಂತೆ ಆಧ   

ರ್ಮನಂ ಒಪ್ಸಿಸಿ,  ಮಗಳಂ ಅವಂಗೆಯೆ ಪಾಣಗ್ರಹಣಂಗೈದೆಂ, ಬಳಿ  

ಯಂಕೆಲಗಾಲಂ ಕಳೆಯೆ, ಕತ್ತುರಿಯನೊಳಗಿಟ್ಟೊಡುಂ, ಮಣಂ ಪಸರಿಸು  

ವಂತೆ, ಯಮನೆನಿತೆನಿತುಂ ಆಜ್ಞೆಗೆಯ್ವನೋ, ಅನಿತನಿತುಂ ಆಮೋಹಿನಿ   

ಯ ವಿಕೃತಿಗಳ್‌ ಪೆರ್ಚಿದುವು.   


ಅದನರಿತಾ ಪ್ರೇತಾಧಿಪಂ, ಒಂದು ಪೊನ್ನಕರಂಡದೊಳ್, ಅವಳಂ ಬೈ   

ತಿಟ್ಟು, ತನ್ನ ಕೊರಲಮಾಲೆಯೊಳ್‌ ಕಟ್ಟಿ ರಾತ್ರಿಯೊಳ್‌ ಸಜ್ಜೆಯೊಳ್‌   

ಮಾತ್ರಂ ಆಕೆಯಂ ಪೆರದೆಗೆದುು, ತಡಂಮಾಡದೆ, ಆಕರಂಡದೊಳ್ ಹಾ 

೫೭-------------------------------------------------------------------

ಯ್ಕುತಿರ್ದಂ.  ಇಂತಿರಲೊಂದುದಿನಂ ಯಮಂ, ನಿದ್ರಾಂಗನೆಯ ಬೆಡಂಗಿಗೆ  

ಮರುಳಾಗಿ, ತನ್ನರಸಿಯಂ ಕರಡಿಗೆಯೊಳ್‌ ಮುರ್ಚಿ ಇಡಲ್‌ ಮರೆತು,  

ಮೆಯ್ಯನುಂ ಮರೆತಂ. ಆಗಳ್‌, ಮೋಹಿನಿ, "ಅಬ್ಬಾ! ಕಟ್ಟಿದ ಉಸಿರ್‌   

ಬಿಟ್ಟಂತಾಯ್ತು" ಎಂದೆಣಿಸಿ, ಮುಂದೆ ತನಗೆ ಮರುಳಾಗಿಯೇ ಎಂಬ   

ವೋಲ್‌, ಸೊಡರೊಳ್‌ ನಲಿನಲಿವ ಅಗ್ನಿಗೆ ಬಾಯೆಂದು ಸನ್ನೆಗೆಯ್ದಳ್‌.   

(ಪೆಣ್ಣೇ ಕರೆನಾಗಳ್‌ ಪುರುಷನ ಬಗೆಯದೆಂತಿರ್ಕುಂ?  ಮೇಣೇಂ, ತಾನೇ  

ಸರ್ವಗುಣಸಂಪನ್ನಂಮಂ ಸ್ಮರಸುಂದರನೆಂದಿರ್ಕುಂ) ಆಃ! ಅಜ್ವಾನಾಂಧಕಾರಂ

ತನ್ನನುಂ ಮುತ್ತೆ, ಆ ಶಿಖಿ ಸ್ವರೂಪದೊಡನಿವಳ ಮೋಹಕ ಪಕ್ಕಾದಂ.  

ಅಂತಿರಲ್‌, ಅರೆಚಣದೊಳ್ ಎಳ್ಚರಮಾಗಲ್‌, ಮುಂದಣ ಅವಸ್ಥೆಯಂ   

ಕಂಡಾ ಕಾಲಂ, ರೋಷಾವೇಷದಿಂ ಅವುಂಕಿ, ಮೋಹಿನಿಯನಾ ಕರಡಿಗೆ   

ಯೊಳ್‌ ನುರ್ಗಿಸಿ, ಬಾಯಂ ಬಲಿದಂ; ಆಗಳ್‌ ಕೋಪದ ಅಸವಸದೊಳ್‌  

ಮುಂಗಾಣದೆ, ಮೋಹಿನಿಯೊಡನಗ್ನಿಯುಂ   ಪೊಕ್ಕುದನರಿತನಿಲ್ಲಂ-- 


ಬಳಿಯಂ ಯಮಂ "ಆಃ! ಪೆಣ್ಗಳ ಉಪಾಯಮೆ!! ಎನ್ನಂ   

ಕಣ್ಣಟ್ಟಿದ ಈ ಜಾತಿಯ ಬಲ್ಮೆಯಿಂ ನೆಲದೊಳ್‌ ಮನುಜರೆಂತು ಬಾಳ್ವ    

ರೋ!!! ಒರ್ವನೊಳ್‌ ಮಾತು ಪೆರನೊಳ್‌ ಕಡೆಗಣ್ಣು, ಅನ್ನಿಗನೊಳ್‌   

ಮೇಳಂ, ಈ ಪರಿಯಿಂದಿರ್ಪಳಂ ಬೊಮ್ಮನೇಕೆ ಪಡೆದನೊ? ಮೆಣೆನಗೇಕೆ  

ಗ‌ಂಟಿಕ್ಕಿದನೊ? ಒರ್ಮೆಗೆ ಈಕೆಯಂ ಮನೆಯಿಂ ಪೊರಡಿಸಿರೊಡೆ, ಮೇಲಕೆ  

ಉಗುಳ್ದೊಡೆ ಮೊಗಕೆಯೆ ಬೀಳ್ವಂತೆ, ಲೋಕದೊಳೆಲ್ಲಂ ಇವಳ ದುರ್ವೃ   

ತ್ತಿಯ ಬಿಸಯಂ ಪಸರಿಸಿ, ಬಳಿಯಂ ಎನ್ನ ಮೋರೆಗೆ ಮಂಗಳಮಕ್ಕುಂ,  

ಅಕಟಾ।! ಈ ಯಮರಾಜಂಗುಂ ಈ ಯವಸ್ಥೆಯೆ!!" ಎಂದು ಪರಿ   

ಪರಿಯಿಂ ಜಿಂತಿಸುತಂತಾನುಂ ಇರುಳಂ ಕಳೆದಂ.   


ತದನಂತರಂ, ಮರುದಿನದೊಳ್ ಪ್ರದೋಷೋತ್ಸವಕೆಂದು, ದಿಕ್ಪಾಲ   

ರೆಲ್ಲರುಂ ಕೈಲಾಸಕೈದುತಿರಲ್‌, ಉಪಾಯವಿಲ್ಲದೆ, ಶಾನುಂ ಪೋದಂ,  

ಅಂತಾರಜತಾದ್ರಿಯೊಳ್‌, ಉತ್ಸವಾಂತ್ಯದೊಳ್‌, ಸರ್ವವೇದಿಯಪ್ಪ ಷಣ್ಮು   

ಖಂ, ಎಲ್ಲರ್ಗುಂ ತಾಂಬೂಲಮಂ ನೀಡುತ್ತೈತಂದು, ಕಾಲನಂ ಕಂಡು, 

೫೮---------------------------------------------------------------- 

'ಓ!  ಇವನೆಲ್ಲರಂತಲ್ಲಂ, ಧರ್ಮರಾಜನಲ್ತೆ? ಮೂಲೋಕಮುಂ ಈತನ  

ನಿಯಮಮಂ ಅನುಸರಿಪುದ್ಕು, ಬಹುವಾಾನಿಯ ನಿಜಂ" ಎಂದು ನಕ್ಕು    

ತಂಬುಲದ ಮೂರು ಮಡಿಕೆಗಳನಿತ್ತಂ   


ಯಮಂ _ (ಷಣ್ಮುಖನ, ಮುಖವಿಕಾರಕುಂ, ಮಾತಿನಂದಕುಂ,   ಸೆಂದೆಯಂಗೊಂಡು) "ಇದೇಂ, ನೀನೆನಗೆ ಮಾತ್ರಂ, ಮೂರು ಮಡಿಗಳ   ನಿತ್ನುದು!"   


ಷಡ್ನದನಂ - (ನಸುನಕ್ಕು)"ನೀನೆಲ್ಲವಂ ತಿಳಿದವನಾಗಿ, ಇದನೊಂ.   

ದಲ್ಪ ವಿಷಯಮನೇಕೆ ಕೇಳ್ದಪೆ? ಕೊಟ್ಟುದಂ ಕೊಂಡು "ಮೌನಂ'  

ಪಂಡಿತಲಕ್ಷ್ಮಣಂ" ಎಂಬಂತೆ ಬರಿದೆ ಇರಯ್‌"   


ಅಂತಕಂ.(ಕೋಪದಿಂ) “ಎಲೆ ಷಾಣ್ಮಾತುರ! ಬಂದೆ ಪರಿ   

ಹಾಸ್ಯಂಗೆಯ್ದೊಡಾಯ್ತೆ! ಹುಂ ಪೇಳ್ " ಪೇಳ್‌."   


ಷಣ್ಮುಖಂ--(ನಕ್ಳು)“ಮರದ ಬೆಂಕಿ, ಮರಮನೆ ಉರಿಸುವಂತೆ   

ಕೋಪವಿದು ನಿನಗೆಯೆ ದೋಸಂ ಕಣಾ, ಎನಗೇಂ, ಇದೊ ಪೇಳ್ವೆಂ,   

ಈಯೆರಡು ಮಡಿಕೆಗಳ, ನಿನಗುಂ, ನಿನ್ನ ಕೊರಲ ಉರುಲೆನಿಪ್ಪ     

ಮೋಹಿನಿಗುಂ” ಎಂದು ಇನಿಸುಂತಡೆದು, "ಇನ್ನೊಂದಿದುಮಾರ್ಗೆ, ಎಂಬ   ವಿಚಾರಮಾದೊಡುಂ ಬೇಡಂ."   


ಯಮಂ... “ಇದೋ, ಮುನಿಸಂಪೊರೆಯದಿರ್‌, ಇನ್ನೆಗಂ ನಿನ್ನ  

ವಿಕೃತಿವಚನಂಗಳಂ ಸೈಸಿದೆಂ. ಇನ್ನಾನುಂ ಹಾಸ್ಯಮನೆತ್ತದೆ ನಿಜಮಂ     

ಪೇಳ್" 


 ಷಡ್ವದನಂ-..(ಆಃ ಇವನ ಅಜ್ಜಾನಮೆ! ಎಂದೆಣಿಸಿ) ಪ್ರೇತಾ   

 ಧಿಪ! ಏನಿದು ಅವಳೊಡನಿರ್ಪ ಅಗ್ನಿಗೆಂದು ಪೇಳದೆ ತೀರದೆ?"   

 

 ಅಂತಕಂ--ಆ ನುಡಿಗೇಳ್ದು, ಮಾನದೆ ಭೆಯದಿಂ ಉಮ್ಮಿಯೊಳೆ   

 ಗಣ ಕಿರ್ಚಿನಂತೆ ಮನದೊಳ್‌ ಉರಿದು ಮನೆಗೈದಿ ಕೊರಲ ಕರಡಿಗೆಯಂ  

ಒಡೆಯಲ್‌, ಅದರೊಳಗಿರ್ಪರಂ ಕಂಡು, ಕಾಳ್ಗಿರ್ಚಿಗೆ ಗಾಳಿ ಸಾಯಮಾ: 

೫೯-------------------------------------------------------------------

ದಂತಾಗೆ ಮುಳಿದಬ್ಬರಿಸಿ "ನಿನಗೆ ಕಡೆಗಾಲಮಂ ತೋರದೊಡೆ ಆಂ   

ಕಾಲನೆ ಎಂದಾಕೆಯಂ ಪರಿಪರಿಯಿಂ ಭಂಗಿಸುತ್ತಿರೆ ಬೊಮ್ಮಂ ತಿಳಿ   

ದೈತಂದು, "ಎಲೆವೈವಸ್ಸತ! ಚಿತ್ರದೊಳ್‌ ಬರೆದ ಪೆಣ್ಣೊಳಮನುಂನಂಬ   

ಲಾಗಂಬರ್‌ ಬಲ್ಲರ್, ಆಂತಿರಲ್‌ ಈ ಮೋಹಿನಿಯಂ ನಂಬುವುದೆಂತು?'   


ಬರಿದೆ ಈ ತೆರದಿಂ ಮನೋವ್ಯಥೆಯದೇಕೆ? ಪಸೆ ಇನ್ನೆಮ್ಮೆ ಎಡೆ   

ಯೊಳಿರದೆ, ಧಾರಿಣಿಯೊಳ್ ಗಿಡುವಾಗಿ ಪುಟ್ಟುಗೆ; ಧೂಮಧ್ವಜನಪ್ಪ ಅಗ್ನಿ   

ಯಂ ಕೂಡಿದುದರಿಂ, ಆ ಗಿಡುವುಂ ಧೂಮಪತ್ರಮೆಂಬ ಪೆಸರಂ ತಾಳ್ಗೆ;  

ನೀನೆಂತೆಂತು ಈಕೆಯಂ ಭಂಗಿಸಿದೆಯೊ, ಅಂತಂತೆ ಜನರುಂ ಆ ಸೆಸಿಯಂ   

ತಲೆ ಕಳಗಾಗಿ ಕಟ್ಟುಗೆ; ಬಳಿಯಂ ಕಟ್ಟಂ ಕಟ್ಟಿ ಮೆಟ್ಟುಗೆ; ಈಯಗ್ನಿ   

ಯುಂ ಸುಣ್ಣದ ರೂಪಮಂ ತಾಳ್ದು ಅದರೊಡಂಗೂಡುಗೆ; ಮೇಣೇಂ, ಆ  

ಧೂಮಪತ್ರಂ ಅಗಿದೊಡುಂ ಪುಡಿವುಡಿಯಾದೊಡುಂ, ಉರಿದು ಪೊಗೆಯಾ  

ದೊಡುಂ, ಜನರಂ ಮೋಹಿಸುಗುಂ. ಅದರ ಬಲ್ಮೆಗಳೆಲ್ಲವುಂ, ಕಲಿಯುಗ   

ದೊಳೆ, ವ್ಯಕ್ತಮಕ್ಕುಂ; ಎಂದಂ,   


ಎಲೆ ನಂದ! ಪೆಣ್ಗಳ ಬಲ್ಮೆಯಂ ತಿಳಿದಯ್‌. ಏನಿತ್ತೋ ಅಡಂಗಿ   

ಗೈದ ಪಾಪಕ್ಕಾದೊಡಂ ಮರ್ದಂ ಮಾಳ್ಪ ಯಮನನುಂ ವಂಚಿಸುಗುಮೆ   

ನಲ್‌, ನಿನ್ನ ಬಡಚಂದನ ಪಾಡದೇಂ?   


ನಂದಂ -- (ಕಡುದುಗುಡದಿಂ) ಆಃ! ಮಗಂಗೆ ಇಂದೊ, ನಾಳೆಯೊ,   

ಬುದ್ದಿ ವರ್ಕುಮೆಂದೆಣಸಿರ್ದೆಂ, ಏಂಗೆಯ್ವುದು "ದುಷ್ಪುತ್ರಃ ಕುಲನಾಶಾಯ"  

ಎಂಬಂತವೊಲ್‌, ಮಗನೆ ಪಗೆಯಾದಂ. ಅಹೋ ನೀಚನಪ್ಪ ಬಿದಿಯ   

ಮಾಟಿಮೆ?   


ನಾರದಂ_."ತರಳನಂ ಈ ಬಾಲ್ಯದೊಳ್‌ ಮೇಪಿನ ಮಕ್ಕಳೊಳ್‌   

ನಲಿಯಿಸಿ, ಈಗಳ್‌ ಎನ್ನಪ್ಪಂಗೆ ಅಪವಾದಮೆ? 'ಅಂಗಳದೊಳ್‌ ಹೇಸಿಕೆ   

ಗೈದು ಮಂಗಳನಂ ದೈವುದೆ ?' ನೀಂ ಮಗನಂ ತಲೆಯೊಳ್‌ ಪೊತ್ತೆ, ಅವಂ  

ಮೆಟ್ಟಿದಂ; ಅದಿರ್ಕೆ, ಇನ್ನಾನುಂ ಜನಮಂ ಕಳುಪಿ, ಆ ಕೃಷ್ಣನಂ ಬರಿಸು  

(ಎಂದುಸಿರ್ದು ತನ್ನೊಳೆ, ಎನ್ನ ಕೆಲಸಂ ನೆರವೇರಿತು. ಇನ್ಸಿನ್ನೊಂದೆಡೆ 

೬೦-------------------------------------------------------------------

ಯೊಳ್‌ ಎಲ್ಲಾದೊಡುಂ, ಎಡೆಯಿರ್ಪುದೋ ನೋಳ್ಪೆನೆಂದೆಣಿಸಿ, ನಂದ   

ನೊಳ್‌ ಪೇಳ್ದು ಅಲ್ಲಿಂ ಸರಿದಂ)   


ತದನಂತರಂ ನಂದಂ -.(ರಾಧೆಯಂ ಕರೆಯಿಸಿ) ಎಲೆ ರಾಧೆ!   

ಎಮ್ಮಣುಗಂ ಕೃಷ್ಣಂ, ನಿನ್ನ ತಂಗೆ ಚಂದ್ರಾವಳಿಯೊಡನೆ, ನಲಿವನೆಂದು  

ನಾರದಂ ಪೇಳ್ದಂ... ಅಕಟಾ|! ಈ ಮಗಂ ಗೋಕುಲದ ಪೆಣ್ಗಳ ಪಾಲಿ   

ಗುಂ, ಅಪ್ಪಂಗೆನಗೆ ಅಪವಾದದ ಸವಿಯಂ ತಿಳಿಸಲುಮಾದನಲ್ಲೆ! ಅದೆಂ  

ತಾನುಮಿರ್ಕ, ನೀನೀಚಣಮೆ ಅಳ್ಗಳೊಡೆನೆಯ್ದಿ, ಎಂತಾದೊಡುಂ ಆ ದು  

ಶ್ಚೇಷ್ಟಿಯನೊಡಂಗೊಂಡು ಬಾ (ಎಂಬುದುಂ)   

(ಕೃಷ್ಣಂ. ಚಂದ್ರಾವಳಿಯೆಡೆಗೆಯ್ದಿರ್ಪನೆಂಬ ನುಡಿಗೆ ರೋಮರೋ   

ಮಂಗಳೊಳ್‌ ಮುಚ್ಚರಮಂಕುರಿಸೆ,) ರಾಧೆ ಆಭೆಟರನೊಡಂಗೂಡಿ ಚಂ   

ದನ ಮನೆಗೆ ಬಂದಳ್‌. ಬರ್ಪಾಗಳ್‌ ದೊರದೊಳೆ ಅದೋ ಅವನೆ   

ಚಂದಂ, ಆತನಂ ಬೆದರಿಸಿ ಎನ್ನೆರೆಯನಂ ವಿಚಾರಿಸಿನೆಂದು ಪೇಳೆ,   

ದೂತರ್‌ ಯಮದೂತರೆಂಬವೊಲ್‌, ಚಾವಡಿಯೊಳ್‌ ಕುಳಿತಿರ್ಪ ಚಂದನಂ  

ಬಂದು ಪಿಡದರ್‌. ಆಗಳ್‌ ಚಂದಂಗೆ ಏನೆಂದರಿಯದು, ಇದೇನಾಕಸ್ಮಿ   

ಕಮೆಂದು ಬೆದರ್ದು, "ಎಲೆ ಚಾರರೆ? ನೀಮಾರ ಕಡೆಯವರ್‌? ಈ ಪರಿ   

ಯೊಳೆನ್ಸಂ ಪಿಡಿಯಲ್‌, ಆಂ ನಿಮ್ಮರಸಂಗೊ, ನಿಮಗೊ, ಏನುಮಪರಾಧಂ  

ಗೆಯ್ವುದಿಲ್ಲಂ."   


ದೂತರ್‌ “ಹುಂ ಸಾಲ್ಗುಂ, ಅದೆಲ್ಲಮಂತಿರ್ಕೆ, ನೀನಾರ್‌ ಚಂ   

ದನಲ್ಲವೆ !"   


ಚಂದಂ-_. ಅಪ್ಪುದ್ಕು ಆನೆ ಚಂದಂ, ಅದರಿನೇಂ? ಮೇಣ್‌   

ನಿಮ್ಮಿರಮುಮೇಂ   


ಚಾರರ್‌ .. ಓ ಲಜ್ಜೆಗೆಟ್ಟ ಜೀವಮೆ ! ಆಮಿನಿಬರುಂ, ನಂದ   

ಗೋಪಸನ ಕಡೆಯವರ್‌ ; ಆ ನುಡಿ ಪೋಕೆ, ನೀನೇನೀಗಳ್‌ ಪೆಂಡತಿ:   

ಯಂ ಕೊಟ್ಟಾದೊಡುವೆಮ್ಮ ಪುಟ್ಟಸಾಮಿಯಂ ವಶೀಕರಿಪೆನೆಂದೆಣಿಸಿ   

ರ್ಪೆಯ?"

೬೧------------------------------------------------------------------ 

ಚಂದಂ--(ಬೆರಗಾಗಿ) “ದೊಡ್ಡಿದನ ಕಡೆಯವರೆಂದು, ಇಂತೆಲ್ಲಂ  

ಪೊಲ್ಲದುದಂ ನುಡಿಪುದೊಳ್ಳಿತಲ್ಲಂ. ನಿಮ್ಮ ಅರಸುಮಗನಂ ಆರ್‌ ಕಂಡಿ:  

ರ್ಪರ್‌,?   


ಚಾರರ್‌--"ಚಿಃ! ಕಿರಿಯರಸನಂ ಸೆಜ್ಜೆವನೆಯೊಳ್‌ ಪುಗಿಸಿ, ಈ   

ಪರಿಯೊಳ್‌ ಲೋಕದ ಕಣ್ಣಂ ಕಟ್ಟೆಲ್‌ ಪ್ರಯತ್ನಿಪುದರಿಂ, ನಿನಗೆ ಎರಳ್ಲೇ   ಇನೆ ಬಳ್ಳಿಯೊ, ಕಾಸಿನ ಬಿಸಮೊ, ಏನಾನುವೊಳ್ಳಿತು. ಅದಿರ್ಕೆ, ಎಮ್ಮ  

ದೊರೆಗುವರನೆಲ್ಲಿದಂ? ತೋರ್‌" (ಎಂದು ತಟ್ಟಿಸಿದರ್‌).   


ಒಡನಾ ಚಂದಂ--(ಅವರ ಪಿಂದಿರ್ಪ ರಾಧೆಯಂ ಕಂಡು) "ಓ   

ಅತ್ತಿಗೆ! ಇದೇಂ ನಿನ್ನರಸನ ದೂತರ್‌ ಎನ್ನನಿಂತು ಬನ್ನಂಬಡಿಪುದುಂ,  

ಪೊಲ್ಲದುದಂ ನುಡಿವುದುಂ ತಕ್ಕುದೆ? ನಿನ್ನಿದಿರೊಳೆ, ಇಂತೆಲ್ಲಂ ಮಾಳ್ದುದ   

ರಿಂ, ನಿನೇ ಅವಮಾನಿಸುವುದಿಂದಾಯ್ಕ್ಬು."   


ರಾಧೆ--(ನಕ್ಳು) “ಎನ್ನಂ ಬರಿದೆ ದೂರದಿರ್‌; ಆ ಕಲಹಾನ್ನಂ   

ನಾರದಂ ಬಂದು, ಎಮ್ಮ ಪಿರಿಯರಸನೊಡನೆ ನಿನ್ನ ಮಗಂ ಸಿಂಧುಗ್ರಾಮ 

ಕಯ್ದಿ, ಚಂದಂಗೆ ತಮ್ಮನಾಗಿರ್ಪನೆಂದೊರೆದಂ. ಅದರ್ಕೆ ಪಲವುಂ  

ಪರಿಯಿಂ ಪಲುಂಬಿ, ನೀನಾದೊಡುಂ ಆ ದುರ್ವಿನೀತನಂ ಕರೆತರ್ಪ್ರುದಿಂದೆ  

ನ್ನನಟ್ಟಿದಂ. ಅದರಿಂ ದೊರೆಯಾಣತಿಯಂತ ಇವರೂಡನೆ ಬಂದೆನಲ್ಲದೆ  

ಬೇರೇನುಮಲ್ಲಂ. ಅದೆಲ್ಲಮಿರ್ಕೆ,   ಎನ್ನೆರೆಯನೆಲ್ಲಿದಂ?"


 ಚಂದಂ--"ಏನಾಜಗಳಗಂಟಂ ಈಗಳ್ ಪೊಲ್ಲದ ಪುಸಿಯನುಸಿರ   

ಲುಂ ಕಲ್ತನೆ? ಅದು ಪೋಕೆ,  ಆ ನಿನ್ನೆರೆಯಂ ಕೃಷ್ಣನಿಲ್ಲಿ ರಲೇಂಕಜ್ಜಂ?  

ಆಮಿಲ್ಲಿ ಒಕ್ಕೆಲಾದ ಬಳಿಯಂ ಮೊನ್ನೆ ನೀನಲ್ಲದೆ ಗೋಕುಲದವರಾರುಂ:  

ಬಂದರಿಲ್ಲಂ." 


ರಾಧೆ--ನಿನಗೇಂ ಕನಸೆ? ಆನಿಲ್ಲಿಗೆ ಮೊನ್ನೆ ಬಂದುದಿರ್ಕೆ, ನಿನ್ನಂ  

ಕಾಣದೆಯೆ ಎನಿತ್ತೋ ಬರಿಸಂಗಳಾದುವು,"   


ಚಂದಂ--"ನಿನ್ನ ನುಡಿಯಂ ಕೇಳ್ದೊಡೆ ಈ ಪುಸಿಯೆಲ್ಲವಂ ಪುಟ್ಟಿ   

ಸಿದುದೆ ನೀನೆಂದು ಕಾಣ್ಬುದು," 

೬೨------------------------------------------------------------------

ರಾಧೆ--"ಅದೆಂತು?"      

  

ಚಂದಂ-"ಎಚ್ಚರಮಿಲ್ಲದನನೆದ್ಲಿಸಿದೊಡುಂ, ಎಚ್ಚರಮಿರ್ದನನೆ   

ಬ್ಬಿಪುದಸಾಧ್ಯಮಾದಂತೆ, ತಿಳಿದುಂ ತಿಳಿಯೆನೆಂಬರ್ಗೆ ತಿಳಿಸೆಲ್‌ ಭಗೀರಥ  

ಪ್ರಯತ್ನಮುಂ ನಿಷ್ಪಲನುಕ್ಕುಂ,"   


ರಾಧೆ--“ನಿನ್ನ ನುಡಿಯಂ ಕೇಳ್ದೊಡೆ, ಕಣ್ಣಂ ಕಟ್ಟಿ ಕಾಡಿನೊಳ್‌   

ಬಿಟ್ಟಂತಕ್ಕು ಬಿರ್ಚಿ ಪೇಳಲಾಗದೆ?"   


ಚಂದಂ--"ನೀನೆಮ್ಮ ಮನೆಗೆಯ್ತಂದುದುಂ, ಎನ್ನೊಳೇನೋ ಕೋ   '

ಪಿಸ್ಕಿ ಬಳಿಯಂ ಸಂತಂಗೊಂಡುದುಂ, ಆವುದ್ದದಿರುಳೊಳ್‌ ಎಮ್ಮಿಲ್ಲೊಳ್‌  

ಇರ್ದುದುಂ, ಮರುದಿನಂ ಪೋಪಾಗಳ್‌, ನಕ್ಳು "ಓ ಚಂದ! ಇದೋ   

ನಿನ್ನ ಪೆಂಡತಿ ನಿನ್ನ ಬಸಮಿನ್ನು' ಎಂದೆನ್ನೊಳ್‌ ನಗುನುಡಿಯನುಸಿರ್ದು  

ದುಂ, ಒಂದುಂ ನೆನಂಬರಿಕೆಯಿಲ್ಲದಳೊಳ್‌ ಪೇಳ್ವದೇಂ?"    


ರಾಧೆ--(ಆ ನುಡಿಗೇಳ್ದು ಕೃಷ್ಣನ ಕೆಲಸಮೆಂದೇ ಭಾವಿಸಿ ನಕ್ಳು)   

"ಎಲೆ ಚಂದ! ಆಂ ಬಂದುದಿಲ್ಲಂ,. ಮೇಣೇಂ? ನೀಂ ಪೆಂಡತಿಯನಾವನ  

ಭಯದಿಂದಡಂಗಿಸಿದೆಯೊ, ಆ ಮಾಯಾವಿಯೆ ಕಣ್ಗೆ ಮಣ್ಣಂ ಬಿರ್ಕಿ     

ದಂ"

  

ಚಂದಂ--ರೋಷಾವೇಸದಿಂ "ಏಂ ಕೃಷ್ಣಂ" ಎಂದು ತಟಕ್ಕನೆ   

ಒಳಗೆಯ್ದಿ ಚಂದ್ರಾವಳಿಯಂ ಜಡಿದುಂ ಸೆಳೆದುಮಬ್ಬರಿಸಿ "ಎಲೆಮನೆಯ   ಮಾರಿ! ಮೊನ್ನೆ ನಿನ್ನಕ್ಕನ ರೂಪನಮಂ ತಳೆದು ಬಂದೆವನದಾರ್‌?  

ನಿಜಮಂ ಪೇಳ್‌, ಅಲ್ಲದೊಡೆ ಜೀವಮನೆ ಪಿಂಡುವೆಂ”ಎಂದು ತಟ್ಟಿಪುದುಂ.  


ಚಂದ್ರಾ--"ಎಲೆನಲ್ಲ! ಇದೇನೀಪರಿಯಿಂ ತಿಳಿಯದರಂತೆ ನುಡಿ   

ವುದು! ನೀನೆನ್ನಂ ಪಂಜರದ ಗಿಳಿಯಂತೆ ಪೊರೆವುತಿರಲ್‌, ಅನ್ಯರ್ಗೆ ದಾರಿ  

ಯದೆಂತು? ನೀಮೆಲ್ಲರುಂ ಆಕೆಯಂ ಕಂಡುಂ ನುಡಿದುವಿರ್ಪಿರಲ್ತೆ?  

ಪ್ರತ್ಯಕ್ಷಕೆ ಇನ್ನೇಂ ಪ್ರಮಾಣಂ?” 

೬೩-----------------------------------------------------------------------

ಚಂದಂ-."“ಮಾತುಗಳೊಪ್ಪಮೆಲ್ಲಂ ಸಾಲ್ಗುಂ, ಇದೋ ನಿನ್ನಕ್ಕ   

ನಂ ಬಂದಿರ್ಪೆನೆಂದೊಸ್ಸಿಸು" (ಎಂದು ಪೆರಗುಯ್ತು ತಂದಂ.)  


ಚಂದ್ರಾ--ಅಕ್ಕನಂ ಕಂಡು ಭಯಸಂತೋಷಂಗಳಿರಡುಮೊಟ್ಟಿಗೆ  

ತೊಟ್ಬಿಡೆ, ಏನುಂ ತೋರದೆ ಬರಿದೆ ಇರ್ದಳ್‌.   


ಚಂದಂ-"ಹುಂ, ಏನೀಗಳ್‌ ಬಾಯಿ ಪೊಲಿದಿರ್ಕುಮೆ? (ಎಂದು   

ಬಡಿದುಂ. ಪೂರಳ್ಚಿಯುಂ ಪರಿಪರಿಯಿಂ ಭಂಗಿಸಿ) ಇದೋ ಬರಿದೆ ಪೆಟ್ಟಿಗೆ  

ಜೀವಮಂ ಮಾರದಿರ್‌; ಆ ಬಂದಾತಂ ಪುರುಷನಲ್ಲವೆ?" ‌   


ಚಂದ್ರಾ-ಮರುಮರುಗುತೆ "ಹುಂ' ಎಂದಳ್‌.   


ಚಂದಂ-- ಈಗಳ್‌ "ಹುಂ" -ಹುಂ ಅಂತಾದೊಡೆ ಆ ವಿಶ್ಮಾಸಘಾತ   

ಕಂ ಎಳೆಯನೊ? ಪಳೆಯನೊ? ಜೌವನಿಗನೊ?   


ರಾಧೆ--(ನಕ್ಕು) “ಎಲ್ಲೆ ಚಂದ! ಬಾಲವೃದ್ಧರಾದೊಡೆ ಮೇಲೇಂ?  

ತರುಣನಾದೊಡೆ ಕೀಳೇಂ? "ಪರಿವಸೆಯಂ ಪಾಸಿಗೆಯೊಳೆ ಅಡಂಗಿಪುದು"  

ಎಂಬಂತವೊಲ್‌ ಬಹುದೂರವಿಚಾರಮಂ ಬಿಟ್ಟು, ಉಸಿಕನೆ. ಇರ್ಪು  

ದೊಳ್ಳಿತು."   


ಚಂದಂ--"ಹುಂ, ಸಾಲ್ಗುಂ, ನಿನ್ನೊಳಾಂ ನುಡಿದೆನಿಲ್ಲಂ; ಮಾ  

ನದೊಳಾಸೆಯಿರ್ದೊಡೆ, ಎನ್ನೋಳೀಗಳ್‌ ಮಾತಾಡದಿರ್‌" ಎಂದು ಪೇಳೆಂದು   

ಚಂದ್ರಾವಳಿಯಂ ಭಂಗಿಸುತಿರೆ   


ಚಂದ್ರಾ--(ಗೋಳಿಟ್ಟು) "ಇದೆಕೊಳ್‌ ಪೇಳ್ವೆಂ, ಆ ಮೋಹಾ   

ನಾಂಗೆಂ, ನಂದಗೆ ಎಳೆಯಂ, ಖಸಿಗಳ್ಗೆ ಪಳೆಯಂ, ಪೆಣ್ಗಳ್ಗೆ ಜೌವನಿ   

ಗಂ, ಆಯ್ತೆ? ಇನ್ನಾನುಂ ಪೆಣ್ಣೊಲೆಯ ಪಾಪಕೆ ಪಕ್ಕಾಗದಿರ್‌”  


ಚಂದಂ_(ಕೋಪೋದ್ರೇಕದಿಂ ನುಡಿಯೊಂದೊಂದಂ ಮುಂಚೆ)   

“ನಿನ್ನಂ ಕೊಂದೊಡುಂ ಪಾಪಮೆ? ಅಂತಾದೊಡೆ ಆ ತಾಟಕೆಯಂ ಮಡು  

ಪಿದ ರಾಮಂಗೆ ಅಂಧಕೊಪನೇ ಗತಿ, ಆ ಬಿಸೆಯಮಿರ್ಕೆ, ನಿನ್ನ ಆ 

೬೪--------------------------------------------------------------------

ಮನೋಹಾನಾಂಗನಂ ಇನ್ನೆವರಮುಸಿರಲ್ಕೆ ಏಂ ನಾಲಗೆ ಇಳಿದಿರ್ದುದೆ? ಅಃ   

ಆಃ!! ಆನಾಕೃಷ್ಣನುಪಟಳದಿನೆ ನಿನಗೆಂದು ಇನಿತುಂ ದೂರಂ ಮನೆಗೆಯ್ದು  

ದೆಲ್ಲಂ ನೀರಿನ ಹೋಮಮಾಯ್ತು; ನೀನೆನ್ನೊಳೆ ಪೇಳ್ದು ಬಲ್ದೂರದಿಂ   

ತರಿಸಿ ಸೀತಾದಿಪತಿವ್ರತಾಚರಿತಪುಸ್ತಕಂಗಳನೋದುತಿರ್ದುದು, ಬೆಕ್ಕಿವೆ  

ವ್ರತಮಾಯ್ತು; ಮೇಣೇಂ ಜೀವಮಿರ್ದಂತ ಕೊಂದೆ; ನಾಲ್ವರೆದೆಯೊಳ್‌  

ಮೊಗಮೆತ್ತದಂತೆವೊಲ್‌ ಮಾಡಿದೆ; ಲೋಕದೊಳಿನ್ನಾರುಂ ಅನುಗುಣ  

ಮಿರದ ದಾಂಪತ್ಯಂಗೆಯ್ವುದಂ ಎಮ್ಮಂ ನೋಡಿ ಬಿಡುಗೆ (ಆಗಳ್‌ ಚಂದ್ರಾ  

ವಳಿಯ ಅಳ್ಸೊರಂ “ಹುಂ ಹುಂ" ಎಂಬ ನೆವದಿಂ ಈ ನುಡಿಯೊಂದು ನಿಜ  

ಮೆಂದು ಸೂಚಿಸುತಿರ್ದುದು) ಹುಂ ಇನ್ನೇನಾಸೆ? ನಿನ್ನಂ ಕೂಲ್ವೆನಾನುಂ-  

ಅಸುಂಗಳೆವೆಂ” (ಎಂದು ಪರಿಪರಿಯಿಂ ಹಿಂಸೆಗೆಯ್ದಂ,)   


ಚಂದ್ರಾ--"ಓ ಅತ್ತೆ! ನೀಮೇ ಆಕೃತ್ರಿವರಾಧೆಯಂ ಆ   

ದಿನಂ ಪೋಗಲ್ವಿಡದೆ, ಈಗಳೀಪರಿಯ ಭಂಗಕುಂ ಸಹಾಯಂಗೆಯ್ತುದೆ?  

ನೀಮುಂ ಅತ್ತೆಯೆಡೆಯೊಳಿರ್ದವರಾಗಿ, ತಾಯ್ತಂದೆವಿರಂ ಬಿಟ್ಟು ನಿಮ್ಮನೆ  

ನಂಬಿ ಬಂದೆವಳಳ್ಗೆ ಈ ಗತಿಯಂ ಒಬದೆಗಿಪುದೇಂ ನೀತಿಯೆ?"  


ಸುಮುಖಿ-(ಆ ನುಡಿಗೇಳ್ದು ದುರ್ಮುಖಿಯಾಗಿ) “ಚಿಃ ಸಾ   

ಲ್ಲುಂ, ನಿನ್ನ ನಾಲಗೆ ಇನಿತುಂ ನೀಳಮಿರ್ಕುಮೆ! ಬಾಯ್ವಿಡದಿರ್‌.   

ಅಂತವಂ ಪುರುಷನಾದೊಡೆ, ಕರೆದು ತಿಳಿಸಲೇನಾಯ್ತು? ತನ್ನಿಚ್ಚೆಯಿಂ  

ನಲಿದು, ಏನುಮರಿಯದ ಎನ್ನೊಳ್‌ ಅಪವಾದರೋಪಣೆಯೆ?' ಹುಂ "ನಾಯಿ   

ಕೂಗಿದೊಡೆ ದೇವಲೋಕಂ ಪಾಳಕ್ಳುಮೆ?” ಆನೇಂ ಅತ್ತೆಯೊಳಗಿರ್ದೊಡೆ,    

ನಿನ್ನಂತೆ ದುರ್ವೃತ್ತಿಯ ಎಣಕೆಯನಾದೊಡುಂ ಗೈದವಳೆ? ಪೆರ್ಚೇಂ   

ಸ್ವತಂತ್ರದ ಪೆಣ್ಣಳಾರುಂ ಏಳ್ಗೆಯೊಂದಿದುದಿಲ್ಲಂ. ಹುಂ ಹುಂ ಮಾಡಿದ   

ಕರ್ಮಮಂ ಉಣಲ್ವೇಳ್ಕುಂ."  


ಚಂದಂ--ಆ ನುಡಿಗೇಳ್ದು, ಮರುಳಂಗೆ ಕಳ್ಗುಡಿದಂತಾಗೆ ಕಣ್ಮೋ  

ರೆಯಿಲ್ಲದೆ ಬಡಿಯಲಾರಂಭಿಸಿದಂ,  

೬೫----------------------------------------------------------------------

ರಾಧ--(ಒಡಲುರಿದು) “ಎಲೆ ಚಂದ! ಮಾರಿದ ಪಸುವಿನ ಬೆನ್ನಂ   

ತಿರ್ದುವಂತೆ ಈಕೆಯ ಬಿಸೆಯದೊಳಂ ನುಡಿವುದು ತಕ್ಕುದಲ್ಲಂ; ಆದೊ  

ಡುಂ ಲೋಕದ ಮಾತನೆಂಬೆಂ-ನೀನುಮೊರ್ವಂ ಸಂಸಾರಿಯಾಗಿ ಪೆರರ  

ಪೆಣ್ಮಕ್ಕಳನಿಂತು ಬನ್ನಂಬಡಿಪುದು ಒಳ್ಳಿತಲ್ಲಂ ಕಣಾ. ತಾಯ್ತಂದಿವಿರ  

ಮನಮದೆನಿತ್ತುರಿವುದೊ? ಅದರಿಂ “ಕೋಪಮೆ ಪಾಪಂ" ಎಂದರಿತು   

ಒರ್ಮೆಗೆ ಸೈಸಿೃ ಬುದ್ದಿ ವೇಳ್‌, ಆನುಂ ಪೇಳ್ವೆಂ,"   


ಚಂದಂ--"ಹುಂ, ನೀಂ ಬುದ್ದಿವೇಳ್ವುದೆ ತಾನೀಗಳ್‌ ಅವಶ್ಚಂ   

“ನಾಗಂಗೆ ಕೈಮುಗಿದೊಡೆ ತನ್ನಂತೆಯೆ ಆಗೆಂಬುದು ಗಡ” ಅಂತೆ ನಿನ್ನಾ   ಜ್ಞಾನುಸಾರಿಣಿಯುಮಾದೊಡೆ, ಬಳಿಯಮೀಕೆಯ ಗತಿಯಂ ಕೇಳ್ವು   

ದೇಂ? ಏಂ ನಿಮ್ಮ ತಾಯ್ತಂದೆವಿರ ಮನಮುರಿವೊಡೆ, ದುರ್ವೃತ್ತಿಯಂ ತಿಳಿ   

ದುಂ ಬರಿದೆ ಇರಲ್ವೇಳ್ಕುಮೆಂದು, ಈಕೆಯನೆನಗಿತ್ತರ್‌! ಅದಿರ್ಕೆ, ಉರಿಗೊ  

ಳ್ಳಿಯೊಳ್‌ ಬೂದಿಯಂತೆ ನೀಮುದಿಸಿ ಅತ್ತೆಯ ಕುಲವತಿವೆಸರಂ ನಿರ್ಣಾ  

ಮಂಗೈದಿರಿಂ."   


ಸುಮುಖಿ--ಚಂದ! ಆ ನುಡಿಯಂತೆ ಪೋಕೆ, "ಕ್ರೀರಸಾಗರ   

ಭಟ್ಟನ ಮನೆಯೂಳ್‌ ಮಜ್ಜಿಗೆಗೇ ಸೊನ್ನೆ? ಎಂಬಂತೆವೋಲ್‌  ಪೆಸೆರಿಂದೇಂ?   

ನಿನ್ನತ್ತೆ ಕುಲವತಿಯಂದಮೆಲ್ಲವನರಿವೆಂ, ಮಾಳ್ಪುದೇಂ? "ಮರನೋಡಿ  

ಬಳ್ಳಿ, ಕುಲನೋಡಿ ಪೆಣ್‌" ಎಂಬ ನುಡಿಯೊಂದು ಮರೆತುದು.   


ಚಂ ದಂ--ಅಪ್ಪುದಪ್ಪುದು, ಹುಂ ಇರ್ಕೆ-- ಬಿಸಂ ಮುಚ್ಚಿದ   

ಬೆರಲನೆ ಕಡಿವಂತೆ ಈಕೆಯನೀಚಣಮೆ ಅಗ್ನಿಗೆ ಸಮರ್ಪಿಸಿ ಪರಿಶುದ್ಧ  

ನಪ್ಸೆಂ. (ಎಂದು ಕಟ್ಟಿಗೆಗಳನೊಟ್ಟಿಸಿ ಬೆಂಕಿಯಂ ಪತ್ತಿಸಿ ಸುಡುವೆನೆಂದು  

ಚಂದ್ರಾವಳಿಯೆಂ ಸೆಳದುಕೊಂಡುವೋದಂ.)   


ಆಗಳ್‌ ಆ ಕೋಳಾಹಳಮನೇನೆಂಬೆಂ!   


ಚಂದ್ರಾ--ಹಾ, ಬಿದಿಯೆ! ಅಬಲೆಗೆನಗೆ ಈ ಯವತೆಯನೊದವಿಫು   

ದರಿಂ ಪೆರ್ಬುಲಿಯ ಬಾಯ್ಗಾದೊಡುಂ ಕಟ್ಟುವುದೂಳ್ಳಿತಿರ್ದುದು, ಓ 

೬೬--------------------------------------------------------------

ತಾಯ್ತಂದೆವಿರ್‌! ನೀಮೆನ್ನಂ ಎಳೆವರಯದೊಳೆ ಬೊಂಬೆಯನೆಂತಂತೆ ಈ  

ದುರುಳಂಗೀವುದರಿಂ ಪುಟ್ಟಿದೊಡನೆಯೆ ಮೂಗುವಾಯ್ಗಳಂ ಬಿಗಿವಿಡಿದೊಡೆ   

ಸೊಗಮಿರ್ದುದಲ್ಲೆ? ಹುಂ, ಅದಂತೆ ಪೋಕೆ, ಪೋದ ಬಿಸೆಯದೊಳ್‌  

ವಾದಮೇಕೆ? ಲೋಕದೊಳ್‌ ಇನ್ನಾರುಂ ಅನುಗುಣಮಿರದಂಗೆ ಪಣ  

ಮುಂಟೆಂದು ಪೆಣ್ಣಂ ಕುಡುವುದನೆನ್ನಂ ನೋಡಿ ಬಿಡುಗೆ, (ಎಂದು ಗೋಳಿ  

ಡುತಿರಲಾಚಂದೆಂ ಸಳ ತಂದಂ.)   


ಆಗಳ್‌ ಚಂದ್ರಾ--ಹಾ ಪ್ರಾಣಸಂಕಟಿಮೊದವಿರ್ಪಾಗಳುಂ ಮಾ   

ರಿಗೊಪ್ಪಿಪ ಕುರಿಯಂತೆ ಕೂಗುತಿರ್ದೊಡಾನಗತಿಯೊ? ಎಲೆ ಭಕ್ತವತ್ಸಲ!  

ಆನಾಥಬಂಧು! ಶ್ರೀಕೃಷ್ಣ! ನಿನ್ನಂ ಪೂರ್ವಿದೆನೆಂದೆನ್ನಂ ಈ ದುರುಳ  

ನೀಪರಿಯೊಳ್‌ ಬಾಧಿಪ್ರದನುಂ ಲಕ್ಷಿಸದಿರ್ಪುದರಿಂ ನೀಂ ನಿಜಮಾಗಿಯುಂ   

ಪೂಗಣ್ಣನೆಂದೇ ಭಾವಿಪೆಂ. ಬಿಟ್ಟು ಪೋಪಾಗಳ್‌ ಸೆರಗಂ ವಿಡಿದೆನ್ನಂ  

ಧೈರ್ಯಮೊರೆದು ಸಂತಯಿಸಿದುದನೆಲ್ಲವಂ  ಮರೆತು, ಈಪರಿಯೊಳಸ  

ಡ್ಡೆಯಂ ತಾಳ್ವುದೇಂ ಒಪ್ಪಿತವೆು? ಅಂತುಂ ಪಣ್ಣೊರ್ವಳಂ ವಂಚಿಸಿ ಮಾರಿಗೆ   

ಸಮರ್ಪಿಸಿದೊಡೆ ಏಂ ಪೌರುಷಮೆ? ಪೆರ್ಚನುಸಿರಲ್‌ ಸಮಯಮಿಲ್ಲಂ,  

 ನೀನೇ ಬುವಿಯಾಣ್ಮನಾಗಿ ಇಂತೆಸೆಗಿದೊದೆ ಭೂಮಿಯ ಬೀಜಮಂ ತಿಂದಂ   

 ತಾಯ್ತು. (ಎಂದು ಗೋಳಿಟ್ಟಳ್)   

 

ಅನಿತತೂಳ್‌ ಆ ಚಂದಂ ಆಃ! ಬಿಳ್ದಿಂಗಳ್ಗುಂ ಬಾಡುವ ತನ್ವಂಗಿ   

ಯಂ, ಸೆಜ್ಜೆಯೊಳ್‌ ಕೆದರ್ದ ಮಲ್ಲಿಕಾಮಾಲತ್ಯಾದಿಪುಷ್ಟಮುಕುಳಂಗ   

ಳುಂ ಸೂಜಿಯಂತೆ ಕುತ್ತುಗುಮೆಂಬ ಮೆದುಮೆಯ್ಯಳಂ,  ಕಾಳಿಯನೊಂದಿದ   

ಕಾಲಾಂತಕನಂತೆ, ಲೋಕಮನೆಲ್ಲಮಾವರಿಸುವ  ಧೂಮರೇಖೆಯೊಡಂಬೆರದ   

ಕಾಷ್ಠಾಗ್ನಿಗೆ ಪೊತ್ತಿಕ್ಕಿದಂ. ನೋಟಕರೆಲ್ಲರುಂ ಹಾಯೆಂದೊರಲು  

ತಿರ್ದರ್. ಪಸುಗಳುಂ ಕಣ್ಣೀರ್ದುಂಬಿದುವು. ಲತಾವೃಕ್ತಂಗಳುಂ ಗಾಳಿ  

ಗೊಲೆವ ನೆವದಿಂ "ಮಾಣ್‌ ಮಾಣ್‌" ಎನುತಿರ್ದುವು,   


ಆಗಳ್‌ ರಾಧೆ--ಎಲೆ ಚಾರರೆ! ನೀಮೀಗಳೆ ಪೋಗಿ ಎನ್ನೆರೆಯ   

ನೊಳ್‌ ನಿನ್ನ ಉಪಕಾರದಿಂ ಏನುಮರಿಯದ ಚಂದ್ರಾವಳಿಗೆ ಇಂತುಟ 

೬೭--------------------------------------------------------------------

ವಸ್ಸೆಯಾಯ್ತು, ಎಂದು ಕಂಡುದನುಸಿರ್ದು ತಂಗಯೆ ಮರುಕಮಂ ಸೈಸೆದೆ  

ರಾಧೆಯುವಾಕೆಯ ಗತಿಯನೆ ಪೊರ್ದಿದಳ್‌, ನಿನ್ನ ಕೀರ್ತಿಯದು  

ಲೋಕದೊಳೆತ್ತಲುಂ ಪರ್ಜುಗೆ, ಎಂದೆನ್ನ ನುಡಿಯನೆ ಪೇಳಿಂ (ಎಂದ  

ವರನಟ್ಟಿ  (ತನ್ನೊಳೆ) ಹಾ! ಆಂ ಬಂದುದಕೆ ತಂಗೆಯೆ ಸಾವಂ   

ನೋಳ್ಪುದೇ ಫಲಮಾಯ್ತು, ಅಂತುಮಲ್ಲದೆ ಗೋಪಾಲನಾಥಂ ಎನ್ನ  

ರೂಪದಿನೇ ಈಕೆಯಂ ಒಡಂಗೂಡಿದ ಕತದಿಂ ಎಲ್ಲರುಂ ತಂಗೆಯಂ  

ಕೆೊಂದಳೆಂದೆನ್ನಂ ಬೈವರ್‌, ಮೇಣುಂ ಅಳಿವಂ ಕಾಣ್ಬು   

ದೆಂತು? (ಎಂದೆಣಿಸಿ, ನೋಳ್ಪರೆಲ್ಲರುಂ, ಅಬ್ಬಾ ಇವರ ಬಾಂಧವ್ಯದ  

ಪ್ರೇಮಮೆ! ಎಂದು ಮರುಗುತೆ ಕೊಂಡಾಡುತಿರಲ್‌, ಆಜ್ವಾಲಾಮ   

ಧ್ಯಕೆ‌ ಓಡಿ ಲಾಗಿಸಿದಳ್‌,)   


ಆಗಳ್‌! ಕಾಷ್ಠಾಂತರದೊಳ್ "ಹಾ ಕೃಷ್ಣ ಕೃಷ್ಣ!' ಚಂದನ ಬಾ   

ಯೊಳ್‌ 'ಹುಂ ದುಷ್ಟೆ ದುಷ್ಟೆ!' ನೋಟಕರ ನುಡಿಯೊಳ್‌ 'ಅಹೋ   

ಕಷ್ಸಂ ಕಷ್ಸಂ', ಇಂತೊಂದು ಕೋಲಾಹಲಂ ದಿಗಂತವಿಶ್ರಾಂತಮಾಗು   

ತ್ತಿರೆ, ಮುತ್ತಿದ ಧೂಮರೇಖೆಯೆಲ್ಲಂ ಸೂರ್ಯೋದಯದೊಳ್‌ ಮಾಯ  

ಮಪ್ಪ ಕತ್ತಲೆಯಂತೆ ಎತ್ತೆತ್ತಮೊ ಪರಿಯಲ್‌ ಅನಾಥಪ್ರಿಯಂ ಮುರಳೀ  

ಧರಂ, ಶ್ರೀ ಕೃಷ್ಣಂ, ಆ ಜ್ವಾಲಾಮ/ದ್ಯದೊಳ್‌ ನರಲ್ವ ರಾಧಾಚಂದ್ರಾ  

ವಳಿಯರ ನಡುವೆ ಬಂದು ನಲಸಿದೊಂದಚ್ಚರಿ ಕಾಣಲಾದತ್ತರೆನಿವಿಸೆ  

ದೊಳ್‌. ಕಾಷ್ಠಾಗ್ನಿಯ ತೇಜಮುಂ ಮಾಣಿಕಪೀಠದ ಕಾಂತಿಯಂ ಪೋ  

ಲ್ದುದು. ಬಳಿಯಂ, ಯಶೋದಾಸುತಂ, ಇರ್ವರ ಕೆದರ್ದ ಬಟ್ಟೆಗಳಂ  

ಸರಿಗೈದು ಕಣ್ಣೀರನೊರಸಿ ಹಾ “ಈ ಬಾಲೆಯ ಮೆಯ್ಯೆಗಾಯಮನುಂ  

ಬೆಂಕಿಯುರಿಯಂ ಸೈಸದೆ ನರಲ್ವುದನುಂ ಕಂಡೊಡೆ, ಬಸಿರ್ಗೆ ಕತ್ತಿ   

ಯಂ ಹಾಯ್ಕಿದಂತಕ್ಕುಂ.. ಎನ್ನಂ ತ್ರಿಕರಣಪೂರ್ವಕಂ ನಂಬಿದರ್ಗೆ  

ಒದವಿದ. ಸುಖದುಃಖಂಗಳಲ್ಲವುಮೆನೆಗಲ್ತೆ?  ಹುಂ, 'ಸತ್ತ ಎರ್ಮೆಯ  

ಪಾಲಂ ಬಣ್ಣಿಪುದೇಕೆ?' ಎಂಬಂತೆ ಕಳೆದುದಂ ನೆನೆದು ಗುಣಮಿಲ್ಲಂ."  

ಎಂದಮೃತಹಸ್ತದಿಂ ತಡವರಿಸೆ ಗಾಯದ ಬೇನೆಯುಂ ಬೆಂಕೆಯುರಿಯು  

ಮೆಲ್ಲಂ ಬಿರುಗಾಳಿಯ ದೀಪಮಾಯ್ತು. 

೬೮----------------------------------------------------------------

ಬಳಿಯಂ ಬೆರಗಿಂ ಕಣ್ವಿಟ್ಟು ನೋಳ್ಪ ಚಂದಾದ್ಯರೊಳುಂ ನೋಟ  

ಕರೊಳುಂ, ಕಡೆಗಣ್ಣನೊಯ್ಯನೆ ಪರಪಿ ರಾಧೆಯ ಮೊಗಮಂ ನೋಡಿ   

ನಕ್ಕು,    


ಕೃಷ್ಣಂ--"ಎಲೆ ಕಾಂತೆ! ನೀನೆನ್ನಂದಂಗಳನೆಲ್ಲವಂ ಒರೆದು 

ಪರೀಕ್ಷಿಸಿದ ಪ್ರೌಢೆಯಲ್ತೆ? ಇವಳಿನ್ನುಂ ಮುಗ್ಧೆ, ಅದರಿನೇನೇನೋ ಬಗೆ  

ವಳ್‌" ಎಂದು ಚಂದ್ರಾವಳಿಯ ನೀಕ್ಷಿಸಿ,   


ಓ ಎನ್ನ ಸಂತಸದ ಕಣಿ! ಎನ್ನ ಕೊರಲ ಮಣಿಮಾಲೆ! ಎನ್ನ   

ಸವಿನುಡಿ ಬೊಂಬೆ! ಒರ್ಮೆಗಿನಿಸುವಮಪರಾಧಂಗೆಯ್ದೆಂ ಇನ್ನಿದನೆಕೊಂಡು   

ಮೂದಲಿಸಿ ಮೂಗಿನ ಬಳ್ಳಿಯಂ ಪಿಡಿದ ಗೋಪತಿಯವಸ್ಥೆಯಂ ಎನಗು  

ಮೊದವಿಸದಿರ್‌" ಎಂದು. ಕಿವಿಯೊಳ್‌ ಪೇಳ್ದು, ಬಳಿಯಂ ನಸುನಗುತೆ  

“ಕಷ್ಪಸುಖಂಗಳ್‌ ಇರುಳ್ವಗಲ್ಗಳಂತಿರ್ಪುವು, ಅದರಿಂ, ನಿನ್ನ ಅವಗಡದ  

ದುಃಖಂ ಪರಿದುದು ಇನ್ನೇನುಂ ಭಯಮಿಲ್ಲಂ" ಎಂದು ಸಂತಯಿಸಿದಂ.  


ರಾಧೆ--ಓ ಎನ್ನ ಸೌಭಾಗ್ಯನಿಧಿ! ತಂಗೆಯ ಈಯವಸ್ಥೆಯಂ  

ಕಂಡು ಸೈಸದೆ ಅರಿಕೆಯಲ್ಲಂ ಮಾಸೆ,  ನಿನ್ನೆಡೆಗೆ ದೂಷಿಸಿ ಆಳ್ಗಳಂ   

ಕಳುಪಿರ್ದೆಂ. ಆ ತಪ್ಪನೆಳ್ಳಿನಿತನಾದೊಡುಂ ಮನದೊಳಿಡದಿರ್".   


ಕೃಷ್ಣಂ-- ಅಂತೆನದಿರ್‌,  ಪೆಣ್ಗಳಂ ಪೊರೆವ ಭಾರಂ ಪುರುಷರದಾ   

ಗಿರೆ ನಿನ್ನೊಳೇಂ? ಇಲ್ಲಿ ಕಷ್ಟಂಬಡುವ ನಿಮ್ಮಂ ಮರೆತು, ಸೊರ್ಕಿದಾನೆ  

ಯೆಂತೆ ತಿರುಗುತಿರ್ದ ಎನ್ನದೆ ಅಪರಾಧಂ.   


ರಾಧೆ--ಅಮೃತದೊಳ್‌ ಕೈಪೆಗೆ ಇನಿಸುವೆಡೆಯಿರದಂತೆ ನಿನ್ನೊ   

ಳ್‌ ತಪ್ಪಿನ ಉಂಗುಟಕುಮೆಡೆಯಿಕರ್ಕುಮೆ? ಇದೆಲ್ಲಂ ನಿನ್ನ ನಾಟಕದ   ಒಂದೊಂದಂಕಮಲ್ಲದೆ ಬೇರೇಂ?   


ಅನ್ನೆಗಮಾಗಸದತ್ತಣಿಂ "ಹರಿ ಹರಿ" ಎಂದು ಶ್ರೀ ಕೃಷ್ಣನ ನಾಮ  

ಸಂಕೀರ್ತನೆಯಂ ತನ್ನ ಬೃಹತಿಯೆಂಬ ಬೀಣೆಯಿಂ  ಸ್ವರರಾಗತಾಳಲಯ  

ಮೂರ್ಛನಾದಿಯಾದ ಪಾಡನರಿತು ನುಡಿಸುತಂ ಪಾಡುತುಂ ಇಳಿತಂದ 

೮೦------------------------------------------------------------------

ನಾರದನಂ ಕಂಡಾಮಾಧವಂ, ರತ್ನಾಸನದಿಂದೆಂತಂತೆವೊಲ್‌ ಕಾಷ್ಟಾಂತ  

ರದಿಂ ರಾಧಾಚಂದ್ರಾವಳಿಯರೊಡನಿಳಿದು, ವಂದಿಸೆ "ಗೋವಿಂದ" ಎಂದು   

ಇನಿಸುಂತೊಲಗಿ ಪೊಡಮಟಟ್ಟ ಆ ರುಷಿಯಂ ತಗೆದಪ್ಪಿ, ಬಳಿಯಂ ಬೀಣೆ   

ಯಂ ಬಾಜಿಸದೆ, ಮನದೊಳೆ ಹರಿಸ್ಮರಣೆಗೈವುತೆ ಕೈವೆರಲನೆಣಿಪನೊಳಾ  

ವಾಸುದೇವಂ... "ಇದೇಂ ಕೊಂಡೆವೇಳ್ಡುದು ಎನಿತ್ತಾದುದೆಂದು ಲೆಕ್ಕಂ  

ಗೆಯ್ವುದೆ?"   


ನಾರದಂ--(ನಕ್ಳು) ಇದೀಗಳ್‌ "ತಾಂಕಳ್ಳನಾದೊಡೆ ಪೆರರಂ   

ನಂಬಂ” ಎಂಬುದರ್ಕೆ ದೃಷ್ಟಾಂತಂ. ಹರಿಸ್ಮರಣೆಯಂ ಮಾಳ್ಪ ಈ ನಾಲಗೆ   

ಇನ್ನೆವರಂ ಪುಸಿಯುಸಿರ್ದುದಿಲ್ಲಮೆಂದು. ಕಾಯಿಸಿದ ಗುಂಡನಾದೂಡುಂ  

ಪಿಡಿವೆಂ. ಸತ್ಯಮನೆಂದೊಡುಂ ಪಿಸುಣಾಡಿದೆಂತಾಯ್ತೆ? ಆ ನುಡಿಯಂತೆ  

ಪೋಕೆ, ತಪೋನಿಧಿಗಳಿಂತೆಲ್ಲಂ ದುರ್ಮಾರ್ಗದೊಳಡಿಯಿ:ಡರ್‌,   


ಕೃಷ್ಣಂ--(ನಗುತೆ) ಓ ತಪೋನಿಧಿಯೆ! ನಿನ್ನ ತಪದೆ ಬಲ್ಮೆ   

ಯಂ ಪೆಣ್ಣೊಳ್‌ ತೋರಿ ಸಾರ್ಥಕಂಗೆಯ್ದೆಯಲ್ತೆ? ಮಾಮೈಮಂ, ಪುನೀ   

ತಂ, ಪುಣ್ಯವಂತಂ, ಎನಿಸುಂ ಪೊಗಳಳ್ದೊಡುಂ ನಿನ್ನ ಗುಣದ ಕುಡಿ, ಆ  

ಹನೂಮಂತನ ಬಾಲದೆ ಕುಡಿಯೆ ನಿಜಂ. ಬಲ್‌ ಬಲ್‌.   


ನಾರದಂ--ಏಂ! ತಪದ ಬಲ್ಮೆಯಂ ಪೆಣ್ಣೊಳ್‌ ತೋರ್ದೆನೆ?   

ಇಂತುಸಿರಲ್‌ ನಿನಗೆ ನಾಲಗೆವಂದುದೆ! ಆಂ ಮನೋವಾಕ್ಕಾಯಂಗ  

ಳೊಳುಂ ಪೆಣ್ಗಳೊಳ್‌ ಕವಲೆಣಸಿದುದಿಲ್ಲಂ, ಹುಂ ತನ್ನನೆ ಪಳುಕಿನ  

ಕನ್ನಡಿಯೊಳುಂ ಕಾಣ್ಬಂತೆ ನಿನಗೆ ಪೆರರೊಳುಂ ತನ್ನವಸ್ಥೆಯೆ ಕಾಣ್ಗುಂ;  

ಇರ್ಕೆ, ಎನ್ನೊಳದೇಂ ತಪ್ಪಿತಂ?   


ಕೃಷ್ಣಂ-ಪರಿಹಾಸ್ಯಂ ಸಾಲ್ಗುಂ, ಪ್ರಯೋಜನಮಿಲ್ಲದೆ ಅಪ್ಪ   

ನೆಡೆಗೈದಿ ಏನೇನೋ ಬಿತ್ತರಿಸಿ ಅಬಲೆಗೆ ಈಯವಸ್ಥೆಯನೊದವಿಸಿದುದೇ.  

ತಪ್ಪಿತಂ.   


ನಾರದಂ--ವ್ರತಿಗಳ್‌ ಸ್ವಪ್ರಯೋಜನಕಾರ್ಯಮಂ ಮಾಳ್ಪರ   

ಲ್ಲೆಂಬುದಂ ನೀನಿನ್ನುಮರಿಯೆಯ?  

೭೦--------------------------------------------------------------------- 

ಕೃಷ್ಣಂ--ನಿನ್ನ ನುಡಿಯೆಂದೊಡಿದು. “ಬೀಳದೆ ಸನ್ನೆ? ಹುಂ   

ಸಾಲ್ಗುಂ, ಆನಿಂತುಟುಗೆಯ್ದುದೇಕೆಂದು ನೀನರಿತಿರ್ಪೆಯ?   


ನಾರದಂ-.ಅರಿಯಲದೇಂ ಬಹ್ಮವಿದೈಯೆ? ನಿನ್ನ ಬಿರುದೆಂಬುದಂ  

ಮುಪ್ಪೊಳಲೇ ತಿಳಿಸುಗುಂ.   


ಕೃಷ್ಣಂ--ಚಿಃ ಡೊಂಕುನುಡಿಯನೆತ್ತದಿರ್‌.     


ನಾರದಂ--ಅಂತಾದೊಡೆ ಸೈತಿನ ನುಡಿಯಾವುದು?   


ಕೃಷ್ಣಂ-ನೀಂ ಕೇಳ್ವೊಡೆ ಕಿವಿಯೇ ಅಧಿಕಾರಿಯಾಗಿರ್ಕೆ,  


ನಾರದಂ--.ಕಿವಿಯೇ ಅಧಿಕಮಪ್ಸ ಅರಿಯಾದೊಡೆ ಅವಂ ಬಧಿರ  

ನೆನಿಪ್ಪಂ, ಅದರಿಂ ಕೇಳ್ಳುದೆಂತು?   


ಕೃಷ್ಣಂ--ಚಿಃ ನಿನ್ನೊಳ್ ಮಾತಾಡಲೇ ಶ್ರಮಂ.   


ನಾರದಂ--ಕಲ್ಲಂ ತಿಂದೊಡುಂ ಕರಗಿಸುವ ಪರಯದವಂಗೆಯೆ  

ಶ್ರಮಮಾದೊಡೆ ಪಳೆಮುದುಕನೆನ್ನಿರಮಂತಿರಲ್ವೇಳ್ಕುಂ ?


ಕೃಷ್ಣಂ-ಸಾಲ್ಗುಂ ನಿನ್ನೊಳ ನುಡಿಯ ಸಮರ್ಥರ್? ನೀಂ      

ವಿಶ್ವತೋಮುಖನ ಮಗನಲ್ತೆ?  


ನಾರದಂ--ಆಂ ವಿಶ್ವತೋಮುಖನ ಮಗಂ, ನೀನವಂಗು   

ಮಪ್ಪಂ, ಎನ್ನಜ್ಜಂ.   


ಕ್ರ ಷ್ಣಂ-- ಈಕಿರುವರಯದವಂ ಚಣಮೊಂದರೊಳೆ ಪಳೆಮುದು  

ಕಂಗುಮಜ್ಜನಾದನೆ? ನಾರದ! ಊರೂರಂ ತಿರುಗಿ ನಿನಗೀಗಳ್‌ ಪಿತ್ತ  

ಮೇರಿರ್ಕುಂ; ಅದೆರಿನೆ ಇಂತೆಲ್ಲಂ ಪೇಳ್ವೆ.   


ನಾರದಂ--ಓ ಕೃತ್ಯಂಗಳಿನೇ ನಿನ್ನೆಂದುದು ವ್ಯಕ್ತಮಪ್ಪುದು. 

೭೧---------------------------------------------------------

ಕೃಷ್ಣಂ--ಆಯ್ತು ನಮಸ್ಕಾರಂ, ಅಧಿಕಪ್ರಸಂಗಿಯೊಳ್‌ ನುಡಿ   

ವುದೇಂ?   


ನಾರದಂ_.(ಯೋಚನೆಯಂ ನಟಸಿ) ಓ ಪರಾತ್ಸರ ಸ್ವರೂಪ!   

ಕೋಪಿಸದಿರ್, ನೀನಿಂತುಟು ಗೆಯ್ದುದೇಕೆಂದು ಈಗಳೆ  ನೆನಂಬರಿಕೆಯಾಯ್ತು.   


ಕೃಷ್ಣಂ--ಆದೊಡೇಕೆ? ಪೇಳ್‌ ತಿಳಿವೆಂ. 


ನಾರದ--ನೀಂ ತಿಳಿಯುದುದಾವುದು?  "ಚರ್ವಿತಚರ್ವಣದಂತೆ   

ತಿಳಿದುದನೆ ತಿಳಿದೊಡೇಂ ಪಳಂ? ಹುಂ ಇರ್ಸೆ ಪೇಳ್ಲೆಂ, ನಿನಗೊಂದು ವಿಲಾ  

ಸಂ, ಎನಗೆ ಮರೆತ ನಿನ್ನ ನಾಟಕದ ಪುನರಾವೃತ್ತಿ, ಕೇಳ್ವರ್ಗೆ ಆಂತರ್ಯದ  

ಅಜ್ಞಾನಧ್ವಾಂತನಿವಾರಕಮಾದ ಸುಜ್ಞಾನದೀಪಿಕಾವರ್ತಿ.


ಕೃಷ್ಣಂ-- ಹುಂ ಎಂತಾನುಮಕ್ಕೆ ಪೇಳ್‌. 


ನಾರದಂ... ಪೇಳ್ವೆಂ, ಲೋಕದೊಳ್‌ ಪಾತಿವ್ರತ್ಯಮೆ ಜಗತ್ಪತಿ   

ಯಪ್ಪ ನಿನ್ನ ಒಲ್ಮೆಯಂ ಪೆಣ್ಗಳ್ಗೊದವಿಸುಗುಂ, ಅಂತಿರಲೀ ಬಾಲೆ ಚಂದ್ರಾ  

ವಳಿ ತನ್ನಕ್ಕನಂತಿರೆ ಸುಕೃತಶೇಷದಿಂ ನಿನ್ನನೆ ವಶೀಕರಿಸಿರ್ಪುದರಿಂ, ದಿನ  

ದೀಪದಂತಿರ್ಪ ಆ ಪಾತಿವ್ರತ್ಯದ ಬೆಸನಮೇಕೆಂದು ಸುಜ್ಞಾನಿಗಳ್ಗುಂ, ಅನು  

ಗುಣಮಿರದ ದಾಂಪತ್ಯಂಗೆಯ್ದೊಡೆ ತತ್ಫಲಮಿಂತು ವಿಷರೀತಮಾಗಿ ಪರಿಣ  

ಮಿಸುಗುಮೆಂದು ಸಾಮಾನ್ಯರ್ಗುಂ, ಸೂಚಿಸಲ್ವೇಡಿ ಈತೆರನೆಸಗಿದೆಯ  

ಲ್ಲಮೆ1. ಅಂತಾದೊಡುಂ ನಿನ್ನ ಯೋಚನೆಗೆ ಸಹಾಯಂಗೆಯ್ದ ಎನ್ನಂ  

ನೀನಿಂತು ದೂರಲಕ್ಕುಮೆ?   


ಕೃಷ್ಣಂ ನೀನೆನ್ನ ಆಶಯಕೆ ಸಹಾಯಂಗೆಯ್ದುದೆಂತೊ   


ನಾರದಂ-.ಆಂ ನಂದನೊಳ್‌ ಪೇಳ್ದುದರಿನಲ್ತೆ ನಿನ್ನೆಣಕೆ ಇಳೆ   

ಯೊಳೆಲ್ಲಂ ಪಸರಿಸಿತು ?   


ಕೃಷ್ಣಂ-. ಆಯ್ತಾಯ್ತು ಉತ್ತರಂ, ಮುಟ್ಟಿದುದು; ಇನ್ನಾಂ   

ನಿನ್ನ ಅಧೀನಂ.   


ನಾರದಂ-. ಅದೇಂ ಪೊಸತೆ? ಭಕ್ತಾಧೀನನೆಂಬುದು ನಿನಗನಾ   

ದಿಯ ಬಿರುದಲ್ತೆ! ಇದೋ ನಿನ್ನನೀವೀಣೆಯೊಳ್‌ ನಲಿಯಿಸುವೆಂ ನೋಡು  

 ಎಂದು ಬಾಜಿಸಿ, ಪರಮಾನಂದಾಬ್ಧಿಯೊಳ್‌ ಅನಿಬರುಮಂ ಮುಳುಗಿಸಿದಂ.) 

೭೨------------------------------------------------------------------------

ಆ ಸಮಯದೊಳೆಲ್ಲರುಂ ಕೃಷ್ಣನ ಮೈಮೆಯನಚ್ಚರಿಯೆಂದು ಪೊಗ  

ಳ್ದರ್,  ಚಂದನುಂ ಚಿತ್ರಾರ್ಪಿತನಂತಿರ್ದಂ. ಆಗಳ್‌  ಚಂದನೆಡೆಗೈತಂದಾನಾ   

ರದಂ--"ಎಲೆ ಚಂದ! ಇನ್ನಾನುಂ ಮರುಳ್ತನಮಂ ಬಿಡು ಸೃಷ್ಣನಂ   

ನಾಡ ಗೋವಳನೆಂದೆಣಸೆದಿರ್‌; ಸಾಕ್ಷಾದ್ಭಗವಂತನ ಅವತಾರಿ ಕಣಾ !  

ಅಂತಲ್ಲದೊಡೆ ಉಂಡಾಡಿಗಳಪ್ಸ ಮೇವಿನ ಮಕ್ಕಳ್ಗೆ ಈಯಮಾನುಷ  

ಕೃತ್ಯಂ ಸಾಧ್ಯ್ಯಮೆ? ಭಕ್ತದ್ರೋಹಿಯಾದವಂ ಪರಮಾತ್ಮದ್ರೋಹಿಯು  

ಮಪ್ಪನೆಂಬುದು ಸಿದ್ಧಾಂತಂ; ಆ ದೈವದ್ರೋಹಂ ಆಂಧಕೂಪಕೆ ನೇರಾಗಿ  

ಕರದುಯ್ವ ಮುಂದಾಳಕ್ಕುಂ, ಅದರಿಂ ಆ ಸೃಷ್ಣನ ಪ್ರೀತಿಗೆ ಈಡಾದ  

ಚಂದ್ರಾವಳಿಯೊಳ್‌ ಕೋಪಮಂ ತೊರೆ, ಪಲವೇಂ? ದಿವ್ಯಸಹಸ್ರವತ್ಸರಂ  

ನಿರಾಹಾರದಿಂ ನಟ್ಟಡವಿಯೊಳ್‌ ತಪಂಗೆಯ್ವ ಯೋಗಿಗಳ ಮಾನಸಕುಂ  

ಅತ್ತಿಯ ಪೂವಾದ ಪರಮಹಂಸಂ ಏನೋ ಪೂರ್ವಪುಣ್ಯಲೇಶದಿಂ ಪ್ರತ್ಯಕ್ಷ  

ಮಾಗಿರಲ್‌ ಪಳ್ಳಿಯ ಕರುಂಬನ ಕೈಗೆ ಮಾಣಿಕಮೊದವಿದಂತೆ ಮಾಡ  

ದಿರ್‌."   


ಚಂದಂ-. (ಆ ನುಡಿಗೇಳ್ದು ಕೃಷ್ಣಂ ಪರದೈವಮೆಂದು ದೃಢ   

ಮಾಗೆ) ಓ ಮುನೀಶ್ವರ |! ಅನೀಗಳ್‌ ಕೃಷ್ಣಂಗೆರಗಲೆಂದವನ ಸನಿಯಕೈದಿ  

ದೊಡೆ ಇನ್ನೆವರಂಗೈದ ಆಪರಾಧದೇಳ್ತರದಿಂ ದೀಪದೆಡೆಗೈದಿದ ಪತಂಗ  

ದಂತೆ ಆ ಅಪಾರಮಹಿಮನ ಕೋಪಾಗ್ನಿಗೆ ಆಹುತಿಯಾಗದಿರ್ಪೆನೆ?  

ಅದರಿನೆನ್ನಮನಂ ಅಲ್ಲೋಲಕಲ್ಲೋಲತರಂಗಂಗಳೂಳ್‌ ಆಲೆವ ದೋಣಿ  

ಯಂತಿರ್ಪದು. ಮುಂದಣ ಉಪಾಯಮೇನೆಂದು ನಡನಡುಗುವ ಚಂದ  

ನೊಳ್‌.   


ವಿರಿಂಂಚಾತ್ಮಜಂ -. ಎಲೆ ಪುಚ್ಚ! “ಶರಣಂಗೆ ಮರಣಮಿಲ್ಲಂ   

ಎಂಬ ನುಡಿಯಂ ಲೋಕಮೆ ತಿಳಿದಿರ್ಕುಂ. ಅಂತಿರೆ ಜ್ಞಾನಸ್ಸರೂಪಂ  

ಪರಮಾತ್ಮಂ ತಿಳಿಯನೆ ! ಅದರಿಂ ಕೃಷ್ಣನ ಕೋಪಕ ಬೆದರ್ದಪೆನೆಂದು   ನೀನೆಂದುದು ಗುಮ್ಮಂ  ಬರ್ಕುಮೆಂದು ತಳ್ಳೆಂಕದಿಂ ಮುಸುಕಂ ಹಾಯ್ಕುವ   

ಮಕ್ಕಳ ಮೂಢತೆಯಂತಾಯ್ತು, ಒರ್ಮೆಗವಂ ಮುಳಿದೊಡೆ, ನೀಂದೂರ 

೭೩----------------------------------------------------------------------

ಮಿರ್ದೊಡುಮೇನುಳಿವಯ್‌? ಐಂ ಪ್ರಳಯದೊಳ್‌ ಗವಿಯೊಳ್‌ ಅಡಗಲ್‌  

ತೀರ್ಗುಮೆ? ಆಕತದಿಂ ಕವಲೆಣಿಸದೆ "ಸಹಸ್ರಾಪರಾಧಂ ಕ್ಷಮಸ್ವ" ಎಂದು  

ಶ್ರೀ ಕೃಷ್ಣನ ಚರಣಮಂ ಬಗಿವಿಡಿ.   


ಚಂದಂ--"ಅಣತಿ" ಎಂದೈದಿ ಮೈ ಕಂಪಿಸುತಿರೆ ಭೆಯಭಕ್ತಿ   

ಪುರಸ್ಸರಂ ಕೃಷ್ಣದಡಿದಾವರೆಗೆ ಮಣಿದೆಂ.   


ಒಡನಾವಾಸುದೇವಂ ನಡನಡುಗುವ ಚಂದನಂ ಪಿಡಿದೆತ್ತಿ, ಚಂದ್ರಾ  

ವಳಿಯ ಮೊಗಮಂ ನೋಡಿ ನಸುನಗುತೆ, "ಎಲೆ ಚಂದ! ಇದೇಂ ಚಳಿ  

ಗಾಲಮೊ? ಏನಾನುಂ ಭೂತಾವೇಶವಮೊ? ಇದೋ ಮೆಯ್ಯೊಳ್‌ ನಡುಕಂ   ವಿಪರೀತಮಾಗಿರ್ಕುಂ. 


ಚಮದ< ಭಯಂಲಜ್ಜೆಗಳಿಂದುಸಿಕನಿರೆ.   


ಕೃಷ್ಣಂ-"ಓ ಚಂದ್ರಾವಳಿ! ಏಂ ನಿನ್ನ ಗಂಡಂಗೀಸರಿಯ ರೋ  

ಗಮೇನಾನುಮಿರ್ಪುದೆ? ಇದೋ ಮೆಯ್ಯೊಳ್‌ ಕಂಪಂ, ಬಾಯೊಳ್‌  

ಮೂಕತೆ" ಎಂದು ಕೈಮುಟ್ಟಿ ಕೇಳೆ.  


ಚಂದ್ರಾ---ಕೃಷ್ಣಸ್ಪರ್ಶನದಿಂ ಕಂಪಮಾಂತು ಲಜ್ವಿಯಿಂ ತೆಲೆ   

ವಾಗಿ ಮಾತಾಡರಣಿರ್ದಳ್.   


ಕೃಷ್ಣಂ--(ದರಹಾಸೆದಿಂ) ಇನ್ನೆವರಮರಿಯದಾದೆಂ, ಓ ಈ ಗಂಡ 

ವೆಂಡಿರ್ ಏನೆರಕಮುಳ್ಲವರೊ! ರೋಗದೊಳುಂ ಗಂಡಂಗಿರ್ಪುದೆ ಪೆಂಡ  

ತಿಗುಂ, (ಎಂದಿನಿಸುಂ ನಕ್ಕು) ಎಲೆ ಬ್ರಹ್ಮಾತ್ಮಜ! ನೀನೀಚಂದೆನೊಳ್‌  

ಏನೋ ಕರ್ಣಮಂತ್ರಂಗೆಯ್ದುದನುಂ, ಇವಂ ಬಂದು ಮಣಿದುದನಂ,   

ಈಗಳ್ ಕಂಪಿಸುತೆ ಮೂಕನಾಗಿರ್ಪುದೆನುಂ ಕಾಣ್ಬೆಂ. ಇದೇಂ ರೋಗಮೊ?  

ನಿನ್ನ ಮಂತ್ರದ ಬಲ್ಮೆಯೊ?   


ನಾರದಂ--ರೋಗಮೆ.   


ಕೃಷ್ಣಂ--ಅದೇಂ ರೋಗಂ? 


ನಾರದಂ--ಅದೇ ನೆಗಳ್ತೆವಡೆದ ಭೆಯಜ್ಮರಂ.   


ಕೃಷ್ಣಂ--ಆದೊಡೆ ಈ ಜ್ವರಕೆ ನಿದಾನಮಾವುದು? 

೭೪-----------------------------------------------------------------

ನಾರದಂ--ನೀನೇ ನಿದಾನಮಾಗಿ ಪ್ರಶ್ನಂಗೈವುದೆ?  


ಕೃಷ್ಣಂ--ಅದಾನೆಂತು ನಿದಾನಂ?


ನಾರದಂ-- ಪೆಂಡತಿಯಪ್ಪ ಚಂದ್ರಾವಳಿಯನಿವಂ ಬನ್ಮಂಬಡಿಸಿದ  

ಕಾರಣದಿಂ.   


ಕೃಷ್ಣಂ--ಓ ಅರಿತೆನರಿತೆಂ, ಗಂಡವೆಂಡಿರೆನೆ ಅನ್ಯೋನ್ಯಪ್ರೇಮ   

ದಿಂ ಒಳ್ದಾರಿಯೊಳ್‌ ನಡೆಯಲಿಪ್ಪವರ್‌, ಆಂತಿರೆ ಪೆಂಡತಿಯನರ್ಧಾಂಗಿ  

ಯಂ ಗಂಡನೆಂತು ಸಮರ್ಥಂ? ಅನುಚಿತಕೃತ್ಯಮಂಗೈದುದೆರಿನೆ   

ಇಂತು ಬೆದರಲ್‌ ಕಾರಣಮಾಯ್ತು.   


ನಾರದಂ....(ನಕ್ಕು)    ಅಂತಾದೊಜೆ ಪೆಂಡತಿಯಂ ಶಿಕ್ಷಿಸಲು-   

ಮಾಗದು; ಅವಳಂ ಸನ್ಮಾರ್ಗದೊಳ್‌ ನಡೆಯಿಸೆಲ್‌ ತಾನಶಕ್ತನಾದೊಡೆ,  

ಆಕೆಯ ಸ್ಟೇಚ್ಚಾವೃತ್ತಿಯಂ ಕಂಡುಂ ಕಂಡುಂ ಆಗಂಡಂ ಷಂಡನಂತೆ  

ಕಣ್ ಕಣ್ ಬಿಡುವುದೊ? ಪ್ರಾಣಂ ಬಿಡುವುದೊ?   


ಕೃಷ್ಣಂ-ಅದರ್ಕೆಯೆ ಪೇಳ್ದೆಂ, ಸಮಾನರೂಪಾದಿಗುಣಮುಳ್ಳೆ   

ರ್ಗೆಯೆ ಬಾಂಧವೃಂಗೈಯಲ್ವೇಳ್ಕುಮೆಂದು.   


ಅನಿತರೊಳ್ ಚಂದನ ಮೊಗದಿಂ "ಸಹಸ್ರಾಪರಾಧಂ ಕ್ಷಮಸ್ವ" 

ಎಂಬೊಂದು ವಾಕ್ಯಂ ಪೊರಟುದು.   


ಕೃಷ್ಣಂ--ಚಂದ! ನಿನ್ನೊಳೆನಗೇನುಂ ಕೋಪಮಿಲ್ಲಂ; ಆದೊಡೆ   

ಎನ್ನ ಶರಣರ ಕಷ್ಟಸುಖಂಗಳರಡುಮೆನ್ನನೆ ಪೊರ್ದುಗುಂ, ಅದರಿಂ  

ಒರ್ಮೆಗೆ ಇಂತೆಲ್ಲಂ ಗಲಬೆಗೆಡೆಯಾಯ್ತು.   


ಚಂದಂ--ದೇವ! ಜಗತ್ಪತಿಯೇ ನೀನಾಗಿರಲ್‌ ಎನ್ಮುನ್ನರಪ್ಪ  

ತೃಣಪ್ರಾಯರ್ಗೆ ಈ ಪರಿಯೂಳ್‌ ಭಕ್ತರಂ ಪೀಡಿಸ ಬುದ್ಧಿಯನಿತ್ತುಂ  

ಎಮ್ಮೊಳೆ ಮುನಿಸಾದೊಡೆ ಕಷ್ಟಂ.

೭೫-------------------------------------------------------------------- 

ಕೃಷ್ಣಂ--(ನಸುನಕ್ಕು) ಸಂದೆಯಮೊವ್ಪಿತಂ (ಎಂದು ನಾರದಂಗೆ   

ಸನ್ನೆ ಗೈಯೆ)   


ನಾರದಂ--ಚಂದ! ಇವಂ ವಿಶ್ವಾಧೀಶನಾದೊಡುಂ ಕೂಟಸ್ಥೆ   

ನಾಗಿರ್ಪಂ, ಜನರಂ ಸನ್ಮಾರ್ಗದೊಳ್‌ ವಿದ್ಯೆಯುಂ, ದುರ್ಮಾರ್ಗದೊಳ್‌  

ಅವಿದ್ಯೆಯುಂ, ಎಂಬ ಮಾಯೆಯೇ ನಡೆಯಿಸುವಳ್‌, ಕಡೆಗೆ ನ್ಯಾಯ  

ಸ್ಥಾನದೊಳ್‌ ವಿಧಿಯಂ ವಿಧಿಸುವ ನ್ಯಾಯಾಧಿಕಾರಿಯಂತೆ ಮಾಡಿದ  

ಪುಣ್ಯಪಾಪಂಗಳ್ಗೆ ತಕ್ಕುದೆನಿಪ್ಪ ಫಲಮಾತ್ರಮಂ “ದೈವಂ ಮಾನುಷ  

ರೂಪೇಣ" ಎಂಬಂತೆ ಇಂತೊಂದೊಂದು ಅವತಾರಂದಳೆದುಂ ಪಲವುಂ  

ಪರಿಯಿನುಂ ಕೈಗೊಳಿಸುವಂ.   


ಕೃಷ್ಣಂ--ಈ ನಾರದಂಗೇನುಂ ಕೆಲಸಮಿಲ್ಲಂ, ಎಂತೆಂತೋ   

ಪೊಗಳ್ವಂ, ಹುಂ, ಮುನಿವಚನಮನತಿಗಳವುದಕೆ? ಅದಿರ್ಕೆ, ದೈವದೊ  

ಲ್ಮೆಯಿಂ ಸುಜ್ಞಾನಿಯಾದೆ, ನೀನಿನ್ನು ಭಾರ್ಯಾಯುತನಾಗಿಯೆ  

ಬಾಳಯ್‌.   


ತದನಂತರಂ, ನಾರದಂ ಕೃಷ್ಣನಾಜ್ಞೆಯಂ ತಳೆದು ಚಂದಾದ್ಯರಂ   

ಪರಸಿ ತಳರ್ದಂ.   


ಶ್ರೀ ಕೃಷ್ಣನುಂ, ಒಡನೈತರ್ಪೆನೆಂದು ಅಳುವ ಚಂದ್ರಾವಳಿಯ  

ಬಾಷ್ಪಾಶ್ರುವನೊರಸಿ,  "ಎಲೆ ಪೆಣ್ಮಣಿ ಚಲವಿಡಿಯದಿರ್‌ ನಿನ್ನಂ ಕರೆ  

ದೊಯ್ದು ಶರಣನಪ್ಪ ಚಂದಂಗೆ ಮನಃಕ್ಲೇಷಮಂ ಗೈವುದೇನೆನಗೊಪ್ಪಿ  

ತಂ! ನಿನ್ನರಸನೀಗಳ್‌ ಪರಮಜ್ಜಾನಿಯಾಗಿರ್ಪಂ; ಒರ್ಮೆಗೆ ಭಿನ್ನಾಶ  

ಯಮಂ ತಳದೊಡೆ ಎನ್ನೆಂ ನೆನೆ, ಪಲವೇಂ? ನಿನಗಾವುದರ್ಕುಂ ತೊಡ  

ರಿಲ್ಲದಂತೆ ಅಭೀಷ್ಟಮಂ ಕೈಗೊಳಿಸುವೆಂ” ಎಂದಾಕೆಯನೆಂತಾನುಂ ಸಂತ   

ಯಿಸಿ, ಚಂದಾದಿಗಳಂ ಬುದ್ದಿವೇಳ್ದು ಮನ್ನಿಸಿ ರಾಧೆಯೊಡನಲ್ಲಿಂ   ಗೋಕು   

ಲಕೈರಿದಂ.   


ಅನಿತರೊಳಾ ದೂತರೈದಿ ಕೈಷ್ಣನನೆತ್ತಲುಂ ಕಾಣದೆ ರಾಧೆಯೆಂದು   

ದೆನೆಲ್ಲಂ ನಂದನೊಳ್‌ ಬಿತ್ತರಿಸಿದರ್‌. 

೭೬--------------------------------------------------------------------- 

ನಂದಂ-ಆ ನುಡಿಗೇಳ್ದು, ಉರಿಯುಂ ಮರುಕಮುಮೊಡನೆ ತಲೆ   

ದೋರೆ, "ಆ ಪುತ್ರನಿವಂ ಪೆರವೆಣ್ಗಳಂ ಕಿಡಿಸುವುದಲ್ಲದೆ ಅವರ ಪ್ರಾಣ  

ಹಾನಿಗುಂ ಉರಣಮಾದನೆ!"   


ಹಾ! 'ಗೋಡೆ ಬೀಳ್ಕೊಡೆ ಜಗಲಿಯೊಳೆ' ಎಂಬ ನಾಣ್ಮುಡಿಯಂತೆ   

ವೊಲ್‌ ನಂದನಣುಗಂ ಇಂತೆಸೆಗಿದೆನಂತೆಸೆಗಿದನೆಂಬ ಲೋಕಾಪವಾದದ  

ಸಹಸ್ರನಾಮಮೆನ್ನನೆ ಪೊರ್ದುಗುಮಲ್ತೆ? ಏಗೆಯ್ವೆವೆಂ,  ಧರಣಿಯೊಳಿನ್ನಾರುಂ  

ಮಕ್ಕಳಿದಾನಂದಮಂ ತಳೆಯಲಿಣಿಪರ್ ಈ ನಂದನಂ ನೋಡಿ ಮರೆಗೆ,  

ಈಪರಿಯ ದುರ್ಮತಿಯುದಿಸೆಲ್‌ ಅಆನಾರ ಮಕ್ಕಳೊಳ್‌ ಬೇದಮನ  

ಣಿಸಿದೆನೊ? ಇಂತಪ್ಪ ದುಷ್ಟುತ್ರರಿರ್ದೊಡುಂ ಇರದಂತೆಯೆ; ಅದರಿಂ  

ಜೀವದ ಪೆಣನಿವನಂ ನೋಡಲ್ 'ಕಾಶೀಲಿಂಗಪಹಾರೇಣ ಜ್ಯೇಷ್ಠ   

ಪ್ರತ್ರೋ ಮೃತಿಂಗತಃ' ಎಂಬಂತೆವೊಲ್‌ ಆವ ಶಿವಲಿಂಗಮನಪಹರಿಸಲ್‌  

ಇಚ್ಛಿಸಿದೆನೊ!" ಎಂದು ಪಲವುಂ ಬಗೆಯೂಳ್‌ ಚಿಂತಿಸುತಿರ್ದಂ.  


ಭಾರೆತಿ---ರಮಣ! ಕಾಶೀಲಿಂಗಮನಾರಪಹರಿಸಲಿಚ್ಚಿಸಿದೆಂ? ಜ್ಯೇ  

ಷ್ಠಪುತ್ರಂಗೆ ಸಾವೆಂತಾಯ್ತು!   


ಕಬ್ಬಿಗಸಿಂಗರಂ--ಕೇಳೆನ್ನರಸಿನ್ನೆ! ಈ ನೆಲದೊಳ್‌ ಮೊದ   

ಲೊರ್ವಂ ವಿಪ್ರಂ ಪಲವುಂ ದೇಸಂಗಳಂ ತಿರುಗಿ ಕಡೆಗೆ ಕಾಶಿಗೈದಿ  

ಗಂಗಾಸ್ಮಾನಪೂರ್ವಕಂ ವಿಶ್ವನಾಥದರ್ಶನಂಗೈದು, ಸುಪ್ರಸಾದಮನಾಂತು  

ಸುಲಕ್ಷಣದೊಂದು ಶಿವಲಿಂಗಮನುಂ ಕೊಂಡು ತನ್ನೂರ್ಗೆ, ತಿರುಗಿದಂ.  

ಅಂತು ಪೊರಟು ಒಂದಗ್ರಹಾರದೆಡೆಗೆ ಬರ್ಪಾಗಳ್‌ ಕತ್ತಲೆಯಾಯ್ತು  

ಬಳಿಯಂ ಇನ್ನೊರ್ವನೆ ಪೋಪುದನುಚಿತಂ, ಹುಂ ಸನಿಯದೂಳ್‌  

ವಿಪ್ರಾಲಯಮಿರ್ಕುಮಲ್ತೆ? ಎಂದು ದ್ವಿಜನೊರ್ವನ ಮನೆಗೆ   

ಆ ಯಾತ್ರಿಕಂ ಶಿವಶಿವ  ಹರಹರೇತ್ಯಾದಿಸ್ಮರಣಮುಖಂ ಪೊಕ್ಕಂ.


ಅಂತು ಅಂಗಳಮಂ ಪೊಕ್ಕು ಬರ್ಪ ಭೂಸುರನಂ ಕಂಡಾನರ  

ಭಕ್ಷಕಸೈರೂಪಸಂ ಮವೆಯವಂ "ಆಃ ರುದ್ರಾಕ್ಷಿಯ, ತ್ರಿಫುಂಡ್ರದ, ಶಿವ  

ಸ್ಮರಣೆಯ, ಅಶನದ್ಛಂಸಿಯ ಅವತಾರಮೆ! ಇಂತಪ್ಪ ರಾವಣಸನ್ಯಾಸಿಗಳ್‌ 

೭೭---------------------------------------------------------------------

ಈಗಳ್‌ ಪಲಂಬರ್‌, ಹುಂ ತಕ್ಕುದನೆಂತಾನುಂ ಮಾಳ್ಬೆಂ? ಎಂದೆಣಿಸಿ, ಬಂದ   

ವನಂ ಜೀಂನುಡಿಯಿಂ ಮನ್ನಿಸಿ ಕುಶಲಮನುಂ ಆಗಮದಂದಮನುಂ  

ತಿಳಿದು, ಬಳಿಯಂ ರಾತ್ರಿಯೊಳ್‌ ಭೋಜನಾನಂತರಂ ಅವನೊಳ್‌ ಲಿಂಗ  

ಮಿರ್ಪದನುಂ ಅದರ ಮೈಮೆಯನುಂ ಆತನೊಳೆ ಕೇಳ್ದರಿತು (ತನ್ನೊಳೆ  

ತಾಂ)--ಈ ಲಿಂಗಮನಪಹರಿಸಿ ಅನ್ನದ ನಷ್ಟಮಂ ಕಳೆಯಲ್ವೇಳ್ಕುಂ;.  

ಏಗೆಯ್ವೆಂ? ಕೇಳ್ದೊಡೆ ಕುಡಂ;, ಇರ್ಕೆ ನೋಳ್ಪೆನೆಂದೆಣಸಿ.   


“ಎಲೆ ಭೂದೇವ!  ನೀಂನಡೆದು ಬಲ್ಲಣಿದೆ ಅದರಿಂ ನಿದ್ರಿಸು"   

ಎಂದು ಜಗಲಿಯೊಳ್‌ ಬಿತ್ತಿವಿವದಿಯೊಳ್‌ ಪಾಸಿಗೆಯಂ ಬಿರ್ಚಿಕೊಟ್ಟು  

ತಾನುಂ ಪವಡಿಸೆಲೆಂದು ಮಾಳಿಗೆಗೈದಿದಂ.   


ಇವನೇ. ಮನೆಯವಂ ಗೋಮುಖವ್ಯಾಘ್ರನೆಂಬುದನರಿತಿರ್ದನೆ?   

“ಹರ ಹರ" ಎಂದು ಪವಡಿಸಿದಂ.   


ಈತಂ ಮಲಗಿದಿಡೆಗೆ ನೇರಾಗಿ ಕರುನಾಡದೊಳ್‌ ಗೃಹಸ್ಥನುಂ  

ಲಿಂಗದೊಳಾಸೆಯಿಂ ತಾನೆಂತಾನುಂ ಕೊಂಡುವೋದ ಪೊರಲಾರದ ಕಲ್ಲಂ   

ಗವಾಕ್ಷದೂೊಳ್‌ ಹಾಯ್ಕಿ ಯಾತ್ರಿಕಂಗೆ ಊರ್ಧ್ವಗತಿಯಂ ತೋರಲ್  

ಕಾಯ್ದಿರ್ದಂ. ವಿಧಿವಿಳಸನಮನೇನೆಂಬೆಂ? ಆ ಸಮಯದೊಳಾಯುರ್ಬ  

ಲದ ಏಳ್ತರದಿಂ ಮಲಗಿದೆಡೆಯೊಳ್‌ ಇರುಂಪೆಗಳ್‌ ಸಾಲ್ಗಟ್ಟಿವರೆ ಯಾತ್ರಿ  

ಕಂ ಮೇಲ್ಲನಲ್ಲಿಂದೇಳ್ದು ಬೇರೊಂದೆಡೆಯೊಳ್ ನಿದ್ರಿಸಿದಂ.   


ತದನಂತರಮಾಗೃಹಸ್ಜನ ಜ್ಯೇಷ್ಠಪುತ್ರಂ ಎತ್ತಮೋ ಪೋದವ   

ನೈತಂದು ನಿದ್ರಾಭರದಿಂ, ಆ ಬ್ರಾಹ್ಮಣಂ ಮುನ್ನಂ ಪವಡಿಸಿದ ಇರ್ಕೆ  

ಯೊಳೆ ಮೃತ್ಯುಪಾಶದ ಬಲಾತ್ಕಾರದಿನೆಂಬಂತೆವೊಲ್‌ ಶಯನಂಗೈದಂ,  


ಬಳಿಯಂ ನಡುವಿರುಳಾಗೆ ಎಲ್ಲರುಂ ಆ   ನಿದ್ರಾಲಿಂಗಿತರಾಗಿರಲ್ ಆ    

ಬ್ರಹ್ಮರಾಕ್ಷಸಸ್ವರೂಪಂ ಮಾಳಿಗೆಯಿಂ ಕಲ್ಲಂ ಹಾಯ್ಯಿದಂ.   


ಮೇಣೇಂ? ಬ್ರಹ್ಮಹತ್ಯಾಪಾತಕಿಗೆ ಲಿಂಗಮುಂ ಸಿಂಗಿಯಕ್ಕು   

ಮೆಂಬಂತೆ ಮಗಂ ಕಣ್ಮುರ್ಚಿದಂ.   

೭೮------------------------------------------------------------------- 

ಬಳಿಯಂ. ಕಿವಿಗೊಟ್ಟಾಲಿಸಿ ತನ್ಮೊಳೆ ತಾಂ "ಹುಂ. ನಿಶ್ಶಬ್ದಂ   

ನಿಶ್ಶ್ಕಬ್ಬಂ. ಬಲ್‌ ಬಲ್‌.--ವಿಪ್ರಂಗೆ ಕಾಶೀಯಾತ್ರಯ ಫಲಂ ಕೈಲಾಸ  

ಮಾಯ್ತು, ಲಿಂಗಮೆನ್ನ ದೇವರ ಸಂಪುಟದ. ಒಳೆಯಿಂಕೆಯಾಯ್ತು,   

ಗೆಲ್ದೆಂ ಗೆಲ್ದೆಂ ಸಂಕಲ್ಸಂ ನೇರಾಯ್ತು? ಎಂದು ಸವಿಸವಿಯಾಗಿ ಕನಸಿ  

ನೊಳ್‌ ಬಾಳೆವಣ್ಣಂ ತಿನುತಿರ್ದಂ.   


ಅನಿತರೊಳ್‌ ಜಾತ್ರಿಗಂ ಎಚ್ಚತ್ತು ನಿದ್ದೆವಾರದೆ. ಜಗಲಿಯೊಳ   

ತ್ತಿತ್ತಂ ತಿರುಗುವಾಗಳ್, ಎಡವಿ ತಡವರಿಸಿ, ಪೆಣನೆಂದರಿತು ಬೆದರ್ದು  

ಇದೇನೋ ಅಪಾಯಸ್ಥಳಂ, "ಪರಂ ಪ್ರಾಣಭಯಂ ಮತಂ" ಎಂಬ ನುಡಿ  

ಯಿಂ. ಇನ್ನಿಲ್ಲಿರಲಾಗದೆಂದೆಣಿಸಿ, ಆಚಣಮೆ ಪೇಳದೆ ಪೊರಟೆದಿದಂ.  


ತದನಂತರಂ ದೀಪಮಂ ತಂದು ನೋಳ್ಪುದುಂ ತನ್ನಣುಗನ ಶವ   

ಮನುಂ, ಯಾತ್ರಿಕನದೃಷ್ಟನಾದುದನುಂ, ಕಂಡರಿತಾ ಗೃುಹಸ್ಥಂ ಅನ್ಯಥಾ  

ಚಿಂತಿತಂ ಕಾರ್ಯಂದೈವಮನ್ಯದ್ಧಿಚಿಂತಯೇತ್‌ |. ಕಾಶೀಲಿಂಗಾಪಹಾ   

ರೇಣ ಜ್ಯೇಷ್ಠಪುತ್ರೋ ಮೃತಿಂಗತಃ॥ ಇಂತೆದೆಡೆವಿಡದೆ ಮರುಗುತಿರ್ದಂ   

ಗಡ.   


ಓ ಎನ್ನ ಸೊಬಗಿನ ಕಣಿ! ಏನೀಗಳೀಕತೆ ಕಿವಿಪೊಕ್ಳುದೆ?   


ಭಾರತಿ-ನಲ್ಲ! ಈಕತೆಯಂ ಕೇಳ್ಳಾಗಳ್‌ ಕಿವಿ ಬೆರಲನೇ   

ಕರೆವುದು, ಅಕಟಾ! ಧರೆ ಸರ್ವಂಸಹೆಯೆಪ್ಪುದರಿನೆಂತಪ್ಪರೆಲ್ಲಂ ಇರ್ಕೆ   ಗೈದಿರ್ಪರೊ! ಇಂತಿರ್ಪ ಪಾತಕಿಗಳ್ಗೆಂದೇ ಯಮಂ ಇನ್ನೊಂದು ನರಕ   

ಮಂ ಗೈಸದೆ ಮಾಣಂ. ಹುಂ ದುರುಳರ ಮಾತೇಕೆ? “ತಂತಮ್ಮ ತಲೆ   

ಯಡಿಗೆ ತಂತಮ್ಮ ಕೈಯಲ್ತೆ? ಮುಂಗತೆಯೆಂ ಪೇಳ್‌.   


ಕಬ್ಬಗರಣ್ಣಂ--ಕೇಳಿನ್ನ ಸವಿನುಡಿಗನ್ನೆ! ಬಳಿಯಂ ನಂದಂ   

"ಹಾಯ್ಕಿದ ಅಂಗಿ ಹಾರಿದೊಡೆ ಪೋಕುಮೆ?" ಎಂಬಂತೆ ಬರಿದೆ ಚಿಂತಿಸಿ  

ದೊಡೆ ಏಂ ಫಲಮೆಂದೆಣಿಸಿ ಆಳ್ಗಳಂ ಕರೆಯಿಸಿ--"ಎಲೆ ಚಾರರೆ! ಕೃಷ್ಣಂ  

ರಾಧೆಯ ಮನೆಯೊಳಿರಲ್‌ ಸಾಲ್ಗುಂ, ಅಲ್ಲಿ ಗೈದಿ ಆಂ ಪೇಳ್ದೆನೆಂದುಸಿರ್ದು  

'ಅವನೆಂ ಕರೆತರ್ಪುದು" ಎಂದೊರೆಯುತಿರಲ್‌ ಆ ವಾಸುದೇವಂ ಕಿರು  

ನಗಯೆಂ ಸೂಸುತೆ ನಡೆತಂದು ತಂದೆಯಡಿಗೆರಗುಪವುದುಂ,   

೭೯-------------------------------------------------------------

ಒಡನಾನಂದಂ-_(ಕಣ್ಣೊಳುರಿಯುಂ ನೀರುಮೊಡನೆ ಸೂಸೆ)   

ಎಲೆ ಕೃಷ್ಣ! ನೀನುದಿಸಿದುದರ್ಕೆ ತಾಯ್ತಂದೆವಿರೆಮ್ಮ ತಲೆಗೆ ಪಾಲಂ   

ಕರೆದೆ, ಪೆಸೆರಂ ಪರ್ಬಿಸಿದೆ, "ಪುತ್ರಾದಿಚ್ಛೇತ್ಸರಾಜಯಂ' ಎಂಬಂತೆ ನಿನ್ನಿಂ  

ಪರಾಜಯಮುಮಾಯ್ತು ಮೇಣೇಂ? ನಿನ್ನ ಪರಮಕೃತ್ಯಂಗಳಿಂ ಐಸಿರಿ  

ಯೊಳ್‌ ಎಂಟೇ ಕಡಮೆಯಾಗಿರ್ಕುವುಲ್ಲದೆ ಬೇರೆಲ್ಲಂ ತುಂದಿರ್ಪುದು.  


ಮಾಧವಂ--(ನಕ್ಕು) ಅಪ್ಪ! ನೀಂಪಿಸುಣರ ನುಡಿಯಂ ಕೇಳ್ದೆ   

ನ್ನಂ ಇಂತುಟು ಬೈವುದೇಕ? ಆನೇಗಳುಂ ತ್ರಿಕರಣದೊಳುಂ ಲೋಕೋ  

ಪಕಾರಮನಲ್ಲದೆ ತದ್ದಿರುದ್ಧ ಮನೆಣಸೆಂ.   


ನಂದಂ--(ರೋಷಾವೇಶದಿಂ) ಚಿಃ ನಾಣಲಿ! ದುವೃತ್ತಿಯಂ   

ಗೈದೆ ದುರಿತಂ ಸಾಲದುದರ್ಕೆ ಪುಸಿಯನುಮುಸಿರ್ವೆಯ? "ನಾನೃತಾತ್ಪಾ  

ತಕಂ ಪರಂ" ಎನುತುಸಿರ್ದು "ಪುಸಿಯಿಂ ಪೆರ್ಚಿನ ದುರಿತಮಿಲ್ಲಂ" ಎಂದ  

ರ್ಥಮಂ ನೀಂಬಿತ್ತರಿಸುತಿರ್ದುದೆಲ್ಲಂ ಬೇಡನ ಸಂಗೀತಮಾಯ್ತು. ಅದಿ  

ರ್ಕೆ, ಆಂ ಪಿಸುಣಂ ಕೇಳ್ವೆನಾದೊಡೆ ದೇವರ್ಷಿ ನಾರದನೇ ಕೊಂಡೆಯ  

ನಾಯ್ತು. 


ಕೃಷ್ಣಂ-ಏನಾ ಕಲಹಾಪ್ತನ ಮಾತೆ? ಆಯ್ತಾಯ್ಕು. 


ನಂದಂ-“ಮಕ್ಕಳ ಪರಿ ಚಿಕ್ಕಂದಿನೊಳೇ ತಿಳಿಗುಂ” ಎಂದೆನ್ನಬ್ಬೆ   

ಪೇಳ್ದುದು ಈಗಳುಂ ನೆನಂಬರಿಕೆಯಿರ್ಕುಂ, ಅದರಿಂ ನಿನ್ನ ಬಿಸಯಮ  

ನಾನಿನ್ನುಂ ತಿಳಿಯೆನೆ? ನೀನಿಂತೆಲ್ಲಂ ದುರಾಚಾರಕಡಿಯಿಡುವಾಗಳ್‌  

ತಾಯ್ತಂದಿವಿರೆಮ್ಮ ಕೊರಲ್ಗೆ ಪರಿಗತ್ತಿಯನಿಡುವ ಕಾರ್ಯಮತ್ಯುತ್ತಮ     

ಮಿರ್ದುದು,      


ಕೃಷ್ಣಂ--ನಸುನಗುತಿರ್ದಂ,   ಕ


ನಂದಂ--ಉಃ ಮೋರೆಯೆ ಪುರುಳೆ? ತನ್ನಂ ಬೈವಾಗಳುಂ ನಗು   

ವರ್ಗೆ ಎಂದುಂ ಬುದ್ಧಿವಾರದು, ದೂಷಣಮುಂ ಭೂಷಣಮಾದೊಡೆ  

ಮತಿಯೇಂ? ಹುಂ ನೀಚಂಗೆ ನೀತಿಯೆ?   

೮೦----------------------------------------------------------------------- 

ಆನಿನ್ನೆವರಂ ಇವಂ ಕಿರಿಯನೆಂದು ಸೆಲುಗೆಯಿತ್ತೊಡೆ "ಅಲ್ಪಂಗೆ  

ಐಸಿರಿವರೆ ಅರ್ಧರಾತ್ರಿಯೊಳ್‌ ಕೊಡೆವಿಡಿವಂ” ಎಂಬಂತೆ ನೀಂ ತಲೆಗೇ 

ರ್ದೆಯಲ್ತೆ! ನೋಡೀಗಳ್ ತಕ್ಕುದಂ ಮಾಳ್ಪೆಂ (ಎಂದು ಆಗ್ಗಳೊಳ್‌  

ನೇಣ್ಗಳಂ ತರಿಸಿ ಅಮಮಾ!   ಸರ್ವವ್ಯಾಪ್ತಿಯಂ ಮಾಯಾಪಾಶಕುಂ    

ಸಿಲ್ಕದೆ ಅನಾದಿವಸ್ತುವಂ ಬಂಧಿಸಲ್ಕೆ ಮನವಿಟ್ಟು, ಈ ದುರ್ಮಾರ್ಗಿಯಂ   

ಕೃಷ್ಣನಂ ಬಂಧಿಸಿರಿಮೆಂದಾಣತಿಯಿತ್ತಂ,   


ಆಗಳ್‌ ಶ್ರೀಕೃಷ್ಣಂ ನಿದ್ದೆಗಣ್ಣೆ ನೀರೆರೆದಂತೆ ಈತನ ಮೂಢತೆಗೆ   

ಇನಿಸುಂ. ಮರ್ದೆಸಗುವೆನೆಂದೆಣಿಸಿ ಒಂದಚ್ಚರಿಯಂಗೈದಂ ಕೇಳೆನ್ನ  

ಸೌಭಾಗ್ಯತರಂಗಿಣಿ! ಆ ಭಟರ್ ಕಟ್ಟಲೆಂದು ಕೃಷ್ಣನೆಡೆಗೆ ಬರ್ಪದುಂ:  

ಕೃಷ್ಣನೆನಿಬರೊ? ಪಿಂದು,. ಮುಂದು, ಎಡಮುಂ, ಬಲಮುಂ, ಎತ್ತೆ   

ತ್ತಮುಂ ಕೃಷ್ಣನೆ  ಎಂದಾಯ್ತು,   


ಒಡನೆ ಕೆಳಗುಂ ಮೇಲುಂ ನೋಳ್ಪ ಆಳ್ಗಳೊಳ್‌   


ನಂದಂ--ನೀಮೇನುಂ ಕಣ್ಣಿಡದಿರಿಂ ಇದೆಲ್ಲಮಾಕೃಷ್ಣನ ಕ   

ಣ್ಗಟ್ಬು, ಈ ಗುಟ್ಟಿ ನರಿದಪೆಂ, ಇದೋ ಇವನೇ ಕೃಷ್ಣಂ ಎಂದೊರ್ವನಂ  

ಕೈದೋರಿಸಿ ಪೇಳೆ, ಚಾರರ್‌ ಕೃಷ್ಣನನೊರ್ವನಂ ಪಿಡಿಯಲೊಡನವಂ  

ಅನ್ಯಾಕಾರಮಂ ಪೊರ್ದುವುದುಂ, ಬಳಿಯಂ ಮತ್ತೊರ್ವನೆಂ ಮುಟ್ಟಲ್‌  

ಅವನುಂ, ಇಂತು ಪಲಂಬರುಂ ವಿಪರೀತಾಕೃತಿಯಂತಳವುದುಂ, ಬೆರ  

ಗಾಗಿರ್ಪಾಗಳ್ ನಾರದನೈತಂದು, ಎಲೆ ನಂದ! ಇನ್ನಾನುಂ ಮರಳ್ತನಮಂ   

ಬಿಡಯ್‌, ಆದಿಮಧ್ಯಾಂತರಹಿತಂ, ನಿರಂಜನಂ ಸ್ವಯಂ ಪ್ರಕಾಶಂ, ಪರಮ   

ಹಂಸಂ ಕೃಷ್ಣಂ, ಎಂದು ಬಗೆಗೊಳ್,. ಎಮ್ಮನ್ನರ್ಗುಂ ಅಚಿಂತ್ಯ ಸ್ವರೂ  

ಪನಿವಂ ಏನೋ ಕೆಸರೊಳ್‌ ತಾವರೆಯುದಿಸಿದಂತೆ ನಿನಗಣುಗನಾಗಿರ್ಪ  

ನೆಂದು ಕೀಳ್ಗೈವೆಯ? ಒರ್ಮೆಗೆ ಪರಮಾತ್ಮನೆಂದರಿಯದೆ ನಿಂದಿಸಿದೊ  

ಡುಂ ದುರಿಶಮಲ್ಲದೆ ಮೇಲಿಲ್ಲಂ,. ಏಂ ತಿಳಿಯದೆ ನೇಲ್ಪಾಯ್ತೆ ನೆಂದೂಡೆ.  

ಕಡಲ್‌ ಮುಳುಗಿಸೆದೆ ಮಾಣ್ಗುಮೆ? ಎಂದು, ಇನ್ನುಂ ಪರಿ ಪರಿಯಿನು ಮಾ.  

ಕೃಷ್ಣನ ಅಲೌಕಕಚರಿತ್ರಂಗಳನೆಲ್ಲವಂ ಬಿರ್ಚಿಬಿತ್ತರಿಸೆ  

೮೧---------------------------------- 

ನಂದಂ--(ನಾರದನ ನುಡಿಯೊಳ್‌ ನಂಬುಗೆ ಪುಟ್ಟಿ) ನೀನೆಂದು   

ದೆಲ್ಲಂ ಯೋಚಿಸಿದೊಡೆ ನಿಜಮೆಂದೇ ಕಾಣ್ಗುಂ. ಆದೂಡೆ ಪೂವಿನ  

ಸವಿಯಂ ತುಂಬಿಯೆರಿವುದಲ್ಲದೆ. ಮರಮರಿಯದಂತೆ, ಕೃಷ್ಣನಂದಮಂ  

ನಿನ್ನನ್ನನಲ್ಲದೆ ಮೂಢನಾನೆಂತರಿವೆಂ? ಅದಿರ್ಕೆ, ಕೈಮೀರಿದ ಅಪರಾಧ  

ಕೇಂ ಗೈವೆಂ? ದುರಿತಾಂಬುಧಿಯ ನಿನ್ನೆಂತು ದಾಂಟುವೆಂ!  


ನಾರದಂ--ಬೆದರದಿರ್, ಭಕ್ಕರ ಪೊಗಳ್ಕೆಯುಂ, ಅಜ್ಞಾನದ   

ನಿಂದೆಯುಂ ನೀರ್‌ ಕಡಲನೆಂತಂತೆ ಇವನನೆ ಪೊರ್ದುಗುಂ. ಆದೊಡೆ.  

ಕಲ್ಮಶಮಂ ದೂರೀಕರಿಸಿ ತಿಳಿನೀರನೆ ಒಳಂಗೊಂಬ ಸಾಗರದಂತೆ ಈತನು  

ಮೆಮ್ಮ ಅಜ್ಞಾನಮಂ ಪೋಗೊಳಿಸಿ ಪೂರೆವಂ... ಅದರಿಂ ತಪ್ಪಿತಮಾ   

ಯ್ತೆಂದು ಬೇಡು.   


ನಂದಂ--ಆಯ್ತು ಬೇಡುವೆಂ, ಆದೊಡೆ, ನಿನ್ನಣುಗಂ “ಅಲ್ಲಿ   

ಪೊರಳ್ವಂ ನರಲ್ವಂ" ಎಂದುಸಿರ್ದು ಅವಿವೇಕಮಂ ಪೊರೆದು ಎನ್ನಂ ದುರಿ  

ತಾಶನನಂ ಗೆಯ್ಯಲಿಚ್ಚಿ ಸುವುದರಿಂ, ಕೃಷ್ಣನಂದಮನೆಲ್ಲಂ ಮನಂಬಿಟ್ಟು  

ಮೂಢಂಗೆನಗೆ ಮೊದಲೆ ಪೇಳ್ದಿರ್ದೊಡೆ ಅತಿ ಪುಣ್ಯಮಿರ್ದುದು, ಅಂತೆಸ  

ಗದುದರಿಂ ಎನ್ನ ಪಾಪಮುಂ ನಿನ್ನ ತೆಲೆಯೊಳೆ.   


ನಾರದಂ-..ಓ ದಾರಿದಪ್ಪಿದೆಂ. ಇರ್ಕೆ, ನಿನ್ನಿದಿರೊಳ್‌ ಆಂತಪ್ಪು   

ವುದೇಂ ದೊಡ್ಡಿತೆ? ಕೃಷ್ಣನೆನಗಜ್ಜಂ, ನೀನವಂಗುಮಪ್ಪಂ, ಮುತ್ತಜ್ಜಂ.  

ಅದರಿಂ ಯೋಚಿಸಿದೊಡೆ ತಕಿರಿಯನೊಳೆನ್ನೊಳ್‌ ತಪ್ಪಂ ಪಿಡಿವ ನೀನೇ     

ತಪ್ಪುಗಾರಂ. 


ನಂದಂ--ಮರದಂತೆ ಬೆಳೆದೆ ಮೂಢನನಿಂತೆಲ್ಲಂ ಹಾಸ್ಯಂಗೆಯ್ಯ.   

ದಿರ್‌.   


ನಾರದಂ-.“ನೀಂ ತಪ್ಪಿದುದರ್ಕೆಲ್ಲಂ ನೀಂ ಮೂಢಂ, ಎನ್ನೊಳ್‌   

ತಪ್ಪಂ ಪೊರಿಸುವ ಸಯುಕ್ತಿವಚನಂಗಳ್ಗೆ ಏಂ ಮೂಢನಲ್ಲವೆ? ಸಾಲ್ಗುಂ,  

ಸಾಲ್ಗುಂ, ಜಗತ್ಪಿತನಿದಿರೊಳ್‌ ಮಕ್ಕಳಾಹಿಕೆಯಲಂ. "ದ್ದೈವಾಧೀನಂ. 

೮೨----------------------------------------------------------------- ಜಗತ್ಸರ್ವಂ” ಎಂಬುದರಿಂ ಸರ್ವಂ ಸರ್ವಾತ್ಮನಾಯತ್ತಮೆಂದೆರಿವುದು.  

ಮೇಣಿದೆಲ್ಲಂ ಇವನ ಮಾಯಾಲೀಲೆಯಲ್ಲದೆ ಬೇರೇನುಮಲ್ಹಂ" ಎಂದಂ,  


ಬಳಿಯಂ ನಂದೆಂ ಕೃಷ್ಣಂಗೆರಗಿ ಪರಿಪರಿಯಿಂ ನುತಿಸಿದಂ, ಕೃಷ್ಣ   

ನುಂ ತನ್ನ ಮಾಯೆಯೆಂ ಬಿಟ್ಟು ನಂದಂಗೆ ಅಭೆಯಂಗೆಯ್ದಂ. 


 ನಾರದಂ--"ಓ ಸಂಸಾರ ನಾಟಕ ಸೂತ್ರಧಾರ! ಕಜ್ಜಮಿರ್ದೊಡೆ  

ಇನ್ನೊರ್ಮೆ ಪಾರಿಪಾರ್ಶ್ವಕನಪ್ಪೆಂ" ಎಂದು, ನಗುನೊಗದ ರಮಾಧವ  

ನಪ್ಪಣೆಯಂ ತಾಳ್ದು ಕಾರ್ಯಾಂತರಾಭಿಮುಖಂ ಮೇಲಡರ್ದಂ.  


ಪರಮಾತ್ಮ್ಮಂ ಶ್ರೀ ಕೃಷ್ಣಂ ನರನಾಟಕಮನಚ್ಚರಿಯಾಗೆ ತೋರು   

ತಿರ್ದಂ. ಆ ವಾಸುದೇವನ ಕಜ್ಜಮೆಲ್ಲಂ ದೃಷ್ಟಾಂತ   

ಮೆಂದರಿವುದು. ಅಲ್ಲದೊಡೆ ಮತ್ಸ್ಯಾದ್ಯವತಾರಂಗಳಂ ತಾಳಲ್ವೇಳ್ಕು   

ಮೆಂದೇಂ ತಲೆವೊರೆಯೆ? ಅದಿರ್ಕೆ. ಕೃಷ್ಣಂ ದೈವಮಲ್ಲಮೆಂದೆಂಬ ರೋ  

ಗಕೆ ಆತನ ಅಮಾನುಷಕೃತ್ಯಮೆ ಮರ್ದಲ್ತೆ? ಮೇಣ್‌ ಕವಲೆಣಿಸಿ,   

ಕೃಷ್ಣಂ ಗೆಯ್ದನೆಂದು  ಅಂತಿಂತೆಸೆಗಿದೊಡೆ, ಪಾವಿನ ಪೆಡೆಯನುಂ ಮೆಟ್ಟಿ   ಲ್ವೇಳ್ಕುಂ. ಏಂ ಮನಮಿಟ್ಟಾಲಿಸಿದೆಯಲ್ತೆ? ಎನ್ನಾನಂದವಲ್ಲಿರಿ!   


ಭಾರತಿ-- ಆಲಿಸಿದೆಂ, ಮತ್ತೇಂ?   


ಕಬ್ಬಿಗಂ--ಮತ್ತೇಂ? "ಇತಿ ಶ್ರೀ" ಎಂಬ ಕಾಲಮುಂ ಸೆಂಭೆವಿ   

ಸಿತು.   


ಭಾರತಿ --ಏಂ ಸಂಪೂರ್ಣಂ?      


ಕಬ್ಬಿಗಂ--ಹುಂ.


ಭಾರತಿ--ಉಃ, ಎನಗೇನುಂ ದಣಿವಾದುದಿಲ್ಲಂ.   


ಕಬ್ಬಿಗಂ--ದಣಿಯಲದೇಂ ಪೊರೆಯೆ?   


ಭಾರತಿ... ಅಂತಲ್ಲಂ. "ಕೇಳ್ವಾಸೆಯಿಂ ಮನಂದಣಿದುದಿಲ್ಲಂ.   

೮೩-------------------------------------------------------------- 

ಕಬ್ಬಿಗಂ--ಇದೇಕೀಪರಿಯ ಪರಿಹಾಸ್ಯಂ? ಕತೆಯೊಳ್‌ ಸೆನಿಯಿ   

ರ್ದೊಡಲ್ತೆ ಕೇಳಲ್ಕಾಸೆ?   


ಭಾರತಿ--ಏಂ ಸವಿಯಿಲ್ಲವೆ? ಕಡಲೊಳ್‌ ನೀರಿಲ್ಲದೊಡೆ ನಿನ್ನ   

ಕತೆಯೊಳ್‌ ಸವಿಯುಮಿಲ್ಲಮೆಂದಕ್ಕುಂ.   


ಕಬ್ಬಿ ಗಂ--ಅಂತಾದೊಡೆ ಕಡಲ ಜಲದಂತೆ ಕತೆಯೊಳುಂ ಪುರು   

ಳಲ್ತೆ?   


ಭಾರತಿ--ಅದರ್ಕೇಂ ಸಂದೆಯಂ?   


ಕಬ್ಬಿಗಂ-(ನಕ್ಳು) ಆದೊಡೆ ಸಾಗರವಾರಿಯಂತೆ ಕತೆಯೊಳ್‌   

ಸವಿಯುಪ್ಪು, (ನಕ್ಳು) ಹುಂ ಒಳ್ಳಿತನುಸಿರ್ದೆ “ಲವಣಂ ಬಲವರ್ಧನಂ'`  

ಎಂಬರಲ್ತೆ ಪಿರಿಯರ್‌.   


ಭಾರತಿ--ಇಸ್ಸಿ ಇದೇತರ ನುಡಿ? ಆಂ ಕವಲೆಣಸದೆ. ಅಂಬುಧಿ   

ಜಲದಂತೆ ಕತೆಯೊಳ್‌ ಸವಿದುಂಬಿರ್ಕುಮೆಂದೊಡೆ, ಪೆಣ್ಣಿನ ಮಾತಿನೊಳುಂ   

ಇತರಾರ್ಥಮಂ ಪುಡುಕಿ ನಾಡ ಕಬ್ಬಿಗರ ಲಚ್ಚಣಮಂ ಪೊಳೆಯಿಪ  

ನಿನ್ನಂದಕೇನೆಂಬೆನೊ!   


ಕಬ್ಬಿಗಂ._-ಆ ನುಡಿಯಿರ್ಕೆ, ಎಂತಿರ್ದೊಡುಂ ಈಗಳೀಕನ್ನಡಮಂ  

ನೋಳ್ಪರ್ಗೆ ಪೆರ್ಚುಂ ಕಣ್ಣೋವಲ್ತೆ? ಅಂತುಮಲ್ಲದೆ ಶಯ್ಕೆಯ ಪಳೆ  

ಗನ್ನಡವಾಸೆಯಾಗಿರಲ್‌ ಇದಂ ನೋಡಲಾರ್‌ ಒಳವುಗುವರ್‌? ಸವಿಯಿ  

ರ್ದೊಡು ಮೆಂತರಿವರ್‌?   


ಭಾರತಿ... ಅಂತೆಣಸೆದಿರ್‌. ಬಾಸೆಗಳೆಲ್ಲವುಂ ಆಂತರ್ಯಸಾರಮಂ  

ಪೊರಡಿಸುವ ನಲ್ದಾರಿಗಳಾಗಿರಲ್ ಕನ್ನಡಮಾದೊಡದೇಂ ಕುಂದು?  

ಮೇಣುಂ ಶಯ್ಯೆಯ ಪಳೆಗನ್ನಡಮುಮಾಗಿರಲ್‌ "ಪಳೆಗೈ ಪಾಕಂ ಪೊಸೆಗೈ

ಪೋಕಂ" ಎಂಬ ನಾಣ್ಣುಡಿಯಂತೆ ವೊಲ್‌ ಒಳ್ಳಿದರಾದವರ್‌ ನೋಡಿ ಮುದ   

ಮಾನದಿರರ್. ತಲೆದಿರುಗಲ್‌ ಊರೇ ತಿರುಗುವುದೆಂಬಂತೆ ದುಟ್ಟಿರೇನೆಂ 

೮೪-------------------------------------------------------------------

ದೊಡೇಂ?. ಎಣಕೆಯಂ ಮರೆಯಿಪ ಕವಲ್ನುಡಿಯ ನೆವಮೆಲ್ಲವಮಿರ್ಕೆ,  

ಏನಿನ್ನಾನುಂ ಕತೆಯಂ ಪೇಳ್ದೆನ್ನ ಆಸೆಯಂ ಪೂರ್ತಿಪೆಯ?   


ಅಣ್ಣಂ. ಕತೆಯೋ ಪೂರ್ತಿಯಾಯ್ತು, ನಿನ್ನಾಸೆಯ ಪೂರ್ತಿಗೆ   

ಇನ್ನೇಂ ಮಂತ್ರವಾದಂಗೆಯ್ವೆನೊ?   


ಭಾರತಿ--ಉಃ ಮಾತಿನ ಪುರುಳೆ! ಮನಮಿರ್ದೊಡೆ ಇದೆಲ್ಲದೊಡೆ  

ಇನ್ನೊಂದು ಕತೆಯಂ ಪೇಳಲಾಗದೆ?   


ಕಬ್ಬಿಗಂ--ಇದರ್ಶೆ ಮಂಗಳಮಂ ಗೆಯ್ಯೆದೆ ಇನ್ನೊಂದೆ? ಏನೆರ   

ಳ್ದೊಣಿಗಳೊಳ್ ಕಾಲಿಟ್ಟಿವನ ಗತಿಯನರಿಯೆಯ?  


ಭಾರತಿ-ಎರಳ್ದೋಣಿಗಳೊಳ್‌ ಕಾಲಿಟ್ಟಂಗೆ ಅಧೋಗತಿಯಕ್ಕುಂ  

ಈಗಳಿದರ್ಕೆ ಮಂಗಳಂ ಗೆಯ್ಯದೂಡೆ ನಿನಗೇನಕ್ಕುಂ?   


ಕಬ್ಬಿಗಂ--ಕಲ್ಯಾಣಮಾಗದು.   


ಭಾರತಿ--ದುಗುಡದಿಂ ನಿನಗಿನ್ನುಂ ಕಲ್ಯಾಣಮೆ?   


ಕಬ್ಬಿ ಗರೆರೆಯಂ--ಇದೇಂ ವೈಕಲ್ಯಂ? ಚಿಂತಿಸದಿರ್‌, ಎನಗಾ   

ದೊಡೆ ನೀನುಂ ಕಲಿಶ್ಯಿಣಮಂತಳೆವೆ.   


ಭಾರತಿ--ಇಸ್ಸಿ! ಸಾಲ್ಗುಂ ಏನೀಗಳ್‌ ಪೆಣ್ಗಳ್ಗುಂ ಕಲ್ಯಾಣಮೆ   

ರಡೆಂಬುದು ತೆಲೆದೋರಿತೆ?   


ಕಬ್ಬಿ ಗಂ--ಚಿಃ ಇದೇತರೆಣಿಕೆ? ಕತೆಗೆ ಮಂಗಳಮೆಸೆಗಿದೊಡೆ  

ಎನ್ನೊಡನೆಯೆ ಅರ್ಧಾಂಗಿಯಪ್ಪ ನಿನಗುಂ ಕಲ್ಯಾಣಂ (ಮಂಗಳಂ) ಅಕ್ಕುಂ.   

ಎಂಬೆಣಕೆಯೊಳುಸಿರ್ದೊಡೆ ನೀಂ ಭಾರತಿಯಾಗಿಯುಂ ಆಸಂಬದ್ಧಾರ್ಥ  

ಸಂಗ್ರಹಮಂ ಮಾಳ್ಪುದೆಂದೊಡೆ ಏಂ ಪೇಳುದು?   


ಭಾರತಿ--ಅರಿಯದೆ ಪೇಳ್ದ ಅಸರಾಧಮಂ ಕ್ಷಮಿಸು. (ಎಂದೆರ   

ಗಿದಳ್‌.   

೮೫------------------------------------------------------------------

ಕಬ್ಬಿಗಂ--(ತೆಗೆದೆತ್ತಿ) ನಿನ್ನಿಂದಮೆ ಆಂ ಸಭಾರ್ಯನಾಗಿರಲ್‌   

ನಿನ್ನೊಳ್‌ ಅಪರಾಧಮೆ? ಅದಿರ್ಕೆ ಈಗಳ್‌ ಬೇರೆ ಕಜ್ಜಮಿರ್ಪುದರಿಂ  

ಮಂಗಳಮೆಸಗಿ ಪೂರ್ತಿಪೆಂ. ಇನೊಂದು ಕತಯನಿನ್ನೊರ್ಮೆ ಪೇಳ್ಕೆನೇ   

ನಾಗದೆ?   


ಭಾರತಿ--ಅಂತಕ್ಕೆ ಅಬಲೆಯೊಳ್‌ ದಾಕ್ಷಿಣ್ಯದಿ ನಾನುಂ ನಿನ್ನ  

ನಲ್ಮೆಯೇಗಳುಮಿರ್ಕೆ.   


ಕಬ್ಬಗಿಂ--ಉಪಚಾರಂ ಸಾಲ್ಗುಂ. ನಿನ್ನ    ಪ್ರೇಮಪಾಶದಿಂ   

ಕಟ್ಬ್ರೆಪಡೆದು ಆನೇ ನಿನ್ನ ಅಧೀನನಲ್ತೆ.   


ಭಾರತಿ--_ಇದೇತರ ನುಡಿ? ಆ ಸವಿನುಡಿಯೊಳ್‌ ಲೋಲುಪಳಾಗಿ   

ಆನೇ ನಿನ್ನಂ ಬಿಂಬಿಡದಿರ್ಪನಲ್ತೆ?   


ನಲ್ಬಬ್ಬಿಗಂ--ಎಂತಾನುಮಕ್ಕೆ ನಮ್ಮ ಅನ್ಯೋನ್ಯ ಪ್ರೇಮಮೆ  

ಧನಮುಂ, ಧಾನ್ಯಮುಂ, ಮಳೆಯುಂ, ಬೆಳೆಯುಮಕ್ಕೆ, ನಮ್ಮ ನೇಹಮಿದು  

ಜನ್ಮಜನ್ಮಂಗಳೊಳುಮಿರ್ಕೆ.   


ಭಾರತಿ--ನಲ್ನ್ಮುಡಿಯನುಸಿರ್ದೆ. ನಿನಗೆ ಕೀರ್ತಿಯುಂ ಐಸಿರಿಯು  

ಮೆಲ್ಲಲ್ಲುಂ ಪರ್ಬುವಂತೆ ಎನ್ನ ಪೆಸರಿನ ಪ್ರಾರ್ಥನಾಪದ್ಯಮೊಂದಂ   

ಪೇಳ್‌.


ಕಬ್ಬಗಂ--ಅಕ್ಕೆ, ಕಂದಂ||   

ವಿಯೆದಂತಂ ತುಂಬುಗೆ ಕೃತಿ   

ಗೆಯಶಂ ಶ್ರೀ ವೇಣುನಾಥದಯದೆ ಸುಧರ್ಮ |   

ಪ್ರಯತಂ ಸಂತಸದೆ ಬಿಲೇ   

ಶಯಭೂಷಿತವೇಷರೀಗೆ ಭೂತಿಯನೀಶಂ ॥   


ಭಾರತಿ-- ಒಳ್ಳಿತಾಯ್ತು, ನಿನ್ನ ಪೆಸೆರ್‌ ಬಿಸುತಣ್ಗದಿರರಿಪ್ಸನ್ನೆವರಂ 

ಕಡೆಗುಳಿಗೆ.    

೮೬----------------------------------------------------------------- 

ಕಬ್ಬಿ ಗಂ--ನಿನ್ನ ಕಡೆಗಣ್ಣೋಟಮುಂ ಕೃತಿಯೊಳೇಗಳುಮಿರ್ಕೆ,   

ಇರೋ ಮಂಗಳಮೆತ್ತುವೆಂ-   


ಭಾರತಿ--ಅಕ್ಕೆ,   


ಕಬ್ಬಿಗರಾಳ್ದಂ--.  

ಕಂ|| ಕಾಲದೆಮಳೆ ಬರ್ಕೆನೆಲಂ   

ಲೀಲೆಯ ಬೆಳೆ ಬಾಳ್ಕೆಗಳಿನೆ ತುಂಬುಗೆ ಭೂಪಂ |   

ಮೇಲೆಸಗುಗೆ ಲೋಕಕೆ ಕವಿ   

ಲೋಲಮುಖಾಂಬುಜದೆ ವಾಣಿ ನೆಲಸುಗೆನಿಚ್ಚಂ ॥   


ಬಳಿಯಂ, ಸೆಂತಸದಿಂ ತಮ್ಮೊಳೆರಕಮಿರ್ದರ್‌   

ಎಂಬಲ್ಲಿಗೆ ಚಂದ್ರಾವಳೀ ವಿಲಾಸದೊಳ್‌ ಪಂಚಮಾಶ್ಲಾಸಂ   ಸಂಪೂರ್ಣಂ. ಇತಿಶ್ರೀ.

========================================

 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ